1. 2006 ರಲ್ಲಿ ಕೊಪ್ಪಾದಲ್ಲಿ ನಡೆದ ರಾಷ್ಟ್ರ ಮಟ್ಟದ ಕಿರಿಯರ ವಾಲಿಬಾಲ್ ಚಾಂಪಿಯನ್ಶಿಪ್ ನಲ್ಲಿ ಕರ್ನಾಟಕದ ಬಾಲಕರು ಪ್ರಥಮ ಸ್ಥಾನ ಪಡೆದಿರುತ್ತಾರೆ.
2. 2003 ರಲ್ಲಿ ಪೆಡವಲಪುಡಿಯಲ್ಲಿ ನಡೆದ ರಾಷ್ಟ್ರಮಟ್ಟದ ಕಿರಿಯರ ವಾಲಿಬಾಲ್ ಚಾಂಪಿಯನ್ಶಿಪ್ಕರ್ನಾಟಕದ ಬಾಲಕಿಯರು ದ್ವಿತೀಯ ಸ್ಥಾನ ಪಡೆದಿರುತ್ತಾರೆ.
3. 2000 ರಲ್ಲಿ ಹೈದರಾಬಾದ್ನಲ್ಲಿ ನಡೆದ ರಾಷ್ಟ್ರ ಮಟ್ಟದ ಸಬ್ ಜೂನಿಯರ್ ಬಾಲಕರ ಪಂದ್ಯಾಟದಲ್ಲಿ ಕರ್ನಾಟಕದ ಬಾಲಕರು ಪ್ರಥಮ ಸ್ಥಾನ ಪಡೆದಿರುತ್ತಾರೆ.
4. 2002 ರ ಏಷ್ಯನ್ ಕಿರಿಯರ ವಾಲಿಬಾಲ್ ಚಾಂಪಿಯನ್ಶಿಪ್ ನಲ್ಲಿ ಭಾರತದ ಬಾಲಕರು ದ್ವಿತೀಯ ಸ್ಥಾನ ಪಡೆದಿರುತ್ತಾರೆ.
II. ಪ್ರ.ಸಂ 2. ಖಾಲಿ ಬಿಟ್ಟಿರುವ ಸ್ಥಳಗಳಲ್ಲಿ ಸೂಕ್ತ ಉತ್ತರವನ್ನು ಆಯ್ಕೆ ಮಾಡಿ ಬರೆಯಿರಿ.
1. 2011 ರ ರಾಷ್ಟ್ರ ಮಟ್ಟದ ಕಿರಿಯರ ವಾಲಿಬಾಲ್ ಚಾಂಪಿಯನ್ಶಿಪ್ ಬಿಜಾಪೂರ ದಲ್ಲಿ ನಡೆಯಿತು.
2. 2004 ರ ರಾಷ್ಟ್ರೀಯ ಸಬ್ ಜೂನಿಯರ್ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಕರ್ನಾಟಕವು ದ್ವಿತೀಯ ಸ್ಥಾನ ಗಳಿಸಿತು.
3. 1986 ರಲ್ಲಿ ಕೋರಿಯಾದ ಸಿಯೋಲ್ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಪುರುಷರ ತಂಡವು ಕಂಚಿನ ಪದಕ ಪಡೆದಿರುತ್ತದೆ.
4. 19 ವರ್ಷ ವಯೋಮಿತಿಯ ವಿಶ್ವ ಕಿರಿಯರ ವಾಲಿಬಾಲ್ ಚಾಂಪಿಯನ್ ಶಿಪ್ನಲ್ಲಿ ಭಾರತದ ಬಾಲಕರ ತಂಡವು 2003 ರಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತದೆ.
III. ಪ್ರ.ಸಂ 3. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
1. ವಾಲಿಬಾಲ್ ನಲ್ಲಿ ಸರ್ವಿಸ್ ಮಡುವಾಗ ಅನುಸರಿಸಬಹುದಾದ ಯಾವುದಾದರೂ ಎರಡು ತಂತ್ರಗಾರಿಕೆಯನ್ನು ತಿಳಿಸಿ.
ಉತ್ತರ :- ಸರ್ವೀಸ್ ಮಾಡುವಾಗ ಎದುರಾಳಿಯ ಸಾಮಥ್ರ್ಯ ಮತ್ತು ದುರ್ಬಲತೆಯನ್ನು ಗುರುತಿಸಿ
ತಂತ್ರಗಾರಿಕೆಯನ್ನು ರಚಿಸಬೇಕು.
1. ಸರ್ವೀಸ್ನ್ನು ರಭಸವಾಗಿ, ದುರ್ಬಲ ರಕ್ಷಣಾ ಸಾಮಥ್ರ್ಯ ಹೊಂದಿದ,ಪ್ರಥಮ ಪಾಸ್ ಸರಿಯಾಗಿ
ನೀಡಲು ಅಸಮರ್ಥನಾದ, ಪಾಸರನ ಸ್ಥಳ ಬದಲಾವನೆಯನ್ನು ಗುರುತಿಸಿ,ನೆಟ್ಟಿನ ಮೇಲ್ಭಾಗಕ್ಕೆ ತಗುಲದೆ
ಎದುರಾಳಿ ಅಂಕಣದಲ್ಲಿ ಬೀಳುವಂತೆ ಮಾಡಬೇಕು.
2. ಎದುರಾಳಿ ಆಟಗಾರನು ಇಲ್ಲದ ಖಾಲಿ ಸ್ಥಳವನ್ನು ಗುರುತಿಸಿ ಸರ್ವೀಸ್ ಮಾಡಬೇಕು.
2. ವಾಲಿಬಾಲ್ ಆಟದಲ್ಲಿ ಸ್ಮ್ಯಾಶ್ ಮಾಡುವುದು ಹೇಗೆ? ವಿವರಿಸಿ.
ಉತ್ತರ :-1. ಎದುರಾಳಿ ಆಟಗಾರರ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಡಿಮೆ ಎತ್ತರ ತಲುಪುವ ಬ್ಲಾಕರನ
ಮೇಲ್ಗಡೆಯಿಂದ ಹೊಡೆಯಬೇಕು. ಎದುರಾಳಿ ತಂಡದ ದುರ್ಬಲ ಎತ್ತುಗಾರನನ್ನು ಅಥವಾ ಖಾಲಿ
ಸ್ಥಳವನ್ನು ಗುರುತಿಸಿ ಹೊಡೆಯಬೇಕು.
2. ಅಗತ್ಯಾನುಸಾರ ಹೊಡೆತದ ರಭಸದಲ್ಲಿ (ವೇಗ) ಹೆಚ್ಚು-ಕಡಿಮೆ ಮಾಡಬೇಕು.ಹಾಗೂ ಹೊಡೆತದ ವೈವಿದ್ಯತೆಯನ್ನು ಉಪಯೋಗಿಸಬೇಕು.
3. ಹೆಚ್ಚಿನ ಎತ್ತರ ತಲುಪುವ ಬ್ಲಾಕರ್ಗಳಿದ್ದರೆ ಸ್ಪರ್ಶ-ಹೊಡೆತ ಅಥವಾ ಪ್ಲೇಸಿಂಗ್ ಮೂಲಕ ಅಂಕ ಗಳಿಸಬೇಕು.
3. 2009 ರ ರಾಷ್ಟ್ರ ಮಟ್ಟದ ಕಿರಿಯರ ವಾಲಿಬಾಲ್ ಚಾಂಪಿಯನ್ಶಿಪ್ ಎಲ್ಲಿ ನಡೆಯಿತು ?
ಉತ್ತರ :- ಕರ್ನಾಟಕದ ಮಂಡ್ಯದಲ್ಲಿ
4. 2004 ರ ರಾಷ್ಟ್ರ ಮಟ್ಟದ ಕಿರಿಯರ ವಾಲಿಬಾಲ್ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕದ ಬಾಲಕಿಯರು ಯಾವ ಸ್ಥಾನ ಪಡೆದಿದ್ದಾರೆ ?
ಉತ್ತರ :- ಪ್ರಥಮ ಸ್ಥಾನ
5. ಉತ್ತಮ ತರಬೇತುದಾರರಿಗೆ ನೀಡುವ ಪ್ರಶಸ್ತಿ ಯಾವುದು ?
ಉತ್ತರ :-ದ್ರೋಣಾಚಾರ್ಯ ಪ್ರಶಸ್ತಿ
6. ಏಷಿಯನ್ ಕ್ರೀಡಾಕೂಟದ ಭಾರತದ ಪುರುಷರ ವಾಲಿಬಾಲ್ ತಂಡದ ಸಾಧನೆಯನ್ನು ತಿಳಿಸಿ.
ಉತ್ತರ:-
7. ಯಾವುದಾದರು ಮೂರು ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ಶಿಪ್ಗಳನ್ನು ಹೆಸರಿಸಿ.
ಉತ್ತರ :- 1. ರಾಷ್ಟ್ರೀಯ ಸೂಪರ್ಲೀಗ್ ಪಂದ್ಯಾವಳಿ.
2.ರಾಷ್ಟ್ರಮಟ್ಟದ ಕಿರಿಯರ ವಾಲಿಬಾಲ್ ಚಾಂಪಿಯನ್ಶಿಪ್.
3. ರಾಷ್ಟ್ರಮಟ್ಟದಮಿನಿ ವಾಲಿಬಾಲ್ ಚಾಂಪಿಯನ್ಶಿಪ್.
4. ರಾಷ್ಟ್ರ ಮಟ್ಟದ ಸಬ್ ಜೂನಿಯರ್ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾವಳಿ.
5. ವಾಲಿಬಾಲ್ ವಿಶ್ವಕಪ್ ಇತ್ಯಾದಿ.
0 Comments