Recent Posts

ವ್ಯಾಕರಣ - ೧೦ ನೇ ತರಗತಿ ತಿಳಿ ಕನ್ನಡ  ಅಲಂಕಾರಗಳು

 ಅಲಂಕಾರಗಳು: *
 
ಉಪಮಾಲಂಕಾರ:
 
1.ಮುನೋಹರತೆ ಸಮನ್ವಯ : ಇಲ್ಲಿ ಉಪಮೇಯವಾದ ಮಗುವಿನ ಮುಖವನ್ನು ಉಪಮಾನವಾದ ಚಂದ್ರನಿಗೆ ಹೋಲಿಸಿ ವರ್ಣಿಸಿರುವಗುವಿನ ಮುಖ ಚಂದ್ರನಂತೆ ಮನೋಹರವಾಗಿದೆ.  
ಉಪಮೇಯ : ಮಗುವಿನ ಮುಖ
ಉಪಮಾನ : ಚಂದ್ರ 
ಉಪಮಾವಾಚಕ : ಅಂತೆ
ಸಮಾನಧರ್ಮ : ಮನೋಹರತೆ
ಸಮನ್ವಯ : ಇಲ್ಲಿ ಉಪಮೇಯವಾದ ಮಗುವಿನ ಮುಖವನ್ನು ಉಪಮಾನವಾದ ಚಂದ್ರನಿಗೆ ಹೋಲಿಸಿ ವುದರಿಂದ ಇದು ಉಪಮಾಲಂಕಾರ.  

2. ಬಾಳೆಯ ಹಣ್ಣಿನಂತೆ ಬಾಗಿದ ಕುಣಿಗಲ್ ಕೆರೆ
ಉಪಮೇಯ : ಕುಣಿಗಲ್ ಕೆರೆ
ಉಪಮಾನ  : ಬಾಳೆಯ ಹಣ್ಣು
ಉಪಮಾವಾಚಕ : ಅಂತೆ
ಸಮಾನಧರ್ಮ : ಬಾಗುವುದು
ಸಮನ್ವಯ : ಇಲ್ಲಿ ಉಪಮೇಯವಾದ ಕುಣಿಗಲ್ ಕೆರೆಯನ್ನು ಉಪಮಾನವಾದ ಬಾಳೆಯ ಹಣ್ಣಿಗೆ ಹೋಲಿಸಿ ವರ್ಣಿಸಿದೆ. ಆದ್ದರಿಂದ ಇದು ಉಪಮಾಲಂಕಾರ.

 3. ನಿಂಬೆಯ ಹಣ್ಣಿನಂತೆ ತುಂಬಿದ ಕುಣಿಗಲ್ ಕೆರೆ
ಉಪಮೇಯ : ಕುಣಿಗಲ್ ಕೆರೆ
ಉಪಮಾನ : ನಿಂಬೆಯ ಹಣ್ಣು
ಉಪಮಾವಾಚಕ : ಅಂತೆ
ಸಮಾನಧರ್ಮ : ತುಂಬಿರುವುದು
ಸಮನ್ವಯ : ಇಲ್ಲಿ ಉಪಮೇಯವಾದ ಕುಣಿಗಲ್ ಕೆರೆಯನ್ನು ಉಪಮಾನವಾದ ನಿಂಬೆಯ ಹಣ್ಣಿಗೆ ಹೋಲಿಸಿ ವರ್ಣಿಸಿದೆ. ಆದ್ದರಿಂದ ಇದು ಉಪಮಾಲಂಕಾರ.  

4. ಆಗ ತಾನೆ ಹಾಡಲು ಕಲಿತ ಮರಿ ಕೋಗಿಲೆಯಂತೆ
ಉಪಮೇಯ : ಬಾಲಕ ಪುಟ್ಟಯ್ಯ
ಉಪಮಾನ : ಮರಿಕೋಗಿಲೆ
ಉಪಮಾವಾಚಕ : ಅಂತೆ
ಸಮಾನಧರ್ಮ : ಹಾಡುವುದು
ಸಮನ್ವಯ : ಇಲ್ಲಿ ಉಪಮೇಯವಾದ ಬಾಲಕ ಪುಟ್ಟಯ್ಯನನ್ನು ಉಪಮಾನವಾದ ಮರಿಕೋಗಿಲೆಗೆ ಹೋಲಿಸಿ ವರ್ಣಿಸಿದೆ. ಆದ್ದರಿಂದ ಇದು ಉಪಮಾಲಂಕಾರ.  

5. ಸಾವಿರಾರು ಮಳೆಬಿಲ್ಲುಗಳು ಸೇರಿ ಕುಣಿದಂತೆ ತೋರುತ್ತಿತ್ತು
ಉಪಮೇಯ : ಬನದ ಹೂಗಳು
ಉಪಮಾನ : ಮಳೆಬಿಲ್ಲು
ಉಪಮಾವಾಚಕ : ಅಂತೆ
ಸಮಾನಧರ್ಮ : ತೋರುತ್ತಿರುವುದು
 ಸಮನ್ವಯ : ಇಲ್ಲಿ ಉಪಮೇಯವಾದ ಬನದ ಹೂಗಳನ್ನು ಉಪಮಾನವಾದ ಮಳೆಬಿಲ್ಲಿಗೆ ಹೋಲಿಸಿ ವರ್ಣಿಸಿದೆ. ಆದ್ದರಿಂದ ಇದು ಉಪಮಾಲಂಕಾರ.

 6. ಕಾಡತುಂಬ ಪ್ರೀತಿಯ ಹೊಳೆಯು ಕೋಡಿಯಂತೆ ಹರಿಯಿತು
ಉಪಮೇಯ : ಪ್ರೀತಿಯ ಹೊಳೆ
ಉಪಮಾನ : ಕೋಡಿ 
ಉಪಮಾವಾಚಕ : ಅಂತೆ
ಸಮಾನಧರ್ಮ : ಹರಿಯುವುದು
ಸಮನ್ವಯ : ಇಲ್ಲಿ ಉಪಮೇಯವಾದ ಪ್ರೀತೀಯ ಹೊಳೆಯನ್ನು ಉಪಮಾನವಾದ ಕೋಡಿಗೆ ಹೋಲಿಸಿ ವರ್ಣಿಸಿದೆ. ಆದ್ದರಿಂದ ಇದು ಉಪಮಾಲಂಕಾರ.  

7. ನಾಡನರಿಯವೊಲ್ ಎನಗೆ ನೀ ಹಲುಗಿರಿಯೆ
ಉಪಮೇಯ : ಉತ್ತರಕುಮಾರ
ಉಪಮಾನ : ನಾಡನರಿ
ಉಪಮಾವಾಚಕ : ವೊಲ್
ಸಮಾನಧರ್ಮ : ಹಲ್ಲು ಕಿರಿಯುವುದು  
ಸಮನ್ವಯ : ಇಲ್ಲಿ ಉಪಮೇಯವಾದ ಉತ್ತರಕುಮಾರನನ್ನು ಉಪಮಾನವಾದ ನಾಡನರಿಗೆ ಹೋಲಿಸಿ ವರ್ಣಿಸಿದೆ. ಆದ್ದರಿಂದ ಇದು ಉಪಮಾಲಂಕಾರ.  

8. ಸಂಗೀತಲೋಕದ ದೃವತಾರೆಯಂತೆ ಬೆಳಗುತ್ತಿರುವ ಗಾನಯೋಗಿ ಪುಟ್ಟರಾಜ ಗವಾಯಿ
ಉಪಮೇಯ : ಪುಟ್ಟರಾಜ ಗವಾಯಿ
ಉಪಮಾನ : ಧೃವತಾರೆ
ಉಪಮಾವಾಚಕ : ಅಂತೆ 
ಸಮಾನಧರ್ಮ : ಬೆಳಗುವುದು
ಸಮನ್ವಯ : ಇಲ್ಲಿ ಉಪಮೇಯವಾದ ಪುಟ್ಟರಾಜ ಗವಾಯಿಗಳನ್ನು ಉಪಮಾನವಾದ ಧೃವತಾರೆಗೆ ಹೋಲಿಸಿ ವರ್ಣಿಸಿದೆ. ಆದ್ದರಿಂದ ಇದು ಉಪಮಾಲಂಕಾರ.  

9. ತಟ್ಟೆಯೊಳು ಕರ್ಪೂರ ಮೌನದಲಿ ಕರಗುವೊಲು ಶಾಂತಿಯಲಿ ಬದುಕಿ ನೀ ಕರ್ತವ್ಯವನು ಮುಗಿಸು
ಉಪಮೇಯ : ಮಾನವನ ಬದುಕು
ಉಪಮಾನ : ಕರ್ಪೂರ ಕರಗುವುದು
ಉಪಮಾವಾಚಕ : ವೊಲ್
ಸಮಾನಧರ್ಮ :  ಮೌನದಿ ಶಾಂತಿಯಲಿ ಕರ್ತವ್ಯವನ್ನು ಮುಗಿಸುವುದು
ಸಮನ್ವಯ : ಇಲ್ಲಿ ಉಪಮೇಯವಾದ ಮಾನವನ ಬದುಕನ್ನು ಉಪಮಾನವಾದ ಕರ್ಪೂರ ಕರಗುವುದಕ್ಕೆ ಹೋಲಿಸಿ ವರ್ಣಿಸಿದೆ. ಆದ್ದರಿಂದ ಇದು ಉಪಮಾಲಂಕಾರ.  

10. ದೀಪದೆದುರಿಗೆ ತಿಮಿರ ಸರಿಯುವಂತೆ ಶಾಂತಿಯಲಿ ಬದುಕಿ ನೀ ಕರ್ತವ್ಯವನು ಮುಗಿಸು
ಉಪಮೇಯ : ಮಾನವನ ಬದುಕು
ಉಪಮಾನ : ದೀಪದೆದುರಿಗೆ ತಿಮಿರ ಸರಿಯುವುದು
ಉಪಮಾವಾಚಕ : ಅಂತೆ
ಸಮಾನಧರ್ಮ : ಶಾಂತಿಯಲಿ ಕರ್ತವ್ಯವನ್ನು ಮುಗಿಸುವುದು
ಸಮನ್ವಯ : ಇಲ್ಲಿ ಉಪಮೇಯವಾದ ಮಾನವನ ಬದುಕನ್ನು ಉಪಮಾನವಾದ ದೀಪದೆದುರು ತಿಮಿರ ಸರಿಯುವುದಕ್ಕೆ ಹೋಲಿಸಿ ವರ್ಣಿಸಿದೆ. ಆದ್ದರಿಂದ ಇದು ಉಪಮಾಲಂಕಾರ  ?

You Might Like

Post a Comment

0 Comments