Recent Posts

ಕಬಡ್ಡಿ - 7ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

 

I ಪ್ರ.ಸಂ 1. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.                        

1. ಡೇನಿಯಲ್ ಸ್ಟೀಫನ್ ಇವರು 1998 ರಲ್ಲಿ ವಿಶ್ವ ಆಟಗಾರ ಪ್ರಶಸ್ತಿ ಪಡೆದರು.           

2. ಟಾಲಂಟ್ ದ್ಯೂಶೆಬೋವ್ ಇವರು ರಷಿಯಾ ದೇಶದ ಪ್ರಸಿದ್ದ ಹ್ಯಾಂಡ್ಬಾಲ್ ಆಟಗಾರರಾಗಿದ್ದಾರೆ.        

3. ಫ್ರಾನ್ಸ್ ದೇಶದ ಪ್ರಸಿದ್ದ ಹ್ಯಾಂಡಬಾಲ್ ಆಟಗಾರರಾದ ಜಾಕಸನ್ ರಿಚರ್ಡ್‍‍ಸನ್ ಇವರು ----- ರಲ್ಲಿ ಜನಿಸಿದರು.                                            

II ಪ್ರ.ಸಂ 2. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1. ಟಾಲಂಟ್ ದ್ಯುಶೆಬೂವ್ ರವರ ಸಾಧನೆ ಬರೆಯಿರಿ.                        
ಉತ್ತರ :- 1) 1992 ರ ಓಲಿಂಪಿಕ್ ಪಂದ್ಯಾವಳಿಯ ಬಂಗಾರದ ಪದಕ ವಿಜೇತ ತಂಡದ ಸದಸ್ಯರು.             
2) 1993 ರ ವಿಶ್ವಚಾಂಪಿಯನ್ಶಿಪ್ ಸ್ಪರ್ಧೆಯ ಬಂಗಾರದ ಪದಕ ಗೆದ್ದರಷ್ಯಾ ತಂಡದ ಆಟಗಾರರಾಗಿದ್ದರು.  
3)1997 ರ ವಿಶ್ವಚಾಂಪಿಯನ್ಶಿಪ್ ಪಂದ್ಯಾವಳಿಯಲ್ಲಿ 'ಪಂದೈವಳಿಯ ಆಟಗಾರ' ಪ್ರಶಸ್ತಿಯನ್ನು ಪಡೆದಿರುತ್ತಾರೆ ಇತ್ಯಾದಿ.

II 2. ಜಾಕ್ಸನ್ ರಿಚರ್ಡಸನ್ ರವರ ಬಗ್ಗೆ ಬರೆಯಿರಿ.                         
ಉತ್ತರ :- ಜಾಕ್ಸನ್ ರಿಚರ್ಡಸನ್ ಇವರು ಫ್ರಾನ್ಸ್ ದೇಶದ ಆಟಗಾರರು  2004 ರ ಅಥೇನ್ಸ್ ಒಲಿಂಪಿಕ್ಸ್ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಫ್ರಾನ್ಸ್ ಹ್ಯಾಂಡ್ಬಾಲ್ ತಂಡದ ನಾಯಕರಾದ ಇವರು ದೇಶದ ಧ್ವಜವನ್ನು ಹಿಡಿದು ದೇಶದ ತಂಡವನ್ನು ಪ್ರತಿನಿಧಿಸಿದರು. 1994 ಮತ್ತು 1996ರ ಫ್ರೇಂಚ್ ಲೀಗ್ನ ವಿಜೇತರು ಹಾಗೂ 1993 ಮತ್ತು 1995ರ ಫ್ರೇಂಚ್ ಕಪ್ ವಿಜೇತ ತಂಡದ ಸದಸ್ಯರಾಗಿದ್ದರು. ಫ್ರಾನ್ಸ್ ರಾಷ್ಟ್ರೀಯ ಹ್ಯಾಂಡ್ಬಾಲ್ ತಂಡದ ಸದಸ್ಯರಾಗಿ ಇವರು 1995 ಮತ್ತು 2001ರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಪ್ರಥಮಸ್ಥಾನ ದೊರಕಿಸಿಕೊಟ್ಟರು. 1992ರ ಬಾರ್ಸಿಲೋನಾ ಒಲಿಂಪಿಕ್ನಲ್ಲಿ ಕಂಚಿನ ಪದಕ ಪಡೆದರು. 1995ರಲ್ಲಿ ಇವರು ಅಂತಾರಾಷ್ಟ್ರೀಯ ಹ್ಯಾಂಡಬಾಲ್ ಫೆಡರೇಷನ್ನ ವರ್ಷದ ಆಟಗಾರ ಪ್ರಶಸ್ತಿಯನ್ನು ಪಡೆದರು. ಇತ್ಯಾದಿ.

III 3. ಗಿ. ಡೆನಿಯಲ್ ಸ್ಟೀಫನ್ರವರ ಬಗ್ಗೆ ಬರೆಯಿರಿ.                           
ಉತ್ತರ:- ಜರ್ಮನ್ ದೇಶದವರಾದ ಇವರು 1995 ರಿಂದ ಜರ್ಮನ್ ಹ್ಯಾಂಡಬಾಲ್ ತಂಡದ ಸದಸ್ಯರಾಗಿದ್ದರು. 2004 ರಲ್ಲಿ ಯುರೋಪಿಯನ್ ಹ್ಯಾಂಡಬಾಲ್ ಚಾಂಪಿಯನ್ಶಿಪ್ನ ವಿಜೇತ ತಂಡದಸದಸ್ಯರಾಗಿದ್ದರು ಸ್ಟಿಫನ್ ಇವರ 1998 ರಲ್ಲಿ 'ವಿಶ್ವ ವರ್ಷದ ಆಟಗಾರ' ರಾಗಿಯೂ, 1997-99ರವರೆಗೆ 'ಜರ್ಮನ್ ವರ್ಷದ ಆಟಗಾರ' ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು.

IV 4. ರಾಜ್ಯಮಟ್ಟದಲ್ಲಿ ನಡೆಯುವ ಹ್ಯಾಂಡಬಾಲ್ ಪಂದ್ಯಾವಳಿಗಳು ಯಾವುವು?              
 ಉತ್ತರ:- ರಾಜ್ಯ ಮಟ್ಟದಲ್ಲಿ ನಡೆಯುವ ಹ್ಯಾಂಡಬಾಲ್ ಪಂದ್ಯಾವಳಿಗಳೆಂದರೆ ;                     
1) 12 ವರ್ಷ ವಯೋಮಿತಿಗೆ ಒಳಪಟ್ಟ ಬಾಲಕ, ಬಾಲಕಿಯರ ಪಂದ್ಯಾಟಗಳು                     
2) 15 ವರ್ಷ ವಯೋಮಿತಿಗೆ ಒಳಪಟ್ಟ ಬಾಲಕ, ಬಾಲಕಿಯರ ಪಂದ್ಯಾಟಗಳು                    
3) 19 ವರ್ಷ ವಯೋಮಿತಿಗೆ ಒಳಪಟ್ಟ ಬಾಲಕ, ಬಾಲಕಿಯರ ಪಂದ್ಯಾಟಗಳು                     
4) ಪುರುಷರಿಗಾಗಿ ಅಸೋಷಿಯೇಶನ್ ಕಪ್. ಇತ್ಯಾದಿ.  

5. ರಾಷ್ಟ್ರಮಟ್ಟದಲ್ಲಿ ನಡೆಯುವ ಹ್ಯಾಂಡಬಾಲ್ ಪಂದ್ಯಾವಳಿಗಳು ಯಾವುವು?  
ಉತ್ತರ :- 1) ಸೀನಿಯರ್ ನ್ಯಾಷನಲ್ ಚಾಂಪಿಯನ್ಶಿಪ್.
2) ಫೆಡರೇಷನ್ ಕಪ್                          
3) ಅಂತರ ವಲಯ (ಇಂಟರ್ ಝೋನಲ್) ಚಾಂಪಿಯನ್ಶಿಪ್ ಇತ್ಯಾದಿ.

6. ಯಾವುದಾದರೂ ನಾಲ್ಕು ಅಂತರರಾಷ್ಟ್ರೀಯ ಮಟ್ಟದ ಹ್ಯಾಂಡಬಾಲ್ ಸ್ಪರ್ಧೆಗಳನ್ನು ಹೆಸರಿಸಿರಿ.  
ಉತ್ತರ :-1) ಸಾರ್ಕ್ ದೇಶಗಳ ಪಂದ್ಯಾವಳಿ.
2) ಕಾಮನ್ವೆಲ್ತ್ ಚಾಂಪಿಯನ್ಶಿಪ್                     
3) ಏಷ್ಯನ್ ಚಾಂಪಿಯನ್ಶಿಪ್   
4) ಏಷ್ಯನ್ ಗೇಮ್ಸ್                              
5) ಜೂನಿಯರ್ ಮತ್ತು ಸೀನಿಯರ್ ಪುರುಷ ಮತ್ತು ಮಹಿಳೆಯರ ವಿಶ್ವಕಪ್ ಪಂದ್ಯಾವಳಿ ಇತ್ಯಾದಿ.

You Might Like

Post a Comment

0 Comments