ಅನ್ವೇಷಣೆ
- ಜಿ.ಎಸ್. ಶಿವರುದ್ರಪ್ಪ
? ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರು 1926 ರಲ್ಲಿ ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲ್ಲೂಕಿನ ಈಸೂರು ಎಂಬ ಗ್ರಾಮದಲ್ಲಿ ಜನಿಸಿದರು.
? ಇವರು ಸೌಂದರ್ಯ ಸಮೀಕ್ಷೆ, ದೀಪದ ಹೆಜ್ಜೆ, ಸಾಮಗಾನ, ಕಾರ್ತೀಕ, ಅನಾವರಣ, ಚೆಲುವು-ಒಲವು, ಗೋಡೆ, ತೆರೆದದಾರಿ, ಮಾಸ್ಕೋದಲ್ಲಿ ಇಪ್ಪತ್ತೆರಡು ದಿನಗಳು, ಕಾವ್ಯಾರ್ಥ ಚಿಂತನ -ಇನ್ನು ಮುಂತಾದ ಕೃತಿಗಳನ್ನು ಬರೆದಿದ್ದಾರೆ.
? ಶ್ರೀಯುತರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಹಾಗೂ ರಾಷ್ಟ್ರಕವಿ ಪ್ರಶಸ್ತಿಗಳು ಲಭಿಸಿದೆ.
? ಪ್ರಸ್ತುತ ಅನ್ವೇಷಣೆ? ಪ್ರಸ್ತುತ ಅನ್ವೇಷಣೆ ಕವಿತೆಯನ್ನು ಅವರ ಗೋಡೆ ಕವನ ಸಂಕಲನದಿಂದ ಆಯ್ಕೆಮಾಡಲಾಗಿದೆ.
1. ಪದಗಳ ಅರ್ಥ ತಿಳಿಯಿರಿ :
ಅನ್ವೇಷಣೆ- ಹುಡುಕು; ಶೋಧಿಸು.
ಅಹಂ - ಗರ್ವ; ಪ್ರತಿಷ್ಠೆ.
ಕಲಕು - ಕದಡು
ಕೋಟೆ - ಕಲ್ಲಿನ ರಕ್ಷಣಾ ಗೋಡೆ.
ಗುರುತಿಸು - ಗೊತ್ತು ಹಚ್ಚು
ನಂದನ - ಉದ್ಯಾನವನ
ಬಂಧನ - ಸೆರೆ; ಕಟ್ಟು.
ಹೆಮ್ಮೆ - ಅಭಿಮಾನ; ಹಿರಿಮೆ; ಸಂತೋಷ.
? ಇವರು ಸೌಂದರ್ಯ ಸಮೀಕ್ಷೆ, ದೀಪದ ಹೆಜ್ಜೆ, ಸಾಮಗಾನ, ಕಾರ್ತೀಕ, ಅನಾವರಣ, ಚೆಲುವು-ಒಲವು, ಗೋಡೆ, ತೆರೆದದಾರಿ, ಮಾಸ್ಕೋದಲ್ಲಿ ಇಪ್ಪತ್ತೆರಡು ದಿನಗಳು, ಕಾವ್ಯಾರ್ಥ ಚಿಂತನ -ಇನ್ನು ಮುಂತಾದ ಕೃತಿಗಳನ್ನು ಬರೆದಿದ್ದಾರೆ.
? ಶ್ರೀಯುತರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಹಾಗೂ ರಾಷ್ಟ್ರಕವಿ ಪ್ರಶಸ್ತಿಗಳು ಲಭಿಸಿದೆ.
? ಪ್ರಸ್ತುತ ಅನ್ವೇಷಣೆ? ಪ್ರಸ್ತುತ ಅನ್ವೇಷಣೆ ಕವಿತೆಯನ್ನು ಅವರ ಗೋಡೆ ಕವನ ಸಂಕಲನದಿಂದ ಆಯ್ಕೆಮಾಡಲಾಗಿದೆ.
ಅಭ್ಯಾಸ
1. ಪದಗಳ ಅರ್ಥ ತಿಳಿಯಿರಿ :
ಅನ್ವೇಷಣೆ- ಹುಡುಕು; ಶೋಧಿಸು.
ಅಹಂ - ಗರ್ವ; ಪ್ರತಿಷ್ಠೆ.
ಕಲಕು - ಕದಡು
ಕೋಟೆ - ಕಲ್ಲಿನ ರಕ್ಷಣಾ ಗೋಡೆ.
ಗುರುತಿಸು - ಗೊತ್ತು ಹಚ್ಚು
ನಂದನ - ಉದ್ಯಾನವನ
ಬಂಧನ - ಸೆರೆ; ಕಟ್ಟು.
ಹೆಮ್ಮೆ - ಅಭಿಮಾನ; ಹಿರಿಮೆ; ಸಂತೋಷ.
ಪ್ರಶ್ನೆಗಳು :
ಅ) ಕೆಳಗೆ ನೀಡಿರುವ ಪದ್ಯದ ಸಾಲುಗಳನ್ನು ಪೂರ್ಣಗೊಳಿಸಿರಿ.
1. ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ
2. ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿಯಿದೆ ನಾಲಗೆಗೆ
3. ಹತ್ತಿರವಿದ್ದೂ ದೂರ ನಿಲ್ಲುವೆವು
4. ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲಿ.
ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
1. ಕವಿ ಜಿ.ಎಸ್. ಶಿವರುದ್ರಪ್ಪನವರು ಮೊದಲು ದೇವರನ್ನು ಎಲ್ಲಿ ಹುಡುಕಿ ವಿಫಲರಾದರು?
ಕವಿ ಜಿ.ಎಸ್. ಶಿವರುದ್ರಪ್ಪನವರು ಮೊದಲು ದೇವರನ್ನು ಕಲ್ಲು ಮಣ್ಣುಗಳ ಗುಡಿಯೊಳಗೆ ಹುಡುಕಿ ವಿಫಲರಾದರು.
2.ಕವಿ ಜಿ.ಎಸ್.ಎಸ್. ಅವರು ನಿಜವಾದ ದೇವರನ್ನು ಕಂಡದ್ದು ಎಲ್ಲಿ?ಯಾವ ರೂಪದಲ್ಲಿ?
ಕವಿ ಜಿ.ಎಸ್.ಎಸ್. ಅವರು ನಿಜವಾದ ದೇವರನ್ನು ನಮ್ಮೊಳಗೆ ಕಂಡರು. ಪ್ರೀತಿ ಸ್ನೇಹಗಳ ರೂಪದಲ್ಲಿ ಕಂಡರು.
3.ನಂದನ ಮತ್ತು ಬಂಧನ ಎಂದರೇನು?
ಅವು ಎಲ್ಲಿವೆ? ನಂದನ ಎಂದರೆ ಉದ್ಯಾನವನ, ಬಂಧನ ಎಂದರೆ ಸೆರೆ. ಅವು ನಮ್ಮೊಳಗೆ ಇವೆ.
4. ಅಮೃತದ ಸವಿ ನಾಲಗೆಗೆ ಯಾವಾಗ ಸಿಗುತ್ತದೆ?
ಅಮೃತದ ಸವಿ ನಾಲಗೆಗೆ ತಿಳಿಯನು ಕಲಕದೆ ಇದ್ದರೆ ಸಿಗುತ್ತದೆ.
5.ಮಾನವನಲ್ಲಿ ಅಹಂ ತುಂಬಿದಾಗ ಹೇಗೆ ವರ್ತಿಸುತ್ತಾನೆ?
ಮಾನವನಲ್ಲಿ ಅಹಂ ತುಂಬಿದಾಗ ಹತ್ತಿರವಿದ್ದರೂ ದೂರ ನಿಲ್ಲುವವನಂತೆ ವರ್ತಿಸುತ್ತಾನೆ.
6. ನಾಲ್ಕು ದಿನದ ಬದುಕಿನಲ್ಲಿ ಯಾವುದು ಕಷ್ಟವಾಗಿದೆ?
ನಾಲ್ಕು ದಿನದ ಬದುಕಿನಲ್ಲಿ ಹೊಂದಾಣಿಕೆ ಎಂಬುದು ಕಷ್ಟವಾಗಿದೆ.
ಇ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.
1. ಕವಿ ಜಿ.ಎಸ್.ಎಸ್. ಅವರು ದೇವರನ್ನು ಅನ್ವೇಷಿಸಿದ ಬಗೆ ಹೇಗೆ?
ಕವಿ ಜಿ.ಎಸ್.ಶಿವರುದ್ರಪ್ಪನವರು ದೇವರನ್ನು ಮೊದಲು ಮಾನವರು ನಿರ್ಮಿಸಿರುವ ಗುಡಿ-ಗೋಪುರಗಳಲ್ಲಿ ಅನ್ವೇಷಿಸಿದರು. ಅಲ್ಲಿ ದೇವರು ಸಿಗದೆ ವ್ಯರ್ಥ ಸಮಯ ಹಾಳಾಯಿತು. ಆದರೆ ಆ ದೇವರು ನಮ್ಮ ಸುತ್ತಲಿನ ನಮ್ಮೊಳಗಿನ ಮನುಷ್ಯರ ಮನುಷ್ಯತ್ವದಲ್ಲಿದೆ. ಅವರ ಪ್ರೀತಿ ಸ್ನೇಹಗಳ ರೂಪದಲ್ಲಿ ಅದನ್ನು ನಾವು ಕಾಣಬಹುದಾಗಿದೆ ಎಂಬ ಬಗೆಯನ್ನು ಕವಿ ಆನಂತರ ಅರಿತುಕೊಂಡರು.
2. ಕವಿ ಹೇಳುವಂತೆ ಬದುಕಿನಲ್ಲಿ ಯಾವುದು ಕಷ್ಟ? ಅದನ್ನು ಪಡೆಯುವುದು ಹೇಗೆ?
ಕವಿ ಹೇಳುವಂತೆ ಬದುಕಿನಲ್ಲಿ ಎಲ್ಲೋ ಇರುವ ದೇವರನ್ನು ಹುಡುಕುವುದು, ಎಲ್ಲೋ ಇರುವ ನಂದನವನವನ್ನು ಹುಡುಕುವುದು, ಅಮೃತದ ಸವಿಗಾಗಿ ಹಾತೊರೆಯುವುದು, ಹೊಂದಾಣಿಕೆಗಾಗಿ ಪರಿತಪಿಸುವುದು ಕಷ್ಟಕರವಾಗಿದೆ. ಇವುಗಳನ್ನು ಪಡೆಯಲು ಪ್ರೀತಿ ಸ್ನೇಹಗಳ ಗುರುತಿಸಬೇಕು. ಒಳಗಿನ ತಿಳಿಯನು ಅರಿಯಬೇಕು. ನಾಲ್ಕು ದಿನದ ಬದುಕಿನಲ್ಲಿ ಹೊಂದಾಣಿಕೆಯೊಂದಿಗೆ ಎಲ್ಲವೂ ನಮ್ಮೊಳಗೆ ಇದೆ ಎಂದು ಭಾವಿಸಿದಾಗ ಎಲ್ಲವೂ ಪಡೆಯಬಹುದಾಗಿದೆ ಎಂದು ಕವಿ ಹೇಳಿದ್ದಾರೆ.
ಈ) ಸಂದರ್ಭದೊಡನೆ ವಿವರಿಸಿರಿ.
1. ಪ್ರೀತಿ ಸ್ನೇಹಗಳ ಗುರುತಿಸದಾದೆವು ನಮ್ಮೊಳಗೆ
ಈ ವಾಕ್ಯವನ್ನು ಜಿ.ಎಸ್. ಶಿವರುದ್ರಪ್ಪ ಅವರು ಬರೆದಿರುವ ಗೋಡೆ ಎಂಬ ಕೃತಿಯಿಂದ ಆಯ್ದ ಅನ್ವೇಷಣೆ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ಕವಿ ಹೇಳಿದ್ದಾರೆ. ಎಲ್ಲೋ ಇರುವ ದೇವರ ಹುಡುಕಲು ಗುಡಿಗೋಪುರಗಳನ್ನು ಅರಸುವ ಬದಲು ನಮ್ಮ ಸುತ್ತಲಿರುವ ಪ್ರೀತಿ, ಸ್ನೇಹಗಳ ಗುರುತಿಸಿ ಎಂದು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.
2.ಅಮೃತದ ಸವಿಯಿದೆ ನಾಲಗೆಗೆ
ಈ ವಾಕ್ಯವನ್ನು ಜಿ.ಎಸ್. ಶಿವರುದ್ರಪ್ಪ ಅವರು ಬರೆದಿರುವ ಗೋಡೆ ಎಂಬ ಕೃತಿಯಿಂದ ಆಯ್ದ ಅನ್ವೇಷಣೆ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ಕವಿ ಹೇಳಿದ್ದಾರೆ. ನಾವು ನಮ್ಮೊಳಗಿನ ಅಂತರಾಳವನ್ನು ಕಲಕಿ ರಾಡಿ ಮಾಡದೆ ಇದ್ದರೆ ಅಮೃತದ ಸವಿ ನಾಲಗೆಗೆ ಸಿಗುತ್ತದೆ ಎಂದು ಕವಿ ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.
3.ಹತ್ತಿರವಿದ್ದೂ ದೂರ ನಿಲ್ಲುವೆವು
ಈ ವಾಕ್ಯವನ್ನು ಜಿ.ಎಸ್. ಶಿವರುದ್ರಪ್ಪ ಅವರು ಬರೆದಿರುವ ಗೋಡೆ ಎಂಬ ಕೃತಿಯಿಂದ ಆಯ್ದ ಅನ್ವೇಷಣೆ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ಕವಿ ಹೇಳಿದ್ದಾರೆ. ಮನುಷ್ಯರು ನಮ್ಮ ನಡುವಿನ ಅಡ್ಡಗೋಡೆಯಂತೆ ಅಹಂಕಾರವನ್ನು ಬೆಳೆಸಿಕೊಂಡಿದ್ದಾರೆ. ಈ ಅಹಂಕಾರದಿಂದ ಹತ್ತರವಿದ್ದೂ ದೂರ ನಿಲ್ಲುವೆವು ನಾವುಗಳು, ಎಂದು ತಿಳಿಸುವ ಸಮಯದಲ್ಲಿ ಈ ಮೇಲಿನ ಮಾತು ಬಂದಿದೆ.
ಉ) ಬಿಟ್ಟ ಸ್ಥಳಗಳನ್ನು ನೀಡಿರುವ ನಾಲ್ಕು ಆಯ್ಕೆಯ ಉತ್ತರಗಳಿಂದ ಸರಿಯಾದುದನ್ನು ಆಯ್ದು ಬರೆಯಿರಿ.
1. ಕವಿ ಜಿ.ಎಸ್.ಎಸ್. ಅವರು ದೇವರನ್ನು ______________ ರೂಪದಲ್ಲಿ ಕಂಡರು.
ಅ) ಗುಡಿ ಆ) ಕಲ್ಲು ಮಣ್ಣು ಇ) ಪ್ರೀತಿ ಸ್ನೇಹ ಈ) ಕೋಟೆ
2. ಬದುಕಿನಲ್ಲಿ ____________ ಎಂಬುದು ಕಷ್ಟ ಎಂದು ಕವಿ ಹೇಳುತ್ತಾರೆ.
ಅ) ಹೊಂದಾಣಿಕೆ ಆ) ಅಹಂ ಇ) ಹಿರಿಮೆ ಈ) ಮೋಹ
ಅ) ಹೊಂದಾಣಿಕೆ ಆ) ಅಹಂ ಇ) ಹಿರಿಮೆ ಈ) ಮೋಹ
3. ನಮ್ಮೊಳಗಿನ ತಿಳಿಯನು ಕಲಕದೆ ಇದ್ದರೆ ನಾಲಗೆಗೆ __________ ಇದೆ.
ಅ) ಹುಳಿ ಆ) ವಿಷ ಇ) ಒಗರು ಈ) ಅಮೃತ
ಅ) ಹುಳಿ ಆ) ವಿಷ ಇ) ಒಗರು ಈ) ಅಮೃತ
4. ಅಹಂ ಇರುವ ವ್ಯಕ್ತಿ ಜನರಿಗೆ ___________ ಆಗುತ್ತಾನೆ.
ಅ) ಉಪಕಾರಿ ಆ) ಹತ್ತಿರ ಇ) ದೂರ ಈ) ಒಳ್ಳೆಯವನು
ಅ) ಉಪಕಾರಿ ಆ) ಹತ್ತಿರ ಇ) ದೂರ ಈ) ಒಳ್ಳೆಯವನು
ಭಾಷಾಭ್ಯಾಸ :
ಅ) ಕೆಳಗಿನ ಪದಗಳಿಗೆ ಸಮಾನಾರ್ಥಕಗಳನ್ನು ಬರೆಯಿರಿ.
ಗುಡಿ - ದೇವಸ್ಥಾನ,
ಹತ್ತಿರ - ಸನಿಹ,
ಬಂಧನ- ಸೆರೆ,
ಸ್ನೇಹ - ಗೆಳೆತನ.
ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಬರೆಯಿರಿ.
ಪ್ರೀತಿ - ದ್ವೇಷ,
ದೂರ - ಹತ್ತಿರ,
ಅಮೃತ - ವಿಷ,
ಸಿಹಿ - ಕಹಿ,
ಕಷ್ಟ - ಸುಖ,
ಬಂಧನ - ಬಿಡುಗಡೆ.
ಇ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ.
1. ದೇವರು : ನಾವು ಪ್ರತಿದಿನ ದೇವರನ್ನು ಪೂಜಿಸುತ್ತೇವೆ.
2. ಪ್ರೀತಿಸ್ನೇಹ : ನಾವು ನಮ್ಮ ಮನೆಯಲ್ಲಿ ಪ್ರೀತಿಸ್ನೇಹದಿಂದ ಇದ್ದೇವೆ.
3. ಬಂಧನ : ನಿರಪರಾಧಿಗಳು ಬಂಧನದಿಂದ ಬಿಡುಗಡೆ ಹೊಂದಿದರು.
4. ಅಮೃತ : ಹಾಲು ಅಮೃತಕ್ಕೆ ಸಮಾನ.
5. ಹೊಂದಿಕೆ : ಶಾಲಾ ಮಕ್ಕಳಲ್ಲಿ ಹೊಂದಿಕೆ ಇರಬೇಕು.
6. ಅಹಂ : ಮನುಷ್ಯ ತನ್ನಲ್ಲಿರುವ ಅಹಂ ಅನ್ನು ಬಿಡಬೇಕು.
ಈ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.
ಹತ್ತಿರವಿದ್ದು = ಹತ್ತಿರ + ಇದ್ದು,
ಗುಡಿಯೊಳಗೆ = ಗುಡಿ + ಒಳಗೆ,
ಸವಿಯಿದೆ = ಸವಿ + ಇದೆ,
ನಮ್ಮೊಳಗೆ = ನಮ್ಮ + ಒಳಗೆ.
ಉ) ಸುಳಿವು ಪದಗಳನ್ನು ಬಳಸಿ ಜೋಡಿ ಪದಗಳನ್ನು ಬರೆಯಿರಿ.
ಉದಾ : ಕಲ್ಲು - ಮಣ್ಣು,
ಪ್ರೀತಿ - ಸ್ನೇಹ
ಹೊಲ - ಗದ್ದೆ
ಹೂವು - ಹಣ್ಣು
ಗಿಡ - ಮರ
ಕಳ್ಳ - ಸುಳ್ಳ
ಗುಡ್ಡ - ಬೆಟ್ಟ
ಮಳೆ - ಬೆಳೆ
ಎಡ - ಬಲ
ರೀತಿ - ನೀತಿ
0 Comments