Recent Posts

ಚಕ್ರ ಎಸೆತ - 7ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

 

ಪ್ರ.ಸಂ 1. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

1. ಮಹಿಳೆಯರು ಉಪಯೋಗಿಸುವ ಚಕ್ರದ ತೂಕ 1.000 ಕಿ.ಗ್ರಾಂ

2. ಚಕ್ರದ ಅಂಚನ್ನು ಲೋಹ ದಿಂದ ಮಾಡಿರುತ್ತಾರೆ.

3. ಎಕ್ಸ್ಟೆನ್ಷನ್ ಲೈನ್ 75 ಸೆಂ.ಮೀ ಇರುತ್ತದೆ.

ಪ್ರ.ಸಂ 2. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1. ಚಕ್ರ ಎಸೆತದ ವೃತ್ತದ ವ್ಯಾಸವನ್ನು ತಿಳಿಸಿ.
ಉತ್ತರ :- 2.50 ಮೀ

2. ಚಕ್ರ ಎಸೆತದ ಸ್ಪರ್ಧೆಯಲ್ಲಿ ಎಸೆತದ ಸೆಕ್ಟರ್ ಎಂದರೇನು ?
ಉತ್ತರ :- ಎಸೆತದ ಸೆಕ್ಟರ್ನೊಳಗಿರುವ ಜಾಗ, ಎಸೆತದ ಉಪಕರಣದಿಂದಾದ ಗುರುತುಗಳು ಸುಲಭವಾಗಿ ಮಾಡುವಂತಿರುವ ಸಿಂಡರ್, ಮಣ್ಣು, ಹುಲ್ಲು ಅಥವಾ ಬೇರಾವುದೇ ಸೂಕ್ತ ವಸ್ತುಗಳಿಂದ ಮಾಡಿರಬೇಕು ಇದನ್ನು ಎಸೆತದ ಸೆಕ್ಟರ್ ಎನ್ನುವರು.  

3. ಚಕ್ರ ಎಸೆತದ ಸ್ಪರ್ಧೆಯಲ್ಲಿ ಪುರುಷರು ಉಪಯೋಗಿಸುವ ಚಕ್ರದ ತೂಕವೆಷ್ಟು ?
ಉತ್ತರ :-2.000 ಕಿ.ಗ್ರಾಂ

4. ಯುರ್ಗನ್ ಶುಲ್ಟ್ ಎಲ್ಲಿ ಜನಿಸಿದರು ?
ಉತ್ತರ :-  ಯುರ್ಗನ್ ಶುಲ್ಟ್ ರವರು ಅಮ್ಟ್ ನ್ಯೂ ಹೌಸ್, ಲೋವರ್ ಸೆಕ್ಸ್ಯಾನಿಯಲ್ಲಿ ಜನಿಸಿದರು.

ಪ್ರ.ಸಂ 3. ಈ ಕೆಳಗಿನ ಪ್ರಶ್ನೆಗಳಿಗೆ 3-4 ವಾಕ್ಯಗಳಲ್ಲಿ ಉತ್ತರಿಸಿ.

1. ಚಕ್ರ ಎಸೆತದ ಸ್ಪರ್ಧೆಯ ಯಾವುದಾದರೂ ಎರಡು ನಿಯಮ ಉಲ್ಲಂಘನೆಗಳನ್ನು ತಿಳಿಸಿರಿ.
ಉತ್ತರ :- 1. ಸ್ಪರ್ಧಿಯು ತನ್ನ ಯತ್ನವನ್ನು ತೆಗೆದುಕೊಳ್ಳಲು ವೃತ್ತದೊಳಗೆ ಬಂದ ನಂತರ ಸ್ಥಿರ ಸ್ಥಿತಿಯಿಂದ ಎಸೆಯಲು ಪ್ರಾರಂಭಿಸಿದಾಗ ಅಥವಾ ಎಸೆಯುವಾಗ, ವೃತ್ತದ ಹೊರಗಿರುವ ಜಾಗವನ್ನಾಗಲಿ, ಕಬ್ಬಿಣದ ಪಟ್ಟಿಯ ಮೇಲ್ಭಾಗವನ್ನಾಗಲಿ ಆರೀರದ ಯಾವುದೇ ಭಾಗದಿಂದ ಮುಟ್ಟಿದರೆ ಅದು ತಪ್ಪು.  
2. ಚಕ್ರದ ತುದಿಯ ಮೊದಲ ಗುರುತು ಸೆಕ್ಟರಿನ ಗೆರೆಗಳ ಒಳಗೆ ಬೀಳಬೇಕು. ಸೆಕ್ಟರಿನ ಗೆರೆಗಳ ಮೇಲೆ ಅಥವಾ ಹೊರಗೆ ಮೊದಲು ಗುರುತು ಮೂಡಿದರೆ ಅದನ್ನು ತಪ್ಪು ಎಸೆತವೆಂದು ಪರಿಗಣಿಸಲಾಗುವುದು.

2. ಚಕ್ರ ಎಸೆತದ ಲ್ಯಾಂಡಿಂಗ್ ಸೆಕ್ಟರ್ ಎಂದರೇನು ?
ಉತ್ತರ :-ಚಕ್ರ ಎಸೆತದ ವೃತ್ತ ಅಥವಾ ಚಕ್ರವನ್ನು ಎಸೆಯುವಾಗ ನಿಲ್ಲುವ ವೃತ್ತದೊಳಗಿನ ಸ್ಥಳವನ್ನು ಚಕ್ರ ಎಸೆತದ ಲ್ಯಾಂಡಿಂಗ್ ಸೆಕ್ಟರ್ ಎನ್ನುವರು.

3. ಚಕ್ರ ಎಸೆತದ ಅಂಕಣವನ್ನು ಬರೆದು ಭಾಗಗಳನ್ನು ಗುರುತಿಸಿ. ಎಸೆತದ ಸೆಕ್ಟರ್ ಚಕ್ರ ಎಸೆತದ ದಾಖಲೆ ಇವತ್ತಿಗೂ ಯಾರ ಹೆಸರಿನಲ್ಲಿದೆ. ಮತ್ತು ಎಸೆತದ ದೂರವನ್ನು ತಿಳಿಸಿ.
ಉತ್ತರ :- ಯುರ್ಗನ್ ಶುಲ್ಟ್ ರವರ ಹೆಸರಿನಲ್ಲಿದೆ. ಇವರ ಚಕ್ರ ಎಸೆತದ ದಾಖಲೆಯ ದೂರ - 74.08 ಮೀ.
 

You Might Like

Post a Comment

0 Comments