ಸರ್ ಎಂ. ವಿಶ್ವೇಶ್ವರಯ್ಯ
● ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ :
1.ವಿಶ್ವೇಶ್ವರಯ್ಯನವರು ಯಾವಾಗ ಜನಿಸಿದರು?
ಉತ್ತರ:- ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು 1860 ರ ಸೆಪ್ಟೆಂಬರ್ ತಿಂಗಳ 15 ರಂದು ಜನಿಸಿದರು.
2. ವಿಶ್ವೇಶ್ವರಯ್ಯನವರ ಜನ್ಮಸ್ಥಳ ಯಾವುದು?
ಉತ್ತರ:- ವಿಶ್ವೇಶ್ವರಯ್ಯನವರ ಜನ್ಮಸ್ಥಳ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಗ್ರಾಮ,
3. ವಿಶ್ವೇಶ್ವರಯ್ಯನವರ ತಂದೆ-ತಾಯಿಯ ಹೆಸರೇನು?
ಉತ್ತರ:- ವಿಶ್ವೇಶ್ವರಯ್ಯನವರ ತಂದೆ ಶ್ರೀನಿವಾಸ ಶಾಸ್ತ್ರಿ, ತಾಯಿ ವೆಂಕಟಲಕ್ಷ್ಮಮ್ಮ..
4. ವಿಶ್ವೇಶ್ವರಯ್ಯನವರ ಗುರುಭಕ್ತಿಯನ್ನು ಮೆಚ್ಚುತ್ತಿದ್ದ ಗುರುಗಳು ಯಾರು?
ಉತ್ತರ:- ವಿಶ್ವೇಶ್ವರಯ್ಯನವರ ಗುರುಭಕ್ತಿಯನ್ನು ಮೆಚ್ಚುತ್ತಿದ್ದ ಗುರುಗಳು ಕೃಷ್ಣ ರಾಘವೇಂದ್ರರಾಯರು,
5. ಭಾರತ ಸರ್ಕಾರ ವಿಶ್ವೇಶ್ವರಯ್ಯನವರಿಗೆ ಕೊಡಮಾಡಿದ ಅತ್ಯುನ್ನತ ಪ್ರಶಸ್ತಿ ಯಾವುದು?
ಉತ್ತರ:- ಭಾರತ ಸರ್ಕಾರ ವಿಶ್ವೇಶ್ವರಯ್ಯನವರಿಗೆ ಕೊಡಮಾಡಿದ ಅತ್ಯುನ್ನತ ಪ್ರಶಸ್ತಿ 'ಭಾರತ ರತ್ನ'
6. ವಿಶ್ವೇಶ್ವರಯ್ಯನವರ ವ್ಯಕ್ತಿತ್ವದ ವಿಶೇಷತೆಗಳೇನು?
ಉತ್ತರ:- ವಿಶ್ವೇಶ್ವರಯ್ಯನವರು ಹುಟ್ಟಿನಿಂದ ಬಡವರು, ಮನೆತನದಿಂದ ಸಭ್ಯರು, ಬೆಳವಣಿಗೆಯಿಂದ ಸಂಯಮಿ, ಸ್ವಭಾವದಿಂದ ಸಜ್ಜನರು, ಅಜಾತಶತ್ರು, ಪರೋಪಕಾರಿ, ವೃತ್ತಿಯಿಂದ ಎಂಜಿನಿಯರ್, ಸಂದರ್ಭದಿಂದ ದಿವಾನ್, ಮನೋಧರ್ಮದಿಂದ ವಿಜ್ಞಾನಿ, ಶ್ರದ್ಧೆಯಿಂದ ಉದ್ಯಮಿ, ಅವರು ಕೈಗೊಂಡಿದ್ದುದು ಕಠೋರ ವ್ರತ. ಅದನ್ನು ತಪ್ಪದೆ ನಡೆಸುವ ಧೈರ್ಯ, ಧೈರ್ಯ, ಸಾಮರ್ಥ್ಯ ಅವರಲ್ಲಿದ್ದುವು.
7. 1860 ರಲ್ಲಿ ಜನಿಸಿದ ಮಹಾಪುರುಷರನ್ನು ಪಟ್ಟಿಮಾಡಿ:
ಉತ್ತರ:- 1860ನೇ ವರ್ಷದಲ್ಲಿ ಭಾರತದ ಮಹಾಪುರುಷರಾದ ಜವಾಹರಲಾಲರ ತಂದೆ ಮೋತಿಲಾಲ್ ನೆಹರೂ, ಬನಾರಸ್ ವಿಶ್ವವಿದ್ಯಾಲಯದ ಸ್ಥಾಪಕ ಪಂಡಿತ ಮದನಮೋಹನ ಮಾಲವೀಯ, ನೊಬೆಲ್ ಪ್ರಶಸ್ತಿ ವಿಜೇತ, ಕವಿ ಸಾರ್ವಭೌಮ ರವೀಂದ್ರನಾಥ ಠಾಕೂರರು ಜನ್ಮತಾಳಿದ್ದು ಗಮನಾರ್ಹ.
ಉತ್ತರ:- 1860ನೇ ವರ್ಷದಲ್ಲಿ ಭಾರತದ ಮಹಾಪುರುಷರಾದ ಜವಾಹರಲಾಲರ ತಂದೆ ಮೋತಿಲಾಲ್ ನೆಹರೂ, ಬನಾರಸ್ ವಿಶ್ವವಿದ್ಯಾಲಯದ ಸ್ಥಾಪಕ ಪಂಡಿತ ಮದನಮೋಹನ ಮಾಲವೀಯ, ನೊಬೆಲ್ ಪ್ರಶಸ್ತಿ ವಿಜೇತ, ಕವಿ ಸಾರ್ವಭೌಮ ರವೀಂದ್ರನಾಥ ಠಾಕೂರರು ಜನ್ಮತಾಳಿದ್ದು ಗಮನಾರ್ಹ.
8. ವಿಶ್ವೇಶ್ವರಯ್ಯನವರು ಜನತೆಗೆ ನೀಡಿದ ಸಂದೇಶವೇನು?
ಉತ್ತರ:- ದುಡಿದರೆ ಉದ್ದಾರ, ದುಡಿಯದಿದ್ದರೆ ವಿನಾಶ, ಎಂಬ ಸಂದೇಶವನ್ನು ಜನತೆಗೆ ನೀಡಿದರು.
"ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಫಲ ಕೊಟ್ಟೆ ಕೊಡುತ್ತದೆ"
0 Comments