ಪದ್ಯ ೧೦
ಅಟ್ಟ ಹತ್ತ ಬೇಡ
ಕವಿ/ಲೇಖಕರ ಪರಿಚಯ
* ಎಲ್. ಹನುಮಂತಯ್ಯ ಇವರು 1958 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಮೇಶ್ವರ ಗ್ರಾಮದಲ್ಲಿ ಜನಿಸಿದರು.
* ಇವರು ಅವನ ಕವಿತೆ, ಕಪ್ಪುಕಣ್ಣಿನ ಹುಡುಗಿ, ಜೀವಗಾನ,ಕರ್ಣರಾಗ,ಅಕ್ಷಾರಅಕ್ಷಾರವೇ.ಅಂಬೇಡ್ಕರ್. ದಲಿತ ಲೋಕದ ಒಳಗೆ, ಅಂಬೇಡ್ಕರ್ ಮತ್ತು ಸಮಕಾಲೀನ ಬಂಡಾಯ ಕಥೆಗಳಲ್ಲಿ ದಲಿತ ಪ್ರಜ್ಞೆ, ಮುಂತಾದ ಕೃತಿಗಳನ್ನು ಬರೆದಿದ್ದಾರೆ.
* ಶ್ರೀಯುತರಿಗೆ ಕರ್ನಾಟಕ ರಾಜ್ಯ ಸರ್ಕಾರದ ಅಂಬೇಡ್ಕರ್ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿವೆ.
* 'ಅಟ್ಟ ಹತ್ತ ಬೇಡ' ಪದ್ಯವನ್ನು ಅವನ ಕವಿಕೆ' ಎಂಬ ಕವನ ಸಂಕಲನದಿಂದ ಆರಿಸಿದೆ.
ಪದಗಳ ಅರ್ಥ
ಅಟ್ಟ - ಮಹಡಿ; ಎತ್ತರದ ಸ್ಥಳ.
ಜಾಳು – ಟೊಳ್ಳು -
ಮಂದಿ – ಜನ
ಹಾದು - ದಾಟಿ: ಮೀರಿ.
ಮರಿ - ಮಗು
ಪ್ರಶ್ನೆಗಳು
● ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
1. ಅಜ್ಜನು ಮಗನಿಗೆ ಅಟ್ಟ ಹತ್ತ ಬೇಡ ಎಂದು ಏಕೆ ಹೇಳುತ್ತಾನೆ?
ಉತ್ತರ:- ಅಟ್ಟವನ್ನು ಬೀಳಿಸಲೇಂದೇ ಜಾಳಾಗಿ ಕಟ್ಟಿರುತ್ತಾರೆ. ಆದ್ದರಿಂದ ಅಟ್ಟ ಹತ್ತಬೇಡ ಮರಿ ಎಂದು ಅಜ್ಜ ಮಗನಿಗೆ ಹೇಳುತ್ತಾನೆ.
2. ಅಟ್ಟ ನೋಡದೆ ಬೆಟ್ಟ ಹತ್ತುತ್ತೇನೆ ಎನ್ನುವ ಮಾತಿನಲ್ಲಿ ವ್ಯಕ್ತಗೊಂಡಿರುವ ಭಾವನೆಗಳೇನು?
ಉತ್ತರ:- ಬಹು ಎತ್ತರಕ್ಕೆ ಹೋಗಿ ಸಾಧಿಸಿ ತೋರಿಸುತ್ತೇನೆ ಎಂಬ ಭಾವನೆ ಈ ವಾಕ್ಯದಲ್ಲಿ ವ್ಯಕ್ತವಾಗಿದೆ.
3. ದೂರದ ಬೆಟ್ಟ ಹೇಗೆ ಕಾಣುತ್ತದೆ?
ಉತ್ತರ:-ದೂರದ ಬೆಟ್ಟ ನುಣುಪಾಗಿ ಕಾಣುತ್ತದೆ.
4. ಮಗು ಬೆಟ್ಟ ಹತ್ತಲು ಬಯಸಿದ್ದು ಏಕೆ?
ಉತ್ತರ:- ಅಟ್ಟ ಹತ್ತಿದವನು ಬೆಟ್ಟ ಹತ್ತಬಲ್ಲನು ಎಂದು ತೋರಿಸಲು ಮಗು ಬೆಟ್ಟ ಹತ್ತಲು ಬಯಸಿದ್ದನು.
5 ಡಾ. ಎಲ್. ಹನುಮಂತಯ್ಯನವರು ಯಾವ ವಿಷಯದ ಮೇಲೆ ಪಿಹೆಚ್.ಡಿ. ಪದವಿ ಪಡೆದಿದ್ದಾರೆ?
ಉತ್ತರ:- ಡಾ. ಎಲ್. ಹನುಮಂತಯ್ಯನವರು ಬಂಡಾಯ ಕಥೆಗಳಲ್ಲಿ ದಲಿತ ಪ್ರಜ್ಞೆ' ಎಂಬ ಮಹಾಪ್ರಬಂದಕ್ಕೆ ಪಿಹೆಚ್.ಡಿ. ಪದವಿ ಪಡೆದಿದ್ದಾರೆ.
● ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಬರೆಯಿರಿ.
1. ಬೆಟ್ಟ ಹತ್ತುವ ಹಾದಿ ಹೇಗಿರುತ್ತದೆ?
ಉತ್ತರ:- ದೂರದ ಬೆಟ್ಟ ನೋಡಲು ನುಣುಪಾಗಿ ಕಾಣುತ್ತದೆ. ಹತ್ತಿರ ಹೋದಂತೆಲ್ಲಾ ಅದರ ನೈಜ ರೂಪ ತಿಳಿಯುತ್ತದೆ. ಅದರ ಹಾದಿ ಕಲ್ಲು ಮುಳ್ಳುಗಳಿಂದ ಕೂಡಿರುತ್ತದೆ. ಅದನ್ನು ಹತ್ತುವುದು ನಾವು ಅಂದುಕೊಂಡಷ್ಟು ಸುಲಭವಲ್ಲ.
2. ಅಟ್ಟ ಮತ್ತು ಬೆಟ್ಟಕ್ಕಿರುವ ವ್ಯತ್ಯಾಸಗಳೇನು?
ಉತ್ತರ:- ಅಟ್ಟವನ್ನು ಮನುಷ್ಯ ನಿರ್ಮಿಸಿರುತ್ತಾನೆ. ಅದನ್ನು ಬೀಳಿಸಲೆಂದೇ ಜಾಳಾಗಿ ಕಟ್ಟಿರುತ್ತಾರೆ. ಆದರೆ ಬೆಟ್ಟ ಮಾನವ ನಿರ್ಮಿತವಲ್ಲ. ಅದು ಸ್ವಾಭಾವಿಕವಾದದ್ದು, ಅದು ಕಲ್ಲು ಮುಳ್ಳುಗಳಿಂದ ಕೂಡಿರುತ್ತದೆ. ದೂರದ ಬೆಟ್ಟ ನೋಡಲು ನುಣುಪಾಗಿ ಕಾಣುತ್ತದೆ.
3. 'ಬೆಟ್ಟ ಹತ್ತ ಬೇಡ' ಕವಿತೆಯಲ್ಲಿ ಹುಡುಗನ ಸಂಕಲ್ಪವೇನು?
ಉತ್ತರ:- ಅಟ್ಟವು ಮಾನವ ನಿರ್ಮಿತವಾದದ್ದರಿಂದ ಬೀಳುವ ಸಾಧ್ಯತೆ ಇದೆ. ಆದರೆ ಬೆಟ್ಟ ಮಾನವ ನಿರ್ಮಿತವಲ್ಲ. ಆದ್ದರಿ೦ದ ಅಟ್ಟದ ಕಡೆ ನೋಡದೆ ಬೆಟ್ಟ ಹತ್ತಿ ಮೇಲೇರಿ ನಿಂತು ತೋರಿಸುತ್ತೇನೆ ಎಂಬುದು 'ಅಟ್ಟ ಹತ್ತ ಬೇಡ' ಕವಿತೆಯಲ್ಲಿ ಹುಡುಗನ ಸಂಕಲ್ಪವಾಗಿದೆ.
4. “ಬೆಟ್ಟ ಹತ್ತ ಬೇಡ' ಕವಿತೆಯಲ್ಲಿ ಅಜ್ಜನ ಉಪದೇಶವೇನು?
ಉತ್ತರ:- ಆಟವನ್ನು ಮನುಷ್ಯ ಟೊಳಗಿ ಕಟ್ಟಿರುತ್ತಾನೆ. ಆದ್ದರಿಂದ ಬೀಳುವ ಸಾಧ್ಯತೆ ಇದೆ ಎಂದಾಗ, ಮಗುವು ಹಾಗಾದರೆ ಬೆಟ್ಟ ಹತ್ತುತ್ತೇನೆ ಎನ್ನುತ್ತಾನೆ. ಅಟ್ಟವನ್ನೇ ಹತ್ತಲು ಸಾಧ್ಯವಿಲ್ಲದವನು ಬೆಟ್ಟ ಹತ್ತುತ್ತಾನೆಯೇ ಎಂದು ಜನರು ನೋಡಿ ನಗುತ್ತಾರೆ
ಎಂಬುದು ಈ ಪದ್ಯದಲ್ಲಿ ಅಜ್ಜನ ಉಪದೇಶವಾಗಿದೆ.
● ಕೆಳಗಿನ ಪ್ರಶ್ನೆಗಳಿಗೆ ಎಂಟು -ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.
1. 'ಆಟ್ಟ ಹತ್ತ ಬೇಡ' ಕವಿತೆಯಲ್ಲಿ ವ್ಯಕ್ತವಾಗಿರುವ ಕವಿಯ ಭಾವನೆಗಳೇನು?
ಉತ್ತರ:- ಸಮಾಜದಲ್ಲಿನ ಅಸಮಾನತೆಗಳನ್ನು ತಮಗಾದ ದುಃಖ ದುಮ್ಮಾನಗಳನ್ನು ಮನಸ್ಸಿಗೆ ಮುಟ್ಟುವಂತೆ ಹೃದಯಕ್ಕೆ ತಟ್ಟುವಂತೆ ಬರೆವಣಿಗೆ ಮೂಲಕ ವ್ಯಕ್ತಗೊಂಡ ಸಾಹಿತ್ಯ ಪ್ರಕಾರ, ಸಮಾಜದ ಮುಖ್ಯವಾಹಿನಿಯಲ್ಲಿ ತಮ್ಮ ಹಕ್ಕು ಸ್ಥಾಪಿಸಲು ಅನುಕಂಪ, ಅವಕಾಶವನ್ನು ಬೇಡದೆ ಅವಕಾಶವನ್ನು ನಾವೇ ಹುಡುಕುವೆವು ಎನ್ನುವ ಸಂಕಲ್ಪ, ಸಾಮಾಜಿಕ ಕಳಕಳಿ, ಅಸಮಾನತೆ ಹಾಗೂ ಅನ್ಯಾಯದ ವಿರುದ್ಧವಗಿ ಕವಿ ಈ ಪದ್ಯವನ್ನು ಬರೆದಿದ್ದಾರೆ.
ಮಕ್ಕಳಲ್ಲಿ ಕುತೂಹಲ, ಸಾಹಸ ಪ್ರವೃತ್ತಿ ಸಹಜವಾಗಿರುತ್ತದೆ. ಎಂತಹ ಕೆಲಸವನ್ನಾದರೂ ಮಾಡಬಲ್ಲೆವು ಎನ್ನುವ ಮನೋಸ್ಟೈರ್ಯ ಇರುತ್ತದೆ. ತಮ್ಮ ಇಚ್ಛಿತ ಗುರಿ ಸಾಧನೆಗೆ ಯಾರೇ ಅಡ್ಡಿಯನ್ನುಂಟು ಮಾಡಿದರೂ ಎದೆಗುಂದದೆ ಮುನ್ನುಗ್ಗಬಲ್ಲವರಾಗಿರುತ್ತಾರೆ. ತಮ್ಮ ಆಸೆ ಆಕಾಂಕ್ಷೆಗಳಿಗೆ ವಿರೋಧ ವ್ಯಕ್ತವಾದಾಗ ಸಂಪ್ರದಾಯಗಳನ್ನು ಧಿಕ್ಕರಿಸಿ ಶ್ರೇಷ್ಠವಾದುದನ್ನು ಮಾಡಿಯೇ ತೀರುತ್ತೇವೆ ಎಂಬ ಸಂಕಲ್ಪ ಮಾಡುತ್ತಾರೆ. ಶೋಷಿತರ ಮನಸ್ಥಿತಿಗಳೂ ಅದೇ ರೀತಿಯಲ್ಲಿರುತ್ತವೆ ಎಂಬುದನ್ನು ಪ್ರಸ್ತುತ 'ಅಟ್ಟ ಹತ್ತ ಬೇಡ' ಕವನದಲ್ಲಿ ವ್ಯಕ್ತವಾಗಿದೆ.
2. 'ಅಟ್ಟ ಹತ್ತ ಬೇಡ' ಎನ್ನುವ ಅಜ್ಜನ ಮಾತಿಗೆ ಮಗನ ಸವಾಲು ಏನು?
ಉತ್ತರ:- ಮಗನು ಅಟ್ಟ ಹತ್ತಲು ಮುಂದಾಗುತ್ತಾನೆ. ಆಗ ಅಜ್ಜನು ಮಗು ಅಟ್ಟ ಹತ್ತಬೇಡ, ಏಕೆಂದರೆ ಇದನ್ನು ಮನುಷ್ಯ ನಿರ್ಮಿಸಿರುತ್ತಾನೆ. ಇದನ್ನು ಜಾಳಾಗಿ ಕಟ್ಟಿರುತ್ತಾರೆ.. ನೀನು ಅಟ್ಟ ಹತ್ತಿದರೆ ಬೀಳುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡುತ್ತಾನೆ. ಆಗ ಮಗನು ಮನುಷ್ಯ ನಿರ್ಮಿತ ಅಟ್ಟ ಹತ್ತುವುದಿಲ್ಲ. ಪ್ರಕೃತಿದತ್ತವಾದ ಬೆಟ್ಟವನ್ನೇ ಹತ್ತುತ್ತೇನೆ ಎಂದು ಹೇಳುತ್ತಾನೆ.
ಅಟ್ಟ ಹತ್ತಿದವನು ಬೆಟ್ಟ ಹತ್ತುತ್ತಾನೆಯೇ ಎಂದು ಜನರು ಆಡಿಕೊಂಡು ನಗುತ್ತಾರೆ. 'ದೂರದ ಬೆಟ್ಟ ನುಣುಪು' ಎಂಬ ಸತ್ಯದ ಅರಿವನ್ನು ಅಜ್ಜ ಮಾಡಿಸುತ್ತಾರೆ. ಪ್ರತ್ಯುತ್ತರವಾಗಿ ಮಗನು 'ನಾನು ಅಟ್ಟದ ಕಡೆ ನೋಡದೆ ಬೆಟ್ಟ ಹತ್ತುತ್ತೇನೆ. ಬೆಟ್ಟದ ಕಲ್ಲು ಮುಳ್ಳುಗಳ ಹಾದಿಯನ್ನು ಹಾದು ಮೇಲೇರಿ ನಿಲ್ಲುತ್ತೇನೆ' ಎಂಬ ಸವಾಲನ್ನು ಹಾಕುತ್ತಾನೆ.
● ಈ ಸಂದರ್ಭದೊಡನೆ ವಿಮುಸಿರಿ.
1. ಅಟ್ಟ ಹತ್ತದವನು ಬೆಟ್ಟ ಹತ್ತುತ್ತಾನೆಯೆ
ಆಯ್ಕೆ:- ಈ ವಾಕ್ಯವನ್ನು "ಎಲ್. ಹನುಮಂತಯ್ಯ" ಅವರು ಬರೆದಿರುವ'ಅವನ ಕವಿತೆ ' ಎಂಬ ಕೃತಿಯಿಂದ ಆಯ್ದ"ಅಟ್ಟ ಹತ್ತ ಬೇಡ" ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:-ಈ ಮಾತನ್ನು ಅಜ್ಜ ತನ್ನ ಮಗನಿಗೆ ಹೇಳುತ್ತಾನೆ.
ಸ್ವಾರಸ್ಯ:- ಅಟ್ಟವನ್ನು ಮನುಷ್ಯ ಟೊಳ್ಳಾಗಿ ಕಟ್ಟಿರುತ್ತಾನೆ. ಅಟ್ಟ ಹತ್ತಬೇಡ ಮಗು ಎಂದಾಗ ಮಗು ಹಾಗಾದರೆ ಬೆಟ್ಟ ಹತ್ತಿ ತೋರಿಸುತ್ತೇನೆ ಎಂದಾಗ ಅಜ್ಜ ಈ ಮೇಲಿನ ಮಾತನ್ನು ಹೇಳುತ್ತಾನೆ.
2. ಅಟ್ಟ ನೋಡದೆ ಬೆಟ್ಟ ಹತ್ತುತ್ತೇನೆ
ಆಯ್ಕೆ:- ಈ ವಾಕ್ಯವನ್ನು "ಎಲ್. ಹನುಮಂತಯ್ಯ" ಅವರು ಬರೆದಿರುವ'ಅವನ ಕವಿತೆ ' ಎಂಬ ಕೃತಿಯಿಂದ ಆಯ್ದ"ಅಟ್ಟ ಹತ್ತ ಬೇಡ" ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:-ಈ ಮಾತನ್ನು ಮಗ ತನ್ನ ಅಜ್ಜನಿಗೆ ಹೇಳುತ್ತಾನೆ.
ಸ್ವಾರಸ್ಯ:- ಅಟ್ಟವನ್ನು ಹತ್ತದವನು ಬೆಟ್ಟ ಹತ್ತುತ್ತಾನೆಯೇ ಎಂದು ಜನರು ನಗುತ್ತಾರೆ.
ಎಂದಾಗ ಅಜ್ಜನ ಮಾತಿಗೆ ಮಗ ಈ ಮೇಲಿನ ಮಾತನ್ನು ಹೇಳುತ್ತಾನೆ.
ಭಾಷಾಭ್ಯಾಸ
ಅ)ಕೆಳಗಿನ ಪದಗಳಿಗೆ ವಿರುದ್ಧಾರ್ಥ ಬರೆಯಿರಿ.
ಬೇಡ X ಬೇಕು
ನುಣುಪುXಒರಟು
ಬೀಳಿಸು X ಏಳಿಸು
ದೂರ X ಹತ್ತಿರ
ಹತ್ತು X ಇಳಿ
ಆ) ಕೆಳಗಿನ ಪದಗಳಿಗೆ ನಾನಾರ್ಥ ಬರೆಯಿರಿ.
ಹತ್ತು~ ಒಂದು ಸಂಖ್ಯೆ: ಮೇಲೇರು
ಬೇಡ- ಬೇಟೆಗಾರ; ಒಲ್ಲೆ.
ಇ) ಕೆಳಗಿನ ಪದಗಳ ವಿಶೇಷಾರ್ಥ ಗಮನಿಸಿ, ಅದೇ ಅರ್ಥ ಬರುವಂತೆ ವಾಕ್ಯಗಳನ್ನು ರಚಿಸಿರಿ,
ಅಟ್ಟ ಹತ್ತಿಸು - ಅತಿಯಾಗಿ ಹೊಗಳು : ಕೆಲವರು ತಮ್ಮ ಮಾತಿನ ಮೋಡಿಯಿಂದ ಅಟ್ಟ ಹತ್ತಿಸುತ್ತಾರೆ. ದೂರದ ಬೆಟ್ಟ - ಕೈಗೆ ಸಿಗದೆ : ದೂರದ ಬೆಟ್ಟ ಕಣ್ಣಿಗೆ ನುಣುಪಾಗಿ ಕಾಣುತ್ತದೆ.
ಬೀಳಿಸು - ಸೋಲಿಸು ಆಟದಲ್ಲಿ ಬೀಳಿಸುವುದು ಸಹಜವಾಗಿರುತ್ತದೆ.
ಮೇಲೇರಿ ನಿಲ್ಲು - ಬಲಿಷ್ಠನಾಗು : ಬೆಟ್ಟ ಹತ್ತಿ ಮೇಲೇರಿ ನಿಲ್ಲುತ್ತೇನೆ.
ಈ) ಕಲ್ಲುಮುಳ್ಳು – ಇಂತಹ ಐದು ಜೋಡಿ ಪದಗಳನ್ನು ಬರೆಯಿರಿ.
ಸಿಡುಕುಮಿಡುಕು,ಅವಳಿ ಜವಳಿ, ಸುತ್ತಮುತ್ತ, ಊರುಕೇರಿ, ಮರಗಿಡ,
0 Comments