Recent Posts

ಅಭಿಮನ್ಯುವಿನ ಪರಾಕ್ರಮ - ೭ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 
 ಅಭಿಮನ್ಯುವಿನ ಪರಾಕ್ರಮ

ಅ . ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.

1 . ಧರ್ಮರಾಯನಿಗೆ ನಮಸ್ಕರಿಸಿದ ಅಭಿಮನ್ಯು ಹೇಳುವುದೇನು ?
 ಉತ್ತರ:  ಅಭಿಮನ್ಯು ಬಂದು ಧರ್ಮರಾಯನಿಗೆ ನಮಸ್ಕರಿಸಿ ,ನನ್ನನ್ನು ಯುದ್ಧಕ್ಕೆ ಕಳುಹಿಸು ದೊಡ್ಡಪ್ಪ, ಪದ್ಮವ್ಯೂಹದೊಳಗೆ ಹೋಗಲು ನನಗೆ ಗೊತ್ತು , ಶತ್ರುಗಳನ್ನೆಲ್ಲಾ ಯಮಪುರಿಗೆ ಯುದ್ಧಕ್ಕೆ ಕಳುಹಿಸು ಯುದ್ಧವನ್ನು ಗೆದ್ದು ಬರುತ್ತೇನೆ ಎಂದು ಹೇಳುತ್ತಾನೆ.

2 . ಅಭಿಮನ್ಯುವಿನ ಮಾತನ್ನು ಧರ್ಮರಾಯ ಏನು ಹೇಳುತ್ತಾನೆ ?
ಉತ್ತರ : ಅಭಿಮನ್ಯುವಿನ ಮಾತನ್ನು ನಗುತ್ತಾ ಅಭಿಮನ್ಯುನನ್ನು ಕೇಳಿದ  ಅಭಿಮನ್ಯುವನ್ನು ಧರ್ಮರಾಯನು ಪ್ರೀತಿಯಿಂದ ಬಿಗಿದಪ್ಪಿ ಕಂದಾ , ನೀನಿನ್ನೂ ಚಿಕ್ಕವನು , ನಿನಗೆ ಪೌರುಪವುಂಟು ಆದರೆ , ಶತ್ರು ಸೈನ್ಯದಲ್ಲಿರುವವರು ಅಸಮಬಲರು , ಯುದ್ಧದಲ್ಲಿ ಅತಿರಥ ಮಹಾರಥರು , ಅವರನ್ನು ನೀನು ಹೇಗೆ ಎದುರಿಸುತ್ತೀಯಾ ಎಂದು ಕೇಳುತ್ತಾನೆ .

3 . ಧರ್ಮರಾಯನ ಮಾತಿಗೆ ಅಭಿಮನ್ಯು ಕೊಡುವ ಉತ್ತರವೇನು ?
ಉತ್ತರ : ಧರ್ಮರಾಯನ ಮಾತಿಗೆ ಅಭಿಮನ್ಯುವು ಅವರೆಲ್ಲಾ ಮೃಗಜಲದಂತೆ, ಅದರಲ್ಲಿ ದೋಣಿಯನ್ನು ನಡೆಸಲು ಸಾಧ್ಯವೇ , ಲೆಪ್ಪದುರುಗನ ಹಿಡಿಯಲು ಗರುಡ ಮಂತ್ರ ಬೇಕೆ , ಮೋಸದ ಆಲೋಚನೆಯಿಂದ ಮಾಡಿದ ಈ ವ್ಯೂಹಕ್ಕೆ ನಾನು ಒಮ್ಮೆ ಕಳುಹಿಸಿ ನೋಡು , ನಾನು ಯುದ್ಧವನ್ನು ಗೆದ್ದು ಬರುತ್ತೇನೆ ಎಂದನು .
 
ಆ . ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದ ಪ್ರಶ್ನೆ.

1 . ಲೆಪ್ಪದುರುಗನ ಹಿಡಿಯಲೇತಕೆ ಗರುಡಮಂತ್ರವು ಎಂದರೇನು ?
 ಉತ್ತರ : ಎರಕದಿಂದ ಮಾಡಿದ ಹಾವನ್ನು ಹಿಡಿಯಲು ಗರುಡ ಮಂತ್ರದ ಅವಶ್ಯಕತೆ ಇದೆಯೇ ? ಎಣದರ್ಥ.

2 . ನಿಮ್ಮ ಆಲಿಗಳಿಗೆ ಏನು ಇಕ್ಕುವೆ ಎಂದು ಅಭಿಮನ್ಯು ಹೇಳುತ್ತಾನೆ ?
ಉತ್ತರ : ನಿಮ್ಮ ಕಣ್ಣುಗಳಿಗೆ ಶತ್ರುಗಳನ್ನು ಸಾಯಿಸಿ ಔತಣವನ್ನು ನೀಡುವೆ ಎಂದು ಅಭಿಮನ್ಯುವು ಹೇಳುತ್ತಾನೆ .

3 . ವೈರಿವ್ಯೂಹದೊಳಗೆ ಇರುವ ವೀರರು ಯಾರು ?
ಉತ್ತರ : ವೈರಿವ್ಯೂಹದೊಳಗೆ ಕೃಪ , ಗುರುನಂದನನಾದ ಅಶ್ವತ್ಥಾಮ ,ಕರ್ಣ , ಭೂರಿಶ್ರವ ಮತ್ತು ಜಯದ್ರಥರು ಇರುವರು .

ಇ , ಕೆಳಗಿನ ವಾಕ್ಯಗಳನ್ನು ಯಾರು , ಯಾರಿಗೆ ಹೇಳಿದರು ತಿಳಿಸಿ,

1 . ಶಿಶುವು ನೀನೆಲೆ ಮಗನೆ ಕಾದುವರಸಮಬಲರು ಕಣ
ಉತ್ತರ : ಈ ಮಾತನ್ನು ಧರ್ಮರಾಯನು ಅಭಿಮನ್ಯು ಹೇಳಿದನು .

2 . ಕೊಡನ ಮಗನ ಕುಮಂತ್ರದೊಡ್ಡಿನ ಕಡಿತಕಾನಂಜುವೆನೆ ?
ಉತ್ತರ : ಈ ಮಾತನ್ನು ಅಭಿಮನ್ಯು ಧರ್ಮರಾಯನಿಗೆ ಹೇಳಿದನು .

3 . ನೀಗೆಲುವಂದವೆಂತ್ರ್ಯ ಸಮರವಿದು ಸಾಮಾನ್ಯವಲ್ಲೆಂದ .
ಉತ್ತರ :  ಈ ಮಾತನ್ನು ಧರ್ಮರಾಯನು ಅಭಿಮನ್ಯುವಿಗೆ ಹೇಳಿದನು .

4 . ಬಾಲನಿವನೆನ್ನದಿರು ದುಗುಡವ ತಾಳಲಾಗದು ಬೊಪ್ಪ
ಉತ್ತರ : ಈ ಮಾತನ್ನು ಅಭಿಮನ್ಯುವು ಧರ್ಮರಾಯನಿಗೆ ಹೇಳಿದನು .

ಈ ‘ ಅ ‘ ಪಟ್ಟಿಯಲ್ಲಿನ ಪದಗಳಿಗೆ ‘ ಆ ‘ ಪಟ್ಟಿಯಲ್ಲಿ ಅರ್ಥ ನೀಡಲಾಗಿದೆ . ಪಟ್ಟಿಗಳ ಪದಗಳನ್ನು ಹೊಂದಿಸಿ ಬರೆಯಿರಿ :

 ಅ ಪಟ್ಟಿ                ಆ ಪಟ್ಟಿ
೧. ಅದಟು              ಅಪ್ಪಣೆ
೨. ಸೈರಿಸಲಾಪೆ       ನಾಶಮಾಡು
೩. ಅಮ್ಮೆನು           ಪರಾಕ್ರಮ
೪. ಅಸದಳ             ಸಾಧ್ಯವಾಗುವುದಿಲ್ಲ
೫. ಖಂಡಿಗೆಳೆ          ಅಸಾಧ್ಯ
೬. ನೇಮ                ತಡೆದುಕೊಳ್ಳಲು ಸಾಧ್ಯ

ಉತ್ತರ : 
ಪರಾಕ್ರಮ
ತಡೆದುಕೊಳ್ಳಲು ಸಾಧ್ಯ
ಸಾಧ್ಯವಾಗುವುದಿಲ್ಲ
ಅಸಾಧ್ಯ
ನಾಶಮಾಡು
ಅಪ್ಪಣೆ
 
ಉ . ಈ ಕಾವ್ಯವನ್ನು  ಹಾಸಗನ್ನಡಕೆ ಪರಿವರ್ತಿಸಿ , ಭಾಷೆಯಲ್ಲಾದ ಬದಲಾವಣೆಗಳನ್ನು ಗುರುತಿಸಿ :
( ಅಭಿಮನ್ಯು ) ಜನಪನ ಅಂಫ್ರಿಗೆ ಮಣಿದು , ಕೈ ಮುಗಿದು , ” ಬೆಸ ಬೊಪ್ಪ , ಮಹಾ ಆಹವದ ಒಳಗೆ ಪದ್ಮವ್ಯೂಹ ಭೇದನವ ತಾ ಬಲ್ಲೆನು , ಅನುವರವ ಗೆಲುವೆನು , ಅಹಿತರನು ಕೃತಾಂತನ ಮನೆಗೆ ಕಳುಹುವೆನು , ನೀನ್ ಇನಿತುಚಿಂತಿಸಲೇಕೆ ಕಾಳಗಕೆ ಎನ್ನ ಕಳುಹು ” ಎಂದ .ಅಭಿಮನ್ಯುವು ಧರ್ಮರಾಯನ ಪಾದಕ್ಕೆ ನಮಸ್ಕರಿಸಿ , ಕೈ ಮುಗಿದು , “ ನನಗೆ ಅಪ್ಪಣೆ ಮಾಡಿ ದೊಡ್ಡಪ್ಪ , ಈ ಯುದ್ಧದ ಪದ್ಮವ್ಯೂಹವನ್ನು ಭೇದಿಸುವುದು ನನಗೆ ತಿಳಿದಿದೆ , ಯುದ್ಧವನ್ನು ಗೆಲ್ಲುವೆನು , ಶತ್ರುಗಳನ್ನು ಯಮನ ಮನೆಗೆ ಕಳಿಸುವೆನು , ನೀನು ಚಿಂತಿಸಬೇಡ , ನನ್ನನ್ನು ಯುದ್ಧಕ್ಕೆ ಕಳುಹಿಸು ಎಂದನು .

ಭಾಷಾ ಚಟುವಟಿಕೆ

1.ವಿಪಯವನ್ನು ಮನಸ್ಸಿಗೆ ನಾಟುವಂತೆ ಮಾಡಲು ಅದೇ ರೀತಿಯ ಮತ್ತೊಂದು ವಿಷಯದ ಮೂಲಕ ಹೇ ರೂಪಕ ಎನ್ನುತ್ತಾರೆ . ಅಭಿಮನ್ಯು ಧರ್ಮ ಪರಾಕ್ರಮ ಸಾಹಸಗಳನ್ನು ತಿಳಿಸಲು ಬಳಸುವ ರೂಪಕಗಳನ್ನು ಕೆಳಗೆ ನೀಡಲಾಗಿದೆ.ಇವುಗಳನ್ನುಅರ್ಥಮಾಡಿಕೊಂಡು ವಿವರಿಸಿರಿ.


1 . ಮರೀಚಿಯ ತೊರೆಗೆ ಹರುಗೋಲಿಡುವರುಂಟೇ
ಉತ್ತರ : ಮೃಗಜಲದ ಅಥವಾ ಮರೀಚಿಕೆಯ ನದಿಯಲ್ಲಿ ದೋಣಿಯನ್ನು ನಡೆಸಲು ಸಾಧ್ಯವೇ ?.

2 . ಲೆಪ್ಪದುರುಗನ ಹಿಡಿಯಲೇತಕೆ ಗರುಡಮಂತ್ರವು
ಉತ್ತರ : ಲೋಹದ ( ಎರಕದ ) ಹಾವನ್ನು ಹಿಡಿಯಲು ಗರುಡ ಮಂತ್ರವು ಏಕೆ ?

3 . ಗಾಳಿಬೆವರುವುದುಂಟೆ
ಉತ್ತರ : ಗಾಳಿ ಬೆವರುವುದುಂಟೆ

4 . ವಗ್ನಿಜ್ವಾಲೆ ಹಿಮಕಂಜುವುದೆ
 ಉತ್ತರ : ಅಗ್ನಿಜ್ವಾಲೆ ( ಹಿಮ ) ಮಂಜಿಗೆ ಹೆದರುವುದೆ ?

5 . ಮಂಜಿನ ಮೇಲುಗಾಳಗವುಂಟೆ ಲುಬೇಸಗೆಯ ಬಿಸಿಲೊಳಗೆ
ಉತ್ತರ : ಕಡು ಬೇಸಿಗೆಯ ಬಿಸಿಲೊಳಗೆ ಮಂಜಿನ ಸ್ಪರ್ಧಾತ್ಮಕವಾದ ಯುದ್ಧ ನಡೆಯುವುದುಂಟೆ ? ಭೇದನ ಅನುವರ ಕೃತಿ ತಾಂತ ಅಹಿತುರ : ಕಾಳಗ ಛಂದಸ್ಸು ಅಭ್ಯಾಸ


You Might Like

Post a Comment

0 Comments