Recent Posts

ಐನ್ಸ್ಟೀನ್ ಮತ್ತು ದೇವರು - Class 9th Second Language Kannada Textbook Solutions

 ಗದ್ಯ 7
ಐನ್ಸ್ಟೀನ್ ಮತ್ತು ದೇವರು

ಕವಿ/ಲೇಖಕರ ಪರಿಚಯ 
 
* ಎಚ್. ನರಸಿಂಹಯ್ಯ ಇವರು 1920 ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಜನಿಸಿದರು.
* ಇವರು ಹೋರಾಟದ ಹಾದಿ, ತೆರೆದ ಮನ ಮುಂತಾದ ಕೃತಿಗಳನ್ನು ಬರೆದಿದ್ದಾರೆ.
* ಶ್ರೀಯುತರಿಗೆ ಗುಲ್ಬರ್ಗ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ ಲಭಿಸಿವೆ.
*ಪ್ರಸ್ತುತ ಲೇಖನವನ್ನು ಎಚ್. ನರಸಿಂಹಯ್ಯನವರ 'ತೆರೆದ ಮನ' ಕೃತಿಯಿಂದ ಆರಿಸಿದೆ.

ಟಿಪ್ಪಣಿಗಳು :
 
1. ಆಲ್ಬರ್ಟ್ ಐನ್ಸ್ಟೀನ್ :
ಇಪ್ಪತ್ತನೇ ಶತಮಾನದ ಒಬ್ಬ ವಿಶ್ವವಿಖ್ಯಾತ ವಿಜ್ಞಾನಿ, ಜರ್ಮನಿಯ ಉಲ್ಡ್ ನಗರದಲ್ಲಿ 1879 ರಲ್ಲಿ ಜನಿಸಿದ ಇವರು ಯಹೂದಿ ಎಂಬ ಕಾರಣಕ್ಕಾಗಿ ದೇಶಭ್ರಷ್ಟರಾಗಬೇಕಾಯಿತು. ಅಮೇರಿಕಾದಲ್ಲಿ ತಮ್ಮ ಸಂಶೋಧನಾ ಕಾರ್ಯವನ್ನು ಮುಂದುವರಿಸಿದ ಐನ್ಸ್ಟೀನರು ತಮ್ಮ ಸಾಪೇಕ್ಷ ಸಿದ್ಧಾಂತವನ್ನು 1905 ರಲ್ಲಿ ಮಂಡಿಸಿದರು. 1921 ರಲ್ಲಿ ಇವರಿಗೆ ನೊಬೆಲ್ ಪ್ರಶಸ್ತಿ ದೊರೆಯಿತು. ಶ್ರೇಷ್ಠ ವಿಜ್ಞಾನಿ ಮತ್ತು ಮಾನವತಾವಾದಿ ಆಗಿದ್ದ ಐನ್ಸ್ಟೀನರು 1955 ರಲ್ಲಿ ನಿಧನರಾದರು.

2. ಸ್ಪಿನೋಜಾ :
ಡಚ್ ತತ್ತ್ವಜ್ಞಾನಿಯಾದ ಈತನ ಪೂರ್ಣ ಹೆಸರು ಬೆನೆಡಿಕ್ಟ್ - ಡಿ - ಸ್ಪಿನೋಜಾ, ಇವನು ಪ್ರತಿಪಾದಿಸಿದ ತತ್ತ್ವವು ವಿಶ್ವ ದೇವತಾ ತತ್ತ್ವದ ಅದೈತವಾದ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಈತನ ಪ್ರಕಾರ ದೇವರು ಪ್ರೀತಿಸುವುದಿಲ್ಲ ಮತ್ತು ದ್ವೇಷಿಸುವುದಿಲ್ಲ. ಒಟ್ಟಾರೆ ವಸ್ತು ಸ್ಥಿತಿಯಂತೆ ನಿಸರ್ಗ ಮತ್ತು ದೇವರು ಮಾನವನ ಊಹೆಯ ಮಿತಿಯನ್ನು ಮೀರಿದುದಾಗಿವೆ.

             ಪದಗಳ ಅರ್ಥ
ಅಪರಿಪೂರ್ಣ – ಪೂರ್ಣವಲ್ಲದ
ಉದ್ಧರಿಸು - ಉದಾಹರಿಸು; ಇತರರು ಹೇಳಿದ ಮಾತನ್ನು ಎತ್ತಿ ಹೇಳುವುದು.
ನಿಲುವು-  ಅಭಿಪ್ರಾಯ
ಪರಿಕಲ್ಪನೆ - ಒಂದು ವಿಷಯದ ಖಚಿತ ಚಿಂತನೆ ವರ್ತನೆ – ನಡತೆ; ರೂಢಿ
ಸಂಯೋಜನೆ - ಕೂಡಿಸುವಿಕೆ
ತುಚ್ಚ – ನೀಚ: ನಿಂದನೀಯ
ಕಟ್ಟಾ - ಪಕ್ಕಾ
ನಿರ್ವಚನ - ವಿವರಣೆ; ವ್ಯಾಖ್ಯಾನ
ಮೌಲ್ಯ - ಬೆಲೆ: ಅಮೂಲ್ಯ ಗುಣ
ವಾಗ್ವಾದ - ಚರ್ಚೆ ಸಮನ್ವಯ – ಹೊ೦ದಾಣಿಕೆ

     ಪ್ರಶ್ನೆಗಳು 

ಅ) ಬಿಟ್ಟ ಸ್ಥಳಗಳನ್ನು ನೀಡಿರುವ ನಾಲ್ಕು ಆಯ್ಕೆಗಳಿಂದ ಸೂಕ್ತವಾದುದನ್ನು ಆಯ್ದು ಬರೆಯಿರಿ.

1. ಐನ್ ಸ್ಟೀನ್ ಶ್ರೇಷ್ಠ —----- ಆಗಿದ್ದರು.

ಅ) ತತ್ವಜ್ಞಾನಿ 
ಬ) ವಿಜ್ಞಾನಿ
ಕ) ಧರ್ಮಗುರು 
ಡ)ರಾಜಕಾರಣಿ

2. ಐನ್ ಸ್ಟೀನ್ ಅವರ ಪ್ರಕಾರ ಮನುಷ್ಯ ಬೆಲೆ ಕೊಡಬೇಕಾದುದು
ಅ) ಸುಖಭೋಗಕ್ಕೆ 
ಬ) ಆಸ್ತಿಪಾಸ್ತಿಗೆ 
ಕ) ಮೌಲ್ಯಗಳಿಗೆ 
ಡ) ಯಶಸ್ಸಿಗೆ

3. ಐನ್ ಸ್ಟೀನ್ ಪ್ರಕಾರ ಧರ್ಮ ಅವಲಂಬಿಸಿದೆ.
ಅ) ದೇವರನ್ನು 
ಬ) ವಾಣಿಜ್ಯ ವ್ಯವಹಾರವನ್ನು
ಕ) ಶಾಸ್ತ್ರಗಳನ್ನು 
ಡ) ನೈತಿಕತೆಯನ್ನು

●    ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
I. ಧಾರ್ಮಿಕ ವ್ಯಕ್ತಿಗಳು ಐನ್ಸ್ಟೀನ್ ಅವರನ್ನು ಏನೆಂದು ಪರಿಭಾವಿಸುತ್ತಾರೆ?

ಉತ್ತರ:- ಧಾರ್ಮಿಕ ವ್ಯಕ್ತಿಗಳು ಐನ್ಸ್ಟೀನ್ ಅವರನ್ನು ಆತಿಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರು ಮಾತ್ರವಲ್ಲಿ, ನಿಜವಾದ ಮಾನವತಾವಾದಿ ಎಂದು ಪರಿಭಾವಿಸುತ್ತಾರೆ.

2. ಧರ್ಮ ಮತ್ತು ವಿಜ್ಞಾನದ ಬಗ್ಗೆ ಐನ್ಸ್ಟೀನ್ ನೀಡಿರುವ ಪ್ರಸಿದ್ಧ ಹೇಳಿಕೆ ಯಾವುದು?
ಉತ್ತರ:- ಧರ್ಮ ಮತ್ತು ವಿಜ್ಞಾನದ ಬಗ್ಗೆ ಐನ್ಸ್ಟೀನ್ ನೀಡಿರುವ ಪ್ರಸಿದ್ಧ ಹೇಳಿಕೆ 'ಧರ್ಮವಿಲ್ಲದವಿಜ್ಞಾನವಿಲ್ಲದ ಧರ್ಮ ಕುರುಡು' ಎನ್ನುವುದು,

3. ಐನ್ಸ್ಟೀನ್ ದೇವರಿಗೆ ಸಂಬಂಧಿಸಿದಂತೆ ಯಾರ ವಿಚಾರಗಳನ್ನು ನಂಬಿದ್ದರು?
ಉತ್ತರ:- ವಿಜ್ಞಾನ ಕುಂಟು ಮತ್ತುಐನ್ಸ್ಟೀನ್ ದೇವರಿಗೆ ಸಂಬಂಧಿಸಿದಂತೆ ಎಲ್ಲ ಸಾಂಪ್ರದಾಯಿಕವಾದ ಧರ್ಮಗಳ ಕೇಂದ್ರದಲ್ಲಿ ದೇವರ ಪುಕಲ್ಪನೆಯಿದೆ
ಎಂಬ ಸ್ಪಿನೋಜಾನ ದೇವರನ್ನು ನಂಬಿದ್ದರು.

4. ಸ್ಪಿನೋಜಾ ಯಾರು? ಅವರು ಹಿಂಸೆಗೊಳಗಾದದ್ದು ಏಕೆ?
ಉತ್ತರ:- ಸ್ಪಿನೋಜಾ ಒಬ್ಬ ಡಚ್ ತತ್ತ್ವಜ್ಞಾನಿ, ದೇವರು ಮತ್ತು ಧರ್ಮಕ್ಕೆ ಸಂಬಂಧಿಸಿದಂತೆ ಅವನ ಅಸಾಂಪ್ರದಾಯಿಕ ದೃಷ್ಟಿಕೋನಕ್ಕಾಗಿ ಆಮಸ್ಟರ್ಡಂನ ಸಿನಗಾಗ್ರವರು ಅವನಿಗೆ ಹಿಂಸೆ ಕೊಟ್ಟು ಅವನನ್ನು ಮತದಿಂದ ಹೊರಹಾಕಿದ್ದರು.

5. ಐನ್ ಸ್ಟೀನ್ ಅವರ ಹೆಸರೆತ್ತುವ ಅಧಿಕಾರ ಯಾರಿಗೆ ಇಲ್ಲವೆಂದು ಲೇಖಕರು ಹೇಳುತ್ತಾರೆ?
ಉತ್ತರ:- ದೇವರನ್ನು ಒಂದೇ ಸಮನೆ ತಮ್ಮ ವಾಣಿಜ್ಯ ವ್ಯವಹಾರಗಳಿಗೆ ಬಳಸುತ್ತಾ ಬಂದಿರುವ ಜನರಿಗೆ ಐನ್ಸ್ಟೀನ್ರ ಹೆಸರೆತ್ತುವ ಯಾವ ಅಧಿಕಾರವೂ ಇಲ್ಲವೆಂದು ಲೇಖಕರು ಹೇಳಿದ್ದಾರೆ.

●    ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1. ದೇವರು ಮತ್ತು ಧರ್ಮದ ಬಗ್ಗೆ ಐನ್ ಸ್ಟೀನ್ ಅವರ ನಂಬಿಕೆಗಳೇನು?

ಉತ್ತರ:- ಕೆಟ್ಟದ್ದಕ್ಕೆ ಶಿಕ್ಷೆ ಕೊಟ್ಟು, ಒಳ್ಳೆಯದಕ್ಕೆ ಪ್ರತಿಫಲ ನೀಡುವ ಮತಧರ್ಮ ಶಾಸ್ತ್ರಗಳ ದೇವರಲ್ಲಿ ನನಗೆ ನಂಬಿಕೆಯಿಲ್ಲ. ನಾನು ಜಗತ್ತಿನಲ್ಲಿರುವ ಎಲ್ಲ ವಸ್ತುಗಳ ಕ್ರಮಬದ್ಧ ಸಂಯೋಜನೆ ಹಾಗೂ ಸಮನ್ವಯಗಳ ಮೂಲಕವೇ ತನ್ನ ಇರುವಿಕೆಯನ್ನು ತೋರಿಸಿಕೊಳ್ಳುವ ಸ್ಪಿನೋಜಾನ ದೇವರನ್ನು ನಂಬುತ್ತೇನೆ ಮನುಷ್ಯ ಜೀವಿಗಳ ವರ್ತನೆ ಹಾಗೂ ಭವಿಷ್ಯದ ಬಗ್ಗೆ ತಲೆ
ಕೆಡಿಸಿಕೊಳ್ಳುವ ದೇವರನ್ನು ನಾನು ನಂಬುವುದಿಲ್ಲ' ಎಂದು ಹೇಳಿದ್ದಾರೆ. 

2. ಐನ್ ಸ್ಟೀನ್ ಅವರ ಹೆಸರನ್ನು ಯಾವ ವಿಚಾರಗಳಿಗೆ ಬಳಸಿಕೊಳ್ಳುವುದು ಅನ್ಯಾಯವಾಗುತ್ತದೆ?
ಉತ್ತರ:- ದೇವರನ್ನು ಒಂದೇ ಸಮನೆ ತಮ್ಮ ವಾಣಿಜ್ಯ ವ್ಯವಹಾರಗಳಿಗೆ ಬಳಸುತ್ತಾ ಬಂದಿರುವ ಜನರಿಗೆ ಐನ್ಸ್ಟೀನ್ರ ಹೆಸರೆತ್ತುವ ಯಾವ ಅಧಿಕಾರವೂ ಇಲ್ಲ. ದೇವರ, ಧರ್ಮಗಳನ್ನು ಕುರಿತು ತಮ್ಮ ಒರಟು ಒರಟಾದ, ಅಪಾಯಕಾರಿ ಸಿದ್ಧಾಂತಗಳ ಸಮರ್ಥನೆಗೆ, ಆ ಮಹಾವಿಜ್ಞಾನಿಯ ಹೆಸರನ್ನು ಉಪಯೋಗಿಸಿಕೊಳ್ಳುವುದು ಅನ್ಯಾಯವೂ ಹೌದು.

3. ಮನುಷ್ಯನ ಯಾವ ಆದರ್ಶಗಳು ಐನ್ಸ್ಟೀನ್ ಅವರಿಗೆ ತುಚ್ಛ ಅನಿಸಿದವು?
ಉತ್ತರ:- 'ಸಾಮಾನ್ಯ ಮನುಷ್ಯರು ಸಾಧಿಸ ಬಯಸುವ ಆದರ್ಶಗಳಾದ ಆಸ್ತಿಪಾಸ್ತಿ, ಸುಖಭೋಗ ಮತ್ತು ಬಹಿರಂಗದ ಯಶಸ್ಸುಗಳು ಮೊದಲಿನಿಂದಲೂ ಬಹಳ ತುಚ್ಚವೆಂದು ಐನ್ಸ್ಟೀನ್ ಅವರಿಗೆ ತೋರಿದೆ. ಯಶಸ್ಸನ್ನು ಸಂಪಾದಿಸಿದ ಮನುಷ್ಯನಾಗಲು ಪ್ರಯತ್ನಿಸಬೇಡ, ಮೌಲ್ಯಗಳಿಗೆ ಬೆಲೆಕೊಡುವ ಮನುಷ್ಯನಾಗು ಎಂದು ಹೇಳಿದ್ದಾರೆ.

●    ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

1.ದೇವರು ಮತ್ತು ಧರ್ಮದ ಬಗ್ಗೆ ಐನ್ಸ್ಟೀನ್ ಅವರ ನಂಬಿಕೆಗಳಿಂದ ಸ್ಪಷ್ಟಗೊಳ್ಳುವ ವಿಚಾರಗಳೇನು? ಉತ್ತರ:-
ಕಟ್ಟದಕ್ಕೆ ಶಿಕ್ಷೆ ಕೊಟ್ಟು, ಒಳ್ಳೆಯದಕ್ಕೆ ಪ್ರತಿಫಲ ನೀಡುವ ಮತಧರ್ಮ ಶಾಸ್ತ್ರಗಳ ದೇವರಲ್ಲಿ ನನಗೆ ನಂಬಿಕೆಯಿಲ್ಲ. ನಾನು ಜಗತ್ತಿನಲ್ಲಿರುವ ಎಲ್ಲ ವಸ್ತುಗಳ ಕ್ರಮಬದ್ಧ ಸಂಯೋಜನೆ ಹಾಗೂ ಸಮನ್ವಯಗಳ ಮೂಲಕವೇ ತನ್ನ ಇರುವಿಕೆಯನ್ನು ತೋರಿಸಿಕೊಳ್ಳುವ ಸ್ಪಿನೋಜಾನ ದೇವರನ್ನು ನಂಬುತ್ತೇನೆ ಮನುಷ್ಯ ಜೀವಿಗಳ ವರ್ತನೆ ಹಾಗೂ ಭವಿಷ್ಯದ ಬಗ್ಗೆ ತಲೆ ಕೆಡಿಸಿಕೊಳ್ಳುವ ದೇವರನ್ನು ನಾನು ನಂಬುವುದಿಲ್ಲ.' ಐನ್ಸ್ಟೀನ್ರವರ ಪ್ರಕಾರ ಧರ್ಮವು ಯಾವುದೇ ದೈವೀ ಅಧಿಕಾರವನ್ನು ಅವಲಂಬಿಸದೆ ಸಂಪೂರ್ಣವಾಗಿ ನೈತಿಕವಾಗಿತ್ತು.ದೇವರನ್ನು ಒಂದೇ ಸಮನೆ ತಮ್ಮ ವಾಣಿಜ್ಯ ವ್ಯವಹಾರಗಳಿಗೆ ಬಳಸುತ್ತಾ ಬಂದಿರುವ ಜನರಿಗೆ ಐನ್ಸ್ಟೀನ್ರ ಹೆಸರೆತ್ತುವ ಯಾವ ಅಧಿಕಾರವೂ ಇಲ್ಲ. ದೇವರ, ಧರ್ಮಗಳನ್ನು ಕುರಿತು ತಮ್ಮ ಒರಟು ಒರಟಾದ, ಅಪಾಯಕಾರಿ ಸಿದ್ಧಾಂತಗಳ ಸಮರ್ಥನೆಗೆ, ಆ ಮಹಾವಿಜ್ಞಾನಿಯ ಹೆಸರನ್ನು ಉಪಯೋಗಿಸಿಕೊಳ್ಳುವುದು ಅನ್ಯಾಯವೂ ಹೌದು,

2. ಐನ್ ಸ್ಟೀನ್ ಅವರ ಬದುಕನ್ನು ರೂಪಿಸಿದ ಎರಡು ಹೇಳಿಕೆಗಳಾವುವು?
ಅವುಗಳನ್ನು ವಿವರಿಸಿ,
ಉತ್ತರ:-
ಐನ್ಸ್ಟೀನ್ರ ಬದುಕನ್ನು ರೂಪಿಸಿದ ಎರಡು ಹೇಳಿಕೆಗಳಾವುವೆಂದರೆ, 'ಸಾಮಾನ್ಯ ಮನುಷ್ಯರು ಸಾಧಿಸ ಬಯಸುವ ಆದರ್ಶಗಳಾದ ಆಸ್ತಿಪಾಸ್ತಿ, ಸುಖಭೋಗ ಮತ್ತು ಬಹಿರಂಗದ ಯಶಸ್ಸುಗಳು ಮೊದಲಿನಿಂದಲೂ ಬಹಳ ತುಚ್ಚವೆಂದು ನನಗೆ ತೋರಿದೆ.''ಯಶಸ್ಸನ್ನು ಸಂಪಾದಿಸಿದ ಮನುಷ್ಯನಾಗಲು ಪ್ರಯತ್ನಿಸಬೇಡ, ಮೌಲ್ಯಗಳಿಗೆ ಬೆಲೆಕೊಡುವ ಮನುಷ್ಯನಾಗು.' ಆಳವಾದ ಒಳನೋಟಗಳನ್ನು ನೀಡುವ ಈ ಹೇಳಿಕೆಗಳು ಸಾಮಾನ್ಯವಾಗಿ ಎಲ್ಲ ಮನುಷ್ಯರಿಗೆ ಅದರಲ್ಲೂ ವಿಶೇಷವಾಗಿ ನಮ್ಮ ರಾಜಕಾರಣಿಗಳಿಗೆ ಬಹಳ ಮುಖ್ಯವೆಂದು ಲೇಕಕರು ತಿಳಿಯುತ್ತಾರೆ.

●    ಸಂದರ್ಭದೊಡನೆ ಸ್ಪಷ್ಟಿಕರಿಸಿರಿ.

1. 'ಧರ್ಮವಿಲ್ಲದ ವಿಜ್ಞಾನ ಕುಂಟು ಮತ್ತು ವಿಜ್ಞಾನವಿಲ್ಲದ ಧರ್ಮ ಕುರುಡು.
ಆಯ್ಕೆ:-
ಈ ವಾಕ್ಯವನ್ನು ಎಚ್. ನರಸಿಂಹಯ್ಯ ಅವರು ಬರೆದಿರುವ 'ತೆರೆದ ಮನ' ಎಂಬ ಕೃತಿಯಿಂದ ಆಯ್ದ"ಐನ್ಸ್ಟೀನ್ ಮತ್ತು ದೇವರು"ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಲೇಖಕರು ಹೇಳಿದ್ದಾರೆ.
ಸ್ವಾರಸ್ಯ:- ಕಟ್ಟಾ ಧಾರ್ಮಿಕರು ಕೂಡ ವಿಜ್ಞಾನವು ಅಪರಿಪೂರ್ಣವೆಂಬ ತಮ್ಮ ನಿಲುವಿನ ಸಮರ್ಥನೆಗೆಂದು ಐನ್ಸ್ಟೀನ್ ಅವರ ಹೇಳಿಕೆಗಳನ್ನು ಉದ್ಧರಿಸುವುದರ ಮೂಲಕ, ಅವರು ಆಳವಾದ ಧಾರ್ಮಿಕ ನಂಬಿಕೆಗಳಿದ್ದ ವ್ಯಕ್ತಿಯೆನ್ನುವುದನ್ನು ಸ್ಥಾಪಿಸಲು ಪ್ರಯತ್ನಿಸುತ್ತಾರೆ ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ. 

2. 'ಮನುಷ್ಯ ಜೀವಿಗಳ ವರ್ತನೆ ಹಾಗೂ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಳ್ಳುವ ದೇವರನ್ನು ನಾನು ನಂಬುವುದಿಲ್ಲ.”
ಆಯ್ಕೆ:-
ಈ ವಾಕ್ಯವನ್ನು ಎಚ್. ನರಸಿಂಹಯ್ಯ ಅವರು ಬರೆದಿರುವ 'ತೆರೆದ ಮನ' ಎಂಬ ಕೃತಿಯಿಂದ ಆಯ್ದ"ಐನ್ಸ್ಟೀನ್ ಮತ್ತು ದೇವರು"ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ
ಸಂದರ್ಭ:- ಈ ಮಾತನ್ನು ಐನ್ಸ್ಟೀನ್ ರವರು ಹೇಳಿದ್ದಾರೆ.
ಸ್ವಾರಸ್ಯ:- 'ಕೆಟ್ಟದಕ್ಕೆ ಶಿಕ್ಷೆ ಕೊಟ್ಟು, ಒಳ್ಳೆಯದಕ್ಕೆ ಪ್ರತಿಫಲ ನೀಡುವ ಮತಧರ್ಮ ಶಾಸ್ತ್ರಗಳ ದೇವರಲ್ಲಿ ನನಗೆ ನಂಬಿಕೆಯಿಲ್ಲ. ನಾನು ಜಗತ್ತಿನಲ್ಲಿರುವ ಎಲ್ಲ ವಸ್ತುಗಳ ಕ್ರಮಬದ್ಧ ಸಂಯೋಜನೆ ಹಾಗೂ ಸಮನ್ವಯಗಳ ಮೂಲಕವೇ ತನ್ನ ಇರುವಿಕೆಯನ್ನು ತೋರಿಸಿಕೊಳ್ಳುವ ಸ್ಪಿನೋಜಾನ ದೇವರನ್ನು ನಂಬುತ್ತೇನೆ ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.

3. 'ಮೌಲ್ಯಗಳಿಗೆ ಬೆಲೆಕೊಡುವ ಮನುಷ್ಯನಾಗು'
ಆಯ್ಕೆ:
- ಈ ವಾಕ್ಯವನ್ನು ಎಚ್. ನರಸಿಂಹಯ್ಯ ಅವರು ಬರೆದಿರುವ'ತೆರೆದ ಮನ' ಎಂಬ ಕೃತಿಯಿಂದ ಆಯ್ದ"ಐನ್ಸ್ಟೀನ್ ಮತ್ತು ದೇವರು"ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ
ಸಂದರ್ಭ:- ಈ ಮಾತನ್ನು ಐನ್ಸ್ಟೀನ್ ರವರು ಹೇಳಿದ್ದಾರೆ.
ಸ್ವಾರಸ್ಯ:- ಐನ್ ಸ್ಟೀನರ ಬದುಕನ್ನು ರೂಪಿಸಿದ ಎರಡು ಹೇಳಿಕೆಗಳು ಆಳವಾದ ಒಳನೋಟಗಳನ್ನು ನೀಡುತ್ತವೆ. ಈ ಹೇಳಿಕೆಗಳು ಸಾಮಾನ್ಯವಾಗಿ ಎಲ್ಲ ಮನುಷ್ಯರಿಗೆ ಮುಖ್ಯವಾಗಿವೆ ಎಂದು ಚರ್ಚಿಸುವಾಗ
ಈ ಮೇಲಿನ ಮಾತು ವ್ಯಕ್ತವಾಗಿದೆ.

 ಭಾಷಾಭ್ಯಾಸ 

ಅ) ಕೆಳಗಿನ ಪದಗಳನ್ನು ಬಿಡಿಸಿ ಸಂಧಿಯನ್ನು ಹೆಸರಿಸಿರಿ.

1.ಶತಮಾನೋತ್ಸವ=ಶತಮಾನ+ಉತ್ಸವ- ಗುಣಸಂಧಿ
2. ಮಾತ್ರವಲ್ಲ = ಮಾತ್ರ + ಅಲ್ಲ - ಅಗಮಸಂಧಿ
3 ವಾಗ್ವಾದ=ವಾಕ್ + ವಾದ - ಜಸ್ತ್ರಸಂಧಿ
4 ಹೇಳಿಕೆಯಿಂದ ಹೇಳಿಕೆ + ಇಂದ- ಆಗಮಸಂಧಿ
5. ದೇವರಲ್ಲಿ= ದೇವರು + ಅಲ್ಲಿ- ಲೋಪಸಂಧಿ
6. ಮನದಟ್ಟು = ಮನ + ತಟ್ಟು -ಆದೇಶಸಂಧಿ

ಇ) ಕೆಳಗಿನ ಪದಗಳಲ್ಲಿರುವ ವಿಭಕ್ತಿ ಪ್ರತ್ಯಯಗಳನ್ನು ಪ್ರತ್ಯೇಕಿಸಿ ಹೆಸರಿಸಿರಿ.
1. ವಿಜ್ಞಾನಿಗಳಲ್ಲಿ = ಅಲ್ಲಿ ಸಪ್ತಮಿ ವಿಭಕ್ತಿ ಪ್ರತ್ಯಯ
2. ಹೆಸರನ್ನು = ಅನ್ನು – ದ್ವಿತೀಯ ವಿಭಕ್ತಿ ಪ್ರತ್ಯಯ -
3. ದೇವರ= ಅ -ಷಷ್ಠಿ ವಿಭಕ್ತಿ ಪ್ರತ್ಯಯ
4. ಅವರಿಗೆ = ಗೆ - ಚತುರ್ಥಿ ವಿಭಕ್ತಿ ಪ್ರತ್ಯಯ
5. ಮತದಿ೦ದ = ಇಂದ – ತೃತೀಯ ವಿಭಕ್ತಿ ಪ್ರತ್ಯಯ
6. ಕಲ್ಪನೆಯ= ಅ - ಷಷ್ಠಿ ವಿಭಕ್ತಿ ಪ್ರತ್ಯಯ
7. ಧರ್ಮಕ್ಕೆ = ಕ್ಕೆ - ಚತುರ್ಥಿ ವಿಭಕ್ತಿ ಪ್ರತ್ಯಯ
8. ಬದುಕನ್ನು = ಅನ್ನು - ದ್ವಿತೀಯ ವಿಭಕ್ತಿ ಪ್ರತ್ಯಯ

ಈ ಕೆಳಗಿನ ಪದಗಳಿಗೆ ವಿರುದ್ಧಾರ್ಥ ಬರೆಯಿರಿ.
ಧರ್ಮ X ಅಧರ್ಮ
ಅಪರಿಪೂರ್ಣ X ಪರಿಪೂರ್ಣ
ಅಗತ್ಯ X ಅನಗತ್ಯ.
ಶಿಕ್ಷೆ X ರಕ್ಷೆ
ನಂಬಿಕೆ x ಅಪನಂಬಿಕೆ,
 ಹಿಂಸೆ X ಅಹಿ೦ಸೆ
ಸ್ಪಷ್ಟ X ಅಸ್ಪಷ್ಟ
ಸಹಜ X ಅಸಹಜ,
ಅನುಚಿತ x ಉಚಿತ.
ಯಶಸ್ಸು X ಅಪಯಶಸ್ಸು
ಒರಟು X ಮೃದು.
ಅನ್ಯಾಯ X ನ್ಯಾಯ,
ಬಹಿರಂಗ X ಅಂತರಂಗ,

ಉ) ಪದೇ ಪದೇ ಇಂತಹ ಐದು ದ್ವಿರುಕ್ತಿಗಳನ್ನು ಬರೆಯಿರಿ.

ಉದಾ: ಬೇಗಬೇಗ
ಬನ್ನಿಬನ್ನಿ
ಬೇರೆಬೇರೆ
ನಿಲ್ಲುನಿಲ್ಲು
ತುತ್ತತುದಿ.

You Might Like

Post a Comment

0 Comments