- ನಿರುಪಮಾ
? ಡಾ. ನಿರುಪಮಾ ಅವರು 1933 ರಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿಯಲ್ಲಿ ಜನಿಸಿದರು.
? ಇವರು ಅಮೃತಕಲಶ, ಪರಿತ್ಯಕ್ತೆ, ಭುವನವಿಜಯ, ಭಾರತೀಯ ನಾರಿ ನಡೆದು ಬಂದ ದಾರಿ, ಭಾವಮುಖಿ, ರಣಹದ್ದು, ಅಧಿಕಾರಿಗಳ ಅವಾಂತ್ರ ಇನ್ನು ಮುಂತಾದ ಕೃತಿಗಳನ್ನು ಬರೆದಿದ್ದಾರೆ.
? ಇವರಿಗೆ ಯೂನಿಸೆಫ್ ಮಕ್ಕಳ ಸಾಹಿತ್ಯ, ಶಾಶ್ವತ ಸಂಸ್ಥೆಯ ಸದೋದಿತಾ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ಸಾಹಿತ್ಯ ಶಿರೋಮಣಿ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿಗಳು ಲಭಿಸಿವೆ.
? ಬುದ್ಧನ ಸಲಹೆ ಕಥೆಯನ್ನು ಶತಮಾನದ ಮಕ್ಕಳ ಸಾಹಿತ್ಯ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.
1. ಪದಗಳ ಅರ್ಥ ತಿಳಿಯಿರಿ :
ಅಮೂಲ್ಯ - ಬೆಲೆಕಟ್ಟಲಾಗದ
ಅಸೂಯೆ - ಹೊಟ್ಟೆಕಿಚ್ಚು
ಈರ್ಷ್ಯೆ - ಅಸೂಯೆ; ಹೊಟ್ಟೆಕಿಚ್ಚು.
ಉತ್ಕಟ - ಅಧಿಕ; ಪ್ರಬಲವಾದ.
ಕವಲು - ಭಿನ್ನತೆ; ಎರಡು ಭಾಗ.
ತೆಪ್ಪಗೆ - ಸುಮ್ಮನೆ; ಮಾತಿಲ್ಲದೆ.
ತೆಪ್ಪಗಾಗು - ಸುಮ್ಮನಾಗು; ಏನೂ ತಿಳಿಯದಾಗು.
ದುರಾಸೆ - ಅತಿ ಆಸೆ; ಕೆಟ್ಟ ಬಯಕೆ.
ದ್ವೇಷ - ಹಗೆತನ; ವೈರತ್ವ.
ನೆರೆಹೊರೆ - ಸುತ್ತಮುತ್ತ
ವರ - ಅನುಗ್ರಹ; ಶ್ರೇಷ್ಠ.
ವಿಷಮಿಸು - ನಂಜಾಗು; ವಿಕೋಪಕ್ಕೆ ತಿರುಗು.
ಸಲಹೆ - ಬುದ್ಧಿವಾದ; ಮಾರ್ಗದರ್ಶನ.
ಸುಭಿಕ್ಷೆ - ಒಳ್ಳೆಯ ಕಾಲ; ಸಮೃದ್ಧಿ.
ಸ್ವಾರ್ಥ - ಸ್ವಪ್ರಯೋಜನ; ಸ್ವಹಿತ; ತನಗಾಗಿ.
? ಇವರು ಅಮೃತಕಲಶ, ಪರಿತ್ಯಕ್ತೆ, ಭುವನವಿಜಯ, ಭಾರತೀಯ ನಾರಿ ನಡೆದು ಬಂದ ದಾರಿ, ಭಾವಮುಖಿ, ರಣಹದ್ದು, ಅಧಿಕಾರಿಗಳ ಅವಾಂತ್ರ ಇನ್ನು ಮುಂತಾದ ಕೃತಿಗಳನ್ನು ಬರೆದಿದ್ದಾರೆ.
? ಇವರಿಗೆ ಯೂನಿಸೆಫ್ ಮಕ್ಕಳ ಸಾಹಿತ್ಯ, ಶಾಶ್ವತ ಸಂಸ್ಥೆಯ ಸದೋದಿತಾ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ಸಾಹಿತ್ಯ ಶಿರೋಮಣಿ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿಗಳು ಲಭಿಸಿವೆ.
? ಬುದ್ಧನ ಸಲಹೆ ಕಥೆಯನ್ನು ಶತಮಾನದ ಮಕ್ಕಳ ಸಾಹಿತ್ಯ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.
ಅಭ್ಯಾಸ
1. ಪದಗಳ ಅರ್ಥ ತಿಳಿಯಿರಿ :
ಅಮೂಲ್ಯ - ಬೆಲೆಕಟ್ಟಲಾಗದ
ಅಸೂಯೆ - ಹೊಟ್ಟೆಕಿಚ್ಚು
ಈರ್ಷ್ಯೆ - ಅಸೂಯೆ; ಹೊಟ್ಟೆಕಿಚ್ಚು.
ಉತ್ಕಟ - ಅಧಿಕ; ಪ್ರಬಲವಾದ.
ಕವಲು - ಭಿನ್ನತೆ; ಎರಡು ಭಾಗ.
ತೆಪ್ಪಗೆ - ಸುಮ್ಮನೆ; ಮಾತಿಲ್ಲದೆ.
ತೆಪ್ಪಗಾಗು - ಸುಮ್ಮನಾಗು; ಏನೂ ತಿಳಿಯದಾಗು.
ದುರಾಸೆ - ಅತಿ ಆಸೆ; ಕೆಟ್ಟ ಬಯಕೆ.
ದ್ವೇಷ - ಹಗೆತನ; ವೈರತ್ವ.
ನೆರೆಹೊರೆ - ಸುತ್ತಮುತ್ತ
ವರ - ಅನುಗ್ರಹ; ಶ್ರೇಷ್ಠ.
ವಿಷಮಿಸು - ನಂಜಾಗು; ವಿಕೋಪಕ್ಕೆ ತಿರುಗು.
ಸಲಹೆ - ಬುದ್ಧಿವಾದ; ಮಾರ್ಗದರ್ಶನ.
ಸುಭಿಕ್ಷೆ - ಒಳ್ಳೆಯ ಕಾಲ; ಸಮೃದ್ಧಿ.
ಸ್ವಾರ್ಥ - ಸ್ವಪ್ರಯೋಜನ; ಸ್ವಹಿತ; ತನಗಾಗಿ.
ಪ್ರಶ್ನೆಗಳು :
ಅ) ಬಿಟ್ಟ ಸ್ಥಳಗಳನ್ನು ಸೂಕ್ತ ಪದದಿಂದ ಭರ್ತಿ ಮಾಡಿರಿ.
1. ಸಿದ್ಧಾರ್ಥನ ತಂದೆಯ ಹೆಸರು ಶುದ್ಧೋಧನನ
2. ವತ್ಸ ಮತ್ತು ಮಗಧ ರಾಜ್ಯಗಳ ನಡುವೆ ಹರಿಯುವ ನದಿ ಗಂಗಾನದಿ
3. ವತ್ಸ ಮತ್ತು ಮಗಧ ರಾಜ್ಯಗಳ ನಡುವೆ ಶಾಂತಿ ನೆಲೆಸುವಂತೆ ಮಾಡಿದವರು ಭಗವಾನ್ ಬುದ್ಧ
4. ಬುದ್ಧನ ಸಲಹೆ ಪಾಠದ ಆಕರ ಕೃತಿ ಶತಮಾನದ ಮಕ್ಕಳ ಸಾಹಿತ್ಯ
ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
1. ಗಂಗಾನದಿ ಎಲ್ಲಿ ಹುಟ್ಟಿ ಯಾವ ಸಮುದ್ರವನ್ನು ಸೇರುತ್ತದೆ?
ಗಂಗಾನದಿ ಹೇಮಕೂಟ ಪರ್ವತದಲ್ಲಿ ಹುಟ್ಟಿ ಬಂಗಾಳ ಸಮುದ್ರವನ್ನು ಸೇರುತ್ತದೆ.
2. ಬುದ್ಧನ ಪ್ರಕಾರ ನದಿ ನೀರಿಗಿಂತ ಹೆಚ್ಚು ಬೆಲೆಯುಳ್ಳದ್ದು ಯಾವುದು? ಏಕೆ?
ಬುದ್ಧನ ಪ್ರಕಾರ ನದಿ ನೀರಿಗಿಂತ ಹೆಚ್ಚು ಬೆಲೆಯುಳ್ಳದ್ದು ಶಾಂತಿ. ಏಕೆಂದರೆ ಮನುಷ್ಯ ಸುಖವಾಗಿ ಜೀವಿಸಲು ನೀರು, ಗಾಳಿ, ಆಹಾರ ಎಲ್ಲವೂ ಮುಖ್ಯವಾದಂತೆ ಶಾಂತಿಯೂ ಅಷ್ಟೇ ಮುಖ್ಯವಾಗಿದೆ.
3. ಬುದ್ಧ ದೇವನು ಹೇಳುವಂತೆ ಜೀವನದಲ್ಲಿ ಸುಖ ಶಾಂತಿ ಸಿಗಬೇಕಾದರೆ ಏನು ಮಾಡಬೇಕು?
ಬುದ್ಧ ದೇವನು ಹೇಳುವಂತೆ ಜೀವನದಲ್ಲಿ ಸುಖ, ಶಾಂತಿ ಸಿಗಬೇಕಾದರೆ ಮಾನವರು ಪರಸ್ಪರ ಹಂಚಿಕೊಳ್ಳುವ ಗುಣ ಹೊಂದಬೇಕು.
4. ವತ್ಸ ಮತ್ತು ಮಗಧ ರಾಜ್ಯದವರು ಯುದ್ಧವನ್ನು ಏಕೆ ನಿಲ್ಲಿಸಿದರು?
ಬುದ್ಧದೇವನು ಬೋಧಿಸಿದ ಶಾಂತಿಯ ಮಹತ್ವ ಅರಿತು ವತ್ಸ ಮತ್ತು ಮಗಧ ರಾಜ್ಯದವರು ಯುದ್ಧವನ್ನು ನಿಲ್ಲಿಸಿದರು.
ಇ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.
1. ವತ್ಸ ಮತ್ತು ಮಗಧ ರಾಜ್ಯದ ಜನರು ಗಂಗಾ ನದಿಯನ್ನು ತಾಯಿಯಂತೆ ಏಕೆ ಪೂಜಿಸುತ್ತಿದ್ದರು?
ವತ್ಸ ಮತ್ತು ಮಗಧ ರಾಜ್ಯದ ನಡುವೆ ಗಂಗಾ ನದಿ ಹರಿಯುತ್ತಿತ್ತು. ಈ ನದಿಯ ನೀರಿನಿಂದ ಎರಡೂ ರಾಜ್ಯಗಳ ನೆಲ ಸಸ್ಯಶ್ಯಾಮಲವಾಗಿತ್ತು. ಎತ್ತ ನೋಡಿದರೂ ಹಸಿರು ತುಂಬಿ ಬೆಳೆ ಬೆಳೆದು ಸುಭಿಕ್ಷದಿಂದ ಜನರು ಸುಖವಾಗಿದ್ದ ಕಾರಣ ವತ್ಸ ಮತ್ತು ಮಗಧ ರಾಜ್ಯದ ಜನರು ಗಂಗಾ ನದಿಯನ್ನು ತಾಯಿಯಂತೆ ಪೂಜಿಸುತ್ತಿದ್ದರು.
2. ವತ್ಸ ಮತ್ತು ಮಗಧ ರಾಜ್ಯಗಳ ನಡುವೆ ದ್ವೇಷ ಏಕೆ ಹೆಚ್ಚಾಯಿತು?
ಗಂಗಾ ನದಿಯ ಮೇಲೆ ತಮ್ಮ ಸಂಪೂರ್ಣ ಅಧಿಕಾರ ಸ್ಥಾಪಿಸುವ ಸಲುವಾಗಿ ವತ್ಸ ಮತ್ತು ಮಗಧ ರಾಜ್ಯಗಳ ಜನರಲ್ಲಿ ಕ್ರಮೇಣ ಸ್ವಾರ್ಥ ಆವರಿಸಿತು. ಈ ಕಾರಣದಿಂದಾಗಿ ಎರಡು ರಾಜ್ಯಗಳ ನಡುವೆ ದ್ವೇಷ ಹೆಚ್ಚಾಯಿತು.
3. ಬುದ್ಧನು ಹೇಳುವಂತೆ ದ್ವೇಷ ದುಃಖವನ್ನು ಹೇಗೆ ಹೆಚ್ಚಿಸುತ್ತದೆ?
ಬುದ್ಧನು ಹೇಳುವಂತೆ ನೀವು ದ್ವೇಷದಿಂದ ದ್ವೇಷವನ್ನು ಜಯಿಸಲು ಹೋದರೆ ಕೊನೆಗೆ ನಿಮಗೆ ಉಳಿಯುವುದು ಈರ್ಷ್ಯೆಯೇ.
ಇವುಗಳಿಂದ ಜೀವಿಗಳಿಗೆ ದುಃಖವೇ ಹೊರತು ಸುಖವಲ್ಲ. ಈಗ ಸುಖವಾಗಿರುವ ನೀವು ದುಃಖ ತಂದುಕೊಳ್ಳುವ ಮಾರ್ಗ ಇದು ಎಂದರು.
4. ವತ್ಸ ವುತ್ತು ಮಗಧ ರಾಜ್ಯದವರಿಗೆ ಸುಖಶಾಂತಿಯ ಮಹತ್ವವನ್ನು ಬುದ್ಧನು ಹೇಗೆ ಬೋಧಿಸಿದನು?
ಮನುಷ್ಯ ಸುಖವಾಗಿ ಜೀವಿಸಲು ನೀರು, ಗಾಳಿ, ಆಹಾರ ಎಲ್ಲವೂ ಮುಖ್ಯವಾದಂತೆ ಶಾಂತಿಯೂ ಮಾಡಿಕೊಳ್ಳುವುದನ್ನು ಬಿಟ್ಟು ವಿವೇಕ ತಂದುಕೊಂಡು ಸುಖವಾಗಿರಿ. ಪ್ರಕೃತಿ ಜೀವಿಗಳಿಗೆ ವರವೇ ಹೊರತು ಶಾಪವಲ್ಲ. ಆ ವರವನ್ನು ಸರ್ವಮಾನವರೂ ಸಮಾನವಾಗಿ ಹಂಚಿಕೊಂಡಾಗ ಎಲ್ಲರಿಗೂ ಸುಖ ಶಾಂತಿ ಸಿಗುತ್ತದೆ ಎಂದು ಬುದ್ಧನು ಬೋಧಿಸಿದನು.
5. ಬುದ್ಧ ದೇವನು ವತ್ಸ ಮತ್ತು ಮಗಧ ರಾಜ್ಯಗಳ ನಡುವಿನ ಯುದ್ಧವನ್ನು ಏಕೆ ತಪ್ಪಿಸಿದನು?
ಸರ್ವರಿಗೂ ಮೀಸಲಾಗಿರುವ ನೆಲ, ಜಲಗಳನ್ನು ಹಂಚಿಕೊಡಾಗ ಮಾನವರು ವಿವೇಕವನ್ನು ಕಳೆದುಕೊಂಡು ಯುದ್ಧಕ್ಕೆ ಸನ್ನದ್ಧರಾಗುತ್ತಾರೆ. ಈ ಯುದ್ಧಗಳಿಂದ ಅಪಾರ ಸಾವು ನೋವು ಉಂಟಾಗಿ ಬದುಕು ನರಕವಾಗಿ ಬಿಡುತ್ತದೆ ಎಂಬ ಸತ್ಯವನ್ನು ಮರೆತು ಬಿಡುತ್ತಾರೆ. ಅದಕ್ಕಾಗಿ ಬದುಕಲು ಗಾಳಿ, ನೀರು, ಆಹಾರದಂತೆ ಸುಖ, ಶಾಂತಿ, ನೆಮ್ಮದಿ ಅಗತ್ಯವಾಗಿ ಬೇಕು, ಎಂದು ಅರಿತ ಬುದ್ಧದೇವನು ಯುದ್ಧವನ್ನು ತಪ್ಪಿಸಿದನು.
ಈ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.
1. ವತ್ಸ ಮತ್ತು ಮಗಧ ರಾಜ್ಯಗಳು ಯುದ್ಧ ಮರೆತು ಶಾಂತಿಯಿಂದ ನೆಲೆಸಿದುದು ಹೇಗೆ?
ವತ್ಸ ಮತ್ತು ಮಗಧ ರಾಜ್ಯಗಳು ಗಂಗಾನದಿಯ ಮೇಲೆ ತಮ್ಮ ಹಕ್ಕು ಸ್ಥಾಪಿಸುವ ಸಲುವಾಗಿ ದ್ವೇಷ, ಅಸೂಯೆಗಳಿಂದ ಪರಸ್ಪರ ಹೋರಾಟಕ್ಕೆ ಸಿದ್ಧರಾದರು. ಆ ಸಮಯದಲ್ಲಿ ಬುದ್ಧದೇವನು ಆಗಮಿಸಿ ಇಬ್ಬರೂ ರಾಜ ಮಂತ್ರಿಗಳಿಗೆ ನದಿಯ ನೀರು ಮಾನವನ ರಕ್ತಗಳಲ್ಲಿ ಯಾವುದಕ್ಕೆ ಬೆಲೆ ಹೆಚ್ಚು ಎಂದು ಕೇಳಿದರು. ಆಗ ಮಂತ್ರಿಗಳು ರಕ್ತವೆಂಬ ಉತ್ತರ ಕೊಟ್ಟರು. ಹಾಗಾದರೆ ನದಿ ನೀರಿಗಾಗಿ ಅಮೂಲ್ಯವಾದ ರಕ್ತ ಹರಿಸಲು ಏಕೆ ಸಿದ್ಧರಾಗಿದ್ದೀರಿ? ಜೀವಿಸಬೇಕೆಂದ ಮೇಲೆ ಸಾಯಲೇಕೆ ಯುದ್ಧವನ್ನು ಆರಿಸಿಕೊಂಡಿದ್ದೀರಿ? ಇವೆಲ್ಲವನ್ನು ಬಿಟ್ಟು ಶಾಂತಿ ಬೆಳೆಸಿಕೊಳ್ಳಿ, ವಿವೇಕದಿಂದ ವರ್ತಿಸಿರಿ, ಪ್ರಕೃತಿ ಸಂಪತ್ತನ್ನು ಹಂಚಿಕೊಂಡಾಗ ಎಲ್ಲರಿಗೂ ಸುಖ, ಶಾಂತಿ ಸಿಗುತ್ತದೆ ಎಂದು ಬುದ್ಧದೇವ ತಿಳಿಸಿದಾಗ ವತ್ಸ ಮತ್ತು ಮಗಧ ರಾಜ್ಯಗಳು ಯುದ್ಧ ಮರೆತು ಶಾಂತಿಯಿಂದ ನೆಲೆಸಿದರು.
2. ಬದುಕಿನಲ್ಲಿ ಸುಖ ಶಾಂತಿ ನೆಮ್ಮದಿಗಳನ್ನು ಕಂಡುಕೊಳ್ಳುವುದು ಹೇಗೆ? ಚರ್ಚಿಸಿ.
ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿಗಳನ್ನು ಕಂಡುಕೊಳ್ಳಲು ಮಾನವರು ಕೊಡಮಾಡಿದ ಪ್ರಾಕೃತಿಕ ಸಂಪತ್ತನ್ನು ಬಳಸಿಕೊಂಡು ಸಮೃದ್ಧಿಯ ಜೀವನ ನಡೆಸಬೇಕು. ಇಲ್ಲದಿದ್ದರೆ ಸ್ವಾರ್ಥ, ದ್ವೇಷ, ತುಂಬಿದ ದುರಾಸೆ ಬದುಕು ನಮ್ಮನ್ನು ನಾಶಮಾಡುತ್ತದೆ. ಎಲ್ಲ ಕಾಲದಲ್ಲಿಯೂ ಪರಿಸ್ಥಿತಿಯನ್ನು ಅರಿತು ಬದುಕಬೆಕು.ಒಳಿತು ಕೆಡುಕುಗಳ ಬಗ್ಗೆ ತಾಳ್ಮೆಯಿಂದ ತೀರ್ಮಾನ ಕೈಗೊಳ್ಳಬೇಕು. ಪರಸ್ಪರ ಹಂಚಿಕೊಂಡು ತಿನ್ನುವ, ಇನ್ನೊಬ್ಬರ ಕಷ್ಟದಲ್ಲಿ ಭಾಗಿಯಾಗುವ, ವಿವೇಕದಿಂದ ವರ್ತಿಸುವ, ಸೌಹಾರ್ದಯುತವಾಗಿ ಬಾಳುವ, ಶಾಂತಿಯು ನೆಲೆಸುವಂತೆ ಮಾಡುವುದರಿಂದ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿಗಳನ್ನು ಕಂಡುಕೊಳ್ಳಬಹುದು.
ಉ) ಸಂದರ್ಭದೊಡನೆ ವಿವರಿಸಿರಿ.
1. ಮನುಷ್ಯನ ರಕ್ತ ನದಿ ನೀರಿಗಿಂತ ಬೆಲೆಯುಳ್ಳದ್ದು.
ಈ ವಾಕ್ಯವನ್ನು ನಿರುಪಮಾ ಅವರು ಬರೆದಿರುವ ಶತಮಾನದ ಮಕ್ಕಳ ಸಾಹಿತ್ಯ ಎಂಬ ಕೃತಿಯಿಂದ ಆಯ್ದ ಬುದ್ಧನ ಸಲಹೆ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಈ ಮಾತನ್ನು ವತ್ಸ ಮತ್ತು ಮಗದ ರಾಜ್ಯದ ಜನರು ಭಗವಾನ್ ಬುದ್ಧದೇವನಿಗೆ ಹೇಳುತ್ತಾರೆ. ಎರಡು ರಾಜ್ಯದ ಜನರು ನದಿ ನೀರಿಗಾಗಿ ಯುದ್ಧಕ್ಕೆ ಸಿದ್ಧರಾದಾಗ ಬುದ್ಧನು ನದಿಯ ನೀರು ಮಾನವನ ರಕ್ತ ಇವೆರಡರಲ್ಲಿ ಯಾವುದಕ್ಕೆ ಹೆಚ್ಚು ಬೆಲೆಯಿದೆ ಎಂದು ಪ್ರಶ್ನಿಸಿದಾಗ ಎರಡೂ ರಾಜ್ಯದ ಜನರು ಮನುಷ್ಯನ ರಕ್ತ ನದಿ ನೀರಿಗಿಂತಲೂ ಬೆಲೆಯುಳ್ಳದ್ದು ಎಂದು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.
2. ನೀವು ಜೀವಿಸಬೇಕೆಂದಿದ್ದೀರಲ್ಲವೆ? ಮತ್ತೆ ಸಾಯಲೇಕೆ ಸಿದ್ಧರಾಗಿದ್ದೀರಿ?
ಈ ವಾಕ್ಯವನ್ನು ನಿರುಪಮಾ ಅವರು ಬರೆದಿರುವ ಶತಮಾನದ ಮಕ್ಕಳ ಸಾಹಿತ್ಯ ಎಂಬ ಕೃತಿಯಿಂದ ಆಯ್ದ ಬುದ್ಧನ ಸಲಹೆ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಈ ಮಾತನ್ನು ಭಗವಾನ್ ಬುದ್ಧದೇವನು ವತ್ಸ ಮತ್ತು ಮಗದ ರಾಜ್ಯದ ಜನರಿಗೆ ಹೇಳುತ್ತಾರೆ. ಪ್ರಕೃತಿ ಸರ್ವಮಾನವರಿಗೂ ನೀಡಿರುವ ಎಲ್ಲ ವಸ್ತುಗಳನ್ನು ಸಮಾನವಾಗಿ ಹಂಚಿಕೊಂಡಾಗ ಎಲ್ಲರಿಗೂ ಸುಖ ಶಾಂತಿ ಸಿಗುತ್ತದೆ. ಪ್ರಕೃತಿ ಜೀವಿಗಳಿಗೆ ವರವೇ ಹೊರತು ಶಾಪವಲ್ಲ. ಎಂದು ಬುದ್ಧನು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.
3. ಪ್ರಕೃತಿ ಜೀವಿಗಳಿಗೆ ವರವೇ ಹೊರತು ಶಾಪವಲ್ಲ.
ಈ ವಾಕ್ಯವನ್ನು ನಿರುಪಮಾ ಅವರು ಬರೆದಿರುವ ಶತಮಾನದ ಮಕ್ಕಳ ಸಾಹಿತ್ಯ ಎಂಬ ಕೃತಿಯಿಂದ ಆಯ್ದ ಬುದ್ಧನ ಸಲಹೆ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಈ ಮಾತನ್ನು ಭಗವಾನ್ ಬುದ್ಧದೇವನು ವತ್ಸ ಮತ್ತು ಮಗದ ರಾಜ್ಯದ ಜನರಿಗೆ ಹೇಳುತ್ತಾರೆ. ಪ್ರಕೃತಿ ಸರ್ವಮಾನವರಿಗೂ ನೀಡಿರುವ ಎಲ್ಲ ವಸ್ತುಗಳನ್ನು ಸಮಾನವಾಗಿ ಹಂಚಿಕೊಂಡಾಗ ಎಲ್ಲರಿಗೂ ಸುಖ ಶಾಂತಿ ಸಿಗುತ್ತದೆ. ಪ್ರಕೃತಿ ಜೀವಿಗಳಿಗೆ ವರವೇ ಹೊರತು ಶಾಪವಲ್ಲ. ಎಂದು ಬುದ್ಧನು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.
ಭಾಷಾಭ್ಯಾಸ :
ಅ) ಸ್ವರಾಕ್ಷರಗಳಿಂದ ಆರಂಭಗೊಳ್ಳುವ ಪದಗಳನ್ನು ಬುದ್ಧನ ಸಲಹೆ ಪಾಠದಿಂದ ಆಯ್ದು ಅವುಗಳನ್ನು ಅಕಾರಾದಿಯಾಗಿ ಜೋಡಿಸಿ ಬರೆಯಿರಿ.
ಉದಾ : *ಅದನ್ನು, ಅದೇ, ಅಪಾರ, ಅಷ್ಟೇ, ಅವುಗಳನ್ನು, ಅರಸು, ಅವರಿಬ್ಬರು,ಅಧಿಕಾರ, ಅವರು, ಅನ್ನ, ಅಂದಿನಿಂದ, ಅಲ್ಲಿಗೆ, ಅಸೂಯೆ, ಅಮೂಲ್ಯವಾದ,ಅವರಲ್ಲರೂ,ಅದಕ್ಕಿಂತಲೂ, ಆಹಾರ, ಆದರೆ, ಆಳುತ್ತಿದ್ದರು, ಆವರಿಸಿತು, ಆತ.
* ಇವರೆಲ್ಲರೂ, ಇವುಗಳಿಂದ, ಇತರ, ಇವೆರಡರಲ್ಲಿ, ಈ, ಈಗ.
* ಉತ್ತವಿತ್ತರು, ಉಂಟಾಯಿತು, ಉಪಯೋಗ, ಊರಿಗೆ. ಎರಡು, ಎಲ್ಲರಿಗೂ, ಏಕೆ, ಒಕ್ಕೊರಲಿನಿಂದ.
ಆ) ಬುದ್ಧನ ಸಲಹೆ ಪಾಠದಲ್ಲಿ ಅನುಸ್ವಾರ ವಿಸರ್ಗಗಳಿಂದ ಕೂಡಿರುವ ಪದಗಳನ್ನು ಆಯ್ದು ಬರೆಯಿರಿ.
ಉದಾ : ಗಂಗಾ, ಒಂದು, ದುಃಖ, ಪುನಃ, ಹಿಂದಿನ, ಕಪಿಲವಸ್ತುವೆಂಬ,ಶಾಕ್ಯರೆಂಬ,ಎಂಬ. ನಂತರ, ಬಂಗಾಳ, ಇಂದ, ಅಂತೆ, ತುಂಬಿ, ಸಂಪೂರ್ಣ, ಉಂಟಾಯಿತು, ಬಂದ, ನಿಂತುಕೊಂಡ, ಮಂತ್ರಿ, ಎಂದು, ಶಾಂತಿ, ತಂದುಕೊಂಡು, ಅಂದಿನಿಂದ, ಸ್ನೇಹದಿಂದ.
ಇ) ಪ್ರಸ್ತುತ ಪಾಠದಲ್ಲಿ ಸ, ಶ, ಷ ಅಕ್ಷರಗಳಿರುವ ಪದಗಳನ್ನು ಪಟ್ಟಿಮಾಡಿ ಅವುಗಳ ಸ್ಪಷ್ಟ ಉಚ್ಛಾರಣೆಯನ್ನು ಅಭ್ಯಾಸ ಮಾಡಿರಿ.
ಉದಾ : ಸಸ್ಯಶ್ಯಾಮಲೆ, ಸನ್ಯಾಸ, ದೇಶ, ಸುಖ, ಶಾಂತಿ, ಈರ್ಷ್ಯೆ, ಸಮೀಪ, ಸಮುದ್ರ, ಸೇರುತ್ತದೆ, ವತ್ಸ, ಸಸ್ಯ, ಹಸಿರು, ಸ್ವಾರ್ಥ, ಆವರಿಸು, ಸೈನ್ಯ, ಸ್ವಲ್ಪ, ಕೇಳಿಸು,ಅಸೂಯೆ, ಅವಶ್ಯಕ, ನಾಶ, ಮನುಷ್ಯ, ಅಷ್ಟೇ, ಜೀವಿಸಲು, ಸಮಾನ, ಕಪಿಲವಸ್ತು, ಸತ್ಯ, ನಮಸ್ಕರಿಸು, ದೇಶ, ಕಾಶಿ, ದಕ್ಷಿಣ, ವಿಷ, ಸುಭಿಕ್ಷೆ, ದುರಾಸೆ, ಸಿದ್ಧ, ಶುದ್ದೋಧನ,- ಇತ್ಯಾದಿ.
ಈ) ಕೆಳಗಿನ ಪದಗಳಿಗೆ ವಿರುದ್ಧಾರ್ಥ ಬರೆಯಿರಿ.
ಮೌಲ್ಯ - ಅಪಮೌಲ್ಯ,
ಸುಖ - ದುಃಖ,
ವರ - ಶಾಪ,
ಸತ್ಯ - ಅಸತ್ಯ,
ಪವಿತ್ರ - ಅಪವಿತ್ರ,
ಸ್ವಾರ್ಥ - ನಿಸ್ವಾರ್ಥ.
ಉ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಉಪಯೋಗಿಸಿರಿ.
1. ಹಿಂಜರಿಕೆ : ಕೆಲವು ಮಕ್ಕಳು ಹಿರಿಯರ ಮುಂದೆ ಮಾತನಾಡಲು ಹಿಂಜರಿಯುತ್ತಾರೆ.
2. ವಿವೇಕ : ವಿದ್ಯೆ ಇದ್ದವರಿಗೆ ವಿವೇಕ ಹೆಚ್ಚಾಗಿರುತ್ತದೆ.
3. ಸ್ವಾರ್ಥ : ಕೆಲವರು ತಮ್ಮ ಸ್ವಾರ್ಥಕ್ಕಾಗಿ ಕೆಟ್ಟ ಕೆಲಸ ಮಾಡುತ್ತಾರೆ.
4. ಸುಖಶಾಂತಿ : ಸಂಸಾರದಲ್ಲಿ ಸುಖಶಾಂತಿ ಇರಬೇಕು.
4. ಸುಭಿಕ್ಷೆ : ವತ್ಸ ಮತ್ತು ಮಗದ ರಾಜ್ಯಗಳು ಸುಭಿಕ್ಷವಾಗಿದ್ದವು.
5. ಸಸ್ಯಶ್ಯಾಮಲ: ಭದ್ರಾ ನದಿಯ ನೀರಿನಿಂದ ನಮ್ಮ ಗದ್ದೆ, ತೋಟಗಳು ಸಸ್ಯಶ್ಯಾಮಲವಾಗಿವೆ.
ಸೈದ್ಧಾಂತಿಕ ವ್ಯಾಕರಣ :
ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ.
ಅವುಗಳಲ್ಲಿ ಮೂರು ಭಾಗಗಳಿವೆ.
1. ಸ್ವರಗಳು - 13
2. ಯೋಗವಾಹಗಳು - 02
3. ವ್ಯಂಜನಗಳು - 34
ಒಟ್ಟು - 49
1.ಸ್ವರಗಳು : (13)
ಸರಳವಾಗಿ, ಸ್ವತಂತ್ರವಾಗಿ, ಸಹಜವಾಗಿ ಉಚ್ಚರಿಸಲು ಬರುವ ಅಕ್ಷರಗಳೇ ಸ್ವರಗಳು.
ಒಟ್ಟು 13 ಸ್ವರಾಕ್ಷರಗಳಿವೆ. ಅವುಗಳನ್ನು ಈ ಕೆಳಗಿನಂತೆ ಎರಡು ಭಾಗಗಳಾಗಿ ವಿಂಗಡಿಸಿದೆ.
ಹ್ರಸ್ವಸ್ವರ (6) - ಒಂದು ಮಾತ್ರಾಕಾಲದಲ್ಲಿ ಉಚ್ಚರಿಸುವ ಅಕ್ಷರಗಳನ್ನು ಹ್ರಸ್ವ ಸ್ವರಗಳು ಎನ್ನುತ್ತೇವೆ.
ಉದಾ : ಅ, ಇ, ಉ, ಋ, ಎ, ಒ.
ದೀರ್ಘಸ್ವರ (7) - ಎರಡು ಮಾತ್ರಾಕಾಲದಲ್ಲಿ ಉಚ್ಚರಿಸುವ ಅಕ್ಷರಗಳನ್ನು ದೀರ್ಘ ಸ್ವರಗಳು ಎನ್ನುತ್ತೇವೆ.
ಉದಾ : ಆ, ಈ, ಊ, ಏ, ಐ, ಓ, ಔ.
2. ಯೋಗವಾಹಗಳು : (2)
ಸ್ವರಗಳ ಸಂಬಂಧ ಪಡೆದು ಉಚ್ಚರಿಸಲ್ಪಡುವ ಅಕ್ಷರಗಳು. ಇವು ಕನ್ನಡದಲ್ಲಿ ಎರಡು ಇವೆ.
ಉದಾ : ಂ (ಅನುಸ್ವಾರ) ಃ (ವಿಸರ್ಗ)
3. ವ್ಯಂಜನಗಳು : (34)
ಸ್ವರಗಳ ಸಹಾಯದಿಂದ ಉಚ್ಚರಿಸುವ ಅಕ್ಷರಗಳೇ ವ್ಯಂಜನಗಳು. ಇವುಗಳಲ್ಲಿ ಎರಡು ಪ್ರಕಾರಗಳಿವೆ. ಅವುಗಳೆಂದರೆ,
1. ವರ್ಗೀಯ ವ್ಯಂಜನಗಳು (25)
2. ಅವರ್ಗೀಯ ವ್ಯಂಜನಗಳು (9)
ವರ್ಗೀಯ ವ್ಯಂಜನಗಳಲ್ಲಿ ಮೂರು ವಿಭಾಗಗಳಿವೆ :
1) ಅಲ್ಪಪ್ರಾಣ ಅಕ್ಷರಗಳು : ಕಡಿಮೆ ಉಸಿರಿನಿಂದ ಉಚ್ಚರಿಸುವ ಅಕ್ಷರಗಳು ಕ್, ಚ್, ಟ್, ತ್, ಪ್ ಹಾಗೂ ಗ್, ಜ್, ಡ್, ದ್, ಬ್
(ಪ್ರತಿ ವರ್ಗದಲ್ಲಿ ಒಂದು ಮತ್ತು ಮೂರನೆಯ ಅಕ್ಷರಗಳು) = 10
2) ಮಹಾಪ್ರಾಣ ಅಕ್ಷರಗಳು : ಹೆಚ್ಚು ಉಸಿರಿನಿಂದ ಉಚ್ಚರಿಸುವ ಅಕ್ಷರಗಳು ಖ್, ಛ್, ಠ್, ಥ್, ಫ್ ಹಾಗೂ ಘ್, ಝ್, ಢ್, ಧ್, ಭ್
(ಪ್ರತಿ ವರ್ಗದಲ್ಲಿ ಎರಡು ಮತ್ತು ನಾಲ್ಕನೆಯ ಅಕ್ಷರಗಳು) = 10
3) ಅನುನಾಸಿಕ ಅಕ್ಷರಗಳು : ಮೂಗಿನ ಸಹಾಯದಿಂದ ಉಚ್ಚರಿಸುವ ಅಕ್ಷರಗಳು ಙ, ಞ, ಣ, ನ, ಮ
(ಪ್ರತಿ ವರ್ಗದ ಐದನೆಯ ಅಕ್ಷರಗಳು) = 05
ಅವರ್ಗೀಯ ವ್ಯಂಜನಗಳು : ಒಂದು ನಿರ್ದಿಷ್ಠ ವರ್ಗಕ್ಕೆ ಸೇರಿಸಲು ಸಾಧ್ಯವಾಗದ ವ್ಯಂಜನಗಳೇ ಅವರ್ಗೀಯ ವ್ಯಂಜನಗಳು. ಯ್, ರ್, ಲ್, ವ್, ಶ್, ಷ್, ಸ್, ಹ್, ಳ್ = 09
0 Comments