Recent Posts

ವಾಲಿಬಾಲ್ - 7ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

 

ಪ್ರ ಸಂ 1. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.                    

1. ಎಮ್ ಶ್ಯಾಂಸುಂದರ್ರಾವ್ ಇವರು ಆಂದ್ರ ಪ್ರದೇಶ ರಾಜ್ಯದವರು.

2. ಎ.ರಮಣಾರಾವ್ ಇವರಿಗೆ ಭಾರತ ಸರ್ಕಾರವು 1978 ರಲ್ಲಿ ಅರ್ಜುನ್ ಪ್ರಶಸ್ತಿ ನೀಡಿ ಗೌರವಿಸಿದೆ.

3. 1990 ರಲ್ಲಿ ಎ.ರಮಣಾರಾವ್ ಇವರಿಗೆ ದ್ರೋಣಾಚಾರ್ಯ ಪ್ರಶಸ್ತಿ ದೊರಕಿರುತ್ತದೆ. 

4. ಕೇರಳದವರಾದ ಜಿಮ್ಮಿ ಜಾರ್ಜ್ ಇವರು ಇಟಲಿ ದೇಶದ ಖಾಸಗಿ ತಂಡದ ಪರವಾಗಿ ವಾಲಿಬಾಲ್ ಆಡಿರುತ್ತಾರೆ.

5. ವಿಶ್ವದ ಶ್ರೇಷ್ಠ ಆಟಗಾರ್ತಿಗಳಲ್ಲಿ ಕ್ಯೂಬಾ ದೇಶದ ಆಟಗಾರ್ತಿಯ ಹೆಸರು ಯಮಿಲ್ಕಾ ರೂಯಿಝ್.

ಪ್ರ.ಸಂ 2. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.

1. ಎಂ. ಶಾಂಸುಂದರ್ ರಾವ್ ರವರಿಗೆ ನೀಡಿರುವ ಪ್ರಶಸ್ತಿಗಳು ಯಾವುವು?
ಉತ್ತರ :-  1978 ರಲ್ಲಿ ಅರ್ಜುನ್ ಪ್ರಶಸ್ತಿಮತ್ತು1990 ರಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ದೊರಕಿರುತ್ತದೆ

2.    ಚಾರ್ಲ್ಸ್‍‍ಕಿರಲಿ ಇವರು ಪಡೆದಿರುವ ಪದಕಗಳ ಪಟ್ಟಿ ಮಾಡಿ.
ಉತ್ತರ :-1. 1984 ರಲ್ಲಿ ಲಾಸ್ ಎಂಜಲಿಸ್ನಲ್ಲಿ ನಡೆದ ಓಲಿಂಪಿಕ್ನಲ್ಲಿ ಚಿನ್ನದ ಪದಕ.
              2. 1985 ರಲ್ಲಿ ಜಪಾನಿನ ಟೋಕಿಯೋದಲ್ಲಿ ನಡೆದ ವಿಶ್ವಕಪ್ ಟೈಟಲ್.
              3. 1986ರಲ್ಲಿ ಪ್ಯಾರಿಸ್ನಲ್ಲಿ ನಡೆದ ವಿಶ್ವಚಾಂಪಿಯನ್ಶಿಪ್ ಟೈಟಲ್
              4. 1988 ರಲ್ಲಿ ಸಿಯೋಲ್ನಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಮತ್ತು
              5. 1996 ರಲ್ಲಿ ಅಂತರರಾಷ್ಟ್ರೀಯ ವಾಲಿಬಾಲ್ ಸಂಸ್ಥೆಯ ಬೀಚ್ ವಾಲಿಬಾಲ್ ಓಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಇತ್ಯಾದಿ.  

3. ಯಮಿಲ್ಕಾ ರೂಯಿಝ್ರವರಿಗೆ ಸಂದಿರುವ ಪದಕಗಳಾವುವು ?
ಉತ್ತರ :-  1. 1992 ರಲ್ಲಿ ಬಾರ್ಸಿಲೋನಾದಲ್ಲಿ ನಡೆದ ಓಲಿಂಪಿಕ್ಸ್ನಲ್ಲಿ ಚಿನ್ನದ ಪದಕ.             
         2. 1994ರಲ್ಲಿ ಬ್ರೇಜಿಲ್ನಲ್ಲಿ ನಡೆದ ವಿಶ್ವ ಚಾಂಪಿಯನ್ಶಿಪ್ ಟೈಟಲ್.
         3. 1995,98.99 ರಲ್ಲಿ ಟೋಕಿಯೋದಲ್ಲಿ ನಡೆದ ವಿಶ್ವಕಪ್ ಟೈಟಲ್.
         4. 1996 ರಲ್ಲಿ ಅಟ್ಲಾಂಟಾದಲ್ಲಿ ನಡೆದ ಓಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಮತ್ತು
         5. 2000 ರಲ್ಲಿ ಸಿಡ್ನಿಯಲ್ಲಿ ನಡೆದ ಓಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಇತ್ಯಾದಿ ಪದಕಗಳು ಇವರಿಗೆ ದೊರಕಿವೆ.

You Might Like

Post a Comment

0 Comments