Recent Posts

ಯೋಗಾಸನ - 8ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

 

I.ಬಿಟ್ಟಸ್ಥಳಗಳನ್ನು ಸುಕ್ತ ಪದಗಳಿಂದ ತುಂಬಿರಿ.                    

1. 'ಪ್ರಾಣಾಯಾಮ' ಇದು ಅಷ್ಟಾಂಗ ಯೋಗದ 4 ನೇ ಅಂಗ.

2. ಸೃಷ್ಠಿಯ ಎಲ್ಲಾ ಚಲನವಲನಗಳಿಗೂ ಪ್ರಾಣಶಕ್ತಿಯೇ ಆಧಾರ.

3. ಯೋಗಾಸನದಿಂದ ದೈಹಿಕ ಮತ್ತು ಮಾನಸಿಕ ಸ್ಥರತೆ ಉಂಟಾಗುತ್ತದೆ.

4. ಆಮ್ಲಜನಕ ಯುಕ್ತ ವಾಯುವನ್ನು ಒಳಗೆ ತೆಗೆದುಕೊಳ್ಳುವುದಕ್ಕೆ 'ಪೂರಕ' ಎನ್ನುತ್ತೇವೆ.

II. ಈ ಕೆಳಕಂಡ ಪ್ರಶ್ನೆಗಳಿಗೆ ಒಂದು ಅಥವಾ ಎರಡು ವಾಕ್ಯಗಳಲ್ಲಿ ಉತ್ತರಿಸಿ.

1. ಪ್ರಾಣಾಯಾಮ ಅಭ್ಯಾಸಕ್ಕೆ ಸೂಕ್ತ ಸಮಯ ಯಾವುದು ?
ಉತ್ತರ :- ಪ್ರಾತ:ಕಾಲ ಅಥವಾ ಸಂಜೆಯ ಸಮಯ ಪ್ರಾಣಾಯಾಮ ಅಭ್ಯಾಸಕ್ಕೆ ಸೂಕ್ತ ಸಮಯವಾಗಿದೆ.

2. ಪ್ರಾಣಾಯಾಮ ಎಂದರೇನು ?
ಉತ್ತರ :-  ಪ್ರಾಣಾಯಾಮ ಎಂದರೆ ಪೂರಕ, ರೇಚಕ, ಕುಂಭಕಗಳ ಗಮನಪೂರ್ವಕ ಅಭ್ಯಾಸವಾಗಿದೆ. ಉಚ್ಛಾಸ, ನಿ:ಶ್ವಾಸ ಕ್ರಿಯೆಗಳನ್ನು ಸ್ಥಿರಾಸನದಲ್ಲಿ ಕುಳಿತು ಹದಗೊಳಿಸುವುದೇ 'ಪ್ರಾಣಾಯಾಮ' ಎಂದು ಪತಂಜಲಿ ಋಷಿಗಳು ತಮ್ಮ ಯೋಗಸೂತ್ರದಲ್ಲಿ ಹೇಳಿದ್ದಾರೆ.

3. ಯೋಗ ಮತ್ತು ವ್ಯಾಯಾಮದ ನಡುವಿನ ಒಂದು ವ್ಯತ್ಯಾಸವನ್ನು ಬರೆಯಿರಿ.
ಉತ್ತರ :-  ಯೋಗ ಮತ್ತು ವ್ಯಾಯಾಮದ ನಡುವಿನ ವ್ಯತ್ಯಾಸ :-
1. ಯೋಗಾಸನವನ್ನು ನಿರಾಯಾಸವಾಗಿ ಮಾಡುವುದಾಗಿದೆ ಆದರೆ ವ್ಯಾಯಾಮವನ್ನು ಪದೇ ಪದೇ ಪ್ರಯತ್ನಪೂರ್ವಕವಾಗಿ
   ಮಾಡಲಾಗುತ್ತದೆ.
2. ಯೋಗಾಸನದಲ್ಲಿ ಉಸಿರಾಟದ ಕ್ರಮಗಳಿಗೆ ಮಹತ್ವ ನೀಡಲಾಗಿದೆ ಆದರೆ ವ್ಯಾಯಾಮದಲ್ಲಿ ಉಸಿರಾಟದ ನಿಯಂತ್ರಣಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದಿಲ್ಲ.

III. ಈ ಕೆಳಕಂಡ ಪ್ರಶ್ನೆಗಳಿಗೆ ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.

1. ಪ್ರಾಣಾಯಾಮದ ಮಹತ್ವವನ್ನು ಸಂಕ್ಷಿಪ್ತವಾಗಿ ತಿಳಿಸಿರಿ.
ಉತ್ತರ :-  ಪ್ರಾಣಾಯಾಮದ ಮಹತ್ವ :-                  
1. ನರ,ಮೆದುಳು, ಬೆನ್ನುಹುರಿ, ಹೃದಯದ ಮಾಂಸ ಖಂಡಗಳು ದಕ್ಷವಾಗಿ ಕಾರ್ಯ ನಿರ್ವಹಿಸುವುದು ಶುದ್ದ ರಕ್ತದಿಂದ
ಅವುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಹರಿಸುವಲ್ಲಿ ಪ್ರಾಣಾಯಾಮ ಮಹತ್ವದ ಪಾತ್ರ ವಹಿಸುತ್ತದೆ.
2. ಪ್ರಾಣಾಯಾಮವು ನಾಡಿ ಶುದ್ದಿ ಮಾಡುವುದಲ್ಲದೇ ದೇಹದೊಳಗಿನ ಅಂಗಾಂಗಗಳ ಕಾರ್ಯಕ್ಷಮತೆಯನ್ನು ಕಾಪಾಡುವಲ್ಲಿ ಸಹಕಾರಿ, ತಲೆಸುತ್ತು ತರುವ ಕ್ಷೀರಾಮ್ಲವನ್ನು ಸಮತೂಕಕ್ಕೆ ತಂದು ದೇಹದ ಸ್ಥಿತಿಯನ್ನು ಸಮತೋಲನಕ್ಕೆ ತರುವುದು.
3. ಗ್ರಹಣಶಕ್ತಿ, ಪಚನಶಕ್ತಿ, ಜ್ಞಾಪಕಶಕ್ತಿಯು ಪ್ರಾಣಾಯಾಮದಿಂದ ವೃದ್ದಿಯಗುವುದು. ಮನಸ್ಸನ್ನು ದೇಹದ ಹಿಡಿತದಿಂದ ಬಿಡಿಸಿ ಬುದ್ದಿಯನ್ನು ಪ್ರಚೋದಿಸುವುದು.
4. ಪ್ರಾಣಾಯಾಮವನ್ನು ದಿನನಿತ್ಯ ಮಡುವುದರಿಂದ ಸಾಧಕನು ಶಾಂತ, ನಿರ್ಮಲಚಿತ್ತದವನಾಗಲು ಸಹಕಾರಿಯಾಗುತ್ತದೆ.  
5. ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕವನ್ನು ಪಡೆದುಕೊಂಡು ಇಂಗಾಲದ ಡೈ ಆಕ್ಸೈಡ್ನ್ನು ಹೊರಬಿಡುವ ಕ್ರಿಯೆಯನ್ನು ಪ್ರಾಣಾಯಾಮ ಮಾಡುತ್ತದೆ.
6. ತಾಳಬದ್ದ ಹಾಗೂ ಲಯಬದ್ದ ಉಸಿರಾಟದ ಕ್ರಿಯೆಯಿಂದ ಶರೀರ ಮತ್ತು ಮನಸ್ಸು ಚೈತನ್ಯಯುತವಾಗಿ ಮಾನಸಿಕ ಉದ್ವೇಗದಿಂದ ಮುಕ್ತಿ ಸಿಗುವುದು.

2. ಪ್ರಾಣಾಯಾಮ ಅಭ್ಯಾಸಕ್ಕೆ ಪೂರ್ವಸದ್ದತೆಯನ್ನು ಹೇಗೆ ಮಾಡಿಕೊಳ್ಳುವಿರಿ ?
ಉತ್ತರ :-  ಪ್ರಾಣಾಯಾಮಕ್ಕೆ ಪೂರ್ವಸದ್ದತೆ :-
        1. ಪ್ರಾತ:ಕಾಲ ಅಥವಾ ಸಂಜೆಯ ಸಮಯ ಪ್ರಾಣಾಯಾಮ ಮಾಡಲು ಯೋಗ್ಯವಾದದ್ದು.  
        2. ಸೂಕ್ತವಾದ ನೆಲಹಾಸಿನ ಮೇಲೆ ಪ್ರಾಣಾಯಾಮ ಮಾಡಬೇಕು.
        3. ಮಲ ಮೂತ್ರ ವಿಸರ್ಜನೆ ಮುಗಿಸಿರಬೇಕು.
        4. ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡುವುದು ಸೂಕ್ತ.
        5. ಊಟ ಹಾಗೂ ಉಪಾಹಾರ ಸೇವಿಸಿದ ಸುಮಾರು ಎರಡು ಗಂಟೆಯ ನಂತರ ಅಭ್ಯಾಸ ನಿರತರಾಗುವುದು ಒಳ್ಳೆಯದು.

3. ಪೂರಕ, ರೇಚಕ ಮತ್ತು ಕುಂಭಕ ಇವುಗಳ ಅರ್ಥ ಬರೆಯಿರಿ.
ಉತ್ತರ :-  ಪೂರಕ:- ಆಮ್ಲಜನಕಯುಕ್ತ ವಾಯುವನ್ನು ಒಳಗೆ ತೆಗೆದುಕೊಳ್ಳುವುದಕ್ಕೆ 'ಪೂರಕ' ಎನ್ನುತ್ತೇವೆ.
ರೇಚಕ :- ಇಂಗಾಲದ ಡೈ ಆಕ್ಸೈಡ್ಯುಕ್ತ  ವಾಯುವನ್ನು ಹೊರಹಾಕುವುದು.
ಕುಂಭಕ :- ಉಸಿರನ್ನು ತಡೆಹಿಡಿಯುವುದು. 

You Might Like

Post a Comment

0 Comments