Recent Posts

ಸಸ್ಯಗಳಲ್ಲಿ ಪೋಷಣೆ - 7ನೇ ತರಗತಿ ವಿಜ್ಞಾನ ಪುಸ್ತಕದ ಪ್ರಶ್ನೋತ್ತರಗಳು

 ಸಸ್ಯಗಳಲ್ಲಿ ಪೋಷಣೆ 

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

1. ಜೀವಿಗಳು ಆಹಾರವನ್ನು ಏಕೆ ತೆಗೆದುಕೊಳ್ಳಬೇಕು?

ಎಲ್ಲಾ ಜೀವಿಗಳು ಆಹಾರವನ್ನು ತೆಗೆದುಕೊಳ್ಳಲು ಬೆಳವಣಿಗೆ ಮುಖ್ಯ ಕಾರಣವಾಗಿದೆ. ಓಡಲು ಮತ್ತು ನಡೆಯಲು ಆಹಾರವು ಅಗತ್ಯವಾದ ಶಕ್ತಿಯನ್ನು ಒದಗಿಸುತ್ತದೆ. ದೇಹದ ಹಾನಿಗೊಳಗಾದ ಮತ್ತು ಗಾಯಗೊಂಡ ಭಾಗಗಳನ್ನು ಸರಿಪಡಿಸುವುದು ಇದರ ಮುಖ್ಯ ಕಾರ್ಯ ಮತ್ತು ಇದು ಮಾರಕ ಕಾಯಿಲೆಗಳ ವಿರುದ್ಧ ಕವಚವನ್ನು ಒದಗಿಸುತ್ತದೆ ಮತ್ತು ಅನೇಕ ಸೋಂಕುಗಳ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

2. ಪರಾವಲಂಬಿ ಮತ್ತು ಕೊಳೆತಿನಿಗಳ ನಡುವಿನ ವ್ಯತ್ಯಾಸವನ್ನು ಬರೆಯಿರಿ
 
 
3. ಎಲೆಗಳಲ್ಲಿ ಪಿಷ್ಟದ ಇರುವಿಕೆಯನ್ನು ನೀವು ಹೇಗೆ ಪರೀಕ್ಷಿಸುವಿರಿ?
ಈ ವೈಜ್ಞಾನಿಕ ವಿಧಾನದಿಂದ ಎಲೆಗಳಲ್ಲಿನ ಪಿಷ್ಟವನ್ನು ಪರೀಕ್ಷಿಸಲು ಅಯೋಡಿನ್ ಅನ್ನು ಬಳಸಲಾಗುತ್ತದೆ. ಎಲೆಯಿಂದ ಬರುವ ಕ್ಲೋರೊಫಿಲ್ ಅನ್ನು ಆಲೋಹಾಲ್ನಲ್ಲಿ ಕುದಿಸುವ ಮೂಲಕ ತೆಗೆದುಹಾಕಬೇಕು, ನಂತರ ಎರಡು ಹನಿ ಅಯೋಡಿನ್ ಅನ್ನು ಸೇರಿಸಲಾಗುತ್ತದೆ. ಬಣ್ಣವು ನೀಲಿ ಬಣ್ಣಕ್ಕೆ ಬದಲಾದರೆ, ಅದು ಎಲೆಗಳಲ್ಲಿ ಪಿಷ್ಟ ಇರುವಿಕೆಯನ್ನು ಸೂಚಿಸುತ್ತದೆ.

4. ಹಸಿರು ಸಸ್ಯಗಳಲ್ಲಿ ಆಹಾರ ಸಂಶ್ಲೇಷಣೆ ಪ್ರಕ್ರಿಯೆಯ ಸಂಕ್ಷಿಪ್ತ ವಿವರಣೆ ಕೊಡಿ:
ಎಲೆಗಳಲ್ಲಿ ಕ್ಲೋರೊಫಿಲ್ ಇರುತ್ತದೆ. ಸೂರ್ಯನ ಬೆಳಕಿನಲ್ಲಿ ಎಲೆಗಳು ಆಹಾರವನ್ನು ತಯಾರಿಸಲು ಇಂಗಾಲದ ಡೈಆಕ್ಸೆಡ್ ಮತ್ತು ನೀರನ್ನು ಬಳಸುತ್ತವೆ. ಈ ಕ್ರಿಯೆ ಹೀಗಿರುತ್ತದೆ.
“ಸೂರ್ಯನ ಬೆಳಕು ಮತ್ತು ಕ್ಲೋರೊಫಿಲ್ ಉಪಸ್ಥಿತಿಯಲ್ಲಿ ಕಾರ್ಬನ್ ಡೈ ಆಕ್ಸೆಡ್ನ್ನು ನೀರಿನೊಂದಿಗೆ ಸೇರಿಸಿದಾಗ ಕಾರ್ಬೋಹೈಬ್ರೇಟ್ ಅನ್ನು ನೀಡುತ್ತದೆ ಜೊತೆಗೆ ಆಕ್ಸಿಜನ್ನ್ನು ಬಿಡುಗಡೆ ಮಾಡುತ್ತದೆ”.

5. ಸಸ್ಯಗಳು ಆಹಾರದ ಪ್ರಾಥಮಿಕ ಮೂಲಗಳು ಎಂಬುದನ್ನು ರೇಖಾಚಿತ್ರದ ಮೂಲಕ ತೋರಿಸಿ.
ಬಿಟ್ಟ ಸ್ಥಳ ತುಂಬಿ :


ಎ) ತಮ್ಮ ಆಹಾರವನ್ನು ತಾವೇ ಸಂಶ್ಲೇಷಿಸುವುದರಿಂದ ಹಸಿರು ಸಸ್ಯಗಳನ್ನು ಸ್ವಪೋಷಣೆ ಎನ್ನುವರು.
ಬಿ) ಸಸ್ಯಗಳಿಂದ ಸಂಶ್ಲೇಷಿಸಲ್ಪಟ್ಟ ಆಹಾರವು ಪಿಷ್ಟದ ರೂಪದಲ್ಲಿ ಸಂಗ್ರಹವಾಗುವುದು.
ಸಿ) ದ್ಯುತಿ ಸಂಶ್ಲೇಷಣೆಯಲ್ಲಿ ಸೌರಶಕ್ತಿಯನ್ನು ಹಿಡಿದಿಟ್ಟುಕೊಳ್ಳುವ ವರ್ಣಕ ಕ್ಲೋರೋಫಿಲ್
ಡಿ) ಸಸ್ಯಗಳು ದ್ಯುತಿ ಸಂಶ್ಲೇಷಣೆಯಲ್ಲಿ ಕಾರ್ಬನ್ ಡೈ ಆಕ್ಸೆಡ್ ಅನ್ನು ಒಳತೆಗೆದುಕೊಳ್ಳುತ್ತವೆ ಮತ್ತು ಆಕ್ಸಿಜನ್ ಅನ್ನು ಬಿಡುಗಡೆ ಮಾಡುತ್ತವೆ.

ಕೆಳಗಿನವುಗಳನ್ನು ಹೆಸರಿಸಿ,
 
1 ) ತೆಳುವಾದ, ಕೊಳವೆಯಾಕಾರದ ಹಳದಿಬಣ್ಣದ ಕಾಂಡ ಹೊಂದಿರುವ ಪರಾವಲಂಬಿ ಸಸ್ಯ – ಕಸ್ಕ್ಯೂಟ
2 ) ಭಾಗಶಃ ಸ್ವಘೋಷಿತ ಸಸ್ಯ – ಕೀಟಾಹಾರಿ ಸಸ್ಯ
3 ) ಎಲೆಗಳು ಅನಿಲ ವಿನಿಮಯ ನಡೆಸುವ ರಂದ್ರಗಳು, – ಪತ್ರ ರಂದ್ರಗಳು

ಸರಿಯಾದ ಉತ್ತರವನ್ನು ಗುರುತು ಮಾಡಿ

ಎ) ಕಸ್ಕ್ಯೂಟ ಇದಕ್ಕೆ ಉದಾಹರಣೆ, ಪರಾವಲಂಬಿ

ಬಿ) ಕೀಟಗಳನ್ನು ಹಿಡಿಯುವ ಮತ್ತು ತಿನ್ನುವ ಸಸ್ಯ – ಹೂಜಿಗಿಡ
ಹೇಳಿಕೆಗಳು ಸರಿಯಾಗಿದ್ದಲ್ಲಿ ಸರಿ ಎಂದು, ತಪ್ಪಾಗಿದ್ದಲ್ಲಿ ತಪ್ಪು ಎಂದು ಗುರ್ತಿಸಿ.
 
1) ದ್ಯುತಿಸಂಶ್ಲೇಷಣೆ ಯಲ್ಲಿ ಕಾರ್ಬನ್ ಡೈ ಆಕ್ಸೆಡ್ ಬಿಡುಗಡೆಯಾಗುತ್ತದೆ. ತಪ್ಪು
2 ) ತಮ್ಮ ಆಹಾರವನ್ನು ತಾವೇ ಸಂಶ್ಲೇಷಿಸಿಕೊಳ್ಳುವ ಸಸ್ಯಗಳನ್ನು ಕೊಳೆತಿನಿಗಳೆನ್ನುವರು. ತಪ್ಪು
3 ) ದ್ಯುತಿಸಂಶ್ಲೇಷಣೆಯ ಉತ್ಪನ್ನವು ಪ್ರೋಟೀನ್ ಅಲ್ಲ ಸರಿ
4 ) ದ್ಯುತಿಸಂಶ್ಲೇಷಣೆಯಲ್ಲಿ ಸೌರಶಕ್ತಿಯು ರಾಸಾಯನಿಕ ಶಕ್ತಿಯಾಗಿ ಪರಿವರ್ತಿಸಲ್ಪಡುತ್ತದೆ. ಸರಿ

ಕೆಳಗಿನವುಗಳಲ್ಲಿ ಸರಿ ಉತ್ತರ ಆರಿಸಿ :

1.) ದ್ಯುತಿಸಂಶ್ಲೇಷಣೆಗಾಗಿ ವಾತಾವರಣದಿಂದ ಅನ್ನು ಸಸ್ಯದ ಯಾವ ಭಾಗ ಒಳತೆಗೆದುಕೊಳ್ಳುತ್ತದೆ.

(ಎ) ಬೇರುರೋಮ
(ಬಿ) ಪತ್ರ ರಂಧ್ರಗಳು
(ಸಿ) ಎಲೆಯ ಸಿರೆಗಳು
(ಡಿ) ದಳಗಳು

2) ವಾತಾವರಣದಿಂದ ಕಾರ್ಬನ್ ಡೈ ಆಕ್ಸೆಡ್ ಅನ್ನು ಸಸ್ಯಗಳು ಮುಖ್ಯವಾಗಿ ಇವುಗಳ ಮೂಲಕ ಒಳತೆಗೆದುಕೊಳ್ಳುತ್ತವೆ.
1) ಬೇರುಗಳು
2) ಕಾಂಡ
3) ಹೂಗಳು
4) ಎಲೆಗಳು
You Might Like

Post a Comment

0 Comments