I. ಖಾಲಿ ಬಿಟ್ಟ ಸ್ಥಳವನ್ನು ತುಂಬಿರಿ.
1. ರಾಷ್ಟ್ರೀಯ ದೈಹಿಕ ಶಿಕ್ಷಣ ಮಹಾವಿದ್ಯಾಲಯವನ್ನು ಡಾ.ಪಿ.ಎಂ.ಜೋಸೆಫ್ ರವರ ನೇತೃತ್ವದಲ್ಲಿ ಸ್ಥಾಪಿಸಲಾಯಿತು.
2. ದೈಹಿಕ ಶಿಕ್ಷಣವು ಕಲಿಕಾ ಪ್ರಕ್ರಿಯೆಯ ಅವಿಭಾಜ್ಯ ಅಂಗವೆಂದು ಶ್ರೀ ಕೆ.ಪಿ. ಸಿಂಗ್ ದೇವ್ ಸಮಿತಿಯು ಸಿಫಾರಸ್ಸು ಮಾಡಿತು.
3. ಡಾ|| ರಾಧಾಕೃಷ್ಣನ್ ಆಯೋಗವನ್ನು 1948 ರಲ್ಲಿ ನೇಮಿಸಲಾಯಿತು
4. ರಾಷ್ಟ್ರೀಯ ಕ್ರೀಡಾ ಸಂಸ್ಥೆ (NIS)ಪಟಿಯಾಲ ಎಂಬಲ್ಲಿ ಪ್ರಾರಂಭಿಸಲಾಯಿತು.
II. ಬಿಟ್ಟಿರುವ ಸ್ಥಳಗಳಲ್ಲಿ ಸೂಕ್ತ ಉತ್ತರವನ್ನು ಆಯ್ಕೆ ಮಾಡಿ ಬರೆಯಿರಿ.
1. ಸ್ವಾತಂತ್ರ್ಯ ಪೂರ್ವದಲ್ಲಿ ಲಾರ್ಡ್ ಮೆಕಾಲೆ ರವರ ಶೈಕ್ಷಣಿಕ ಧೋರಣೆಯ ಪರಿಣಾಮವಾಗಿ ಮಿಷಿನರಿ ಶಾಲೆಗಳು ಪ್ರಾರಂಭವಾದವು.
2. ದೈಹಿಕ ಶಿಕ್ಷಣ ಕಾರ್ಯಕ್ರಮದಲ್ಲಿ ಯೋಗಾಸನ ಮತ್ತು ಪ್ರಾಣಾಯಾಮವನ್ನು ಸಮನ್ವಯಗೊಳಿಸಲು ಪ್ರಸ್ತಾಪಿಸಿದ್ದು ಡಾ|| ದೇಶ್ಮುಖ್ ಸಮಿತಿ.
3. ಕ್ರೀಡಾ ಕೋಚಿಂಗ್ ಯೋಜನೆಯನ್ನು ಶ್ರೀಮತಿ ರಾಜಕುಮಾರಿ ಅಮೃತ್ಕೌರ ರ ಹೆಸರಿನಲ್ಲಿ ಶಿಫಾರಸ್ಸು ಮಾಡಲಾಯಿತು.
4. ಶ್ರೀ ಕೆ.ಪಿ.ಸಿಂಗ್ ದೇವ್ ಸಮಿತಿಯ ಶಿಫಾರಸ್ಸುಗಳನ್ನು ಕರ್ನಾಟಕದಲ್ಲಿ ಅನುಷ್ಠನಕ್ಕೆ ತರಲು ಶ್ರೀ ಬಿ.ಟಿ.ಪೆಮ್ಮಯ್ಯ ರವರ ನೇತೃತ್ವದಲ್ಲಿ ಸಮಿತಿಯನ್ನು ನೇಮಿಸಲಾಯಿತು.
III. 'ಎ' ಪಟ್ಟಿಯಲ್ಲಿನ ಇಸವಿಗಳೊಂದಿಗೆ 'ಬಿ' ಪಟ್ಟಿಯಲ್ಲಿನ ಸಮಿತಿಗಳನ್ನು ಹೊಂದಿಸಿ ಬರೆಯಿರಿ.
IV. ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
1. 1948 ರಲ್ಲಿ ದೈಹಿಕ ಶಿಕ್ಷಣವನ್ನು ಅಭಿವೃದ್ದಿಪಡಿಸಲು ಕೇಂದ್ರ ಸರ್ಕಾರ ನೇಮಿಸಿದ ಸಮಿತಿಗಳಾವುವು ? ಸಮಿತಿಯ ಶಿಫಾರಸ್ಸುಗಳನ್ನು ತಿಳಿಸಿ.
ಉತ್ತರ :- 1948 ರಲ್ಲಿ ದೈಹಿಕ ಶಿಕ್ಷಣವನ್ನು ಅಭಿವೃದ್ದಿಪಡಿಸಲು ಕೇಂದ್ರ ಸರ್ಕಾರ ನೇಮಿಸಿದ ಸಮಿತಿಗಳೆಂದರೆ :-
ತಾರಾಚಂದ್ ಸಮಿತಿ ಮತ್ತು ಡಾ. ರಾಧಾಕೃಷ್ಣನ್ ಆಯೋಗ
ತಾರಾಚಂದ್ ಸಮಿತಿಯ ಶಿಫಾರಸ್ಸುಗಳು :-
1 .ದೈಹಿಕ ಶಿಕ್ಷಣದಲ್ಲಿ ಪದವಿ ನೀಡಲು ಕೇಂದ್ರೀಯ ಕಾಲೇಜನ್ನು ಸ್ಥಾಪಿಸುವುದು.
2. ದೈಹಿಕ ಶಿಕ್ಷಣ ಶಿಕ್ಷಕರ ತರಬೇತಿಯ ಕಾಲೇಜನ್ನು ಸ್ಥಾಪಿಸುವುದು.
3. ಕ್ರೀಡಾ ತರಬೇತಿ ಮತ್ತು ಮನೋಲ್ಲಾಸಕ್ಕೆ ಬೇಕಾದ ಸಾಹಿತ್ಯ ಪ್ರಕಟಿಸುವುದು.
4. ದೈಹಿಕ ಶಿಕ್ಷಣದಲ್ಲಿ ಪರೀಕ್ಷೆಗಳನ್ನು ನಡೆಸುವುದು.
5. ಮೌಲ್ಯಮಾಪಣ ನಡೆಸುವುದು.
6. ತರಬೇತಿ, ಹಾಗೂ ಮದ್ರಾಸು, ಮುಂಬಯಿ, ಪಶ್ಚಿಮ ಬಂಗಾಳದ ಮಾದರಿಯಲ್ಲಿ ಮೇಲ್ವಿಚಾರಣಾ ವ್ಯವಸ್ಥೆ ಮಾಡುವುದು
7. ಅಖಾಡಾ, ವ್ಯಾಯಾಮ ಶಾಲೆ ಕ್ರೀಡಾ ಕ್ಲಬ್ಗಳನ್ನು ಸ್ಥಾಪಿಸುವುದು ಸೇರಿದಂತೆ ಮೊದಲಾದ
8. ಶಿಫಾರಸ್ಸುಗಳನ್ನು ಮಾಡಿತು.
ಡಾ.ರಾಧಾಕೃಷ್ಣನ್ ಆಯೋಗದ ಶಿಫಾರಸ್ಸು :-
1.ತಾರಾಚಂದ್ ಸಮಿತಿಯ ಶಿಫಾರಸ್ಸುಗಳಿಗೆ ಅನುಮೋದನೆ ನೀಡಿತು ಮತ್ತು ಕಾಲೇಜುಗಳಲ್ಲಿ ಕನಿಷ್ಠ ಎರಡು ವರ್ಷಗಳ ಕಡ್ಡಾಯ ದೈಹಿಕ ಶಿಕ್ಷಣವಿರಬೇಕೆಂದು ಶಿಫಾರಸ್ಸು ಮಾಡಿತು.
2. ನಿರಾಶ್ರಿತರ ಸಮಸ್ಯೆಯಿಂದ ಉದ್ಭವವಾದ ಅಶಿಸ್ತು ಮತ್ತು ಸಂಸ್ಕೃತಿಯ ಅಭಾವವನ್ನು ನೀಗಿಸಲು ಕೈಗೊಂಡ ಕಾರ್ಯಕ್ರಮಗಳನ್ನು ಹೆಸರಿಸಿ.
ಉತ್ತರ :- ಸ್ವಾತಂತ್ರ್ಯ ನಂತರ ದೇಶದಲ್ಲಿ ನಿರಾಶ್ರಿತರ ಸಮಸ್ಯೆಯಿಂದ ಉದ್ಭವವಾದ ಅಶಿಸ್ತು ಮತ್ತು ಸಂಸ್ಕೃತಿಯ
ಅಭಾವವನ್ನು ನೀಗಿಸಲು ನಿವೃತ್ತ ಮೇಜರ್ ಜನರಲ್ ಜಿ.ಕೆ.ಭೋಸಲೆಯವರು ಡ್ರಿಲ್ ಮತ್ತು ಮಾರ್ಚಿಂಗ್, ಸ್ವಾಭಿನಯ ಗೀತೆ, ಕೆಲವು ಆಟೋಟಗಳನ್ನೊಳಗೊಂಡ ಕಾರ್ಯಕ್ರಮವನ್ನು ಜಾರಿಗೆ ತಂದರು.
3. ಯಾವ ಚಟುವಟಿಕೆಗಳು ಸೇರ್ಪಡೆಗೊಂಡ ಪರಿಣಾಮವಾಗಿ ಶಾಲಾ ದೈಹಿಕ ಶಿಕ್ಷಣ ಪಠ್ಯಕ್ರಮದಲ್ಲಿ ಗೊಂದಲಮಯ ಪರಿಸ್ಥಿತಿಗಳುಂಟಾದವು ? ಈ ಗೊಂದಲ ನಿವಾರಿಸಲು ಕೈಗೊಂಡ ಕ್ರಮಗಳೇನು ?
ಉತ್ತರ :- 1957 ರಲ್ಲಿ ಮುಂತಾದ ಚಟುವಟಿಕೆಗಳೆಲ್ಲ ಸೇರ್ಪಡೆಗೊಂಡ ಪರಿಣಾಮವಾಗಿ ಶಾಲೆಯ ದೈಹಿಕ ಶಿಕ್ಷಣ ಪಠ್ಯಕ್ರಮದಲ್ಲಿ ಗೊಂದಲಮಯ ಪರಿಸ್ಥಿತಿ ಉಂಟಾಗಿದ್ದಿತು. ಈ ಗೊಂದಲವನ್ನು ಸರಿಪಡಿಸಲು 1959 ರಲ್ಲಿ ಶ್ರೀ ಹೃದಯನಾಥ ಕುಂಝ್ರು ಸಮಿತಿಯನ್ನು ನೇಮಿಸಲಾಯಿತು. ಈಸಮಿತಿಯು 1963 ರಲ್ಲಿ ವರದಿಯನ್ನು ಸಲ್ಲಿಸಿತು. ಈ ಸಮಿತಿಯ ಶಿಫಾರಸ್ಸಿನ ಮೇರೆಗೆ ಪಠ್ಯಕ್ರಮವನ್ನು ಪುನ: ರೂಪಿಸಲಾಯಿತು. ಈ ಪಠ್ಯಕ್ರಮವನ್ನು ಓಈಅ ಎನ್ನಲಾಯಿತು. ಮತ್ತು ಎನ್.ಡಿ.ಎಸ್ ನಂತೆ ದೇಶದ ಎಲ್ಲಾ ಶಾಲೆಗಳಲ್ಲಿ 1965- 66 ರಿಂದ ಕಡ್ಡಾಯವಾಯಿತು.
0 Comments