I. ಬಿಟ್ಟ ಸ್ಥಳಗಳನ್ನು ತುಂಬಿರಿ.
1. ಆರೋಗ್ಯಕರ ಸಮಾಜದ ನಿರ್ಮಾಣಕ್ಕಾಗಿಪ್ರತಿಯೊಬ್ಬ ನಾಗರಿಕನೂ ಆರೋಗ್ಯದ ತಿಳುವಳಿಕೆಯನ್ನು ಪಡೆಯುವುದು ಅಗತ್ಯ.
2. ಸಾಮಾಜಿಕ ಆರೋಗ್ಯ ಕಾಪಾಡಿಕೊಂಡು ಹೋಗಬೇಕಾದರೆ ಸಮಾಜದ ಪ್ರತಿಯೊಬ್ಬ ಸದಸ್ಯರ ಸಹಕಾರ ಅತೀ ಅವಶ್ಯಕವಾಗಿದೆ.
3. ಒಂದು ಜ್ಞಾನ ಸಂಕಲನ ಮತ್ತು ಅದನ್ನು ಕಾರ್ಯಗತ ಮಾಡುವ ವಿಧಾನವೇ ಸಾಮಾಜಿಕ ಆರೋಗ್ಯವಾಗಿದೆ.
II. ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
1. ಡಾ|| ಬ್ರೋಕಿಂಗೈನ್ರ ಅಭಿಪ್ರಾಯದಲ್ಲಿ ಸಾಮಾಜಿಕ ಆರೋಗ್ಯ ಎಂದರೇನು ?
ಉತ್ತರ ;- ಡಾ|| ಬ್ರೋಕಿಂಗೈನ್ರ ಅಭಿಪ್ರಾಯದಲ್ಲಿ ಸಾಮಾಜಿಕ ಆರೋಗ್ಯ ಎಂದರೆ ಒಂದು ಜ್ಞಾನ ಸಂಕಲನ ಮತ್ತು ಅದನ್ನು ಕಾರ್ಯಗತ ಮಾಡುವ ವಿಧಾನವೇ ಸಾಮಾಜಿಕ ಆರೋಗ್ಯವಾಗಿದೆ.
2. ಉತ್ತಮ ಸಾಮಾಜಿಕ ಆರೋಗ್ಯವನ್ನು ಹೊಂದಲು ಅಗತ್ಯವಿರುವ ಯಾವುದಾದರೂ ಎರಡು ರೂಢಿಗಳನ್ನು ಬರೆಯಿರಿ.
ಉತ್ತರ ;-ಉತ್ತಮ ಸಾಮಾಜಿಕ ಆರೋಗ್ಯವನ್ನು ಹೊಂದಲು ಅಗತ್ಯವಿರುವ ರೂಢಿಗಳು :-
1. ಕಂಡಕಂಡಲ್ಲಿ ಉಗುಳುವುದು,ಸೀನುವುದು,ಬಹಿರ್ದೆಸೆಗೆ ಹೋಗುವುದನ್ನು ನಿಲ್ಲಿಸಬೇಕು.
2. ಉಪಯೋಗ್ಯಕ್ಕೆ ಯೋಗ್ಯವಲ್ಲದ, ಹೊಲಸು ಪದಾರ್ಥಗಳನ್ನು ಕಂಡಕಂಡಲ್ಲಿ ಎಸೆಯದೆ,ಅದಕ್ಕಾಗಿಯೇ
ನಿರ್ಧಿಷ್ಟಪಡಿಸಿದ ಸ್ಥಳದಲ್ಲಿ ಹಾಕಬೇಕು.
3. ವಿವಿಧ ಸಾಂಸರ್ಗಿಕ ರೋಗವಾಹಕಗಳಾದ ಸೊಳ್ಳೆ, ತಿಗಣಿ, ನೊಣ ಮುಂತಾದವುಗಳನ್ನು ನಾಶಗೊಳಿಸಿ ಸ್ವಚ್ಛವಾದ ಪರಿಸರ ಹೊಂದಬೇಕು.
4. ಸಾರ್ವಜನಿಕ ಮೂತ್ರಾಲಯ, ಶೌಚಾಲಯಗಳ ಸ್ವಚ್ಛತೆಯನ್ನು ಕಾಪಾಡಬೇಕು.
5. ಮಲ-ಮೂತ್ರ ವಿಸರ್ಜನೆಯನ್ನು ಮೂತ್ರಾಲಯ, ಶೌಚಾಲಯಗಳಲ್ಲಿಯೇ ಮಾಡಬೇಕು.
6. ಉದ್ಯಮಗಳಿಂದ ಅಥವಾ ವಾಹನಗಳಿಂದ ನೀರು,ಶಬ್ದ,ಹವೆ ಮಲೀನವಾಗದಂತೆ ಕ್ರಮತೆಗೆದುಕೊಳ್ಳುವುದು
ಅತ್ಯಗತ್ಯವಾಗಿದೆ.
7. ಸುತ್ತಮುತ್ತಲ ಪರಿಸರದಲ್ಲಿ ಯಾವುದಾದರೂ ಸಾಂಸರ್ಗಿಕ ರೋಗಗಳು ಕಂಡುಬಂದಲ್ಲಿ ಸಂಬಂಧಪಟ್ಟ
ಪ್ರಾಧಿಕಾರಕ್ಕೆ ತಿಳಿಸಬೇಕು.
3. ಯಾವುದಾದರೂ ಎರಡು ಸಾಮಾಜಿಕ ಆರೋಗ್ಯದ ಅವಶ್ಯಕತೆಗಳನ್ನು ಬರೆಯಿರಿ.
ಉತ್ತರ ;-ಸಾಮಾಜಿಕ ಆರೋಗ್ಯದ ಅವಶ್ಯಕತೆಗಳು:-
1. ಸಮಾಜದ ಪ್ರತಿಯೊಬ್ಬ ಸದಸ್ಯರ ಆರೋಗ್ಯದ ಮಟ್ಟವನ್ನು ಉತ್ತಮಗೊಳಿಸಿ ಕಾಪಾಡಿಕೊಂಡು ಬರುವುದು.
2. ರೋಗಮುಕ್ತ ಸಮಾಜದ ನಿರ್ಮಾಣ ಮಾಡುವುದು.
3. ಸಮಾಜದಲ್ಲಿ ಪರಸ್ಪರ ಶಾಂತಿ, ಪ್ರೀತಿ,ವಿಶ್ವಾಸ, ಸೌಹಾರ್ಧತೆ ಅಭಿವೃದ್ದಿಪಡಿಸುವುದು.
III. ಹೊಂದಿಸಿ ಬರೆಯಿರಿ.
0 Comments