Recent Posts

ಜೇನು ಕುರುಬರ ತಾಯಿಯು ಕಾಡು ಆನೆಯ ಮಗನೂ - Class 9th Second Language Kannada Textbook Solutions

 ಗದ್ಯ 3
ಜೇನು ಕುರುಬರ ತಾಯಿಯು ಕಾಡು ಆನೆಯ ಮಗನೂ

ಲೇಖಕರ ಪರಿಚಯ

ಅಬ್ದುಲ್ ರಶೀದ್ ಇವರು 1965ರಲ್ಲಿ ಕೊಡಗಿನ ಸುಂಟಿಕೊಪ್ಪದಲ್ಲಿ ಜನಿಸಿದರು.
ಇವರು ಕಾಲು ಚಕ್ರ, ಹಾಲು ಕುಡಿದ ಹುಡುಗ, ಪ್ರಾಣ ಪಕ್ಷಿ, ಈ ತನಕದ ಕಥೆಗಳು, ನನ್ನ ಪಾಡಿಗೆ ನಾನು, ಮಾತಿಗೂ ಆಚೆ, ಅಲೆಮಾರಿಯ ದಿನಾಚರಣೆ, ಮೈಸೂರ್ ಪೋಸ್ಟ್, ಹೂವಿನಲ್ಲಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
ಶ್ರೀಯುತರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಸುವರ್ಣ ಮಹೋತ್ಸವದ ಯುವ ಲೇಖಕ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಲಂಕೇಶ ಪ್ರಶಸ್ತಿ ದೊರೆತಿವೆ.
ಈ ಪ್ರಸ್ತುತ ಪಠ್ಯ ಭಾಗವನ್ನು ಇವರ ಕಾಲು ಚಕ್ರ ಕೃತಿಯಿಂದ ಆರಿಸಿದೆ.

ಅಭ್ಯಾಸ

ಪದಗಳ ಅರ್ಥ

ಉಮಳಿಸು- ದುಃಖ ಹೆಚ್ಚಾಗು ಚಿಮ್ಮು
ಗಡಸು- ಒರಟು
ಕೊಂಚ- ಸ್ವಲ್ಪ, ತುಸು, ಅಲ್ಪ.
ತಾಯ್ತನ- ತಾಯಿಯ ಪ್ರೀತಿ, ಮಾತೃತ್ವ.
ತುರುಬು- ತಲೆ ಕೂದಲಿನ ಗಂಟು, ಮುಡಿ
ಪುತ್ರ- ಮಗ, ಸುತ್ತಾ, ತನೆಯ, ಕುಮಾರ.
ಮರುಗಿಸು- ಕನಿಕರ,  ಮನಸ್ಸು ಕರಗಿಸು.
ಹಂಡೆ- ನೀರು ತುಂಬುವ ದೊಡ್ಡ ಪಾತ್ರೆ.
ಹಾಡಿಗೆ- ಹಳ್ಳಿಗೆ, ಗ್ರಾಮಕ್ಕೆ.
ಹರಕೆ- ಬೇಡಿಕೊಳ್ಳುವಿಕೆ.
ಒಡಲು - ದೇಹ, ಶರೀರ.
ಸೋಂಕು- ಹಂಟು ರೋಗ.
ಹುಡಿ- ಮಣ್ಣು.

ಪ್ರಶ್ನೆಗಳು
ಬಿಟ್ಟ ಸ್ಥಳವನ್ನು ನೀಡಿರುವ ನಾಲ್ಕು ಆಯ್ಕೆಯ ಉತ್ತರಗಳಿಂದ ಸರಿಯಾದ ತುಂಬಿರಿ.

ಜೇನು ಕುರುಬರ ತಾಯಿ ಗೀತಾ ಸಾಕಿದ ಹಾನೆ ಮಗನ ಹೆಸರು

ಅ. ಲಂಬೋದರ
ಆ. ರಾಜೇಂದ್ರ
ಇ. ಶಿವ✓
ಈ. ಹಾಡು

ಜೇನು ಕುರುಬರ ಗೀತಾ ತನ್ನ ಮಗಳನ್ನು ಪ್ರೀತಿಯಿಂದ ______ ಎಂದು ಬೈಯುತ್ತಿದ್ದಳು

ಜಾಣ ಮಕ್ಕಳು
ಹಾಳಾದ ಮಕ್ಕಳು✓
ಮುದ್ದಿನ ಮಕ್ಕಳು
ಕಳ್ಳ ಮಕ್ಕಳು

ಗೀತಾಳ ಗಂಡನು ಮಾಡುತ್ತಿದ್ದ ಕಸುಬು,

ಮಾವುತ✓
ಕೂಲಿ
ರೈತ
ದನಗಾಯಿ

ಗೀತಾ ಮತ್ತು ಆಕೆಯ ಗಂಡ ಸಾಕುತ್ತಿದ್ದ ಮೊದಲ ಆನೆಯ ಹೆಸರು

ಲಂಬೋದರ
ರಾಜೇಂದ್ರ✓
ಶಿವ
ಶಂಕರ

ಜೇನು ಕುರುಬರ ದೇವರ ಹೆಸರು
ಮಾರಮ್ಮ
ಸೀತಾಳಮ್ಮ
ಅಮ್ಮಾಳಮ್ಮ✓
ದೇವಿರಮ್ಮ

ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ

ಜೇನು ಕುರುಬರ ಗೀತಾ ಸಾಗುತ್ತಿದ್ದ ಗಂಡು ಆನೆಯ ತಾಯಿ ತೀರಿದ್ದು ಏಕೆ.

ಉತ್ತರ: ಜೇನು ಕುರುಬರ ಗೀತಾ ಸಾಕುತ್ತಿದ್ದ ಗಂಡು ಹಾನಿಯ ತಾಯಿ ಮನುಷ್ಯರ ಗುಂಡೇಟಿನಿಂದ ತೀರಿ ಹೋಯಿತು.

ಜೇನು ಕುರುಬರ ತಾಯಿ ಆನೆಗೆ ಬೈದಾಗ ಯಾವ ರೀತಿ ಮರುಗುತ್ತಿದ್ದಳು.
ಉತ್ತರ: ಜೇನು ಕುರುಬರ ತಾಯಿ ಆನೆಗೆ ಬೈದಾಗ ಅಯ್ಯೋ ನಿನ್ನ ಬೈದೇನಾ ಕೂಸು ರಾಜ ಅಂತ ಮಮ್ಮಲ್ಲ ಮರುಗುತ್ತಾಳೆ.

ಗೀತಾ ಮರಿ ಆನೆಗೆ ಯಾವ ರೀತಿ ಗದರಿ ಬುದ್ಧಿ ಹೇಳುತ್ತಿದ್ದಳು.
ಉತ್ತರ: ನಾನು ನಿನ್ನ ಅಮ್ಮ ನೀನು ನನ್ನ ಮಾತು ಕೇಳೋದು ಹಠ ಮಾಡಿದರೆ ಸೌದೆ ಸೊಟ್ಟಿನಿಂದ ಬಾರಿಸಿದ ಬುದ್ಧಿ ಹೇಳುತ್ತಿದ್ದಳು.

ಆನೆಕಣ್ಣಲ್ಲಿ ನೀರು ಬರುತ್ತಿರುವುದಕ್ಕೆ ಗೀತಾ ನೀಡಿದ ಪ್ರತಿಕ್ರಿಯೆ ಏನು.
ಉತ್ತರ: ಸೋಂಕು ಅಲ್ಲ, ಗೀತು ಅಲ್ಲ, ಅದಕ್ಕೆ ಅದರ ತಾಯಿಯ ನೆನಪ ಆಗಿರಬೇಕು ಸಾಹೇಬರೇ ಎಂದು ಗೀತಾ ಪ್ರತಿಕ್ರಿಯೆ ನೀಡಿದಳು.

ಜೇನು ಕುರುಬರ ಗೀತಾಳ ಮನ ಮಗನೊಬ್ಬ ಸಾಹುಕಾರರ ಅಂಗಡಿಗೆ ಏಕೆ ಹೋಗುತ್ತಿದ್ದನು.
ಉತ್ತರ: ಸೀತಾಳ ಮಗ ಮೊಬೈಲಿನ ಬ್ಯಾಟರಿ ಚಾರ್ಜ್ ಮಾಡಿಸಿಕೊಂಡು ಬರಲು ಕರೆಂಟ್ ಇರುವ ಸಹುಕರರೋನ್ಬ್ಬರು ಹೋಗುತ್ತಿದ್ದನು.

ಅನೆ ಮರಿಗೆ ಶಿವ ಎಂದು ಹೆಸರಿಟ್ಟರು ಯಾರು
ಉತ್ತರ: ಆನೆ ಮರಿಗೆ ಶಿವ ಎಂದು ಹೆಸರಿಟ್ಟರು ಪಾರೆಸ್ಸಿನ ರೆಂಜರು ಸಾಹೇಬರು.

ಆನೆ ಶಿವನ ಬಗ್ಗೆ ಗೀತಾ ಯಾರು ಆಸೆ ಇಟ್ಟುಕೊಂಡಿದ್ದಳೆ

ಉತ್ತರ: ಆನೆ ಶಿವ ಬದುಕಿತೊಟ್ಟ ಪಟ್ಟದಾನೆಯಾದರೆ ಸಾಕು ಎಂಬ ಆಸೆ ಇಟ್ಟುಕೊಂಡಿದ್ದಾಳು.

ಕೆಳಗಿನ ಪ್ರಶ್ನೆಗಳಿಗೆ 3-4 ವಾಕ್ಯಗಳಲ್ಲಿ ಉತ್ತರ ಬರೆಯಿರಿ.

ಗೀತಾ ಅಂಬಾಳಮ್ಮನಲ್ಲಿ ಆನೆ ಶಿವನ ಬಗ್ಗೆ ಏನೆಂದು ಬೇಡಿಕೊಂಡಿದ್ದಳು

ಉತ್ತರ ಆನೆ ಶಿವನಿಗಾಗಿ ಗೀತಾ, ಜೇನು ಕುರುಬರ ದೇವರು ಅಮ್ಮಾಳಮ್ಮನ ಬಳಿ ಹರಕೆ ಹಾಕಿಕೊಂಡಿರುವ ಗುಟ್ಟು ಇಲ್ಲೇ ಕಾವೇರಿ ನದಿಯ ತೀರದಲ್ಲಿ ಕಾಡಿನೊಳಗಡೆ ಅಮ್ಮಾಳಮ್ಮ ದೇವತೆ ಇರುವಳು. ಅವಳು ಒಳ್ಳೆಯವರಿಗೆ ಒಳ್ಳೆಯ ದೇವರು, ಕೆಟ್ಟವರಿಗೆ ತೀರಾ ಕೆಟ್ಟವಳು, ಅವಳ ಬಳಿ ಇವಳು ಒಬ್ಬಳೇ ಹೋಗಿ ಈ ಆನೆ ಮಗನನ್ನು ಬದುಕಿಸಿ ದೊಡ್ಡವನನ್ನಾಗಿ ಮಾಡಲು ಬಿಡು. ದೊಡ್ಡದೊಂದು ಹರಕೆ ತೀರಿಸುವೆನು ಎಂದು ಬೇಡಿಕೊಂಡಿದ್ದಳು.

ಆನೆ ಲಂಬೋದರ ತೀರಿಕೊಂಡದ್ದು ಹೇಗೆ
ಉತ್ತರ: ಆನೆ ಲಂಬೋದರ ಕಾಡೊಳಗಿದ್ದ ಒಂದು ದೊಡ್ಡ ರೌಡಿ ಆನೆಯಾಗಿತ್ತು. ಪ್ಲಾಂಟರ್ ನೊಬ್ಬ ಅದರ ಒಡಲಕ್ಕೆ ಹಲವು ಕಾಡು ತೂಸುಗಳನ್ನು ತೋರಿಸಿ ಬಿಟ್ಟಿದ್ದ. ಆಮೇಲೆ ಅದನ್ನು ಹಿಡಿದು ಪಳಗಿಸಿ ಇವರಿಬ್ಬರ ಸುಪರ್ದಿಗೆ ವಹಿಸಿದರು. ಸಾಯೋವರೆಗೆ ಹೊಟ್ಟೆಯೊಳಗಿದ್ದ ಕಾಡು ತೂಸುಗಳಿಂದಾಗಿ ನರಳುತ್ತಾ ಬದುಕಿದ್ದ ನಂಬೋದರೆ ಒಂದು ದಿನ ತಾನು ವಣದಿಂದಾಗಿ ತೀರಿಹೋಗಿತ್ತು.

ಆನೆ ಲಂಬೋದರ ತೀರಿದಾಗ ಗೀತಾ ಯಾವ ರೀತಿ ದುಃಖಿಸಿದಳು
ಉತ್ತರ: ಆನೆ ಲಂಬೋದರ ತೀರಿ ಹೋದಾಗ ಗೀತಾ ತಲೆಯ ಮೇಲೆ ಮಣ್ಣೆರಚಿ ಹುಚ್ಚಿಯಂತೆ ಹತ್ತಿದಳು. ದೇವರೇ, ಈ ಕೆಟ್ಟ ಮನುಷ್ಯರಿಂದ ಆನೆಗಳನ್ನು ಕಾಡು ಕುರುಬರನ್ನು ಕಾಪಾಡು ಎಂದು ಅಲ್ಲಿ ಮೆರೆದವರಿಗೆಲ್ಲ ಇಡೀ ಹಿಡಿ ಶಾಪ ಹಾಕಿದಳು. ನೀವು ಚೆನ್ನಾಗಿ ನೋಡಿಕೊಂಡಿಲ್ಲ. ಅದಕ್ಕಾಗಿ ನಂಬೋತರ ಸತ್ತುಹೋದ ಅಂತ ಯಾರು ಬೈದಿದ್ದರಂತೆ ಅದಕ್ಕಾಗಿ ಅವರಿಗೆ ಅವತ್ತು ದುಃಖ ಇನ್ನು ಉಮ್ಮರಿಸಿತ್ತು.

ಕೆಳಗಿನ ಪ್ರಶ್ನೆಗಳಿಗೆ 8-10 ವಾಕ್ಯಗಳಲ್ಲಿ ಉತ್ತರಿಸಿರಿ

ಜೇನು ಕುರುಬರ ತಾಯಿ ಆನೆ ಮಗನನ್ನು ಹೇಗೆ ಸಾಗುತ್ತಿದ್ದಳು

ಉತ್ತರ: ಜೇನು ಕುರುಬರ ಗೀತಾ ಈ ಆನೆ ಮಗನನ್ನು ಸಾಕುತ್ತಿದ್ದಾಳೆ. ಆಕೆ ತನ್ನ ಈ ತಾಯ್ತನವನ್ನು ಎಷ್ಟು ಗಂಭೀರವು ಸಹಜವಾಗಿಯೂ ತೆಗೆದುಕೊಂಡಿದ್ದಾಳೆಂದರೆ ಆಕೆಯ ಕಣ್ಣಿಗೆ ರಾತ್ರಿ ಇಡಿ ನಿದ್ದೆ ಹತ್ತೋದಿಲ್ಲ. ಆನೆ ಮಗನಿಗೆ ಹಸುವಿನ ಹಾಲು ಕಾಯಿಸಿ ಕುಡಿಸಲಿಕ್ಕೆ ಎರಡು ಸಲ ಎದ್ದೇಳುತ್ತಾಳೆ. ಒಂದು ಸಲ ಅದರ ಕಕ್ಕ ಬಳಿದು ತೆಗೆಯಲಿಕ್ಕೆ ಎದ್ದೇಳುತ್ತಾಳೆ. ಹಗಲು ಅಷ್ಟೇ, ಕಣ್ಣು ರೆಪ್ಪೆ ಮುಚ್ಚದೆ ಶಿವನ ಚಲನವಲನಗಳನ್ನು ಕಾಯುತ್ತಿರುತ್ತಾಳೆ. ನಡೆಯುವಾಗ ಅದು ಮುಗ್ಗರಿಸಿದರೆ ಅವಳ ಕರುಳು ದಸಕಿನ್ನುತ್ತದೆ. ಅದು ದೂಳಲ್ಲಿ ಆಟವಾಡಿ ಸೊಂಡಿಲು ಮಣ್ಣು ಮಾಡಿಕೊಂಡರೆ ಜೇನು ಕುರುಬರ ಭಾಷೆಯಲ್ಲಿ ಅದನ್ನು ಬೈದು ತನ್ನ ಹರಿದ ಶರಟಿನ ತುದಿಯಿಂದ ಅದನ್ನು ಹೊರಸಿ ಉಜ್ಜಿ ಶುಚಿ ಮಾಡುತ್ತಾಳೆ. ಅಂಡೆಯಲ್ಲಿ ಬಿಸಿ ನೀರು ಕಾಯಿಸಿ, ದಿನಕ್ಕೆರಡು ಬಾರಿ ಸ್ನಾನ ಮಾಡಿಸುತ್ತಾಳೆ. ಹಾಲಲ್ಲಿ ರಾಗಿ ಹುಡಿ ಬೆರೆಸಿ, ಹಂಬಲಿ ಮಾಡಿ ಕುಡಿಸಿ ಅದೇನಾದರೂ ಕುಡಿಯಲಾಗದೆ ಉಗಿದರೆ ಕೆಟ್ಟದಾಗಿ ಬೈಯುತ್ತಾಳೆ, ಬೈದಾಗ ನಂತರ ಅಯ್ಯೋ ನಿನ್ನ ಬೈದನ ಕೋಶ, ರಾಜ ಅಂತ ಮಮ್ಮಲ ಮರೋಗುತ್ತಾಳೆ .

ಮರಿಯಾಣೆ ಗೀತಾಳಿಗೆ ಮಾಡುತ್ತಿದ್ದ ಕೀಟಲೆಗಳಾವುವು
ಉತ್ತರ: ಈ ತುಂಟ ಆನೆ ಮರೆಯೋ ಅಷ್ಟೇ, ಗೀತಾಳನ್ನು ಮರುಗಿಸಲೆಂದೇ ಬೇಕಾದಷ್ಟು ಕೀಟಲೆಗಳನ್ನು ಮಾಡುತ್ತದೆ. ಬೇಕು ಬೇಕಂತಲೇ ತನ್ನ ಸೊಂಡಿಲಿನಿಂದ ಆಕೆಯ ಬಿಗಿ ಕಟ್ಟಿದ ತುರುಬನ್ನು ಎಳೆಯುವುದು, ಬಿಸಿಲಲ್ಲಿ ಒಣಗಲು ಹಾಕಿದ ಹಾಕಿಯ ಹರಿದ ಬಟ್ಟೆಗಳ ಮೇಲೆ ತನ್ನ ಪಾದದ ಚಿತ್ರಗಳನ್ನು ಬಿಡಿಸುವುದು ಇತ್ಯಾದಿ ಮಾಡುತ್ತಾನೆ. ಆಗ ಆಕೆ ಸಿಟ್ಟಿನಿಂದ ಅದರ ಕಿವಿ ಹಿಂಡಿ ಬುದ್ದಿ ಹೇಳಿ, ಅದರ ಕಿವಿ ಇಡಿದು ಎಳೆದುಕೊಂಡು ಆಟದ ಸೆರೆಮನೆಯಂತಹ ಬಿದಿರು ತಡಿಕೆಯ ಅಂಗಳದೊಳಗೆ ಸೇರಿಸಿ ಬೈದುಬಿಡುತ್ತಾಳೆ, ನಾನು ನಿನ್ನ ಅಮ್ಮ, ನೀನು ನನ್ನ ಮಾತು ಕೇಳೋದು ಹಠ ಮಾಡಿದರೆ ಸೌದೆ ಸೋಟಿಂದ ಬಾರಿಸಿಯೇ ಬಿಡುವ ಎಂದು ಗದರುತ್ತಳೆ. ಶಿವನೂ ಅಷ್ಟೇ, ತಾನು ಆನೆ ಮರಿಯೆಂಬುದು ಮರೆತು ವಿಧೇಯ ಮಗುವಂತೆ ಅಳಲು ತೊಡಗುತ್ತದೆ. ಆದರೆ ಅದರ ಅಳು ಪುಟ್ಟ ಆನೆಯೊಂದು ಪಿಲಿದುವಂತೆ ಕೇಳುತ್ತದೆ. ಮೂರುವರೆ ತಿಂಗಳು ಆನೆ ಮರಿ ಪಿಲಿದುವ ಸದ್ದು, ಆ ಸದ್ದು ಮಾತ್ರ ಸಾಕು ನಮಗೆ ಇದೆಲ್ಲ ಸಹಜವಾಗಿಲ್ಲ ಅಂತ ಅನಿಸಲಿಕ್ಕೆ

ಸಂದರ್ಬದೊಡನೆ ಸ್ವಾರಸ್ಯ ವಿವರಿಸಿರಿ.

ಅದು ಮುಗ್ಗರಿಸಿದರೆ ಇವಳ ಕರುಳು ದಸಕ್ಕೆನ್ನುತ್ತದೆ.

ಆಯ್ಕೆ : ಈ ವಾಕ್ಯವನ್ನು ಅಬ್ದುಲ್ ರಷೀದ್ ಅವರು ಬರೆದಿರುವ ಕಾಲಚಕ್ರ ಎಂಬ ಕೃತಿಯಿಂದ ಆಯ್ದ ಜೇನು ತಾಯಿಯು ಕಾಡು ಆನೆಯ ಮಗನೂ ಎಂಬ ಗದ್ಯಭಾಗದಿoದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಲೇಖಕರು ಹೇಳಿದ್ದಾರೆ.
ಸ್ವಾರಸ್ಯ: ಜೇನು ಕುರುಬರ ಗೀತಾ ಈ ಆನೆ ಮಗನನ್ನು ಸಾಕುತ್ತಿದ್ದಳು. ಆಕೆ ತನ್ನ ಈ ತಾಯ್ತನವನ್ನು ಎಷ್ಟು ಗಂಭೀರವೂ ಸಹಜವಾಯೂ ಈ ಮೇಲಿನ ಮಾತು ವ್ಯಕ್ತವಾಗಿದೆ .

ಗೀತಾ ನೋಡು ಶಿವನ ಕಣ್ಣಲ್ಲಿ ನೀರು ಬರುತ್ತಿದೆ.
ಆಯ್ಕೆ : ಈ ವಾಕ್ಯವನ್ನು ಅಬ್ದುಲ್ ರಷೀದ್ ಅವರು ಬರೆದಿರುವ ಕಾಲಚಕ್ರ ಎಂಬ ಕೃತಿಯಿಂದ ಆಯ್ದ ಜೇನು ತಾಯಿಯು ಕಾಡು ಆನೆಯ ಮಗನೂ ಎಂಬ ಗದ್ಯಭಾಗದಿoದ ಆರಿಸಿಕೊಳ್ಳಲಾಗಿದೆ.
ಸಂದರ್ಭ : ಈ ಮಾತನ್ನು ಸಾಹೇಬರು ಜೇನು ಕುರುಬರ ಗೀತಾಳಿಗೆ ಹೇಳಿದ್ದಾರೆ.
ಸ್ವಾರಸ್ಯ: ಏನಾದರೂ ಸೋಂಕು, ಗಿಂಕು ತಾಗುಳಿರಬೇಕು ಎಂದಾಗ ಸೋಂಕು ಅಲ್ಲ, ಗಿಂಕೂ ಅಲ್ಲ ಅದಕ್ಕೆ ಅದರ ತಾಯಿಯ ನೆನಪು ಆಗಿರಬೇಕು ಸಾಹೇಬರೇ ಆಕೆ ಅನ್ನುತ್ತಾಳೆ. ಆನೆ ಶಿವನ ಕಣ್ಣಲ್ಲಿ ನೀರು ಬರುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

ದೇವರೇ, ಈ ಕೆಟ್ಟ ಮನುಷ್ಯರಿಂದ ಆನೆಗಳನ್ನು ಹುಡುಕುವುದು ಬರಲು ಕಾಪಾಡು
ಆಯ್ಕೆ : ಈ ವಾಕ್ಯವನ್ನು ಅಬ್ದುಲ್ ರಷೀದ್ ಅವರು ಬರೆದಿರುವ ಕಾಲಚಕ್ರ ಎಂಬ ಕೃತಿಯಿಂದ ಆಯ್ದ ಜೇನು ತಾಯಿಯು ಕಾಡು ಆನೆಯ ಮಗನೂ ಎಂಬ ಗದ್ಯಭಾಗದಿoದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಆನೆ ಲಂಬೋದರ ತೀರಿ ಹೋದಾಗ ಜೇನು ಕುರುಬರ ಗೀತಾ ಈ ಮಾತನ್ನು ಹೇಳಿದ್ದಾಳೆ.
ಸ್ವಾರಸ್ಯ: ಗೀತಾ ತಲೆಯ ಮೇಲೆ ಮನೆಯಲ್ಲ ಹುಚ್ಚಿಯಂತೆ
ಅಳುತ್ತಾ ಅಲ್ಲಿ ನೆರೆದವರಿಗೆಲ್ಲ ಹಿಡಿ ಶಾಪ ಹಾಕಿದ ಸಂದರ್ಭದಲ್ಲಿ ಈ ಮೇಲಿನ ಮಾತು ವ್ಯಕ್ತವಾಗಿದೆ.

ಈ ಶಿವನನ್ನು ಬೆಳೆಸಿ ದೊಡ್ಡ ಪಟ್ಟದಾನೆ ಮಾಡಿಯೇ ತಾನು ಜೀವ ಬಿಡುವುದು.
ಆಯ್ಕೆ : ಈ ವಾಕ್ಯವನ್ನು ಅಬ್ದುಲ್ ರಷೀದ್ ಅವರು ಬರೆದಿರುವ ಕಾಲಚಕ್ರ ಎಂಬ ಕೃತಿಯಿಂದ ಆಯ್ದ ಜೇನು ತಾಯಿಯು ಕಾಡು ಆನೆಯ ಮಗನೂ ಎಂಬ ಗದ್ಯಭಾಗದಿoದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಜೇನು ಕುರುಬರ ಗೀತಾ ಆನೆ ಶಿವನನ್ನು ಈ ಮಾತನ್ನು ಹೇಳಿದಳು.
ಸ್ವಾರಸ್ಯ: ಗೀತಾ ಮತ್ತು ಅವಳ ಗಂಡ ಮೊದಲು ಸಾಗುತ್ತಿದ್ದ ಆನೆಗಳನ್ನು ಕಳೆದುಕೊಂಡು ಬೇಸರದಲ್ಲಿದ್ದಾಗ, ತನ್ನ ತುರುಬನ್ನು ಎಳೆಯಲು ಬಂದ ಶಿವನ ಸೊಂಡಿಲಿಗೆ ಮುತ್ತಿಟ್ಟು, ಎನ್ನ ಜೀವ ಹೋದರು ಸರಿಯೇ ಎಂದು ಕಣ್ಣೀರು ಹಾಕಿ ಪ್ರೀತಿಯಿಂದ ನಕ್ಕಾಗ ಈ ಮೇಲಿನ ಮಾತು ವ್ಯಕ್ತವಾಗಿದೆ.

ಭಾಷಾಭ್ಯಾಸ

ಕೆಳಗಿನ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ.


ಆನೆ -ಗಜ, ಕರಿ
ಪುತ್ರ- ಮಗ, ಸುತ
ಕಾಡು- ಅರಣ್ಯ, ವನ
ತಾಯಿ- ಅಮ್ಮ ,ಅವ್ವ

ಈ ಕೆಳಗಿನ ಪದಗಳಿಗೆ ವಿರುದ್ಧಾರ್ಥ ಬರೆಯಿರಿ.

ಕಷ್ಟX ಸುಲಭ
ಕಷ್ಟXಸುಲಭ
ಕೆಟ್ಟವXಒಳ್ಳೆಯ
ಹಗಲುXರಾತ್ರಿ
ವಿಧೇಯ Xಅವಿದೆಯಾ
ದುಃಖXಸುಖ
ಸಹಜXಅಸಹಜ.

ಕೆಳಗಿನ ಪದಗಳನ್ನು ಬಿಡಿಸಿ ಸಂಧಿ ಹೆಸರು ತಿಳಿಸಿರಿ
ಗುಂಡೆಟು ಗುಂಡು ಏಟು ಲೋಪ ಸಂಧಿ
ಇನ್ನೊಬ್ಬ ಇನ್ನೂ ಒಬ್ಬ ಲೋಪ ಸಂಧಿ
ರಾಜೇಂದ್ರ ರಾಜ ಇಂದ್ರ ಗುಣ ಸಂಧಿ
ನನಗೊಂದು ನನಗೆ ಒಂದು ಲೋಪ ಸಂಧಿ
You Might Like

Post a Comment

0 Comments