Recent Posts

ರಾಷ್ಟ್ರಧ್ವಜ ನೀತಿ ಸಂಹಿತೆ ಮತ್ತು ಕೋಮು ಸೌಹಾರ್ಧತೆ - 9ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

 

I. ಪ್ರ.ಸಂ 1.ಬಿಟ್ಟ ಸ್ಥಳಗಳನ್ನು ತುಂಬಿರಿ.

1. ನಮ್ಮ ರಾಷ್ಟ್ರ ಧ್ವಜವು ತಿರಂಗಾ ಎಂದೇ ಖ್ಯಾತಿಯನ್ನು ಪಡೆದಿದೆ.

2. ಅಶೋಕ ಚಕ್ರವು ದೇಶದ ಜನರ ಆಶೋತ್ರಗಳನ್ನು ಪೂರೈಸುವ ಪ್ರಗತಿಯ ದ್ಯೂತಕವಾಗಿದೆ.

3. ರಾಷ್ಟ್ರ ಧ್ವಜವನ್ನು ರಾಜ್ಯಾಂಗ ರಚನಾ ಸಭೆಯಲ್ಲಿ ಅಂಗೀಕರಿಸಲಾಯಿತು.

4. ರಾಷ್ಟ್ರ ಧ್ವಜದ ಅನುಪಾತವು 3:2 ಆಗಿರುತ್ತದೆ.
 
II ಪ್ರ.ಸಂ 2.ಬಿಟ್ಟಿರುವ ಖಾಲಿ ಜಾಗದಲ್ಲಿ ನೀಡಿರುವ ಆಯ್ಕೆಗಳಲ್ಲಿ ಸೂಕ್ತ ಉತ್ತರವನ್ನು ಆಯ್ಕೆ ಮಾಡಿ ತುಂಬಿರಿ.

1. ರಾಷ್ಟ್ರ ಧ್ವಜವು ಹೊಂದಿರುವ ಬಣ್ಣಗಳು 3.

2. ರಾಷ್ಟ್ರ ಧ್ವಜವನ್ನು ಅಂಗೀಕರಿಸಿದ ವರ್ಷ 1947 ಜುಲೈ 22.

3. ಅಶೋಕ ಚಕ್ರದಲ್ಲಿರುವ ಗೆರೆಗಳ ಸಂಖ್ಯೆ 24.

III. ಒಂದು ವಾಕ್ಯದಲ್ಲಿ ಉತ್ತರಿಸಿ.

1. ಕೇಸರಿ ಬಣ್ಣವು ಏನನ್ನು ಸೂಚಿಸುತ್ತದೆ ?
ಉತ್ತರ :- ಕೇಸರಿ ಬಣ್ಣವು ದೈರ್ಯ, ಭಕ್ತಿ, ತ್ಯಾಗವನ್ನು ಸೂಚಿಸುತ್ತದೆ.

2. ರಾಷ್ಟ್ರಧ್ವಜದಲ್ಲಿರುವ ಚಕ್ರವು ಯಾವುದರ ಸಂಕೇತವಾಗಿದೆ ?
ಉತ್ತರ :- ರಾಷ್ಟ್ರಧ್ವಜದಲ್ಲಿರುವ ಚಕ್ರವು ಧರ್ಮದ ಸಂಕೇತವಾಗಿದೆ.

3. ರಾಷ್ಟ್ರಧ್ವಜವನ್ನು ಹಾರಿಸುವ ಎರಡು ಸರಿಯಾದ ಕ್ರಮವನ್ನು ತಿಳಿಸಿರಿ.
ಉತ್ತರ :- 1. ಗೌರವಯುತವಾದ, ಎಲ್ಲರಿಗೂ ಕಾಣುವಂತಹ ಸ್ಥಳದಲ್ಲಿ ಧ್ವಜವನ್ನು ಹಾರಿಸಬೇಕು.
2. ಧ್ವಜವನ್ನು ಏರಿಸುವಾಗ, ಚುರುಕಾಗಿಯೂ,ಇಳಿಸುವಾಗ ನಿಧಾನವಾಗಿಯೂ ವಿಧಿವತ್ತಾಗಿ, ಗೌರವದಿಂದ ನೆರವೇರಿಸಬೇಕು.
3. ಕೇಸರಿ ಬಣ್ಣವು ಮೇಲ್ಮುಖವಾಗಿ,ಹಸಿರು ಬಣ್ಣವು ಕೆಳಮುಖವಾಗಿಇರುವಂತೆಯೇ ಹಾರಿಸಬೇಕು.

4. ರಾಷ್ಟ್ರೀಯ ಭಾವೈಕ್ಯತೆ ಎಂದರೇನು ?
ಉತ್ತರ :-  ಇಂದಿನ ಸಾಮಾಜಿಕ ಜೀವನದಲ್ಲಿ ವೈವಿದ್ಯತೆಗಳನ್ನು ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ, ಭಾಷೆ,ವೇಷ ಮುಂತಾದವುಗಳಲ್ಲಿ ಕಾಣಬಹುದು. ವೈವಿದ್ಯತೆಗಳನ್ನು ಒಂದು ರಾಷ್ಟ್ರದಲ್ಲಿ ಸಮನ್ವಯಗೊಳಿಸುವುದೇ ಏಕತೆ. ಇವೆಲ್ಲವುಗಳನ್ನು ಸಮದೃಷ್ಟಿಯಲ್ಲಿ ಕಾಣುವುದೇ ಭಾವೈಕ್ಯತೆ.

IV. ಎರಡು -ಮೂರು ವಾಕ್ಯಗಳಲ್ಲಿ ಉತ್ತರಿಸಿ.


1. ಕೋಮು ಸೌಹಾರ್ಧತೆಯ ಮಹತ್ವವನ್ನು ತಿಳಿಸಿ.
ಉತ್ತರ :- ಭರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಸಂಸ್ಕೃತಿಯನ್ನು ಹೊಂದಿದೆ. ವೇಷ,ಭಾಷೆ, ಆಚಾರ, ವಿಚಾರ, ಆಹಾರ ಪದ್ದತಿ ಇತ್ಯಾದಿ ಅಂಶಗಳನ್ನು ಗಮಣಿಸದೇ ಇತರರನ್ನು ಪೂಜ್ಯ ಭಾವದಿಂದ ಕಾಣುತ್ತೇವೆ. ಆಗ ನಿಜವಾದ ಬದುಕಿಗೊಂದು ಅರ್ಥ ಬರುತ್ತದೆ. ಪ್ರತಿಯೊಬ್ಬರಲ್ಲೂ ಸಂಸ್ಕಾರವಂತರಾಗುವ ಬಯಕೆ ಮೂಡುತ್ತದೆ. ನಮ್ಮದು 'ಭಾರತ ದೇಶ'. ನಾವೆಲ್ಲರೂ ಭಾರತೀಯರು ಎಂಬುದು ರಾಷ್ಟ್ರದ ಬಗ್ಗೆ ನಮಗಿರುವ ರಾಷ್ಟ್ರಾಭಿಮಾನವನ್ನು ಸೂಚಿಸುತ್ತದೆ. ಇಲ್ಲಿ ಕುಟುಂಬ, ಸಮಾಜ, ಹಳ್ಳಿ,ನಗರ,ರಾಜ್ಯ ಕೊನೆಗೆ ರಾಷ್ಟ್ರ, ಇವೆಲ್ಲವುಗಳು ಅಭಿವೃದ್ದಿಯ ಮೆಟ್ಟಿಲುಗಳು.  ಈ ಮೆಟ್ಟಿಲುಗಳನ್ನು ಕ್ರಮವಾಗಿ ಏರುತ್ತಾ ಹೋದಂತೆ ಕೊನೆಯಲ್ಲಿ ರಾಷ್ಟ್ರದ ನೈಜ ಚಿತ್ರಣ ತಿಳಿಯಲು ಸಹಕಾರಿಯಾಗುವುದು. ಈ ದೃಷ್ಟಿಯಿಂದ ದೇಶದ ಪ್ರತಿಯೊಬ್ಬ ಪ್ರಜೆಯೂ  ತನ್ನ ರಾಷ್ಟ್ರದ ಬಗ್ಗೆ ಗೌರವ ಕೊಡುವುದರೊಂದಿಗೆ, ಅಭಿಮಾನವನ್ನು ಹೆಚ್ಚಿಸಿಕೊಳ್ಳಬಹುದು.

2. ರಾಷ್ಟ್ರಧ್ವಜ ಪ್ರದರ್ಶನದ ಪ್ರಸಂಗಗಳನ್ನು ತಿಳಿಸಿರಿ.
ಉತ್ತರ :-1. ರಾಷ್ಟ್ರೀಯ ಹಬ್ಬಗಳಲ್ಲಿ ಪ್ರದರ್ಶನ ಮಾಡಬೇಕು.
2. ಭಾರತ ಸರ್ಕಾರವು ಪ್ರಕಟಿಸಬಹುದಾದ ಯಾವುದೇ ದಿನದಂದು.  ಅರ್ಧ ಸ್ಥಭದ ಪ್ರದರ್ಶನ :- ರಾಷ್ಟ್ರೀಯ ಪ್ರತಿಷ್ಠಿತ ವ್ಯಕ್ತಿಗಳು ದೇಹಾಂತವಾದ ದಿನ ಅಥವಾ ಪ್ರಾದೇಶಿಕ ಸರ್ಕಾರಗಳು ಶೋಕ ದಿನವೆಂದು ಘೋಷಣೆ ಮಾಡಿದಾಗ ಸ್ಥಭದ ಅರ್ಧ ಭಾಗಕ್ಕೆ ಇಳಿಸಬೇಕು.

2. ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವ ಎರಡು ಕಾರ್ಯಕ್ರಮಗಳನ್ನು ಹೆಸರಿಸಿ.
ಉತ್ತರ :-1. ರಾಷ್ಟರೀಯ ಹಬ್ಬಗಳು ಮತು ಆಚರಣೆಗಳು
2. ರಾಷ್ಟ್ರಾಭಿಮನ ಮೂಡಿಸುವ ವಿಶಿಷ್ಠ ಸಮಾರಂಭಗಳು  
3. ವಿವಿಧ ಸಂಸ್ಕೃತಿಯನ್ನು ಬಿಂಬಿಸುವ ಮೇಳಗಳು.
4. ಶೌರ್ಯ, ವೀರ ಘೋಷಣೆಗಳು, ವೇಷ ಭೂಷಣಗಳ ಪ್ರದರ್ಶನ, ಸ್ಥಿರ ಚಿತ್ರಣ ಮೊದಲಾದವುಗಳ ಮೆರವಣಿಗೆ. ವೀರಗೀತೆಗಳನ್ನು ಸಾರುವ ದೃಶ್ಯ, ಸಂಭಾಷಣೆ ನಾಟಕ ಮೊದಲಾದ ಅಭಿನಯಕ್ಕೆ ಪ್ರೋತ್ಸಾಹ.  
5. ನಾಡಗೀತೆ, ದೇಶಭಕ್ತಿಗೀತೆ, ಭಾವಗೀತೆ ಇವುಗಳನ್ನು ಸಾಮೂಹಿಕವಾಗಿ ಹಾಡುವುದು ಮತ್ತು ಅಭಿನಯಿಸುವುದು. ರಾಷ್ಟ್ರಗೀತೆಯನ್ನು ಗೌರವದಿಂದ /ಸ್ವಾಭಿಮಾನದಿಂದ/ ಆತ್ಮವಿಶ್ವಾಸದಿಂದ ಗಟ್ಟಿ ಧ್ವನಿಯಲ್ಲಿ ಸಾಮೂಹಿಕವಾಗಿ ಹಾಡುವುದು ಇತ್ಯಾದಿ.

You Might Like

Post a Comment

0 Comments