Recent Posts

ವೈಯಕ್ತಿಕ ಸುರಕ್ಷತೆ - 6ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

 

I. ಬಿಟ್ಟ ಸ್ಥಳವನ್ನು ಸೂಕ್ತ ಉತ್ತರಗಳಿಂದ ತುಂಬಿರಿ:

1. ರಸ್ತೆಯನ್ನು ದಾಟುವಾಗ    ಜೀಬ್ರಾ  ಪಟ್ಟಿಯಲ್ಲಿಯೇ ದಾಟಬೇಕು ? 

2. ವಾಹನ ಸವಾರರು ಮುಂದಿನ ವಾಹನ ಹಿಂದೆ ಹಾಕುವಾಗ ಬಲ  ಬದಿಯಿಂದಲೇ ಹಿಂದೆ ಹಾಕಬೇಕು

3. ಅತ್ಯಂತ ಗಟ್ಟಿಯಾದ ಮತ್ತು   ಕಲ್ಲು   ಗಳಿಂದ ಕೂಡಿದ ಮೈದಾನದಲ್ಲಿ ಬರಿಗಾಲಿನಿಂದ ಆಡಬಾರದು.

4. ಮಕ್ಕಳು   ಶಿಕ್ಷಕರ   ಮೇಲ್ವಿಚಾರಣೆಯಲ್ಲಿಯೇ ಆಡಬೇಕು.

II. ಈ ಕೆಳಗಿನ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.

1. ನಾವು ರಸ್ತೆಯನ್ನು ದಾಟುವಾಗ   ಪಾದಾಚಾರಿಗಳಿಗೆ   ಮೀಸಲಾಗಿರುವ ರಸ್ತೆಯಲ್ಲಿಯೇ ನಡೆಯಬೇಕು.
1) ವಾಹನಗಳಿಗೆ        2) ಪ್ರಾಣಿಗಳಿಗೆ    3) ದ್ವಿಚಕ್ರವಾಹನಗಳಿಗೆ        4) ಪಾದಾಚಾರಿಗಳಿಗೆ

2. ನೀರು ನಿಂತ ಮೈದಾನದಲ್ಲಿ ಆಡಬೇಕಾದ ಪೂರ್ವದಲ್ಲಿ ಮರಳು ಅಥವಾ  ಮರದ ಹೊಟ್ಟು ಹಾಕಿ ಆಡಬೇಕು.
1) ಕಲ್ಲಿನ ಪುಡಿ        2) ಸಿಮೆಂಟ್        3) ಮರದ ತೊಗಟೆ,    4) ಮರದ ಹೊಟ್ಟು

3. ಅಪಾಯಗಳನ್ನು ತಪ್ಪಿಸಲು ಪಾಲಕರು ಸದಾ ಜಾಗರೂಕರಾಗಿ ಇರಬೇಕು
1) ವಿಚಲಿತ        2) ಜಾಗರೂಕ    3) ಅಜಾಗರೂಕ    4) ನಿಶ್ಚಿಂತ

III. 'ಅ' ಪಟ್ಟಿಯೊಂದಿಗೆ 'ಬ'ಪಟ್ಟಿಯನ್ನು ಹೊಂದಿಸಿ ಬರೆಯಿರಿ.

 

IV. ಈ ಕೆಳಕಂಡ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.                     

1. ವೈಯಕ್ತಿಕ ಸುರಕ್ಷತೆ ಎಂದರೇನು?
ಉತ್ತರ :- ಅಪಘಾತಗಳಿಂದ ತಪ್ಪಿಸಿಕೊಳ್ಳಲು ವ್ಯಕ್ತಿಯು ತೆಗೆದುಕೊಳ್ಳುವ ಮುಂಜಾಗ್ರತಾ ಕ್ರಮಗಳಿಗೆ ವೈಯಕ್ತಿಕ ಸುರಕ್ಷತೆ ಎನ್ನಬಹುದು.

2. ರಸ್ತೆಯಲ್ಲಿ ನಾವು ತೆಗೆದುಕೊಳ್ಳಬೇಕಾದ ಯಾವುದಾದರೂ ಒಂದು ಸುರಕ್ಷತಾ ಕ್ರಮವನ್ನು ತಿಳಿಸಿ?
ಉತ್ತರ :- ರಸ್ತೆಯಲ್ಲಿ ನಡೆಯುವಾಗ ಪಾದಾಚಾರಿಗಳಿಗೆ ಮೀಸಲಾಗಿರುವ ರಸ್ತೆಯಲ್ಲಿಯೇ ನಡೆಯಬೇಕು. ರಸ್ತೆಯಲ್ಲಿ ಹಾಕಿರುವ ಸೂಚನಾ ಪಲಕಗಳನ್ನು ಗಮನಿಸಬೇಕು.

3. ಅಪಾಯಗಳು ಹೇಗೆ ಸಂಭವಿಸುತ್ತವೆ?
ಉತ್ತರ :- ಅಪಘಾತಗಳು ಆಕಸ್ಮಿಕವಾಗಿ ಸಂಭವಿಸುವ ಘಟನೆಗಳಾಗಿವೆ. ಇದರಿಂದ ಜೀವಹಾನಿಯಾಗಬಹುದು. ಅಥವಾ ಶರೀರಕ್ಕೆ ಹಾನಿಯಾಗಿ ಸರಿಪಡಿಸಲಾಗದಂತಹ ನಷ್ಟ ಸಂಭವಿಸಬಹುದು.
 

You Might Like

Post a Comment

0 Comments