Recent Posts

ತೊಟ್ಟಿಲು ತೂಗುವ ಹಾಡು - Class 9th Second Language Kannada Textbook Solutions

 ಪದ್ಯ  ೧೨
ತೊಟ್ಟಿಲು ತೂಗುವ ಹಾಡು

ಕವಿ/ಲೇಖಕರ ಪರಿಚಯ :
*  ವೈದೇಹಿ (ಜಾನಕಿ ಶ್ರೀನಿವಾಸಮೂರ್ತಿ) ಇವರು 1945 ರಲ್ಲಿ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದರು.
*  ಇವರು ಹೂವು ಕಟ್ಟುವ ಕಾಯಕ, ಬಿಂದು ಬಿಂದಿಗೆ, ಪಾರಿಜಾತ, ಅಸ್ಪೃಶ್ಯರು, ಅಮಚ್ಚಿಯೆಂಬ ನೆನಪು, ಮಲ್ಲಿನಾಥನ ಧ್ಯಾನ, ಮೇಜು ಮತ್ತು ಬಡಗಿ ಮುಂತಾದ ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ.
* ಶ್ರೀಯುತರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಎಂ.ಕೆ.ಇಂದಿರಾ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಮುಂತಾದ ಪ್ರಶಸ್ತಿಗಳು ಲಭಿಸಿದೆ.
• ಈಕವನವನ್ನು ಅವರ 'ಹೂವ ಕಟ್ಟುವ ಕಾಯಕ' ಎಂಬ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.

      ಪದಗಳ ಅರ್ಥ :
 
ಅಲೆ – ತರಂಗ: ತೆರೆ
ಪಕಳೆ - ಎಸಳು; ಹೂವಿನ ದಳ
ಜೋಲಿ – ತೊಟ್ಟಿಲು
ತೊಯ್ದ – ಒದ್ದೆಯಾದ; ನೆನೆದ
ಸಾವಧಾನ – ನಿಧಾನ, ಸಾವಕಾಶ
ಹೊಳೆ - ನದಿ; ಪ್ರಕಾಶಿಸು
ಕರಿಕಂಗಳ -ಕಪ್ಪನೆ ಅಂಗಳ: ರಾತ್ರಿಯ ಆಕಾಶ,
ತಾರೆ - ನಕ್ಷತ್ರ
ನೊರೆ -  ನೀರಿನ ಮೇಲಿನ ಬುರುಗು; ಗಾಳಿಗುಳ್ಳೆ, ಮುಗಿಲು - ಆಕಾಶ: ಗಗನ: ಬಾನು.
ಹಸುಳೆ - ಎಳೆ ಮಗು; ಹಸುಗೂಸು

   ಪ್ರಶ್ನೆಗಳು 

●    ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

1. 'ತೊಟ್ಟಿಲು ತೂಗುವ ಹಾಡು' ಕವಿತೆಯ ಆಕರ ಕೃತಿ ಯಾವುದು?

ಉತ್ತರ:- ತೊಟ್ಟಿಲು ತೂಗುವ ಹಾಡು ಕವಿತೆಯ ಆಕರ ಕೃತಿ 'ಹೂವ ಕಟ್ಟುವ ಕಾಯಕ.

2. ಕವಿಗೆ ಪ್ರಕೃತಿಗಿಂತಲೂ ಹೆಚ್ಚು ಚಂದವಾಗಿ ಕಂಡದ್ದು ಯಾವುದು?
ಉತ್ತರ:- ಕವಿಗೆ ಪ್ರಕೃತಿಗಿಂತಲೂ ಹೆಚ್ಚು ಚಂದವಾಗಿ ಕಂಡದ್ದು ತೊಟ್ಟಿಲಿನಲ್ಲಿರುವ ಮಗು. 

3. ಹೊಳೆ, ಅಲೆ ಹಾಗೂ ಗಾಳಿ ಹೇಗೆ ನಾದಗೈಯುತ್ತವೆ?
ಉತ್ತರ:- ಹರಿವ ಹೊಳೆಯು ಳುಳಳು ಎಂದು, ಅಲೆಯ ನೊರೆಯು ರು ರು ರು ಎಂದು, ಗಾಳಿಯು ಸುಯ್ಯ ಎಂದು ನಾದಗೈಯುತ್ತವೆ. 

4. ಜೋಲಿಯೊಳಗಿನ ಹಸುಳೆ ಹೇಗೆ ನಗುತ್ತದೆ?
ಉತ್ತರ:- ಜೋಲಿಯೋಳಗಿನ ಹಸುಳೆ ಲ ಲ ಲ ಎಂದು ನಗುತ್ತದೆ.

5. ಗಿರಿಯ ನವಿಲಿನ ಚಂದವೇನು?
ಉತ್ತರ:- ಬೆಟ್ಟ ಗುಡ್ಡಗಳ ಮೇಲೆ ನಲಿದಾಡುವ ನವಿಲಿನ ನಾಟ್ಯ ಚೆಂದ.

6. ಕರಿಕಂಗಳಲ್ಲಿ ಎಂತಹ ಚಂದವಿದೆ?
ಉತ್ತರ:- ಕರಿಕಂಗಳಲ್ಲಿ ಮಿನುಗುವ ನಕ್ಷತ್ರಗಳ ಚಂದವಿದೆ.

7. ವೈದೇಹಿಯವರ ನಿಜವಾದ ಹೆಸರೇನು?
ಉತ್ತರ:- ವೈದೇಹಿಯವರ ನಿಜವಾದ ಹೆಸರು ಜಾನಕಿ ಶ್ರೀನಿವಾಸಮೂರ್ತಿ

●    ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. 

1. 'ತೊಟ್ಟಿಲು ತೂಗುವ ಹಾಡು' ಕವಿತೆಯಲ್ಲಿ ಕವಿಗೆ ಚಂದವಾಗಿ ಕಂಡ ಪ್ರಕೃತಿಯ ದೃಶ್ಯಗಳಾವುವು?

ಉತ್ತರ:- ಪ್ರಸ್ತುತ 'ತೊಟ್ಟಿಲು ತುಗುವ ಹಾಡು' ಕವನದಲ್ಲಿ ವೈದೇಹಿಯವರು ತಾಯಿಯೊಬ್ಬಳು ಪ್ರಕೃತಿಯನ್ನು ವರ್ಣಿಸುತ್ತಾ, ತನ್ನ ಮಗು ಪ್ರಕೃತಿಗಿಂತಲೂ ಚೆಂದ ಎಂದು ಜೋಗುಳ ಹಾಡುತ್ತಾ ಜಗತ್ತನ್ನೇ ತೂಗುವ ಮಾತೃ ವಾತ್ಸಲ್ಯವನ್ನು ಸೊಗಸಾಗಿ ವರ್ಣಿಸಿದ್ದಾರೆ. ನೋಡಲು ಆಕಾಶವು ಚೆಂದ, ಆಕಾಶದಿಂದ ಸುರಿವ ಮಳೆ, ಆ ಮಳೆಯಿಂದ ತೊಯ್ದ ಗುಡ್ಡ, ಬೆಟ್ಟಗಳು, ಗಿಡ ಮರಗಳಲ್ಲಿ ಅರಳುವ ಹೂವು, ಹಾಗೆಯೇ ಮೊಟ್ಟೆಯಿಂದ ಹೊರ ಬರುವ ಹಕ್ಕಿ ನೋಡಲು ಚೆಂದ, ಇವೆಲ್ಲಕ್ಕಿಂತ ತೊದಲು ನುಡಿಗಳನ್ನು ನುಡಿಯುವ, ತೊಟ್ಟಿಲಲ್ಲಿ ಮಲಗಿರುವ ನನ್ನ ಕಂದನೇ ಚೆಂದ ಎಂದು ತಾಯಿ ಹಾಡುತ್ತಾಳೆ. ಈ ಎಲ್ಲಾ ಅಂಶಗಳು ಪ್ರಕೃತಿಯ ದೃಶ್ಯಗಳಾಗಿವೆ.

2. ಕವಯಿತ್ರಿಯು ತೊಟ್ಟಿಲಲ್ಲಿ ನಗುವ ಹಸುಳೆಯ ಬಂದವನ್ನು ಹೇಗೆ ವರ್ಣಿಸಿದ್ದಾರೆ?
ಉತ್ತರ:- ಹರಿವ ಹೊಳೆಯು ಳುಳುಗಳು ನಾದ ಚೆಂದ, ಸಾಗರದಲ್ಲಿರುವ ಅಲೆಯ ನೊರೆಯ ರು ರು ರು ಚೆಂದ, ಗಾಳಿ ಸುಂ ಎಂದು ಬೀಸುವ ನಾದ, ಹಾಗೂ ಸಾವಧಾನವಾಗಿ ತೇಲಿ ಬರುವ ದೋಣಿಯು ನೋಡಲು ಚೆಂದ, ಆದರೆ ಇವೆಲ್ಲಕ್ಕಿಂತ ಜೋಲಿಯೊಳಗೆ ಲ ಲ ಲ ಎಂದು ನಗುವ ಹಸುಗೂಸು ಇನ್ನೂ ಚೆಂದ ಎಂದು ತಾಯಿ ತೊಟ್ಟಿಲಲ್ಲಿರುವ ತನ್ನ ಮುದ್ದು ಕಂದನನ್ನು ವರ್ಣಿಸುತ್ತಾಳೆ.

●    ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

1. 'ತೊಟ್ಟಿಲು ತೂಗುವ ಹಾಡು' ಕವಿತೆಯಲ್ಲಿ ಕವಯಿತ್ರಿ ಜಗವನ್ನೆಲ್ಲಾ ತೂಗಿರುವ ಪರಿ ಹೇಗೆ?

ಉತ್ತರ:- ಪ್ರಸ್ತುತ 'ತೊಟ್ಟಿಲು ತುಗುವ ಹಾಡು' ಕವನದಲ್ಲಿ ವೈದೇಹಿಯವರು ತಾಯಿಯೊಬ್ಬಳು ಪ್ರಕೃತಿಯನ್ನು ವರ್ಣಿಸುತ್ತಾ, ತನ್ನ ಮಗು ಪ್ರಕೃತಿಗಿಂತಲೂ ಚೆಂದ ಎಂದು ಜೋಗುಳ ಹಾಡುತ್ತಾ ಜಗತ್ತನ್ನೇ ತೂಗುವ ಮಾತೃ ವಾತ್ಸಲ್ಯವನ್ನು ಸೊಗಸಾಗಿ ವರ್ಣಿಸಿದ್ದಾರೆ. ನೋಡಲು ಆಕಾಶವು ಚೆಂದ, ಆಕಾಶದಿಂದ ಸುರಿವ ಮಳೆ, ಆ ಮಳೆಯಿಂದ ತೊಯ್ದ ಗುಡ್ಡ, ಬೆಟ್ಟಗಳು,
ಗಿಡ ಮರಗಳಲ್ಲಿ ಅರಳುವ ಹೂವು, ಹಾಗೆಯೇ ಮೊಟ್ಟೆಯಿಂದ ಹೊರ ಬರುವ ಹಕ್ಕಿ ನೋಡಲು ಚೆಂದ. ಇವೆಲ್ಲಕ್ಕಿಂತ ತೊದಲು ನುಡಿಗಳನ್ನು ನುಡಿಯುವ, ತೊಟ್ಟಿಲಲ್ಲಿ ಮಲಗಿರುವ ನನ್ನ ಕಂದನೇ ಚೆಂದ ಎಂದು ತಾಯಿ ಹಾಡುತ್ತಾಳೆ. ಹರಿವ ಹೊಳೆಯ ಳುಗಳು ಳು ನಾದ ಚೆಂದ, ಸಾಗರದಲ್ಲಿರುವ ಅಲೆಯು ನೆರೆಯ ರು ರು ರು ಚೆಂದ, ಗಾಳಿ ಸುಂದ ಎಂದು ಬೀಸುವ ನಾದ, ಹಾಗೂ ಸಾವಧಾನವಾಗಿ ತೇಲಿ ಬರುವ ದೋಣಿಯು ನೋಡಲು ಚೆಂದ, ಆದರೆ ಇವೆಲ್ಲಕ್ಕಿಂತ ಜೋಲಿಯೊಳಗೆ ಲ ಲ ಲ ಎಂದು ನಗುವ ಹಸುಗೂಸು ಇನ್ನೂ ಚೆಂದ ಎಂದು ತಾಯಿ ತೊಟ್ಟಿಲಲ್ಲಿರುವ ತನ್ನ ಮುದ್ದು ಕಂದನನ್ನು ವರ್ಣಿಸುತ್ತಾ, ಕವಯಿತ್ರಿ ಜಗವನ್ನೇ ತೂಗಿರುವ ಪರಿಯನ್ನು ನಾವು ಇಲ್ಲಿ ಕಾಣಬಹುದಾಗಿದೆ.

2. 'ತೊಟ್ಟಿಲು ತೂಗುವ ಹಾಡು' ಕವಿತೆಯ ಆಶಯವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
ಉತ್ತರ:- ಹಳ್ಳಿಗರು ಪ್ರಕೃತಿಯ ಕೂಸುಗಳಾಗಿದ್ದಾರೆ. ಆಧುನಿಕತೆಯ ಪ್ರಭಾವದಿಂದ ಹಳ್ಳಿಗರು ಪಟ್ಟಣಕ್ಕೆ ವಲಸೆ ಬರುತ್ತಿದ್ದಾರೆ. ನಾಗರಿಕತೆ ಬೆಳೆದಂತೆ ಪ್ರಕೃತಿ ಹಾಗೂ ಜಾನಪದ ಸಂಸ್ಕೃತಿಗಳು ಕಣ್ಮರೆಯಾಗುತ್ತಿವೆ. ಅವಿಭಕ್ತ ಕುಟುಂಬ ಒಡೆದು, ಹಿರಿಯರ ಅನುಭವ ಮಾರ್ಗದರ್ಶನಗಳು ಹಾಗೂ ಪ್ರೀತಿಗಳು ಇಂದಿನವರಿಗೆ ಇಲ್ಲವಾಗಿವೆ. ಪ್ರಸ್ತುತ ಕವನದಲ್ಲಿ ತಾಯಿಯೊಬ್ಬಳು ಪ್ರಕೃತಿಯನ್ನು ವರ್ಣಿಸುತ್ತಾ ತನ್ನ ಮಗು ಪ್ರಕೃತಿಗಿಂತಲೂ ಚೆಂದ ಎಂದು ಜೋಗುಳ ಹಾಡುತ್ತಾ ಜಗತ್ತನ್ನೇ ತೂಗುವ ಮಾತೃವಾತ್ಸಲ್ಯ ಪ್ರಸ್ತುತ 'ತೊಟ್ಟಿಲು ತುಗುವ ಹಾಡು' ಕವನದಲ್ಲಿ ವೈದೇಹಿಯವರು ತಾಯಿಯೊಬ್ಬಳು ಪ್ರಕೃತಿಯನ್ನು ವರ್ಣಿಸುತ್ತಾ, ತನ್ನ ಮಗು ಪ್ರಕೃತಿಗಿಂತಲೂ ಚೆಂದ ಎಂದು ಜೋಗುಳ ಹಡುತ್ತಾ ಜಗತ್ತನ್ನೇ ತೂಗುವ ಮಾತೃ ವಾತ್ಸಲ್ಯವನ್ನು ಸೊಗಸಾಗಿ ವರ್ಣಿಸಿದ್ದಾರೆ. ನೋಡಲು ಆಕಾಶವು ಚೆಂದ ಆಕಾಶದಿಂದ ಸುರಿವ ಮಳೆ, ಆ ಮಳೆಯಿಂದ ತೊಯ್ದ ಗುಡ್ಡ, ಬೆಟ್ಟಗಳು, ಗಿಡ ಮರಗಳಲ್ಲಿ ಅರಳುವ ಹೂವು, ಹಾಗೆಯೇ ಮೊಟ್ಟೆಯಿಂದ ಹೊರ ಬರುವ ಹಕ್ಕಿ ನೋಡಲು ಚೆಂದ, ಇವೆಲ್ಲಕ್ಕಿಂತ ತೊದಲು ನುಡಿಗಳನ್ನು ನುಡಿಯುವ, ತೊಟ್ಟಿಲಲ್ಲಿ ಮಲಗಿರುವ ನನ್ನ ಕಂದನೇ ಚೆಂದ ಎಂದು ತಾಯಿ ಹಾಡುತ್ತಾಳೆ, ಈ ಎಲ್ಲಾ ಅಂಶಗಳು ಪ್ರಕೃತಿಯ ದೃಶ್ಯಗಳಾಗಿವೆ

●    ಈ ಸಂದರ್ಭದೊಂದಿಗೆ ವಿವರಿಸಿರಿ,

1. ಎಲ್ಲಕ್ಕಿಂತ ನಮ್ಮ ಮನೆಯ ತೊಟ್ಟಿಲಿನ ತೊದಲು ಚಂದ
ಆಯ್ಕೆ:-
ಈ ವಾಕ್ಯವನ್ನು "ವೈದೇಹಿ" ಅವರು ಬರೆದಿರುವ'ಹೂವು  ಕಟ್ಟುವ ಹಾಡು ' ಎಂಬ ಕೃತಿಯಿಂದ ಆಯ್ದ"ತೊಟ್ಟಿಲು ತೂಗುವ ಹಾಡು" ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಕವಯಿತ್ರಿ ಹೇಳಿದ್ದಾರೆ.
ಸ್ವಾರಸ್ಯ:- ತಾಯಿಯೊಬ್ಬಳು ಪ್ರಕೃತಿಯನ್ನು ವರ್ಣಿಸುತ್ತಾ, ಪ್ರಕೃತಿಗಿಂತಲೂ ಜೋಲಿಯೊಳಗೆ ಲ ಲ ಲ ಎಂದು ನಗುವ ಹಸುಗೂಸು ಇನ್ನೂ ಚೆಂದ ಎಂದು ತಾಯಿ ತೊಟ್ಟಿಲಲ್ಲಿರುವ ತನ್ನ ಮುದ್ದು ಕಂದನನ್ನು ವರ್ಣಿಸುತ್ತಾಳೆ ಎಂದು ಕವಯಿತ್ರಿ ಹೇಳಿದ್ದಾರೆ.

2, ಮಗುವ ತೂಗಿರೋ ಆಹ ಜಗವ ತೋಗಿರೋ
ಆಯ್ಕೆ:- ಈ ವಾಕ್ಯವನ್ನು "ವೈದೇಹಿ" ಅವರು ಬರೆದಿರುವ 'ಹೂವು ಕಟ್ಟುವ ಹಾಡು ' ಎಂಬ ಕೃತಿಯಿಂದ ಆಯ್ದ"ತೊಟ್ಟಿಲು ತೂಗುವ ಹಾಡು" ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಕವಯಿತ್ರಿ ಹೇಳಿದ್ದಾರೆ
ಸ್ವಾರಸ್ಯ:- ತಾಯಿಯೊಬ್ಬಳು ಪ್ರಕೃತಿಯನ್ನು ವರ್ಣಿಸುತ್ತಾ, ತನ್ನ ಮಗು ಪ್ರಕೃತಿಗಿಂತಲೂ ಚೆಂದ ಎಂದು ಜೋಗುಳ ಹಾಡುತ್ತಾ ಜಗತ್ತನ್ನೇ ತೂಗುವ ಮಾತೃ ವಾತ್ಸಲ್ಯವನ್ನು ಸೊಗಸಾಗಿ ವರ್ಣಿಸುವ ಸಂದರ್ಭದಲ್ಲಿ ಈ ಮಾತು ಬಂದಿದೆ.

   ಭಾಷಾಭ್ಯಾಸ 

ಅ) 'ಅ' ಪಟ್ಟಿಯನ್ನು 'ಬ' ಪಟ್ಟಿಯೊಂದಿಗೆ ಹೊಂದಿಸಿ ಬರೆದಿದೆ.
'ಅ' ಪಟ್ಟಿ                   'ಬ' ಪಟ್ಟಿ

1)    ಹರಿವ                  ಅ) ಹೊಳೆ
2)  ಬೀಸುವ.               ಆ) ಗಾಳಿ
3) ತಿರುಗುವ.              ಇ)ಬುಗುರಿ
4) ಮಿನುಗುವ            ಈ) ತಾರೆ
5) ತೂಗುವ.               ಉ)ತೊಟ್ಟಿಲು
6) ಹಾಡುವ.              ಊ)ಲಾಲಿ
7) ತೇಲುವ                 ಋ) ದೋಣಿ

ಇ) ಕೆಳಗಿನ ಪದಗಳಿಗೆ ವಿವಿಧಾರ್ಥಗಳನ್ನು ಬರೆಯಿರಿ.
ಮುಗಿಲು - ಮೋಡ, ಆಕಾಶ
ಹೊಳೆ- ನದಿ, ಪ್ರಕಾಶಿಸು
ತಾರೆ- ನಕ್ಷತ್ರ, ನಟಿ
ಕರಿ- ಆನೆ, ಕಪ್ಪು
 
ಈ) 'ತೊಟ್ಟಿಲು ತೂಗುವ ಹಾಡು' ಕವಿತೆಯಲ್ಲಿ ಬಳಸಿರುವ ಅನುಕರಣಾವ್ಯಯ ಪದಗಳನ್ನು ಆರಿಸಿ ಬರೆಯಿರಿ.
ಉದಾ:- ಳು ಳು ಳು, ರು ರು ರು, ಲ ಲ ಲ, ಗರ್ರ ಗರ್ರ, ಪಿಳಿ ಪಿಳಿ, ಸ್ಸುಯ್ಯಿ.

You Might Like

Post a Comment

0 Comments