I. ಬಿಟ್ಟ ಸ್ಥಳಗಳನ್ನು ಸೂಕ್ತಪದಗಳಿಂದ ತುಂಬಿರಿ.
1. 1886ರಲ್ಲಿ ಟೆಡ್ಡಿಂಗ್ಟನ್ ಕ್ರಿಕೇಟ್ ಸಂಘದ ನೇತೃತ್ವದಲ್ಲಿ ಬ್ರಿಟೀಷ್ ಹಾಕಿ ಸಂಘವನ್ನು ರಚಿಸಲಾಯಿತು.
2. 1928ರ ಓಲಿಂಪಿಕ್ಸ್ ಏಷ್ಯಾದ ಮೊದಲನೆಯ ಬಂಗಾರದ ಪದಕ ಹಾಕಿ ತಂಡಕ್ಕೆ ಲಭಿಸಿತು.
3. ಹಾಕಿ ಪಂದ್ಯದಲ್ಲಿ ಬಳಸುವ ಚೆಂಡಿನ ಬಣ್ಣ ಬಿಳಿ ಆಗಿರುತ್ತದೆ.
II. ಖಾಲಿ ಬಿಟ್ಟಿರುವ ಸ್ಥಳಗಳನ್ನು ನೀಡಿರುವ ಆಯ್ಕೆಗಳಲ್ಲಿ ಸರಿಯಾದುದನ್ನು ಆರಿಸಿ ಬರೆಯಿರಿ.
1. ಹೂಕೆಟ್ ಎನ್ನುವುದು ಫ್ರೆಂಚ್ ಭಾಷೆಯ ಪದದಿಂದ ಬಂದಿದೆ.
2. ಹಾಕಿ ಸ್ಟಿಕ್ನ ಗರಿಷ್ಟ ತೂಕ 737 ಗ್ರಾಂ ಆಗಿರುತ್ತದೆ.
3. ಹಾಕಿ ಆಟದಲ್ಲಿ ಆಟಗಾರರಿಗೆ ಎಚ್ಚರಿಕೆ ನೀಡಲು ಹಸಿರು ಕಾರ್ಡ್ ಬಳಸುತ್ತಾರೆ.
III. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
1. ಅಪಾಯಕಾರಿ ಆಟವೆಂದರೇನು ?
ಉತ್ತರ :- ಚೆಂಡನ್ನು ಹೊಡೆಯುವಾಗ ಅಪಾಯಕಾರಿಯಾಗಿ ಚೆಂಡನ್ನು ಹಾರಿಸಿದರೆ ಅಥವಾ ಎದುರಾಳಿಗಳು 5 ಮೀ ಗಿಂತ ಹತ್ತರಿ ಇದ್ದಾಗ ಚೆಂಡನ್ನು ಪುಟಿಸುವುದು ಅಥವಾ ಹಾರಿಸುವುದನ್ನು ಅಪಾಯಕಾರಿ ಆಟ ಎನ್ನುವರು.
2. ಭಾರತದಲ್ಲಿ ಪ್ರಪ್ರಥಮ ಹಾಕಿ ಸಂಸ್ಥೆಯು ಎಲ್ಲಿ ಸ್ಥಾಪನೆಯಾಯಿತು ?
ಉತ್ತರ :- ಭಾರತದಲ್ಲಿ ಪ್ರಪ್ರಥಮ ಹಾಕಿ ಸಂಸ್ಥೆಯು ಕೋಲ್ಕತ್ತಾದಲ್ಲಿ ಸ್ಥಾಪನೆಯಾಯಿತು.
3. ಹಾಕಿ ಪಂದ್ಯಾವಳಿಯ ಕಾಲಾವಧಿಯನ್ನು ತಿಳಿಸಿ.
ಉತ್ತರ : ಹಾಕಿ ಪಂದ್ಯಾವಳಿಯ ಕಾಲಾವಧಿಯು 35+10+35 ಒಟ್ಟು 80 ನಿಮಿಷಗಳು ಆಗಿರುತ್ತದೆ.
4. ಹಾಕಿ ಸ್ಟಿಕ್ನ ಅಳತೆಯನ್ನು ಬರೆಯಿರಿ.
ಉತ್ತರ :- ಹಾಕಿ ಸ್ಟಿಕ್ 36 ರಿಂದ 39 ಇಂಚು ಉದ್ದ ಇರುತ್ತದೆ ಅದರ ತುದಿಯು ಡೊಂಕಾಗಿದ್ದು, ತೂಕ 737 ಗ್ರಾಂ ತನಕ ಇರಬಹುದು.
IV. ಈ ಕೆಳಕಂಡ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
1. ಹಾಕಿ ಆಟದ ಅಂಕಣವನ್ನು ವಿವರಿಸಿ.
ಉತ್ತರ :- ಹಾಕಿ ಆಟವನ್ನು ಮಣ್ಣು ಅಥವಾ ಹುಲ್ಲಿನ ಅಂಕಣದಲ್ಲಿ ಆಡುತ್ತಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಕಿ ಪಂದ್ಯಗಳನ್ನು 'ಅಸ್ಟ್ರೋಟರ್ಫ್' ಅಥವಾ 'ಪಾಲಿಗ್ರಾಸ್' ಎನ್ನುವ ಕೃತಕ ಹುಲ್ಲಿನ ಅಂಕಣದಲ್ಲಿ ಆಡಲಾಗುವುದು. ಈ ಅಂಕಣವು 91.40 ಮೀ ಉದ್ದ ಮತ್ತು 55 ಮೀ ಅಗಲವಿರುವ ಆಯತಾಕಾರದಲ್ಲಿರುತ್ತದೆ. ಇದರ ಎರಡೂ ದಿಕ್ಕಿನಲ್ಲಿ ಒಂದೊಂದು ಗೋಲ್ಪೋಸ್ಟ್ ಇರುತ್ತದೆ. ಇದರ ಮುಂಭಾಗದಲ್ಲಿ ಅರ್ಧ ವೃತ್ತಾಕಾರದ ಗೋಲ್ ಹೊಡೆಯುವ 'ಡಿ' ಕ್ಷೇತ್ರ ಇರುತ್ತದೆ. ಹಾಗೂ ಪ್ರತಿಯೊಂದು ಗೋಲಿನ ಮಧ್ಯದಿಂದ 6.40 ಮೀ ಮುಂದೆ ಪೆನಾಲ್ಟಿ ಚುಕ್ಕಿಯನ್ನು ಗುರುತಿಸಿರುತ್ತಾರೆ.
2. ಗೋಲು ಕೀಪರ್ನ ರಕ್ಷಣೆಗೆ ಅಗತ್ಯವಿರುವ ಸಲಕರಣೆಗಳನ್ನು ಪಟ್ಟಿ ಮಾಡಿ.
ಉತ್ತರ :- ಗೋಲು ಕೀಪರ್ನ ರಕ್ಷಣೆಗೆ ಅಗತ್ಯವಿರುವ ಸಲಕರಣೆಗಳು : ತಲೆಯ ರಕ್ಷಣೆಗೆ ಶಿರಸ್ತ್ರಾಣ, ಕಾಲುಗಳಿಗೆ ರಕ್ಷಣಾ ಕವಚ ಹಾಗೂ ಚೆಂಡನ್ನು ಒದೆಯಲು ಕಿಕ್ಕರ್ಸ್, ಎದೆ ಕವಚ, ಕೈ ಕವಚ, ತೊಡೆಸಂದಿ ಕವಚ, ತೋಳು ಕವಚ ಮುಂತಾದವುಗಳನ್ನು ಧರಿಸಬೇಕಾಗುತ್ತದೆ. ಹಾಗೂ ಹಾಕಿ ಸ್ಟಿಕ್ನ್ನು ಹೊಂದಿರಬೇಕಾಗುತ್ತದೆ.
3. ಹಾಕಿ ಆಟದಲ್ಲಿ ಕಾರ್ಡುಗಳನ್ನು ಯಾವ ಸಂದರ್ಭಗಳಲ್ಲಿ ಬಳಸುತ್ತಾರೆ.
ಉತ್ತರ :- ಹಾಕಿ ಪಂದ್ಯದಲ್ಲಿ ಮೂರು ಬಣ್ಣದ ಕಾರ್ಡುಗಳನ್ನು ವಿವಿಧ ಸಂದರ್ಭಗಳಲ್ಲಿ ಬಳಸಿ ಆಟಗಾರರಿಗೆ ದಂಡಗಳನ್ನು ವಿಧಿಸಲಾಗುತ್ತದೆ.
1. ಹಸಿರು ಕಾರ್ಡು :- ಆಟಗಾರರಿಗೆ ಎಚ್ಚರಿಕೆ ನೀಡಲು ಬಳಸುತ್ತಾರೆ.
2. ಹಳದಿ ಕಾರ್ಡು :- ಆಟಗಾರರಿಗೆ 5 ನಿಮಿಷ ತಾತ್ಕಾಲಿಕವಾಗಿ ಅಂಕಣದಿಂದ ಹೊರಗೆ ಉಚ್ಛಾಟಿಸುವಂತೆ ಶಿಕ್ಷೆ ವಿಧಿಸಲು ಬಳಸುತ್ತಾರೆ. 3. ಕೆಂಪು ಕಾರ್ಡು :- ಆಟಗಾರರನ್ನು ಬದಲಾವಣೆ ರಹಿತ ಪಂದ್ಯಾಟದಿಂದ ಉಚ್ಛಾಟಿಸಲು ಬಳಸುತ್ತಾರೆ.
4. ಹಾಕಿ ಆಟದಲ್ಲಿ ಪೆನಾಲ್ಟಿ ಸ್ಟೋಕ್ ಹಾಗೂ ಪೆನಾಲ್ಟಿ ಕಾರ್ನರ್ಗೆ ಇರುವ ವ್ಯತ್ಯಾಸ ತಿಳಿಸಿ.
ಉತ್ತರ :- 1. ಪೆನಾಲ್ಟಿ ಕಾರ್ನರ್ :- ತಮ್ಮ 'ಡಿ' ವಲಯದಲ್ಲಿ ತಂಡ ತಪ್ಪು ಮಾಡಿದರೆ ಎದುರಾಳಿಗೆ ಪೆನಾಲ್ಟಿ ಕಾರ್ನರ್ ನೀಡಲಾಗುವುದು. 2. ಪೆನಾಲ್ಟಿ ಸ್ಟೋಕ್ :- ತಮ್ಮ 'ಡಿ' ವಲಯದಲ್ಲಿ ಚೆಂಡು ಗೋಲ್ ಪ್ರವೇಶಿಸುವ ಸಂದರ್ಭದಲ್ಲಿ ತಪ್ಪು ಮಾಡಿದರೆ. ಎದುರಾಳಿ ತಂಡಕ್ಕೆ 'ಪೆನಾಲ್ಟಿ ಸ್ಟೋಕ್' ನೀಡಲಾಗುವುದು
5. ಹಾಕಿಯಲ್ಲಿ ಗೋಲ್ ಗಳಿಸುವ ವಿಧಾನವನ್ನು ಬರೆಯಿರಿ.
ಉತ್ತರ :- ದಾಳಿಗಾರರು ರಕ್ಷಕರ 'ಡಿ' ಒಲಯದ ಒಳಗಿನಿಂದ ಗೋಲ್ ಒಳಗೆ ಚೆಂಡನ್ನು ಹಾಕಿದರೆ, ಅವರ ತಂಡಕ್ಕೆ ಒಂದು ಗೋಲ್ ಎಂದು ಪರಿಗಣಿಸಲಾಗುವುದು. ಮತ್ತು ಯಾವುದೇ ಹೊಡೆತವನ್ನು ಎದುರಾಳಿ ತಂಡದವರು 'ಡಿ' ಕ್ಷೇತ್ರದ ಹೊರಭಾಗದಿಂದ ಗೋಲ್ಗೆ ಹೊಡೆದಾಗ ಚೆಂಡು ಗೋಲ್ ಒಳಗೆ ಪ್ರವೇಶ ಮಾಡಿದಲ್ಲಿ ಅದನ್ನು ಗೋಲ್ ಎಂದು ಪರಿಗಣಿಸುವುದಿಲ್ಲ.
0 Comments