Recent Posts

ಭೀಷ್ಮ ಪ್ರತಿಜ್ಞೆ - Class 9th Second Language Kannnada Textbook Solutions

 ಗದ್ಯ 8 
ಭೀಷ್ಮ ಪ್ರತಿಜ್ಞೆ

ಕವಿ/ಲೇಖಕರ ಪರಿಚಯ
 
* ಆರ್. ಕೃಷ್ಣಶಾಸ್ತ್ರೀ ಇವರು  1890 ರ ಫೆಬ್ರಮ 12 ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಅಂಬಳೆ ಗ್ರಾಮದಲ್ಲಿ ಜನಿಸಿದರು.
* ಇವರು ಶ್ರೀಪತಿಯ ಕಥೆಗಳು, ಕಥಾಮೃತ, ವಚನ ಭಾರತ, ನಿರ್ಮಲ ಭಾರತಿ, ಭಾಸಕವಿ, ಸಂಸ್ಕೃತ ನಾಟಕ, ಸರ್ವಜ್ಞ ಬಂಕಿಮಚಂದ್ರ ಮುಂತಾದ ಶ್ರೇಷ್ಠ ಕೃತಿಗಳನ್ನು ರಚಿಸಿದ್ದಾರೆ.
* ಶ್ರೀಯುತರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

       ಪದಗಳ ಅರ್ಥ 
 
ಅನುರೂಪ – ಯೋಗ್ಯವಾದವನು
ಅರಿಕೆ - ಬಿನ್ನಹ
ಕೊರಗು - ನೋವು, ಸಂಕಟಪಡು.
ದಾಶರಾಜ - ಬೆಸ್ತರವನು: ಸತ್ಯವತಿಯ ತಂದೆ
ಧರ್ಮಾತ್ಮ – ಸದಾಚಾರ ಸಂಪನ್ನ
ಪಂಂಷಂಚಿವೃಷ್ಟಿ - ಹೂವಿನ ಮಳೆ
ಬ್ರಹ್ಮಚಾರಿ - ಮದುವೆ ಆಗದಿರುವವನು
ಶ್ಲಾಗ್ಯ - ಹೊಗಳಿಕೆಗೆ ತಕ್ಕುದಾದ
ಸದೃಶ - ಸಮಾನವಾದ
ಅಪ್ಸರೆ - ದೇವತಾ ಸ್ತ್ರೀ
ಕಳವಳ - ಆತಂಕದ ಮನಃಸ್ಥಿತಿ
ಕೋರಿಕೆ – ಮನವಿ
ದೇವವ್ರತ – ಭೀಷ್ಮನ ಹೆಸರು
ಪಶ್ಚಾತಾಪ– ತಪ್ಪಿನ ಅರಿವು
ಪ್ರತಿಜ್ಞೆ- ಶಪಥ ವಾಗ್ದಾನ.
ಮರ್ತ್ಯರು - ಮಾನವರು
ಸತ್ಯವಂತ – ಸತ್ಯ ಮಾರ್ಗದಲ್ಲಿ ನಡೆಯುವವ
ಹಗೆ - ದ್ವೇಷ

       ಪ್ರಶ್ನೆಗಳು
 
●    ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. 

I ಶಂತನು ಯಾವ ರಾಜ್ಯದ ರಾಜನಾಗಿದ್ದನು?

ಉತ್ತರ:- ಶಂತನು ಹಸ್ತಿನಾಪುರ ರಾಜ್ಯದ ರಾಜನಾಗಿದ್ದನು.

2. ಭೀಷ್ಮನ ಪೂರ್ವದ ಹೆಸರೇನು?
ಉತ್ತರ:- ಭೀಷ್ಮನ ಪೂರ್ವದ ಹೆಸರು ದೇವವ್ರತ. 

3. ಶಂತನು ಯಾವುದಕ್ಕೆ ಹೆಸರುವಾಸಿಯಾಗಿದ್ದನು?
ಉತ್ತರ:- ಶಂತನು ಧರ್ಮಾತ್ಮನೆಂದೂ ಸತ್ಯವಂತನೆಂದೂ ಹೆಸರುಗೊಂಡು ಹಸ್ತಿನಾಪುರದಲ್ಲಿ ರಾಜ್ಯವಾಳುತ್ತಿದ್ದನು.

4. ದೇವವ್ರತನು ತನ್ನ ತಂದೆಯ ಚಿಂತನೆಯ ಕಾರಣವನ್ನು ಯಾರಿಂದ ತಿಳಿದುಕೊಂಡನು?
ಉತ್ತರ:- ದೇವವ್ರತನು ತನ್ನ ತಂದೆಯ ಚಿಂತನೆಯ ಕಾರಣವನ್ನು ವೃದ್ಧ ಮಂತ್ರಿಯ ಹತ್ತಿರ ತಿಳಿದುಕೊಂಡನು.

5. ಶಂತನು ಮದುವೆ ಆಗಲು ಬಯಸಿದ ಬೆಸ್ತರ ಮಗಳ ಹೆಸರೇನು?
ಉತ್ತರ:- ಶಂತನು ಮದುವೆ ಆಗಲು ಬಯಸಿದ ಬೆಸ್ತರ ಮಗಳ ಹೆಸರು ಸತ್ಯವತಿ, 

6. ಶಂತನುವು ಭೀಷ್ಯನನ್ನು ಏನೆಂದು ಹರಸಿದನು?
ಉತ್ತರ:- ಶಂತನುವು ಭೀಷ್ಯನನ್ನು “ನೀನು ಸ್ವಚ್ಛಂದ ಮರಣನಾಗು ನೀನಾಗಿ ಸಾವನ್ನು ಅಪೇಕ್ಷಿಸುವವರೆಗೂ ನಿನಗೆ ಸಾವು ಬರದೆ ಇರಲಿ!" ಎಂದು ಹರಸಿದನು.

●    ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. 

1. ಶಂತನು ರಾಜನಲ್ಲಿದ್ದ ವ್ಯಕ್ತಿತ್ವದ ಗುಣವಿಶೇಷತೆಗಳೇನು?

ಉತ್ತರ:- ಶಂತನು ಧರ್ಮಾತ್ಮನೆಂದೂ ಸತ್ಯವಂತನೆಂದೂ ಹೆಸರುಗೊಂಡು ಹಸ್ತಿನಾಪುರದಲ್ಲಿ ರಾಜ್ಯವಾಳುತ್ತಿದ್ದನು. ಅವನು ನೋಡುವುದಕ್ಕೆ ಚಂದ್ರನಂತಿ ಸುಂದರನಾಗಿದ್ದರೂ, ತೇಜಸ್ಸಿನಲ್ಲಿ ಸೂರ್ಯನಂತಿಯೂ, ವೇಗದಲ್ಲಿ ವಾಯುವಿನುತಿಯ ಇದ್ದನು. ಕೋಪಬಂದಾಗ ಯಮನಂತಿದ್ದರೂ ತಾಳ್ಮೆಯಲ್ಲಿ ಭೂಮಿಯಂತೆ ಇದ್ದನು. 

2. ಶಂತನು ದೇವವ್ರತನನ್ನು ಹಸ್ತಿನಾಪುರದ ಯುವರಾಜನಾಗಿ ಏಕೆ ಮಾಡಿದನು?
ಉತ್ತರ:- ದೇವವ್ರತನೂ (ಭೀಷ) ತಂದೆಯಂತೆಯೇ ರೂಪವಂತನಾಗಿ ನಡೆನುಡಿಗಳಲ್ಲಿ ಅವನನ್ನೇ ಹೋಲುತ್ತ, ಅವನಂತೆಯೇ ವಿದ್ಯಾವಂತನೂ ಶಸ್ತ್ರಾಸ್ತ್ರ ನಿಪುಣನೂ ಬಲಶಾಲಿಯೂ ಸತ್ವಶಾಲಿಯೂ ಆದನು. ಆಗ ಅವನನ್ನು ಶಂತನುವು ಯುವರಾಜನಾಗಿ ಮಾಡಿದನು.

3. ಶಂತನು ಮತ್ತು ಬೆಸ್ತರ ಹುಡುಗಿಯ ಜೊತೆ ನಡೆದ ಸಂಭಾಷಣೆ ಏನು?
ಉತ್ತರ:- ಶಂತನುವು ಬೆಸ್ತರ ಹಡುಗಿಯನ್ನು ಕಂಡು “ನೀನು ಯಾರು? ಇಲ್ಲಿ ಏನು ಮಾಡುತ್ತಿರುವೆ?” ಎಂದು ಪ್ರಶ್ನೆ ಮಾಡಿದನು. ಅದಕ್ಕೆ ಅವಳು “ನಾನು ಬೆಸ್ತರ ಅರಸನ ಮಗಳು: ಧರ್ಮಾರ್ಥವಾಗಿ ದೋಣಿ ನಡೆಸುತ್ತೇನೆ. ಇದು ನಮ್ಮ ತಂದೆ ನನಗೆ ವಹಿಸಿಕೊಟ್ಟಿರುವ ಕೆಲಸ” ಎಂದಳು.

4. ಶಂತನು 'ಮಗಳನ್ನು ಮದುವೆ ಮಾಡಿಕೊಡಿ' ಎಂದು ಕೇಳಿದಾಗ ಬೆಸ್ತರವನು ಏನೆಂದು ಹೇಳಿದನು?  
ಉತ್ತರ:- ಅವನು “ಮಹಾರಾಜ ಹೆಣ್ಣಾಗಿ ಹುಟ್ಟಿದ ಮೇಲೆ ಅವಳನ್ನು ಒಬ್ಬ ವರನಿಗೆ ಕೊಟ್ಟೇಕೊಡಬೇಕು. ನೀನು ಅವಳನ್ನು ನಿನ್ನ ಧರ್ಮಪತ್ನಿಯಾಗಿ ಮಾಡಿಕೊಳ್ಳುವೆಯಾದರೆ ಪರಮ ಸಂತೋಷ. ನಿನಗೆ ಸದೃಶನಾದ ವರನು ಮತ್ತಾರು ಸಿಕ್ಕಿಯಾನು ಆದರೆ ನನ್ನ ಮನಸ್ಸಿನಲ್ಲಿ ಒಂದು ಕೋರಿಕೆ ಇದೆ. ಅದನ್ನು ನೆರವೇರಿಸುವುದಾಗಿ ನೀನು ಪ್ರತಿಜ್ಞೆ ಮಾಡುವುದಾದರೆ ಆಗಬಹುದು ನೀನು ಸತ್ಯವಂತ, ಆಡಿದ ಮಾತನ್ನು ನಡೆಸುತ್ತೀಯ ಎಂದು ಹೇಳಿದನು.

5. ಬೆಸ್ತರವನು ಶಂತನುನನ್ನು ಏನೆಂದು ಕೋರಿದನು?
ಉತ್ತರ:- ಯಮುನಾ ನದಿ ಹತ್ತಿರ ಕಾಡಿನಲ್ಲಿ ಬೇಟೆಗೆಂದು ಹೋದ ಶಂತನು ಒಬ್ಬ ಬೆಸ್ತರ ಹುಡುಗಿಯನ್ನು ಕಂಡು ವಿವಾಹವಾಗುವಂತೆ ಕೇಳಿದನು. ಆಗ ಅವಳು ತನ್ನ ತಂದೆ ಒಪ್ಪಿಗೆ ನೀಡಿದರೆ ಮದುವೆಯಾಗುವುದಾಗಿ ತಿಳಿಸಿದಳು. ಶಂತನು ಬೆಸ್ತರ ಅರಸನ ಬಳಿ ಹೋಗಿ ಮದುವೆಯ ವಿಚಾರವನ್ನು ಪ್ರಸ್ತಾಪಿಸಿದನು. ಆಗ ದಾಶರಾಜನು “ಮಹಾರಾಜ! ನಿನಗೆ ಇವಳ ಹೊಟ್ಟೆಯಲ್ಲಿ ಹುಟ್ಟುವ ಮಗನು ನಿನ್ನ ಕಾಲಾನಂತರ ರಾಜನಾಗಬೇಕು: ಇದೇ ನನ್ನ ಕೋರಿಕೆ!” ಎಂದನು.

 6. ಚಿಂತಾಮಗ್ನನಾಗಿದ್ದ ಶಂತನುವನ್ನು ದೇವವ್ರತನು ಏನೆಂದು ಕೇಳಿದನು?
ಉತ್ತರ:- ಚಿಂತಾಮಗ್ನನಾಗಿದ್ದ ತಂದೆಯನ್ನು ಕಂಡು ದೇವವ್ರತನು "ಅಪ್ಪಾ ನಿನಗೆ ಎಲ್ಲವೂ ಕ್ಷೇಮವಾಗಿದೆ ರಾಜರು ವಿಧೇಯರಾಗಿದ್ದಾರೆ. ಹೀಗಿದ್ದರೂ ಏಕೆ ಏನೋ ಯೋಚನೆ ಮಾಡುತ್ತ ಕೊರಗುತ್ತಿದ್ದೀಯೆ? ಯಾರೊಡನೆಯೂ ಮಾತನಾಡುವುದಿಲ್ಲ?" ಎಂದು ಕೇಳಿದನು.

7. ಶಂತನು ದೇವವ್ರತನಿಗೆ ತನ್ನ ಚಿಂತನೆಗೆ ಕಾರಣ ಏನೆಂದು ತಿಳಿಸಿದನು?
ಉತ್ತರ:- ಶಂತನುವು “ಮಗು! ನಮ್ಮ ಈ ಹಿರಿಯಮನೆತನಕ್ಕೆ ನೀನು ಒಬ್ಬನೇ ಮಗ; ಮನುಷ್ಯರು ಮರ್ತ್ಯರು, ನಿತ್ಯರಲ್ಲ. ನಿನಗೇನಾದರೂ ವಿಪತ್ತು ಸಂಭವಿಸಿದರೆ ನಮ್ಮ ಕುಲವು ನಿಂತುಹೋಗುತ್ತದೆ: ನೀನೇನೋ ಒಬ್ಬನಾದರೂ ನೂರು ಮಕ್ಕಳಿಗಿಂತ ಹೆಚ್ಚಾದವನೇಯ: ನನಗೂ ಸುಮ್ಮಸುಮ್ಮನೆ ಮತ್ತೆ ಹೆಂಡತಿಯನ್ನು ಕಟ್ಟಿಕೊಳ್ಳುವುದಕ್ಕೆ ಇಷ್ಟವಿಲ್ಲ: ಸಂತತಿ ನಷ್ಟವಾಗಬಾರದೆಂಬುದಷ್ಟೇ ನನ್ನ ಕೋರಿಕೆ; ನೀನು ಎಲ್ಲಾದರೂ ಕ್ಷೇಮವಾಗಿರು ಮಗು! ಆದರೆ ಒಬ್ಬ ಮಗ ಮಗನಲ್ಲ' ಎಂದು ಧರ್ಮಬಲ್ಲವರು ಹೇಳುತ್ತಾರೆ. ನೀನೋ ಶೂರ: ಅವಮರ್ಯಾದೆಯನ್ನು ಸಹಿಸದವನು; ಮೂರು ಹೊತ್ತೂ ಶಸ್ತ್ರಗಳಲ್ಲಿಯೇ ಕೈ ಇಟ್ಟುಕೊಂಡಿರುವವನು, ಇಂಥವನಿಗೆ ಶಸ್ತ್ರದಿಂದಲೇ ಕೊನೆ. ಆದ್ದರಿಂದ ನೀನೇನಾದರೂ ಶಾಂತನಾಗಿ ಬಿಟ್ಟರೆ ಏನುಗತಿ ಎಂದು ಕಳವಳಕ್ಕೆ ಸಿಕ್ಕಿದ್ದೇನೆ. ಇದೇ ಮಗು ನನ್ನ ಚಿಂತೆಗೆ ಕಾರಣ!" ಎಂದು ಉತ್ತರಕೊಟ್ಟನು. 

8. ದಾಶರಾಜನು ದೇವವ್ರತನನ್ನು ಉದ್ದೇಶಿಸಿ ಏನು ಹೇಳಿದನು?
ಉತ್ತರ:- ದೇವವ್ರತನನ್ನು ಕುರಿತು "ಅಯ್ಯಾ ಇಂಥ ಶ್ಲಾನ್ಯವಾದ ಸಂಬಂಧ ಒದಗಿ ಬಂದಿರುವಾಗ ಅದನ್ನು ಕಳೆದುಕೊಂಡರೆ ಯಾರೇ ಆದರೂ ಪಶ್ಚಾತ್ತಾಪ ಪಡಬೇಕಾಗುವುದು. ನಿಮ್ಮಂಥ ಗುಣಶಾಲಿಗಳು ಮತ್ತಾರಿದ್ದಾರೆ? ಆದರೆ ಹೆಣ್ಣಿನ ತಂದೆಯಾದ್ದರಿಂದ ಒಂದು ವಿಷಯವನ್ನು ಹೇಳಬೇಕೆನ್ನಿಸುತ್ತದೆ. ಮುಂದೆ ಇದು ದೊಡ್ಡ ಹಗೆತನಕ್ಕೆ ಕಾರಣವಾದೀತೇನೋ ಎಂಬುದೊಂದೇ ನನಗೆ ಹೆದರಿಕೆ, ನಿನಗೆ ಯಾರ ಮೇಲಾದರೂ ಕೋಪಬಂದಿತೆಂದರೆ ಅವನು ಸುಖವಾಗಿ ಬಾಳಲಾರ, ಕೊಟ್ಟು ತಂದು ಮಾಡುವುದರಲ್ಲಿ ಇದೊಂದೇ ನನಗೆ ಕಾಣುವ ದೋಷ. ಇನ್ನೇನೂ ಇಲ್ಲ” ಎಂದನು.

9. ದಾಶರಾಜನು ದೇವವ್ರತನನ್ನು ಎರಡನೇ ಬಾರಿ ಏನೆಂದು ಕೋರಿದನು?
ಉತ್ತರ:- ಬೆಸ್ತನು ಮತ್ತೆ “ರಾಜ್ಯವಿಚಾರದಲ್ಲಿ ಇಷ್ಟು ಕಠಿಣವಾದ ಪ್ರತಿಜ್ಞೆ ಮಾಡಿ ತಂದೆಗೆ ಮದುವೆ ಮಾಡಿಸುವುದಕ್ಕೂ ಈ ಹೆಣ್ಣನ್ನು ಕೊಡಿಸುವುದಕ್ಕೂ ಧರ್ಮಾತ್ಮನಾದ ನೀನು ಅಧಿಕಾರವುಳ್ಳವನಾಗಿದ್ದೀಯೆ; ಆದರೆ ಇನ್ನೊಂದು ಮಾತಿದೆ. ಹೆಣ್ಣಿನ ತಂದೆ ಅದನ್ನು ಆಡುವುದು ಸ್ವಭಾವ ರಾಜರ ಮುಂದೆ ಈಗ ನೀನು ಮಾಡಿದ ಪ್ರತಿಜ್ಞೆ ನಿನಗೆ ಅನುರೂಪವಾದದ್ದೇಯ. ಅದು ನಡೆಯುತ್ತದೆ. ಅದರಲ್ಲೇನೂ ಸಂಶಯವಿಲ್ಲ. ಆದರೆ ನಿನ್ನ ಮಗ ಸುಮ್ಮನಿರುತ್ತಾನೋ? ಆ ವಿಚಾರದಲ್ಲಿ ನನಗೆ ಸಂಶಯ!" ಎಂದನು.

10, ದೇವವ್ರತನು ದಾಶರಾಜನ ಮುಂದೆ ಮಾಡಿದ ಪ್ರತಿಭೆಗಳಾವುವು?
ಉತ್ತರ:- “ಇಗೋ ನನ್ನ ಅಭಿಮತವನ್ನು ಹೇಳುತ್ತೇನೆ ಕೇಳು, ಇಂಥ ಮಾತನ್ನು ಹಿಂದೆ ಹುಟ್ಟಿದವನ್ನು ಮುಂದೆ ಹುಟ್ಟುವವನು. ಯಾವನೂ ಹೇಳಲಾರ, ನೀನು ಸೂಚಿಸಿದಂತೆಯೇ ನಡೆಸಿಕೊಡುತ್ತೇನೆ ಈಕೆಯಲ್ಲಿ ಮುಂದೆ ಹುಟ್ಟುವ ಮಗನು ನಮಗೆ ರಾಜನಾಗುತ್ತಾನೆ. ಇದು ಸತ್ಯ!" ಎಂದನು.

●    ಈ ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

1. ಶಂತನುವಿಗೆ ಒದಗಿ ಬಂದ ಚಿಂತೆಯನ್ನು ಭೀಷನು ಹೇಗೆ ಪರಿಹರಿಸಿದನು?

ಉತ್ತರ:- ದೇವವ್ರತನು ಮಹಾಬುದ್ಧಿಶಾಲಿ; ಆದ್ದರಿಂದ ಅರ್ಥವೇನು ಎಂದು ಯೋಚಿಸುತ್ತ ತನ್ನ ತಂದೆಗೆ ಆಪ್ತನಾಗಿದ್ದ ವೃದ್ಧ ಮಂತ್ರಿಯ ಹತ್ತಿರಕ್ಕೆ ಹೋಗಿ ಅವನನ್ನು ತನ್ನ ತಂದೆಯ ಚಿಂತೆಗೆ ಕಾರಣವೇನೆಂದು ಕೇಳಿದನು. ಅವನಿಂದ ನಿಜವಾದ ಸಂಗತಿ ತಿಳಿಯಲು ದೇವವ್ರತನು ಹಿರಿಯರಾಗಿದ್ದ ಕ್ಷತ್ರಿಯರನ್ನು ಕರೆದುಕೊಂಡು ದಾಶರಾಜನಲ್ಲಿಗೆ ಹೋಗಿ ತನ್ನ ತಂದೆಗೆ ಹೆಣ್ಣು ಕೊಡಬೇಕೆಂದು ಕೇಳಿದನು. ದಾಶರಾಜನು ಅವನನ್ನು ಆದರದಿಂದ ಬರಮಾಡಿಕೊಂಡು ಸತ್ಕರಿಸಿಕುಳ್ಳಿರಿಸಿ, ದೇವವ್ರತನನ್ನು ಕುರಿತು "ಅಯ್ಯಾ ಇಂಥ ಶ್ಲಾನ್ಯವಾದ ಸಂಬಂಧ ಒದಗಿ ಬಂದಿರುವಾಗ ಅದನ್ನು ಕಳೆದುಕೊಂಡರೆ ಯಾರೇ ಆದರೂ ಪಶ್ಚಾತ್ತಾಪ ಪಡಬೇಕಾಗುವುದು, ನಿಮ್ಮಂಥ ಗುಣಶಾಲಿಗಳು ಮತ್ತಾರಿದ್ದಾರೆ? ಆದರೆ ಹೆಣ್ಣಿನ ತಂದೆಯಾದ್ದರಿಂದ ಒಂದು ವಿಷತುವನ್ನು ಹೇಳಬೇಕೆನ್ನಿಸುತ್ತದೆ. ಮುಂದೆ ಇದು ದೊಡ್ಡ ಹಗೆತನಕ್ಕೆ ಕಾರಣವಾದೀತೇನೋ ಎಂಬುದೊಂದೇ ನನಗೆ ಹೆದರಿಕೆ, ನಿನಗೆ ಯಾರ ಮೇಲಾದರೂ ಕೋಪಬಂದಿತೆಂದರೆ ಅವನು ಸುಖವಾಗಿ ಬಾಳಲಾರ ಕೊಟ್ಟು ತ೦ದು ಮಾಡುವುದರಲ್ಲಿ ಇದೊಂದೇ ನನಗೆ ಕಾಣುವ ದೋಷ. ಇನ್ನೇನೂ ಇಲ್ಲ" ಎಂದನು.
ಈ ಮಾತನ್ನು ಕೇಳಿದ ದೇವವ್ರತನು “ಇಗೋ ನನ್ನ ಅಭಿಮತವನ್ನು ಹೇಳುತ್ತೇನೆ ಕೇಳು, ಇಂಥ ಮಾತನ್ನು ಹಿಂದೆ ಹುಟ್ಟಿದವನು ಮುಂದೆ ಹುಟ್ಟುವವನು ಯಾವನೂ ಹೇಳಲಾರ. ನೀನು ಸೂಚಿಸಿದಂತೆಯೇ ನಡೆಸಿಕೊಡುತ್ತೇನೆ. ಈಕೆಯಲ್ಲಿ ಮುಂದೆ ಹುಟ್ಟುವ ಮಗನು ನಮಗೆ ರಾಜನಾಗುತ್ತಾನೆ. ಇದು ಸತ್ತು" ಎಂದನು. ಬೆಸ್ತನು ಮತ್ತೆ “ರಾಜ್ಯ ವಿಚಾರದಲ್ಲಿ ಇಷ್ಟು ಕಠಿಣವಾದ ಪ್ರತಿಜ್ಞೆ ಮಾಡಿ ತಂದೆಗೆ ಮದುವೆ ಮಾಡಿಸುವುದಕ್ಕೂ ಈ ಹೆಣ್ಣನ್ನು ಕೊಡಿಸುವುದಕ್ಕೂ ಧರ್ಮಾತ್ಮನಾದ ನೀನು ಅಧಿಕಾರವುಳ್ಳವನಾಗಿದ್ದೀಯೆ; ಆದರೆ ಇನ್ನೊಂದು ಮಾತಿದೆ. ಹೆಣ್ಣಿನ ತಂದೆ ಅದನ್ನು ಆಡುವುದು ಸ್ವಭಾವ, ರಾಜರ ಮುಂದೆ ಈಗ ನೀನು ಮಾಡಿದ ಪ್ರತಿಜ್ಞೆ ನಿನಗೆ ಅನುರೂಪವಾದದ್ದೇಯೆ, ಅದು ನಡೆಯುತ್ತದೆ. ಅದರಲ್ಲೇನೂ ಸಂಶಯವಿಲ್ಲ. ಆದರೆ ನಿನ್ನ ಮಗ ಸುಮ್ಮನಿರುತ್ತಾನೋ? ಆ ವಿಚಾರದಲ್ಲಿ ನನಗೆ ಸಂಶಯ!" ಎಂದನು, ಅವನ ಅಭಿಪ್ರಾಯವನ್ನು ತಿಳಿದು ದೇವವ್ರತನು " ನಾನು ಬ್ರಹ್ಮಚಾರಿಯಾಗಿಯೇ ಇರುತ್ತೇನೆ.ಮಕ್ಕಳಿಲ್ಲದಿದ್ದರೂ ನನಗೆ ಉತ್ತಮವಾದ ಲೋಕ ದೊರೆಯುತ್ತದೆ" ಎಂದು ಪ್ರತಿಜ್ಞೆ ಮಾಡಿದನು. ಅನಂತರ ಭೀಷ್ಮನು ಸತ್ಯವತಿ ಎಂಬ ಆ ಹುಡುಗಿಯನ್ನು ಕುರಿತು "ಬಾ ತಾಯಿ! ರಥವನ್ನು ಹತ್ತು ನಮ್ಮ ಮನೆಗೆ ಹೋಗೋಣ" ಎಂದು ರಥ ಹತ್ತಿಸಿ ಹಸ್ತಿನಾಮರಕ್ಕೆ ಕರೆದುಕೊಂಡು ಹೋಗಿ ತಂದೆಗೆ ಎಲ್ಲವನ್ನೂ ಭಿನ್ನವಿಸಿದನು.

2. ಭೀಷನು ಜನ್ಮತಾಳಿದ ಕಥೆಯನ್ನು ವಿವರಿಸಿ?
ಉತ್ತರ:- ಭರತವಂಶದಲ್ಲಿ ಶಂತನುವೆಂಬ ಪ್ರಸಿದ್ಧನಾದ ರಾಜನಿದ್ದನು. ಹೀಗೆ ಅವನು ಒಂದು ದಿನ ಗಂಗಾನದಿಯ ತೀರದಲ್ಲಿ ಹೋಗುತ್ತಿರುವಾಗ, ಪರಮಸುಂದುಯೂ ರತ್ನಾಭರಣಭೂಷಿತಳೂ ದಿವ್ಯಾಂಬರಧರಳೂ ಆದ ಒಬ್ಬ ಹೆಂಗಸನ್ನು ಕಂಡು, ಅವಳ ರೂಪಸಂಪತ್ತಿನಿಂದ ಬೆರಗಾಗಿ ಹೋದನು. ಅವಳೂ ಹಾಗೆಯೇ ಅವನನ್ನು ಮೆಚ್ಚಿಕೊಂಡಳು. ಒಬ್ಬರನ್ನೊಬ್ಬರು ಎಷ್ಟು ಹೊತ್ತು ನೋಡಿದರೂ ಕಣ್ಣು ತಣಿಯುವು. ಶಂತನುವೇ ಮೊದಲು ಅನುನಯದ ರೀತಿಯಿಂದ ಮಾತನಾಡಿಸಿ “ನೀನು
ಯಾರು ಸುಂದರಿ? ದೇವಿಯೋ ದಾನವಿಯೋ ಗಂಧರ್ವಳೋ ಅಪ್ಸರಳೋ ಯಕ್ಷಿಯೋ ಮಾನುಷಿಯೋ? ಯಾರಾದರೂ ಆಗಿರು; ನನ್ನ ಹೆಂಡತಿಯಾಗು!" ಎಂದನು. ಮಂದಹಾಸದಿಂದೊಡಗೂಡಿದ ಮೃದುಮಧುರವಾದ ಅವನ ಮಾತನ್ನು ಕೇಳಿ ಆಕೆಯು “ಆಗಲಿ, ಮಹಾರಾಜ ನಿನ್ನ ರಾಣಿಯಾಗಲು ಒಪ್ಪುತ್ತೇನೆ. ಆದರೆ ಒಂದು ಕಟ್ಟುಪಾಡಿಗೆ ನೀನು ಒಪ್ಪಬೇಕು. ಶಂತನುವು ಪರಮ ಸಂತೋಷದಿಂದ ಒಪ್ಪಿಕೊಂಡು ಅವಳಲ್ಲಿ ಯಥೇಚ್ಛವಾದ ಸೌಖ್ಯವನ್ನು ಅನುಭವಿಸುತ್ತ ಇದ್ದನು. ಅವಳು ಏನು ಮಾಡಲಿ, ಅಡ್ಡಿ ಬರುತ್ತಿರಲಿಲ್ಲ. ಆಕೆಯ ಹೊಟ್ಟೆಯಲ್ಲಿ ಒಬ್ಬರಾದ ಮೇಲೆ ಒಬ್ಬರಂತೆ ಎಂಟು ಜನ ಗಂಡು ಮಕ್ಕಳಾದರು; ಅವರನ್ನು ಅವಳು ಹುಟ್ಟುತ್ತಿದ್ದ ಹಾಗೆಯೇ ಗಂಗೆಯಲ್ಲಿ ಮುಳುಗಿಸಿ ಬಿಡುವಳು: ಶಂತನುವಿಗೆ ಅದನ್ನು ನೋಡಿ ತುಂಬ ಸಂಕಟವಾಗುವುದು; ಆದರೆ ಅವಳಲ್ಲಿ ಬಿಟ್ಟು ಹೊರಟುಹೋಗುವಳೋ ಎಂದು ಹೆದರಿ ಸುಮ್ಮನಿರುತ್ತಿದ್ದನು. ಕೊನೆಗೆ ಎಂಟನೆಯ ಮಗುವು ಹುಟ್ಟಿದಾಗ ಅವನು ಸುಮ್ಮನಿರಲಾರದೆ, ದುಃಖ ಉಕ್ಕಿ ಬಂದು, ಮಗುವಿನ ಮೇಲೆ ಆಸೆಯಾಗಿ, “ತಡೆ ಪುತ್ರಘಾತಿನಿ ಅದನ್ನು ಕೊಲ್ಲಬೇಡ ನೀನು ಯಾರು? ಯಾರ ಮಗಳು? ಏಕೆ ಹೀಗೆ ಮಕ್ಕಳನ್ನು ಕೊಂದು ಕೊಂದು ಮಹಾಪಾಪ ಕಟ್ಟಿಕೊಳ್ಳುತ್ತೀಯೆ?" ಎಂದು ಕೇಳಿದನು. ಆಕೆ, “ಮಹಾರಾಜ, ನಿನಗೆ ಮಗನ ಮೇಲೆ ಆಸೆಯಾಯಿತಲ್ಲವೆ? ಆಗಲಿ, ನಿನ್ನ ಮಗನನ್ನು ಕೊಲ್ಲುವುದಿಲ್ಲ. ಆದರೆ ನಮ್ಮ ಕಟ್ಟುಪಾಡಿನಂತೆ ನಿನ್ನೊಡನೆ ಬಾಳುವೆಯು ಇಂದಿಗೆ ಮುಗಿಯಿತು; ನಾನು ಗಂಗೆ, ಜಗ್ಗುವಿನ ಮಗಳು; ಈ ಮಕ್ಕಳು ಅಷ್ಟವಸುಗಳು: ವಸಿಷ್ಠ ಶಾಪದಿಂದ ಮನುಷ್ಯ ಜನ್ಮವನ್ನು ಪಡೆದಿದ್ದರು: ನಾನು ಅವರಿಗೆ ಮಾತುಕೊಟ್ಟಿದ್ದಂತೆ ಹುಟ್ಟು ಹುಟ್ಟುತ್ತಿದ್ದ ಹಾಗೆ ಅವರನ್ನು ಈ ಮನುಷ್ಯ ಜನ್ಮದಿಂದ ಬಿಡುಗಡೆ ಮಾಡಿದೆ. ನಿನಗೆ ಮಂಗಳವಾಗಲಿ. ನಾನು ಹೋಗಿ ಬರುತ್ತೇನೆ: ಮಹಾವ್ರತನಾದ ಈ ಮಗನನ್ನು ಕಾಪಾಡಿಕೋ" ಎಂದು ಹೇಳಿ ಹೊರಟುಹೋದಳು, ಆ ಕೊನೆಯ ಮಗುವೆ ಭೀಷ್ಮನು

●    ಈ ಸಂದರ್ಭದೊಡನೆ ವಿವರಿಸಿ.

1. ನಿಮ್ಮಂತ ಗುಣಶಾಲಿಗಳು ಮತ್ತಾರಿದ್ದಾರೆ?
ಆಯ್ಕೆ:
- ಈ ವಾಕ್ಯವನ್ನು "ಎ. ಆರ್. ಕೃಷ್ಣಶಾಸ್ತ್ರೀ" ಅವರು ಬರೆದಿರುವ "ಭೀಷ್ಮ ಪ್ರತಿಜ್ಞೆ" ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ದಾಶರಾಜನು ದೇವವ್ರತನಿಗೆ ಹೇಳಿದ್ದಾನೆ.
ಸ್ವಾರಸ್ಯ:- ದೇವವ್ರತನು ಹಿರಿಯರಾಗಿದ್ದ ಕ್ಷತ್ರಿಯರನ್ನು ಕರೆದುಕೊಂಡು ದಾಶರಾಜನಲ್ಲಿಗೆ ಹೋಗಿ ತನ್ನ ತಂದೆಗೆ ಹೆಣ್ಣು ಕೊಡಬೇಕೆಂದು ಕೇಳಿದನು. ದಾಶರಾಜನು ಅವರನ್ನು ಆದರದಿಂದ ಬರಮಾಡಿಕೊಂಡು ಸತ್ಕರಿಸಿ “ಅಯ್ಯಾ ಇಂಥ ಶ್ಲಾನ್ಯವಾದ ಸಂಬಂಧ ಒದಗಿ ಬಂದಿರುವಾಗ ಅದನ್ನು ಕಳೆದುಕೊಂಡರೆ ಯಾರೇ ಆದರೂ ಪಶ್ಚಾತ್ತಾಪ ಪಡಬೇಕಾಗುವುದು ಎಂದು ಹೇಳುವಾಗ ಈ ಮಾತು ಬಂದಿದೆ.

2. ಒಬ್ಬ ಮಗ ಮಗನಲ್ಲ
ಆಯ್ಕೆ
:- ಈ ವಾಕ್ಯವನ್ನು "ಎ. ಆರ್. ಕೃಷ್ಣಶಾಸ್ತ್ರೀ" ಅವರು ಬರೆದಿರುವ "ಭೀಷ್ಮ ಪ್ರತಿಜ್ಞೆ" ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಶಂತನು ಮಹಾರಾಜನು ತನ್ನ ಮಗನಾದ ದೇವವ್ರತನಿಗೆ ಹೇಳಿದನು.
ಸ್ವಾರಸ್ಯ:- ದೇವವ್ರತನು ತನ್ನ ತಂದೆಯ ಚಿಂತೆಗೆ ಕಾರಣವನ್ನು ಕೇಳಿದಾಗ, ಶಂತನುವು "ಮಗು ನಮ್ಮ ಈ ಹಿರಿಯ ಮನೆತನಕ್ಕೆ ನೀನು ಒಬ್ಬನೇ ಮಗ; ಮನುಷ್ಯರು ಮರ್ತ್ಯರು, ನಿತ್ಯರಲ್ಲ. ನಿನಗೇನಾದರೂ ವಿಪತ್ತು ಸಂಭವಿಸಿದರೆ ನಮ್ಮ ಕುಲವು ನಿಂತುಹೋಗುತ್ತದೆ ಎಂದು ಹೇಳುವಾಗ ಈ ಮಾತು ವ್ಯಕ್ತವಾಗಿದೆ.

3. ಮಕ್ಕಳಿಲ್ಲದಿದ್ದರೂ ನನಗೆ ಉತ್ತಮವಾದ ಲೋಕ ದೊರೆಯುತ್ತದೆ.
ಆಯ್ಕೆ:-
ಈ ವಾಕ್ಯವನ್ನು "ಎ. ಆರ್. ಕೃಷ್ಣಶಾಸ್ತ್ರೀ" ಅವರು ಬರೆದಿರುವ "ಭೀಷ್ಮ ಪ್ರತಿಜ್ಞೆ" ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ದೇವವ್ರತನು ದಾಶರಾಜನಿಗೆ ಹೇಳಿದ್ದಾನೆ.
ಸ್ವಾರಸ್ಯ:- ತನ್ನ ತಂದೆಯಾದ ಶಂತನುವಿಗೆ ದಾಶರಾಜನ ಮಗಳನ್ನು ಮದುವೆ ಮಾಡಿಕೊಡಲು ಕೇಳಿದಾಗ ದಾಶರಾಜನ ಪ್ರಶ್ನೆಗಳಿಗೆ ಉತ್ತರಿಸುತ್ತಾ ದೇವವ್ರತನು“ನಾನುಬ್ರಹ್ಮಚಾರಿಯಾಗಿಯೇಇರುತ್ತೇನೆ” ಎಂದು ಹೇಳುವಾಗ ಈ ಮೇಲಿನ ಮಾತು ವ್ಯಕ್ತವಾಗಿದೆ.

4. ನೀನಾಗಿ ಸಾವನ್ನು ಅಪೇಕ್ಷಿಸುವವರೆಗೂ ನಿನಗೆ ಸಾವು ಬರದೆ ಇರಲಿ.
ಆಯ್ಕೆ:-
ಈ ವಾಕ್ಯವನ್ನು "ಎ. ಆರ್. ಕೃಷ್ಣಶಾಸ್ತ್ರೀ" ಅವರು ಬರೆದಿರುವ "ಭೀಷ್ಮ ಪ್ರತಿಜ್ಞೆ" ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:-  ಈ ಮಾತನ್ನು ಶಂತನುವು ದೇವವ್ರತನಿಗೆ ಹೇಳುತ್ತಾನೆ.
ಸ್ವಾರಸ್ಯ:- ಶಂತನು ಚಿಂತೆ ಮಾಡುತ್ತಿದ್ದ ವಿಷಯವನ್ನು ಭೀಷ್ಮನು ಪರಿಹರಿಸಿ ಸತ್ಯವತಿಯನ್ನು ಹಸ್ತಿನಾಪುರಕ್ಕೆ ಕರೆದುಕೊಂಡು ಬಂದು ಶಂತನುವಿಗೆ ಎಲ್ಲವನ್ನು ವಿವರಿಸುತ್ತಾನೆ. ನಂತರ ರಾಜರೆಲ್ಲಾ ಅವನನ್ನು ಮೆಚ್ಚಿ ಇವನು 'ಭೀಷ್ಮನೇ' ಎಂದು ಹೊಗಳಿದರು. ಶಂತನು ಅವನನ್ನು ಮೆಚ್ಚಿ ಅವನಿಗೆ ವರವನ್ನು ಕೊಡುವಾಗಈ ಮಾತು ಬಂದಿದೆ.

             ಭಾಷಾಭ್ಯಾಸ 

ಅ) ಕೆಳಗಿನ ಪದಗಳನ್ನು ಬಿಡಿಸಿ, ಸಂಧಿ ಹೆಸರಿಸಿರಿ.

1.ರಾಜ್ಯವಾಳು=ರಾಜ್ಯ+ಆಳು-ಸವರ್ಣದೀರ್ಘಸಂಧಿ
2.ಗೀತೋಪದೇಶ= ಗೀತ + ಉಪದೇಶ- ಗುಣಸಂಧಿ
3.ಧರ್ಮಾರ್ಥ=ಧರ್ಮ+ಅರ್ಥ-ಸವರ್ಣದೀರ್ಘಸಂಧಿ
4 ಆಸೆಯಾಗು = ಆಸೆ + ಆಗು - ಆಗಮಸಂಧಿ
5. ಶಸ್ತ್ರಾಸ್ತ್ರ = ಶಸ್ತ್ರ + ಅಸ್ತ್ರ -ಸವರ್ಣದೀರ್ಘಸಂಧಿ 
6.ದಿವ್ಯಾಂಬರ=ದಿವ್ಯ+ಅಂಬರ-ಸವರ್ಣದೀರ್ಘಸಂಧಿ

ಆ) ಮಾದುಯಂತೆ ಕೂಡಿಸಿ ಬರೆಯಿರಿ,
ಮಾದರಿ :

ಬೇಟೆ + ಆಡು = ಬೇಟೆಯಾಡು,
ಕ್ಷೇಮ + ಆಗು = ಕ್ಷೇಮವಾಗು
ಕಾಲ + ಅನಂತರ = ಕಾಲಾನಂತರ
ರೂಪ + ಅಂತರ = ರೂಪಾಂತರ,
ತಂದೆ + ಅನ್ನು = ತಂದೆಯನ್ನು

2) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಬರೆಯಿರಿ.
ಸದೃಶ X ಅಸದೃಶ,
ವಿದ್ಯಾವಂತ X ಅವಿದ್ಯಾವಂತ,
ಸುಖ X ದುಃಖ
ಹಿಂದೆ X ಮುಂದೆ,
ಹಿರಿಯX ಕಿರಿಯ

ಉ) ಕೆಳಗಿನ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ.
ಕಾಡು - ಅರಣ್ಯ
ತಂದೆ- ಅಪ್ಪ
ಮಗ- ಕುವರ
ಸಾವು-ಮರಣ
ಸತ್ಯ- ನಿಜ
You Might Like

Post a Comment

0 Comments