Recent Posts

ನನ್ನ ಹಾಗೆಯೆ - Class 8th Second Language Kannada Textbook Solutions

ನನ್ನ ಹಾಗೆಯೆ

ಕವಿ/ಲೇಖಕರ ಪರಿಚಯ 
 
*  ಸು. ರಂ. ಎಕ್ಕುಂಡಿಪೂರ್ಣ ಹೆಸರುಸುಬ್ಬಣ್ಣ ರಂಗನಾಥ ಎಕ್ಕುಂಡಿ, 1923 ರಲ್ಲಿ ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ಜನಿಸಿದರು.
* ಇವರು ಕಥನ ಕವನಗಳು, ಆನಂದತೀರ್ಥ, ಸಂತಾನ, ಹಾವಾಡಿಗರ ಹುಡುಗ, ಮತ್ಸಗಂಧಿ, ಬೆಳ್ಳಕ್ಕಿಗಳು, ಕಥನ ಕವನಗಳು, ಬಕುಳದ ಹೂವುಗಳು ಇನ್ನು ಮುಂತಾದ ಕೃತಿಗಳನ್ನು ಬರೆದಿದ್ದಾರೆ.
* ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, ರಾಜ್ಯ ಶಿಕ್ಷಕ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿವೆ.
*.ಪ್ರಸ್ತುತ ಪದ್ಯವನ್ನು ಅವರ 'ಕಥನ ಕವನಗಳು' ಎಂಬ ಕವನ ಸಂಗ್ರಹದಿಂದ ಆಯ್ದುಕೊಳ್ಳಲಾಗಿದೆ.

                              ಪದಗಳ ಅರ್ಥ 
 
ಅಭಯ – ರಕ್ಷಣೆ 
ದುಗ್ರಹಾಸ - ಹಾಲುನಗೆ 
ಮುಗುಳಗೆನೆ – ಗುಂಪಸೇರು 
ಮುಗಿಲು - ಮೋಡ; ಎತ್ತರದ ಸ್ಥಾನ. 
ಸೆಣಸು – ಹೋರಾಡು ನುಡಿಯ 
ಹೊಳೆ - ನಿರಂತರವಾಗಿ ಕೇಳಿ ಬರುವ ಮಾತು. 
ಮಜ್ಜನ (ದ) – ಮಾರ್ಜನ(ತೃ); ಸ್ನಾನ. 
ಮುಗ್ಧ - ಸರಳ ಸ್ವಭಾವದ 
ಹಚ್ಚಡ - ಹೊದಿಕೆ
ಹಮ್ಮು - ಅಹಂಕಾರ.

* ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.
 
1. ಬಾಹುಬಲಿ ಮೂರ್ತಿ ಇರುವ ಬೆಟ್ಟದ ಹೆಸರು ಇಂದ್ರಗಿರಿ
2. ಬಾಹುಬಲಿಯ ಅಣ್ಣನ ಹೆಸರು ಭರತ
3. ಬಾಹುಬಲಿಯು ಹುಟ್ಟು ಸಾವು ತಿಳಿಯಲು ಕಂಡುಕೊಂಡ ದಾರಿ ತಪಸ್ಸು
4. ಸು.ರಂ.ಎಕ್ಕುಂಡಿಯವರ ಬಕುಳದ ಹೂವುಗಳು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ದೊರೆತಿದೆ.
 
  * ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

1. ಬಾಹುಬಲಿಯನ್ನು ಕಂಡು ಮಗುವು ಅಜ್ಜನನ್ನು ಏನೆಂದು ಕೇಳಿತು?

ಉತ್ತರ:- ಅಜ್ಜನನ್ನು ಮಗುವು 'ಈತನಾರು ತಾತ ಇಲ್ಲಿ ನಿಂತು ನೋಡುತ್ತಿರುವನು ಇಂದ್ರಗಿರಿಯ ನೆತ್ತಿಯಲ್ಲಿ ಏನು ಮಾಡುತ್ತಿರುವನು?' ಎಂದು ಕೇಳಿತು.

2. ಬಾಹುಬಲಿಯ ಏಕಾಂಗಿತನವನ್ನು ಕಂಡು ಮಗುವು ಕುತೂಹಲದಿಂದ ಕೇಳಿದ ಪ್ರಶ್ನೆಗಳಾವುವು?
ಉತ್ತರ:- ಬಾಹುಬಲಿಯ ಏಕಾಂಗಿತನವನ್ನು ಕಂಡು ಮಗುವು ಕುತೂಹಲದಿಂದ 'ಇಲ್ಲಿ ಏಕೆ ಬಂದು ನಿಂತ? ಇಷ್ಟು ದೂರ! ಎತ್ತರ! ಭಯವಾಗದೆ ಇವನಿಗಿಲ್ಲಿ ಯಾರೂ ಇಲ್ಲ ಹತ್ತಿರ' ಎಂದು ಪ್ರಶ್ನೆಗಳನ್ನು ಕೇಳಿತು.
 
3. ಬಾಹುಬಲಿ ಯಾವ ಮೌಲ್ಯಗಳ ಸಂಕೇತ?
ಉತ್ತರ:- ಬಾಹುಬಲಿ ಸ್ವಾಭಿಮಾನ, ತ್ಯಾಗ, ಹಾಗೂ ಅಹಿಂಸೆ ಮೌಲ್ಯಗಳ ಸಂಕೇತ.

4. ಬಾಹುಬಲಿಯ ತಪಸ್ಸು ಯಾವ ರೀತಿ ಇತ್ತು?
ಉತ್ತರ:- ಬಾಹುಬಲಿಯ ತಪಸ್ಸು ಹುಟ್ಟು ಸಾವಿನ ಆಚೆಗಿರುವ ಹೊಳೆಯುವ ಹಾದಿ ನೋಡುವಂತೆ ಇತ್ತು. 

5. ಬಾಹುಬಲಿ ಮೂರ್ತಿಯು ಮಜ್ಜನದ ಸಂದರ್ಭದಲ್ಲಿ ಹೇಗೆ ಗೋಚರಿಸುತ್ತದೆಂದು ಕವಿ ವರ್ಣಿಸಿದ್ದಾರೆ?
ಉತ್ತರ:- ಬಾಹುಬಲಿ ಮೂರ್ತಿಯು ಮಜ್ಜನದ ಸಂದರ್ಭದಲ್ಲಿ ಹಾಲಿನಿಂದ ಅಭಿಷೇಕ ಮಾಡಿದ ಮುದ್ದು ಮುಖದ ಮುಗುಳ್ಳಗೆ ಚೆಲ್ಲುವವನ ರೀತಿಯಲ್ಲಿ ಗೋಚರಿಸುತ್ತಾನೆ.

6. ಸೂರ್ಯಚಂದ್ರರು ಬಾಹುಬಲಿಗೆ ಏಕೆ ನಮಿಸಿದರು?
ಉತ್ತರ:- ಬಾಹುಬಲಿಯು ಸೂರ್ಯ ಚಂದುಗಿಂತ ದೀಪದ ತೇಜಸ್ಸಿನಂತೆ ಕಂಗೊಳಿಸುವುದನ್ನು ನೋಡಿ ಬಾಹುಬಲಿಗೆ ನಮಿಸಿದರು.

7. ಮಗುವಿನ ಮುಗ್ಧ ನಂಬಿಕೆಗೆ ಗೊಮ್ಮಟನ ಪ್ರತಿಕ್ರಿಯೆ ಏನು?
ಉತ್ತರ:- ಮಗುವಿನ ಮುಗ್ಧ ನಂಬಿಕೆಗೆ ಗೊಮ್ಮಟನ ಪ್ರತಿಕ್ರಿಯೆ ಮುಗುಳಗೆ ಆಗಿತ್ತು.

8. ಭರತ ಬಾಹುಬಲಿಯರ ಸೆಣಸಾಟದ ಫಲಿತಾಂಶವೇನು?
ಉತ್ತರ:- ಬಾಹುಬಲಿ ಗೆದ್ದ ರಾಜ್ಯವನ್ನು ಅಣ್ಣನಿಗೆ ಒಪ್ಪಿಸಿ ತಾನು ವೈರಾಗ್ಯಪರನಾಗಿ ತಪಸ್ಸಿಗೆ ತೆರಳುತ್ತಾನೆ.
 
* ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1.ಅಜ್ಜನು ಬಾಹುಬಲಿಯ ಮೂರ್ತಿ ಮತ್ತು ಕೀರ್ತಿಯ ಬಗ್ಗೆ ಮಗುವಿಗೆ ಏನು ಹೇಳಿದನು?

ಉತ್ತರ:- ಬಾಹುಬಲಿಯ ಮೂರ್ತಿ ಧೀರತನದ ಪ್ರತೀಕವಾಗಿ ಮತ್ತು ಕೀರ್ತಿಯು ಪ್ರತಿಯೊಬ್ಬರ ನುಡಿಯ ಹೊಳೆಗಳಲ್ಲಿ ತುಂಬಿ ಹರಿಯುತ್ತದೆ ಎಂದು 'ಅಜ್ಜನು ಬಾಹುಬಲಿಯ ಮೂರ್ತಿ ಮತ್ತು ಕೀರ್ತಿಯ ಬಗ್ಗೆ ಮಗುವಿಗೆ ಹೇಳಿದರು.

2. ಬಾಹುಬಲಿ ತಪಸ್ಸಿಗೆ ಹೋಗಲು ಕಾರಣವೇನು?
ಉತ್ತರ:- ಭರತ ಮತ್ತು ಬಾಹುಬಲಿ ಇಬ್ಬರ ನಡುವೆ ರಾಜ್ಯಕ್ಕಾಗಿ ಯುದ್ಧ ನಡೆಯುತ್ತದೆ. ಯುದ್ಧದಲ್ಲಿ ಬಾಹುಬಲಿಯು ತನ್ನ ಅಣ್ಣನಾದ ಭರತನನ್ನು ಮುಷ್ಟಿಯುದ್ಧ, ದೃಷ್ಟಿಯುದ್ಧ, ಹಾಗೂ ಜಲಯುದ್ಧಗಳಲ್ಲಿ ಸೋಲಿಸುತ್ತಾನೆ. ಇದರಿಂದ ಅವಮಾನಿತನಾದ ಭರತನು ಬಾಹುಬಲಿಯನ್ನು ಕೊಲ್ಲಲು ಮುಂದಾಗುತ್ತಾನೆ. ಇದರಿಂದ ಬೇಸರಗೊಂಡ ಬಾಹುಬಲಿ ಗೆದ್ದರಾಜ್ಯವನ್ನು ಭರತನಿಗೆ ಒಪ್ಪಿಸಿ ತಪಸ್ಸನ್ನಾಚರಿಸಲು ತೆರಳುತ್ತಾನೆ. 

3. ಬಾಹುಬಲಿಯು ತನ್ನ ಹಾಗೆಯೆ ಎಂದು ಮಗು ಭಾವಿಸಿದುದು ಏಕೆ?
ಉತ್ತರ:- ಮಗುವಿಗೆ ಅಮ್ಮ ಮಜ್ಜನ ಮಾಡಿಸುವಾಗ ಮೊದಲು ಎಣ್ಣೆ ಹಚ್ಚಿ ಗೊಮ್ಮಟನಂತೆಯೇ ನಿಲ್ಲಿಸುವುದನ್ನು ಅರಿತ ಮಗು ತನ್ನಂತೆ ಬಾಹುಬಲಿಯು ಮಜ್ಜನ ಮಾಡಿಸಿಕೊಳ್ಳಲು 'ತನ್ನ ಹಾಗೆಯೆ' ನಿಂತಿದ್ದಾನೆ ಎಂದು ಮಗು ಭಾವಿಸಿತು.
 
*  ಸುಮಾರು ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

1. 'ನೀನು ಸೋತುಗೆದ್ದೆ, ಅಣ್ಣ, ನಾನು ಗೆದ್ದು ಸೋತೆನು' ಎಂದು ಬಾಹುಬಲಿಯು ಹೇಳಿದ ಪ್ರಸಂಗದ ಸ್ವಾರಸ್ಯವನ್ನು ವಿವರಿಸಿರಿ.?

ಉತ್ತರ:- ವೃಷಭನಾಥನ ಮಕ್ಕಳಾದ ಭರತ ಮತ್ತು ಬಾಹುಬಲಿ ಇಬ್ಬರ ನಡುವೆ ರಾಜ್ಯಕ್ಕಾಗಿ ಯುದ್ಧ ನಡೆಯುತ್ತದೆ. ಯುದ್ಧದಲ್ಲಿ ಬಾಹುಬಲಿಯು ತನ್ನ ಅಣ್ಣನಾದ ಭರತನನ್ನು ಮುಷ್ಟಿಯುದ್ಧ, ದೃಷ್ಟಿಯುದ್ಧ, ಹಾಗೂ ಜಲಯುದ್ಧಗಳಲ್ಲಿ ಸೋಲಿಸುತ್ತಾನೆ. ಇದು೦ದ ಅವಮಾನಿತನಾದ ಭರತನು ಬಾಹುಬಲಿಯನ್ನು ಕೊಲ್ಲಲು ಮುಂದಾಗುತ್ತಾನೆ. ಇದರಿಂದ ಬೇಸರಗೊಂಡ ಬಾಹುಬಲಿ ಗೆದ್ದ ರಾಜ್ಯವನ್ನು ಭರತನಿಗೆ ಒಪ್ಪಿಸಿ ತಪಸ್ಯಗೆ ಹೊರಡಲು ಸಿದ್ಧನಾಗುವಾಗ ಅಣ್ಣ ನೀನು ಸೋತು ಈಗ ಎಲ್ಲವನ್ನು ಗೆದ್ದೆ, ಆದರೆ ನಾನು ಮೊದಲು ಗೆದ್ದು ಈಗ ಸೋತೆ ಎಂದು ತಿಳಿಸಿದನು. ಮಾತ್ತಾಪ ಹೊಂದಿ ಮನಸ್ಸು ನಿಯಂತ್ರಿಸಲು, ಮುಕ್ತಿಮಾರ್ಗ ಅರಿಯಲು ಗೆದ್ದು ಸೋತ ಬಾಹುಬಲಿ ತಪಸ್ಸಿಗೆ ಹೊರಟು ಹೋದನು ಎಂಬುದು ಈ ಪ್ರಸಂಗದ ಸ್ವಾರಸ್ಯವಾಗಿದೆ.

2. 'ನನ್ನ ಹಾಗೆಯೇ' ಕವನದ ಭಾವಾರ್ಥವನ್ನು ಬರೆಯಿರಿ
ಉತ್ತರ:- ಐತಿಹಾಸಿಕ, ಆಧ್ಯಾತ್ಮಕ, ಹಿನ್ನೆಲೆ ಹೊಂದಿರುವ ಶ್ರವಣಬೆಳಗೊಳದ ಗೊಮ್ಮಟಮೂರ್ತಿಯ ಪರಿಚಯವನ್ನು ತಾತ, ಮೊಮ್ಮಗನಿಗೆ ಪರಿಚಯಿಸುವ ಶೈಲಿಯಲ್ಲಿ ಕವಿ ಸು.ರಂ.ಎಕ್ಕುಂಡಿಯವರು ಬಹಳ ಸೊಗಸಾಗಿ ವಿವರಿಸಿದ್ದಾರೆ. ಸ್ವಾಭಿಮಾನ. ತ್ಯಾಗ ಹಾಗೂ ಅಹಿಂಸೆಯ ಪ್ರತೀಕವಾದ ಗೊಮ್ಮಟಮೂರ್ತಿಗೆ ಹನ್ನೆರಡು ವರ್ಷದಲ್ಲೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಈ ಮಹಾಮಜ್ಜನ ದಿನದಂದು ಮಗುವೊಂದು ತನ್ನ ಅಜ್ಜನೊಂದಿಗೆ ಶ್ರವಣಬೆಳಗೊಳದ ಇಂದ್ರಗಿರಿಗೆ ಭೇಟಿ ನೀಡಿತ್ತು. ಆಗ ನಡೆದ ಅಜ್ಜ-ಮೊಮ್ಮಗನ ಸಂಭಾಷಣೆಯ ಕಥಾನಾಟಕ ಶೈಲಿ ಇದಾಗಿದೆ. ಮೊಮ್ಮಗನು ತನ್ನ ಅಜ್ಜನಿಗೆ ಇಂದ್ರಗಿರಿಯ ಬೆಟ್ಟದ ಮೇಲೆ ನಿಂತು ನೋಡುತ್ತಿರುವವನು ಯಾರು? ಅಲ್ಲೇನು ಮಾಡುತ್ತಿದ್ದಾನೆ? ಎಂಬ ಪ್ರಶ್ನೆಗೆ ಅಜ್ಜನು ಇವನೇ ಬಾಹುಬಲಿ, ಧೀರತನದ ಮೂರ್ತಿ, ಇವನ ಕೀರ್ತಿ ದೇಶದಲ್ಲೆಲ್ಲ ಹರಡಿದೆ. ಬೆಟ್ಟ ಹತ್ತುವವರ ಇಳಿಯುವವರ ನಿಂತು ನೋಡುತ್ತಿರುವನು. ಹತ್ತುವಾಗ ಬಳಲಿದವರಿಗೆಲ್ಲ ಕೈ ನೀಡಿ ಸಹಕರಿಸುವನು. ಎಂಬುದಾಗಿ ಹೇಳಿದಾಗ ಮೊಮ್ಮಗನು ಕುತೂಹಲದಿಂದ ಇಷ್ಟು ದೂರ ಇಷ್ಟು ಎತ್ತರದ ಮೇಲೆ ಏಕೆ ಒಬ್ಬನೇ ನಿಂತಿದ್ದಾನೆ. ಆತನಿಗೆ ಒಬ್ಬನೆ ನಿಂತಿರಲು ಭಯವಾಗದೆ? ಹತ್ತಿರ ಕೂಡ ಯಾರೂ ಇಲ್ಲ” ಎಂದು ಕೇಳಿದಾಗ, ಅಜ್ಜನು ಈತನು ಅಭಯಮೂರ್ತಿ ಈತನಿಗೆ ಭಯವೆಲ್ಲಿಂದ ಬರಬೇಕು. ಈತನ ಅಣ್ಣ ಭರತ ಚಕ್ರವರ್ತಿ, ಭರತ ಮತ್ತು ಬಾಹುಬಲಿ ಇಬ್ಬರ ನಡುವೆ ರಾಜ್ಯಕ್ಕಾಗಿ ಯುದ್ಧ ನಡೆಯುತ್ತದೆ. ಯುದ್ಧದಲ್ಲಿ ಬಾಹುಬಲಿಯು ತನ್ನ ಅಣ್ಣನಾದ ಭರತನನ್ನು ಮುಷ್ಟಿಯುದ್ಧ, ದೃಷ್ಟಿಯುದ್ಧ, ಹಾಗೂ ಜಲಯುದ್ಧಗಳಲ್ಲಿ ಸೋಲಿಸುತ್ತಾನೆ. ಇದುಂದ ಅವಮಾನಿತನಾದ ಭರತನು ಬಾಹುಬಲಿಯನ್ನು ಕೊಲ್ಲಲು ಮುಂದಾಗುತ್ತಾನೆ. ಇದರಿಂದ ಬೇಸರಗೊಂಡ ಬಾಹುಬಲಿ ಗೆದ್ದ ರಾಜ್ಯವನ್ನು ಭರತನಿಗೆ ಒಪ್ಪಿಸಿ ತಪಸ್ಸನ್ನಾಚರಿಸಲು ತೆರಳುತ್ತಾನೆ. ಈ ರೀತಿಯಲ್ಲಿ ಭೋಗವನ್ನು ತ್ಯಜಿಸಿ ತ್ಯಾಗಿಯಾಗುವ ಭವ್ಯ ತತ್ತ್ವವನ್ನು ಬಾಹುಬಲಿಯು ಜಗತ್ತಿಗೆ ಸಾರುತ್ತಾನೆ.ಇಷ್ಟೊಂದು ಜನ ಇಲ್ಲಿಗೆ ಏಕೆ ಬಂದು ಸೇರಿದ್ದಾರೆ. ಎಲ್ಲರೂ 'ಬಾಹುಬಲಿ''ಬಾಹುಬಲಿ' ಎಂದೇಕೆ ಕರೆಯುತ್ತಿದ್ದಾರೆ? ಎಂದು ಮೊಮ್ಮಗನು ಕೇಳಲು, ಅಜ್ಜನು ಇಂದು ಬಾಹುಬಲಿಗೆ ಹಾಲಿನ ಮಜ್ಜನ, ಈತನ ಈ ಮುಗ್ಧ ಮುಗುಳಗುವನ್ನು ನೋಡಲು ಭಕ್ತವೃಂದ ಇವನನ್ನು ಧ್ಯಾನಿಸುತ್ತಾ, ಭಜಿಸುತ್ತಾ, ಆತನ ನಾಮವನ್ನು ಸ್ಮರಿಸುತ್ತಾ ಬರುತ್ತಿದ್ದಾರೆ ಎಂದರು. ಆಗ ಪುಟ್ಟ ಮಗುವಿಗೆ ಅಮ್ಮ ಮಜ್ಜನ ಮಾಡಿಸುವಾಗ ಮೊದಲು ಎಣ್ಣೆ ಹಚ್ಚಿ ಗೊಮ್ಮಟನಂತೆಯೇ ನಿಲ್ಲಿಸುವುದನ್ನು ಅರಿತ ಮಗು ತನ್ನಂತೆ ಬಾಹುಬಲಿಯು ಮಜ್ಜನ ಮಾಡಿಸಿಕೊಳ್ಳಲು "ತನ್ನ ಹಾಗೆಯೆ' ನಿಂತಿದ್ದಾನೆ ಎಂದು ಮಗು ಭಾವಿಸಿತು.

                      *  ಸಂದರ್ಭದೊಂದಿಗೆ ವಿವರಿಸಿರಿ.

1. ಇವನೆ ಬಾಹುಬಲಿಯು ಮಗು ಧೀರತನದ ಮೂರ್ತಿಯು!
ಆಯ್ಕೆ:
- ಈ ವಾಕ್ಯವನ್ನು "ಸು. ರಂ. ಎಕ್ಕುಂಡಿ" ಅವರು ಬರೆದಿರುವ'ಕಥನಕವನಗಳು'ಎಂಬ ಕೃತಿಯಿಂದ ಆಯ್ದ "ನನ್ನ ಹಾಗೆಯೆ"ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ..
ಸಂದರ್ಭ:- ಈ ಮಾತನ್ನು ಅಜ್ಜನು ಮಗುವಿಗೆ ಹೇಳಿದ್ದಾನೆ ಇಂದ್ರಗಿರಿಯ ಮೇಲೆ ಬಾಹುಬಲಿ ನಿಂತ ಪರಿಯನ್ನು ಕಂಡು ಮುಗ್ಧ ಮಗು ತನ್ನ ಅಜ್ಜನಿಗೆ ಇವನಾರು ತಾತ. ಇಲ್ಲಿಗೇಕೆ ಬಂದು ನಿಂತನು ಎಂದು ಕೇಳಿದಾಗ ತಾತ 'ಇವನೆ ಬಾಹುಬಲಿಯು ಮಗು ಧೀರತನದ ಮೂರ್ತಿಯು' ಎಂದು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

2.ನೀನು ಸೋತು ಗೆದ್ದೆ ಅಣ್ಣ, ನಾನು ಗೆದ್ದು ಸೋತನು
ಆಯ್ಕೆ
:- ಈ ವಾಕ್ಯವನ್ನು "ಸು. ರಂ. ಎಕ್ಕುಂಡಿ" ಅವರು ಬರೆದಿರುವ'ಕಥನ ಕವನಗಳು'ಎಂಬ ಕೃತಿಯಿಂದ ಆಯ್ದ"ನನ್ನ ಹಾಗೆಯೆ"ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
 ಸಂದರ್ಭ:- ಈ ಮೇಲಿನ ಮಾತನ್ನು ಬಾಹುಬಲಿಯು ಭರತನಿಗೆ ಹೇಳಿದ್ದಾನೆ.  ಭರತ ಬಾಹುಬಲಿಯರ ಯುದ್ಧದಲ್ಲಿ ಬಾಹುಬಲಿ ಗೆದ್ದ ರಾಜ್ಯವನ್ನು ಭರತನಿಗೆ ಒಪ್ಪಿಸಿ ತಪಸ್ಸಿಗೆ ಹೊರಡಲು ಸಿದ್ಧನಾಗುವಾಗ ಅಣ್ಣ ನೀನು ಸೋತು ಈಗ ಎಲ್ಲವನ್ನು ಗೆದ್ದೆ, ಆದರೆ ನಾನು ಮೊದಲು ಗೆದ್ದು ಈಗ ಸೋತೆ ಎಂದು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

3. ಗೊಮ್ಮಟೇಶ ನಕ್ಕುಬಿಟ್ಟ ಕಂಡು ಮುಗ್ಧ ನಂಬಿಗೆ.
ಆಯ್ಕೆ:-
ಈ ವಾಕ್ಯವನ್ನು "ಸು. ರಂ. ಎಕ್ಕುಂಡಿ" ಅವರು ಬರೆದಿರುವ'ಕಥನಕವನಗಳು'ಎಂಬ ಕೃತಿಯಿಂದ ಆಯ್ದ"ನನ್ನ ಹಾಗೆಯೆ"ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಕವಿ ಹೇಳಿದ್ದಾರೆ ತನ್ನ ಅಜ್ಜನ ಜೊತೆ ಗೊಮ್ಮಟನ ನೋಡಲು ಬಂದ ಮಗು ತನಗೆ ಅಮ್ಮ ಮಜ್ಜನ ಮಾಡಿಸುವ ಮುನ್ನ ಎಣ್ಣೆ ಹಚ್ಚಿ ಹೀಗೆಯೇ ನಿಲ್ಲಿಸುವಳು ಎಂದು ತಿಳಿಸಿದಾಗ ಮಗುವಿನ ಮಾತಿಗೆ ಗೊಮ್ಮಟೇಶ ನಕ್ಕುಬಿಟ್ಟ ಕಂಡುಮುಗ್ಧ ನಂಬಿಗೆ ಎಂದು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬ೦ದಿದೆ.

               ಭಾಷಾಭ್ಯಾಸ :

ಅ) ಕೆಳಗಿನ ಪದಗಳಿಗೆ ವಿರುದ್ಧಾರ್ಥಗಳನ್ನು ಬರೆಯಿರಿ.

ಭಯ X ನಿರ್ಬಯ  
ದೂರ X ಹತ್ತಿರ,  
ಕೀರ್ತಿ X ಅಪಕೀರ್ತಿ  
ಸೋಲು X ಗೆಲುವು,  
ಹತ್ತು X ಇಳಿ,  
ಹುಟ್ಟು X ಸಾವು.

ಆ) ಕೆಳಗಿನ ಪದಗಳಿಗೆ ತತ್ಸಮ ತದ್ಭವಗಳನ್ನು ಬರೆಯಿರಿ, 
 
ಮುಖ - ಮೊಗ, 
ಮಜ್ಜನ – ಮರ್ಜನ,  
ಮೂರ್ತಿ ಮೂರುತಿ, 
ಮುಗುದೆ – ಮುಗ್ಧ.

ಈ ಕೆಳಗಿನ ಪದಗಳನ್ನು ಬಿಡಿಸಿ ಬರೆದು ಸಂಧಿಯ ಹೆಸರು ತಿಳಿಸಿರಿ. 
 
1.ಕೇಳಿತೊಂದು=ಕೇಳಿತು : ಒಂದು ಲೋಪಸಂಧಿ       
2. ಸೂರ್ಯನೊಮ್ಮೆ = ಸೂರ್ಯ + ಒಮ್ಮೆ - ಲೋಪಸಂಧಿ   
3 ಸಾವಿನಾಚ= ಸಾವಿನ + ಆಚೆ ಲೋಪಸಂಧಿ          
4. ಯಾವುದುಂಟು = ಯಾವುದು + ಉಂಟು – ಲೋಪಸಂಧಿ
5. ಭಯವಾಗದೆ = ಭಯ + ಆಗದೆ – ಆಗಮಸಂಧಿ   
6. ಗೊಮ್ಮಟೇಶ ಗೊಮ್ಮಟ + ಈಶ - ಗುಣಸಂಧಿ

ಉ) ಈ ಪದ್ಯದಲ್ಲಿ ಬಳಕೆ ಆಗಿರುವ ಅಂತ್ಯ ಪ್ರಾಸ ಪದಗಳನ್ನು ಆರಿಸಿ ಬರೆಯಿರಿ.
 
ಮಜ್ಜನ – ಅಜ್ಜನ 
ಚೆಂಬಿಗೆ –ನಂಬಿಗೆ 
ಎತ್ತರ – ಹತ್ತಿರ  ಮೂರ್ತಿಯು ಕೀರ್ತಿಯು ನೋಡುತಿರುವನು ಮಾಡುತಿರುವನು
ಮಾಡಲು – ನೋಡಲು 
ಹೀಗೆಯೇ - ಹಾಗೆಯ ಬೀಸಿತು. ಎನ್. ಎಸ್. ಲಕ್ಷ್ಮೀನಾರಾಯಣಭಟ್ಟ 
ನಿಂತಿಹ - ಮಗುವಿನಂತಿದ

You Might Like

Post a Comment

0 Comments