ಜನಪದ ಕಲೆಗಳ ವೈಭವ
ಅ ) ಒಟ್ಟಿರುವ ಪ್ರಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
1. ವೀರಗಾಸೆಯಲ್ಲಿ ಬಳಸುವ ವಾದ್ಯಗಳು ಯಾವುವು ?
ಉತ್ತರ : ವೀರಗಾಸೆಯಲ್ಲಿ ಬಳಸುವ ಪಂಚವಾದ್ಯಗಳಾದ ತಾಳ , ಶ್ರುತಿ , ಚಮಾಳ , ಓಲಗ , ಕರಡೆ ಬಳಕೆಯಾಗುತ್ತವೆ .
2. ‘ ಕಂಸಾಳೆ ‘ ಎಂಬ ಹೆಸರು ಹೇಗೆ ಬಂದಿತು ?
ಉತ್ತರ : ಕಾಂಸತಾಲ್ಯ ಎಂಬ ಪದದ ತದ್ಭವ ರೂಪದಿಂದ ಕಂಸಾಳೆ ಎಂಬ ಪದ ಬಂದಿದೆ .
3. ಡೊಳ್ಳು ಕುಣಿತ ಯಾವ ಸಂಪ್ರದಾಯಕ್ಕೆ ಸೇರಿದ ಕುಣಿತವಾಗಿದೆ ?
ಉತ್ತರ : ಡೊಳ್ಳು ಕುಣಿತವು ಬೀರೇಶ್ವರ ಸಂಪ್ರದಾಯಕ್ಕೆ ಸೇರಿದ ಹಾಲುಮತ ಸಮುದಾಯದ ಕುಣಿತವಾಗಿದೆ .
4. ಭರಮ ದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮ ಯಾವಾಗ ನಡೆಯುತ್ತದೆ ?
ಉತ್ತರ : ಭರಮ ದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮವು ಭರಮದೇವರ ಬ್ರಹ್ಮಪಲ್ಲಕ್ಕಿ ಉತ್ಸವ ಕಾಲಕ್ಕೆ
5. ಯಕ್ಷಗಾನದ ಮೂರು ಶೈಲಿಗಳು ಯಾವುವು ?
ಉತ್ತರ : ಯಕ್ಷಗಾನದ ಮೂರು ಶೈಲಿಗಳು ತೆಂಕುತಿಟ್ಟು , ಬಡಗುತಿಟ್ಟು ಮತ್ತು ಬಡಬಡಗುತಿಟ್ಟು , ನಡೆಯುತ್ತದೆ .
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .
1. ವೀರಗಾಸೆ ಕುಣಿತದ ಔಷಭೂಷಣಗಳು ಹೇಗಿರುತ್ತವೆ ? ವಿವರಿಸಿ.
ಉತ್ತರ : ವೀರಗಾಸೆ ಕುಣಿತದವರ ವೇಷಭೂಷಣ ವಿಶೇಷವಾಗಿರುತ್ತದೆ . ಬಿಳಿಯ ಪಂಚೆಯ ವೀರಗಚ್ಚಿ , ತಲೆಗೆ ಅರಿಶಿಣ ಅಥವಾ ನೀಲಿ ಬಣ್ಣದ ರುಮಾಲು , ಕಾವಿ ಬಣ್ಣದ ಕಸೆಯಂಗಿ , ಕೊರಳಲ್ಲಿ ರುದ್ರಾಕ್ಷಿ ಸರ , ಹಣೆಗೆ ವಿಭೂತಿ , ಕರ್ಣಕುಂಡಲ , ಸೊಂಟಪಟ್ಟಿ ಬಿಚ್ಚುಗತ್ತಿ , ಕಾಲ್ಗೆಜ್ಜೆ ಧರಿಸುತ್ತಾರೆ .
2 . ದೇವರಗುಡ್ಡರಿಗೆ ಕಂಸಾಳೆಯ ಬಗ್ಗೆ ಇರುವ ಗೌರವ ಭಾವನೆ ಹೇಗೆ ವ್ಯಕ್ತಗೊಂಡಿದೆ ? ವಿವರಿಸಿ.
ಉತ್ತರ : ಕಂಸಾಳೆಯು ಮಲೆಯ ಮಹದೇಶ್ವರನ ಭಕ್ತರಾದ ದೇವರ ಗುಡ್ಡರು ಎಂಬ ಧಾರ್ಮಿಕ ವೃತ್ತಿಗಾಯಕರು ಬಳಸುವ ಕಂಚಿನ ತಾಳಗಳು , ಇದೊಂದು ಧಾರ್ಮಿಕ ಜನಪದವಾದ್ಯ ವೃತ್ತಿಗಾಯಕರು ಬಳಸುವ ವಾದ್ಯಗಳಲ್ಲೆಲ್ಲ ಕಾ ಣಿಕೆ ಪಡೆಯುವ ಪಾತ್ರೆಯಾಗಿಯೂ ಬಳಕೆಯಾಗುವ ಏಕಮಾತ್ರ ಸಾಧನ ಕಂಸಾಳೆ ,
ಗುಡ್ಡರು ಕಾಣಿಕೆಯನ್ನು ಸ್ವೀಕರಿಸುವಾಗ ಕಂಸಾಳೆಯ ಬಟ್ಟಲನ್ನು ಮಾತ್ರ ಮುಂದೆ ಒಡ್ಡಿ ಪಡೆದು ಅನಂತರ ಜೋಳಿಗೆಗೆ ಸುರಿದುಕೊಳ್ಳುತ್ತಾರೆ .
ಇದೊಂದು ಪವಿತ್ರ ಸಾಧನವಾದುದರಿಂದ ಅರ್ಪಿಸುವ ಕಾಣಿಕೆ ಮಲೆಯ ಮಹದೇಶ್ವರನಿಗೆ ಸಮರ್ಪಿತವಾದಂತೆಯೇ ಎಂಬ ಭಾವನೆ ಗುಡ್ಡನಿಗೂ ದಾನಿಗೂ ಇರುತ್ತದೆ . ಕಂಸಾಳೆಯ ಮಹಿಮೆ ಅಪಾರ ಎಂದು ಭಾವಿಸುವ ಗುಡ್ಡರು ಅದನ್ನು ಪೂಜಿಸುತ್ತಾರೆ .
ಕೈಗೆತ್ತಿಕೊಳ್ಳುವ ಮೊದಲು “ ಏಳ್ಳಲೆ ಹೆತ್ತಯ್ಯ ನಮ್ಮಪ್ಪಾಜಿ ಮಾಯಾರ ಮಾದೇವ ನಿನ್ನ ಪಾದವೇ ಗತಿಕಣಪ್ಪ ಶರಣು ಶರಣಾರ್ಥಿ ” ಎಂದು ನಮಸ್ಕರಿಸಿ ಕಣ್ಣಿಗೊತ್ತಿಕೊಂಡು ಆನಂತರ ಭಾರಿಸಲು ಪ್ರಾರಂಭಿಸುವರು ,
3. ಭರಮದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮ ಹೇಗೆ ನಡೆಯುತ್ತದೆ ?ವಿವರಿಸಿ.
ಉತ್ತರ : ಬೀರೇಶ್ವರ ಸಂಪ್ರದಾಯಕ್ಕೆ ಸೇರಿದ ಹಾಲುಮತ ಸಮುದಾಯದ ಕುಣಿತ , ಡೊಳ್ಳು ಚರ್ಮವಾದ್ಯ ಭರಮದೇವರ ಬ್ರಹ್ಮಪಲ್ಲಕ್ಕಿ ಉತ್ಸವ ಕಾಲಕ್ಕೆ ಡೋಳ್ಳಿನ ಕಾರ್ಯಕ್ರಮಗಳು ನಡೆಯುತ್ತವೆ .
ಶ್ರಾವಣ ಸೋಮವಾರ , ಅಮಾವಾಸ್ಯೆಯ ದಿನ ಮತ್ತು ಯುಗಾದಿಯಂದು ಪಲ್ಲಕ್ಕಿ ಉತ್ಸವದ ತರುವಾಯ ಭರಮದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮ ನಡೆಯುತ್ತದೆ .
ಅದರಂತೆ ಭಕ್ತರು ದೇವರ ಮುಮ್ಮೇಳದವರಾಗಿ ಒಬ್ಬರು ಡೊಳ್ಳು ಬಾರಿಸುತ್ತ ಹಾಡು ಹೇಳುತ್ತಾರೆ . ಹಿಮ್ಮೇಳದಲ್ಲಿ ಹಲವರು ತಾಳ ಮತ್ತು ಬಾರಿಸುತ್ತ ಮುಮ್ಮೇಳದವರು ಹೇಳಿಕೊಟ್ಟ ಹಾಡಿನ ಭಾಗವನ್ನು ಹೇಳುತ್ತಾರೆ . ಸಾಮಾನ್ಯವಾಗಿ ಅಥವಾ ದೈವಭಕ್ತರ ಕಥೆಯಾಗಿರುತ್ತದೆ .
4. ಬಡಗುತಿಟ್ಟುಗಳ ವೈಶಿಷ್ಟ್ಯವೇನು ? ವಿವರಿಸಿ.
ಉತ್ತರ : ಯಕ್ಷಗಾನದ ಶೈಲಿಗಳು ತೆಂಕುತಿಟ್ಟು , ಬಡಗುತಿ ಬಡಗುತಿಟ್ಟು ಮತ್ತು ಬಡಬಡಗುತಿಟ್ಟು , ತೆಂಕುತಿಟ್ಟಿನ ಚಂಡೆ ವಾದಕನಿಗೆ ಆಸನ ವವು ವ್ಯವಸ್ಥೆಯಿರುವುದಿಲ್ಲ . ಪಾತ್ರಧಾರಿಗಳಿಗೆ ಒಂದು ಸಿಂಹಾಸನವಿರುತ್ತದೆ .
ಬಡಗುತಿಟ್ಟಿನಲ್ಲಿ ಇದರ ಬದಲಿಗೆ ರಥದ ಆಕೃತಿಯ ಆಸನವನ್ನು ಸಾಂಪ್ರದಾಯಿಕವಾಗಿ ಬಳಸುತ್ತಿದ್ದರು . ಹಿಮ್ಮೇಳದ ಪ್ರಮುಖ ವಾದ್ಯ ಪರಿಕರಗಳೆಂದರೆ , ಚಂಡೆ , ಮದ್ದಳೆ , ಶ್ರುತಿ , ತಾಳ ಆಥವಾ ಜಾಗಟ .
ಯಕ್ಷಗಾನದಲ್ಲಿ ಬಳಸುವ ವೇಷಭೂಷಣಗಳು ತಿಟ್ಟು ಮತ್ತು ಪಾತ್ರಕ್ಕನುಗುಣವಾಗಿ ವೈವಿಧ್ಯಮಯವಾಗಿರುತ್ತವೆ .
ತೆಂಕಿನಲ್ಲಿ ಅರ್ಥಗಾರಿಕೆಗೆ ಪ್ರಾಧಾನ್ಯ ಇದ್ದು , ದೊಡ್ಡ ದೊಡ್ಡ ಹೆಜ್ಜೆ ಹಾಕಿ ಗಿರಕಿ ಹೊಡೆಯುವುದು ಇದರ ವೈಶಿಷ್ಟ್ಯ . ಬಡಗಿನಲ್ಲಿ ಕುಣಿತ ಹಾಗೂ ಅಭಿನಯಕ್ಕೆ ಪ್ರಾಧಾನ್ಯತೆ ಇರುತ್ತದೆ .
5. ಚೌಕಿಯಲ್ಲಿ ನಡೆಯುವ ವಿಶೇಷಗಳೇನು ?
ಉತ್ತರ : ರಂಗಸ್ಥಳ ಸಮೀಪವಿರುವ ನೇಪಥ್ಯವೇ ಚೌಕಿ ಅಥವಾ ಬಣ್ಣದ ಮನೆ . ಭಾಗವತರು ಹಿಮ್ಮೇಳ ಹಾಗೂ ಪಾತ್ರಧಾರಿಗಳೊಂದಿಗೆ ಇಲ್ಲಿಗೆ ಆಗಮಿಸುತ್ತಾರೆ . ಪಾತ್ರಧಾರಿಗಳು ತಮ್ಮ ಬಣ್ಣಗಳನ್ನು ತಾವೇ ಹಚ್ಚಿಕೊಳ್ಳುತ್ತಾರೆ .
ಮೊದಲು ಚೌಕಿಯಲ್ಲಿ ಗಣಪತಿ ಪೂಜೆ ನಡೆಯುತ್ತದೆ . ತದನಂತರ ಕೋಡಂಗಿಗಳು ರಂಗ ಪ್ರವೇಶಿಸುವರು . ಗಣಪತಿ ಸ್ತುತಿಯ ಬಳಿಕ ವಿಷ್ಣು , ಪರಮೇಶ್ವರ . ದುರ್ಗೆ ಮೊದಲಾದ ದೇವತೆಗಳ ಸ್ತುತಿಯನ್ನು ಭಾಗವತರು ಮಾಡುತ್ತಾರೆ .
ಹಾಡಿನ ಆನಂತರ ಭಾಗವತರಿಂದ ಸಭಾವಂದನೆ ಆನಂತರ ಕೋಡಂಗಿಗಳು ಕುಣಿದು ಕುಪ್ಪಳಿಸಿ ಪ್ರೇಕ್ಷಕರನ್ನು ರಂಜಿಸುತ್ತಾರೆ .
ಇ ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .
1. ವೀರಗಾಸ ಪರ್ತಕನ ಒಡಪಂದನ ಕುಣಿತ ಹೇಗಿರುತ್ತದೆ ?
ಉತ್ತರ : ವೀರಗಾಸೆ ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ . ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಜನಪದ ಕಲೆ , ಇಬ್ಬರಿಂದ ಮೂವತ್ತು ಮಂದಿ ಇದರಲ್ಲಿ ಭಾಗವಹಿಸುತ್ತಾರೆ .
ಸಾಮಾನ್ಯವಾಗಿ ವೀರಗಾಸೆಯವರು ಬಿಳಿಯ ಪಂಚೆಯ ವೀರಗಚ್ಚೆ , ತಲೆಗೆ ಅರಿಶಿಣ ಅಥವಾ ನೀಲಿ ಬಣ್ಣದ ರುಮಾಲು , ಕಾವಿ ಬಣ್ಣದ ಕಸೆಯಂಗಿ , ಕೊರಳಲ್ಲಿ ರುದ್ರಾಕ್ಷಿ ಸರ , ಹಣೆಗೆ ವಿಭೂತಿ , ರ್ಕಣ್ರಕುಂಡಲ , ಸೊಂಟಪಟ್ಟಿ , ಬಿಚ್ಚುಗತ್ತಿ , ಕಾಲ್ಗೆಜ್ಜೆ ಧರಿಸುತ್ತಾರೆ .
“ ಆಪದ ರುದ್ರಾ ಅಪಹ ದೇವಾ ” ಎಂದು ವೀರಗಾಸೆಯ ನರ್ತಕ ಹೇಳುವ ಒಡಪಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ .
ಈ ಕುಣಿತದಲ್ಲಿ ವೀರಭದ್ರನ ಹುಟ್ಟಿದ ಸಂದರ್ಭದ ವರ್ಣನೆಯನ್ನು ಮಾಡುತ್ತಾರೆ ” ವೀರಭದ್ರದೇವನು ಹುಟ್ಟಿದ ರೂಪ ಎಂತು ಎಂದೊಡೆ ಹುಟ್ಟಿಗಾದಲೇ ಹೂವಿನಗಾಸೆ ,
ಕೊಳಲು ಬಾರಿ ಹಾಡಿನ ವಿಷಯ – ದೈವಮಹಿಮ ಅಥವಾ 4. ಯಕ್ಷಗಾನದಲ್ಲಿ ತೆಂಕುತಿಟ್ಟು ಮತ್ತು ಬಡಗುತಿನ ನದ ಮೂರು .
ಮಂಜುಳಗಾಸ , ಬ್ರಹ್ಮಗಾಸ , ವಿಷ್ಣಗಾಸ ರುದ್ರಗಾಸ , ಮಟ್ಟದ ಹೊನ್ನಾವಿಗೆ , ಸಾವಿರ ಶಿರ ಮೂರು ಸಾವಿರ ನಯನ , ಎರಡು ಸಾವಿರ ಭುಜ , ಕಕ್ಕರಿಸಿದ ಕಣಣ್ಣ ,
ಜುಂಜುಮಂಡ ಇಂತಪ್ಪ ಶ್ರೀ ವೀರಭದ್ರದವರು ಹೋಮದ ಕುಂಡದ ಒಳಗೆ ಹೇಗ ಬರುತ್ತಾರೆಂದರ ” ಎಂದು ಹೇಳುತ್ತಾ ಕುಣಿತವು ನಡರಿರುತ್ತದೆ.
2. ಬೀಸು ಕಂಸಾಳೆಯ ವೈಶಿಷ್ಟ್ಯತೆಯನ್ನು ,ವಿವರಿಸಿ
ಉತ್ತರ: ಬೀಸುಕಂಸಾಳ ದೇವರಗುಡ್ಡರ ವಿಶಿಷ್ಟ ನೃತ್ಯ , ಕರ್ನಾಟಕದ ಜನಪದ ನೃತ್ಯಗಳಲ್ಲಿ ಅಪೂರ್ವವಾದುದು . ಇದರಲ್ಲಿ ಫಾರ್ಬಟ್ಟು , ತಟ್ಬಟ್ಟು ಮುಂತಾದ ಬಗೆಗಳಿವೆ .
ನಾಲ್ಕು ಮಂದಿ ಗುಡ್ಡರು ಒಂದು ಕಡೆ ನಿಂತು ಲಿಂಗ ಬಾ , ಮುದ್ದುಲಿಂಗ ಬಾ , ನಮ್ಮ ಮುದ್ದು ಮಾದಯ್ಯ ಲಿಂಗ ಬಾ ಎಂದು ಹಾಡುತ್ತಾರೆ . ಕಂಸಾಳೆ ಹಿಡಿದ ಗುಡ್ಡ ತಾಳಕ್ಕೆ ತಕ್ಕಂತೆ ವಿವಿಧ ವಿನ್ಯಾಸದಲ್ಲಿ ಬಾರಿಸುತ್ತಾ ಕುಣಿಯುತ್ತಾನ .
ತಲೆಯು ಮೇಲೆ , ಬೆನ್ನಹಿಂದೆ , ಕಾಲ ಕಳಗೆ ಕುಳಿತು , ನಿಂತು , ಬಾಗಿ , ಬಳುಕಿ ತೀವ್ರಗತಿಯಲ್ಲಿ ವರ್ತಿಸುವ ಭಂಗಿ ಹಾಗೂ ಅದ್ಭುತ . ಒಮ್ಮೊಮ್ಮೆ ಇಬ್ಬರು ಗುಡ್ಡರು ಕಲೆತು ನರ್ತಿಸುವುದುಂಟು . ಒಬ್ಬರ ಕಂಸಾಳೆಗೆ ಮತ್ತೊಬ್ಬರು ಕುಟ್ಟುತ್ತಾ ಕುಣಿಯುವ ವೈಖರಿ ಆಕರ್ಷಕವಾಗಿರುತ್ತದೆ . .
3. ಡೊಳ್ಳು ಬಾರಿಸುವ ಕಲಾವಿದರ ವೇಷಭೂಷಣಗಳು ಹೇಗಿರುತ್ತವೆ ?
ಉತ್ತರ : ಬೀರೇಶ್ವರ ಸಂಪ್ರದಾಯಕ್ಕೆ ಸೇರಿದ ಹಾಲುಮತ ಸಮುದಾಯದ ಕುಣಿತ , ಡೊಳ್ಳು ಚರ್ಮವಾದ್ಯ , ಡೊಳ್ಳುಬಾರಿಸುವ ಕಲಾವಿದರ ವೇಷಭೂಷಣಗಳು ವಿಶಿಷ್ಟವಾಗಿರುತ್ತವೆ .
ಸಾಮಾನ್ಯವಾಗಿ ಡೊಳ್ಳು ಬಾರಿಸುವವರು ದೇಹದ ಮೇಲಿಭಾಗಕ್ಕೆ ಕರಿಯ ಕಂಬಳಿಯನ್ನು ಸೊಂಟದ ಭಾಗಕ್ಕೆ ಮೊಳಕಾಲು ಮೇಲೆ ಬರುವಂತ ಕಚ್ಚೆಪಂಚೆಯನ್ನು ಉಡುತ್ತಾರೆ . ಕೆಲವೊಮ್ಮೆ ಹುಲಿಯ ಚರ್ಮದ ರೀತಿಯ ಉಡುಪನ್ನು ಧರಿಸುತ್ತಾರೆ .
ಕುಣಿತದ ಕಾಲಕ್ಕೆ ವಾದ್ಯಗಾರರು ಹಸಿರು ಇಲ್ಲವೇ ಕೆಂಪು ಬಣ್ಣದ ಗಗ್ಗರಿ , ಅಂಗಿ ಟೊಪ್ಪಿಗೆ ಕೊಡುವರು . ಎರಡು ಕೈಗಳಲ್ಲೂ ಅದೇ ಬಣ್ಣದ ಕರವಸ್ತ್ರ ಹಿಡಿದಿರುತ್ತಾರೆ .
4. ಯಕ್ಷಗಾನದ ವೈಶಿಷ್ಟ್ಯ : ಹಾಗೂ ಪೂರ್ವರಂಗದ ಉದ್ದೇಶವೇನು ?
ಉತ್ತರ : ಯಕ್ಷಗಾನಕ್ಕೆ ದಶಾವತಾರ , ಬಯಲಾಟ , ಭಾಗವತರಾಟ ಎಂಬ ಹೆಸರೂ ಇವೆ . ಸಾಮಾನ್ಯವಾಗಿ ಬಯಲಾಟ ಪ್ರದರ್ಶಿತವಾಗುವುದು ಹಳ್ಳಿಯ ಬಯಲಿನಲ್ಲಿ . ಆದ್ದರಿಂದ ಅದು ಬಯಲಾಟ , ಯಕ್ಷಗಾನ ಕಲಿಸುವವನೇ ಭಾಗವತನಾದ್ದರಿಂದ ಭಾಗವತರಾಟ ಎಂಬ ಹೆಸರು ಬಂದಿದೆ, ಗೀತ , ಕುಣಿತ , ವೇಷಭೂಷಣ , ಮಾತುಗಾರಿಕೆ , ವಾದ್ಯ ಇವು ಬಯಲಾಟದ ಪಂಚ ಆಂಗಗಳು , ಯಕ್ಷಗಾನದಲ್ಲಿ ಸಾಮಾನ್ಯವಾಗಿ ಕಾಳಗ , ಸಂಹಾರ ಮತ್ತು ಕಲ್ಯಾಣಗಳಿಗೆ ಸಂಬಂಧಿಸಿದ ಪ್ರಸಂಗಗಳು ಇರುತ್ತವೆ .
ಪುರುಷರೇ ಸ್ತ್ರೀ ವೇಷಹಾಕುವುದು ಯಕ್ಷಗಾನದ ವೈಶಿಷ್ಟ್ಯ . ಯಕ್ಷಗಾನದ ಪೂರ್ವರಂಗ ಎಂದು ಕರೆತಲಾಗುವ ಬಾಲಗೋಪಾಲ , ಸ್ತ್ರೀ ವೇಷಗಳ ಉದ್ದೇಶ ಮುಂದಿನ ಕಥಾ ಪ್ರಸಂಗಕ್ಕೆ ಪ್ರೇಕ್ಷಕರನ್ನು ಮಾನಸಿಕವಾಗಿ ಅಣಿಗೊಳಿಸುವುದೇ ಆಗಿದೆ ,
ಮತ್ತೆ ದೇವತಾಸುತ್ತಿ ಆದನಂತರ ಅಂದಿನ ಪ್ರಸಂಗಕ್ಕೆ ಸಂಬಂಧಿಸಿದಂತೆ ಓಡೋಲಗ ಪ್ರಾರಂಭವಾಗುತ್ತದೆ . ಪಾತ್ರಧಾರಿಗಳು ಭಾಗವತರಿಗೆ , ಆನಂತರ ರಂಗಸ್ಥಳಕ್ಕೆ ವಂದಿಸಿ ಕುಣಿದು ತಮ್ಮ ಸಾಮರ್ಥ್ಯ ಪ್ರದರ್ಶಿಸುವರು ,
ಈ ) ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ
1, ” ಆಹಹಾ ರುದ್ರಾ ಆಹಹಾ ದೇವಾ ”
ಆಯ್ಕೆ: ಈ ವಾಕ್ಯವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿರುವ ಜಾನಪದ ವಿಷಯ ವಿಶ್ವಕೋಶ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಹೊರತಂದಿರುವ ‘ ವಿಷಯ ಸಂಪದೀಕರಣ ಸಂಪನ್ಮೂಲ ಸಾಹಿತ್ಯ ಕನ್ನಡ ಭಾಷೆ ‘ ಕೃತಿಗಳಲ್ಲಿರುವ ಸಂಪನ್ಮೂಲದ ಆಧಾರದಿಂದ ಆಯ್ದ ` ಜನಪದ ಕಲೆಗಳ ವೈಭವ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .
ಅಹಹ ರುದ್ರಾ ಆಹಹ ದೇವಾ ” ಎಂದು ವೀರಗಾಸೆಯ ನರ್ತಕ ಹೇಳುವ ಒಡಪಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ . ಈ ಕುಣಿತದಲ್ಲಿ ವೀರಭದ್ರನ ಹುಟ್ಟಿದ ಸಂದರ್ಭದ ವರ್ಣನೆಯನ್ನು ಮಾಡುತ್ತಾರೆ ” ಆ ಸಂದರ್ಭದಲ್ಲಿ ವೀರಗಾಸೆಯ ವೇಷದಾರಿಗಳು ಮಾತನ್ನು ಹೇಳುತ್ತಾರೆ .
ಸ್ವಾರಸ್ಯ : ವೀರಗಾಸೆಯ ಅವರ ಕುಣಿತವು ರೌದ್ರಮಯವಾಗಿರುತ್ತದೆ . ವೀರಭದ್ರನ ಹುಟ್ಟಿನ ವರ್ಣನೆಯನ್ನು ನೃತ್ಯದ ಮೂಲಕ ಸ್ವಾರಸ್ಯಪೂರ್ಣವಾಗಿ ವರ್ಣಿಸಿಲಾಗಿದೆ ,
2. “ ಭಲರೇ ವೀರ , ಆಹಹಾವೀರ ”
ಆಯ್ಕೆ : ಈ ವಾಕ್ಯವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿರುವ ಜಾನಪದ ವಿಷಯ ವಿಶ್ವಕೋಶ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಹೊರತಂದಿರುವ ‘
ವಿಷಯ ಸಂಪದೀಕರಣ ಸಂಪನ್ಮೂಲ ಸಾಹಿತ್ಯ ಕನ್ನಡ ಭಾಷೆ ‘ ಕೃತಿಗಳಲ್ಲಿರುವ ಸಂಪನ್ಮೂಲದ ಆಧಾರದಿಂದ ಆಯ್ದ ` ಜನಪದ ಕಲೆಗಳ ವೈಭವ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ ,
ಸಂದರ್ಭ : ವೀರಭದ್ರ ವೇಷಧಾರಿ ದಕ್ಷಯಾಗ , ವೀರಭದ್ರನ ಜನನ ಮತ್ತು ವೀರಭದ್ರನ ವಿಜಯ ಮುಂತಾದ ಒಡಪುಗಳನ್ನು ಹೇಳುತ್ತಾನೆ .
ಮತ್ತೊಬ್ಬ ವ್ಯಕ್ತಿ “ ಭಲರೇ ವೀರ , ಆಹಹಾ ವೀರ ” ಎಂದು ಕಾಶು ಹೇಳುತ್ತ ಜಾಗಟೆ ಬಡಿಯುತ್ತ ನಿಧಾನವಾಗಿ ವೀರಭದ್ರನ ಸುತ್ತ ತಿರುಗುತ್ತಾನೆ . ಆ ಸಂದರ್ಭದಲ್ಲಿ ಈ ಮಾತು ಬಂದಿದೆ .
ಸ್ವಾರಸ್ಯ : ವೀರಭದ್ರನ ವಿಜಯವನ್ನು ವೀರಗಾಸೆಯ ವೇಷಧಾರಿಯು ಕುಣಿಯುತ್ತಾ ಒಡಪಿಗೆ ತಕ್ಕಂತೆ ಕಾಲು ಹಾಕುತ್ತಾ ಕುಣಿಯುವುದು ರೋಮಾಂಚನಕಾರಿಯಾಗಿರುತ್ತದೆ ಎಂಬ ಅಂಶವು ಸ್ವಾರಸ್ಯ ಪೂರ್ವವಾಗಿ ಮೂಡಿ ಬಂದಿದೆ .
3. ” ಮಳ್ಳಲೆ ಹೆತ್ತಯ್ಯ ನಮ್ಮ ಹಾಜಿ ಮಾಯಾರ ಮಾದೇವ ನಿನ್ನ ಪಾದವೇ ಗತಿಕಣಪ್ಪ ಶರಣು ಶರಣಾರ್ಥಿ ” :
ಆಯ್ಕೆ: ಈ ವಾಕ್ಯವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿರುವ ಜಾನಪದ ವಿಷಯ ವಿಶ್ವಕೋಶ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಹೊರತಂದಿರುವ
ವಿಷಯ ಸಂಪದೀಕರಣ ಸಂಪನ್ಮೂಲ ಸಾಹಿತ್ಯ – ಕನ್ನಡ ಭಾಷೆ ‘ ಕೃತಿಗಳಲ್ಲಿರುವ ಸಂಪನ್ಮೂಲದ ಆಧಾರದಿಂದ ಆಯ್ದ ‘ ಜನಪದ ಕಲೆಗಳ ವೈಭವ ‘ ಎಂಬ ಗದ್ಯಭಾಗದಿಂದ ಹಲಗಿದ .
ಸಂದರ್ಭ : ಗುಡ್ಡದವರು ಕಾಣಿಕೆಯನ್ನು ಪಡೆಯುವ ಮೊದಲು ಕಂಸಾಳೆಯನ್ನು ಮುಂದೆ ಚಾಚಿ ಕಾಣಿಕೆಯನ್ನು ಪಡೆಯುತ್ತಾರೆ , ಕಂಸಾಳೆಯ ಮಹಿಮೆ ಅಪಾರ ಎಂದು ಭಾವಿಸುವ ಗುಡ್ಡರು ಅದನ್ನು ಪೂಜಿಸುತ್ತಾರೆ ,
ಕೈಗೆತ್ತಿಕೊಳ್ಳುವ ಮೊದಲು ” ಮಳ್ಳಲೆ ಹೆತ್ತಯ್ಯ ನಮ್ಮ ಸ್ವಾಣಿ ಮಾಯಾರ ಮಾದೇವ ನಿನ್ನ ಪಾದವೇ ಗತಿಕಣಪ್ಪ ಶರಣ ಶರಣಾರ್ಥಿ ” ಎಂದು ನಮಸ್ಕರಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ ,
ಸ್ವಾರಸ್ಯ : ದೇವರ ಗುಡ್ಡದವರು ಮಲೆಮಹೇಶ್ವರನ ಮೇಲೆ ಇಟ್ಟಿರುವ ಭಕ್ತಿಯಷ್ಟೆ ಕಂಸಾಳೆಯ ಮೇಲೂ ಎಂಬದು ಸ್ವಾರಸ್ಯಕರವಾಗಿದೆ .
4. “ ಸ್ವಾಮಿ ನಮ್ಮಯ ದೇವರು ಬಂದಾನ ಬನ್ನಿರೇ ” :
ಆಯ್ಕೆ: ಈ ವಾಕ್ಯವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿರುವ ಜಾನಪದ ವಿಷಯ ವಿಶ್ವಕೋಶ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಹೊರತಂದಿರುವ ವಿಷಯ ಸಂಪದೀಕರಣ ಸಂಪನ್ಮೂಲ ಸಾಹಿತ್ಯ – ಕನ್ನಡ ಭಾಷೆ ‘ ಕೃತಿಗಳಲ್ಲಿರುವ ಸಂಪನ್ಮೂಲದ ಆಧಾರದಿಂದ ಆಯ್ದ “ ಜನಪದ ಕಲೆಗಳ ವೈಭವ ‘ ಎಂಬ ಗದ್ಯಭಾಗದಿಂದ ಆರಿಸ ದೆ .
ಸಂದರ್ಭ : ಹಿಮ್ಮೇಳದಲ್ಲಿ ಹಲವರು ತಾಳ ಮತ್ತು ಕೊಳಲು ಬಾರಿಸುತ್ತ ಮುಮ್ಮೇಳದವರು ಹೇಳಿಕೊಟ್ಟ ಹಾಡಿನ ಭಾಗವನ್ನು ಹೇಳುತ್ತಾರೆ , ಕಥೆಗಳನ್ನು ರಗಳೆಯ ಧಾಟಿಯಲ್ಲಿ ಹಾಡುವಾಗ ಈ ಸಾಲುಗಳನ್ನು ಹಾಡುತ್ತಾರೆ ಆ ಸಂದರ್ಭದಲ್ಲಿ ಈ ರೀತಿ ಹಾಡಿದ್ದಾರೆ .
ಸ್ವಾರಸ್ಯ: ಸಾಮಾನ್ಯವಾಗಿ ಹಾಡಿನ ವಿಷಯ ದೈವಮಹಿಮೆ ಅಥವಾ ದೈವಭಕ್ತರ ಕಥೆಯಾಗಿರುತ್ತದೆ . ಎಂಬುದನ್ನು ಸ್ವಾರಸ್ಯಕರವಾಗಿ ಮೂಡಿ ಬಂದಿದೆ .
5. “ ದುಷ್ಟ ನಿಗ್ರಹ , ಶಿಷ್ಟ ಪರಿಪಾಲನೆ ”
ಆಯ್ಕೆ : ಈ ವಾಕ್ಯವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿರುವ ಜಾನಪದ ವಿಷಯ
ವಿಶ್ವಕೋಶ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಹೊರತಂದಿರುವ ‘ ವಿಷಯ ಸಂಪದೀಕರಣ ಸಂಪನ್ಮೂಲ ಸಾಹಿತ್ಯ – ಕನ್ನಡ ಭಾಷೆ ‘ ಕೃತಿಗಳಲ್ಲಿರುವ ಸಂಪನ್ಮೂಲದ ಆಧಾರದಿಂದ ಆಯ್ದ ` ಜನಪದ ಕಲೆಗಳ ವೈಭವ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಕಾಳಗ , ಸಂಹಾರ ಮತ್ತು ಕಲ್ಯಾಣಗಳಿಗೆ ಸಂಬಂದಪಟ್ಟ ಏಪ್ರಸಂಗಗಳೇ ಹೆಚ್ಚು ಕಾಳಗವಿಲ್ಲದೇ ಯಕ್ಷಗಾನ ಇರುವುದಿಲ್ಲ ,
ಯಕ್ಷಗಾನ ಪ್ರಸಂಗ ರಚಿಸಿದವರು ದುಷ್ಟನಿಗ್ರಹ ಶಿಷ್ಟಪರಿಪಾಲನೆ ತತ್ವಗಳನ್ನು ಪ್ರಸಂಗಗಳಲ್ಲಿ ಅಳವಡಿಸಿರುತ್ತಾರೆ , ಆ ಸಂದರ್ಭದಲ್ಲಿ ಈ ಮಾತು ಬಂದಿದೆ .
ಸ್ವಾರಸ್ಯ : ಯಕ್ಷಗಾನ ಜನರಲ್ಲಿ ಧಾರ್ಮಿಕ ಮತ್ತು ನೀತಿ ಪ್ರಶ್ನೆಗಳನ್ನು ಬೆಳೆಸಲು ಸಹಕಾರಿಯಾಗಿದೆ . ಎಂಬುದು ಸ್ವಾರಸ್ಯ ಪೂರ್ಣವಾಗಿ ವರ್ಣಿಸಲಾಗಿದೆ .
ಉ) ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗೂ ನಾಲ್ಕು ಸಂಭಾವ್ಯ ಉತ್ತರಗಳನ್ನು ನೀಡಿದೆ . ಅವುಗಳಲ್ಲಿ ಸೂಕ್ತ ಉತ್ತರವನ್ನು ಆರಿಸಿ ಬರೆಯಿರಿ.
1.ವೀರಗಾಸೆ ,,,,,,,,,ಸಂಪ್ರದಾಯಕ್ಕೆ ಸೇರಿದ ನೃತ್ಯ ( ಶೈವ . ವೈಷ್ಣವ , ಬೀರೇಶ್ವರ . ಶ್ರೀವೈಷ್ಣವ )
2. ಕಂಸಾಳೆಗುಡ್ಡರು ಕಂಸಾಳೆಯನ್ನು ಕೈಗೆತ್ತಿಕೊಳ್ಳವ ಮೊದಲು,,,,,,,,,, ದೇವರನ್ನು ಸ್ಮರಿಸುತ್ತಾರೆ . (ಭೈರವೇಶ್ವರ , ಮಹದೇಶ್ವರ , ನಂಜುಡೇಶ್ವರ , ವೈದೈಶ್ವರ )
3 , ಡೊಳ್ಳು ಕುಣಿತದ ಕಲಾವಿದರು ಹಾಡುವ ಬೀರೇಶ್ವರ ದೇವರ ಹಾಡು,,,,,,,,,,, ಉದಾಹರಣೆ ಕರೆಯುತ್ತಾರೆ . ( ಭಕ್ತಿಗೀತೆ , ಭಾವಕ್ಕೆ ಕಾವ್ಯಗೀತೆ . ಜನಪದಗೀತೆ )
4. ಯಕ್ಷಗಾನದಲ್ಲಿ ರಂಗಸ್ಥಳದ ಸಮೀಪವಿರುವ ನೇಪಥ್ಯವನ್ನು…….ಎಂದು ಕರೆಯುತ್ತಾರೆ ( ವೇದಿಕೆ ಸಭಾಮಂಟಪ , ಚಕಿ ತೆರೆ)
ಊ) ಹೊಂದಿಸಿ ಬರೆಯಿರಿ.
ಅ ಪಟ್ಟಿ ಆ ಪಟ್ಟಿ
1. ವೀರಭದ್ರ ಕಾಲಿಸತಾಲ್ಯ
2. ಕಂಸಾಳ ಚರ್ಮವಾದ್ಯ
3 , ಡೊಳ್ಳು ಮಹಾಕಾವ್ಯ
4. ಯಕ್ಷಗಾನ ವೇಷಭೂಷಣ
5. ಮಹದೇಶ್ವರ ಭಾಗವತ
ಏಳ್ಳಲೆ ಹೆತ್ತಯ್ಯ
ದೀವಟಿ
ಸರಿ ಉತ್ತರಗಳು .
1, ಒಡಪು
2. ಕಾಲಸಪಾಳ್ಯ
3. ಧರ್ಮವಾದ್ಯ
4 ಭಾಗವತ
5 ,ಒಳ್ಳಲೆ ಹೆತ್ತಯ್ಯ
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ .
1 ಕ್ರಿಯಾಪದ ಎಂದರೇನು ?
ಉತ್ತರ : ಕ್ರಿಯೆಯನ್ನು ಸೂಚಿಸುವ ಪದಗಳೇ ಕ್ರಿಯಾಪದಗಳು ,
2. ಕ್ರಿಯಾಪ್ರಕೃತಿ ಎಂದರೇನು ? ಉದಾಹರಣೆ ಕೊಡಿ ,
ಉತ್ತರ : ಕ್ರಿಯಾರ್ಥವನ್ನು ಸೂಚಿಸುವ ಪ್ರತ್ಯಯವನ್ನು ಹೊಂದದಿರುವ ಪದವೇ ಕ್ರಿಯಾಪ್ರಕೃತಿ ಅಥವಾ ಧಾತು , ಕ್ರಿಯಾಪದದ ಮೂಲರೂಪವೇ ಧಾತು .
ಉದಾ : ನೋಡು , ಹಾಡು , ಜೋಗ , ಕೇಳು , ಮಾಡು .
1 ಸಕರ್ಮಕ ಧಾತುವನ್ನು ಉದಾಹರಣೆ ಸಹಿತ ವಿವರಿಸಿ ,
ಉತ್ತರ : ಕರ್ಮಪದವನ್ನು ಬಯಸುವ ಧಾತುಗಳೇ ಸಕರ್ಮಕ ಧಾತುಗಳು ,
ಉದಾ : ರಾಮನು ಗಿಡವನ್ನು ನೆಟ್ಟನು . ಶಿಲ್ಪಿಗಳು ಗುಡಿಯನ್ನು ಕಟ್ಟಿದರು . ವಿದ್ಯಾರ್ಥಿಗಳು ಪಾಠವನ್ನು ಓದಿದರು .
2 , ಅಕರ್ಮಕ ಧಾತುಗಳಿಗೆ ಐದು ನಿದರ್ಶನ ಕೊಡಿ .
ಉತ್ತರ : ಅಕರ್ಮಕ ಧಾತುಗಳು : -ಕರ್ಮಪದವನ್ನು ಬಯಸದೇ ಇರುವ ಧಾತುಗಳೇ ಅಕರ್ಮಕ ಧಾತುಗಳು .
ಉದಾ : ಕೂಸು ಮಲಗಿತು . ಅವನು ಬದುಕಿದನು . ಆಕಾಶ ಹೊಳೆಯುತ್ತಿದೆ ; ಗಾಳಿಯು ಬೀಸುತ್ತಿದೆ . ಮಲಗು , ಬದುಕು , ಹೋಳಿ , ಬೀಸು ಎಂಬ ಧಾತುಗಳು ಕರ್ಮಪದಗಳನ್ನು ಬಯಸುವುದಿಲ್ಲ ,
ಆ ) ಕೊಟ್ಟಿರುವ ವಾಕ್ಯಗಳಲ್ಲಿ ಸಕರ್ಮಕ ಮತ್ತು ಅಕರ್ಮಕ ಧಾತುಗಳನ್ನು ಗುರುತಿಸಿ ಬರೆಯಿರಿ.
1. ರೈತನು ಹೊಲವನ್ನು ಉಳುತ್ತಾನೆ .
ಉತ್ತರ : ಉಳುತ್ತಾನೆ = ಸಕರ್ಮಠ ಧಾತು – ಉಳು
2. ಗಾಳಿಯು ಬೀಸುತ್ತಿದೆ .
ಉತ್ತರ : ಬೀಸುತ್ತಿದೆ . ಅಕರ್ಮಕ ಧಾತು ~ ಬೀಸು .
3 , ಹಕ್ಕಿಗಳು ಚಿಲಿಪಿಲಿಗುಟ್ಟಿದವು ,
ಉತ್ತರ : ಗುಟ್ಟಿದವು = ಅಕರ್ಮಕಧಾತು = ಗುಟ್ಟು
4 ವಿದ್ಯಾರ್ಥಿನಿಯರು ಆಟವನ್ನು ಆಡಿದರು ,
ಉತ್ತರ : ಆಡಿದರು = ಸಕರ್ಮಕ ಧಾತು – ಆಡು
ಇ ) ಕೊಟ್ಟಿರುವ ವಿಷಯಗಳನ್ನು ಕುರಿತು ಪ್ರಬಂಧ ಬರೆಯಿರಿ .
1) ಸಾವಯವ ಕೃಷಿ
ಪೀಠಿಕೆ : ಇಂದು ಕೃಷಿ ಕ್ಷೇತ್ರದಲ್ಲಿ ಅನೇಕ ರೀತಿಯ ಸಂಶೋಧನೆಗಳು ನಡೆಯುತ್ತಿವೆ . ಪಾರಂಪರಿಕ ಪದ್ಧತಿ ಹಾಗೂ ವೈಜ್ಞಾನಿಕ ಕೃಷಿ ಪದ್ದತಿಗಳ ಸಾಧಕ ಭಾದಕಗಳ ಬಗ್ಗೆ ಕೃಷಿ ವಲಯದಲ್ಲಿ ಸಾಕಷ್ಟು ಚರ್ಚೆ ನಡೆಸುತ್ತಿದ್ದರೆ , ಹೊಸಹೊಸ ಪ್ರಯೋಗಗಳು ನಡೆಯುತ್ತಿವೆ . ಇದರ ಫಲಸ್ವರೂಪದ ಸಾವಯವ ಕೃಷಿ ಪದ್ಧತಿ .
ವಿಷಯ ನಿರೂಪಣೆ : – ಗಳ ಆವರ್ತನ , ಹಸಿರು ಗೊಬ್ಬರ , ಮಿಶ್ರಗೊಬ್ಬರ , ಜೈವಿಕವಾಗಿ ಕೀಟಗಳ ನಿಯಂತ್ರಣಗಳನ್ನು ಅವಲಂಬಿತಗೊಂಡಿರುವುದು ಸಾವಯವ ಕೃಷಿ ,
ಹಲವು ರಾಷ್ಟ್ರಗಳಲ್ಲಿ ಸಾವಯವ ಬೇಸಾಯ ಪದ್ಧತಿಗಳನ್ನು ಅಂತಾರಾಷ್ಟ್ರೀಯವಾಗಿ ನಿಯಮಗಳಿಗೊಳಪಡಿಸಲಗಿದೆ .
ಸಾವಯವ ಚಳುವಳಿ 1934-1940 ರ ದಶಕದಲ್ಲಿ ಬೇಸಾಯ ಕ್ಷೇತ್ರವನ್ನು ಕೃತಕ ಗೊಬ್ಬರಗಳ ಮೇಲೆ ಹೆಚ್ಚು ಅವಲಂಬಿಸುವುದನ್ನು ಹಿಮ್ಮೆಟ್ಟಿಸುವ ಸಲುವಾಗಿ ಪ್ರಾರಂಭವಾಯಿತು .
ಸಾವಯವ ಕೃಷಿ ಪದ್ಧತಿಯ ಪಿತಾಮಹನೆಂದು ಸರ್ , ಆಲ್ಬರ್ಟ ಹೋವಾರ್ಡ ಅವರನ್ನು ವಿಶೇಷವಾಗಿ ಗುರುತಿಸಲಾಗಿದೆ .
ವಿಶ್ವದ ಒಟ್ಟು ಕೃಷಿ ಉತ್ಪನ್ನದ ಪ್ರಮಾಣವನ್ನು ಪರಿಗಣಿಸಿದಾಗ ಸಾವಯವ ಉತ್ಪನ್ನ ಸಣ್ಣ ಪ್ರಮಾಣವೆನಿಸಿದರೂ ಅದು ಅನೇಕ ದೇಶಗಳಲ್ಲಿ ವೇಗವಾಗಿ ಬೆಳೆಯುತ್ತಿದೆ .
ಸಾವಯವ ವ್ಯವಸಾಯವು ಅರ್ಥಪೂರ್ಣವಾದ ಸಾಮಾಜಿಕ ಆರ್ಥಿಕ ಮತ್ತು ಪರಿಸರ ವಿಜ್ಞಾನದ ಸಮರ್ಥನೀಯ ಬೆಳವಣಿಗೆಗಾಗಿ , ವಿಶೇವಾಗಿ ಬಡ ರಾಷ್ಟ್ರಗಳ ಬೆಳವಣಿಗೆಗೆ ಮಹತ್ವಪೂರ್ಣ ಕೊಡುಗೆ ನೀಡುತ್ತದೆ .
ಕರ್ನಾಟಕದಲ್ಲಿ ಸಾವಯವ ಕೃಷಿಯನ್ನು ಪ್ರೋತ್ಸಾಹಿಸಲೆಂದು ಸಾವಯವ ಕೃಷಿ ಮಿಶನ್ ರಚಿಸಲಾಗಿದೆ .
ಉಪಸಂಹಾರ : – ಸಾವಯವ ಕೃಷಿ ಪದ್ಧತಿಯು ಒಂದು ಉತ್ತಮ ವಿಧಾನವಾಗಿದ್ದು , ಜ್ಞಾನಯುಕ್ತ ಕೇಂದ್ರಿಕೃತ ಉತ್ಪಾದನೆಯ ವ್ಯವಸ್ಥೆಯಾಗಿದೆ.
ಇಷ್ಟಲ್ಲದೆ ಹೆಚ್ಚು ಇಳುವರಿ ನೀಡುವ ಬೇಸಾಯ ವ್ಯವಸ್ಥೆಗಳಿಗಿಂತ ಹೆಚ್ಚು ಪರಿಸರ ಸ್ನೇಹಿಯಾಗಿದೆ . ಆದ್ದರಿಂದ ಇದನ್ನು ರೈತರು ಅಳವಡಿಸಿಕೊಳ್ಳುವ ಮೂಲಕ ತಮ್ಮ ಬದುಕನ್ನು ಉತ್ತಮ ಪಡಿಸಿಕೊಳ್ಳಬಹುದೆಂಬುದು ನನ್ನ ಅಭಿಪ್ರಾಯವಾಗಿದೆ
2) ಮಳೆ ನೀರು ಕೊಯ್ದು
ಪೀಠಿಕೆ : – ಮಳೆ ನೀರು ಕೊಯ್ತು ಎಂಬುದು ಮಳೆನೀರನ್ನು ಸಂಗ್ರಹಿಸುವ ವಿಧಾನಕ್ಕಿರುವ ಹೆಸರು ಭೂಮಿಗೆ ಬಿದ್ದಂತಹ ನೀರನ್ನು ವಿವಿಧ ಅವಶ್ಯತೆಗಳಿಗೆ ಸದಾ ಉಪಯೋಗಿಸಲು ಅನುಕೂಲವಾಗುವಂತ ಶೇಖರಿಸುವ ವಿಧಾನವೇ ಮಳೆ ನೀರು ಕೊಯ್ದು ,
ಕೃಷಿ ಮತ್ತು ಕೃಷಿಯೇತರ ಪ್ರದೇಶಗಳಲ್ಲಿ ನೀರನ್ನು ಹೆಚ್ಚಿನ ಮಟ್ಟದಲ್ಲಿ ಸಂಗ್ರಹಣೆ ಮಾಡಬೇಕು . ಇದರಿಂದ ತುಂಬಾ ಅನುಕೂಲಗಳಿವೆ ,
ವಿಷಯ ನಿರೂಪಣೆ : – ಮಳೆ ಬಂದು ನೀರು ವ್ಯರ್ಥವಾಗಿ ಹೋಗುವ ಬದಲು ಮಳೆ ನೀರನ್ನ ಸಂಗ್ರಹಿಸುವ ಕೆಲಸವಾಗಬೇಕು . ಹರಿದು ಹೋಗುವ ನೀರನ್ನು ತಡೆಗಟ್ಟಿ ಭೂಮಿಯಲ್ಲಿ ಇಂಗುವಂತೆ ಮಾಡಿದರೆ ,
ಅಂತರ್ಜಲ ಹೆಚ್ಚುತ್ತದೆ . ಹಳ್ಳಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಕಲಸವಾದರೆ ದನಕರುಗಳಿಗೆ , ಕುರಿ ಮೇಕೆಗಳಿಗೆ ಪ್ರಾಣಿ ಪಕ್ಷಿಗಳಿಗೆ ಕುಡಿಯುವುದಕ್ಕೆ ಅನುಕೂಲಕರವಾಗಿರುತ್ತದೆ .
ನಮ್ಮ ರೈತರು ಉತ್ತಮವಾದ ಬೇಸಾಯದ ಕ್ರಮಗಳನ್ನು ಅನುಸರಿಸಬೇಕು . ಮಳೆಯ ನೀರು ಬಿದ್ದಲ್ಲಿಯೇ ಸಂರಕ್ಷಿಸುವ ಬೇಸಾಯವನ್ನು ಮಾಡಬೇಕು .
ಮಿಶ್ರ ಬೆಳೆಗಳನ್ನು ಬೆಳೆಯುವುದರಿಂದ , ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದರಿಂದ ನೀರು ಮಣ್ಣಿನಲ್ಲಿ ಹೆಚ್ಚು ಇಂಗಲು ಅವಕಾಶವಾಗುತ್ತದೆ , ಹೊಲದ ಎರಡು ಬದಗಳ ಮಧ್ಯದ ಜಾಗದಲ್ಲಿ ಸಣ್ಣ ತಗ್ಗುಗಳನ್ನು ನಿರ್ಮಿಸುವುದರಿಂದ ನೀರು ಸಂಗ್ರಹಣೆ ಮಾಡಬಹುದು
. ಮಳೆಗಾಲದ ಪ್ರಾರಂಭದ ದಿನಗಳಲ್ಲಿ ರೈತರು ತಮ್ಮ ಹೊಲವನ್ನು ಇಳಿಜಾರಿಗೆ ಅಡ್ಡವಾಗಿ ಇಳುಮೆ ಮಾಡಿದರೆ ಮಳೆ ನೀರು ಹೆಚ್ಚು ಭೂಮಿಯಲ್ಲಿ ಇಂಗಲು ಸಹಾಯಕವಾಗಿತ್ತದೆ .
ಈ ಮಳೆ ನೀರು ಕೊಯ್ದು ಕೇವಲ ಕೃಷಿ ಭೂಮಿಯಲ್ಲಿ ಮಾತ್ರವಲ್ಲದೆ , ಕೃಷಿಯೇತರ ಪ್ರದೇಶಗಳಲ್ಲೂ ಮಾಡಬಹುದು , ಮನೆಯ ಮೇಲ್ಮಾವಣಿ ಮಳೆ ನೀರು ಕೊಯ್ದು ಎಂಬ ವಿಧಾನದ ಮೂಲಕ ಮಾಡಬಹುದು .
ಉಪಸಂಹಾರ : – ಮಳೆ ನೀರು ಸಂರಕ್ಷಣೆ ಮಾಡುವುದರಿಂದ ಮನುಷ್ಯನಿಗೆ ದಿನನಿತ್ಯ ಬಳಸಲು ನೀರು ಸಮೃದ್ಧವಾಗಿ ಸಿಗುತ್ತದೆ . ಬೆಳೆಗಳಿಗೆ ಸಸ್ಯಗಳಿಗೆ , ಧನಕರುಗಳಿಗೆ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರು ಸಿಗುತ್ತದೆ .
ಇಷ್ಟೇ ಅಲ್ಲದೇ ನಮ್ಮ ರೈತರು ನೀರಾವರಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಕೆ ಮಾಡಿಕೊಂಡು ಅವರ ಕೃಷಿ ಉತ್ಪಾದನೆ ಹೆಚ್ಚಿಸಲು ನೆರವಾಗುತ್ತದೆ . ನೀರು ಅಮೂಲ್ಯವಾದದ್ದು , ಅದನ್ನು ಉಳಿಸು ಹೊಣೆ ಪ್ರತಿಯೊಬ್ಬ ಜವಾಬ್ದಾರಿ ನಾಗರಿಕನಾ ಆದ್ಯ ಕರ್ತವ್ಯವಾಗಬೇಕು .
ನಾವು ನೀವು ಎಲ್ಲರೂ ಮಳೆ ನೀರನ್ನು ಸಂರಕ್ಷಣೆ ಮಾಡಲು ಕಂರ್ಕಣ ಬದ್ಧರಾಗಬೇಕು . ಇಲ್ಲದೇ ಹೋದರೆ ಮುಂದೊಂದು ದಿನ ನೀರು ಸಿಗದೇ ಸಾಯುವ ಸ್ಥಿತಿ ಬಂದರು ಬರಬಹುದು .
0 Comments