Recent Posts

ಬ್ಯಾಡ್ಮಿಂಟನ್ - 8ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

I. ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.                                    

1. ರ್ಯಾಕೇಟ್ನ ಗರಿಷ್ಠ ತೂಕ 100 ಗ್ರಾಂ ಇರುತ್ತದೆ.                               

2. ಬ್ಯಾಡ್ಮಿಂಟನ್ ಆಟದಲ್ಲಿ ಬಳಸುವ ಕಂಬಗಳ ಎತ್ತರ 1.55 ಮೀ ಇರುತ್ತದೆ.                       

3.1899 ರಲ್ಲಿ ಆಲ್ ಇಂಗ್ಲಂಡ್ ಚಾಂಪಿಯನ್ಷಿಪ್ ಪ್ರಾರಂಭಗೊಂಡಿತು.                           

4.  ಒಂದು ಆಟದಲ್ಲಿ 21 ಅಂಕಗಳಿರುತ್ತವೆ.

II. ಈ ಕೆಳಕಂಡ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.                                

1. ಬ್ಯಾಡ್ಮಿಂಟನ್ ಎಂಬ ಹೆಸರು ಹೇಗೆ ಬಂದಿತು ?    
ಉತ್ತರ :- 'ಡ್ಯೂಕ್'ನ ಮನೆಯಾದ 'ಬ್ಯಾಡ್ಮಿಂಟನ್ ಹೌಸ್'ನಲ್ಲಿ ಈ ಆಟ ಮೊದಲಿಗೆ ಆಡಿದ್ದರಿಂದ ಇದಕ್ಕೆ  ಬ್ಯಾಡ್ಮಿಂಟನ್ ಎಂದು ಹೆಸರು         ಬಂದಿತು.                                                 

2. ಶಟಲ್ನಲ್ಲಿ ಒಟ್ಟು ಎಷ್ಟು ಗರಿಗಳಿರುತ್ತವೆ ?
ಉತ್ತರ :- ಶಟಲ್ನಲ್ಲಿ ಒಟ್ಟು 16 ಗರಿಗಳಿರುತ್ತವೆ.                                     

3. ಆಟಗಾರನ ಅಂಕಗಳು ಸಮವಿದ್ದಾಗ ಯಾವ ಅಂಕಣದಿಂದ ಸರ್ವಿಸ್ ಮಾಡಲಾಗುತ್ತದೆ. ?
ಉತ್ತರ :- ಅಂಕಣದ ಬಲಬದಿಯಿಂದ  ಸರ್ವಿಸ್ ಮಾಡಲಾಗುತ್ತದೆ.                            

4. ಬ್ಯಾಡ್ಮಿಂಟನ್ನಲ್ಲಿ ಉಪಯೋಗಿಸುವ ಎರಡು ಉಪಕರಣಗಳನ್ನು ಹೆಸರಿಸಿ.
ಉತ್ತರ :- ಶಟಲ್ ಕಾಕ್, ರ್ಯಾಕೇಟ್,ಜಾಳಿಗೆ ಕಂಬಗಳು ಇತ್ಯಾದಿ.

III. ಈ ಕೆಳಕಂಡ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿ.                     

1. ಬ್ಯಾಡ್ಮಿಂಟನ್ ಆಟದ ಇತಿಹಾಸವನ್ನು ಸಂಕ್ಷೀಪ್ತವಾಗಿ ವಿವರಿಸಿ.
ಉತ್ತರ :-  1873ರಲ್ಲಿ ಇಂಗ್ಲೆಂಡಿನ ಗೌಸೆಸ್ಟರ್ ಪಿರಿಯಲ್ಲಿ ಬೋಪೋರ್ಟ್ ಡ್ಯೂಕ್ನ ಮನೆಯಲ್ಲಿ ಸಂತೋಷಕೂಟವನ್ನು ಏರ್ಪಡಿಸಲಾಗಿತ್ತು.ಅಲ್ಲಿಗೆ ಆಗಮಿಸಿದ ಅತಿಥಿಗಳ ಮನರಂಜನೆಗೋಸ್ಕರ ಈ ಆಟವನ್ನು ಪ್ರಾರಂಭಿಸಿದರು. 'ಡ್ಯೂಕ್'ನ ಮನೆಯಾದ 'ಬ್ಯಾಡ್ಮಿಂಟನ್ ಹೌಸ್'ನಲ್ಲಿ ಈ ಆಟ ಮೊದಲಿಗೆ ಆಡಿದ್ದರಿಂದ ಇದಕ್ಕೆ ಬ್ಯಾಡ್ಮಿಂಟನ್ ಎಂದು ಹೆಸರು ಬಂದಿತು. 1870ರ ವೇಳೆಗೆ ಭಾರತದಲ್ಲಿ ಆಂಗ್ಲ ಸೈನ್ಯಾಧಿಕಾರಿಗಳು ಈ ಆಟವನ್ನು ಕಂಡುಕೊಂಡಿದ್ದರು. ಆಗ ಈ ಆಟಕ್ಕೆ 'ಪೂನಾ' ಎಂದು ಕರೆಯಲಾಗುತ್ತಿತ್ತು. 1893ರಲ್ಲಿ 'ಇಂಗ್ಲಂಡ್ ಬ್ಯಾಡ್ಮಿಂಟನ್ ಫೆಡರೇಶನ್' ಸ್ಥಾಪನೆಗೊಂಡಿತು. 1899ರಲ್ಲಿ ಆಲ್ಇಂಗ್ಲಂಡ್ ಚಾಂಪಿಯನ್ಷಿಪ್ ಪ್ರಾರಂಭಗೊಂಡಿತು. ಈ ಚಾಂಪಿಯನ್ಷಿಪ್ ಅಂತರರಾಷ್ಟ್ರೀಯ ಮಟ್ಟದಲ್ಲೇ ಶ್ರೇಷ್ಟ ಮಟ್ಟದ ಚಾಂಪಿಯನ್ಷಿಪ್ ಎಂದೆನಿಸಿಕೊಂಡಿದೆ.ಬ್ಯಾಡ್ಮಿಂಟನ್ ಅಧಿಕೃತವಾಗಿ 1992ರ ಬಾರ್ಸಿಲೋನಾ ಓಲಿಂಪಿಕ್ಸ್ನಲ್ಲಿ ಸ್ಥಾನಮಾನ ನೀಡಲಾಯಿತು.     

2. ಬ್ಯಾಡ್ಮಿಂಟನ್ ಆಟದ ಯಾವುದಾದರೂ ಎರಡು ನಿಯಮಗಳನ್ನು ಬರೆಯಿರಿ.
ಉತ್ತರ :-   ಬ್ಯಾಡ್ಮಿಂಟನ್ ಆಟದ ನಿಯಮಗಳು :-                                     

1. ಪಂದ್ಯವು 3 ಆಟಗಳಿಂದ ಕೂಡಿರುತ್ತದೆ. ಇದರಲ್ಲಿ 2 ಆಟ ಗೆದ್ದವರು ವಿಜಯಿಯಾಗುತ್ತಾರೆ.                 
2. ಪ್ರತಿ ಆಟ 21 ಅಂಕಗಳಿಗಾಗಿ ಆಡಲಾಗುತ್ತದೆ. ಎರಡೂ ತಂಡಗಳು 20 ಅಂಕ ಸಮ ಮಾಡಿಕೊಂಡರೆ ಸತತವಾಗಿ 2 ಅಂಕ ಪಡೆಯಬೇಕಾಗುತ್ತದೆ. (ಗರಿಷ್ಠ ಮಿತಿ 30 ಅಂಕಗಳು)                                 
3. ಗೆಲುವು ಸಾಧಿಸಿದ ತಂಡಕ್ಕೆ ಮುಂದಿನ ಆಟದಲ್ಲಿ ಸರ್ವಿಸ್ ಮಾಡಲು ಅವಕಾಶ ನೀಡಬೇಕು.               
4. ಒಂದು ಆಟ ಮುಗಿದ ನಂತರ  ಮುಂದಿನ ಆಟಕ್ಕಾಗಿ ಆಟಗಾರರು ತಮ್ಮ ಅಂಕಣವನ್ನು ಬದಲಿಸಬೇಕು.             
5. ನಿರ್ಧರಿತ ಮೂರನೇ ಆಟ ನಡೆದಾಗ 11 ಅಂಕಗಳಿಗೆ ಅಂಕಣ ಬದಲಿಸಬೇಕು.                         
6.29 ಚಿಟಟ ಆದ ಮೇಲೆ 30 ಅಂಕವನ್ನು ಯಾರು ಮೊದಲು ತಲುಪುತ್ತಾರೋ ಆ ತಂಡವನ್ನು ವಿಜಯಶಾಲಿ ಎಂದು ಘೋಷಿಸಲಾಗುವುದು.         7. ಸರ್ವಿಸ್ ಮಾಡುವ ಆಟಗಾರ ಹಾಗೂ ರಿಸೀವ್ ಮಾಡುವ ಎದುರಾಳಿ ಆಟಗಾರರಿಬ್ಬರೂ ಅಭಿಮುಖ ಅಂಕಣದಲ್ಲಿ ನಿಲ್ಲದೇ ಡಯಾಗ್ನಲ್ ಆಗಿ ನಿಲ್ಲಬೇಕಾಗುತ್ತದೆ. ಇತ್ಯಾದಿ.                                        
                
3. ಬ್ಯಾಡ್ಮಿಂಟನ್ ಅಂಕಣದ ಚತ್ರ ಬರೆದು ಅಳತೆಯನ್ನು ಗುರುತಿಸಿ.
ಉತ್ತರ:


4. ಜಾಳಿಗೆಯ ವಿವರವನ್ನು ಬರೆಯಿರಿ.
ಉತ್ತರ :-   ಜಾಳಿಗೆಯು 6.1 ಮೀ ಉದ್ದ ಹಾಗೂ 76 ಸೇ.ಮೀ ಅಗಲವನ್ನು ಹೊಂದಿರುತ್ತದೆ. ಜಾಳಿಗೆಯಲ್ಲಿನ ಚೌಕದ ಅಳತೆ ಕನಿಷ್ಟ
15 ಮಿ.ಮಿ ಗರಿಷ್ಠ 20 ಮಿ.ಮಿ ಇರಬೇಕು. ಜಾಳಿಗೆಯ ಮೇಲಂಚು ಬಿಳಿಯ ಬಣ್ಣದಿಂದ ಕೂಡಿದ್ದು 7.5 ಸೇ.ಮೀ ಅಗಲವನ್ನು  
ಹೊಂದಿರುತ್ತದೆ. ಜಾಳಿಗೆಯ ಮೇಲಂಚಿನಿಂದ ಹಾಯ್ದು ಉತ್ತಮ ದರ್ಜೆಯ ದಾರವನ್ನು ಎರಡೂ ಕಂಬಗಳಿಗೆ ಬಿಗಿಯಾಗಿ
ಕಟ್ಟಲಾಗಿರುತ್ತದೆ. ಈ ರೀತಿ ಕಟ್ಟಲಾದ ಜಾಳಿಗೆಯು ಅಂಕಣದ ಮಧ್ಯ ಭಾಗದಲ್ಲಿ ನೆಲದಿಂದ 1.52 ಮೀ ಎತ್ತರವಿರುತ್ತದೆ. ಹಾಗೂ
ಕಂಬಗಳ ಹತ್ತಿರ ಜಾಳಿಗೆಯು ನೆಲದಿಂದ 1.55 ಮೀ ಎತ್ತರವಿರುತ್ತದೆ.

You Might Like

Post a Comment

0 Comments