I. ಬಿಟ್ಟ ಸ್ಥಳಗಳನ್ನು ಸೂಕ್ತಪದಗಳಿಂದ ತುಂಬಿರಿ.
1. ಜ್ಯೂನಿಯರ್ ಬಾಲಕರ ಖೋ-ಖೋ ಅಂಕಣದ ಉದ್ದ 29 ಮತ್ತು ಅಗಲ 16 ಮೀಟರ್ ಗಳು
2. ಖೋ-ಖೋ ಆಟವು ಮಹಾರಾಷ್ಟ್ರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿತು.
3. ಖೋ-ಖೋ ಆಟದ ನಿಯಮಗಳು ಪ್ರಥಮವಾಗಿ 1957 ರಲ್ಲಿ ಜಾರಿಗೆ ಬಂದಿತು
4. ಖೋ-ಖೋ ಕಂಬದ ಎತ್ತರ 120 ಸೆಂ.ಮೀ. ನಿಂದ 125 ಸೆಂ.ಮೀ.
II. ಖಾಲಿ ಬಿಟ್ಟಿರುವ ಸ್ಥಳಗಳನ್ನು ನೀಡಿರುವ ಆಯ್ಕೆಗಳಲ್ಲಿ ಸರಿಯಾದುದನ್ನು ಆರಿಸಿ ಬರೆಯಿರಿ.
1. ಖೋ-ಖೋ ಎಂಬ ಪದವು ಸ್ಯೂ ಎಂಬ ದಾತುವಿನಿಂದ ಬಂದಿದೆ.
1) ಪ್ಯೂ 2) ಸ್ಯೂ 3) ಕ್ಯೂ 4) ಚ್ಯೂ
2. ಅಖಿಲ ಬಾರತ ಖೋ-ಖೋ ಫೆಡರೇಷನ್ 1957 ರಲ್ಲಿ ಅಸ್ಥಿತ್ವಕ್ಕೆ ಬಂದಿತು.
1) 1967 2) 1977 3) 1957 4) 1987
3. 1960ರ ಬರ್ಲಿನ್ ಒಲಿಂಪಿಕ್ಸ್ನಲ್ಲಿ ಈ ಆಟವನ್ನು ಪ್ರದರ್ಶಿಸಲಾಯಿತು.
1) ಬರ್ಲಿನ್ 2) ಜರ್ಮನಿ 3) ಅಥೆನ್ಸ್ 4) ಚೀನಾ
III. 'ಅ' ಪಟ್ಟಿಯೊಂದಿಗೆ 'ಬ'ಪಟ್ಟಿಯನ್ನು ಹೊಂದಿಸಿ ಬರೆಯಿರಿ.
IV. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
1. ಕೆ.ಕೆ.ಎಫ್.ಐ. ಇದನ್ನು ವಿಸ್ತರಿಸಿ ?
ಉತ್ತರ :- ಖೋ-ಖೋ ಫೆಡರೇಷನ್ ಆಫ್ ಇಂಡಿಯಾ
2. ಪ್ರಥಮ ಬಾರಿಗೆ ಖೋ-ಖೋ ನಿಯಮವನ್ನು ರಚಿಸಿದ ಸಂಸ್ಥೆ ಯಾವುದು?
ಉತ್ತರ :- ಡೆಕನ್ ಜಿಮ್ಖಾನ ಸಂಸ್ಥೆ ಪ್ರಥಮವಾಗಿ ಖೋ-ಖೋ ಆಟಕ್ಕೆ ನಿಯಮಗಳನ್ನು ರಚಿಸಿತು.
3. ಖೋ-ಖೋ ಆಟದ ಪಂದ್ಯವೊಂದರಲ್ಲಿ ಎಷ್ಟು ಇನಿಂಗ್ಸ್ ಇರುತ್ತದೆ.
ಉತ್ತರ : ಖೋ-ಖೋ ಆಟದ ಒಂದು ಪಂದ್ಯದಲ್ಲಿ ಒಟ್ಟು 2 ಇನಿಂಗ್ಸ್ಗಳಿರುತ್ತವೆ.
4. ಖೋ-ಖೋ ತಂಡದಲ್ಲಿ ಒಟ್ಟು ಎಷ್ಟು ಜನ ಆಟಗಾರರಿರುತ್ತಾರೆ?
ಉತ್ತರ:- ಖೋ-ಖೋ ಆಟದ ಒಂದು ತಂಡದಲ್ಲಿ ಒಟ್ಟು 12 ಜನ ಆಟಗಾರರಿರುತ್ತಾರೆ. 9 ಜನ ಅಂಕಣ ಆಟಗಾರರು, 3 ಜನ ಬದಲಿ ಆಟಗಾರರು.
5. 'ಹಿಮ್ಮೆಟ್ಟುವಿಕೆ' ಎಂದರೇನು?
ಉತ್ತರ:-
ಸಕ್ರಿಯ ಬೆನ್ನಟ್ಟುಗಾರರನು ನಿರ್ದಿಷ್ಟ ದಿಕ್ಕಿಗೆ ಓಡುತ್ತಿರುವಾಗ ಈಗಾಗಲೇ ಆಕ್ರಮಿಸಿದ
ಪ್ರದೇಶಕ್ಕಿಂತ ಹಿಂದೆ ಸರಿದರೆ ಅಥವಾ ಭುಜರೇಖೆಯ ದಿಕ್ಕನ್ನು ಬದಲಿಸಿದರೆ ಅದನ್ನು
ಹಿಮ್ಮೆಟ್ಟುವಿಕೆ ಎನ್ನುತ್ತಾರೆ.
0 Comments