I. ಬಿಟ್ಟ ಸ್ಥಳವನ್ನು ಸೂಕ್ತ ಉತ್ತರಗಳಿಂದ ತುಂಬಿರಿ:
1. ಸೂರ್ಯ ನಮಸ್ಕಾರವು _ಹತ್ತು_ ಆಸನಗಳನ್ನು ಹೊಂದಿದೆ.
2. ಸೂರ್ಯ ನಮಸ್ಕಾರವನ್ನು ಪ್ರಾತ: ಕಾಲದ ಸಮಯದಲ್ಲಿ ಮಾಡುವುದು ಸೂಕ್ತ.
3. ಸೂರ್ಯ ನಮಸ್ಕಾರಭ್ಯಾಸದಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ.
II. ಖಾಲಿ ಬಿಟ್ಟಿರುವ ಸ್ಥಳಗಳನ್ನು ನೀಡಿರುವ ಆಯ್ಕೆಗಳಲ್ಲಿ ಸರಿಯಾದುದನ್ನು ಆರಿಸಿ ಬರೆಯಿರಿ.
1. ಸೂರ್ಯ ನಮಸ್ಕಾರದಲ್ಲಿ ನಮಸ್ಕರಿಸಲ್ಪಡುವ ದೇವರು ಸೂರ್ಯ
1) ಚಂದ್ರ 2) ನವಗ್ರಹ 3) ಭೂಮಿ 4) ಸೂರ್ಯ.
2) ಚರ್ಮಕ್ಕೆ ಕಾಂತಿ ನೀಡುವ ವಿಟಮಿನ್ ವಿಟಮಿನ್-ಡಿ
1) ವಿಟಮಿನ್-ಬಿ 2) ವಿಟಮಿನ್-ಡಿ 3) ವಿಟಮಿನ್-ಸಿ 4) ವಿಟಮಿನ-ಎ
3) ಉಸಿರನ್ನು ತೆಗೆದುಕೊಳ್ಳುವುದು ಎಂದರೆ ಪೂರಕ
1) ಪೂರಕ 2) ರೇಚಕ 3) ಕುಂಭಕ 4) ಭಾಹ್ಯ ಕುಂಭಕ
III. ಈ ಕೆಳಕಂಡ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಸೂರ್ಯ ನಮಸ್ಕಾರದ ಅರ್ಥ ಬರೆಯಿರಿ?
ಭೂಮಂಡಲಕ್ಕೆ ಚೈತನ್ಯ ಶಕ್ತಿ ನೀಡುವ ಸೂರ್ಯನಿಗೆ ನಮಸ್ಕರಿಸಿ ಉಪಕಾರ ಸ್ಮರಣೆ ಮಾಡುವುದೇ ಸೂರ್ಯ ನಮಸ್ಕಾರ
2. ಸೂರ್ಯ ನಮಸ್ಕಾರದಿಂದಾಗುವ 4 ಪ್ರಯೋಜನಗಳನ್ನು ಬರೆಯಿರಿ?
* ಪ್ರತಿ ನಿತ್ಯ ಸೂರ್ಯ ನಮಸ್ಕಾರ ಮಾಡುವುದರಿಂದ ಶರೀರದ ಎಲ್ಲಾ ಸ್ನಾಯುಗಳು, ಕೀಲುಗಳು ಹಾಗೂ ಪುಪ್ಪಸ ಬಲಯುತವಾಗುತ್ತದೆ.
* ಪ್ರಾಣವಾಯುವನ್ನು ಹೆಚ್ಚಾಗಿ ಸೇವಿಸುವುದರಿಂದ ಉಸಿರಾಟದ ನಾಡಿಗಳು ಸಮತೋಲನವಾಗಿ ಕಾರ್ಯ ನಿರ್ವಹಿಸುತ್ತವೆ.
* ಚರ್ಮ ರೋಗ, ಅಜೀರ್ಣ, ಮಲಬದ್ಧತೆಯಂತಹ ತೊಂದರೆಗಳು ನಿವಾರಣೆಯಾಗುತ್ತದೆ.
* ಚರ್ಮಕ್ಕೆ ಕಾಂತಿ ಲಬಿಸುವುದರೊಂದಿಗೆ ವಿಟಮಿನ್ 'ಡಿ' ಧಾರಾಳವಾಗಿ ಶರೀರಕ್ಕೆ ದೊರಕುತ್ತದೆ.
3. ಸೂರ್ಯ ನಮಸ್ಕಾರದಿಂದ ಯಾವ ರೋಗ ನಿವಾರಣೆಯಾಗುತ್ತದೆ?
ಉತ್ತರ:- ಸೂರ್ಯ ನಮಸ್ಕಾರದಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ.
0 Comments