Recent Posts

ರಾಷ್ಟ್ರೀಯ - 7ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

 

ಪ್ರ.ಸಂ 1. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

1. ಅಖಂಡದ ಅವಿಭಾಜ್ಯ ಅಂಗವಾಗಿರುವುದೇ ಐಕ್ಯತೆ ಎನ್ನಿಸಿಕೊಳ್ಳುತ್ತದೆ.

2. ಸಹನೆಯು ಭಾವೈಕ್ಯತೆಯ ಒಂದುಮಂತ್ರವಾಗಿರುತ್ತದೆ.

3. ದೈಹಿಕ ಶಿಕ್ಷಣವು ಮಕ್ಕಳಲ್ಲಿ ಸಾಂಸ್ಕೃತಿಕವಾಗಿ ಐಕ್ಯತೆಯನ್ನು ಮೂಡಿಸುತ್ತದೆ.

4. ಕ್ರೀಡೆ ಮತ್ತು ದೈಹಿಕ ಶಿಕ್ಷಣವು ಸಾಂಸ್ಕೃತಿಕ ಭಾವೈಕ್ಯತೆಗೆ ಒಂದು ಸಾಧನ ಅಥವಾ ಮಾಧ್ಯಮವಾಗಿದೆ.

ಪ್ರ.ಸಂ 2. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

1. ಐಕ್ಯತೆ ಎಂದರೇನು ?
ಉತ್ತರ :- ಒಂದು ವ್ಯವಸ್ಥೆಯ ವಿವಿಧ ಭಾಗಗಳು ಸಂಯೋಜನೆಗೊಂಡು ಅಖಂಡವಾಗಿರುವುದೇ ಐಕ್ಯತೆ.

2. ಭಾವೈಕ್ಯತೆ ಎಂದರೇನು ?
ಉತ್ತರ :- ಭಾವೈಕ್ಯತೆ ಎಂದರೆ, ಸಮಾಜದಲ್ಲಿರುವ ಎಲ್ಲಾ ವ್ಯಕ್ತಿಗಳಿಗೆ ತಾವು ಸಮಾಜದ ಒಂದು ಅವಿಭಾಜ್ಯ ಅಂಗ ಎಂಬ ಭಾವನೆ ಇರುವುದಾಗಿರುತ್ತದೆ. ಸಮಾಜದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ತಾನಿರುವ ಸಮಾಜ, ರಾಜ್ಯ, ರಾಷ್ಟ್ರದೊಡನೆ ಗುರುತಿಸಿಕೊಳ್ಳುವುದು ಮತ್ತು ಆ ಸಮಾಜದ ಮೌಲ್ಯಗಳನ್ನು, ರೀತಿ-ನೀತಿಗಳನ್ನು ಮತ್ತು ವರ್ತನೆಗಳನ್ನು ತನ್ನದನ್ನಾಗಿ ಮಾಡಿಕೊಳ್ಳುವುದೇ ಭಾವೈಕ್ಯತೆಯಾಗಿರುತ್ತದೆ.  

3. ರಾಷ್ಟ್ರಿಯ ಭಾವೈಕ್ಯತೆಯಲ್ಲಿ ಸಾಂಸ್ಕೃತಿಕ ಅಂಗಗಳಾವುವು ?
ಉತ್ತರ:- ರಾಷ್ಟ್ರದ ವಿವಿಧ ಸಮುದಾಯಗಳಿಗೆ ತನ್ನದೇ ಆದ ಅಭಿವ್ಯಕ್ತಿ ಸ್ವರೂಪಗಳಿರುತ್ತವೆ. ಭಾಷೆ, ಉಡುಗೆ-ತೊಡುಗೆ, ಕಲೆ,ಸಾಹಿತ್ಯ, ವಾಸ್ತುಶಿಲ್ಪ, ಊಟ ಉಪಚಾರ, ರೀತಿ-ನೀತಿಗಳು, ಧರ್ಮ, ಸಂಪ್ರದಾಯ,ನಡೆ-ನುಡಿ,ನಂಬುಗೆಗಳು ಮುಂತಾದವುಗಳೆಲ್ಲವೂ ಸಮುದಾಯದಿಂದ ಸಮುದಾಯಕ್ಕೆ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರುತ್ತವೆ. ಪ್ರತಿಯೊಂದು ಸಮುದಾಯದಲ್ಲಿಯೂ ವಿಭಿನ್ನವಾದ ನಂಬಿಗೆಯುಳ್ಳವರು ಮತ್ತು ಆಚಾರ-ವಿಚಾರವುಳ್ಳವರಾಗಿರುತ್ತಾರೆ. ಒಂದೇ
ರಾಷ್ಟ್ರದಲ್ಲಿರುವ ಬೇರೆ-ಬೇರೆ ಸಮುದಾಯದವರು, ಸಮಾಜದವರು, ಪ್ರದೇಶದವರು ತಮ್ಮ-ತಮ್ಮ ಸಂಸ್ಕೃತಿ, ಧರ್ಮ,ಭಾಷೆ,ರೀತಿ-ನೀತಿಗಳೇ ಶ್ರೇಷ್ಠವೆಂಬ ಸಂಕುಚಿತ ಭಾವನೆ, ಪ್ರತಿಷ್ಠೆ, ಅಹಂಕಾರಗಳೆಲ್ಲವೂ ಸಾಮಾಜಿಕ ಮತ್ತು ರಾಷ್ಟ್ರೀಯ ಭಾವೈಕ್ಯತೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತವೆ. ಅನ್ಯ ಸಂಸೃತಿಗಳಲ್ಲಿಯ ಉತ್ತಮ  ಗುಣಗಳನ್ನು ಗುರುತಿಸುವ ಮತ್ತು ವಿವಿಧ ಸಂಸ್ಕೃತಿಗಳಲ್ಲಿಯ ಸಾಮ್ಯತೆಯನ್ನು ಗುರುತಿಸುವ ಹೃದಯ ವೈಶಾಲ್ಯತೆಯನ್ನು ಬೆಳೆಸುವುದು ಮತ್ತು ಸಕಾರಾತ್ಮಕ ಮನೋವೃತ್ತಿಯನ್ನು ರಾಷ್ಟ್ರದ ಪ್ರಜೆಗಳಲ್ಲಿ ಬೆಳೆಸುವುದು ಶಿಕ್ಷಣದ ಮೂಲಕ ಆಗಬೇಕು.  

4. ರಾಷ್ಟ್ರಿಯ ಭಾವೈಕ್ಯತೆಯಲ್ಲಿ  ಆಥರ್ಿಕ ಅಂಶಗಳಾವುವು ?  
ಉತ್ತರ :- ಆರ್ಥಿಕ ಅಂಶಗಳು :-                
ವ್ಯಕ್ತಿ-ವ್ಯಕ್ತಿಗಳ ನಡುವಿನ, ಸಮುದಾಯ-ಸಮುದಾಯಗಳ ನಡುವಿನ ಆರ್ಥಿಕ ಭಿನ್ನತೆಯು ಅವರ ಬೌಧ್ಧಿಕ ವಿಕಾಸ ಮತ್ತು ಅವರು ಪಡೆದ ಜೀವನ ಕೌಶಲ್ಯ, ಮುಂತಾದವುಗಳನ್ನು ಅವಲಂಬಿಸಿರುತ್ತದೆ. ವ್ಯಕ್ತಿಗಳ ಅಥವಾ ಸಮುದಾಯಗಳಲ್ಲಿಯ ಆರ್ಥಿಕ ಅಸಮಾನತೆಯು ರಾಷ್ಟ್ರೀಯ ಭಾವೈಕ್ಯತೆಗೆ ತೊಡಕನ್ನು ಉಂಟು ಮಾಡುತ್ತದೆ. ಮತ್ತು ಅವರ ಮುಂಬರುವ ಸಂತತಿಗಳ ಶಿಕ್ಷಣ, ಮಾನಸಿಕ ವಿಕಾಸ ಮತ್ತು ಅವರಿಗೆ ಸಿಗಬಹುದಾದ ಅವಕಾಶಗಳ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಬಡವರು ಮತ್ತು ಶ್ರೀಮಂತರ ನಡುವಿನ ಆರ್ಥಿಕ  ಅಂತರವನ್ನು ಕಡಿಮೆಗೊಳಿಸುವುದು ಸಮಾಜದ ಹೊನೆಗಾರಿಕೆಯಾಗಿದೆ.  

ಪ್ರ.ಸಂ 3. ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.


1. ಐಕ್ಯತೆ ಸಾಧಿಸುವುದೆಂದರೇನು?
ಉತ್ತರ :- ಒಂದು ವ್ಯವಸ್ಥೆಯೆಲ್ಲಾ ಭಾಗಗಳು ಪರಸ್ಪರ ಪೂರಕವಾಗಿ ಮತ್ತು ಸುಸಂಯೋಜನೆಯಿಂದ ಕಾರ್ಯನಿರ್ವಹಿಸುವುದರೊಂದಿಗೆ ಅಖಂಡದ ಕತೃತ್ವಶಕ್ತಿಯನ್ನು ಪರಿಣಾಮಕಾರಿಯಾಗಿ ಮಾಡುವುದೇ ಆಗಿರುತ್ತದೆ.

2. ರಾಷ್ಟ್ರೀಯ ಭಾವೈಕ್ಯತೆ ಯಾವುದು ತಿಳಿಸಿ.
ಉತ್ತರ :-ದೇಶದ ಜನತೆಯು ತಮ್ಮ ಧಾರ್ಮಿಕ ನಂಬುಗೆಗಳು, ಪಂಗಡ,ಭಾಷೆ ಮುಂತಾದ ಸಾಂಸ್ಕೃತಿಕ ಸಂಕುಚಿತ ಗಡಿದಾಟಿ ನಾವೆಲ್ಲ ಒಂದೇ ನಾಡಿನ ಪ್ರಜೆಗಳು ಎಂಬ ಹೃದಯ ವೈಶಾಲ್ಯತೆಯನ್ನು ಹೊಂದಿರುವುದೇ ರಾಷ್ಟ್ರೀಯ ಭಾವೈಕ್ಯತೆಯಾಗಿರುತ್ತದೆ.

3. ಭಾವೈಕ್ಯತೆಯ ಮಹತ್ವವನ್ನು ತಿಳಿಸಿ.
ಉತ್ತರ :-  * ರಾಷ್ಟ್ರೀಯ ಭಾವೈಕ್ಯತೆಯ ಇನ್ನೊಂದು ಲಕ್ಷಣವಾದ ಪರಸ್ಪರ ವಿಶ್ವಾಸ ನಂಬುಗೆಗಳು ಪರಸ್ಪರರ ಬಗ್ಗೆ ಇರುವ
ಹೆದರಿಕೆ, ದ್ವೇಷ, ಸಂಶಯಗಳೆಲ್ಲವೂ ದೂರವಾಗುತ್ತವೆ. ರಾಷ್ಟ್ರದ ವಿವಿಧ ಭಾಷೆಗಳಿಗೆ ಮತ್ತು ಧರ್ಮಗಳಿಗೆ ಸಂಬಂಧಿಸಿದ ಸಂಘ-ಸಂಸ್ಥೆಗಳು ಪ್ರಜೆಗಳು ತಮ್ಮ ತಮ್ಮ ಧ್ಯೇಯೋದ್ದೇಶಗಳನ್ನು ಮತ್ತು ಆಚಾರ- ವಿಚಾರಗಳನ್ನು ರಾಷ್ಟ್ರೀಯ ಧ್ಯೇಯೋದ್ದೇಶಗಳಿಗೆ ಪೂರಕವಾಗಿರುವಂತೆ ರೂಪಿಸಿಕೊಳ್ಳುವುದರಿಂದ ರಾಷ್ಟ್ರದ ದಕ್ಷತೆ ಮತ್ತು ಕತೃತ್ವಶಕ್ತಿಯು ವರ್ಧಿಸುತ್ತದೆ. ವಿಭಿನ್ನ ಪ್ರಚಾರಗಳು ಮತ್ತು ವೈವಿದ್ಯಮಯತೆಗಳು ಪರಿಚ್ಛಿನ್ನ ವೈಚಾರಿಕತೆಗರ ಎಡೆಮಾಡಿಕೊಡುವುದು. ಪರಿಚ್ಛಿನ್ನ ವೈಚಾರಿಕತೆಯೂ ಸಮಾಜದಲ್ಲಿ ಸೃಜನಾತ್ಮಕತೆಯನ್ನು ಪ್ರೋತ್ಸಾಹಿಸುವುದರಿಂದ ಸಮಾಜವು ಪ್ರಗತಿ ಸಾಧಿಸುವುದು. ಇದು ಸಮಾಜದಲ್ಲಿಯ ಭಾವೈಕ್ಯತೆಯಿಂದಲೇ ಸಾಧ್ಯವಾಗುವುದು. ಆದ್ದರಿಂದ ರಾಷ್ಟ್ರೀಯ ಭಾವೈಕ್ಯತೆಯಿಂದ ರಾಷ್ಟ್ರೀಯ ಪ್ರಗತಿ ಸಾಧ್ಯವಾಗುತ್ತದೆ. ಅನ್ಯರ ಸಂಸ್ಕೃತಿ, ಸಂಪ್ರದಾಯ ನಡೆ-ನುಡಿ ರೀತಿ ರಿವಾಜುಗಳು, ನಂಬುಗೆಗಳನ್ನು ಸಹಿಸುವುದು ಮತ್ತು ಅವುಗಳನ್ನು ಗೌರವಿಸುವುದು ರಾಷ್ಟ್ರೀಯ ಭಾವೈಕ್ಯತೆಯ ತಿರುಳಾಗಿರುತ್ತದೆ. ಈ ಮನೋಧರ್ಮವೇ ಪ್ರಜಾತಂತ್ರದ ಹೆಗ್ಗುರುತಾಗಿರುತ್ತದೆ. ಸಹನೆ ಮತ್ತು ಪರಸ್ಪರ ಗೌರವಗಳಿಂದಲೇ ವೈಯಕ್ತಿಕ ವ್ಯಕ್ತಿ ಸ್ವಾತಂತ್ರ್ಯಕ್ಕೆ ಮತ್ತು ಮಾನವ ಹಕ್ಕುಗಳಿಗೆ ಮಹತ್ವ ಬರುತ್ತದೆ ಇತ್ಯಾದಿ.

4. ರಾಷ್ಟ್ರೀಯ ಭಾವೈಕ್ಯತೆಯ ಮೇಲೆ ಪ್ರಭಾವ ಬೀರುವ ಅಂಶಗಳು ಯಾವುವು ?
ಉತ್ತರ :-  ರಾಷ್ಟ್ರೀಯ ಭಾವೈಕ್ಯತೆಯ ಮೇಲೆ ಪ್ರಭಾವ ಬೀರುವ ಅಂಶಗಳು :-                
1) ಸಾಂಸ್ಕೃತಿಕ ಅಂಶಗಳು      2) ಮಾನಸಿಕ ವಿಕಾಸ ಅಂಶಗಳು
3) ದೈಹಿಕ ಸ್ವರೂಪದ ಅಂಶಗಳು      4) ಆರ್ಥಿಕ ಅಂಶಗಳು
5) ಭೌಗೋಳಿಕ ಅಂಶಗಳು ಇತ್ಯಾದಿ

5.ದೈಹಿಕ ಶಿಕ್ಷಣದಿಂದ ರಾಷ್ಟ್ರೀಯ ಭಾವನೆ ಹೇಗೆ ಮೂಡುತ್ತದೆ ?
ಉತ್ತರ :-  ದೈಹಿಕ ಶಿಕ್ಷಣವು ದೈಹಿಕ ಶಿಕ್ಷಣ ಮತ್ತು ಕ್ರೀಡೆಗಳು ವಿವಿಧ ಮಟ್ಟಗಳಲ್ಲಿ ವಿವಿಧ ರೀತಿಯಿಂದ ವಿವಿಧ ಸಮುದಾಯಗಳಲ್ಲಿ ಭಾವೈಕ್ಯತೆಯನ್ನುಂಟು ಮಾಡುತ್ತದೆ.
1) ದೈಹಿಕ ಶಿಕ್ಷಣವು ಮಕ್ಕಳಲ್ಲಿ ಸಾಂಸ್ಕೃತಿಕವಾಗಿ ಐಕ್ಯತೆಯನ್ನು ಮೂಡಿಸುತ್ತದೆ.
2) ದೈಹಿಕ ಶಿಕ್ಷ ಮತ್ತು ಕ್ರೀಡೆಗಳಲ್ಲಿ ತರಬೇತಿಯು ಭೌತಿಕ ಸ್ವರೂಪದ್ದಾಗಿರುತ್ತದೆ. ಇಂಥ ಸಂದರ್ಭದಲ್ಲಿ ಕ್ರೀಡಾಪಟುಗಳ ಧರ್ಮ ಶ್ರಧ್ದೆ ಭಾಷೆ, ಆಚಾರ-ವಿಚಾರ ಮುಂತಾದವುಗಳ ಆದಾರದ ಮೇಲೇ ತರಬೇತಿ ಮಾಡಲು ಸಾಧ್ಯವಾಗುವುದಿಲ್ಲ, ಕ್ರೀಡೆ ಮತ್ತು ದೈಹಿಕ ಚಟುವಟಿಕೆ ಯಾವೂದೇ ಒಂದು ಸಮುದಾಯದ ಸೋತ್ತಾಗಿರುವುದಿಲ್ಲ,
3) ಕ್ರೀಡೆಯಲ್ಲಿ ಸೋಲು ಗೆಲುವು ಸಾಮಥ್ರ್ಯ ಪ್ರಮಾಣಗಳ ಭಿನ್ನತೆಯಲ್ಲಿದೆ.
4) ದೈಹಿಕ ಶಿಕ್ಷಣವು ರಾಷ್ಟ್ರೀಯ ಭಾವೈಕ್ಯತೆಗೆ ಒಂದು ಸಾಧನ, ರಾಷ್ಟ್ರೀಯ ಮಾತ್ರವಲ್ಲದೇ ಅಂತರಾಷ್ಟ್ರೀಯ ಭಾವೈಕ್ಯತೆಗೆ ಉತ್ತಮ ವೇಧಿಕೆಯಾಗಿರುತ್ತದೆ.

You Might Like

Post a Comment

0 Comments