Recent Posts

ಮಾರುತಗಳು, ಬಿರುಗಾಳಿಗಳು ಮತ್ತು ಚಂಡಮಾರುತಗಳು - 7ನೇ ತರಗತಿ ವಿಜ್ಞಾನ ಪುಸ್ತಕದ ಪ್ರಶ್ನೋತ್ತರಗಳು

 ಮಾರುತಗಳು, ಬಿರುಗಾಳಿಗಳು ಮತ್ತು 
ಚಂಡಮಾರುತಗಳು

1. ಕೆಳಕಂಡ ಹೇಳಿಕೆಗಳಲ್ಲಿನ ಖಾಲಿ ಜಾಗಗಳಲ್ಲಿ ಬಿಟ್ಟು ಹೋದ ಪದಗಳನ್ನು ತುಂಬಿ.

(ಎ) ಮಾರುತ ಎಂದರೆ ಚಲಿಸುವ ಗಾಳಿ,
(ಬಿ) ಭೂ ಮೇಲ್ಮೈನಲ್ಲಿ ಅಸಮ ಉಷ್ಣತೆಯಿಂದ ಮಾರುತಗಳು ಉಂಟಾಗುತ್ತವೆ.
(ಸಿ) ಭೂ ಮೇಲ್ಮನಲ್ಲಿ ಬಿಸಿ ಗಾಳಿಯು ಮೇಲೇರುತ್ತದೆ. ಆದರೆ ತಣ್ಣನೆಯ ಗಾಳಿಯು ಕೆಳಗೆ ಬರುತ್ತದೆ.
(ಡಿ) ಗಾಳಿಯು ಹೆಚ್ಚು ಒತ್ತಡದ ಪ್ರದೇಶದಿಂದ ಕಡಿಮೆ ಒತ್ತಡದ ಪ್ರದೇಶಕ್ಕೆ ಚಲಿಸುತ್ತದೆ.

2. ಒಂದು ನಿರ್ದಿಷ್ಟ ಸ್ಥಳದಲ್ಲಿ ಮಾರುತದ ದಿಕ್ಕನ್ನು ಕಂಡುಹಿಡಿಯುವ ಎರಡು ವಿಧಾನಗಳನ್ನು ಸೂಚಿಸಿ
(i) ಒಂದು ಕಾಗದವನ್ನು ತೆಗೆದುಕೊಂಡು ಅದನ್ನು ಮೇಲಿನಿಂದ ಕೆಳಗೆ ಬಿಟ್ಟಾಗ ಅದು ಗಾಳಿ ಬೀಸುವ ದಿಕ್ಕಿನಲ್ಲಿ ಹಾರುತ್ತದೆ.
(ii) ನಿಖರವಾದ ಗಾಳಿಯ ದಿಕ್ಕನ್ನು ಅಳೆಯಲು ಗಾಳಿ ಫಲಕವನ್ನು ಸಹ ಬಳಸಬಹುದು.

3. ಗಾಳಿಯು ಒತ್ತಡವನ್ನು ಉಂಟು ಮಾಡುತ್ತದೆ ಎಂದು ನಿಮ್ಮನ್ನು ಆಲೋಚಿಸುವಂತೆ ಮಾಡಿದ ಎರಡು ಅನುಭವಗಳನ್ನು ತಿಳಿಸಿ
(i) ಆಕಾಶಬುಟ್ಟಿಗಳನ್ನು ಗಾಳಿಯಿಂದ ತುಂಬಿದಾಗ ಮಾತ್ರ ಅವುಗಳನ್ನು ಬಳಸಬಹುದಾಗಿದೆ. ಬಲೂನ್ನಲ್ಲಿ ಅತಿಯಾದ ಗಾಳಿಯನ್ನು ತುಂಬಿದಾಗ ಅದು ಗಾಳಿಯ ಒತ್ತಡದಿಂದಾಗಿ ಸಿಡಿಯುತ್ತದೆ.
(ii) ರೈಲುಗಳನ್ನು ನಿಲ್ಲಿಸಲು, ಬ್ರೇಕ್ ವ್ಯವಸ್ಥೆಯಲ್ಲಿ ಸಂಕುಚಿತ ಗಾಳಿಯನ್ನು ಬಳಸಲಾಗುತ್ತದೆ.

4. ನೀವು ಒಂದು ಮನೆಯನ್ನು ಕೊಂಡುಕೊಳ್ಳಬೇಕೆಂದಿರುವಿರಿ, ವಾತಾಯನ ಕಿಂಡಿಗಳಿಲ್ಲದೆ (Ventilators) ಕಿಟಕಿಗಳು ಮಾತ್ರ ಇರುವ ಮನೆಯನ್ನು ಕೊಂಡುಕೊಳ್ಳುವಿರ? ನಿಮ್ಮ ಉತ್ತರವನ್ನು ವಿವರಿಸಿ
ಇಲ್ಲಾ ವಾತಾಯನ ಕಿಂಡಿಗಳಿಲ್ಲದ ಮನೆ ವಾಸಿಸಲು ಸುರಕ್ಷಿತವಲ್ಲ ಏಕೆಂದರೆ ಮನೆಯಲ್ಲಿ ಗಾಳಿಯ ಪ್ರಸರಣವಾಗುವುದಿಲ್ಲ ಯಾವುದೇ ಶುದ್ಧ ಗಾಳಿ ಬರುವುದಿಲ್ಲ, ವಾತಾಯನ ಕಿಂಡಿಯಲ್ಲಿ ಬೆಚ್ಚಗಿನ ಗಾಳಿಯು ಮೇಲಕ್ಕೇರಿ ವೆಂಟಿಲೇಟರ್ಗಳ ಮೂಲಕ ಹೊರ ಹೋಗುತ್ತದೆ. ಮತ್ತು ಶುದ್ಧ ಗಾಳಿಯು ಒಳ ಬರುತ್ತದೆ.

5. ತೂಗು ಹಾಕುವ ಬ್ಯಾನರ್ ಮತ್ತು ಫಲಕಗಳಲ್ಲಿ ರಂಧ್ರಗಳನ್ನು ಮಾಡಲು ಕಾರಣವೇನು?
ಗಾಳಿ ವೇಗವಾಗಿ ಬೀಸಿದಾಗ ಗಾಳಿಯ ಒತ್ತಡದಿಂದ ತೂಗು ಹಾಕುವ ಬ್ಯಾನರ್ ಮತ್ತು ಫಲಕಗಳು ಹರಿದು ಹೋಗುತ್ತವೆ. ಗಾಳಿಯು ಒತ್ತಡವನ್ನು ಬೀರುವುದೇ ಇದಕ್ಕೆ ಕಾರಣ ರಂಧ್ರಗಳ ಮೂಲಕ ಗಾಳಿಯು ಹಾದುಹೋಗುತ್ತದೆ. ಇದರಿಂದ ಅವು ಹರಿಯುವುದಿಲ್ಲ ಮತ್ತು ಕೆಳಗೆ ಬೀಳುವುದಿಲ್ಲ.

6. ಚಂಡಮಾರುತವು ನಿಮ್ಮ ಹಳ್ಳಿ/ನಗರವನ್ನು ಸಮೀಪಿಸುವಾಗ ನಿಮ್ಮ ನೆರೆಹೊರೆಯವರಿಗೆ ನೀವು ಹೇಗೆ ಸಹಾಯ ಮಾಡುವಿರಿ?
(i) ಚಂಡಮಾರುತದ ಬಗ್ಗೆ ಹವಾಮಾನ ಮುನ್ಸೂಚನೆ ಮತ್ತು ಮುನ್ನೆಚ್ಚರಿಕೆ ಸೇವೆ ಬಗ್ಗೆ ಅವರಿಗೆ ಅರಿವು ಮೂಡಿಸುವುದು.
(ii) ಸರ್ಕಾರಿ ಸಂಸ್ಥೆಗಳು ಮತ್ತು ಇತರ ಎಲ್ಲ ಪ್ರಮುಖ ಸ್ಥಳಗಳಿಗೆ ಶೀಘ್ರ ಎಚ್ಚರಿಕೆಗಳನ್ನು ನೀಡುವುದು.
(iii ) ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಚಂಡಮಾರುತದ ಆಶ್ರಯಗಳ ನಿರ್ಮಾಣ ಮಾಡಲು ಸಹಾಯ ಮಾಡುವುದು.
(iv) ಅಗತ್ಯ ವಸ್ತುಗಳು, ಸಾಕು ಪ್ರಾಣಿಗಳು ಇತ್ಯಾದಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅವರಿಗೆ ಸಹಾಯ ಮಾಡುವುದು.

7. ಚಂಡಮಾರುತವು ಉಂಟುಮಾಡುವ ಸನ್ನಿವೇಶವನ್ನು ನಿರ್ವಹಿಸಲು ಯಾವ ಪೂರ್ವ ಯೋಜನೆಯ ಅಗತ್ಯವಿದೆ?
ಚಂಡಮಾರುತವನ್ನು ಎದುರಿಸಲು ಈ ಕೆಳಗಿನ ಕ್ರಮಗಳನ್ನು ಅನುಸರಿಸುವುದು ಮುಖ್ಯ :
ದೂರದರ್ಶನ, ರೇಡಿಯೊ ಮತ್ತು ವಾರ್ತಾಪತ್ರಿಕೆಗಳ ಮೂಲಕ ಹವಾಮಾನ ಇಲಾಖೆ ನೀಡುವ ಎಚ್ಚರಿಕೆಗಳನ್ನು ಕಡೆಗಣಿಸಬಾರದು. ಮುಖ್ಯವಾಗಿ ನಾವು ಮನೆಯ ಅಗತ್ಯ ವಸ್ತುಗಳು, ಸಾಕುಪ್ರಾಣಿಗಳು, ವಾಹನಗಳು ಮುಂತಾದವುಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
ಪ್ರವಾಹಗಳಿಂದ ರಸ್ತೆಗಳು ಹಾಳಾಗಿರುವ ಸಾಧ್ಯತೆ ಇರುವುದರಿಂದ ನೀರು ನಿಂತ ರಸ್ತೆಗಳಲ್ಲಿ ವಾಹನ ನಡೆಸಬಾರದು. ಪೋಲೀಸ್, ಅಗ್ನಿಶಾಮಕದಳ ಮತ್ತು ಆರೋಗ್ಯ ಕೇಂದ್ರಗಳಂತಹ ಎಲ್ಲಾ ತುರ್ತುಸೇವೆಗಳ ದೂರವಾಣಿ ಸಂಖ್ಯೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು

8. ಈ ಕೆಳಗಿನವುಗಳಲ್ಲಿ ಯಾವ ಸ್ಥಳವು ಚಂಡಮಾರುತದ ಪರಿಣಾಮಕ್ಕೆ ತುತ್ತಾಗುವ ಸಾಧ್ಯತೆ ಇಲ್ಲ?
(i) ಚನ್ನೈ 
(ii) ಮಂಗಳೂರು
(iii) ಅಮೃತಸರ 
(iv) ಪುರಿ

9. ಕೆಳಗೆ ನೀಡಿರುವ ಯಾವ ಹೇಳಿಕೆ ಸರಿಯಾಗಿದೆ?
(i ) ಚಳಿಗಾಲದಲ್ಲಿ ಮಾರುತಗಳು ಭೂಮಿಯಿಂದ ಸಮುದ್ರದ ಕಡೆಗೆ ಬೀಸುತ್ತವೆ.
(ii ) ಬೇಸಿಗೆ ಕಾಲದಲ್ಲಿ ಮಾರುತಗಳು ಭೂಮಿಯಿಂದ ಸಮುದ್ರದ ಕಡೆಗೆ ಬೀಸುತ್ತವೆ.
( iii ) ಹೆಚ್ಚು ಒತ್ತಡದ ವ್ಯವಸ್ಥೆಯ ಸುತ್ತ ತೀವ್ರ ವೇಗದ ಮಾರುತಗಳು ಪರಿಭ್ರಮಿಸಿದಾಗ ಚಂಡಮಾರುತ ಉಂಟಾಗುತ್ತದೆ.
(iv) ಭಾರತದ ಕರಾವಳಿ ತೀರ ಚಂಡಮಾರುತಗಳಿಂದ ಬಾಧಿತವಲ್ಲ.

ಉತ್ತರ : (i) ಚಳಿಗಾಲದಲ್ಲಿ ಮಾರುತಗಳು ಭೂಮಿಯಿಂದ ಸಮುದ್ರದ ಕಡೆಗೆ ಬೀಸುತ್ತವೆ.
You Might Like

Post a Comment

0 Comments