Recent Posts

ತ್ರ್ರಿವಿಧ ಜಿಗಿತ - 9ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

 

I . ಬಿಟ್ಟ ಸ್ಥಳಗಳನ್ನು ತುಂಬಿರಿ.

1. ತ್ರ್ರಿವಿಧ ಜಿಗಿತ ಎಂದರೆ ಮೂರು ವಿಧದ ಜಿಗಿತಗಳು.

2. ಜಿಗಿತದ ಗುಂಡಿಯ ಉದ್ದ 9-12 ಮೀ ಇರುತ್ತದೆ.

3. ತ್ರ್ರಿವಿಧ ಜಿಗಿತಕ್ಕೆ ಓಡುವ ಮಾರ್ಗವನ್ನು ಬಳಸಬೇಕು.

4. ಜಿಗಿಯುವಾಗ ಟೇಕ್ ಆಫ್ ಗೆರೆ ಯನ್ನು ತುಳಿಯಬಾರದು.

II. ಬಿಟ್ಟಿರುವ ಖಾಲಿ ಜಾಗದಲ್ಲಿ ನೀಡಿರುವ ಆಯ್ಕೆಗಳಲ್ಲಿ ಸೂಕ್ತ ಉತ್ತರವನ್ನು ಆಯ್ಕೆ ಮಾಡಿ ತುಂಬಿರಿ.

1. ತ್ರಿವಿಧ ಜಿಗಿತದಲ್ಲಿ ಹಾಪ್ ಎಂದರೆ ನೆಗೆಯುವುದು.

2. ಕರ್ನಾಟಕದ ತ್ರಿವಿಧ ಜಿಗಿತದ ಪುರುಷರ ದಾಖಲೆಯು ಸೈಟಿಸನ್ ಇವರದಾಗಿದೆ.

3. ರಾಜ್ಯದ ಕ್ರೀಡಾಪಟು ಹೆನ್ರಿ ರೆಬೆಲೊರವರ ರಾಷ್ಟ್ರೀಯ ದಾಖಲೆ 15.29 ಮೀ.

4. ರಾಷ್ಟ್ರೀಯ ಮಹಿಳಾ ತ್ರಿವಿಧ ಜಿಗಿತದ ದಾಖಲೆಗಾರ್ತಿ  ಮಯೂಕ ಜಾನಿ.

III. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1. ತ್ರ್ರಿವಿಧ ಜಿಗಿತದ ಓಡುವ ಮಾರ್ಗವು ಹೇಗಿರಬೇಕು ?
ಉತ್ತರ :- ಓಡುವ ಮಾರ್ಗವು ಗಟ್ಟಿಯಾಗಿದ್ದು ಜಿಗಿಯಲು ಸಮತಟ್ಟಾಗಿರಬೇಕು.

2. ತ್ರ್ರಿವಿಧ ಜಿಗಿತದ ಹಲಗೆಯ ಮೇಲೆ ಯಾವ ಬಣ್ಣ ಹಚ್ಚಿರಬೇಕು ?
ಉತ್ತರ :- ಬಿಳಿ ಬಣ್ಣವನ್ನು ಹಚ್ಚಿರಬೇಕು.

3. ತ್ರ್ರಿವಿಧ ಜಿಗಿತದ ಹಲಗೆಯು ಯಾವ ಆಕಾರದಲ್ಲಿರುತ್ತದೆ.
ಉತರ :- ಆಯತ ಆಕಾರ

4. ತ್ರ್ರಿವಿಧ ಜಿಗಿತದಲ್ಲಿ ಓಡುವ ಮಾರ್ಗದ ಅಗಲವೆಷ್ಟು ?
ಉತ್ತರ :- 1.22 ಮೀ

IV. ಈ ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.

1. ತ್ರ್ರಿವಿಧ ಜಿಗಿತದ ಯಾವುದಾದರೂ ಮೂರು ನಿಯಮಗಳನ್ನು ತಿಳಿಸಿ.
ಉತ್ತರ :-1. ತ್ರಿವಿಧ ಜಿಗಿತವು ತ್ರಿವಿಧ ಜಿಗಿತದ ಕ್ರಮದಲ್ಲಿಯೇ ಅಂದರೆ ಹಾಪ್, ಸ್ಟೆಪ್ ಮತ್ತು ಜಂಪ್ ರೀತಿಯಲ್ಲಿಯೇ ಇರಬೇಕು.
2. ತ್ರ್ರಿವಿಧ ಜಿಗಿತಕ್ಕೆ ಓಡುವ ಮಾರ್ಗವನ್ನು ಬಳಸಬೇಕು.
3. ಟೇಕ್ ಆಫ್ ಗೆರೆಯನ್ನು ತುಳಿಯಬಾರದು. ಓಡುವ ಹಾದಿಯ ಒಳಗಿರುವ ಟೇಕ್ ಆಫ್ ಹಲಗೆಯ ಮೇಲೆ ಕಾಲಿಟ್ಟು ಜಿಗಿಯಬೇಕು.  
4.ಮೊದಲ ಸುತ್ತಿನಲ್ಲಿ ಜಿಗಿತಗಾರರಿಗೆ ಮೂರು ಅವಕಾಶಗಳನ್ನು ನೀಡಿ ಅದರಲ್ಲಿ ಉತ್ತಮ ಸಾಧನೆ ಮಾಡಿದಂತಹ ಎಂಟು ಜಿಗಿತಗಾರರನ್ನು ಆಯ್ಕೆ ಮಾಡಿಕೊಂಡು ಅವರಿಗೆ ಮತ್ತೇ ಮೂರು ಅವಕಾಶಗಳನ್ನು ನೀಡಲಾಗುವುದು.

2. ತ್ರ್ರಿವಿಧ ಜಿಗಿತದ ಯಾವುದಾದರೂ ಮೂರು ಅಕ್ರಮಗಳನ್ನು ತಿಳಿಸಿ.
ಉತ್ತರ :-  1. ಜಿಗಿಯುವ ರೀತಿಯು ಕ್ರಮಬದ್ದವಾಗಿಲ್ಲದಿದ್ದರೆ ಆ ಜಿಗಿತವು ಅನರ್ಹಗೊಳ್ಳುತ್ತದೆ.
2. ಟೇಕ್ ಆಫ್ ಗೆರೆಯನ್ನು ತುಳಿಯಬಾರದು.
3. ಟೇಕ್ ಆಫ್ ಹಲಗೆಯ  ಅಕ್ಕಪಕ್ಕದಿಂದ ಜಿಗಿಯುವಂತಿಲ್ಲ.
4. ಜಿಗಿತದ ಗುಂಡಿಯಲ್ಲಿಯೇ ಜಿಗಿಯಬೇಕು.
5. ಜಿಗಿತದ ನಂತರ ಜಿಗಿತದ ಗುಂಡಿಯಲ್ಲಿ ಹಿಂದೆ ನಡೆದು ಬರಬಾರದು.

3. ತ್ರಿವಿಧ ಜಿಗಿತದ ಅಂಕಣ ರಚನೆ ಮಾಡಿ ಅಳತೆಗಳನ್ನು ಬರೆಯಿರಿ.
ಉತ್ರರ: 


You Might Like

Post a Comment

0 Comments