ಪದ್ಯ ೧೧
ಶಬರಿ
ಕವಿ/ಲೇಖಕರ ಪರಿಚಯ
* ಡಾ ನಾ . ಮೊಗಸಾಲೆ ಇವರು ೧೯೪೪ರಲ್ಲಿ ಕೇರಳದ ಕಾಸರಗೋಡು ತಾಲೂಕಿನಲ್ಲಿ ಜನಿಸಿದರು.
* ಇವರು ವರ್ತಮಾನದ ಮುಖಗಳು, ಪಲ್ಲವಿ, ಮೊಗಸಾಲೆಯ ನೆನಪುಗಳು, ಕಾಮನ ಬೆಡಗು, ದೇವರು ಮತ್ತೆ ಮತ್ತೆ ಅರುವತ್ತರ ತೇರು, ಪೂರ್ವೋತ್ತರ, , ಆಶಾಂಕುರ, ಹಸಿರುಬಿಸಿಲು, ಇನ್ನೂ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
*ಶ್ರೀಯುತರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಹಾವನೂರು ಪ್ರತಿಷ್ಠಾನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಉಗ್ರಾಣ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ ಇನ್ನೂ ಮುಂತಾದ ಪ್ರಶಸ್ತಿಗಳು ಲಭಿಸಿವೆ.
ಸಾರಾಂಶ
ವಿಂದ್ಯಾಟವಿಯಲ್ಲಿ
ಮತಂಗ ಮುನಿಗಳ ಆಶ್ರಮದಲ್ಲಿ ವೃದ್ಧೆಯಾದ ಶಬರಿಯು ಶ್ರೀರಾಮನ ಬರುವಿಕೆಗಾಗಿ ಕಾತುರದಿಂದ
ಕಾಯುತ್ತಿದ್ದಳು. ಅವಳಿಗೆ ಸದಾ ರಾಮನ ಕನಸೇ, ರಾಮನು ಎಂದು ಬರುವನೋ ಎಂದು
ಕನವರಿಸುತ್ತಿದ್ದಳು. ಅವಳ ಈ ಕನಸು ಮರವಾಗಿ, ಮರಗಳಲ್ಲಿ ಹೂಗಳಾಗಿ ಅರಳಿದ್ದವು. ಅವಳ
ಪಾಲಿಗೆ ರಾಮ ನಾಮವೇ ಜೇನಿನಂತೆ ಸಿಹಿಯಾಗಿತ್ತು. ಆ ಅಡವಿಯಲ್ಲಿ ರಾಮನು ಬಂದನೇ? ಎಂದು
ಯಾವಾಗಲೂ ಸುತ್ತಮುತ್ತಲೂ ನೋಡುತ್ತಿದ್ದಳು. ನಿಜವಾಗಿಯೇ ರಾಮನು ಬರುವನೆ? ರಾಮನನ್ನು
ಕಾಣದೆ, ತನ್ನ ಜೀವನವು ಬರಡಾಯಿತು ಎಂದು ನಿಟ್ಟುಸಿರು ಬಿಡುತ್ತಿದ್ದಳು. ಮರಗಿಡಗಳ ಎಲೆ
ಸ್ವಲ್ಪ ಅಲುಗಾಡಿದರೂ ಅವೇನಾದರೂ ರಾಮನನ್ನು ನೋಡಿರ ಬಹುದೆಂದು ಕಾಮನ ಬಿಲ್ಲನ್ನು ನೋಡಿ
ಆನಂದಿಸುವ ಸಣ್ಣ ಮಗುವಿನಂತೆ ಕುಣಿದಾಡುತ್ತಿದ್ದಳು. ಮಗುವಿನಂತೆ ತನ್ನ ಮನಸ್ಸಿನೊಳಗೆ
ತೂರಿಕೊಳ್ಳುತ್ತಿದ್ದಳು. ಕಾಡಿನಲ್ಲಿ ಮೃಗಪಕ್ಷಿಗಳು ಅವಳ ಕಡೆ ಸುಳಿದರೂ ರಾಮನೇ
ಬಂದಿರಬಹುದೆಂದು, ಕಾತುರದಿಂದ ಸೊಂಟ ನೋವಿದ್ದರೂ 'ನನ್ನೊಡೆಯನೇ ಬಂದೆಯಾ' ಎನ್ನುತ ಎದ್ದು
ನೋಡುತ್ತಿದ್ದಳು. ಒಂದು ದಿನ ಬೆಳಗಿನ ಕನಸಲ್ಲಿ ಅವಳಿಗೆ ಶ್ರೀರಾಮನು ಲಕ್ಷಣನಸಹಿತ
ಬಂದಂತೆ ಅನುಭವವಾಗಿ, ತಕ್ಷಣವೇ ರಾಮನನ್ನು ಜಪಿಸುತ್ತಾ ಮಲಗಿದ್ದವಳು ಎದ್ದು ಕುಳಿತಳು.
ಬೆಳಗಾಗಿದ್ದುದರಿಂದ ನಿತ್ಯವಿಧಿಗಳನ್ನು ತೀರಿಸಿಕೊಂಡು, ಅನೇಕ ಗಿಡಮರಗಳಲ್ಲಿ ಪಕ್ವವಾದ
ಹಣ್ಣುಗಳನ್ನು ಆರಿಸಿಕೊಂಡು, ಕಿತ್ತು ತರುವಾಗ ಬಹಳ ಮುದ (ಸಂತೋಷ) ಗೊಂಡಳು. "ಉವನು
ಬರುತ್ತಿರಬಹುದೆಂದು, ರಾಮನ ನಿರೀಕ್ಷೆಯಲ್ಲಿಯೇ ಶಬರಿಯ ಮನೆಗೆ ರಾಮನು ಬಂದನು,
ಮೊಗ್ಗುಗಳು ಅರಳಿ ಹೂವು ಅರಳಿದಂತೆ ರಾಮನು ಶಬರಿಯನ್ನು ಮೆಳುವಾಗಿ ಅಪ್ಪಿ ಹಿಡಿದನು. ಆ
ಅಪ್ಪುಗೆಯು, ರಾಮನು ಕೌಶಲ್ವೆಯ ಬಳಿಯಲ್ಲಿ ಇರುವಂತೆ ನೆಮ್ಮದಿ ಮತ್ತು ವಾತ್ಸಲ್ಯವನ್ನು
ಅನುಭವಿಸಿದರು. ಶಬರಿಯು ತನ್ನ ಪ್ರೀತಿ ವಾತ್ಸಲ್ಯದಿಂದ ರಾಮನ ಮೈಮನಸುಗಳನ್ನು ತುಂಬಿದಳು.
ಅವಳ ಕೈಗಳು ಅವನ ಮೈದಡುವುತ್ತಿತ್ತು. ಆವಳ ಕಣ್ಣುಗಳಲ್ಲಿ ಬೆಳಗಿನ ಮಂಜು ಗರಿಕೆ
ಹುಲ್ಲಿನ ಮೇಲೆ ಬಿದ್ದು ಹೊಳೆಯುವಂತೆ ನೀರು ತುಂಬಿಕೊಂಡಿತು, ಅವಳು ರಾಮನಿಗಾಗಿ ತಾನು
ಆರಿಸಿ ತುಂಬಿದ್ದ ಹಣ್ಣಿನ ಬುಟ್ಟಿಯನ್ನು ತಂದು, ಅದರಲ್ಲಿದ್ದ ಹಣ್ಣುಗಳಲ್ಲಿ
ಒಳ್ಳೆಯದಾದನ್ನು ಮಾತ್ರ ಆಯ್ಕೆ ಮಾಡಿ, ಕಚ್ಚಿ ನೋಡಿ, ಅಮ ಸವಿಯಾಗಿದ್ದರೆ, ಅಂತಹುದನ್ನು
ಮಾತ್ರ 'ತಿನ್ನು' ಎಂದು ರಾಮನಿಗೆ ಕೊಡುತ್ತಿದ್ದಳು.
ರಾಮನು ಶಬರಿ ಕೊಟ್ಟ ಹಣ್ಣನ್ನು ತಿನ್ನುವಾಗ ತನ್ನ ತಾಯಿ ಕೌಶಲ್ಯಯು ಕೊಟ್ಟ ಕೈತುತ್ತನ್ನು ನೆನಪಿಸಿಕೊಂಡು, ಶಬರಿಗೆ ತಾನು ಇಂತಹ ರುಚಿಕರವಾದ, ರಸಭರಿತವಾದ ಹಣ್ಣನ್ನು ಮೊದೆಂದೂ ತಿಂದಿರಲಿಲ್ಲ, ಈಗ ಮೈಮರೆತು ತಿಂದಿದ್ದೇನೆ, ಹೊಟ್ಟೆ ತುಂಬಿತು. ಎಂದು ಹೇಳುವನು. ಶಬರಿಯು ರಾಮನನ್ನೇ ಪ್ರೀತಿಯಿಂದ ನೋಡುತ್ತಿದ್ದಾಗ, ಅವಳ ಕಣ್ಣಿನ ಹೊರಗಿನ ಪರೆಯು ಹರಿದು ಹೋಗಿ, ಅಲ್ಲಿ ಅವಳು ತನ್ನ ಒಳಗಣ್ಣಿಂದ ಶ್ರೀ ಹರಿಯೇ ಅವನೆಂದು ತಿಳಿದು, ತನ್ನ ಜೀವನವು ಸಾರ್ಥಕವಾಯಿರು ಎಂಬ ಭಾವನೆ ಅವಳಲ್ಲಿ ಮೂಡಿತು. ಆಗ ಅವಳ ಹೊರಗಣ್ಣಿಂದ ಆನಂದಭಾಷ್ಪವು ನದಿಯಾಗಿ ಹರಿಯಿತು.
ರಾಮನು ಶಬರಿ ಕೊಟ್ಟ ಹಣ್ಣನ್ನು ತಿನ್ನುವಾಗ ತನ್ನ ತಾಯಿ ಕೌಶಲ್ಯಯು ಕೊಟ್ಟ ಕೈತುತ್ತನ್ನು ನೆನಪಿಸಿಕೊಂಡು, ಶಬರಿಗೆ ತಾನು ಇಂತಹ ರುಚಿಕರವಾದ, ರಸಭರಿತವಾದ ಹಣ್ಣನ್ನು ಮೊದೆಂದೂ ತಿಂದಿರಲಿಲ್ಲ, ಈಗ ಮೈಮರೆತು ತಿಂದಿದ್ದೇನೆ, ಹೊಟ್ಟೆ ತುಂಬಿತು. ಎಂದು ಹೇಳುವನು. ಶಬರಿಯು ರಾಮನನ್ನೇ ಪ್ರೀತಿಯಿಂದ ನೋಡುತ್ತಿದ್ದಾಗ, ಅವಳ ಕಣ್ಣಿನ ಹೊರಗಿನ ಪರೆಯು ಹರಿದು ಹೋಗಿ, ಅಲ್ಲಿ ಅವಳು ತನ್ನ ಒಳಗಣ್ಣಿಂದ ಶ್ರೀ ಹರಿಯೇ ಅವನೆಂದು ತಿಳಿದು, ತನ್ನ ಜೀವನವು ಸಾರ್ಥಕವಾಯಿರು ಎಂಬ ಭಾವನೆ ಅವಳಲ್ಲಿ ಮೂಡಿತು. ಆಗ ಅವಳ ಹೊರಗಣ್ಣಿಂದ ಆನಂದಭಾಷ್ಪವು ನದಿಯಾಗಿ ಹರಿಯಿತು.
ಪದಗಳ ಅರ್ಥ
ಆಟವಿ - ಕಾಡು
ಜನುಮ – ಜನ್ಮ
ಜೀವನ ಗರಿಕೆ - ಒಂದು ಜಾತಿಯ ಹುಲ್ಲು
ಪೂಸಿದಳು - ನಿವಿದಳು
ಬೆಳಗಿನ ಮಂಜು – ಇಬ್ಬನಿ
ಸವಿ - ಸಿಹಿ
ಸಾರ್ಥಕ್ಯ - ಒಳ್ಳೆಯ ಪರಿಣಾಮವನ್ನು ಮಾಡುವುದು, ಅರ್ಥವತ್ತಾಗುವುದು
ಪ್ರಶ್ನೆಗಳು
ಅ). ಒಂದು ವಾಕ್ಯದಲ್ಲಿ ಉತ್ತರಿಸಿ,
1. ಶಬರಿ ಎಲ್ಲಿ ವಾಸವಾಗಿದ್ದಳು?
ಉತ್ತರ :- ಶಬರಿಯ ಎಂದ್ಯಾಟವಿಯ ಮತಂಗ ಮುನಿಗಳ ಆಶ್ರಮದಲ್ಲಿ ವಾಸವಾಗಿದ್ದಳು.
2) ಶಬರಿ ಯಾವ ನಿರೀಕ್ಷೆಯಲ್ಲಿದ್ದಳು?
ಉತ್ತರ :- ಶಬರಿಯು ಶ್ರೀರಾಮನ ಬರುವಿಕೆಯ ನಿರೀಕ್ಷೆಯಲ್ಲಿದ್ದಳು.
3) ಶಬರಿ ಏನೆಂದು ಹೇಳುತ್ತಾ ನಿಟ್ಟುಸಿರಿಟ್ಟಳು?
ಉತ್ತರ :- ನಿಜವಾಗಿಯೂ ರಾಮನು ಬರುವನೇ, ತಾನು ರಾಮನನ್ನು ಕಾಣದೆ ತನ್ನ ಜೀವನವೇ ಬರಡಾಯಿತಲ್ಲ ಎಂದು ನಿಟ್ಟುಸಿರು ಬಿಡುತ್ತಿದ್ದಳು.
4)ಶಬರಿಯ ಕನಸಿನಲ್ಲಿ ಏನು ಕಂಡಿತು?
ಉತ್ತರ :- ಶಬರಿಗೆ ಬೆಳಗಿನ ಕನಸಿನಲ್ಲಿ ಶ್ರೀರಾಮನು ಲಕ್ಷಣನ ಸಹಿತ ಬರುವುದು ಕಂಡಂತಾಯಿತು.
5)ಶಬರಿ ರಾಮನಿಗೆ ಕೊಡಲು ಏನನ್ನು ತಂದಳು?
ಉತ್ತರ :- ಶಬರಿಯು ರಾಮನಿಗೆ ಕೊಡಲು ಹಣ್ಣಿನ ಬುಟ್ಟಿಯನ್ನು ತಂದಳು.
6)ಹಣ್ಣು ತಿಂದ ಶ್ರೀರಾಮ ಏನು ಹೇಳಿದ?
ಉತ್ತರ :- ಹಣ್ಣನ್ನು ತಿಂದ ರಾಮನು ತಾನು ಮೊದಲೆಂದೂ ಇಷ್ಟು ಸವಿಯಾದ ಹಣ್ಣನ್ನೇ
ತಿಂದಿರಲಿಲ್ಲ ಎಂದು ಹೇಳಿದನು.
7, ಶಬರಿಗೆ ಶ್ರೀರಾಮನು ಹೇಗೆ ಕಂಡನು?
ಉತ್ತರ :- ಶಬರಿಗೆ ಶ್ರೀರಾಮನು 'ಹರಿಯಾಗಿ' ಕಂಡನು.
ಆ) ಈ ಕೆಳಗಿನ ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ:
1.ಶಬರಿಯು ರಾಮನನ್ನು ಹೇಗೆ ಕಾಯುತ್ತಿದ್ದಳು ?
ಉತ್ತರ :- ಶಬರಿಯು ರಾಮನಿಗಾಗಿ ವಿಂದ್ಯಾಟವಿಯಲ್ಲಿ ಕಾತುರದಿಂದ ಕಾಯುತ್ತಿದ್ದಳು. ಅವಳು ಪ್ರತಿಯೊಂದುಗಳಿಗೆಯಲ್ಲೂ ರಾಮನ ಕನಸನ್ನೇ ಜಪಿಸುತ್ತಾ ಇರುತ್ತಿದ್ದಳು. ರಾಮ ನಾಮವು ಅವಳ ಪಾಲಿಗೆ ಜೇನಾಗಿತ್ತು. ಸುತ್ತಮುತ್ತಲೂ ನೋಡುತ್ತಾ, ರಾಮ ಬರುತ್ತಿದ್ದಾನಾ? ಎಂದು ಬಹಳ ನಿರೀಕ್ಷೆಯಿಂದ ಚಡಪಡಿಸುತ್ತಿದ್ದಳು.
2. ಶ್ರೀರಾಮನ ಭೇಟಿಗೆ ಶಬರಿ ಹೇಗೆ ಅನುವಾದಳು?
ಉತ್ತರ :- ಶ್ರೀರಾಮನು ಬಂದೇ ಬರುತ್ತಾನೆ, ಅವನು ಬಂದಾಗ ತಾನು ಅವನನ್ನು ಉಪಚರಿಸಬೇಕು ಎಂದು ಅನುದಿನವೂ ಸಿದ್ಧವಾಗಿರುತ್ತಿದ್ದಳು, ಪ್ರತಿದಿನ ಕಾಡಿನಲ್ಲಿರುವ ಗಿಡಮರಗಳಿಂದ ಪಕ್ಷವಾದ ಹಣ್ಣುಗಳನ್ನು ತಂದು, ಅವನ ಬರುವಿಕೆಗಾಗಿ ನಿರೀಕ್ಷಿಸುತ್ತಿರುತ್ತಿದ್ದರು. ಅವಳು ಚೆನ್ನಾಗಿರುವ ಅನೇಕ ಹಣ್ಣುಗಳನ್ನು ರಾಮನಿಗೆ ಕೊಟ್ಟು ಉಪಚರಿಸಬೇಕೆಂದು ಹಂಬಲಿಸುತ್ತಿದ್ದಳು, ಹಣ್ಣುಗಳನ್ನು ಸಂಗ್ರಹಿಸಿಟ್ಟುಕೊಂಡು ಅನುವಾಗಿರುತ್ತಿದ್ದಳು.
3. ರಾಮ ಬಳಿಯಲ್ಲಿ ಕೂತಾಗ ಶಬರಿ ಹೇಗೆ ಸಂಭ್ರಮಿಸಿದಳು?
ಉತ್ತರ :- ಒಂದು ದಿನ ರಾಮನು ಶಬರಿಯ ಮನೆಗೆ ಬಂದಾಗ ಅವಳು ಬಹಳವಾಗಿ ಸಂಭ್ರಮಿಸಿದಳು. ಅವನ ಬರುವಿಕೆಗಾಗಿ ಬಹಳ ವರ್ಷಗಳಿಂದ ಕಾಯುತ್ತಿದ್ದಳು. ಕನಸು ಕಾಣುತ್ತಿದ್ದಳು, ಮನದಾಳದಿಂದ ರಾಮನ ನಿರೀಕ್ಷೆಯಲ್ಲಿದ್ದ ಶಬರಿಗೆ ರಾಮನು ಬಂದು ಅವಳ ಬಳಿಯಲ್ಲಿ ಕುಳಿತಾಗ, ಅವಳ ಬಹುದಿನದ ಕನಸು ಈಡೇರಿದ್ದರಿಂದ ಧನ್ಯತೆಯಿಂದ, ಸಾರ್ಥಕತೆಯಿಂದ ಸಂಭ್ರಮಿಸಿದ್ದಳು.
4)ರಾಮನಿಗೆ ಶಬರಿ ಕೌಸಲೈಯ ನೆನಪು ತರಲು ಕಾರಣವೇನು?
ಉತ್ತರ :- ರಾಮನು ಬಂದು ಶಬರಿಯ ಬಳಿ ಕುಳಿತು ಶಬರಿಯನ್ನು ಬಹಳ ಕೋಮಲವಾಗಿ, ಮೃದುವಾಗಿ ಮೊಗ್ಗು ಹರಳಿ ಹೂವಾದಂತೆ ಅಪ್ಪಿ ಹಿಡಿದನು ಶಬರಿಯು ಅಪಾರ ವಾತ್ಸಲ್ಯದಿಂದ ರಾಮನನ್ನು ತಬ್ಬಿ ಕೊಂಡಾಗ, ರಾಮನಿಗೆ ತಾನು ತನ್ನ ತಾಯಿಯಾದ ಕೌಸಲೈಯ ಬಳಿ ಇರುವಂತೆ ಭಾಸವಾಗಿ ಕೌಸಲೈಯು ನೆನಪಾದಳು.
5. ಶಬರಿ ರಾಮನಿಗೆ ಹೇಗೆ ಉಪಚರಿಸಿದಳು?
ಉತ್ತರ :- ಶಬರಿಯು ಅಪಾರವಾದ ಪ್ರೀತಿ ವಾತ್ಸಲ್ಯಗಳಿಂದ ರಾಮನ ಮೈ ಮನಸುಗಳನ್ನು
ತುಂಬಿಕೊಂಡಳು. ತಾನು ಆರಿಸಿ ತಂದಿಟ್ಟದ್ದ ಹಲವು ರೀತಿಯ ಹಣ್ಣುಗಳನ್ನು ಕಚ್ಚಿ ನೋಡಿ, ಸವಿಯಾಗಿರುವುದನ್ನು ಮಾತ್ರ ರಾಮನಿಗೆ ಕೊಟ್ಟು, ಅದನ್ನು ತಿನ್ನು ಎಂದು ಉಪಚರಿಸಿದಳು.
6)ರಾಮನ ಸಹಚರ್ಯದಲ್ಲಿ ಶಬರಿ ಭಾವುಕಳಾದದ್ದು ಹೇಗೆ?
ಉತ್ತರ :- ರಾಮನಿಗೆ ತಿನ್ನಲು ಹಣ್ಣನ್ನು ಕೊಟ್ಟು, ಅವನ ಪಕ್ಕದಲ್ಲಿ, ಅವನನ್ನೇ ನೋಡುತ್ತಾ ಏಳಿತಿದ್ದ ಹಾದಿಯ ಹೊರಗಿನ ಪದ ಕಳಚಿ ಬಿತ್ತು, ಅವಳ ಒಳಗಣ್ಣಿನಿಂದ ಅವನನ್ನು ನಟ ರಾಮು ಾಂತ್ ಹರಿಯಂತೆ ಕಂಡನು. ಹೀಗೆ ರಾಮನ ಸಹಚರ್ಯದಲ್ಲಿ ಶಬರಿ ಭಾವುಕಳಾದಳು.
ಇ) ವಾಕ್ಯಗಳ ಸ್ವಾರಸ್ಯಗಳನ್ನು ವಿಸ್ತರಿಸಿ ಬರೆಯಿರಿ,
1)ಮರದಲ್ಲರಳಿದ್ದವು ಹೂಗಳು ರಾಮ ನಾಮವೇ ಜೇನಾಗಿ
ಆಯ್ಕೆ:- ಈ ವಾಕ್ಯವನ್ನು ಡಾ.ನಾ.ಮೊಗಸಾಲೆ ಯವರು ಬರೆದಿರುವ 'ಶಬರಿ' ಎಂಬ ಪದ್ಯದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.
ಸಂದರ್ಭ:- ವಿಂದ್ಯಾಟವಿಯ ಮತಂಗ ಮುನಿಗಳ ಆಶ್ರಮದಲ್ಲಿ ವಾಸಿಸುತ್ತಿದ್ದ ವೃದ್ಧಳಾದ ಶಬರಿಯು ರಾಮನ ಬರುವಿಕೆಗಾಗಿ ಹಗಲು-ರಾತಿಯೆನ್ನದೆ ಕಾಯುತ್ತಿರುತ್ತಾಳೆ. ಅವಳ ಮನದಲ್ಲಿ ರಾಮನ ಕನಸೇ ಮರವಾಗಿ ಬೆಳೆದಿರುತ್ತದೆ. ಆಗ ಆ ಮರದಲ್ಲಿ ಹೂಗಳು ಅರಳಿದ್ದವು ಮತ್ತು ಅವಳಿಗೆ ತಾನು ಜಪಿಸುತ್ತಿದ್ದ ರಾಮನಾಮವೇ ಜೇನಾಗಿತ್ತು ಎಂದು ಕವಿಯು ಹೇಳುವ ಸಂದರ್ಭದಲ್ಲಿ ಮೇಲಿನ ಮಾತು ಮೂಡಿ ಬಂದಿದೆ.
2. ಆರಿಸಿಕೊಡಬೇಕೆನ್ನುತ ಮುದತಳೆದಳು ಕಣ್ಣನ್ನೂ ಹಣ್ಣಾಗಿಸಿ ನಿಂತು
ಆಯ್ಕೆ:- ಈ ವಾಕ್ಯವನ್ನು ಡಾ.ನಾ.ಮೊಗಸಾಲೆ ಯವರು ಬರೆದಿರುವ 'ಶಬರಿ' ಎಂಬ ಪದ್ಯದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.
ಸಂದರ್ಭ:- ರಾಮನ ಬರುವಿಕೆಗಾಗಿ ಕಾಯುತ್ತಿದ್ದ ಶಬರಿಯು ಪ್ರತಿದಿನವೂ ರಾಮನು ಬರಬಹುದೆಂಬ ನಿರೀಕ್ಷೆಯಿಂದ ಕಾಡಿನಲ್ಲೆಲ್ಲಾ ಸುತ್ತಾಡಿ ಅನೇಕ ಮರಗಿಡಗಳ ಪಕ್ವವಾದ ಹಣ್ಣುಗಳನ್ನು ಆರಿಸಿ ತಂದು, ಅವುಗಳನ್ನು ಸಂಗ್ರಹಿಸಿ ಸಂತೋಷಗೊಳ್ಳುತ್ತಿದ್ದಳು. ಹಾಗೆಯೇ ರಾಮನಿಗಾಗಿ ಕಾಯುತ್ತಿದ್ದ ಅವಳ ಕಣ್ಣುಗಳೂ ನೋಡಿ ನೋಡಿ ಹಣ್ಣಾಗಿಸಿ (ಪಕ್ವವಾಗಿಸಿ) ನಿಂತಿರುತ್ತಿದ್ದಳು. ಈ ಸಂದರ್ಭದಲ್ಲಿ ಕವಿಯು ಮೇಲಿನ ಮಾತನ್ನು ಹೇಳಿದ್ದಾರೆ.
3) ಶಬರಿ ಪೂಸಿದಳು ರಾಮನ ಮೈಮನಸುಗಳನು ಪ್ರೀತಿಯ ಕೈಯಿಂದ
ಆಯ್ಕೆ:- ಈ ವಾಕ್ಯವನ್ನು ಡಾ.ನಾ.ಮೊಗಸಾಲೆ ಯವರು ಬರೆದಿರುವ 'ಶಬರಿ' ಎಂಬ ಪದ್ಯದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.
ಸಂದರ್ಭ:- ರಾಮನು ಒಂದು ಶಬರಿಯನ್ನು ಮೊಗ್ಗು ಅರಳಿ ಹೂವಾಗುವಂತೆ ಮೃದುವಾಗಿ ಅಪ್ಪಿಕೊಂಡನು. ಶಬರಿಯೂ ಸಹ ಪ್ರೀತಿ ವಾತ್ಸಲ್ಯಗಳಿಂದ ರಾಮನ ಮೈಮನಗಳನ್ನು ಪ್ರೀತಿಯ ಕೈಯಿಂದ ಸವರಿದಳು ಎಂದು ಹೇಳುವಾಗ ಕವಿಯು ಮೇಲಿನ ಸಾಲುಗಳನ್ನು ಉದ್ದರಿಸಿದ್ದಾರೆ. ಬಹಳ ದಿನಗಳಿಂದ ಕಾಯುತ್ತಿದ್ದ ಶಬರಿಗೆ ರಾಮನ ಬರುವಿಕೆ ತುಂಬಾ ಸಂಭ್ರಮವನ್ನು ತಂದು ಕೊಟ್ಟಿದೆ.
4. ಒಳಗಣ್ಣಲಿ ಸಾರ್ಥಕ್ಯದ ಸವಿ ಹುಟ್ಟಿ ಹೊರಗಣ್ಣಲಿ ಹರಿಯಿತು ನದಿಯಾಗಿ
ಆಯ್ಕೆ:- ಈ ವಾಕ್ಯವನ್ನು ಡಾ.ನಾ.ಮೊಗಸಾಲೆ ಯವರು ಬರೆದಿರುವ 'ಶಬರಿ' ಎಂಬ ಪದ್ಯದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.
ಸಂದರ್ಭ:- ರಾಮನು ಅನಿರೀಕ್ಷಿತವಾಗಿ ಬಹಳ ದಿನಗಳ ಮೇಲೆ ಬಂದಾಗ ಶಬರಿಯು ಸಂಭ್ರಮಗೊಂಡು ಭಾವುಕಳಾಗುತ್ತಾಳೆ, ಪ್ರೀತಿಯಿಂದ ಅವನ ಮೈದಡವಿ, ಅವನಿಗೆ ತಿನ್ನಲು ರುಚಿಕರವಾದ ಹೆಣ್ಣುಗಳನ್ನು ಕೊಡುತ್ತಾಳೆ. ಅವನು ಸಹಚರ್ಯದಲ್ಲಿ ಶಬರಿಯ ಕಣ್ಣಿನ ಹೊರಹೊರೆ ಹರಿದು ಹೋಗುತ್ತದೆ. ಅವಳು ತನ್ನ ಒಳಗಣ್ಣಿಂದ ರಾಮನನ್ನು ನೋಡಲಾಗಿ, ಅವನು ಹರಿಯಂತೆಯೇ ಕಂಡನು. ಅದನ್ನು ನೋಡಿ ಅವಳಿಗೆ ತನ್ನ ಜನ್ಮವು ಸಾರ್ಥಕವಾಯಿತೆಂಬ ಧನ್ಯತಾ ಭಾವ ಮೂಡುತ್ತದೆ. ಅವಳ ಭಾವನೆಯು ಹೊರಗಣ್ಣಿನ ಮೂಲಕ ಕಣ್ಣೀರಿನ ಆನಂದಭಾಷ್ಪವು ನದಿಯಾಗಿ ಹರಿಯಿತು. ಎಂದು ಕವಿಯು ಹೇಳಿದ್ದಾರೆ.
ಈ)ಕೆಳಗಿನ ಪ್ರಶ್ನೆಗಳಿಗೆ ಏಳೆಂಟು ವಾಕ್ಯದಲ್ಲಿ ಉತ್ತರಿಸಿ,
1)ಶಬರಿಯು ರಾಮನ ಬರುವಿಕೆಗಾಗಿ ಏನೇನು ತಯಾರಿಯನ್ನು ಮಾಡಿಕೊಂಡಳು?
ಉತ್ತರ:- ಶಬರಿಯು ರಾಮನನ್ನು ಅತಿಶಯವಾಗಿ ಪ್ರೀತಿಸುತ್ತಿದ್ದಳು. ಅವನು ಇಂದಲ್ಲದಿದ್ದರೆ ನಾಳೆಯಾದರು ಬಂದೇ ಬರುತ್ತಾರೆ ಎಂದು ನಂಬಿದ್ದಳು, ಪ್ರಾಮಾಣಿಕವಾದ ಮನಸ್ಸಿನಿಂದ ದೇವರನ್ನು ಕರೆದರೆ, ದೇವರೂ ಕೂಡಾ ನಮ್ಮ ಬಳಿಗೆ ಬರುತ್ತಾನೆ ಎಂಬ ಆಶಯವನ್ನು 'ಶಬರಿ' ಪದ್ಯವು ಹೊಂದಿದೆ.
ರಾಮನು ಬಂದಾಗ ಅವನಿಗೆ ತಿನ್ನಲು ಹಣ್ಣನ್ನು ಕೊಡಬೇಕು ಎಂದು ಪ್ರತಿದಿನವೂ ಮುಂಜಾನೆ ತನ್ನ ನಿತ್ಯ ವಿಧಿಗಳನ್ನು ತೀರಿಸಿಕೊಂಡು, ಕಾಡಿನಲ್ಲಿ ಅಲ್ಲಿ, ಇಲ್ಲಿ ಎಲ್ಲಾ ಕಡೆ ಸುತ್ತಾಡಿ, ಅನೇಕ ಗಿಡಮರಗಳಲ್ಲಿ ಪಕ್ವವಾದ ಹಣ್ಣುಗಳನ್ನು ಆರಿಸಿ ತಂದು ಸಂಗ್ರಹಿಸಿಡುತ್ತಿದ್ದಳು. ಇದರಿಂದ ಅವಳಿಗೆ ತುಂಬಾ ಸಂತೋಷವಾಗುತ್ತಿತ್ತು. ಆ ಸವಿಯಾದ ಹೆಣ್ಣುಗಳನ್ನು ರಾಮನು ಬಂದಾಗ ಕೊಟ್ಟು, ಅವನು ತಿನ್ನುವಂತೆ ಮಾಡಬೇಕು ಎಂದು ಮನದಲ್ಲಿಯೇ ಅಂದುಕೊಳ್ಳುತ್ತಿದ್ದಳು. ರಾಮನು ಬರುವನೆಂದು ಈ ರೀತಿ ತಯಾರಿಯನ್ನು ಮಾಡಿಕೊಂಡಳು.
2) ರಾಮು ಬಂದಾಗ ಶಬರಿ ಆತನನ್ನು ಉಪಚರಿಸಿದ ರೀತಿಯನ್ನು ವರ್ಣಿಸಿ?
ಉತ್ತರ:- ಒಂದು ದಿನ ಬೆಳಗಿನ ಜಾವದಲ್ಲಿ ಶಬರಿಯು ಶ್ರೀರಾಮನು ಲಕ್ಷ್ಮಣನೊಡನೆ ಬಂದಂತೆ ಕನಸು ಕ೦ಡಳು, ಅವಳ ಕನಸು ನನಸಾದಂತೆ ಒಂದು ದಿನ ರಾಮನು ಬಂದನು. ರಾಮನು ಶಬರಿಯ ಮನೆಗೆ ಬಂದು, ಮೊಗ್ಗು ಅರಳಿ ಹೂವು ಅರಳುವಂತೆ ಶಬರಿಯನ್ನು ಬಹಳ ಕೋಮಲವಾಗಿ ಆಪ್ಪಿಕೊಂಡನು, ರಾಮನಿಗೆ ಶಬರಿಗೆ ಅಪ್ಪುಗೆ ತನ್ನ ತಾಯಿ ಕೌಸಲ್ಯಳ ನೆನಪನ್ನು ತರಿಸಿತು. ರಾಮನನ್ನು ನೋಡಿ ಶಬರಿಯು ಸಂಭ್ರಮಗೊಂಡಳು. ಅವನನ್ನು ಕುಳ್ಳರಿಸಿ, ಆತಿಶಯವಾದ ಪ್ರೀತಿಯಿಂದ, ತಾನು ಸಂಗ್ರಹಿಸಿಟ್ಟಿದ್ದ ಹಣ್ಣಿನ ಬುಟ್ಟಿಯನ್ನು ಎತ್ತಿಕೊಂಡು ಬಂದಳು, ಅದರಲ್ಲಿ ತುಂಬಾ ಚೆನ್ನಾಗಿ ಪಕ್ವವಾಗಿರುವ ಹಣ್ಣನ್ನು ತಾನು ಕಚ್ಚಿ ನೋಡಿ, ತುಂಬಾ ಸವಿಯಾಗಿರುವುದನ್ನೇ ಅವನಿಗೆ ತಿನ್ನಲು ಕೊಟ್ಟಳು. ರಾಮನೂ ಸಹ ಅವಳ ಕೊಟ್ಟ ಹಣ್ಣನ್ನು ತಿನ್ನುವಾಗ ತನ್ನ ತಾಯಿ ಕೌಸಲೈಯು ಕೊಡುತ್ತಿದ್ದ ಕೈತುತ್ತುಗಳನ್ನು ನೆನೆಪಿಸಿಕೊಂಡನು. ತಾನು ಇಷ್ಟು ರುಚಿಕರವಾದ ಹಣ್ಣುಗಳನ್ನು ಮೊದಲೆಂದೂ ತಿಂದಿರಲಿಲ್ಲ. ಇಷ್ಟು ಹಣ್ಣುಗಳನ್ನು ತಿಂದು ಹೊಟ್ಟೆ ತುಂಬಿ ಹೋಯಿತು. ಎಂದು ಉದ್ಧರಿಸುತ್ತಾನೆ. ಈ ರೀತಿ ತುಂಬು ಪ್ರೀತಿಯಿಂದ ಶಬರಿಯು ರಾಮನನ್ನು ಉಪಚರಿಸಿದಳು.
3)ರಾಮನ ಭೇಟಿಯಿಂದ ಶಬರಿಯಲ್ಲಿ ಕಣ್ಣೀರು ಇಳಿದದ್ದೇಕೆ?
ಉತ್ತರ :- ರಾಮನ ಭೇಟೆಯಿಂದ ಶಬರಿಯು ತುಂಬಾ ಸಂಭ್ರಮಗೊಂಡಳು. ಅವಳು ರಾಮನ ಬರುವಿಕೆಗಾಗಿ ಹಗಲಿರಳೂ ಕಾಯುತ್ತಿದ್ದಳು. ತನ್ನ ಪ್ರಾಮಾಣಿಕವಾದ ಮನಸ್ಸಿನಿಂದ ದೇವರಾದ ರಾಮನನ್ನು ತನ್ನ ಬಳಿಗೇ ಕರೆಸಿಕೊಂಡಳು. ಹೃದಯಾಂತರಾಳದಿಂದ ಅಪರಿಮಿತವಾಗಿ ರಾಮನನ್ನು ಪ್ರೀತಿಸುತ್ತಿದ್ದ ಶಬರಿಯ ಹೃದಯವು ರಾಮನ ಬರಿವಿಕೆಯಿಂದ ಸಂಭ್ರಮಗೊಂಡಿತು. ರಾಮನು ಶಬರಿಯ ಅಪ್ಪುಗೆಯಲ್ಲಿ ತಾಯಿ ಕೌಶಲ್ಯಳ ಬಳಿ ಇರುವಂತೆ ಭಾವಿಸುವನು. ಶಬರಿಯು ತನ್ನ ಪ್ರೀತಿ, ವಾತ್ಸಲ್ಯಗಳಿ ನೋಡುತ್ತಾ ಶಬರಿ ಕಂಡಳು, ತನ್ನ ಜನ ಕಣ್ಣೀರ ಧಾರೆ ನನು ತಿನ್ನುವಂತೆ ಪ್ರೀತಿ, ವಾತ್ಸಲ್ಯಗಳಿಂದ ರಾಮನ ಮೈಮನಗಳನ್ನು ತುಂಬಿದಳು, ಅವಳನ್ನು ನೋಡುತ್ತಾ ಶಬರಿಯ ಹೊರ ಕಣ್ಣಿಂದ ಬರೆ ಕಳಚಿ, ಒಳಗಣ್ಣಿಂದ ಸಾಕ್ಷಾತ್ ಉರಿಯಲ್ಲಿ ಕಂಡಳು. ತನ್ನ ಜನ್ಮ ಸಾರ್ಥಕವಾಯಿತೆಂಬ ಭಾವನೆಯಿಂದ ಭರತೆಯನ್ನು ಭವಿಸುತ್ತ ಭಾಗ ಆನಂದಭಾವವು ನದಿಯಾಗಿ ಹರಿಯಿತು, ಶಬರಿಯು ಅತ್ಯಂತ ಭಾವುಕರರಿಂದ ಕಣ್ಣೀರ ಧಾರೆ ಇಳಿದು ಹರಿಯಿತು.
ಭಾಷಾಭ್ಯಾಸ
ಇಲ್ಲಿ ಕೊಟ್ಟಿರುವ ವಿಶೇಷೋಕ್ತಿಗಳನ್ನು ಸ್ವಂತ ವಾಕ್ಯಗಳಲ್ಲಿ ಬಳಸಿ.
1.ನಿಟ್ಟುಸಿರಿಡು:- ಅಂದು ಸಂಜೆ ಬಸ್ ನಿಲ್ದಾಣದಲ್ಲಿ ಬಸ್ ಬರದೆ ಕಾಯುತ್ತಿದ್ದಾಗ, ಬಹಳ ಜನ ನಿಟ್ಟುಸಿರಿಡುತ್ತಿದ್ದರು.
2 ಅಪ್ಪಿ ಹಿಡಿ:- ಮುದ್ದಾದ ಮಗುವನ್ನು ಅವರ ತಾಯಿ ಅಪ್ಪಿಹಿಡಿದಿದ್ದರು.
3. ಪ್ರೀತಿಯ ಕೈ:- ಪರೀಕ್ಷೆಯ ಫಲಿತಾಂಶ ಬಂದಾಗ, ಗುರುವು ತಮ್ಮ ಶಿಷ್ಯನ ಬೆನ್ನ ಮೇಲೆ ಪ್ರೀತಿಯಿಂದ ಕೈಯಾಡಿಸಿದರು.
4. ಕೈತುತ್ತು:- ಬೇಸಿಗೆ ರಜೆಯಲ್ಲಿ ರಾತ್ರಿಯ ಹೊತ್ತು ಮಕ್ಕಳಿಗೆ ಅಮ್ಮ ಕೈ ತುತ್ತು ಕೊಡುತ್ತಾರೆ.
5. ಮೈಮರೆತು ತಿನ್ನು:- ನಮಗೆ ಇಷ್ಟವಾದ ಮಾವಿನ ಹಣ್ಣನ್ನು ಮೈಮರೆತು ತಿನ್ನುತ್ತೇವೆ.
ಆ) ಕೆಳಗೆ ನೀಡಿರುವ ಪದಗಳನ್ನು ಬಡಿಸಿ ಸಂದಿ ಹೆಸರಿಸಿರಿ
1. ವಿಂಧ್ಯ + ಅಟವಿ= ವಿಂದ್ಯಾಟವಿ - ಸವರ್ಣ ದೀರ್ಘ ಸಂಧಿ
2. ಮರದಲ್ಲಿ + ಅರಳಿದ್ದವು = ಮರದಲ್ಲರಳಿದವು - ಲೋಪಸಂಧಿ
3. ನನ್ನ + ಒಡೆಯ = ನನ್ನೋಡೆಯ - ಲೋಪಸಂಧಿ
4. ಒಳ + ಕಣ್ಣು = ಒಳಗನ್ನು -ಆದೇಶಸಂಧಿ
5.ಹರಿ +ಆಗಿ = ಹರಿಯಾಗಿ - 'ಯ' ಕಾರ ಆಗಮ ಸಂಧಿ
0 Comments