Recent Posts

ದೈಹಿಕ ಶಿಕ್ಷಣದ ಪ್ರಯೋಜನಗಳು - 8ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

I. ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.                                 

1. ದೈಹಿಕ ಶಿಕ್ಷಣವು ಪ್ರಾಥಮಿಕ ಶಾಲಾ ಮಟ್ಟದಿಂದ ಶಿಕ್ಷಣದ ಎಲ್ಲಾ ಹಂತಗಳಲ್ಲಿಯೂ ಸಮಗ್ರ ಶಿಕ್ಷಣದ ಅವಿಭಾಜ್ಯ ಅಂಗ ವಾಗಿರುತ್ತದೆ.         

2. ಶಿಕ್ಷಣದಿಂದ ಮನುಷ್ಯನ ಮಾನಸಿಕ ವಿಕಾಸವಾಗುವುದು ಸತ್ಯವಾದರೂ ದೈಹಿಕ ಶಿಕ್ಷಣ ಇಲ್ಲದೇ  ಜೀವನ ಸಾರ್ಥಕವಾಗಲಾರದು.  

II. ಈ ಕೆಳಕಂಡ ಪ್ರಶ್ನೆಗಳಿಗೆ ಒಂದು ಅಥವಾ ಎರಡು ವಾಕ್ಯಗಳಲ್ಲಿ ಉತ್ತರಿಸಿ.   
                 

1.  ದೈಹಿಕ ಶಿಕ್ಷಣದ ಗುರಿಯನ್ನು ಬರೆಯಿರಿ ?
ಉತ್ತರ :- ಜೀವನದುದ್ದಕ್ಕೂ ಆರೋಗ್ಯಕರ ದೈಹಿಕ ಚಟುವಟಿಕೆಗಳನ್ನು ಅನುಭವಿಸಲು ಅಗತ್ಯ ಜ್ಞಾನ, ಕೌಶಲ ಹಾಗೂ ದಿಟ್ಟತನವುಳ್ಳ,           
ದೈಹಿಕವಾಗಿ ಸುಶಿಕ್ಷಿತ ವ್ಯಕ್ತಿಗಳನ್ನು ರೂಪಿಸುವುದು ಬದೈಹಿಕ ಶಿಕ್ಷಣದ ಗುರಿಯಾಗಿರುತ್ತದೆ.                     

2. ಅತೀ ಕಡಿಮೆ ದೈಹಿಕ ಚಟುವಟಿಕೆಗಳಿಂದ ಕೂಡಿರುವ ಜೀವನ ಕ್ರಮದ ಪರಿಣಾಮವೇನು ?
ಉತ್ತರ :-  1. ಅತೀ ಕಡಿಮೆ ದೈಹಿಕ ಚಟುವಟಿಕೆಗಳಿಂದ ಕೂಡಿರುವ ಜೀವನ ಕ್ರಮದಿಂದ ಶರೀರದಲ್ಲಿ ಬೊಜ್ಜಿನ ಪ್ರಮಾಣ ಹೆಚ್ಚಾಗಿಸ್ಥೂಲ ಕಾಯದ ವ್ಯಕ್ತಿಗಳು ನಿರ್ಮಾಣವಾಗುತ್ತಾರೆ.
2. ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಾಧ್ಯವಾಗುವುದಿಲ್ಲ.                 
3. ಕೋಲೆಸ್ಟ್ರಾಲ್ ಅಧಿಕವಾಗುತ್ತದೆ.                                         4. ಸಕ್ಕರೆ ಕಾಯಿಲೆ ಮತ್ತು ಹೈದಯ ಸಂಬಂಧಿತ ಕಾಯಿಲೆಗಳು ಬರುವ ಸಾಧ್ಯತೆಗಳಿರುತ್ತದೆ ಇತ್ಯಾದಿ.            

3. ದೈಹಿಕ ದಾಢ್ರ್ಯತೆಯ ಅಂಶಗಳಾವುವು ?    
ಉತ್ತರ :-  ದೈಹಿಕ ದಾಢ್ರ್ಯತೆಯ ಅಂಶಗಳು :-                                         

1. ಕಷ್ಟಸಹಿಷ್ಣುತೆ                     2. .ಸ್ನಾಯುಗಳ ಬಲ         3. ಮೈಮಣಿತತೆ                         

4. ದೇಹ ಸಂಯೋಜನೆ              5. ವೇಗ  ಇತ್ಯಾದಿಗಳು.   

III. ಈ ಕೆಳಕಂಡ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿ.                 

1.  ಶಾಲಾ ಹಂತದಲ್ಲಿ ದೈಹಿಕ ಶಿಕ್ಷಣದ ಮಹತ್ವವನ್ನು ಬರೆಯಿರಿ.
ಉತ್ತರ :- ಕ್ರಮಬದ್ದ ದೈಹಿಕ ಶಿಕ್ಷಣವು ಶಾಲಾ ಹಂತದಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ಅವುಗಳೆಂದರೆ :-                 

1. ದೈಹಿಕ ದಾಢ್ರ್ಯತೆಯನ್ನು ಹೆಚ್ಚಿಸುತ್ತದೆ.                                    

2. ದೀರ್ಘಕಾಲಿಕ ಆರೋಗ್ಯದ ಲಾಭಗಳಾಗುತ್ತವೆ.                                     

3. ಮಾನಸಿಕ ಅಭಿವೃದ್ದಿಗೆ ಸಹಕಾರಿಯಾಗುತ್ತದೆ.                                     

4. ಬೌದ್ದಿಕ ಬೆಳವಣಿಗೆಗೆ ಪೂರಕವಾಗುತ್ತವೆ.                                     

5. ಸಮಾಜದಲ್ಲಿ ಹೊಂದಿಕೊಳ್ಳುವ ಮನೋಭಾವ ಬೆಳೆಸುತ್ತವೆ.                                

6. ಆರೋಗ್ಯಕರ, ಕ್ರಿಯಾಶೀಲ ಮತ್ತು ಶಿಸ್ತುಬದ್ದ ಜೀವನ ಶೈಲಿಗೆ ಮಾರ್ಗದರ್ಶನವಾಗುತ್ತದೆ.                       
7. ಕ್ರೀಡಾ ಮನೋಭಾವನೆಯನ್ನು ಕಲಿಸುತ್ತದೆ.                                     

8. ಅನಾವಶ್ಯಕ ಮಾನಸಿಕ ಒತ್ತಡಗಳನ್ನು ದೂರವಿಡಲು ಸಹಕರಿಸುತ್ತವೆ.                             

9. ಬಿಡುವಿನ ವೇಳೆಯ ಸದುಪಯೋಗಕ್ಕೆ ಮಾರ್ಗೋಪಾಯಗಳನ್ನು ಸೂಚಿಸುತ್ತವೆ.                         

10. ಸೂಪ್ತ ಪ್ರತಿಭೆಯ ಪ್ರದರ್ಶನಕ್ಕೆ ಅವಕಾಶ. ಇತ್ಯಾದಿ.
 
2. ದೀರ್ಘಕಾಲಿಕ ಆರೋಗ್ಯ ಲಾಭಗಳು ದೈಹಿಕ ಶಿಕ್ಷಣದಿಂದ ಹೇಗೆ ಒದಗುತ್ತವೆ ?
ಉತ್ತರ :-   ದೀರ್ಘಕಾಲಿಕ ಆರೋಗ್ಯದ ಲಾಭಗಳು :-                                 
1. ಶರೀರದಲ್ಲಿ ಸಮ ಪ್ರಮಾಣದ ಬೊಜ್ಜನ್ನು ಕಾಯ್ದುಕೊಳ್ಳುವುದರೊಂದಿಗೆ ಸ್ಥೂಲ ಕಾಯ ಹೊಂದದಂತೆ ನೋಡಿಕೊಳ್ಳುವುದು.    

2. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದು.                                      

3. ಅಧಿಕ ಕೊಲೇಸ್ಟ್ರಾಲ್ನ್ನು ತಡೆಗಟ್ಟುವುದು.                                    

4. ಸಕ್ಕರೆ ಕಾಯಿಲೆ ಮತ್ತು ಹೃದಯ ಸಂಬಂಧಿತ ಕಾಯಿಲೆಗಳನ್ನು ದೂರವಿಡಲು ನಿಯಮಿತ ದೈಹಿಕ ಶಿಕ್ಷಣ ಸಹಕಾರಿಯಾಗುತ್ತದೆ.                     

3. ಕ್ರೀಡಾ ಮನೋಭಾವನೆ ಎಂದರೇನು ?
ಉತ್ತರ :- ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ನಾಯಕತ್ವ ಗುಣಗಳು, ನೈತಿಕತೆ ಮತ್ತು ಹೊನೆಗಾರಿಕೆಗಳಂತಹ  ಗುಣಗಳನ್ನು ಕಲಿತು ಆಟೋಟಗಳಲ್ಲಿ ಸೋಲು ಗೆಲುವನ್ನು ಸಮದೃಷ್ಠಿಯಿಂದ ಎದುರಿಸಿ ಸುಖ ದು:ಖವನ್ನು ಜೀವನದಲ್ಲಿ ಏಕ ರೀತಿಯಲ್ಲಿ ಕಾಣುವುದನ್ನು ಕ್ರೀಡಾ ಮನೋಭಾವ ಎನ್ನುವರು.                             
4. ಕ್ರೀಡೆಯನ್ನು ವೃತ್ತಿಯನ್ನಾಗಿ ಆಯ್ದುಕೊಳ್ಳಲು ದೈಹಿಕ ಶಿಕ್ಷಣ ಹೇಗೆ ಸಹಕಾರಿಯಾಗಿದೆ ?
ಉತ್ತರ :- ಪ್ರತಿಯೊಬ್ಬರಲ್ಲೂ ಸೂಪ್ತ ಪ್ರತಿಭೆಗಳಿರುತ್ತವೆ. ಅದನ್ನು ಸರಿಯಾದ ರೀತಿಯಲ್ಲಿ ಹೊರಹಾಕಲು ವೇದಿಕೆ ಅವಶ್ಯಕ. ಕೆಲವೊಬ್ಬರಿಗೆ ಉತ್ತಮ ಕಣ್ಣು- ಕೈ, ಕಣ್ಣು- ಕಾಲುಗಳ ಸಂಯೋಜನಾ ಸಾಮಥ್ರ್ಯವಿರುತ್ತದೆ. ಇದರೊಂದಿಗೆ ಉತ್ತಮ ದೇಹ ದಾಢ್ರ್ಯತೆ ಅಭಿವೃದ್ದಿಪಡಿಸಿಕೊಂಡಲ್ಲಿ ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಬಹುದು. ಹಾಗೂ ಕ್ರೀಡೆಯನ್ನು ವೃತ್ತಿಯನ್ನಾಗಿಯೂ ಸಹ ಅವಶ್ಯಕ ಜ್ಞಾನ ಮತ್ತು ಅನುಭವಗಳು ದೈಹಿಕ ಶಿಕ್ಷಣದಲ್ಲಿ ಸಕ್ರಿಯವಾಗಿ ತೊಡಗುವುದರಿಂದ ಲಭ್ಯವಾಗುತ್ತದೆ.  
 

You Might Like

Post a Comment

0 Comments