Recent Posts

ಎಮ್ಮ ಮನೆಯಂಗಳದಿ - Class 8th Second Langauge Kannada Textbook Solutions

 
 ಗದ್ಯ ೮         
ಎಮ್ಮ ಮನೆಯಂಗಳದಿ

ಕವಿ/ಲೇಖಕರ ಪರಿಚಯ 
 
* ಶ್ರೀನಿಧಿ ಡಿ.ಎಸ್ ಎಸ್ ಇವರು ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಯಲ್ಲಿ  ಜನಿಸಿದರು.
* ಇವರು ತೂಗುಮಂಚದಲ್ಲಿ ಕೂತು, ಹೂವು ಹೆಕ್ಕುವ ಸಮಯ,ಮುಂತಾದ ಕೃತಿಗಳನ್ನು ಬರೆದಿದ್ದಾರೆ.
* ''ತೂಗುಮಂಚದಲ್ಲಿ ಕೂತು' ಎಂಬ ಸಂಕಲನದಿಂದ 'ಎಮ್ಮ ಮನೆಯಂಗಳದಿ'ಗದ್ಯವನ್ನು ಆಯ್ಕೆ ಮಾಡಲಾಗಿದೆ.
                               ಪದಗಳ ಅರ್ಥ 
 
ಆಡುಂಬೋಲ – ಆಟದ ಬಯಲು,  
ದಬ್ಬೆ - ಬಿದಿರು ಮುಂತಾದವುಗಳು ಸಿಳು,  
ಸೋಗೆ - ಅಡಕೆಯ ಗರಿ, 
ಮಡಲು - ತೆಂಗಿನ ಗರಿ, 
ದನಪೆ - ಗೇಟ್ನಂತೆ ಬಳಕೆಯಾಗುವ ಮರದ ಚೌಕಟ್ಟು , 
ನಾಕ - ಸ್ವರ್ಗ, 
ನೇಜಿ - ಭತ್ತದ ಎಲೇಪೈರು , 
ಜಿಹ್ವಾಚಾಪಲ್ಯ - ನಾಲಗೆಯ ಚಪಲ, ತಿಂಡಿಪೋತತನ, 
ಪಾರುಪತ್ಯ - ಮುಖ್ಯ ಆಡಳಿತ ,ಜವಾಬ್ದಾರಿ,  
ನವವಧು - ಹೊಸದಾಗಿ ಮದುವೆಯಾದ ಮಹಿಳಾ, 
ಚಾಕಚಕ್ಯತೆ - ವೇಗ, ಲಗುಬಗೆ, 
ಸೊಳೆ - ಹಳಸಿನ ಹಣ್ಣಿನ ಒಂದು ಎಸಳು. 
 
  * ಬಿಟ್ಟ ಸ್ಥಳ ತುಂಬಿರಿ:
 
1. ಮನೆ ಮೊದಲ ಪಾಠಶಾಲೆ, ಅಂಗಳವೇ ಮೊದಲ ಮೈದಾನ,
2. ಕರಾವಳಿಯಲ್ಲಿ ಮಳೆಗಾಲದಲ್ಲಿ ಅಂಗಳಕ್ಕೆ ಬರುವ ಜನಪದ ನೃತ್ಯ ಕಳಂಜ,
3. ಕೆಸುವಿನೆಲೆಯಲ್ಲಿ ಪತ್ತೊಡೆ ಎಂಬ ತಿನಿಸನ್ನು ಮಾಡುತ್ತಾರೆ.
4. ಕಣ್ಣಾಮುಚ್ಚಾಲೆಯಿಂದ ತೊಡಗಿ ಕಂಬಾಟದವರೆಗೆ ಅಂಗಳವೇ ಮಕ್ಕಳ ಆಡುಂಬೊಲ
 
   * ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

1. ಲೇಖಕರು ಬಾಲ್ಯದಲ್ಲಿ ಯಾವ್ಯಾವ ಆಟಗಳನ್ನು ಅಂಗಳದಲ್ಲಿ ಆಡುತ್ತಿದ್ದರು?

ಉತ್ತರ:- ಲೇಖಕರು ಬಾಲ್ಯದಲ್ಲಿ ಕಣ್ಣಾ ಮುಚ್ಚಾಲೆ, ಕಂಬಾಟ, ಸ್ಪೈಸ್ ಕೂತು ಆಡುವ ಆಟ, ನಿಂತಾಟ ಮುಂತಾದ ಆಟಗಳನ್ನು ಆಡುತ್ತಿದ್ದರು

2, ಅಜ್ಜಿ ಬೈದಾಗ ಹುಡುಗರು ಖುಷಿಯಾಗುತ್ತಿದ್ದುದು ಯಾಕೆ?
ಉತ್ತರ:-ಮಕ್ಕಳ ಕುಣಿತಕ್ಕೆ ಕಂಗಾಲಾಗುವ ಅಜ್ಜಿ, ಕಷ್ಟಪಟ್ಟು ಸೆಗಣಿ ಸಾರಿಸಿದ ನೆಲವೆಲ್ಲ ಕಿತ್ತುಹೋಯಿತು ಎಂದು ಬೈದಾಗ ಮಕ್ಕಳಿಗೆ
ಪರಮಾನಂದವಾಗುತ್ತಿತ್ತು.

3. ಮಳೆ ಬರುವಾಗ ಹಳ್ಳಿಯವರು ಏನು ಮಾಡುತ್ತಾರೆ?
ಉತ್ತರ:-ಮಳೆ ಬರುವಾಗ ಹಿತ್ತಲಿನ ಬಚ್ಚಲ ಮನೆಯ ಸುತ್ತ ಕುಳಿತುಕೊಂಡು ಮಳೆ ಸದ್ದು ಕೇಳುತ್ತಾ ಹಲಸಿನ ಬೀಜವನ್ನು, ಗೇರು ಬೀಜವನ್ನು ಸುಟ್ಟು ತಿನ್ನುತ್ತಾರೆ.

4. ಮಳೆಗಾಲದಲ್ಲಿ ಅಂಗಳದಲ್ಲಿ ಯಾವ ಯಾವ ಗಿಡಗಳು ಮೊಳೆಯುತ್ತವೆ?
ಉತ್ತರ:-ನಾಗದಾಳಿ ಗಿಡ, ಡೇರೆ ಹೂವಿನ ಗಿಡ, ಟೊಮೊಟೊ ಗಿಡ. ಬತ್ತದ ಸಸಿ, ದಾಸವಾಳದ ಗಿಡ ಇತ್ಯಾದಿ,

5.ತುಳಸೀಕಟ್ಟೆಯನ್ನು ಅಲಂಕರಿಸುವುದು ಯಾವ ಸಂದರ್ಭಗಳಲ್ಲಿ?
ಉತ್ತರ:-ತುಳಸೀಕಟ್ಟೆಯನ್ನು ದೀಪಾವಳಿ ತುಳಸಿ ಪೂಜೆ, ಉತ್ಪಾನ ದ್ವಾದಶಿ ತುಳಸಿಪೂಜೆಯ ಸಂದರ್ಭದಲ್ಲಿ ಅಲಂಕರಿಸುತ್ತಾರೆ.

6. ಜಗದ ನಿಯಮ ಯಾವುದು? 
ಉತ್ತರ:-ಬದಲಾವಣೆಯೇ ಜಗದ ನಿಯಮ. 
 
* ಈ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1. ಮನೆ ಮತ್ತು ಆಂಗಳಗಳಿಗೆ ಇರುವ ವ್ಯತ್ಯಾಸಗಳೇನು?

ಉತ್ತರ:-ಕತ್ತಲಾಗುವುದು ಮನೆಯೊಳಕ್ಕಾದರೆ, ಮೊದಲು ಬೆಳಕಾಗುವುದು ಅಂಗಳಕ್ಕೆ! ಹುಟ್ಟಿನ ಸಂಭ್ರಮಕ್ಕೆ ಒಳಮನೆ ಸಾಕ್ಷಿಯಾದರೆ, ಸಾವಿನ ಸೂತಕಕ್ಕೆ ಅಂಗಳವೇ ಆಶ್ರಯ, ಒಳಗೆ ಯಾರು ಹೇಗೋ, ಆದರೆ ಬಯಲಂಥ ಅಂಗಳಕ್ಕೆ ಎಲ್ಲರೂ ಸಮಾನರೇ ಆಳೂ ಅರಸನೂ ಜೊತೆಗೆ ನಿಂತು ಮಾತನಾಡಲು ಅಂಗಳದಲ್ಲಿ ಮಾತ್ರ ಸಾಧ್ಯ. ಮನೆಯೇ ಮೊದಲ ಪಾಠಶಾಲೆಯಾದರೆ, ಅಂಗಳವೇ ಮೊದಲ ಮೈದಾನ) ಈ ಅಂಶಗಳು ಮನೆ ಮತ್ತು ಅಂಗಳಗಳಿಗೆ ಇರುವ ವ್ಯತ್ಯಾಸಗಳಾಗಿವೆ.

2, ಅಂಗಳದಲ್ಲಿ ಮಕ್ಕಳು ಹೇಗೆ ನಲಿದಾಡುತ್ತಾರೆ?
ಉತ್ತರ:-ಬೇಸಗೆಯಲ್ಲಿ ಲೇಖಕರ ಅಜ್ಜನ ಮನೆಯು ಸಕಲ ಆಟಗಳಿಗೂ ಅಂಗಳವೇ ಹೆಡ್ಡಾಫೀಸಾಗಿತ್ತು. ಕಣ್ಣಾಮುಚ್ಚಾಲೆಯಿಂದ ತೊಡಗಿ, ಕಂಬಾಟದವರೆಗೂ ಅಂಗಳವೇ ಮಕ್ಕಳ ಆಡುಂಬೊಲ ಮಕ್ಕಳ ಕೈಯ ನುಣುಪಲ್ಲ ಆ ಐಸ್ಪೈಸ್ ಆಡುವ ಕಂಬಗಳಿಗೆ ಮೆತ್ತಿಕೊಂಡು, ಕಂಬಗಳ ಒರಟೆಲ್ಲ ಮಕ್ಕಳ ಕೈಗಂಟಿ-ಕೊಳ್ಳುವಷ್ಟು ಅಲ್ಲೇ ಆಟವಾಡುತ್ತಿದ್ದರು.. ಒಂದಾಟ ಮುಗಿದ ಮೇಲೆ ಇನ್ನೊಂದು, ಕೂತು ಆಡುವ ಆಟ ಮುಗಿದರೆ, ನಿಂತಾಟ, ಮತ್ತೆ ಕುಣಿದಾಟ, ಚಪ್ಪರದೇಣಿಯೇ ಸಿಂಹಾಸನ, ಸೆಗಣಿ ಸಾರಿಸಿದ ನೆಲವೇ ವೇದಿಕೆ, ಅಡಿಕೆಯ ದಜ್ಜೆಯೇ ಶಿವಧನುಸ್ಸು, ವಜ್ರಾಯುಧ, ಶಿವಾಜಿಯ ಕತ್ತಿ ಹೀಗೆ ಅಂಗಳದಲ್ಲಿ ಮಕ್ಕಳು ನಲಿದಾಡುತ್ತಿದ್ದರು. 

3. ಮಳೆಗಾಲ ಶುರುವಾಗುವ ಹೊತ್ತಿನಲ್ಲಿ ಅಂಗಳ ಹೇಗಿರುತ್ತದೆ?
ಉತ್ತರ:-ಮಳೆಗಾಲದ ಮೋಡಗಳು ದಟ್ಟಿಸಿಕೊಳ್ಳುವ ಮೊದಲು ಎಲ್ಲವನ್ನೂ ಕಳಚಿಕೊಂಡು ಆಗಸಕ್ಕೆ ನೇರ ಮುಖ ಮಾಡಿಕೊಳ್ಳಬೇಕಾದ್ದು ಅಂಗಳದ ಕರ್ತವ್ಯ. ಮಲೆನಾಡಿನಲ್ಲಾದರೆ ಅಡಿಕೆಯ ಸೋಗೆಗಳೂ, ಕರಾವಳಿಯಲ್ಲಿ ತೆಂಗಿನ ಮಡಲುಗಳೂ ಮತ್ತೆ ಕೊಟ್ಟಿಗೆಯಟ್ಟ ಸೇರಿದರೆ, ಕಂಬಗಳು ಮಾತ್ರ ಮಳೆ ಹೊಡೆತಕ್ಕೆ ಸಿದ್ಧವಾಗಿ ನಿಲ್ಲುತ್ತವೆ. ಅಡಿಕೆ ಮರವನ್ನು ಸೀಳಿ ಮಾಡಿದ ಟೆಂಪರರಿ ಕಾಲುಹಾದಿ ದಣಪೆಯಿಂದ ಮನೆಯವರೆಗೆ, ಹೊರಲೋಕದಿಂದ ಒಳನಾಕಕ್ಕೆ ಮಳೆ ನೀರು ಹೆಂಚಿಂದ ಬಿದ್ದು ನೆಲ ಹಾಳಾಗಬಾರದೆಂದು ಕೆಳಗೆ ಮುಚ್ಚಿಕೊಂಡಿರುವ ಸೊಪ್ಪು, ಸೋಗೆಗಳು! ಈ ರೀತಿ ಮಳೆಗಾಲದ ಅಂಗಳ ಇರುತ್ತದೆ.

4. ಮಲೆನಾಡಿನಲ್ಲಿ ನಡೆಯುವ ಮದುವೆಗಳಿಗೂ ಅಂಗಳಕ್ಕೂ ಏನು ಸಂಬಂಧ?
ಉತ್ತರ:-ಮಲೆನಾಡಿನಲ್ಲಿ ಬಹಳ ಮದುವೆಗಳ ಮಂಟಪಗಳಿಗೆ ಅಂಗಳವೇ ಆಶ್ರಯದಾತ, ಮದುವೆಯ ಸಮಸ್ತ ತಯಾರಿಗಳಿಗೂ ಅಂಗಳವೇ ಗತಿ, ಪಕ್ಕದ ಮನೆ ಅಂಗಳದಲ್ಲಿ ಬಾಳೆ ಎಲೆಗಳನ್ನು ಕ್ಲೀನು ಮಾಡಿ, ತರಕಾರಿ ಕೊಚ್ಚಿದರೆ, ಮತ್ತೊಂದು ಮನೆಯಂಗಳದಲ್ಲಿ ಊಟದ ತಯಾರಿ, ಇನ್ಯಾರದೊ ಹಿತ್ತಲಲ್ಲಿ ಅಡುಗೆ, ಗೃಹಪ್ರವೇಶವೆಂಬ ಗಂಡಿನ ಮನೆಯ ಸಂಭ್ರಮಕ್ಕೆ ಮತ್ತೆ ಅಂಗಳವೇ ಸಾಕ್ಷಿ. ಹೆಣ್ಣಿನ ಹೊಸ ಬದುಕು ಆರಂಭವಾಗುವುದೇ ಅಲ್ಲಿ, ಹೊಸ ಊರು, ಹೊಸ ಜಾಗ, ಹೊಸ ಮಂದಿಯ ಮಧ್ಯೆ ಪ್ರಾಯಶಃ ಆ ಅಂಗಳ ಮಾತ್ರವೇ ಹಳೆಯದು ಎನ್ನಿಸುವುದೋ ಏನೋ ಮಾರನೆಯ ದಿನದ ಚಳಬೆಳಗಲ್ಲಿ ಅಂಗಳದಲ್ಲಿ ರಂಗೋಲಿಯ ಚಿತ್ರಗಳನ್ನ ಬಿಡಿಸುತ್ತ ನವವಧುವು ತಾನೇ ಚಿತ್ರವಾಗುವ ಸೋಜಿಗವೂ ನಡೆಯುತ್ತದೆ.

5.ಅಡಿಕೆ ಸುಲಿಯುವ ಸಮಯದಲ್ಲಿ ಅಂಗಳ ಹೇಗಿರುತ್ತದೆ?
ಉತ್ತರ:-ಅಡಿಕೆ ಕೊಯ್ಲಿನ ಸಮಯದಲ್ಲಿ, ಮಲೆನಾಡಿನಲ್ಲಿ, ಹಸಿರು ಹಳದಿ ಅಡಿಕೆಗಳ ರಾಶಿ ರಾಶಿ ಗೊಂಚಲುಗಳು ಅಂಗಳವನ್ನು ತುಂಬಿಕೊಳ್ಳುವ ಪರಿಯೇ ಚೆಂದ, ಊರ ಮಂದಿಯೆಲ್ಲ ಒಂದಾಗಿ, ಹಗಲೆನ್ನದೆ, ರಾತ್ರಿಯೆನ್ನದೇ ಈ ಅಡಿಕೆಗಳನ್ನು ಸುಲಿಯುವ ಸಂಭ್ರಮಕ್ಕೆ ಸಾಟಿಯೇ ಇಲ್ಲ ಆಂಗಳದ ಆಚೆಗೆ ಆದೇನೇ ಆಗಿದ್ದರೂ ಒಳಗೆ ಬಂದು ಕೂತ ಮೇಲೆ ಎಲ್ಲರೂ ಒಂದೇ ಇಲ್ಲಿ. ವಿದೇಶೀ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ, ವಾರಾಂತ್ಯದಲ್ಲಿ ಊರಿಗೆ ಬಂದ ಮನೆಮಗನೂ, ಆಳುಮಗನೂ ಒಟ್ಟಿಗೇ ಅಡಿಕೆ ಸುಲಿಯುತ್ತಿರುತ್ತಾರೆ. ಜಗದ ಸುದ್ದಿಗಳನ್ನಲ್ಲ ಹೇಳುತ್ತ, ಏನೇನೋ ಹರಟೆ ಹೊಡೆಯುತ್ತಿದ್ದರೂ ಕೈಗಳು ಮಾತ್ರ ಯಾಂತ್ರಿಕವಾಗಿ ರಾಶಿಯಿಂದ ಅಡಿಕೆ ಹೆಕ್ಕಿ ಸುಲಿದು, ಡಬ್ಬ ತುಂಬಿಸುವ ಆ ಚಾಕಚಕ್ಯತೆಯನ್ನು ನೋಡಲೆರಡು ಕಣ್ಣುಗಳು ಸಾಲವು.
 
  * ಕೆಳಗಿನ ಪ್ರಶ್ನೆಗಳಿಗೆ ಏಳೆಂಟು ವಾಕ್ಯಗಳಲ್ಲಿ ಉತ್ತರಿಸಿ: 

1. ಅಂಗಳವೆಂಬುದು ಲೇಖಕರ ಬಾಲ್ಯದ ನೆನಪುಗಳೊಂದಿಗೆ ಹೇಗೆ ಬೆಸೆದುಕೊಂಡಿದೆ?

ಉತರ:-ಅಂಗಳ ಅನ್ನುವ ಪುಟ್ಟ ಜಾಗ ವೈವಿಧ್ಯಮಯ ವಿಷಯಗಳ ಆಶ್ರಯದಾಣ, ಮನೆಗೂ ಹೊರ ಪ್ರಪಂಚಕ್ಕೂ ಇರುವ ಸುಂದರ ಕೊಂಡಿ, ಅಂಗಳ, ಮನೆಯೆಂಬ ಆಶ್ರಯದಿಂದ ಜಗತ್ತೆಂಬ ಜಾಲಕ್ಕೆ ಕಾಲಿಡಬೇಕೆಂದರೆ ಮೊದಲು ಮೀರಬೇಕಾದ್ದು ಅಂಗಳವನ್ನೇ. ಒಳಗೆ ಕಾಲಿಡುವವನಿಗೆ ಎಲ್ಲ ಕೊಳೆಯನ್ನು ಕೊಡವಿ ಸಾಗಲು, ಹೊರಗೆ ನಡೆಯುವವನಿಗೆ ಎಲ್ಲ ಸರಿಯಾಗಿದೆಯೇ ಎಂದು ನೋಡಿಕೊಳ್ಳಲು ಅಂಗಳವೇ ಜಾಗ, ಮೊದಲು ಕತ್ತಲಾಗುವುದು ಮನೆಯೊಳಕ್ಕಾದರೆ, ಮೊದಲು ಬೆಳಕಾಗುವುದು ಅಂಗಳಕ್ಕೆ! ಹುಟ್ಟಿನ ಸಂಭ್ರಮಕ್ಕೆ ಒಳಮನೆ ಸಾಕ್ಷಿಯಾದರೆ, ಸಾವಿನ ಸೂತಕಕ್ಕೆ ಅಂಗಳವೇ ಆಶ್ರಯ, ಒಳಗೆ ಯಾರು ಹೇಗೋ, ಆದರೆ ಬಯಲಂಥ ಅಂಗಳಕ್ಕೆ ಎಲ್ಲರೂ ಸಮಾನರೇ! ಆ ಅರಸನೂ ಜೊತೆಗೆ ನಿಂತು ಮಾತನಾಡಲು ಅಂಗಳದಲ್ಲಿ ಮಾತ್ರ ಸಾಧ್ಯ ಮನೆಯೇ ಮೊದಲ ಪಾಠಶಾಲೆಯಾದರೆ, ಅಂಗಳವೇ ಮೊದಲ ಮೈದಾನ! ಬೇಸಗೆಯ ನನ್ನ ಅಜ್ಜನ ಮನೆಯ ಸಕಲ ಆಟಗಳಿಗೂ ಅಂಗಳವೇ ಹೆಡ್ಡಾಫೀಸಾಗಿತ್ತು.ಕಣ್ಣಾಮುಚ್ಚಾಲೆಯಿಂದ ತೊಡಗಿ, ಕಂಬಾಟದವರೆಗೂ ಅಂಗಳವೇ ನಮ್ಮ ಆಡುಂಬೊಲ! ನಮ್ಮ ಕೈಯ ನುಣುಪಲ್ಲ ಆ ಐಸ್ಪೈಸ್ ಆಡುವ ಕಂಬಗಳಿಗೆ ಮೆತ್ತಿಕೊಂಡು, ಕಂಬಗಳ ಒರಟೆಲ್ಲ ನಮ್ಮ ಕೈಗಂಟಿ ಕೊಳ್ಳುವಷ್ಟು ಅಲ್ಲೇ ಆಟವಾಡುತ್ತಿದ್ದೆವು. ಒಂದಾಟ ಮುಗಿದ ಮೇಲೆ ಇನ್ನೊಂದು ಕೂತು ಆಡುವ ಆಟ ಮುಗಿದರೆ, ನಿಂತಾಟ, ಮತ್ತೆ ಕುಣಿದಾಟ ಚಪ್ಪರದೇಣಿಯೇ ಸಿಂಹಾಸನ, ಸೆಗಣಿ ಸಾರಿಸಿದ ನೆಲವೇ ವೇದಿಕೆ, ಅಡಿಕೆಯ ದಬ್ಬೆಯೇ ಶಿವಧನುಸ್ಸು, ವಜ್ರಾಯುಧ, ಶಿವಾಜಿಯ ಕತ್ತಿ ನಮ್ಮ ಕುಣಿತಕ್ಕೆ ಕಂಗಾಲಾಗುವ ಅಜ್ಜಿ. ಕಷ್ಟಪಟ್ಟು ಸೆಗಣಿ ಸಾರಿಸಿದ ನೆಲವೆಲ್ಲ ಕಿತ್ತುಹೋಯಿತು ಎಂದು ಬೈದರೆ ನಮಗೆ ಪರಮಾನಂದ, ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ, ಏಕೆಂದರೆ ಮಾರನೇ ದಿನದ ಸೆಗಣಿ ಸಾರಿಸುವ ಕೆಲಸ ಎಲ್ಲ ಆಟಗಳಿಗೂ ಮಿಗಿಲು, ಕೊಟ್ಟಿಗೆಯಿಂದ ಸೆಗಣಿ ಬಾಚಿ ತಂದು, ಆದನ್ನು ಬಕೇಟಲ್ಲಿ ಕಲಸಿ ಅದಕ್ಕೆ ಹಳೆಯ ಬ್ಯಾಟರಿ ಸೆಲ್ಲು ಗುದ್ದಿ ಒಳಗಿನ ಪುಡಿ ತುಂಬಿ, ಅಂಗಳದ ತುಂಬ ಸಗಣಿ ನೀರು ಚೆಲ್ಲಿ ಗುಡಿಸುವ ಮಜವೇ ಬೇರೆ ಎಂದಿದ್ದಾರೆ ಲೇಖಕರು. 

2. ಮಳೆಗಾಲದ ಅಂಗಳದ ಚಿತ್ರಣ ಹೇಗಿರುತ್ತದೆ?
ಉತ್ತರ:-ಮಳೆಗಾಲದ ಮೋಡಗಳು ದಟ್ಟಿಸಿಕೊಳ್ಳುವ ಮೊದಲು ಎಲ್ಲವನ್ನೂ ಕಳಚಿಕೊಂಡು ಆಗಸಕ್ಕೆ ನೇರ ಮುಖ ಮಾಡಿಕೊಳ್ಳಬೇಕಾದ್ದು ಅಂಗಳದ ಕರ್ತವ್ಯ ಮಲೆನಾಡಿನಲ್ಲಾದರೆ ಅಡಿಕೆಯ ಸೋಗೆಗಳೂ, ಕರಾವಳಿಯಲ್ಲಿ ತೆಂಗಿನ ಮಡಲುಗಳೂ ಮತ್ತೆ ಕೊಟ್ಟಿಗೆಯಟ್ಟ ಸೇರಿದರೆ, ಕಂಬಗಳು ಮಾತ್ರ ಮಳೆ ಹೊಡೆತಕ್ಕೆ ಸಿದ್ಧವಾಗಿ ನಿಲ್ಲುತ್ತವೆ. ಆಡಿಕೆ ಮರವನ್ನು ಸೀಳಿ ಮಾಡಿದ ಟೆಂಪರರಿ ಕಾಲುಹಾದಿ ದಣಪೆಯಿಂದ ಮನೆಯವರೆಗೆ, ಹೊರಲೋಕದಿಂದ ಒಳನಾಕಕ್ಕೆ ಮಳೆ ನೀರು ಹೆಂಚಿಂದ ಬಿದ್ದು ನೆಲ ಹಾಳಾಗಬಾರದೆಂದು ಕೆಳಗೆ ಮುಚ್ಚಿಕೊಂಡಿರುವ ಸೊಪ್ಪು, ಸೋಗೆಗಳು! ಮಳೆ ಬರುವಾಗ, ಹಿತ್ತಲಿನ ಬಚ್ಚಲ ಮನೆಯ ಸುತ್ತ ಕೂತು ಮಳೆ ಸದ್ದು ಕೇಳುತ್ತ ಹಲಸಿನ ಬೀಜವನ್ನೋ, ಗೇರು ಬೀಜವನ್ನೋ ಸುಟ್ಟುಕೊಂಡು ತಿನ್ನುತ್ತ ಕುಳಿತಿದ್ದರೆ, ಅಂಗಳ ಅನಾಥ, ಮಳೆಗಾಲದಲ್ಲಿ ಅಂಗಳದಲ್ಲಿ ಅಚ್ಚರಿಗಳೂ ಮೂಡುತ್ತವೆ. ಕಳೆದ ಮಳೆಗಾಲದಲ್ಲಿ ಹೂವಾಗಿ ಮರೆತು ಹೋಗಿದ್ದ ನಾಗದಾಳಿ ಗಿಡ, ಧುತ್ತೆಂದು ಅಲ್ಲೇ ಮೂಲೆಯಲ್ಲಿ ಮತ್ತೆ ಪ್ರತ್ಯಕ್ಷವಾಗಿ ಮಳೆಗೆ ಮುಖವೊಡ್ಡುತ್ತದೆ. ಇನ್ಯಾವುದೋ ಡೇರೇ ಹೂವಿನ ಗಿಡ ಗಡ್ಡೆಯಿಂದ ಮೂತಿ ಹೊರ ತೂರಿಸಿ ತಾನೂ ಇದ್ದೇನೆ ಎನ್ನುತ್ತದೆ. ಬಣ್ಣ ಬಣ್ಣದ ಗೌರೀ ಹೂಗಳ ಗಿಡ, ಯಾವುದೋ ಹಕ್ಕಿಯುಪಕಾರದಿಂದ ಹುಟ್ಟಿದ ಟೊಮೇಟೋ ಗಿಡ ಭತ್ತದ ಸಸಿ... ಎಲ್ಲ ಸಹಬಾಳ್ವೆ ಆರಂಭಿಸುತ್ತವೆ. ಅಂಗಳದಂಚಿನ ದಾಸವಾಳ ಗಾಳಿಗೆ ಇತ್ತಲೇ ಬಗ್ಗಿ ನಾನೂ ಇದ್ದೇನೆ ಎನ್ನುತ್ತದೆ. ಕರಾವಳಿಯ ಮಳೆಗಾಲದಲ್ಲಿ ಮನೆಬಾಗಿಲಿಗೆ ಬರುವ ಆಟಿ ಕಳಂಜವೆಂಬ ಜನಪದ ನೃತ್ಯದ ಸೊಗಸ, ಮಳೆಯ ಸದ್ದನ್ನೂ ಮೀರಿಸುವ ನೇಜಿ ನೆಡುವ ಹೆಂಗಸರ ಚಹಾದ ಜೊತೆಗಿನ ಕಿಲಕಿಲವು ನಡೆಯುವುದು ಅಂಗಳದಲ್ಲೇ, ಪತೊಡೆಗಳಾಗಿ ನಮ್ಮ ಜಿಹ್ವಾಚಾಪಲ್ಯವನ್ನು ತೀರಿಸುವ ಕೆಸುವಿನೆಲೆಗಳ ಜನನವೂ ಇಲ್ಲಿಯೇ, ಬಣ್ಣಬಣ್ಣದ ಆಣಬೆಗಳೂ, ದಾರಿತಪ್ಪಿ ಬರುವ ದೊಡ್ಡ ಕಪ್ಪೆಗಳೂ ಅಂಗಳವನ್ನು ಅಲಂಕರಿಸುತ್ತವೆ, ಇನ್ನು, ಮುತ್ತೈದೆಯ ಹಣೆಗೆ ತಿಲಕ ಇಟ್ಟಂತೆ, ಅಂಗಳಕ್ಕೆ ತುಳಸೀಕಟ್ಟೆ, ರಾತ್ರಿ ಆ ಕಟ್ಟೆಯಲ್ಲಿ ಮಿನುಗುವ ಪುಟ್ಟ ದೀಪವು ಅಂಗಳದ ನಕ್ಷತ್ರ ಮಳೆಗಾಲದಲ್ಲಿ ತುಳಸಿಯ ದೀಪಕ್ಕೆ ಹೊಸ್ತಿಲೇ ಆಸರೆ, ಮಳೆ ಕಳೆದ ಮೇಲೆ ಬರುವ ಹಬ್ಬಗಳ ಜೊತೆಗೆ ಮತ್ತೆ ಹಣತೆಗೆ ತುಳಸಿಕಟ್ಟೆಯ ಸಖ್ಯ ಮರಳಿ ದೊರಕುತ್ತದೆ. ದೀಪಾವಳಿ ತುಳಸೀ ಪೂಜೆ, ಉತ್ಪಾನ ದ್ವಾದಶಿಯ ತುಳಸೀ ಮದುವೆಗೆ ಅಂಗಳದ್ದೇ ಪಾರುಪತ್ಯ. 

3, ಅಂಗಳವು ಈಗಿನ ದಿನಗಳಲ್ಲಿ ಹೇಗೆ ಬದಲಾಗಿದೆ?
ಉತ್ತರ:-ಬದಲಾವಣೆ ಎಂಬ ಜಗದ ನಿಯಮ ಅಂಗಳಕ್ಕೂ ಅನ್ವಯಿಸುತ್ತದೆ. ಸೆಗಣಿಯ ಅಂಗಳವನ್ನು ಇಂಟರ್ಲಾಕುಗಳು ನಿಧಾನವಾಗಿ ಬಂಧಿಸುತ್ತಿವೆ. ಮಣ್ಣ ಪಾಗಾರವನ್ನು ಇಟ್ಟಿಗೆ ಸಿಮೆಂಟುಗಳು ತಿಂದು ಹಾಕಿವೆ. ಸ್ವಚ್ಛಂದ ಬೇರು ಬಿಟ್ಟಿದ್ದ ಹೂ ಗಿಡಗಳಿಗೆ ಶಿಸ್ತು ಕಲಿಸಲು ಇದೀಗ ಕುಂಡಗಳು ಬಂದಿವೆ. ಅಂಗಳದ ಹಲಿದನದ ಆಟವು ಮೊಬೈಲ್ ಫೋನಿಗೆ ವರ್ಗಾವಣೆಯಾಗಿದೆ. ದೀಪಾವಳಿಯಂದು ತಿರುಗುವ ನೆಲಚಕ್ರಕ್ಕೆ ಸಿಮೆಂಟಿನಂಗಳದಲ್ಲಿ ಹೊಸ ವೇಗ ದಕ್ಕಿದೆ. ಮಳೆ ಬಂದಾಗ ಅಮ್ಮನಿಗ ತಗಡು ಚಪ್ಪರದ ಕೆಳಗೆ ತೋಯದೇ ನಡೆಯುತ್ತಾಳೆ. ಅಂಗಳದ ಕಳೆ ತೆಗೆದೂ ತೆಗೆದೂ ನಡು ಬಾಗಿದ್ದ ಅಜ್ಜನೀಗ ಕೋಲು ಹಿಡಿದು ನೆಟ್ಟಗಾಗಿದ್ದಾನೆ. ಏದುಸಿರು ಬಿಡುತ್ತ ಅಂಗಳ ಚಂದ ಕಾಣಬೇಕೆಂದು ಗುದ್ದಲಿ ಹಿಡಿದು ನೆಲ ಕೆತ್ತುತ್ತಿದ್ದ ಅಷ್ಟೆ, ಆರಾಮ ಕುರ್ಚಿಯಲ್ಲಿ ಕೂತಿದ್ದಾನೆ. ಅಂಗಳವನ್ನು ಬಂಧಿಸಿದ ಕಾಂಪೌಂಡು ಗೋಡೆಯ ಮೇಲೆ ಆಳೆಲು ಕೂತು ಬಿಸಿಲು ಕಾಯಿಸಿಕೊಳ್ಳುತ್ತಿವೆ. ಧೂಳು ಕೆಸರುಗಳು ಅದರಾಚೆಗೇ ಉಳಿದಿವೆ. ಹಬ್ಬಕ್ಕೆಂದು ಮನೆಯ ಸುತ್ತ ಹಚ್ಚಿದ ದೀಪಸಾಲುಗಳನ್ನು ಅಂಗಳವೂ ಮಸುಕಾಗಿ ಪ್ರತಿಫಲಿಸುತ್ತ ತಾನೂಪ್ರಜ್ವಲಿಸುತ್ತಿದೆ.                     
 
* ಈ ಕೆಳಕಂಡ ವಾಕ್ಯಗಳ ಸ್ವಾರಸ್ಯಗಳನ್ನು ನಾಲೈದು ವಾಕ್ಯಗಳಲ್ಲಿ ವಿಸ್ತರಿಸಿ ಬರೆಯಿರಿ: 

1. ಬಯಲಂಥ ಅಂಗಳಕ್ಕೆ ಎಲ್ಲರೂ ಸಮಾನರೇ
ಆಯ್ಕೆ:
-ಈ ವಾಕ್ಯವನ್ನು ಶ್ರೀನಿಧಿ ಡಿ. ಎಸ್.ರವರು ಬರೆದಿರುವ “ತೂಗುಮಂಚದಲ್ಲಿ ಕೂತು” ಪ್ರಬಂಧ ಸಂಕಲನದಿಂದ ಆಯ್ದ "ಎಮ್ಮ ಮನೆಯಂಗಳದಿ" ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:-ಈ ಮಾತನ್ನು ಲೇಖಕರು ಹೇಳಿದ್ದಾರೆ. ಅಂಗಳ ಅನ್ನುವ ಪುಟ್ಟ ಜಾಗ ವೈವಿಧ್ಯಮಯ ವಿಷಯಗಳ ಆಶ್ರಯದಾಣ. ಮನೆಗೂ ಹೊರ ಪ್ರಪಂಚಕ್ಕೂ ಇರುವ ಸುಂದರ ಕೊಂಡಿ, ಅಂಗಳ, ಮನೆಯೆಂಬ ಆಶಯದಿಂದ ಜಗತ್ತೆಂಬ ಜಾಲಕ್ಕೆ ಕಾಲಿಡಬೇಕೆಂದರೆ ಮೊದಲು ಮೀರಬೇಕಾದ್ದು ಅಂಗಳವನ್ನೇ. ಆದರೆ ಬಯಲಂಥ ಅಂಗಳಕ್ಕೆ ಎಲ್ಲರೂ ಸಮಾನರೇ ಆಳೂ ಅರಸನೂ ಜೊತೆಗೆ ನಿಂತು ಮಾತನಾಡಲು ಅಂಗಳದಲ್ಲಿ ಮಾತ್ರ ಸಾಧ್ಯ ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

2. ಬೈದರೆ ನಮಗೆ ಪರಮಾನಂದ
ಆಯ್ಕೆ:
-ಈ ವಾಕ್ಯವನ್ನು ಶ್ರೀನಿಧಿ ಡಿ. ಎಸ್.ರವರು ಬರೆದಿರುವ “ತೂಗುಮಂಚದಲ್ಲಿ ಕೂತು" ಪ್ರಬಂಧ ಸಂಕಲನದಿಂದ ಆಯ್ದ ಎಮ್ಮ ಮನೆಯಂಗಳದಿ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:-ಈ ಮಾತನ್ನು ಲೇಖಕರು ಹೇಳಿದ್ದಾರೆ. ಬೇಸಗೆಯ ನನ್ನ ಅಜ್ಜನ ಮನೆಯ ಸಕಲ ಆಟಗಳಿಗೂ ಅಂಗಳವೇ ಹೆಡ್ಡಾಫೀಸಾಗಿತ್ತು. ಒಂದಾಟ ಮುಗಿದ ಮೇಲೆ ಇನ್ನೊಂದು, ಕೂತು ಆಡುವ ಆಟ ಮುಗಿದರೆ, ನಿಂತಾಟ, ಮತ್ತೆ ಕುಣಿದಾಟ ಚಪ್ಪರದೇಣಿಯೇ ಸಿಂಹಾಸನ, ಸೆಗಣಿ ಸಾರಿಸಿದ ನೆಲವೇ ವೇದಿಕೆ, ಆಡಿಕೆಯ ದಜ್ಜೆಯೇ ಶಿವಧನುಸ್ಸು, ವಜ್ರಾಯುಧ, ಶಿವಾಜಿಯ ಕತ್ತಿ ನಮ್ಮ ಕುಣಿತಕ್ಕೆ ಕಂಗಾಲಾಗುವ ಅಜ್ಜಿ, ಕಷ್ಟಪಟ್ಟು ಸೆಗಣಿ ಸಾರಿಸಿದ ನೆಲವೆಲ್ಲ ಕಿತ್ತುಹೋಯಿತು ಎಂದು ಬೈದರೆ ನಮಗೆ ಪರಮಾನಂದ ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ, 

3. ಮಳೆಗಾಲದಲ್ಲಿ ಆಂಗಳ ಅನಾಥ
ಆಯ್ಕೆ:-
ಈ ವಾಕ್ಯವನ್ನು ಶ್ರೀನಿಧಿ ಡಿ. ಎಸ್.ರವರು ಬರೆದಿರುವ “ತೂಗುಮಂಚದಲ್ಲಿ ಕೂತು" ಪ್ರಬಂಧ ಸಂಕಲನದಿಂದ ಆಯ್ದ ಎಮ್ಮ ಮನೆಯಂಗಳದಿ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:-ಈ ಮಾತನ್ನು ಲೇಖಕರು ಹೇಳಿದ್ದಾರೆ. ಮಳೆಗಾಲದ ಮೋಡಗಳು ದಟ್ಟಿಸಿಕೊಳ್ಳುವ ಮೊದಲು ಎಲ್ಲವನ್ನೂ ಕಳಚಿಕೊಂಡು ಆಗಸಕ್ಕೆ ನೇರ ಮುಖ ಮಾಡಿಕೊಳ್ಳಬೇಕಾದ್ದು ಅಂಗಳದ ಕರ್ತವ್ಯ ಮಲೆನಾಡಿನಲ್ಲಾದರೆ ಆಡಿಕೆಯ ಸೋಗೆಗಳೂ, ಕರಾವಳಿಯಲ್ಲಿ ತೆಂಗಿನ ಮಡಲುಗಳೂ ಮತ್ತೆ ಕೊಟ್ಟಿಗೆಯಟ್ಟ ಸೇರಿದರೆ, ಕಂಬಗಳು ಮಾತ್ರ ಮಳೆ ಹೊಡೆತಕ್ಕೆ ಸಿದ್ಧವಾಗಿ ನಿಲ್ಲುತ್ತವೆ. ಮಳೆ ನೀರು ಹೆಂಚಿಂದ ಬಿದ್ದು ನೆಲ ಹಾಳಾಗಬಾರದೆಂದು ಕೆಳಗೆ ಮುಚ್ಚಿಕೊಂಡಿರುವ
ಸೊಪ್ಪು, ಸೋಗೆಗಳು! ಮಳೆ ಬರುವಾಗ, ಹಿತ್ತಲಿನ ಬಚ್ಚಲ ಮನೆಯ ಸುತ್ತ ಕೂತು ಮಳೆ ಸದ್ದು ಕೇಳುತ್ತ ಹಲಸಿನ ಬೀಜವನ್ನೋ, ಗೇರು ಬೀಜವನ್ನೋ ಸುಟ್ಟುಕೊಂಡು ತಿನ್ನುತ್ತ ಕುಳಿತಿದ್ದರೆ, ಅಂಗಳ ಅನಾಥ ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

4. ಕಟ್ಟೆಯ ಮೇಲಿನ ದೀಪವು ಅಂಗಳದ ನಕ್ಷತ್ರ
ಆಯ್ಕೆ:
-ಈ ವಾಕ್ಯವನ್ನು ಶ್ರೀನಿಧಿ ಡಿ. ಎಸ್.ರವರು ಬರೆದಿರುವ "ತೂಗುಮಂಚದಲ್ಲಿ ಕೂತು" ಪ್ರಬಂಧ ಸಂಕಲನದಿಂದ ಆಯ್ದ ಎನ್ನು ಮನೆಯಂಗಳದಿ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:-ಈ ಮಾತನ್ನು ಲೇಖಕರು ಹೇಳಿದ್ದಾರೆ, ಕರಾವಳಿಯ ಮಳೆಗಾಲದಲ್ಲಿ ಮನೆಬಾಗಿಲಿಗೆ ಬರುವ ಆಟಿ ಕಳಂಜವೆಂಬ ಜನಪದ ನೃತ್ಯದ ಸೊಗಸೂ, ಮಳೆಯ ಸದ್ದನ್ನೂ ಮೀರಿಸುವ ನೇಜಿ ನೆಡುವ ಹೆಂಗಸರ ಚಹಾದ ಜೊತೆಗಿನ ಕಿಲಕಿಲವು ನಡೆಯುವುದು ಅಂಗಳದಲ್ಲೇ, ಪತ್ತೊಡೆಗಳಾಗಿ ನಮ್ಮ ಜಿಹ್ವಾಚಾಪಲ್ಯವನ್ನು ತೀರಿಸುವ ಕೆಸುವಿನೆಲೆಗಳ ಜನನವೂ ಇಲ್ಲಿಯೇ, ಬಣ್ಣಬಣ್ಣದ ಅಣಬೆಗಳೂ, ದಾರಿತಪ್ಪಿ ಬರುವ ದೊಡ್ಡ ಕಪ್ಪೆಗಳೂ ಅಂಗಳವನ್ನು ಅಲಂಕರಿಸುತ್ತವೆ. ಇನ್ನು, ಮುತ್ತೈದೆಯ ಹಣೆಗೆ ತಿಲಕ ಇಟ್ಟಂತೆ, ಅಂಗಳಕ್ಕೆ ತುಳಸೀಕಟ್ಟೆ, ರಾತ್ರಿ ಆ ಕಟ್ಟೆಯಲ್ಲಿ ಮಿನುಗುವ ಪುಟ್ಟ ದೀಪವು ಅಂಗಳದ ನಕ್ಷತ್ರ! ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

5. ಅಂಗಳ ಮಾತ್ರವೇ ಹಳೆಯದು ಎನ್ನಿಸುತ್ತದೇನೋ!
ಆಯ್ಕೆ:
-ಈ ವಾಕ್ಯವನ್ನು ಶ್ರೀನಿಧಿ ಡಿ. ಎಸ್.ರವರು ಬರೆದಿರುವ “ತೂಗುಮಂಚದಲ್ಲಿ ಕೂತು" ಪ್ರಬಂಧ ಸಂಕಲನದಿಂದ ಆಯ್ದ ಎಮ್ಮ ಮನೆಯಂಗಳದಿ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:-ಈ ಮಾತನ್ನು ಲೇಖಕರು ಹೇಳಿದ್ದಾರೆ. ಗೃಹಪ್ರವೇಶವೆಂಬ ಗಂಡಿನ ಮನೆಯ ಸಂಭ್ರಮಕ್ಕೆ ಮತ್ತೆ ಅಂಗಳವೇ ಸಾಕ್ಷಿ. ಹೆಣ್ಣಿನ ಹೊಸ ಬದುಕು ಆರಂಭವಾಗುವುದೇ ಅಲ್ಲಿ, ಹೊಸ ಊರು, ಹೊಸ ಜಾಗ, ಹೊಸ ಮಂದಿಯ ಮಧ್ಯೆ ಪ್ರಾಯಶಃ ಆ ಅಂಗಳ ಮಾತ್ರವೇ ಹಳೆಯದು ಎನ್ನಿಸುವುದೋ ಏನೋ ಮಾರನೆಯ ದಿನದ ಚಳಿ ಬೆಳಗಲ್ಲಿ ಅಂಗಳದಲ್ಲಿ ರಂಗೋಲಿಯ ಚಿತ್ರಗಳನ್ನ ಬಿಡಿಸುತ್ತ ನವವಧುವು ತಾನೇ ಚಿತ್ರವಾಗುವ ಸೋಜಿಗವೂ ನಡೆಯುತ್ತದೆ. ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ. 

5.ಧೂಳು ಕೆಸರುಗಳು ಅಂಗಳದಾಚೆಗೇ ಉಳಿದಿವೆ.
ಆಯ್ಕೆ:
-ಈ ವಾಕ್ಯವನ್ನು ಶ್ರೀನಿಧಿ ಡಿ ಎಸ್.ರವರು ಬರೆದಿರುವ “ತೂಗುಮಂಚದಲ್ಲಿ ಕೂತು" ಪ್ರಬಂಧ ಸಂಕಲನದಿಂದ ಆಯ್ದ ಎಮ್ಮ ಮನೆಯಂಗಳದಿ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:-ಈ ಮಾತನ್ನು ಲೇಖಕರು ಹೇಳಿದ್ದಾರೆ. ಬದಲಾವಣೆ ಜಗದ ನಿಯಮ. ದೀಪಾವಳಿಯಂದು ತಿರುಗುವ ನೆಲಚಕ್ರಕ್ಕೆ ಸಿಮೆಂಟಿನಂಗಳದಲ್ಲಿ ಹೊಸ ವೇಗ ದಕ್ಕಿದೆ. ಮಳೆ ಬಂದಾಗ ಅಮ್ಮನೀಗ ತಗಡು ಚಪ್ಪರದ ಕೆಳಗೆ ತೋಯದೇ ನಡೆಯುತ್ತಾಳೆ. ಅಂಗಳದ ಕಳೆ ತೆಗೆದೂ ತೆಗೆದೂ ನಡು ಬಾಗಿದ್ದ ಅಜ್ಜನೀಗ ಕೋಲು ಹಿಡಿದು ನೆಟ್ಟಗಾಗಿದ್ದಾನೆ. ಏದುಸಿರು ಬಿಡುತ್ತ ಅಂಗಳ ಚಂದ ಕಾಣಬೇಕೆಂದು ಗುದ್ದಲಿ ಹಿಡಿದು ನೆಲ ಕೆತ್ತುತ್ತಿದ್ದ ಅಪ್ಪ, ಆರಾಮ ಕುರ್ಚಿಯಲ್ಲಿ ಕೂತಿದ್ದಾನೆ. ಅಂಗಳವನ್ನು ಬಂಧಿಸಿದ ಕಾಂಪೌಂಡು ಗೋಡೆಯ ಮೇಲೆ ಆಳಲು ಕೂತು ಬಿಸಿಲು ಕಾಯಿಸಿಕೊಳ್ಳುತ್ತಿದೆ. ಧೂಳು ಕೆಸರುಗಳು ಆದರಾಚೆಗೇ ಉಳಿದಿವೆ ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.
 
  * ಈ ಕೆಳಗಿನ ವಾಕ್ಯಗಳನ್ನು ಸರಿಯಾದ ಕ್ರಮದಲ್ಲಿ ಬರೆಯಿರಿ.

1. ಮದುವೆಗಳ ಅಂಗಳವೇ ಮಂಟಪಗಳಿಗೆ ಮಲೆನಾಡಿನಲ್ಲಿ ಆಶ್ರಯದಾತ ಬಹಳ.

ಉತ್ತರ : ಮಲೆನಾಡಿನಲ್ಲಿ ಬಹಳ ಮದುವೆಗಳ ಮಂಟಪಗಳಿಗೆ ಅಂಗಳವೇ ಆಶ್ರಯದಾತ,

2. ಅಂಗಳಕ್ಕೂ ಜಗದ ಅನ್ವಯಿಸುತ್ತದೆ ಎಂಬ ಬದಲಾವಣೆ ನಿಯಮ,
ಉತ್ತರ ಬದಲಾವಣೆ ಎಂಬ ಜಗದ ನಿಯಮ ಅಂಗಳಕ್ಕೂ ಅನ್ವಯಿಸುತ್ತದೆ. 

3. ಹೊಸ್ತಿಲೇ ಮಳೆಗಾಲದಲ್ಲಿ ಆಸರೆ ದೀಪಕ್ಕೆ ತುಳಸಿಯ
ಉತ್ತರ : ಮಳೆಗಾಲದಲ್ಲಿ ತುಳಸಿಯ ದೀಪಕ್ಕೆ ಹೊಸ್ತಿಲೇ ಆಸರೆ, 

4. ದ್ವಾದಶಿಯ ಅಂಗಳದ್ದೇ ಪಾರುಪತ್ಯ ಮದುವೆಗೆ ಉತ್ಥಾನ ತುಳಸೀ
ಉತ್ತರ : ಉತ್ಥಾನ ದ್ವಾದಶಿಯ ತುಳಸೀ ಮದುವೆಗೆ ಅಂಗಳದ್ದೇ ಪಾರುಪತ್ಯ

ಆ) ಈ ಕೆಳಗಿನ ಪದಗಳಲ್ಲಿ ದೀರ್ಘಸ್ವರಗಳಿರುವ ಅಕ್ಷರಗಳನ್ನು ಗುರುತಿಸಿರಿ.
1. ನೋಡಿಕೊಳ್ಳಲು ಅಂಗಳವೇ ಜಾಗ      
2. ಮನೆಯೇ ಮೊದಲ ಪಾಠಶಾಲೆ,      
3. ಮಳೆಗಾಲದ ಮೋಡಗಳು
4. ದಾಸವಾಳ ಗಾಳಿಗೆ ಬಗ್ಗಿತು,       
5. ದೀಪಾವಳಿಯ ತುಳಸೀ ಪೂಜೆ,
 
* ಈ ಕೆಳಗಿನ ವಾಕ್ಯಗಳಲ್ಲಿ ಒತ್ತಕ್ಷರಗಳನ್ನು ಗುರುತಿಸಿ. 
 
1. ದೀಪಕ್ಕೆ ಹೊಸ್ತಿಲೇ ಆಸರೆ.    
2. ಮದುವೆಗೆ ಅಂಗಳದ್ದೇ ಪಾರುಪತ್ಯ   
3. ಪುಟ್ಟ ದೀಪವು ಅಂಗಳದ ನಕ್ಷತ್ರ
4. ಧುತ್ತೆಂದು ಅಲ್ಲೇ ಮತ್ತೆ ಪ್ರತ್ಯಕ್ಷವಾಯಿತು.    
5. ಪ್ರತಿಫಲಿಸುತ್ತ ಪಚ್ಚಲಿಸುತ್ತಿದೆ.

ಈ) ಮಾದರಿಯಂತೆ ಕೊಟ್ಟಿರುವ ಪದಗಳನ್ನು ಬಿಡಿಸಿ ಬರೆಯಿರಿ. 
 
ಮಾದರಿ: ಕಾಣಬೇಕೆಂದು = ಕಾಣಬೇಕು + ಎಂದು
ಮನೆಯೊಳಕ್ಕಾದರೆ = ಮನೆಯೊಳಕ್ಕೆ + ಆದರೆ               
ಕೈಗಂಟಿಕೊಳ್ಳುವಷ್ಟು = ಕೈಗೆ+ ಆಂಟಿಕೊಳ್ಳುವಷ್ಟು
ಪರಮಾನಂದ=ಪರಮ+ಆನಂದ                             
ಮಲೆನಾಡಿನಲ್ಲಾದರೆ = ಮಲೆನಾಡಿನಲ್ಲಿ + ಆದರೆ
 
  * ಈ ಕೆಳಗಿನ ವಾಕ್ಯಗಳನ್ನು ವಿವರಿಸಿ ಬರೆಯಿರಿ.

1. ಸಾವಿನ ಸೂತಕಕ್ಕೆ ಅಂಗಳವೇ ಆಶ್ರಯ.

ಉತ್ತರ : ಎಮ್ಮ ಮನೆಯಂಗಳದಿ ಎಂಬ ಪಾಠದಲ್ಲಿ ಲೇಖಕರು ಅಂಗಳದ ಮಹತ್ವವನ್ನು ತಿಳಿಸುತ್ತಾ ಮನೆಯ ಒಳಗಡೆ ಪ್ರಾಮುಖ್ಯತೆ ಇರುವಷ್ಟೇ ಮನೆಯ ಹೊರಗಡೆ ಇರುವ ಅಂಗಳವೂ ಶ್ರೇಷ್ಠವಾಗಿದೆ. ಮನೆಯ ಅಂಗಳದ ಶ್ರೇಷ್ಠತೆಯನ್ನು ತಿಳಿಸುತ್ತಾ ಹುಟ್ಟಿನ
ಸಂಭ್ರಮಕ್ಕೆ ಒಳ ಮನೆಯಾದರೆ, ಸಾವಿನ ಸೂತಕಕ್ಕೆ ಅಂಗಳವೇ ಆಶಯ ಎಂದು ಲೇಖಕರು ಹೇಳಿದ್ದಾರೆ. 

2. ಆಡಿಕೆಯ ದಟ್ಟೆಯೇ ಶಿವಧನುಸ್ಸು,
ಉತ್ತರ : ಅಂಗಳದಲ್ಲಿ ಆಡುವ ಆಟಗಳ ಮಹತ್ವವನ್ನು ತಿಳಿಸುತ್ತಾ ಹಲವಾರು ಬಗೆಯ ಕಾಸಿಲ್ಲದ ಆಟಗಳು ಅಂದು ವಿಶೇಷವಾಗಿತ್ತು. ಮನಸ್ಸಿಗೆ ಮುದ ನೀಡುತ್ತಿತ್ತು. ಜೊತೆಗೆ ಕೌಶವ್ಯವೂ ಆಟಗಳಲ್ಲಿ ಗೋಚರವಾಗುತ್ತಿತ್ತು,ಅಡಿಕೆಯ ದಜ್ಜೆಯನ್ನೇ ಶಿವ ಧನಸ್ಸು ಮಾಡಿಕೊಂಡು ಹಲವಾರು ಆಟಗಳನ್ನು ಆಡುತ್ತಿದ್ದ ಬಗೆ ಇಲ್ಲಿ ತಿಳಿದು ಬರುತ್ತದೆಯೆಂದು ಲೇಕಕರು ಹೇಳಿದ್ದಾರೆ. 

3. ಅಂಗಳವೇ ಮೊದಲ ಮೈದಾನ,
ಉತ್ತರ : ಸಣ್ಣಪುಟ್ಟ ಮನೆಗಳನ್ನು ಹೊಂದಿರುವ ಇಂದಿನ ದಿನಗಳಲ್ಲಿ ಮಕ್ಕಳಿಗೆ ಅಂಗಳದ ಮಹತ್ವವನ್ನು ತಿಳಿಸುತ್ತಾ ಆಳು ಮತ್ತು ಅರಸನು ಜೊತೆಗೆ ನಿಂತು ಮಾತನಾಡಲು ಅಂಗಳದಲ್ಲಿ ಮಾತ್ರ ಸಾಧ್ಯ ಮನೆಯೇ ಮೊದಲ ಪಾಠಶಾಲೆಯಾದರೆ ಅಂಗಳವೇ
ಮೊದಲ ಮೈದಾನ, ಪಾಠದಷ್ಟೇ ಆಟವೂ ಮುಖ್ಯ ಎಂಬುದನ್ನು ಲೇಖಕರು ತಿಳಿಸಿದ್ದಾರೆ.

 4. ಮಲೆನಾಡಿನ ಮದುವೆಗಳಿಗೆ ಅಂಗಳವೇ ಆಶ್ರಯದಾತ,
ಉತ್ತರ : ಇಂದು ವಿವಾಹ ಮಂಟಪಗಳಿಗೆ ಆದ್ದೂರಿಯಾಗಿ ಮತ್ತು ಅನಾವಶ್ಯಕವಾಗಿ ಖರ್ಚು ಮಾಡುತ್ತಾರೆ. ಆದರೆ ಮಲೆನಾಡಿನ ಬಹಳ ಮದುವೆ ಮಂಟಪಗಳಿಗೆ ಅಂಗಳದೇ ಆಶಯ, ಸಮಸ್ತ ವ್ಯವಸ್ಥೆಗೂ ಅಂಗಳವೇ ವಿಶೇಷವಾಗಿತ್ತು, ಯಾವುದೇ ಖರ್ಚುವೆಚ್ಚವಿಲ್ಲದೇ ಎಲ್ಲರೂ ಒಗ್ಗೂಡಿ ಸರಳ ರೀತಿಯಲ್ಲಿ ವಿವಾಹ ಮಾಡುತ್ತಿದ್ದರು ಎಂಬುದಾಗಿ ಲೇಖಕರು ಹೇಳಿದ್ದಾರೆ.

You Might Like

Post a Comment

0 Comments