Recent Posts

ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ - 8ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

I. ಈ ಕೆಳಕಂಡ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ರಿಸಿ.

1. ರಾಷ್ಟ್ರಗೀತೆಯನ್ನು ರಚಿಸಿದವರು ಯಾರು ?
ಉತ್ತರ :- ರವೀಂದ್ರನಾಥ ಠಾಗೂರರು ರಾಷ್ಟ್ರಗೀತೆಯನ್ನು ರಚಿಸಿದರು.

2. ರಾಷ್ಟ್ರಗೀತೆಯು ಯಾವ ಭಾಷೆಯಲ್ಲಿ ರಚಿತವಾಗಿದೆ. ?
ಉತ್ತರ :- ಬಂಗಾಳಿ ಭಾಷೆಯಲ್ಲಿ ರಾಷ್ಟ್ರಗೀತೆಯು ರಚಿತವಾಗಿದೆ.

3. ರಾಷ್ಟ್ರಗೀತೆಯನ್ನು ಎಷ್ಟು ಸಮಯದಲ್ಲಿ ಹಾಡಿ ಮುಗಿಸಬೇಕು ?
ಉತ್ತರ :- 48 ರಿಂದ  52 ಸೆಕೆಂಡುಗಳ ಒಳಗೆ ಹಾಡಿ ಮುಗಿಸಬೇಕು.

4. ಪೌರತ್ವವೆಂದರೇನು ?
ಉತ್ತರ :- ಸರ್ಕಾರದ ಜೊತೆ ಸಂಬಂಧ ಇಟ್ಟುಕೊಳ್ಳಲು ಮತ್ತು ಆ ದೇಶದ ಸದಸ್ಯರೆಂದು ಗುರುತಿಸಿಕೊಳ್ಳಲು ನಮಗೆ ಇರುವ ವ್ಯವಸ್ಥೆಯೇ ಪೌರತ್ವವಾಗಿದೆ.

5. ಹಕ್ಕುಗಳು ಎಂದರೇನು ?
ಉತ್ತರ :- ನಾಗರಿಕರಿಗೆ ಕೊಡಲ್ಪಟ್ಟ ಸವಲತ್ತುಗಳೇ ಹಕ್ಕುಗಳು.

6. ನಮ್ಮ ರಾಷ್ಟ್ರಧ್ವಜವು ಎಷ್ಟು ಬಣ್ಣಗಳನ್ನು ಹೊಂದಿದೆ ?
ಉತ್ತರ :- 3 ಬಣ್ಣಗಳನ್ನು ಹೊಂದಿದೆ.

II. ಈ ಕೆಳಕಂಡ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

1. ನಮ್ಮ ರಾಷ್ಟ್ರ ಧ್ವಜದ ಸಂಕ್ಷೀಪ್ತ ಇತಿಹಾಸ ತಿಳಿಸಿ.
ಉತ್ತರ :- 1857 ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಭಾರತೀಯರಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆಯ ಬೆಳವಣಿಗೆಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರೋತ್ಸಾಹಿಸಿತು. ನಂತರದ ದಿನಗಳಲ್ಲಿ ರಾಷ್ಟ್ರಪ್ರೇಮ ಮೆರೆಯುವ ಪ್ರತೀಕವಾಗಿ ರಾಷ್ಟ್ರಧ್ವಜ ತಯಾರಿಕೆಯ ಪ್ರಕ್ರಿಯೆ  ಆರಂಭಗೊಂಡಿತು. ಭರತದ ಪ್ರಥಮ ರಾಷ್ಟ್ರಧ್ವಜವನ್ನು ಆಗಸ್ಟ್ 7, 1906 ರಲ್ಲಿಆರೋಹನಗೊಳಿಸಲಾಯಿತು  ನಂತರ 1907 ರಲ್ಲಿ, 1921ರಲ್ಲಿ, 1931ರಲ್ಲಿ  ಹೀಗೆ ವಿವಿಧ ರಾಷ್ಟ್ರಧ್ವಜಗಳನ್ನು ತಯಾರಿಸಿ ಆರೋಹನಗೊಳಿಸಲಾಯಿತು ನಂತರ ಅಚಿತಿಮವಾಗಿಕೇಸರಿ, ಬಿಳಿ, ಹಸಿರು ಬಣ್ಣಗಳಿರುವ ಪಟ್ಟಿಗಳೊಂದಿಗೆ ಮಧ್ಯದಲ್ಲಿ ಅಶೋಕ ಚಕ್ರವನ್ನು ಹೊಂದಿರುವ ತ್ರಿವರ್ಣಧ್ವಜವನ್ನು ಸಂವಿಧಾನ ಸಮಿತಿಯು ಜುಲೈ 22 1947ರಂದು ಸ್ವತಂತ್ರ ಭಾರತದ ರಾಷ್ಟ್ರ ಧ್ವಜವೆಂದು ಅಂಗೀಕರಿಸಿತು.  

2. ಭಾರತದಲ್ಲಿ ಪೌರತ್ವವನ್ನು ಪಡೆಯುವ ಬಗೆ ಹೇಗೆ ?
ಉತ್ತರ :-  1955 ರ ಪೌರತ್ವ ಅಧಿನಿಯಮದ ಪ್ರಕಾರ ಭಾರತದ ಪೌರತ್ವವನ್ನು ಐದು ವಿಧಾನಗಳಿಂದ ಗಳಿಸಬಹುದಾಗಿದೆ. ಅವುಗಳೆಂದರೆ :-  
1. ಜನನದ ಮೂಲಕ :-  ಭಾರತದಲ್ಲಿ 26ನೇ ಜನವರಿ 1950 ರಿಂದ ಜನ್ಮ ಪಡೆದಿರುವ ಪ್ರತಿಯೊಬ್ಬ ವ್ಯಕ್ತಿಯು ಜನ್ಮದತ್ತವಾಗಿ ಭಾರತೀಯ ಪೌರನಾಗುತ್ತಾನೆ. 1950 ಜನವರಿ 26 ಕ್ಕೆ ಮೊದಲು ಜನಿಸಿದವರಿಗೆ (ಹಾಗೂ ಭಾರತದಲ್ಲಿ ನೆಲೆಸಿದವರಿಗೆ) ಪೌರತ್ವವನ್ನು ನೀಡಲಾಗಿದೆ.          
2. ರಕ್ತ ಸಂಬಂಧದ/ ಅನುವಂಶಿಕ ಪೌರತ್ವ :- ಭಾರತೀಯ ಪೌರತ್ವ ಹೊಂದಿರುವ ದಂಪತಿಗಳಿಗೆ 26ನೇ ಜನವರಿ 1950 ರಂದು  ಅಥವಾ ಆನಂತರ ವಿದೇಶದಲ್ಲಿ ಅವರಿಗೆ ಹುಟ್ಟಿದ ಶಿಶು, ಭಾರತದ ಪೌರತ್ವವನ್ನು ಗಳಿಸಿಕೊಳ್ಳಬಹುದು.                 
3. ನೋಂದಾವಣೆಯ ಮೂಲಕ ಪೌರತ್ವ :-  ಕೆಲವು ವರ್ಗದ ವ್ಯಕ್ತಿಗಳು ತಮ್ಮ ಬಗ್ಗೆ ನೋಂದಾಯಿಸುವುದರ ಮೂಲಕ ಭಾರತೀಯ ಪೌರತ್ವ ಗಳಿಸುವ ಅವಕಾಶವನ್ನು ಕಾನೂನಿನಲ್ಲಿ ಕಲ್ಪಿಸಿದೆ. ಈ ರೀತಿಯ ಸೌಲಭ್ಯ ಪಡೆಯುವವರು ನಿರ್ದಿಷ್ಟ     ದಾಖಲೆಗಳೊಂದಿಗೆ ರಾಷ್ಟ್ರಪತಿಗಳಿಗೆ ಪೌರತ್ವ ಕೋರಿ ಅರ್ಜಿ ಸಲ್ಲಿಸಬಹುದು.                         
4. ಸಹಜೀಕೃತ ವಿಧಾನದ ಮೂಲಕ :- ಭಾರತೀಯ ಪೌರರನ್ನು ವಿವಾಹವಾದ ವ್ಯಕ್ತಿಗಳು ಕೋರಿಕೆ ಸಲ್ಲಿಸಿ ಪೌರತ್ವ ಪಡೆಯಬಹುದು. ಈ ರೀತಿ ಪರ ದೇಶದ ಪೌರರೂ ಸಹ ಭಾರತೀಯ ಪೌರತ್ವ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ.         
5. ಪ್ರದೇಶ ಸೇರ್ಪಡೆಯ ಮೂಲಕ :- ಯಾವುದಾದರೂ ಹೊಸ ಪ್ರದೇಶವು ಭಾರತಕ್ಕೆ ಸೇರ್ಪಡೆಗೊಂಡಾಗ ಆ ಪ್ರದೇಶದ     
ಜನರು ??ರತದ ಪೌರತ್ವ ಪಡೆಯುವರು.

3. ಮೂಲಭೂತ ಹಕ್ಕುಗಳು ಯಾವುವು ?
ಉತ್ತರ :- ಮೂಲಭೂತ ಹಕ್ಕುಗಳು :-                                         

1. ಸಮಾನತೆಯ ಹಕ್ಕು.                               2.ಸ್ವಾತಂತ್ರ್ಯದ ಹಕ್ಕು                            

3. ಶೋಷಣೆಯ ವಿರುದ್ಧದ ಹಕ್ಕು                4. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು                         

5. ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು         6. ಸಂವಿಧಾನಬದ್ದ ಪರಿಹಾರದ ಹಕ್ಕು.
 

You Might Like

Post a Comment

0 Comments