Recent Posts

ಬಿಲ್ಲ ಹಬ್ಬ - ೭ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 ಬಿಲ್ಲ ಹಬ್ಬ

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ ,

 1 . ಕೃಷ್ಣ ಯಾರ ಸೊಂಟವನ್ನು ಮುರಿದನು ?
 ಉತ್ತರ : ಕೃಷ್ಣನು ಶಕಟನ ಸೊಂಟವನ್ನು ಮುರಿದನು.
 
 2 . ಕೃಷ್ಣನ ಕೈಯಲ್ಲಿ ಸಿಕ್ಕ ಧೇನುಕ ಏನಾದ ?
ಉತ್ತರ : ಕೃಷ್ಣನ ಕೈಯಲ್ಲಿ ಸಿಕ್ಕ ಧೇನುಕ ಬೇಲದ ಹಣ್ಣು ಬಡಿಯೋ ಬಡಿಗೆಯಾದನು .
 
 3 . ಮಂತ್ರಿ ಕಂಸನ ಬಳಿಗೆ ಕರೆತಂದ ಇಬ್ಬರು ಯಾರು ?
 ಉತ್ತರ : ಮಂತ್ರಿ ಕಂಸನ ಬಳಿಗೆ ಕರೆತಂದ ಇಬ್ಬರು ಶೈಲಿಕ ಮತ್ತು ದುರ್ವಿಧ ಎಂಬ ಗೂಢಚಾರರು .

 4 , ವಸುದೇವನಿಗೆ ಮಕ್ಕಳ ವಿಚಾರ ಹೇಳಿದವರು ಯಾರು ?
ಉತ್ತರ : ವಸುದೇವನಿಗೆ ಅವನ ಮಕ್ಕಳ ವಿಚಾರವನ್ನು ಅಕ್ರೂರನು ಹೇಳಿದನು .
 
 5 . ವಸುದೇವ ಹೇಳುವಂತೆ ರಾಜಕಾರ್ಯ ಹೇಗಿರುತ್ತದೆ ?
ಉತ್ತರ : ವಸುದೇವ ಹೇಳುವಂತೆ ರಾಜಕಾರ್ಯವು ಹತ್ತು ಜನ ಕೂತಾಗ ಜೋಲಿ , ಏಕಾಂಗಿಯಾಗಿದ್ದಾಗ ಒತ್ತಿದರೂ ಮುಚ್ಚದ ರೆಪ್ಪೆ.
 
6 . ನಂದ ಯಾರೆಂದು ಕಂಸ ಹೇಳುತ್ತಾನೆ ?
ಉತ್ತರ : ನಂದ ದೇವಕಿಯ ಗಂಡ ವಸು ವನ ಬಾಲ್ಯಸ್ನೇಹಿತ , ಪರಮಾಪ್ತ ಪ್ರಾಣಮಿತ್ರ ,

ಆ ) ಕೊಡುವ ಪುಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ.

 1 . ಕೃಷ್ಣ ಯಾರು ಯಾರನ್ನು ಕೊಂದ ?
ಉತ್ತರ : ಕೃಪ್ಪನು ಹಾಲು ಕೊಡಲು ಹೋದ ಪೂತನಿಯ ರಕ್ತ ಹೀರಿ ಕೊಂದನು . ಸವಾರಿ ಮಾಡು ಎಂದು ಬೆನ್ನೊಡಿದ ಶಕಟನ ಸೊಂಟ ಮುರಿದು ಕೊಂದನು . ತೃಣಾವರ್ತ ಆಟದ ಬುಗುರಿಯಾಗಿಸಾವನ್ನಪ್ಪಿದ . ಧೇನುಕ ಬೇಲದ ಹಣ್ಣು ಬಡಿಯೊ ಬಡಿಗೆಯಂತೆ ಬಡಿದು ಕೊಂದನು .

2 . ಕ್ರೀಡಾಗಾರದಲ್ಲಿ ಆಗಿದ್ದ ಗುಪ್ತ ಏರ್ಪಾಡು ಏನು ?
ಉತ್ತರ : ಕ್ರೀಡಾಗಾರದ ಹೆಬ್ಬಾಗಿಲಿನ ಬಾಗಿಲುವಾಡದ ಕಮಾನಿಗೆ ಕಿರುಗತ್ತಿ ಅಲಂಕಾರ ಮಾಡಿ , ಬಾಗಿಲವಾಡದ ಕಮಾನಿಗೆ ಕಿರುಗತ್ತಿ ಅಲಂಕಾರ .. ಬಾಗಿಲವಾಡದ ಕಮಾನಿನ
ಮೇಲೆ ಗಾಜಿನ ರಾಜಗೋಪುರ.. … ಅದೇನಾದ್ರೂ ತಲೇ ಮೇಲೆ ಬಿತ್ತು ಅಂದ್ರೆ.. ..
..ಶ್ರೀಮದ್ ರಮಾರಮಣ ಗೋವಿಂದಾ ಗೋವಿಂದ . . .
 
 3 . ವಸುದೇವನು ತನ್ನ ಮಕ್ಕಳನ್ನು ನೆನೆದು ವ್ಯಥಪಟ್ಟ ಬಗೆ ಹೇಗೆ ?
 ಉತ್ತರ : ವಸುದೇವನು ತನ್ನ ಮಕ್ಕಳನ್ನು ನೆನೆಸಿಕೊಂಡು ಹದಿನಾರು ‘ ವರ್ಷಗಳಿಂದ ಅವರನ್ನು ನೋಡದೆ ತಪಿಸುತ್ತಿದ್ದನು . ತಮ್ಮ ಮಕ್ಕಳನ್ನು ತಾವು ಅಡಿಸಲಿಲ್ಲ , ಆರೈಕೆ ಮಾಡಲಿಲ್ಲ , ತೊದಲು ನುಡಿ ಕೇಳಲಿಲ್ಲ ತೂಗಲಿಲ್ಲ , ಜೋಗುಳ ಹಾಡಲಿಲ್ಲ ಎಂದು ವ್ಯಥೆ ಪಟ್ಟನು .
 
4 , ಕಂಸ ತಂಗಿಯ ಮೇಲಿನ ಪ್ರೀತಿ ಎಂಥದೊಂದು ಹೇಳಿಕೊಂಡಿದ್ದಾನೆ ?
ಉತ್ತರ : ಕಂಸನು ತನಗೆ ತನ್ನ ತಂಗಿಯ ಮೇಲೆ ಅಪಾರ ಪ್ರೀತಿಯಿದೆ ಆದ್ದರಿಂದಲೇ ಸಂಕೊಲೆ ಹಾಕಿಸಿದರೂ ಅದನ್ನು ಶುದ್ಧ ಅಪರಂಜಿಯಿಂದ ಮಾಡಿದ್ದು , ಕೊರಳಿಗೆ ಮೂರಳೆ , ಕೈಗೆ ಎರಡೆಳೆ , ಕಾಲಿಗೆ ಒಂದೆಳೆಯನ್ನು – ಈ ಎಲ್ಲವನ್ನು ಚಿನ್ನದಿಂದಲೇ ಮಾಡಿಸಿರುವುದು . ಮಾಡಿಸಿ 25 ವರ್ಷಗಳಾದರೂ ಸ್ವಲ್ಪವೂ ಕಪ್ಪಾಗಿಲ್ಲ ಅದು ಪ್ರೀತಿ ಅಂದರೆ ಎಂದು ದೇವಕಿ – ವಸುದೇವನ ಮುಂದೆ ಹೇಳಿಕೊಂಡಿದ್ದಾನೆ .

ಇ ) ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು ಐದು ವಾಕ್ಯ ಉತ್ತರಿಸಿ ,

1 . ಗೂಢಚಾರರು ಯಾವುದರ ಬಗ್ಗೆ ಶೋಧನೆ ಮಾಡುತ್ತಿದ್ದಾರೆ ? ವಿವರಿಸಿ .
ಉತ್ತರ : ಕೃಷ್ಣನು ಯಾರು , ಗೊಲ್ಲರ ಹುಡುಗನಾದ ಕೃಷ್ಮನಿಗೆ ರಾಕ್ಷಸರನ್ನೆಲ್ಲಾ ಸಾಯಿಸುವ ಅಗಾಧವಾದ ಶಕ್ತಿಯು ಎಲ್ಲಿಂದ ಬಂತು . ಯಾರು ಅವನಿಗೆ ಈ ಶಕ್ತಿಯನ್ನು ಕೊಟ್ಟಿದ್ದಾರೆ ಎಂಬುದರ ಬಗೆ ಗೂಢಚಾರರು ಶೋಧನೆ ಮಾಡುತ್ತಿದ್ದರು .ಕೃಷ್ಣನ  ತೊಂದರೆಯನ್ನು ಸಹಿಸಲಾರದೆ ಅವನನ್ನು ಹೇಗಾದರೂ ಮಾಡಿ ಸಾಯಸಿಬೇಕೆಂದು ಕಂಸನು ನಾನಾ ತರಹ ಉಪಾಯಗಳನ್ನು ಹೂಡುತ್ತಾನೆ . ಚಿಕ್ಕ ಮಗು ಎಂದು ಪೂತನಿಯನ್ನು ಕಳಿಸಿರುತ್ತಾನೆ . ನಂತರ ಶಕಟ , ತೃಣಾವರ್ತ , ಧೇನುಕ ಮೊದಲಾದ ರಾಕ್ಷಸರೆಲ್ಲ ಸತ್ತು ಹೋಗುತ್ತಾರೆ . ಅಗಾಧವಾದ ಗೋವರ್ಧನ ಬೆಟ್ಟವನ್ನು ಯಕಶ್ಚಿತ್ ಛತ್ರಿಯಾಗಿ ಮಾಡಿಕೊಂಡ ಕೃಷ್ಣನ ಬಗ್ಗೆ ಕಂಸನಿಗೆ ತುಂಬಾ ಕೋಪವಿರುತ್ತದೆ . ಆದ್ದರಿಂದ ಅವನು ಯಾರು , ಏನು ಎಂದು – ವಿಚಾರಿಸಲು ಗುಪ್ತಾಚರರನ್ನು ನೇಮಿಸಲು ಕಂಸನು ತನ್ನ ಮಂತ್ರಿಗೆ ಹೇಳಿರುತ್ತಾನೆ . ಅವರು ಅವನ ಬಗ್ಗೆ ತಿಳಿದುಕೊಳ್ಳುವ ಶೋಧನೆ ಕೊನೆ ಹಂತಕ್ಕೆ ಬಂದಿದೆ ಎಂದು ಮಂತ್ರಿಯು ಹೇಳುತ್ತಾನೆ
 
2 . ಕೃಷ್ಣನನ್ನು ಕೊಲ್ಲಲು ದುರ್ವಿಧ – ಶೈಲಿಕರು ಮಾಡಿದ್ದ – ಏರ್ಪಾಡುಗಳೇನು ?
ಉತ್ತರ : ಕೃಷ್ಣ ತನ್ನ ಶತೃ , ಕೃಷ್ಣನಿಂದ ತನಗೆ ಸಾವು ಬರಬಹುದೆಂದು ಭಯದಿಂದ ಕಂಸನ್ನು ಕೃಷ್ಣನನ್ನು ಸಾಯಿಸಲು ಅನೇಕ ಉಪಾಯಗಳನ್ನು ಹೂಡುತ್ತಾನೆ . ಆದರೆ ಸಾಯಿಸಲೆಂದು ಹೋದವರೇ ಸತ್ತು ಹೋಗುತ್ತಿದ್ದುದನ್ನು ಕಂಡು ಈ ಹೊಸ ಉಪಾಯವಾದ ‘ ಬಿಲ್ಲಹಬ್ಬ ‘ ವನ್ನು ಆಯೋಚಿಸಿರುತ್ತಾರೆ . ಬಿಲ್ಲಹಬ್ಬಕ್ಕೆ ಬರುವ ಸ್ಪರ್ಧಾರ್ಥಿಗಳಲ್ಲಿ ಕೃಷ್ಣನೂ ಒಬ್ಬನಾಗಿರುತ್ತಾನೆ . ಕ್ರೀಡಾಂಗಣದ ಹೆಬ್ಬಾಗಿಲಿನ ಬಾಗಿಲವಾಡದ ಕಮಾನಿಗೆ ಕಿರುಗತ್ತಿ ಅಲಂಕಾರ , ಅದರ ಮೇಲೆ ಗಾಜಿ ರಾಜಗೋಪುರವಿರುವ ಏರ್ಪಾಡು ಆಗಿರುತ್ತದೆ .ಕೃಷ್ಣ ಆ ದ್ವಾರದಲ್ಲಿ ಬರುವಾಗ ಒಂದು ಸಣ್ಣ ಕೀಲಿ ಕೈಯನ್ನು ಎಳೆಯುವ ಸಿದ್ಧತೆ ಮಾಡಿರುತ್ತಾರೆ , ಆ ಕೀಲಿ ಕೈ ಎಳೆದರೆ ಮೇಲಿನ ರಾಜಗೊಪುರದ ಸಮೇತ ಕೆಳಗೆ ಬೀಳುವಾಗ ಕಿರುಗತ್ತಿಯು ತಲೆಯ ಮೇಲೆ ಬಿದ್ದು ಕೆಳಗಿರುವ ವ್ಯಕ್ತಿ ಸಾಯುವಂತೆ ಮಾಡಿರುತ್ತಾರೆ . ಪಟ್ಟದ ಆನೆಯಾದ ಕುವಲಯಾಪೀಡಕ್ಕೆ ಔಪ . ಆಕ್ರಮಣ ಮಾಡುವಂತೆ ತರಬೇತಿ ಕೊಟ್ಟಿರುತ್ತಾರೆ . ಈ ರೀತಿ ಕೃಷ್ಣನನ್ನು ಕೋಲನ್ನು ದುರ್ವಿಧ – ಶೈಲಿಕರು ಯೋಜನೆ ಹೂಡಿರುತ್ತಾರೆ .
 
3 . ಕಂಸ ದೇವಕಿಯಿಂದ ಕೃಷ್ಮನ ಬಗ್ಗೆ ತಿಳಿಯಲು ಹೋಗಿ , ನಿರಾಶನಾದದ್ದು ಹೇಗೆ ?
ಉತ್ತರ : ಕಂಸನು ದೇವಕಿಯ ಅಷ್ಟಮ ಪುತ್ರ , ತನ್ನನ್ನು ಕೊಲ್ಲುತ್ತಾನೆ ಎಂಬ ಮಾತಿನಿಂದ ಕಳವಳ ಪಟ್ಟುಕೊಂಡು ಅವನಿಗಾಗಿ ಹುಡುಕುತ್ತಿರುತ್ತಾನೆ . ದೇವಕಿಯನೇ ಎಲ್ಲಿ ಬಚ್ಚಿಟ್ಟಿದ್ದೀಯಾ ಹೇಳು , ಹೇಳಿದರೆ ನನ್ನ ರಾಜ್ಯವನ್ನೆಲ್ಲಾ ಕೊಟ್ಟು ಬಿಡುತ್ತೇನೆ , ರಾಜ್ಯ , ಕೋಶ , ಪಗಡಿ ಎಲ್ಲವನ್ನೂ ನಿನ್ನ ಗಂಡನಿಗೆ ಕೊಡುತ್ತೇನೆ ಹೇಳು ಎಂದಾಗ ಅಸಹಾಯಕಳಾದ ಅವಳು ಅಳುತ್ತಾಳೆ . ಗೋಕುಲದಲ್ಲಿರುವ ಕೃಷ್ಮ ನಿನ್ನ ಮಗನೇ ಎಂದಾಗ ಅಲ್ಲ ಎಂದು ಹೇಳುತ್ತಾಳೆ . ಪರಿಪರಿಯಾಗಿ ಬೇಡಿಕೊಂಡರೂ ಏನೂ ವಿಷಯ ಗೊತ್ತಾಗದೆ ನಿರಾಶನಾಗಿ ಹಿಂತಿರುಗುತ್ತಾನೆ .

ಈ ವಾಕ್ಯಗಳನ್ನು ಹೇಳಿಕೆಗಳನ್ನು ಯಾರು ಯಾರಿಗೆ . ಯಾವಾಗಿ ಹೇಳಿದರು / ತಿಳಿಸಿರಿ ?
 
1 . ” ಹೌದು ಒಡೆಯ – ಕ್ರೀಡಾಂಗಣಕ್ಕೆ ಇರೋರು ಒಂದೇ ಹೆಬ್ಬಾಗಿಲು  “
ಉತ್ತರ :ಈ ಮಾತನ್ನು ಕಂಸನಿಗೆ ಕೃಷ್ಣನನ್ನು ಸಾಯಿಸಲು ತಾನು ಮಾಡಿಸಿದ ಏರ್ಪಡಿಸಿದ  ಬಗ್ಗೆ ಹೇಳುವಾಗ ಹೇಳಿದ ಮಾತು .  

2 . ” ಮಂಡೇಲಿ ಕೊಂಚ ಮಾಂಸ ಇರಬೇಕು
ಉತ್ತರ : ಈ ಮಾತನ್ನು ಕಂಸನು ಮಂತ್ರಿಗೆ ಹೇಳಿದನು . ಕಂಸನು ಕೃಷ್ಣನ ಬಗ್ಗೆ ತಿಳಿದುಕೊಳ್ಳಬೇಕೆಂದು ಮತಿಯನ್ನು ಕರೆದು ಕೂರಲು ಹೇಳಿದಾಗ ಮಂತ್ರಿಯು ವಿನಯವಾಗಿ ನಿರಾಕರಿಸಿದ ಸಂದರ್ಭದಲ್ಲಿ ಹೇಳಿದ್ದು ,

3 . ” ನಿಮ್ಮ ಅಣ್ಣನಿಗೆ ಸ್ವಲ್ಪ ಹಾಲಾದರೂ ಕೊಡು ?
ಉತ್ತರ : ಈ ಮಾತನ್ನು ಕಂಸನು ತಮ್ಮನ್ನು ನೋಡಲು ಬಂದಾಗ ವಸುದೇವ ದೇವಕಿಗೆ ಹೇಳಿದ ಮಾತು .

4 , ” ಕೊಲ್ಲಲು ಬಂದವರನ್ನೆಲ್ಲಾ ಅವನೇ ಕೊಂದುಬಿಟ್ಟ ”
ಉತ್ತರ : ಕಂಸ ದೇವಕಿಯ ಹತ್ತಿರ ಕೃಪ್ಪನ ಬಗ್ಗೆ ಹೇಳುವಾಗ ಈ ಮಾತನ್ನು ಹೇಳಿದನು .
 
ಉ ) ಹೊಂದಿಸಿ ಬರೆಯಿರಿ :

1.ಒಡೆಯ          ಕುವಲಯಾಪೀಡ
2.ಶಿಲ್ಪ               ಶಕಟ     
3 ,ವೈದ್ಯ            ಗೋವರ್ಧನ
4 ,ಆನೆ               ದುರ್ವಿಧ
5.ಬೆಟ್ಟ              ಶೈಲಿಕ
                           ಧೇನುಕ
                            ಕಂಸ
ಉತ್ತರಗಳು :
1 ) ಕಂಸ ,
 2 ) ಶೈಲಿಕ
3 ) ದುರ್ವಿಧ
 4 ) ಕುವಲಯಾಪೀಡ
5 ) ಗೋವರ್ಧನ
 
ಉ) ಕೆಳಗೆ ಕೊಟ್ಟಿರುವ ಪದಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಬಳಸಿ, ವಾಕ್ಯ ರಚಿಸಿ.

1.ಲೋಕಾಭಿರಾಮ : ಸಂಜೆಯ ವೇಳೆಯಲ್ಲಿ ಸ್ನೇಹಿತರು ಪರಸ್ಪರ ಲೋಕಾಭಿರಾಮವಾಗಿ ಚರ್ಚಿಸುತ್ತಿದ್ದರು .
2.ಪರಾಂಬರಿಸು : ಪಾರಿಚಾರಿಕೆಯರು ಮಾಡಿದ ಕೆಲಸವನ್ನು ಒಡತಿ ಪರಾಂಬರಿಸುತ್ತಿದ್ದಳು .
3.ಅಪರಂಜಿ : ಅಪರಂಜಿ ಚಿನ್ನದ ಒಡವೆಗಳು ಮೋಹಕವಾಗಿದ್ದವು .
4.ಸೆರೆಮನೆ : ಸೆರೆಮನೆಯಲ್ಲಿರುವವರೆಲ್ಲರೂ ಅಪರಾಧಿಗಳಾಗಿರುವುದಿಲ್ಲ .
5.ಸಂಕೊಲೆ : ಸಂಕೊಲೆ ಎಂದರೆ ಚಿನ್ನದ್ದಾರೆ ಬಂಧನವೇ ,
6.ಬೊಗಳೆ : ಯಾವುದೇ ವಿಷಯದಲ್ಲಿಯ ಬೊಗಳೆ ಮಾಡುವುದು ಸರಿಯಲ್ಲ .
 
 ಅಭ್ಯಾಸ

ಅ . ಕೆಳಗಿನ ವಾಕ್ಯಗಳಲ್ಲಿ ರ್ಬಪದ , ಕರ್ತೃಪದ ಮತ್ತು ಕ್ರಿಯಾಪದಗಳನ್ನು ಬಿಡಿಸಿ
ಉತ್ತರ : ಕ್ರಸಂ . ವಾಕ್ಯಗಳು ಕರ್ತೃಪದ ಕರ್ಮಪದ ಕ್ರಿಯಾಪದ

ಕ್ರಂ .ಸಂ ವಾಕ್ಯಗಳು            ಕರ್ತೃಪದ            ಕರ್ಮಪದ                     ಕ್ರಿಯಾಪದ
1 ಉಮಾ 
ಹಾಡನ್ನು 
ಹಾಡಿದಳು                                ಉಮಾ                  ಹಾಡನ್ನು                       ಹಾಡಿದಳು

2.ಕೇಶವನು 
ಕುಂಬಳಕಾಯಿಯನ್ನು 
ಕುಂಬಳಕಾಯಿಯನ್ನು 
ಕೊಯ್ದನು                             ಕೇಶವನು           ಕುಂಬಳಕಾಯಿಯನ್ನು      ಕುಂಬಳಕಾಯಿಯನ್ನು

3.ಗಣೇಶ ಗಡಿಗೆಯನ್ನು
 ಒಡೆದನು                                  ಗಣೇಶ               ಗಡಿಗೆಯನ್ನು                     ಬಿಡಿಸಿದಳು

4.ಹಸೀನ ಕೊಡೆ 
ಬಿಡಿಸಿದಳು                                ಹಸೀನ                  ಕೊಡೆ                              ಬಿಡಿಸಿದಳು

5.ರಜಿನ ಸಿನಿಮಾ 
ನೋಡಿದಳು .                              ರಜಿನ                  ಸಿನಿಮಾ                           ನೋಡಿದಳು

6.ಅಧ್ಯಾಪಕರು 
ಪಾಠ ಬೋಧಿಸಿದರು               ಅಧ್ಯಾಪಕರು           ಪಾಠ                             ಬೋಧಿಸಿದರು

ಆ . ಕೆಳಗಿನ ವಾಕ್ಯಗಳಲ್ಲಿ ಕ್ರಿಯಾಪದಗಳನ್ನೂ , ಕ್ರಿಯಾಪದದ ವಿಧಗಳನ್ನೂ ಸೂಚಿಸಿ :
 
ಕ್ರಂ.ಸಂ ವಾಕ್ಯಗಳು             ಕ್ರಿಯಾಪದ                  ಕ್ರಿಯಾಪದದ ವಿಧ

1.ರೈತರು ಕಾಳುಗಳನ್ನು 
  ಬಿತ್ತಿದರು                              ಬಿತ್ತಿದರು                         ಭೂತಕಾಲ

2.ಅಧ್ಯಾಪಕರು 
ಸಿನಿಮಾ 
ತೋರಿಸುತ್ತಾರೆ .                    ತೋರಿಸುತ್ತಾರೆ                 ವರ್ತಮಾನ ಕಾಲ

3.ನನ್ನ ಅಕ್ಕ ಭಾವ 
ಮುಂದಿನ ತಿಂಗಳು 
ಬರುವರು                                 ಬರುವರು                      ಭವಿಷ್ಯತ್  ಕಾಲ

4.ಬೆಳಿಗ್ಗೆ ಕೋಳಿ 
ಕೂಗುತ್ತದೆ .                             ಕೂಗುತ್ತದೆ                     ವರ್ತಮಾನಕಾಲ


You Might Like

Post a Comment

0 Comments