Recent Posts

ಪಾಂಡಿತ್ಯದ ಡಿ.ಎಲ್. ನರಸಿಂಹಾಚಾರ್ - Class 9th Second Language Kannada Textbook Solutions

 ಗದ್ಯ   6 
ಪಾಂಡಿತ್ಯದ ಡಿ.ಎಲ್. ನರಸಿಂಹಾಚಾರ್

ಕವಿ/ಲೇಖಕರ ಪರಿಚಯ
*  ಎಂ, ಎಂ, ಕಲಬುರ್ಗಿಪೂರ್ಣ ಹೆಸರು ಮಲ್ಲಪ್ಪ ಮಡಿವಾಳಪ್ಪ ಕಲಬುರ್ಗಿ ಇವರು 1938 ರಲ್ಲಿ ವಿಜಯಪುರ ಜಿಲ್ಲೆ, ಸಿಂದಗಿ ತಾಲ್ಲೂಕಿನ ಗುಬ್ಬೇವಾಡದಲ್ಲಿ ಜನಿಸಿದರು.
* ಇವರು ಮಾರ್ಗ ಸಂಪುಟ1, , ಶಾಸನಗಳಲ್ಲಿ ಶಿವಶರಣರು, ಕನ್ನಡ ಹಸ್ತಪ್ರತಿ ಶಾಸ್ತ್ರ, ಚೆನ್ನಬಸವಣ್ಣನವರ ವಚನ ಮಹಾಸಂಪುಟ, ಕವಿರಾಜಮಾರ್ಗದ ಪರಿಸರದ ಸಾಹಿತ್ಯ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
* ಶ್ರೀಯುತರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿ ಲಭಿಸಿವೆ.
* ಪ್ರಸ್ತುತ ಲೇಖನವನ್ನು ಅವರ 'ಮಾರ್ಗ-ಸಂಪುಟ 1 ಕೃತಿಯಿಂದ ಆರಿಸಿದೆ.

                  ಅಭ್ಯಾಸ

1. ಪದಗಳ ಅರ್ಥ :

ಅನುಸಂಧಾನ - ಪರಿಶೀಲನೆ
ಉಪಾಯನ - ಕಾಣಿಕೆ, ಉಡುಗೊರೆ,
ಕಾರ್ಯತತ್ಪರತೆ – ಕೆಲಸದಲ್ಲಿ ಶ್ರದ್ಧೆ ತೋರುವುದು.
ಉಜ್ವಲ – ಪ್ರಕಾಶಮಾನ ಶ್ರೇಷ್ಠವಾದ -
ಕಮ್ಮಟ – ಟಂಕಸಾಲೆ, ನಾಣ್ಯ ಮುದ್ರಿಸುವ ಕೇಂದ್ರ
ಜಂಗಮ - ಚಲಿಸುವ; ಚಲನೆಯುಳ್ಳ
ತತ್ತರಿಸು - ನಡುಗು: ಕಂಪಿಸು
ತಾಪತ್ರಯ - ತೊ೦ದರೆ
ನಿರ್ವಿಕಾರ - ವಿಕಾರವಿಲ್ಲದ
ಮನದಣಿ – ತೃಪ್ತಿಯಾಗು -
ಸಂಘರ್ಷಣೆ - ಹೋರಾಟ, ತಿಕ್ಕಾಟ
ಸತ್ಯ - ತಿರುಳು; ಸಾರ
ಶಿಲ್ಪಿ – ರೂವಾರಿ; ತೇವರಹಿತ.
ಹವ್ಯಾಸ - ಚಟ; ಗೀಳು
ಅಶಕ್ಯ – ಸಾಧ್ಯವಿಲ್ಲ
ಕೂರ್ಮ - ಆಮೆ
ಜ್ಞಾನೋಪಾಸಕ - ಜ್ಞಾನವನ್ನು ಆರಾಧಿಸುವವನು 
ತನ್ಮಯತೆ - ಮಗ್ನತೆ; ಮೈಮರೆ, ತಲ್ಲೀನತೆ,
ದೌಲತ್ತು - ಅಹಂಕಾರ; ಅಧಿಕಾರದ ದರ್ಪ
ಸಂಶೋಧನೆ - ಆನ್ವೇಷಣೆ; ಹುಡುಕಾಟ,
ಶುಷ್ಕ - ಒಣಗಿದ; ತೇವ ರಹಿತ
ಹರವು - ವೈಶಾಲ್ಯ, ವಿಸ್ತಾರ 

     ಪ್ರಶ್ನೆಗಳು 

●    ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

1. ಕನ್ನಡ ಸಾಹಿತ್ಯದಲ್ಲಿ ಡಿ.ಎಲ್.ಎನ್. ಯಾರ ಸ್ಥಾನವನ್ನು ತುಂಬಿದ್ದರು?

ಉತ್ತರ:- ಕನ್ನಡ ಸಾಹಿತ್ಯದಲ್ಲಿ ಡಿ.ಎಲ್.ಎನ್. ತೀ.ನಂ.ಶ್ರೀ ಯವರ ಸ್ಥಾನವನ್ನು ತುಂಬಿದ್ದರು.

2. ಡಿ.ಎಲ್.ಎನ್. ಎಷ್ಟರಲ್ಲಿ ಜನಿಸಿದರು?
ಉತ್ತರ:- ಡಿ.ಎಲ್.ಎನ್. 1906 ರಲ್ಲಿ ಜನಿಸಿದರು.

3.ಯಾರ ಕಮ್ಮಟದಲ್ಲಿ ಡಿ.ಎಲ್.ಎನ್. ಅವರ ವ್ಯಕ್ತಿತ್ವ ರೂಪುಗೊಂಡಿತು?
ಉತ್ತರ:- ಬಿ.ಎಂ.ಶ್ರೀ., ಟಿ.ಎಸ್.ವೆಂಕಣ್ಣಯ್ಯ, ಎ.ಆರ್.ಕೃಷ್ಣಶಾಸ್ತ್ರಿಗಳ ಕಮ್ಮಟದಲ್ಲಿ ಡಿ.ಎಲ್.ಎನ್. ಅವರ ವ್ಯಕ್ತಿತ್ವ ರೂಪಗೊಂಡಿತು.

4. ವಿದ್ಯಾರ್ಥಿ ಜೀವನದಲ್ಲಿ ಡಿ.ಎಲ್.ಎನ್. ಅವರ ಸಹಪಾಠಿಗಳು ಯಾರು?
ಉತ್ತರ:- ಕುವೆಂಪು, ಡಿ.ಕೆ. ಭೀಮಸೇನರಾವ್, ಕೆ.ವೆಂಕಟರಾಮಪ್ಪ, ಎನ್.ಅನಂತರಂಗಾಚಾರ್ ವಿದ್ಯಾರ್ಥಿ ಜೀವನದಲ್ಲಿ ಡಿ.ಎಲ್.ಎನ್.ಅವರ ಸಹಪಾಠಿಗಳಾಗಿದ್ದರು.

5. ಡಿ.ಎಲ್.ಎನ್. ರಚಿಸಿರುವ ಶಾಸ್ತ್ರಗ್ರಂಥ ಯಾವುದು?
ಉತ್ತರ:- ಡಿ.ಎಲ್.ಎನ್. ರಚಿಸಿರುವ ಶಾಸಗ್ರಂಥ 'ಕನ್ನಡ ಗ್ರಂಥಸಂಪಾದನೆ'

6. ಯಾವ ಕವಿಯನ್ನು ಡಿ.ಎಲ್.ಎನ್. ಅವರು ಮೆಚ್ಚಿದ್ದರು?
ಉತ್ತರ:- ಹರಿಹರ ಕವಿಯನ್ನು ಡಿ.ಎಲ್.ಎನ್. ಅವರು ಮೆಚ್ಚಿದ್ದರು.

7. ಡಿ.ಎಲ್.ಎನ್. ಅವರ ವಿಮರ್ಶಾ ಲೇಖನಗಳಾವುವು?
ಉತ್ತರ:- ಪುಷ್ಪದಂತ ಪುರಾಣ, ಅಗ್ಗಳದೇವ, ರುದ್ರಭಟ್ಟ, ಕುಮಾರವ್ಯಾಸನ ಕರ್ಣ ಇವು ಡಿ.ಎಲ್.ಎನ್. ಅವರ ವಿಮರ್ಶಾ ಲೇಖನಗಳು.

8. ಡಿ.ಎಲ್.ಎನ್. ಅವರ ಸಾಹಿತ್ಯ ಸಂಶೋಧನೆಯ ಅಮೃತ ಫಲಗಳಾವುವು?
ಉತ್ತರ:- ಸಂಪಾದಿತ ಕೃತಿಗಳ ಮುನ್ನುಡುಗಳೂ, ಮೊನ್ನನ 'ಭುವನೈಕ ರಾಮಾಭ್ಯುದಯ', ಕುಮುದೇಂದು ರಾಮಾಯಣ, ಧವಳ ಎಂಬ ಹಾಡಿನ ಸ್ವರೂಪ ಇತ್ಯಾದಿ ಲೇಖನಗಳೂ ಅವರ ಸಾಹಿತ್ಯ ಸಂಶೋಧನೆಯ ಅಮೃತ ಫಲಗಳು,

9. ಯಾವ ಅಭಿನಂದನಾ ಗ್ರಂಥವನ್ನು ಡಿ.ಎಲ್.ಎನ್, ಅವರಿಗೆ ಅರ್ಪಿಸಲಾಗಿದೆ?
ಉತ್ತರ:- ಅವರ ವಿದ್ಯಾರ್ಥಿಗಳು, ಮಿತ್ರರು, ಜ್ಞಾನೋಪಾಸಕ, ಹೊಸಬೆಳಕು, ಉಪಾಯನ ಎಂಬ ಅಭಿನಂದನ ಗ್ರಂಥಗಳನ್ನು ಡಿ.ಎಲ್.ಎನ್. ಅವರಿಗೆ ಅರ್ಪಿಸಲಾಗಿದೆ.

●    ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

I ಯಾವ ಯಾವ ಸಂಸ್ಥೆಗಳಲ್ಲಿ ಡಿ.ಎಲ್.ಎನ್. ಅವರು ಸೇವೆ ಸಲ್ಲಿಸಿದ್ದಾರೆ?

ಉತ್ತರ:- ಡಿ.ಎಲ್.ಎನ್. ಅವರು ಸಂಶೋಧನ ವಿದ್ಯಾರ್ಥಿಯೆಂದು, ಓರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ದ ಕನ್ನಡ ಕನ್ನಡ ಅಧ್ಯಾಪಕರೆಂದು, ಪರಿಷತ್ತು ಕೈಕೊಂಡ ನಿಘಂಟುವಿನ ಸಂಪಾದಕರೆಂದು ಬಹುಮುಖವಾಗಿ ದುಡಿದವರು.

2. ತೀ.ನಂ.ಶ್ರೀ. ಅವರು ಡಿ.ಎಲ್.ಎನ್. ಅವರ ಪಾಂಡಿತ್ಯದ ಬಗ್ಗೆ ಏನು ಹೇಳಿದ್ದಾರೆ?
ಉತ್ತರ:- ಪಂಡಿತರೆಂದು, ಮೈಸೂರಿನ ಮಹಾರಾಜಾ ಕಾಲೇಜು, ಯುವಾಜಾ ಕಾಲೇಜು, ಬೆಂಗಳೂರಿನ ಸೆಂಟ್ರಲ್ ಕಾಲೇಜುಗಳಲ್ಲಿ“ಡಿ.ಎಲ್.ಎನ್. ಎಂದರೆ ಪಾಂಡಿತ್ಯ, ಪಾಂಡಿತ್ಯವೆಂದರೆ ಡಿ.ಎಲ್.ಎನ್. ಹಳಗನ್ನಡ ಭಾಷೆ ಸಾಹಿತ್ಯದ ವಿಷಯಕ್ಕಂತೂ ಹಲವರು ಹೇಳುವಂತೆ ನಾನೂ ಬಲ್ಲಂತೆ ಅವರೊಂದು ಜಂಗಮ ಬೃಹತ್ಕಶ ಹಳಗನ್ನಡದಲ್ಲಿ ಅನಗಿಂತಲೂ ನಿಷ್ಣಾತರಾದ ವಿದ್ವಾಂಸರನ್ನು ಸದ್ಯದಲ್ಲಿ ಕಾಣುವುದು ಅಶಕ್ಯವೆಂದೇ ನನ್ನ ಭಾವನೆ” ಕನ್ನಡದ ಇನ್ನೊಂದು ದಿಗ್ಗಜ ತೀ.ನಂ.ಶ್ರೀ. ಹೇಳಿದ ಮಾತಿದು.

3. ಕಲಬುರ್ಗಿಯವರು ಡಿ.ಎಲ್.ಎನ್. ಅವರ ಸಾಹಿತ್ಯ ಸೇವೆಯ ಬಗ್ಗೆ ಏನೆಂದು ಅಭಿಪ್ರಾಯಪಟ್ಟಿದ್ದಾರೆ?
ಉತ್ತರ:- ಇತ್ತೀಚೆಗೆ ಬಂದ ನೂರಾರು ಪುಸ್ತಕಗಳು, ಅವರು ವರ್ಗದಲ್ಲಿ ನೀಡಿದ ಉಪನ್ಯಾಸದ ವಿಸ್ತ್ರತ ರೂಪಗಳೆಂದು ಅವರ ಶಿಷ್ಯರೇ ಅಭಿಮಾನಪಟ್ಟು ಹೇಳುವುದರಿಂದ ಅವರ ಸಾಹಿತ್ಯ ಕೃಷಿಯನ್ನು ಪುಸ್ತಕ ಸಂಖ್ಯೆಯಲ್ಲಿ ನೋಡದೆ, ಶಿಷ್ಯ ಸಂಖ್ಯೆಯಲ್ಲಿ ನೋಡುವುದು ನ್ಯಾಯವೆಂದು ತೋರುತ್ತದೆ. ಹಾಗೆ ನೋಡಿದರೆ, ಒಂದು ಇಡೀ ಪುಸ್ತಕದಿಂದ ಸಾಧ್ಯವಾಗದ ಬೆಳಕು ಅವರ ಒಂದು ಲೇಖನ ಒದಗಿಸುವುದರಿಂದ ಅವರ ಕೃಷಿ ಸಣ್ಣದಲ್ಲವೆಂದೇ ಕಲಬುರ್ಗಿಯವರ ಅಭಿಪ್ರಾಯ.

4. ಡಿ.ಎಲ್.ಎನ್. ಸಂಪಾದಿಸಿದ ಮಹತ್ವದ ಕೃತಿಗಳಾವುವು?
ಉತ್ತರ:- ಡಿ.ಎಲ್.ಎನ್. ಸಂಪಾದಿಸಿದ ಮಹತ್ವದ ಕೃತಿಗಳಾವುವೆಂದರೆ, 11 ಗ್ರಂಥ, 7 ಮುನ್ನುಡಿ, 12 ವಿಮರ್ಶಾ ಲೇಖನ, 70 ಇತರ ಲೇಖನಗಳು, ವಡ್ಡಾರಾಧನೆ, ಪಂಪರಾಮಾಯಣ ಸಂಗ್ರಹ, ಸುಕುಮಾರ ಚರಿತಂ, ಸಿದ್ಧರಾಮ ಚಾರಿತ್ರ ಮೊದಲಾದ ಗ್ರಂಥಗಳು ಪರಿಷ್ಕರಣ ಹೊಂದಿ ಪ್ರಕಟಗೊಂಡವು.

5. ಡಿ.ಎಲ್.ಎನ್. ಅವರ 'ಕನ್ನಡ ಗ್ರಂಥ ಸಂಪಾದನೆ ಕೃತಿಯ ವಿಶೇಷತೆಗಳೇನು?
ಉತ್ತರ:- ಎಲ್ಲ ಕ್ಷೇತ್ರಗಳಲ್ಲಿಯೂ ಎದ್ದು ಕಾಣುವ ಡಿ.ಎಲ್.ಎನ್. ಅವರ ಶಾಸ್ತ್ರಮತಿ 'ಕನ್ನಡ ಗ್ರಂಥಸಂಪಾದನೆ' ಎಂಬ ಕೃತಿಯಲ್ಲಿ
ಸಂಪೂರ್ಣ ಪ್ರಕಟಗೊಂಡಿದೆ. ಗ್ರಂಥ ಸಂಪಾದನೆಯ ವಿಧಾನಗಳನ್ನು ಕನ್ನಡಕ್ಕೆ ಅನ್ವಯಿಸಿ ಬರೆದ ಈ ಶಾಸ್ತ್ರಕೃತಿ ಕನ್ನಡದಲ್ಲಿ ಪ್ರಥಮ ಸಾಹಸ, ಪ್ರಥಮ ಸಾಧನೆ. ಅದರ ಪಟಪುಟಗಳಲ್ಲಿ ಡಿ.ಎಲ್.ಎನ್. ಅವರ ಪ್ರಕಟಿತ, ಅಪ್ರಕಟಿತ ಕೃತಿಗಳಅಧ್ಯಯನದ ವ್ಯಾಪ್ತಿಯನ್ನು ಸಾಹಿತ್ಯ ವ್ಯಾಸಂಗದ ಉದ್ದಗಲಗಳನ್ನು ಅರಿಯಬಹುದು 

6. ಡಿ.ಎಲ್.ಎನ್. ಅವರಲ್ಲಿ ಸಂಶೋಧನಾ ಶಕ್ತಿ ಯಾವ ರೀತಿ ಇತ್ತು?
ಉತ್ತರ:- ಪಾ೦ಡಿತ್ಯಕ್ಕೆ ಸಂಬಂಧಪಟ್ಟ ಅವರ ಸಂಶೋಧನ ಶಕ್ತಿಯ ಉಜ್ವಲ ಉದಾಹರಣೆ 'ಶಬ್ದವಿಹಾರ' ಎಂಬ ಚಿಕ್ಕ ಕೃತಿ. ಒಂದು ಶಬ್ದವನ್ನು ಹಿಡಿದುಕೊಂಡು ರೆಂಬೆ, ಕಾಂಡಗುಂಟ ಇಳಿದು, ಹಲವು ಬೇರುಗಳಲ್ಲಿ ಹರಿದಾಡಿ, ಮೂಲ ಬೇರನ್ನು ಮುಟ್ಟಿ ಹೇಳುವ ಅವರ ಸಾಹಸ ಇನ್ನೊಬ್ಬರಿಗೆ ಅಸಾಧ್ಯವೆಂಬ ಭಾವನೆಯನ್ನು ಹುಟ್ಟಿಸುತ್ತದೆ.

●    ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. 

1. ತಮ್ಮ ವ್ಯಾಸಂಗದ ಹವ್ಯಾಸದ ಬಗ್ಗೆ ಡಿ.ಎಲ್.ಎನ್, ಅವರು ಹೇಳಿರುವ ಮಾತುಗಳಾವುವು?

ಉತ್ತರ:- ಪಾಂಡಿತ್ಯ, ಸಂಶೋಧನೆಗಳ ಕಾಡಿನಲ್ಲಿ ಆನೆಯಂತೆ ನಡೆದ ಅವರ ಬರೆವಣಿಗೆ ಶುಷ್ಕವಾಗಿರದೆ ರಸವತ್ತಾಗಿದ್ದಿತು. 'ಹಚ್ಚನೆಯ ಹುಲ್ಲುಗಾವಲ ಹರವಿನಲ್ಲಿ ಸ್ಟೇಚ್ಛೆಯಾಗಿ ತಿರುಗಾಡುತ್ತ, ಸೊಂಪಾಗಿ ಕಾಣುವೆಡೆಗಳಲ್ಲಿ ತಂಗಿ, ಹಿಡಿಹುಲ್ಲನ್ನು ಕಬಳಿಸುವ ಹಸುವಿನಂತೆ ಇದೆ ನನ್ನ ವ್ಯಾಸಂಗದ ಹವ್ಯಾಸ. ನನ್ನ ಕೊಠಡಿಯ ಆರಾಮ ಕುರ್ಚಿಯ ಮೇಲೆ ಮಲಗಿ, ಕೈಗೆ ಎಟುಕಿದ ಪುಸ್ತಕ ತೆರೆದು, ಓದುತ್ತ ಓದುತ್ತ, ಇಹದ ತಾಪತ್ರಯ ದೂರ ಸರಿದಂತೆಲ್ಲ ತನ್ನಯತೆಯ ಮಡುವಿನಲ್ಲಿ ಮೆಲ್ಲ ಮೆಲ್ಲನೆ ಮುಳುಗಿ ಬಿಡುತ್ತೇನೆ.
ಪಕ್ಕದ ಮೇಜಿನ ಮೇಲೆ ಇರುವ ಗಂಧದ ಕಡ್ಡಿಗಳು ಉಗುಳುವ ಹೊಗೆ, ಸುರುಳಿ ಸುರುಳಿಯಾಗಿ ಅಂಕು ಡೊಂಕಾಗಿಮೇಲೆ ಹರಡಿ, ಕೊಠಡಿಯ ಪರಿಮಿತಾಕಾಶದಲ್ಲಿ ಕರಗಿ ಹೋಗುವಂತೆ ನಾನೂ ಬಾರಿಬಾರಿಗೆ ಕರಗಿ ಹೋಗಬೇಕೆಂಬಹಂಬಲ ನನಗೆ ಹಿರಿದಾಗಿದೆ.

2. ಪ್ರಾಧ್ಯಾಪಕರಾಗಿ ಡಿ.ಎಲ್.ಎನ್. ಅವರು ಯಾವ ರೀತಿ ಸೇವೆ ಸಲ್ಲಿಸಿದರು?
ಉತ್ತರ:- ಡಿ.ಎಲ್.ಎನ್. ಅವರು ಪ್ರಥಮ ವರ್ಗದ ಪ್ರಾಧ್ಯಾಪಕರೆಂದು ಅವರ ಶಿಷ್ಯಕೋಟಿಯ ಒಮ್ಮತದ ಅಭಿಪ್ರಾಯ. 60 ನಿಮಿಷಕ್ಕೆ ಬದಲು 59 ನಿಮಿಷಕ್ಕೆ ಸಾಲುವಷ್ಟು ಪಾಠ ಸಾಮಗ್ರಿ ತಮ್ಮ ಹತ್ತಿರ ಇದ್ದರೆ ಅವರು ವರ್ಗ ನಡೆಸುತ್ತಿರಲಿಲ್ಲ. ಉದ್ವೇಗ, ಅಂದಾಜು, ಆತ್ಮವಂಚನೆ, ಅಪ್ರಾಮಾಣಿಕತೆ ಇವು ಒಮ್ಮೆಯೂ ವರ್ಗದಲ್ಲಿ ಸುಳಿಯಲಿಲ್ಲ. ವಿದ್ಯಾರ್ಥಿಗಳಲ್ಲಿ ವ್ಯಾಸಂಗದ ಹವ್ಯಾಸ ಬೆಳೆಸಿ, ಹಸಿವನ್ನು ಹಿಂಗಿಸುವ ದಾರಿ ತೋರಿಸಿ, ಆ ದಾರಿಯಲ್ಲಿ ಎಡವಿದಾಗ ಎತ್ತಿ ನಿಲ್ಲಿಸಿ ಮುನ್ನಡೆಸಿದರು. ಇದನ್ನು ನೆನಪಿಟ್ಟು ಅವರ ವಿದ್ಯಾರ್ಥಿಗಳು, ಮಿತ್ರರು ಜ್ಞಾನೋಪಾಸಕ, ಹೊಸಬೆಳಕು, ಉಪಾಯನ ಎಂಬ ಅಭಿನಂದನ ಗ್ರಂಥಗಳನ್ನು ಅರ್ಪಿಸಿ, ನಾಡಜನತೆ ಬೀದರ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರೆಂದು ಆರಿಸಿ ಕೃತಜ್ಞತೆಗಳನ್ನು ಸಲ್ಲಿಸಿದರು.

3. ಡಿ.ಎಲ್.ಎನ್. ಅವರದು ದೊಡ್ಡ ಮನಸ್ಸು ಎಂಬುದು ಹೇಗೆ ಗೊತ್ತಾಗುತ್ತದೆ?
ಉತ್ತರ:- ಇವುಗಳಿಗಿಂತ ಡಿ.ಎಲ್.ಎನ್. ಅವರ ದೊಡ್ಡ ಆಸ್ತಿಯೆಂದರೆ ದೊಡ್ಡ ಮನಸ್ಸು, ತಮ್ಮ ನಿಲುವಿಗೆ ತಕ್ಕ ಅಧಿಕಾರ ಸಿಗಲಿಲ್ಲವೆಂದು ಒಮ್ಮೆಯೂ ಅವರು ತುಟಿ ಬಿಚ್ಚಲಿಲ್ಲ, ಮನದಲ್ಲಿ ಆ ಭಾವನೆಯನ್ನು ಮೂಡಿಸಿಕೊಳ್ಳಲಿಲ್ಲ. ಇವರು ಸಂಪಾದಿಸಿದ 'ಶಬ್ದಮಣಿ ದರ್ಪಣ'ವನ್ನು ವಿಮರ್ಶಿಸುತ್ತ ನಾನು ಬರೆದ ಒಂದೆರಡು ಮಾತುಗಳು ಡಿ.ಎಲ್.ಎನ್. ಅವರಿಗೆ ನೋವನ್ನುಂಟು ಮಾಡಿದವು - ಎಂದು ಗೆಳೆಯರಿಂದ ತಿಳಿದಾಗ ನನಗೆ ನೋವಾಯಿತು. ಅವರು ತಮ್ಮ ಮುಂದಿನ ಆವೃತ್ತಿಯಲ್ಲಿ ಬರೆದ 'ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರೊ. ಮಲ್ಲಿನಾಥ ಕಲಬುರ್ಗಿ ಎಂ.ಎ. ಅವರು ದರ್ಪಣಾವಲೋಕನ ಎಂಬ ಹೆಸರಿನಲ್ಲಿ ಎರಡು ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಸೂತ್ರ, ವೃತ್ತಿ, ಟೀಕೆಗಳಲ್ಲಿ ಹಂಚಿಹೋಗಿರುವ ಸಾಹಿತ್ಯಗಳನ್ನೆಲ್ಲ ಅವರು ತುಂಬ ಶ್ರಮವಹಿಸಿ ಕಂಡುಹಿಡಿದಿದ್ದಾರೆ. ಇವರ ಲೇಖನಗಳು ಕಾರಣವಾಗಿ ಶಬ್ದಮಣಿ ದರ್ಪಣದ ಈ ಮುದ್ರಣ ಅವರ ಹಿಂದಿನ ಮುದ್ರಣಕ್ಕಿಂತ ಹೆಚ್ಚು ಸಮರ್ಪಕವಾಗಿದೆಯೆಂದು ಭಾವಿಸುತ್ತೇನೆ" ಎಂಬ ನಿರ್ವಿಕಾರ ಬರವಣಿಗೆಯನ್ನು ಓದಿದಾಗಲಂತೂ ನನ್ನನ್ನೇ ನಾನು ಹಳಿದುಕೊಂಡೆ, ಮನದಲ್ಲಿಯೇ ಅವರ ಕ್ಷಮೆ ಕೇಳಿಕೊ೦ಡೆ. 

●    ಸಂದರ್ಭದೊಡನೆ ಸ್ಪಷ್ಟಿಕರಿಸಿರಿ.

1. ಡಿ.ಎಲ್.ಎನ್. ಎಂದರೆ ಪಾಂಡಿತ್ಯ, ಪಾಂಡಿತ್ಯ ಎಂದರೆ ಡಿ.ಎಲ್.ಎನ್.
ಆಯ್ಕೆ
:- ಈ ವಾಕ್ಯವನ್ನು ಎಂ. ಎಂ. ಕಲಬುರ್ಗಿ ಅವರು ಬರೆದಿರುವ'ಮಾರ್ಗ ಸಂಪುಟ1, ಎಂಬ ಕೃತಿಯಿಂದ ಆಯ್ದ" ಪಾಂಡಿತ್ಯದ ಡಿ.ಎಲ್. ನರಸಿಂಹಾಚಾರ್" ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ತೀ.ನಂ.ಶ್ರೀ.ಯವರು ಹೇಳಿದ್ದಾರೆ.
ಸ್ವಾರಸ್ಯ:- ಹಳಗನ್ನಡ ಭಾಷೆ ಸಾಹಿತ್ಯದ ವಿಷಯಕ್ಕಂತೂ ಹಲವರು ಹೇಳುವಂತೆ ನಾನೂ ಬಲ್ಲಂತೆ ಅವರೊಂದು ಜಂಗಮ ಬೃಹತ್ಕಶ ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

2. ಅವರ ದೊಡ್ಡ ಆಸ್ತಿಯೆಂದರೆ ದೊಡ್ಡ ಮನಸ್ಸು
ಆಯ್ಕೆ:-
ಈ ವಾಕ್ಯವನ್ನು ಎಂ. ಎಂ. ಕಲಬುರ್ಗಿ ಅವರು ಬರೆದಿರುವ'ಮಾರ್ಗ ಸಂಪುಟ1, ಎಂಬ ಕೃತಿಯಿಂದ ಆಯ್ದ" ಪಾಂಡಿತ್ಯದ ಡಿ.ಎಲ್. ನರಸಿಂಹಾಚಾರ್" ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಲೇಖಕರು ಹೇಳಿದ್ದಾರೆ.
ಸ್ವಾರಸ್ಯ:- ತಮ್ಮ ನಿಲುವಿಗೆ ತಕ್ಕ ಅಧಿಕಾರ ಸಿಗಲಿಲ್ಲವೆಂದು ಒಮ್ಮೆಯೂ ಅವರು ತುಟಿ ಬಿಚ್ಚಲಿಲ್ಲ. ಮನದಲ್ಲಿ ಆ ಭಾವನೆಯನ್ನು ಮೂಡಿಸಿಕೊಳ್ಳಲಿಲ್ಲ ಎಂಬ ವಿಚಾರಗಳನ್ನು ಚರ್ಚಿಸುವಾಗ ಈ ಮಾತುವ್ಯಕ್ತವಾಗಿದೆ. 

3. ಮನದಲ್ಲಿಯೇ ಅವರ ಕ್ಷಮೆ ಕೇಳಿಕೊಂಡೆ.
ಆಯ್ಕೆ:
- ಈ ವಾಕ್ಯವನ್ನು ಎಂ. ಎಂ. ಕಲಬುರ್ಗಿ ಅವರು ಬರೆದಿರುವ'ಮಾರ್ಗ ಸಂಪುಟ 1, ಎಂಬ ಕೃತಿಯಿಂದ ಆಯ್ದ" ಪಾಂಡಿತ್ಯದ ಡಿ.ಎಲ್. ನರಸಿಂಹಾಚಾರ್" ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಲೇಖಕರು ಹೇಳಿದ್ದಾರೆ.
ಸ್ವಾರಸ್ಯ:- ಡಿ.ಎಲ್.ಎನ್. ಅವರು ಸಂಪಾದಿಸಿದ 'ಶಬ್ದಮಣಿ ದರ್ಪಣ'ವನ್ನು ವಿಮರ್ಶಿಸುತ್ತ ನಾನು ಬರೆದ ಒ೦ದೆರಡು ಮಾತುಗಳು ಡಿ.ಎಲ್.ಎನ್. ಅವರಿಗೆ ನೋವನ್ನುಂಟು ಮಾಡಿದವು ಎಂದು ತಮ್ಮ ಮನಸ್ಸಿನಲ್ಲಿ ಕ್ಷಮೆ ಕೇಳಿಕೊಂಡಾಗ ಈ ಮಾತು ಬಂದಿದೆ.

ಭಾಷಾಭ್ಯಾಸ

ಆ) ಕೆಳಗೆ ನೀಡಿರುವ ಪದಗಳಿಗೆ ವಿರುದ್ಧಾರ್ಥ ಬರೆಯಿರಿ.

ಜ೦ಗಮX ಸ್ಥಾವರ.
ಹಿರಿದು X ಕಿರಿಯ,
ನ್ಯಾಯ X ಅನ್ಯಾಯ,
ಮರಣ X ಜನನ,
ಗೌರವ X ಅಗೌರವ,
ಬೆಳಕು X ಕತ್ತಲು,
ವಿಶೇಷ X ಶೇಷ:
ಪರಿಪೂರ್ಣ X ಅಪರಿಪೂರ್ಣ,
 ಶುದ್ಧಿX ಅಶುದ್ಧಿ,
ಶಕ್ತಿ X ನಿಶ್ಯಕ್ತಿ,
ಸಾದ್ಯ X ಅಸಾಧ್ಯ .
ಮುಳುಗುX ತೇಲು,
ನೋವು X ನಲಿವು,
ಅಶಕ್ಯ  X ಶಕ್ಯ.

ಆ) ಕೆಳಗಿನ ಪದಗಳಿಗೆ ತದ್ಬದ ರೂಪಗಳನ್ನು ಬರೆಯಿರಿ.
ದುಃಖ - ದುಕ್ಕ   
ಕಾರ್ಯ- ಕಜ್ಜ,   
ವಿದ್ಯಾ- ಬಿಜ್ಜೆ 
ಕಾವ್ಯ- ಕಬ್ಜ 

ಇ) ಕೆಳಗೆ ನೀಡಿರುವ ಪದಗಳನ್ನು ಬಿಡಿಸಿ, ಸಂಧಿಯನ್ನು ಹೆಸರಿಸಿರಿ.
1 ವಿದ್ಯಾರ್ಥಿ= ವಿದ್ಯಾ+ ಆರ್ಥಿ- ಸವರ್ಣದೀರ್ಘಸಂಧಿ
2. ಹಳೆಗನ್ನಡ= ಹಳೆ + ಕನ್ನಡ- ಆದೇಶಸಂಧಿ
3. ಉದ್ದಗಲ = ಉದ್ದ +ಅಗಲ - ಲೋಪಸಂಧಿ
4. ರಾಮಾಭ್ಯುದಯ = ರಾಮ + ಅಭ್ಯುದಯ - ಸವರ್ಣದೀರ್ಘಸಂಧಿ
5. ಭುವನೈಕ= ಭುವನ + ಐಕ್ಯ - ವೃದ್ಧಿಸಂಧಿ
6. ಹುಲ್ಲುಗಾವಲು= ಹುಲ್ಲು + ಕಾವಲು - ಆದೇಶಸಂಧಿ
7. ನೆನಪಿಟ್ಟು= ನೆನಪು + ಇಟ್ಟು -ಲೋಪಸಂಧಿ
8. ಜ್ಞಾನೋಪಾಸಕ= ಜ್ಞಾನ + ಉಪಾಸಕ - ಗುಣಸಂಧಿ
9 ದರ್ಪಣಾವಲೋಕನ = ದರ್ಪಣ + ಅವಲೋಕನ ಸವರ್ಣದೀರ್ಘಸಂಧಿ
10. ಮನದಣಿ = ಮನ + ತಣಿ - ಆದೇಶಸಂಧಿ
11. ದಿಗ್ಗಜ= ದಿಕ್ + ಅಜ - ಜಸ್ತ್ರ ಸಂಧಿ
12. ಮಾನಸೋಲ್ಲಾಸ = ಮಾನಸ + ಉಲ್ಲಾಸ- ಗುಣಸಂಧಿ

ಈ ಕೆಳಗಿನ ಪದಗಳಿಗೆ ಅನ್ಯಲಿಂಗ ರೂಪವನ್ನು ಬರೆಯಿರಿ.
ಸಂಶೋಧಕ- ಸಂಶೋಧಕಿ
ಕವಿ- ಕವಯಿತ್ರಿ
ವಿಮರ್ಶಕಿ-ವಿಮರ್ಶಕ
ದುಡಿದನು-ದುಡಿದಳು
ಲೇಖಕ-ಲೇಖಕಿ

ಊ) ಇವುಗಳ ವಚನವನ್ನು ಬದಲಾಯಿಸಿ ಬರೆಯಿರಿ.

ಲೇಖನ-  ಲೇಖನಗಳು
ಕೃತಿ- ಕೃತಿಗಳು
ನಿದರ್ಶನ-  ನಿದರ್ಶನಗಳು
ಕ್ಷೇತ್ರ- ಕ್ಷೇತ್ರಗಳು ಅಧ್ಯಾಪಕ-ಅಧ್ಯಾಪಕರು.

ಋ) ಕೆಳಗೆ ನೀಡಿದ ಕ್ರಿಯಾಪದಗಳ ಧಾತುವನ್ನು ಗುರುತಿಸಿ ಬರೆಯಿರಿ.
ತೋರುತ್ತದೆ- ತೋರು
ಬಿಡುತ್ತೇನೆ~ ಬಿಡು
ಸಲ್ಲಿಸಿದರು~ ಸಲ್ಲಿಸು ಕಂಡುಹಿಡಿದಿದ್ದಾರೆ ಕಂಡುಹಿಡಿ.

ಎ) ಕೆಳಗಿನ ಪದಗಳಿಗೆ ನಾನಾರ್ಥವನ್ನು ಬರೆಯಿರಿ.
ಹಳಿ- ರೈಲು ಹಳಿ, ನಿಂದಿಸು.
ಕಣ~ ಅಣು, ಒಕ್ಕಲು ಮಾಡುವ ಸ್ಥಳ.
ಕಳೆ ಕಾ೦ತಿ, ಬೇಡವಾದ ಹುಲ್ಲು
ಕಾಡು- ಅರಣ್ಯ, ಪೀಡಿಸು.
You Might Like

Post a Comment

0 Comments