Recent Posts

ಬಸ್ಸು ಪ್ರಯಾಣದ ಸುಖ ದುಃಖಗಳು - Class 9th Second Language Kannada Textbook Solutions

 ಗದ್ಯ 4 
ಬಸ್ಸು ಪ್ರಯಾಣದ ಸುಖ ದುಃಖಗಳು

ಕವಿ/ಲೇಖಕರ  ಪರಿಚಯ 
 
* ವೀರೇಂದ್ರ ಸಿಂಪಿ  ಇವರು 1938 ರಲ್ಲಿ ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣದಲ್ಲಿ ಜನಿಸಿದರು.
" ಇವರು ಲಲಿತ ಪ್ರಬಂಧಗಳು, ಕಾಗದದ ಚೂರು, ಭಾವ ಮೈದುನ, ಸ್ವಚ್ಛಂದ ಮನದ ಸುಳಿದಾಟ, ಪರಿಸರ ಸ್ಪಂದನೆ, ಭಾವ ಮೈದುನ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
* ಶ್ರೀಯುತರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
• ಪ್ರಸ್ತುತ 'ಬಸ್ಸು ಪ್ರಯಾಣದ ಸುಖ ದುಃಖಗಳು' ಪ್ರಬಂಧವನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ 'ಆಯ್ದ ಲಲಿತ ಪ್ರಬಂಧಗಳು' ಕೃತಿಯಿಂದ ಆರಿಸಲಾಗಿದೆ. ಅಭ್ಯಾಸ.

   ಪದಗಳ ಅರ್ಥ 
 
ಅಲೆ - ತಿರುಗಾಡು; ಸುತ್ತಾಡು.
ಅಧೋಗತಿ – ಸರ್ವನಾಶ; ದುರ್ಗತಿ: ಪತನ,
ಉದಾತ್ತ - ಶ್ರೇಷ್ಠ
ಉಪಾಸಕ - ಆರಾಧಕ; ಭಕ್ತ.
ಏಕತಾನತೆ - ಒಂದೇ ರಾಗ: ಹೇಳಿದ್ದನ್ನೇ ಹೇಳು. ಕೂಪಮಂಡೂಕ – ಬಾವಿಯೊಳಗಿನ ಕಪ್ಪೆ
ಚಿವಡಾ - ಅವಲಕ್ಕಿಯ ತಿನಿಸು
ತಪಶ್ಚರ್ಯ – ವ್ರತ ನಿಯಮಗಳಿಂದ ದೇಹವನ್ನು ದಂಡಿಸುತ್ತಾ ಧ್ಯಾನ ಮಾಡುವುದು.
ನಾಗಾಲೋಟ - ಅತಿವೇಗದ ಓಟ,
ಪಾರುಗಾಣಿಸು – ರಕ್ಷಿಸು; ದಾಟಿಸು,
ಪ್ರಾಪ್ತಿ – ಗಳಿಕೆ; ಲಾಭ ಸಿಗುವುದು.
ವ್ಯವಧಾನ – ತಾಳೆ: ಸಮಾಧಾನ: ಸಹನೆ,
ಆರ್ತ ಸ್ಥರ – ನೋವಿನ ಧ್ವನಿ: ಸಂಕಟದ ಧ್ವನಿ.
ಅಧಃಪತನ - ಸರ್ವನಾಶ, ಕೆಳಗೆ ಬೀಳುವುದು, ಉಪಕ್ರಮಿಸು – ಪ್ರಾರಂಭ; ತೊಡಗುವಿಕೆ.
ಒರತೆ - ನೀರಿನ ಬುಗ್ಗೆ; ನೀರು ಜಿನುಗುವಿಕೆ,
ಗಂಡಾಂತರ - ವಿಪತ್ತು; ತೊ೦ದರೆ,
ಚುರಮರಿ – ಮಂಡಕ್ಕಿಯ ತಿನಿಸು
ತಾಸು - ಗಂಟೆ; ಸಮಯ
ದುಗುಡ - ವ್ಯಸನ; ಚಿಂತೆ: ಆತಂಕ.
ಡೌಲು = ಆಡಂಬರ; ಒಣಹೆಮ್ಮೆ: ಬಡಾಯಿ, ಪ್ರಯಾಸ - ಆಯಾಸ; ದಣಿವು: ಶ್ರಮ,
ಮಣಿ - ಸೋಲು; ಬಾಗು
ಶೋಕಿಲಾಲ  – ಮೋಜು ಮಾಡುವವ
ಸ್ಥಿತಿವಂತ – ಸಿರಿವಂತ
ಸಾತ್ವಿಕ - ಒಳ್ಳೆಯವ: ಉತ್ತಮ ಗುಣವುಳ್ಳವನು.

     ಪ್ರಶ್ನೆಗಳು 
 
●    ಬಿಟ್ಟ ಸ್ಥಳಗಳನ್ನು ನೀಡಿರುವ ನಾಲ್ಕು ಆಯ್ಕೆ ಉತ್ತರಗಳಲ್ಲಿ ಸರಿಯಾದುದನ್ನು ಆರಿಸಿ ಬರೆಯಿರಿ.

1. ವೀರೇಂದ್ರ ಸಿಂಪಿ ಅವರಿಗೆ ಪ್ರವಾಸವೆಂದರೆ

ಅ) ಪ್ರಯಾಸದ ವಿಷಯ  
ಆ) ಸುಖಪ್ರಸಂಗ
ಇ) ಷೋಕಿಯ ಪ್ರಸಂಗ 
ಈ) ದುಗುಡದ ಪ್ರಸಂಗ

 2.ಬಸ್ಸುಪ್ರಯಾಣಿಕರಚರ್ಚೆಯಲ್ಲಿಮುಖ್ಯವಾಗಿರುತ್ತದೆ
ಅ) ಸಮಸ್ಯೆ  
ಆ) ಮಾತು 
ಇ) ವಿಷಯ 
ಈ) ಅಭಿ ಪ್ರಾಯ

3. ಲೇಖಕರು ಬಸ್ಸಿನಿಂದ ಲಗುಬಗೆಯಿಂದ ಇಳಿದದ್ದು
ಅ) ಚಹಾ ಕುಡಿಯಲು
 
ಆ) ಚುರುಮರಿ ತಿನ್ನಲು 
ಇ) ಟಿಕೇಟ್ ಪಡೆಯಲು 
ಈ) ದಾರಿ ತಪ್ಪಿದುದಕ್ಕೆ

4. ಲೇಖಕರು ಲಾರಿಯ ಡ್ರಾಯವರನಿಗೆ ಹೆದರಿದುದು
ಅ) ರಾತ್ರಿ ಆದುದಕ್ಕೆ 
ಆ) ಕೈಲಿ ವಾಚು ಇದ್ದುದರಿಂದ 
ಇ) ಊರು ದೂರ ಇದ್ದುದರಿಂದ 
ಈ)ಪ್ರಾಣ ಭಯದಿಂದ 

●    ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

1. ವೀರೇಂದ್ರ ಸಿಂಪಿಯವರು ತಾವು ಯಾವ ರೀತಿಯ ಪ್ರಯಾಣಿಗರಲ್ಲ ಎಂದಿದ್ದಾರೆ?

ಉತ್ತರ:- ಮನಸ್ಸು ಬ೦ದತ್ತ ಸ್ಟೇಚ್ಛಾಚಾರಿಯಾಗಿ ಅಲೆಯುವಷ್ಟು ಸ್ಥಿತಿವಂತನೂ ನಾನಲ್ಲ. 'ಪ್ರಯಾಣಕ್ಕಾಗಿ ಪ್ರಯಾಣ' ಎನ್ನುವ
ಷೋಕಿಲಾಲನೂ ನಾನಲ್ಲ ಎಂದಿದ್ದಾರೆ. 

2. ವೀರೇಂದ್ರ ಸಿಂಪಿ ಅವರು ಪ್ರವಾಸ ಕೈಗೊಳ್ಳುವುದು ಯಾವಾಗ ಎಂದಿದ್ದಾರೆ?
ಉತ್ತರ:- ಜೀವನದಲ್ಲಿ ಸ್ವಾರಸ್ಯ ಕಾಣದಿದ್ದಾಗ ವೀರೇಂದ್ರ ಸಿಂಪಿಯವರು ಪ್ರವಾಸ ಕೈಗೊಳ್ಳುತ್ತಿದ್ದರು.
 
3. ವೀರೇಂದ್ರ ಸಿಂಪಿ ಅವರು ಪ್ರವಾಸ ಕೈಗೊಳ್ಳುವುದು ಏಕೆ?
ಉತ್ತರ:- ಬಾಳು ಬರಿದಾಗಿ ಕಂಡಾಗ ಏನಾದರೂ ನೆಪಹೂಡಿ ಪ್ರವಾಸ ಕೈಕೊಳ್ಳುತ್ತೇನೆ ಎಂದಿದ್ದಾರೆ.

4. ಲೇಖಕರು: ಬಸ್ಸಿಗೆ ಕಾಯುವುದು ಯಾವುದಕ್ಕೆ ಸಮಾನ ಎಂದಿದ್ದಾರೆ?
ಉತ್ತರ:- ಲೇಖಕರು ಬಸ್ಸಿಗಾಗಿ ಕಾಯುವುದೆಂದರೆ ಒಂಟಿಗಾಲಿನ ಮೇಲೆ ನಿಂತು ಶಿವನನ್ನು ಕುರಿತು ತಪಶ್ಚರ್ಯವನ್ನು ಗೈದಂತೆಯೇ ಸೈ. ಎಂದಿದ್ದಾರೆ.

5. ಲೇಖಕರು ಬಸ್ಸು ಬಂದುದನ್ನು ಯಾವುದಕ್ಕೆ ಹೋಲಿಸುತ್ತಾರೆ?
ಉತ್ತರ:- ಲೇಖಕರು ಬಸ್ಸನ್ನು ಬರಿದುದನ್ನು ಕೊಲಂಬಸ್ ಅಮೇರಿಕೆಯನ್ನು ಪ್ರಥಮ ಬಾರಿ ಕಂಡಂತೆ, ತೇನಸಿಂಗ್ ಎವರೆಸ್ಸನ್ನು ಏರಿ ನಿಂತಂತೆ' ಎಂದು ಹೋಲಿಸಿದ್ದಾರೆ. 

6. ಲೇಖಕರು ಬಸ್ಸು ನುಗ್ಗಾಟದಲ್ಲಿ ಮೊದಲಿಗನಾಗಬೇಕೆಂದು ಏಕೆ ಬಯಸುತ್ತಾರೆ?
ಉತ್ತರ:- ಬಸ್ಸು ನುಗ್ಗಾಟದಲ್ಲಿ ಸಕ್ಕು ಮೊದಲಿಗನಾಗದಿದ್ದರೂ ಮೊದಲಿಗರಲ್ಲಿ ಓರ್ವನಾಗಬೇಕೆನ್ನುವ ತತ್ವದವರು,

7. ಬಸ್ ಕಂಡಕ್ಟರ್ ಸ್ತ್ರೀ ಪ್ಯಾಸೆಂಜರ್ ಜೊತೆ ಏನೆಂದು ಚರ್ಚಿಸುತ್ತಾನೆ?
ಉತ್ತರ:- ಸ್ತ್ರೀ ಪ್ಯಾಸೆಂಜರೊಂದಿಗೆ ದೊಡ್ಡ ಚರ್ಚೆಯೇ ನಡೆಯುತ್ತದೆ.“ಈ ಕೂಸು ನಿಮ್ಮದೇ ಏ?.” “ಹೌದು." ವರ್ಷ ಆಗಿವೆ?.” “ಎರಡು ತುಂಬಿ ಮೊನ್ನೆ ಅಮಾವಾಸ್ಯೆಗೆ ಒಂದು ತಿಂಗಳಾಯಿತು.""ಇಲ್ಲ ಮೂರು ವರ್ಷ ಆಗಿದೆ" ಎಂದು ಅರ್ಧ ಟಿಕೇಟನ್ನು ಪಡೆಯಲು ಸೂಚಿಸುವನು,

8. ಲೇಖಕರು ಸಹ ಪ್ರಯಾಣಿಕನೊಂದಿಗೆ ರೊಚ್ಚಿಗೆದ್ದದ್ದು ಏಕೆ?
ಉತ್ತರ:- ಲೇಖಕರು, ಸಹ ಪ್ರಯಾಣಿಕನಿಗೆ ಕರ್ನಾಟಕ ಬಗ್ಗೆ ನಿಮ್ಮ ಅಭಿಪ್ರಾಯವೇನು?" ಎಂದು ಪ್ರಾಂತೀಯ ಅಭಿಮಾನದ ಪ್ರಶ್ನೆ ಕೇಳಿದಾಗ "ಅದೊಂದು ದರಿದ್ರ ನಾಡು" ಎಂದು ಅವರು ಅಭಿಪ್ರಾಯ ಪಟ್ಟಾಗ ಲೇಖಕರು ರೊಚ್ಚಿಗೆದ್ದರು.

●    ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1. ವೀರೇಂದ್ರ ಸಿಂಪಿ ಅವರಿಗೆ ತಾವು ಸಂದರ್ಶಿಸಿದ ಸ್ಥಳಗಳ ಬಗ್ಗೆ ಯಾವ ಅಭಿಪ್ರಾಯವಿದೆ?

ಉತ್ತರ:- 'ಪ್ರಯಾಣಕ್ಕಾಗಿ ಪ್ರಯಾಣ' ಎನ್ನುವ ಷೋಕಿಲಾಲನೂ ನಾನಲ್ಲ ಎಂದಿದ್ದಾರೆ. ಇಲ್ಲಿಯವರೆಗೆ ಲೇಖಕರು ಸಂದರ್ಶಿಸಿದ ಸ್ಥಳಗಳಾಗಲಿ, ಸುತ್ತುವರಿದು ಅಲೆದಾಡಿದ ನಾಡುಗಳಾಗಲಿ ಕಡಿಮೆಯೆಂದೇ ಹೇಳಬೇಕು. ಪ್ರಸಿದ್ಧ ಪಟ್ಟಣಗಳೆಂದು ನಾಡಿನವರ ಬಾಯಲ್ಲೆಲ್ಲ ನಲಿಯುತ್ತಿರುವ ಸ್ಥಳಗಳು ಲೇಖಕರ ಮಟ್ಟಿಗೆ ನಕಾಶದೊಳಗಿನ ಹೆಸರುಗಳು ಮಾತ್ರ ಪ್ರವಾಸ ಕಥನಗಳನ್ನು ಅಷ್ಟಿಷ್ಟು ಓದಿದ ಲೇಖಕರು ಆಯಾ ಊರುಗಳನ್ನು ಪ್ರತ್ಯಕ್ಷ ಕಂಡವರಿಗಿಂತ ಚೆನ್ನಾಗಿ ಬಲ್ಲೆ. 

2. ವೀರೇಂದ್ರ ಸಿಂಪಿ ಅವರಿಗೆ ಪ್ರಯಾಣದಲ್ಲಿ ಯಾವ ಯಾವ ರೀತಿಯ ಅನುಭವಗಳಾಗಿವೆ?
ಉತ್ತರ:- ವೀರೇಂದ್ರ ಸಿಂಪಿ ಅವರ ಪ್ರವಾಸದ ಕ್ಷೇತ್ರ ಸಣ್ಣದಿರಬಹುದು. ಆದರೆ ಅದರಲ್ಲಿ ಅವರು ಕಂಡ ರಸದ ಒರತೆ ಮಾತ್ರ ದೊಡ್ಡದು. ಜೀವನದಲ್ಲಿ ಕಾಣಸಿಗದ ಸ್ವಾರಸ್ಯ ಅವರಿಗೆ ಪ್ರವಾಸದಲ್ಲಿ ದೊರಕಿದೆ. ಪ್ರವಾಸದಲ್ಲಿ ಅವರು ಅತ್ತಿದ್ದಾರೆ - ನೆಕ್ಕಿದ್ದಾರೆ. ನಗೆಪಾಟಲು ವ್ಯಕ್ತಿಯೂ ಆಗಿದ್ದಾರೆ. ಹೀರೋ ಆಗಿದ್ದಂತೆ ಝೀರೋ ಕೂಡ ಆದ ಪ್ರಸಂಗಗಳೂ ಇಲ್ಲದಿಲ್ಲ. ಪರೀಕ್ಷೆಗಾಗಿ ಪರೀಕ್ಷಾ ವಿದ್ಯಾರ್ಥಿಯು ಪಟ್ಟ ದುಗುಡವನ್ನೇ ಪ್ರತಿ ಪ್ರವಾಸವೂ ಅವರಿಗಾಗಿ ಹೊತ್ತು ತಂದಿದೆ. 

3. ಲೇಖಕರು ಬಸ್ಸಿಗೆ ಕಾಯುವ ಪ್ರಸಂಗಗಳನ್ನು ಯಾವ ರೀತಿ ವರ್ಣಿಸಿದ್ದಾರೆ?
ಉತ್ತರ:- ಬಸ್ಸು ಪಗ್ರಯಾಣದ ಸ್ವರ್ಗ ಸುಖ ಸಿಗಬೇಕಾದರೆ ತಪಶ್ಚರ್ಯವನ್ನಂತೂ ಮಾಡಲೇಬೇಕು.ಅದೆಂದರೆ ಬಸ್ಸಿಗಾಗಿ ಕಾಯುವುದು, ಊಟದ ಮನೆಯಲ್ಲಿ ಒಂದೆರಡು ನಿಮಿಷವಾಗಲಿ-ಕೊನೆಗೆ ಗಳಿಗೆಯಾಗಲಿ ತಾಳಬಹುದು. ಕಾಳುಕಡ್ಡಿಯ ಅಂಗಡಿಯ ಮುಂದೆ ತಾಸುಗಟ್ಟಲೆ ರಣಗುಟ್ಟುತ್ತಿರುವ ಸೂರ್ಯನ ಕೃಪಾ ಛತ್ರದ ಕೆಳಗೆ ಆಶ್ರಯ ಪಡೆಯಬಹುದು. ಬಸ್ಸಿಗಾಗಿ ಕಾಯುವುದೆಂದರೆ ಒಂಟಿಗಾಲಿನ ಮೇಲೆ ನಿಂತು ಶಿವನನ್ನು ಕುರಿತು ತಪಶ್ವರ್ಯವನ್ನು ಗೈದಂತೆಯೇ ? ಎಂದು ವರ್ಣಿಸಿದ್ದಾರೆ.

4. ಲೇಖಕರು ಬಸ್ಸು ಏರುವ ಸಂದರ್ಭದಲ್ಲಿ ಯಾವ ರೀತಿಯ ವಾತಾವರಣ ಉಂಟಾಗುತ್ತದೆ ಎಂದಿದ್ದಾರೆ?
ಉತ್ತರ:- ಕೈಯಲ್ಲಿ ಟ್ರಂಕನ್ನು ಹಿಡಿದು ಬಸ್ಸಿನೊಂದಿಗೆ ಸ್ಪರ್ಧೆಕಟ್ಟುವಂತೆ ಓಡುತ್ತೀರಿ, ಧೂಳೆ ನಮಗೆ ಸಿಕ್ಕ ಪ್ರಾಪ್ತಿ, ನೂರು ಸಲ ಮೋಸಗೊಳಿಸಿ ಕೊನೆಗೂ ನಿಮ್ಮ ಬಸ್ಸು ಬಂದೇ ಬರುವುದು ಎಂಬ ಆಸೆ ಉಂಟಾಗುತ್ತದೆ.

5. ಲೇಖಕರು ಬಸ್ಸಿನ ಕಿಟಕಿ ಬಳಿಯ ಆಸನದಲ್ಲಿ ಕೂರಲು ಬಯಸಿದ್ದುದು ಏಕೆ?
ಉತ್ತರ:- ಕಿಟಕಿಯ ಹತ್ತಿರದ ಸ್ಥಳದಲ್ಲಿ ಕುಳಿತರೆ, ಹೊರಗಿನ ಗಾಳಿಯೂ ಬೀಸುತ್ತದೆ. ಒಳಗಿನ ಜನಸಂಪರ್ಕವೂ ತಪ್ಪಿರುವುದಿಲ್ಲ. ಹಾಗೆ ಕಿಟಕಿಯ ಹತ್ತಿರ ಕುಳಿತು ಜನರ ನಡೆನುಡಿಗಳನ್ನು ಗಮನಿಸುವುದು, ಬೇಸರವಾದಾಗ ಹೊರಗಿನ ಪ್ರಕೃತಿಯ ಉಪಾಸಕನಾಗಿ ನಿಲ್ಲುವುದು, ಮಗುದೊಮ್ಮೆ ಮಾತುಕತೆಗಳಲ್ಲಿ ಭಾಗವಹಿಸಿ ಜೋರಾಗಿ ಮಾತನಾಡುವುದು, ಇಡಿಯ ಪ್ರಯಾಣದ ಅವಧಿಯನ್ನು ನಾಟಕದ ಅವಧಿಯೆಂದು ತಿಳಿದು ಪ್ರೇಕ್ಷಕನಾಗಿ ನಿಲ್ಲುವುದು.

6. ಬಸ್ಸಿನಲ್ಲಿ ಯಾವ ಯಾವ ವಿಷಯಗಳ ಮೇಲೆ ಮಾತುಕತೆ ನಡೆಯುತ್ತವೆ?
ಉತ್ತರ:- ಬಹುಕಾಲ ಮೌನದಲ್ಲಿದ್ದು ಬೇಜಾರುಗೊಂಡಾಗ ಒಳ್ಳೆಯ ಮಾತುಗಾರ ಸಿಕ್ಕರೆ ತೀರಿತು, ಮಾತಿನ ಸುರಿಮಳ ಚರ್ಚೆಯ ಗಂಗಾ ಪ್ರವಾಹ, ವಿಷಯ ಮುಖ್ಯವಲ್ಲ. ಮಾತೇ ಮುಖ್ಯ. ಭಾರತದ ವಿದೇಶ ನೀತಿಯಿಂದ ಹಿಡಿದು ಹಳ್ಳಿಯ ಗ್ರಾಮ ಪಂಚಾಯಿತಿಯ ಚುನಾವಣೆಯವರೆಗೆ, ಶಿಕ್ಷಣದ ಅಧೋಗತಿಯಿಂದ ಜನರ ನೈತಿಕ ಅಧಃಪತನದವರೆಗೆ ಮಾತನ್ನು ಜಯಾಡಲಾಗುತ್ತದೆ. ಒಂದು ಸಾರಿ ಎಲ್ಲಿಯೋ ಪ್ರಾರಂಭವಾದ ಮಾತು ಮತ್ತೆಲ್ಲಿಯೋ ಮುಗಿಯುತ್ತದೆ.

●    ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. 

1. ಲೇಖಕರು ಬಸ್ಸು ಪ್ರಯಾಣದಲ್ಲಿ ನಗೆಗೀಡಾದ ಪ್ರಸಂಗ ಯಾವುದು?

ಉತ್ತರ:- ತೀರಾ ಇತ್ತೀಚಿಗಾದ ಘಟನೆಯಿದು. ರಾತ್ರಿ 9 ಘಂಟೆಯಾಗಿರಬಹುದು. ಬಸ್ಸಿನಿಂದ ಇಳಿಯುತ್ತಲೇ ಮುಂದಿನ ಬಸ್ಸು ಸಿದ್ಧವಾಗಿ ನಿಂತಿತ್ತು. ನನ್ನ ಗಂಟುಗಳನ್ನು ಬಸ್ಸಿನ ಮೇಲೆ ಒಗೆಯಿಸಿ ಇನ್ನೂ ತಡವಿರಬಹುದು ಎನ್ನುವ ಡೌಲಿನಲ್ಲಿ ಚಹಾ ಕುಡಿಯುವ ದುರ್ಬುದ್ಧಿಯಿಂದ ಹೋಟೆಲಿಗೆ ಹೋದೆ. ಅಂದು ಬಸ್ ಸ್ಟಾಂಡಿನಲ್ಲಿ ಎರಡು ಮೂರು ಬಸ್ಸುಗಳು ಸಾಲಾಗಿ ನಿಂತಿದ್ದವು. ಯಾವುದೋ ಬಸ್ಸಿನಲ್ಲಿ ಏರಿ ಟಿಕೇಟೊಂದನ್ನು ಪಡೆದೆ. ನನಗೆ ಸಂಶಯವೇನೂ ಬರಲಿಲ್ಲ. ಬಸ್ಸು ಇನ್ನೇನು ಹೊರಡಬೇಕು ಎಂದಾಗ ತಿಳಿದುಬಂತು. ನಾನು ಯಾವ ಊರಿಂದ ಬಂದೆನೋ ಅಲ್ಲಿಗೆ ಹೊರಟಿತ್ತು ಆ ಬಸ್ಸು, ಕಂಡಕ್ಟರನಿಗೆ ಹೇಳಿ ಬಸ್ಸಿನಿಂದ ಲಗುಬಗೆಯಿಂದ ಇಳಿದೆ. ಬಸ್ಸಿನ ನಲ್ವತ್ತು ಮುಖಗಳು ನನ್ನನ್ನು ದಿಟ್ಟಿಸಿ ನೋಡುತ್ತಿದ್ದವು. ಅಮಹಾಸ್ಯ ಗೈಯುತ್ತಿದ್ದವು. ನಾನು ತಲೆಯಿಂದ ಬುಡದವರೆಗೂ ಬೆವರಿನಲ್ಲಿ ಮುಳುಗಿಹೋಗಿದ್ದೆ. ಈ ರೀತಿ ಬಸ್ಸಿನಲ್ಲಿ ನಾನು ಹೀರೋ ಆಗಿದ್ದಂತೆ ಝೀರೋ ಕೂಡಾ ಆಗಿ ನಗೆಗೀಡಾದ ಪ್ರಸಂಗಗಳೂ ಇವೆ. 

2. ಲೇಖಕರಿಗೆ ಲಾರಿ ಪ್ರಮಾಣದಲ್ಲಿ ಯಾವ ಅನುಭವಗಳಾದವು?
ಉತ್ತರ:- ಲಾರಿಯ ಹಾದಿಯನ್ನು ಕಾದು ನಿಂತಾಗ ಮಧ್ಯರಾತ್ರಿಯಾಗಿತ್ತು. ಲಾರಿಯೊಂದು ಬಂದೇ ಬಂತು, ಲೇಖಕರು ಕುಳಿತುಬಿಟ್ಟರು. ಲಾಯಿಟಿನ ಬೆಳಕಿನಲ್ಲಿ ಲೇಖಕರೂ ಡ್ರಾಯವ್ವರನೂ ಪರಸ್ಪರ ದಿಟ್ಟಿಸಿ ನೋಡಿಕೊಂಡರು. ಆತನ ನೋಟಕ್ಕೆ ನಡುಗಿಹೋದರು, ಕೈಯಲ್ಲಿ ಹೊಸದಾಗಿ ಕೊಂಡ ವಾಚು ಇತ್ತು. ಕಿಸೆಯಲ್ಲಿ 60-70 ರೂ. ಇದ್ದವು, ಈ ಹಣದ ಆಸೆಗಾಗಿ ಲೇಖಕರನ್ನು ಕಡಿದು ತುಂಡುಮಾಡಿ, ರೋಡ ಬದಿಗೆ ಒಗೆದರೆ ಏನು ಗತಿ? ಹತ್ತು ನಿಮಿಷಕ್ಕೊಮ್ಮೆ ಅವರಡೆ ದೃಷ್ಟಿ ಬೀರುವ ವ್ಯಕ್ತಿಯ ಮೇಲೆ ಅವರ ವಿಶ್ವಾಸ ಹಾರಿತು, ಎದೆ ಡವ ಡವ ಅನ್ನುತ್ತಿತ್ತು. ಅವರು ಇಳಿಯಬೇಕಾದ ಸ್ಥಳ ಬರುವವರೆಗೂ ಜೀವದಲ್ಲಿ ಜೀವವಿರಲಿಲ್ಲ. ಡ್ರಾಯವರನು ಅವರನ್ನು ಜೀವಂತ ಬಿಟ್ಟಾಗ ಅವನು ಹೇಳಿದ ಹಣಕ್ಕಿಂತ ಹೆಚ್ಚಿನ ಹಣ ಕೊಟ್ಟರು. “ಸಲಾಂ ಸಾಬ್" ಎನ್ನುವ ಆತನ ನುಡಿಯನ್ನು ಕೇಳುವ ವ್ಯವಧಾನವಿರದೆ ಓಡಿಯೇ ಬಿಟ್ಟಿದ್ದರು. 

3. ವೀರೇಂದ್ರ ಸಿಂಪಿ ಅವರಿಗೆ ಬಸ್ಸು ಪ್ರಯಾಣದಲ್ಲಿ ಆದ ಸುಖ ದುಃಖಗಳನ್ನು ಸಂಗ್ರಹಿಸಿ ಬರೆಯಿರಿ.
ಉತ್ತರ:- ಬಸ್ಸು ಪ್ರಯಾಣದ ಸ್ವರ್ಗಸುಖ ಸಿಗಬೇಕಾದರೆ ತಪಶ್ಚರ್ಯವನ್ನಂತೂ ಮಾಡಲೇಬೇಕು. ಅದೆಂದರೆ ಬಸ್ಸಿಗಾಗಿ ಕಾಯುವುದು. ಊಟದ ಮನೆಯಲ್ಲಿ ಒಂದೆರಡು ನಿಮಿಷವಾಗಲಿ-ಕೊನೆಗೆ ಗಳಿಗೆಯಾಗಲಿ ತಾಳಬಹುದು. ಕಾಳುಕಡ್ಡಿಯ ಅಂಗಡಿಯ ಮುಂದೆ ತಾಸುಗಟ್ಟಲೆ ೮ಣಗುಟ್ಟುತ್ತಿರುವ ಸೂರ್ಯನ ಕೃಪಾ ಛತ್ರದ ಕೆಳಗೆ ಆಶ್ರಯ ಪಡೆಯಬಹುದು. ಲೇಖಕರಾದರೋ ಇಂಥ ಪ್ರಸಂಗಗಳಲ್ಲಿ ಸಾಕಷ್ಟು ನೂಕು ನುಗ್ಗಾಟಗಳಲ್ಲಿ ಸಿಕ್ಕು ಮೊದಲಿಗನಾಗದಿದ್ದರೂ ಮೊದಲಿಗರಲ್ಲಿ ಓರ್ವನಾಗಬೇಕೆನ್ನುವ ತತ್ವದವರು. ಇಷ್ಟು ಗಡಿಬಿಡಿ ಮಾಡಿ ಬರುವುದರಲ್ಲಿ ಒಂದು ಸ್ವಾರ್ಥವಿದೆ. ಅದೇನೆಂದರೆ ಕಿಟಕಿಯ ಹತ್ತಿರದ ಸ್ಥಳ ಹೊರಗಿನ ಗಾಳಿಯೂ ಬೀಸುತ್ತದೆ. ಒಳಗಿನ ಜನಸಂಪರ್ಕವೂ ತಪ್ಪಿರುವುದಿಲ್ಲ. ಹಾಗೆ ಕಿಟಕಿಯ ಹತ್ತಿರ ಕುಳಿತು ಜನರ ನಡೆನುಡಿಗಳನ್ನು ಗಮನಿಸುವುದು, ಬೇಸರವಾದಾಗ ಹೊರಗಿನ ಪ್ರಕೃತಿಯ ಉಪಾಸಕನಾಗಿ ನಿಲ್ಲುವುದು, ಮಗುದೊಮ್ಮೆ ಮಾತುಕತೆಗಳಲ್ಲಿ ಭಾಗವಹಿಸಿ ಜೋರಾಗಿ ಮಾತನಾಡುವುದು, ಇಡಿಯ ಪ್ರಯಾಣದ ಅವಧಿಯನ್ನು ನಾಟಕದ ಅವಧಿಯೆಂದು ತಿಳಿದು ಪ್ರೇಕ್ಷಕನಾಗಿ ನಿಲ್ಲುವುದು ಬಸ್ಸು ಪ್ರಯಾಣ ಸ್ಫೂರ್ತಿಯ ಉಗಮವೂ ಆಗಬಹುದು.
ವೀರರ ನಾಡಾದ ಕಲಿಗಳ ನಮ್ಮ ನಾಡಿಗೆ ಅಪಮಾನವೇ ಎಂದು ಕೋಪದಿಂದ ಕುದಿದೆ. ಚರ್ಚೆಯಿಂದ ಗೆದೆಯಲಾಗದೆ, ಇನ್ನು ಮಾರಾಮಾರಿಯಾಗುವ ಸ್ಥಿತಿಯಿತ್ತು. ಹೀಗೆ ಬಸ್ಸು ಪ್ರಯಾಣ ಒಂದೊಂದು ಸಲ ಅನಿರೀಕ್ಷಿತ ಗಂಡಾಂತರಕ್ಕೆ ಈಡೂ ಮಾಡುತ್ತಿರುವುದುಂಟು. ಬಸ್ಸು ಪ್ರಾಣವು ಈ ರೀತಿ ಲೇಖಕರ ಅನುಭವದ ವಲಯವನ್ನು ವಿಸ್ತರಿಸಿದೆ. ಜೀವನದಲ್ಲಿ ಆಸಕ್ತಿಯನ್ನು ಹುಟ್ಟಿಸಿದೆ. ಬರಡು ಬಾಳಿನಲ್ಲಿ ಆಶೆಯ ಚಿಗುರನ್ನೂ ಮೂಡಿಸಿದೆ. ಜೀವನದ ಏಕತಾನತೆಯಲ್ಲಿ ವೈವಿಧ್ಯದ ಬಣ್ಣವನ್ನು ತೀಡಿದೆ. ವಿವಿಧ ವ್ಯಕ್ತಿಗಳನ್ನು ನೋಡುವ, ಮಾತನಾಡಿಸುವ ಸಂದರ್ಭವನ್ನು ಒದಗಿಸಿಕೊಟ್ಟು, ಬಿಡದೆ ಅವರನ್ನು ಅಭ್ಯಸಿಸುವಂತೆ ಮಾಡಿದೆ. ಇಂತು ಪ್ರವಾಸವೆಂದರೆ ಲೇಖಕರಿಗೆ ಮೋಜಿನ ವಿಷಯವಾಗಿದೆ.

●    ಸಂದರ್ಭದೊಡನೆ ವಿವರಿಸಿರಿ,

1. “ಈ ಕೂಸು ನಿಮ್ಮದೇ ಏನ್ರಿ?"
ಆಯ್ಕೆ:
- ಈ ವಾಕ್ಯವನ್ನು "ವೀರೇಂದ್ರ ಸಿಂಪಿ" ಅವರು ಬರೆದಿರುವ'ಲಲಿತ ಪ್ರಭಂಧ ಗಳು'ಎಂಬ ಕೃತಿಯಿಂದ ಆಯ್ದ"ಬಸ್ಸು ಪ್ರಯಾಣದ ಸುಖ ದುಃಖಗಳು" ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಕಂಡಕ್ಟರನು ಪ್ರಯಾಣಿಕರೊಬ್ಬರನ್ನು ಕೇಳಿದರು.
ಸ್ವಾರಸ್ಯ:- ಜನರು ತಮ್ಮ ತಮ್ಮ ಯೋಗ್ಯತಾನುಸಾರ ಸ್ಥಳಗಳನ್ನು ಟಿಕೇಟ್ ಸಮಾರಂಭ ನಡೆಯುತ್ತದೆ. ಸ್ತ್ರೀ ಪ್ಯಾಸೆಂಜರೊಂದಿಗೆ ದೊಡ್ಡ ಚರ್ಚೆಯೇ ನಡೆಯುತ್ತದೆ ಎಂದು ಹೇಳುವಾಗ ಈ ಮಾತು ಬಂದಿದೆ  

2. “ಕರ್ನಾಟಕದ ಬಗ್ಗೆ ನಿಮ್ಮ ಅಭಿಪ್ರಾಯವೇನು?”
ಆಯ್ಕೆ:
- ಈ ವಾಕ್ಯವನ್ನು "ವೀರೇಂದ್ರ ಸಿಂಪಿ" ಅವರು ಬರೆದಿರುವ'ಲಲಿತ ಪ್ರಬಂಧಗಳ 'ಎಂಬ ಕೃತಿಯಿಂದ ಆಯ್ದ"ಬಸ್ಸು ಪ್ರಯಾಣದ ಸುಖ ದುಃಖಗಳು" ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:-  ಈ ಮಾತನ್ನು ಲೇಖಕರು ಆಂಧ್ರನಾಡಿನ ಮಾತುಗಾರನಿಗೆ ಕೇಳಿದರು.
ಸ್ವಾರಸ್ಯ:-  ಒಂದು ಸಾರಿ ಎಲ್ಲಿಯೋ ಪ್ರಾರಂಭವಾದ ಮಾತು ಮತ್ತೆಲ್ಲಿಯೋ ಮುಗಿಯುತ್ತದೆ. ದೇಶದ ಸಮಸ್ಯೆಯ ಮೇಲೆ ನಮ್ಮ ನಮ್ಮ ವೈಯಕ್ತಿಕ ಅಭಿಪ್ರಾಯ ಮಂಡಿಸಿದ ಬಳಿಕ ನಮ್ಮ ಸಮೀಪದ ವಿಷಯವೇ ಬಂತು ನೀವು ದೇಶವೆಲ್ಲ ಸುತ್ತಿದ್ದೀರಿ ಎಂದು ಕೇಳುವಾಗ ಮೇಲಿನ ಮಾತು ಬಂದಿದೆ.

3. ಬಸ್ಸಿನ ನಲ್ವತ್ತು ಮುಖಗಳು ನನ್ನನ್ನು ದಿಟ್ಟಿಸಿ ನೋಡುತ್ತಿದ್ದವು.
ಆಯ್ಕೆ:-
ಈ ವಾಕ್ಯವನ್ನು "ವೀರೇಂದ್ರ ಸಿಂಪಿ" ಅವರು ಬರೆದಿರುವ ಲಲಿತ ಪ್ರಭಂಡಗಳು 'ಎಂಬ ಕೃತಿಯಿಂದ ಆಯ್ದ"ಬಸ್ಸು ಪ್ರಯಾಣದ ಸುಖ ದುಃಖಗಳು" ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಲೇಖಕರು ಹೇಳಿದ್ದಾರೆ.
ಸ್ವಾರಸ್ಯ:- ಲೇಖಕರು ಯಾವುದೋ ಬಸ್ಸಿನಲ್ಲಿ ಏರಿ ಟಿಕೇಟೊಂದನ್ನು ಪಡೆದರು. ಬಸ್ಸು ಇನ್ನೇನು ಹೊರಡಬೇಕು ಎಂದಾಗ ತಿಳಿದು ಬಂತು ಅವರು ಯಾವ ಊರಿನಿಂದ ಬಂದರೋ ಅಲ್ಲಿಗೆ ಹೊರಟಿತ್ತು. ಆ ಬಸ್ಸಿನ ಕಂಡಕ್ಟರನಿಗೆ ಹೇಳಿ ಬಸ್ಸಿನಿಂದ ಲಗುಬಗೆಯಿಂದ ಇಳಿಯುವಾಗ ಈ ಮೇಲಿನ ಮಾತು ಬಂದಿದೆ.

ಭಾಷಾಭ್ಯಾಸ

ಅ) ಕೆಳಗಿನ ಪದಗಳನ್ನು ಬಿಡಿಸಿ ಬರೆದು ಸಂಧಿಯ ಹೆಸರು ತಿಳಿಸಿರಿ.


1. ಸ್ವೆಚ್ಛಾಚಾರ = ಸ್ವೆಚ್ಛಾ + ಆಚಾರ – ಸವರ್ಣದೀರ್ಘಸಂಧಿ
2. ಅಷ್ಟಿಷ್ಟು= ಅಷ್ಟು + ಇಷ್ಟು - ಲೋಪಸಂದಿ
೩ ಯೋಗ್ಯತಾನುಸಾರ = ಯೋಗ್ಯತಾ + ಅನುಸಾರ- ಸವರ್ಣದೀರ್ಘಸಂಧಿ
4.ಮಂಗಳಾರತಿ=ಮಂಗಳ+ಆರತಿ-ಸವರ್ಣದೀರ್ಘಸಂಧಿ

ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥ ಬರೆಯಿರಿ.
 
ಪ್ರತ್ಯಕ್ಷ X ಅಪ್ರತ್ಯಕ್ಷ
ಸ್ವರ್ಗ X ನರಕ
ನೀರಸ X ರಸ
ಸ್ವಾರ್ಥ x ನಿಸ್ವಾರ್ಥ
ಅಪಮಾನ X ಮಾನ 
ಅನಿರೀಕ್ಷಿತ Xನಿರೀಕ್ಷಿತ 
ದುರ್ಬುದ್ಧಿX ಸುಬುದ್ದಿ
ಆಸಕ್ತಿ Xನಿರಾಸಕ್ತಿ
ಸಾಮಾನ್ಯ X ಅಸಾಮಾನ್ಯ 

ಈ) ಕೊಟ್ಟಿರುವ ಪದಗಳಿಗೆ ತತ್ಸಮ-ತದ್ಭವ ರೂಪಗಳನ್ನು ಬರೆಯಿರಿ.
 
ನಕಾಶ- ನಕಾಸೆ  
ಕ್ಷಣ-ಚಣ
ಸ್ಥಾನ-ತಾಣ
ಮೊಗ-ಮುಖ
ಆಶೆ-ಆಸೆ
ಪ್ರಯಾಣ- ಪಯಣ

ಈ) ಕೊಟ್ಟಿರುವ ವಾಕ್ಯಗಳಲ್ಲಿ ಕರ್ತೃ, ಕರ್ಮ ಹಾಗೂ ಕ್ರಿಯಾ ಪದಗಳನ್ನು ಗುರುತಿಸಿರಿ.
 
ಕ್ರ.ಸಂ               ಕರ್ತೃಪದ                    ಕರ್ಮಪದ                                ಕ್ರಿಯಾಪದ
1.                     ಕಂಡಕ್ಟರನು                  ತಲೆಗಳನ್ನು                             ಎಣಿಸುತ್ತಾನೆ.
2.                      ತೇನಸಿಂಗ್                    ಎವರೆಸ್ಸನ್ನು                                ಏರಿದನು.

ಊ) ಕೊಟ್ಟಿರುವ ಅನ್ಯ ದೇಶೀಯ ಪದಗಳಿಗೆ ಕನ್ನಡದ ಸಮಾನಾರ್ಥಕ ಪದಗಳನ್ನು ಬರೆಯಿರಿ.
 
ಕಂಡಕ್ಟರ್- ನಿರ್ವಾಹಕ
 ಡ್ರೈವರ- ಚಾಲಕ,
ಲಾಯಿಟಿ- ದೀಪ
ಝೀರೋ-ಶೂನ್ಯ,
ಹೀರೋ- ನಾಯಕ,
ಟಿಕೇಟ್ - ಕ್ಯೂ - ಸರದಿ
ಷರ್ಟು- ಅಂಗಿ
ಟ್ರಂಕು- ಪಟ್ಟಿಗೆ
ಪ್ಯಾಸೆಂಜರ್- ಪ್ರಯಾಣಿಕ

You Might Like

Post a Comment

0 Comments