Recent Posts

ಶಬ್ಧ- 8 ನೇ ತರಗತಿ ವಿಜ್ಞಾನ ಪುಸ್ತಕದ ಪ್ರಶ್ನೋತ್ತರಗಳು

ಅಧ್ಯಾಯ-9
ಶಬ್ಧ

ಈ ಕೆಳಗಿನ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ಆರಿಸಿ ಬರೆಯಿರಿ

1. ಶಬ್ಬವು ಪ್ರಸಾರವಾಗುವುದು

(a) ಅನಿಲಗಳ ಮೂಲಕ ಮಾತ್ರ
(b) ಘನಗಳ ಮೂಲಕ ಮಾತ್ರ
(c) ಪ್ರದಗಳ ಮೂಲಕ ಮಾತ್ರ
(d) ಘನಗಳು, ದ್ರವಗಳು ಮತ್ತು ಅನಿಲಗಳ ಮೂಲಕ
ಉತ್ತರ: (d) ಘನಗಳು, ದ್ರವಗಳು ಮತ್ತು ಅನಿಲಗಳ ಮೂಲಕ

02) ಈ ಕೆಳಗಿನ ಧ್ವನಿಗಳಲ್ಲಿ ಯಾರ ಧ್ವನಿ ಕನಿಷ್ಟ ಆವೃತ್ತಿ ಹೊಂದಿದೆ
(೩) ಹೆಣ್ಣು ಮಗು
(b) ಗಂಡು ಮಗು
(c) ಪುರುಷ
(d) ಮಹಿಳೆ

ಉತ್ತರ: (c) ಪುರುಷ

03) ಈ ಕೆಳಗಿನ ಹೇಳಿಕೆಗಳಲ್ಲಿ, ಸರಿಯಾದವುಗಳಿಗೆ “ಸರಿ” ಎಂದು ಮತ್ತು ತಪ್ಪಾದವುಗಳಿಗೆ “ತಪ್ಪು ” ಎಂದು ಗುರುತಿಸಿ,
(a) ಶಬ್ದವು ನಿರ್ವಾತದಲ್ಲಿ ಪ್ರಸಾರವಾಗುವುದಿಲ್ಲ. ಉತ್ತರ : ಸರಿ
(b) ಕಂಪಿಸುತ್ತಿರುವ ವಸ್ತುವು ಒಂದು ಸೆಕೆಂಡಿನಲ್ಲಿ ಉಂಟುಮಾಡುವ ಆಂದೋಲನಗಳ ಸಂಖ್ಯೆಯನ್ನು ಕಾಲಾವಧಿ ಎಂದು ಕರೆಯುತ್ತಾರೆ. ಉತ್ತರ : ತಪ್ಪು
(c) ಕಂಪನದ ಪಾರವು ಹೆಚ್ಚಿದ್ದರೆ, ಶಬ್ದವು ಕ್ಷೀಣವಾಗಿರುತ್ತದೆ. ಉತ್ತರ: ತಪ್ಪು
(d) ಮಾನವ ಕಿವಿಗಳಿಗೆ, ಶ್ರವಣ ವ್ಯಾಪ್ತಿಯು 20Hz ನಿಂದ 20000Hz ಉತ್ತರ : ಸರಿ
(e) ಶಬ್ದಮಾಲಿನ್ಯವು ಭಾಗಶ: ಶ್ರವಣದೋಷವನ್ನುಂಟು ಮಾಡುತ್ತದೆ. ಉತ್ತರ: ಸರಿ
(f) ಕಂಪನದ ಆವೃತ್ತಿಯ ಕಡಿಮೆ ಇದ್ದಷ್ಟೂ ಸ್ಥಾಯಿ ಅಧಿಕ ಉತ್ತರ: ತಪ್ಪು
(g) ಅನಗತ್ಯ ಅಥವಾ ಅಹಿತಕರ ಶಬ್ದವನ್ನು ಸಂಗೀತವೆಂದು ಹೇಳಲಾಗುತ್ತದೆ. ಉತ್ತರ: ತಪ್ಪು

4. ಸೂಕ್ತ ಪದಗಳಿಂದ ಬಿಟ್ಟ ಸ್ಥಳಗಳನ್ನು ತುಂಬಿರಿ.
(a) ಒಂದು ಆಂದೋಲನವನ್ನು ಪೂರ್ಣಗೊಳಿಸಲು ತೆಗೆದುಕೊಳ್ಳುವ ಕಾಲವನ್ನು ಕಾಲಾವಧಿ ಎನ್ನುವರು,

(b) ಘೋಷವನ್ನು ಪಾರ ನ ಕಂಪನದಿಂದ ನಿರ್ಧರಿಸಲಾಗುತ್ತದೆ.
(c) ಆವೃತ್ತಿಯ ಏಕಮಾನ ಹರ್ಟ್ಸ್(Hz)
(d) ಅನಗತ್ಯ ಶಬ್ದವನ್ನು ಗದ್ದಲ ಎನ್ನುವರು.
(e) ಕೀರಲು ಶಬ್ದವನ್ನು ಆವೃತ್ತಿ. ನ ಕಂಪನದಿಂದ ನಿರ್ಧರಿಸಲಾಗುತ್ತದೆ.

5. ಒಂದು ಲೋಲಕಪ್ಪು 4 ಸೆಕೆಂಡುಗಳಲ್ಲಿ 4 ಬಾರಿ ಆಂದೋಲನಗೊಳ್ಳುತ್ತದೆ, ಅದರ ಕಾಲಾವಧಿ ಮತ್ತು ಆವೃತ್ತಿಯನ್ನು ಕಂಡುಹಿಡಿಯಿರಿ,

06) ಸೊಳ್ಳೆಯು ಸೆಕೆಂಡಿಗೆ ಸರಾಸರಿ 500 ಕಂಪನಗಳಂತೆ ತನ್ನ ರೆಕ್ಕೆಯನ್ನು ಕಂಪಿಸಿದಾಗ ಕಬ್ಬನ್ನು ಉಂಟಾಗುತ್ತದೆ. ಕಂಪನದ ಕಾಲಾವಧಿ ಎಷ್ಟು?
ಉತ್ತರ: ಆವೃತ್ತಿ 500Hz,
 
07) ಈ ಕೆಳಗಿನ ಸಂಗೀತ ವಾದ್ಯಗಳಲ್ಲಿ ಶಬ್ದ ಉತ್ಪತ್ತಿ ಮಾಡುವ ಭಾಗವನ್ನು ಗುರುತಿಸಿ.
(a) ಮೃದಂಗ (ಡೋಲು)
(b) ಸಿತಾರ್
(c) ಕೊಳಲು

ಉತ್ತರ: (a) ಮೃದಂಗ (ಡೋಲು) ಇದೊಂದು ವರ್ಧನ ವಾದ್ಯವಾಗಿದೆ. ಇದು, ಹಿಗ್ಗಿಸಿ ಎಳೆದು ಬಿಗಿಗೊಳಿಸಿರುವ ತೆಳುವಾದ ಚರ್ಮದಿಂದ ಮಾಡಿರುದ ತಲೆ ಭಾಗವನ್ನು ಹೊಂದಿದೆ. ತಲೆಯ ಭಾಗವನ್ನು ಬಡಿದಾಗ, ಆ ಚರ್ಮದ ಕಂಪನದಿಂದ ಕಬ್ಬವು ಉತ್ಪತ್ತಿಯಾಗುತ್ತದೆ.
(b) ಸಿತಾರ್: ಇದೊಂದು ತಂತಿ ವಾದ್ಯವಾಗಿದೆ. ಇದು, ಹಿಗ್ಗಿಸಿ ಎಳೆದು ಬಿಗಿಗೊಳಿಸಿರುವ ಹಲವು ತಂತಿಗಳನ್ನು ಹೊಂದಿದೆ. ತಂತಿಗಳನ್ನು ಮೀಟಿದಾಗ, ಅವುಗಳ ಕಂಪನದಿಂದ ಶಬ್ದದ ಉತ್ಪತ್ತಿಯಾಗುತ್ತದೆ.
(c) ಕೊಳಲು: ಇದೊಂದು ಗಾಳಿ ವಾದ್ಯವಾಗಿದೆ. ಇದು, ಒಂದೇ ಸಾಲಿನಲ್ಲಿ ಸೂಕ್ತ ಅಂತರಗಳಲ್ಲಿ ಹಲವು ರಂದ್ರಗಳನ್ನು ಹೊಂದಿದೆ, ಆ ರಂದ್ರಗಳ ಮೂಲಕ ಗಾಳಿಯನ್ನು ಊದಿದಾಗ, ಗಾಳಿಯ ಕಂಪನದಿಂದ ರಬ್ದವು ಉತ್ಪತ್ತಿಯಾಗುತ್ತದೆ.

08) ಸಂಗೀತ ಮತ್ತು ಗದ್ದಲಗಳಿಗಿರುವ ವ್ಯತ್ಯಾಸವೇನು” ಸಂಗೀತವೂ ಕೆಲವೊಮ್ಮೆ ಗದ್ದಲವಾಗಬಹುದೇ?
ಉತ್ತರ: ಕೇಳಲು ಹಿತಕರವಾಗಿರುವ ಶಬ್ದಗಳನ್ನು ಸಂಗೀತ ಎನ್ನುವರು.
ಹೌದು, ಕೆಲವೊಮ್ಮೆ ಸಂಗೀತದ ಘೋಷವನ್ನು ಹೆಚ್ಚಿಸಿದಾಗ ಅದು ಗದ್ದಲವಾಗುತ್ತದೆ.


09) ನಿಮ್ಮ ಸುತ್ತಮುತ್ತ ಶಬ್ದಮಾಲಿನ್ಯಕ್ಕೆ ಕಾರಣವಾಗುವ ಆಕರಗಳನ್ನು ಪಟ್ಟಿಮಾಡಿ,
ಉತ್ತರ: ನಮ್ಮ ಸುತ್ತಮುತ್ತ ಶಬ್ದಮಾಲಿನ್ಯಕ್ಕೆ ಕಾರಣವಾಗುವ ಕೆಲವು ಆಕರಗಳು,
01] ಹೆಚ್ಚಿನ ಘೋಷದಿಂದ ಕಾರ್ಯನಿರ್ವಹಿಸುತ್ತಿರುವ ಟಿ.ವಿ ಗಳು ಮತ್ತು ಟ್ರಾನ್ಸಿಸ್ಟರ್ ಗಳು,
02] ಧ್ವನಿವರ್ಧಕಗಳು ಮತ್ತು ಪಟಾಕಿ ಸಿಡಿಯುವುದನ್ನೂ ಒಳಗೊಂಡಂತೆ ಸ್ಫೋಟಕಗಳು.
03] ವಾಹನಗಳ ಹಾರನ್ ಗಳ ಶಬ್ಧಗಳು
04] ಮಿಕ್ಸಿ, ಕುಕ್ಕರ್ ಮುಂತಾದ ಗೃಹೋಪಯೋಗಿ ಉಪಕರಣಗಳ ಶಬ್ದಗಳು, ಮುಂತಾದವುಗಳು,

10) ಶಬ್ದಮಾಲಿನ್ಯವು ಮಾನವರಿಗೆ ಹೇಗೆ ಹಾನಿಯನ್ನು ಉಂಟುಮಾಡುತ್ತದೆ ಎಂಬುದನ್ನು ವಿವರಿಸಿ,
ಉತ್ತರ: ನಮ್ಮ ಸುತ್ತಲಿನ ಅಧಿಕ ಗದ್ದಲವು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ, ನಿದ್ರಾಹೀನತೆ, ಅತಿಯಾದ ರಕ್ತದೊತ್ತಡ, ಆತಂಕ ಮತ್ತು ಮುಂತಾದ ಅಸ್ವಸ್ಥತೆಗಳು ಶಬ್ದಮಾಲಿನ್ಯದ ಕಾರಣದಿಂದ ಉಂಟಾಗುತ್ತವೆ. ಅತಿಯಾದ ಶಬ್ಧಕ್ಕೆ ನಿರಂತರವಾಗಿ ಗುರಿಯಾದ ವ್ಯಕ್ತಿಯು ತಾತ್ಕಾಲಿಕ ಅಥವಾ ಶಾಶ್ವತವಾಗಿ ಕಿವುಡುತನಕ್ಕೆ ಒಳಗಾಗಬಹುದು.

11) ನಿಮ್ಮ ಪೋಷಕರು ಒಂದು ಮನೆಯನ್ನು ಕೊಂಡುಕೊಳ್ಳಲಿರುವರು. ಆವರಿಗೆ ರಸ್ತೆಯ ಬದಿಯಲ್ಲಿರುವ ಒಂದು ಮನೆ ಮತ್ತು ರಸ್ತೆಯಿಂದ ದೂರವಿರುವ 3ನೇ ಗಲ್ಲಿಯಲ್ಲಿರುವ ಒಂದು ಮನೆಯನ್ನು ಕೊಳ್ಳಲು ಆಹ್ವಾನ ಬಂದಿದೆ, ಯಾವ ಮನೆಯನ್ನು ಕೊಳ್ಳಲು ನಿಮ್ಮ ಪೋಷಕರಿಗೆ ಸಲಹೆ ನೀಡುತ್ತೀರಿ? ನಿಮ್ಮ ಉತ್ತರವನ್ನು ಸರಿಸಿ,
ಉತ್ತರ: ರಸ್ತೆಯ ಬದಿಯಲ್ಲಿರುವ ಮನೆಯಲ್ಲಿ ಹೆಚ್ಚು ಗದ್ದಲ ಕೇಳಲ್ಪಡುತ್ತದೆ: ವಾಹನಗಳ ಸಂಚಾರದಿಂದ ಉಂಟಾಗುವ ಗದ್ದಲಗಳು, ಆ ಮನೆಯಲ್ಲಿ ವಾಸಿಸುವವರಿಗೆ ಕಿರಿಕಿರಿಯನ್ನು ಉಂಟುಮಾಡುತ್ತದೆ. ಶಬ್ದದ ಆಕರ ಮತ್ತು ಕೇಳುಗರ ನಡುವಿನ ಅಂತರವು ಹೆಚ್ಚಾದಂತೆ ಶಬ್ದದ ತೀವ್ರತೆಯೂ ಕಡಿಮೆಯಾಗುತ್ತದೆ. ಆದ್ದರಿಂದ, ರಸ್ತೆಯಿಂದ ದೂರವಿರುವ 3ನೇ ಗಲ್ಲಿಯಲ್ಲಿರುವ ಮನೆಯನ್ನು ಕೊಳ್ಳಲು ನಾವು ಸಲಹೆ ನೀಡುತ್ತದೆ.

12) ಧ್ವನಿಪೆಟ್ಟಿಗೆಯ ಚಿತ್ರ ಬರೆಯಿರಿ ಮತ್ತು ಅದರ ಕಾರ್ಯವನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ವಿವರಿಸಿ.
ಮಾನವರಲ್ಲಿ ಶಬ್ದವು ಲ್ಯಾರೆಂಕ್ಸ್ ಅಥವಾ ಧ್ವನಿಪೆಟ್ಟಿಗೆಯಿಂದ ಉತ್ಪತ್ತಿಯಾಗುತ್ತದೆ. ಬೆರಳುಗಳನ್ನು ನಿಮ್ಮ ಗಂಟಲಿನ ಮೇಲಿರಿಸಿ ನೀವು ಏನನ್ನಾದರೂ ನುಂಗುವಾಗ ಗಟ್ಟಿಯಾದ ಉಬ್ಬಿದ ಭಾಗವು ಚಲಿಸುವುದೇ ಎಂಬುದನ್ನು ಪರೀಕ್ಷಿಸಿ, ದೇಹದ ಈ ಭಾಗವೇ ಧ್ವನಿಪೆಟ್ಟಿಗೆ, ಇದು ಶ್ವಾಸನಾಳದ ಮೇಲ್ತುದಿಯಲ್ಲಿದೆ. ಧ್ವನಿಪಟ್ಟಿಗೆ ಅಥವಾ ಧ್ವನಿಪೆಟ್ಟಿಗೆಯ ಉದ್ದಕ್ಕೂ ಎರಡು ಧ್ವನಿತಂತುಗಳು ಚಾಚಿಕೊಂಡಿದ್ದು ಅವುಗಳ ನಡುವೆ ಗಾಳಿಯ ಚಲನೆಗೆ ಸಣ್ಣ ಸೀಳುಕಿಂಡಿ ಇದೆ, ಶ್ವಾಸಕೋಶಗಳು ಗಾಳಿಯನ್ನು ಸೀಳುಕಿಂಡಿಯ ಮೂಲಕ ಚಲಿಸುವಂತೆ ಮಾಡಿದಾಗ, ಧ್ವನಿತಂತುಗಳು ಕಂಪಿಸಿ ತಟ್ಟವನ್ನು ಉಂಟುಮಾಡುತ್ತವೆ. ಧ್ವನಿತಂತುಗಳಿಗೆ ಜೋಡಣೆಯಾಗಿರುವ ಮಾಂಸಖಂಡಗಳು ಧ್ವನಿತಂತುಗಳನ್ನು ಬಿಗಿಗೊಳಿಸುವ ಅಥವಾ ಸಡಿಲಗೊಳಿಸುವ ಕಾರ್ಯ ಮಾಡುತ್ತವೆ. ಧ್ವನಿತಂತುಗಳು ಬಿಗಿಯಾದಾಗ ಮತ್ತು ತೆಳುವಾದಾಗ ಉಂಟಾಗುವ ಧ್ವನಿಯ ಶೈಲಿ ಅಥವಾ ಗುಣಮಟ್ಟವ, ಧ್ವನಿತಂತುಗಳು ಸಡಿಲವಾದಾಗ ಮತ್ತು ದಪ್ಪವಾದಾಗ ಉಂಟಾಗುವ ಧ್ವನಿಯ ಶೈಲಿ ಅಥವಾ ಗುಣಮಟ್ಟಕ್ಕಿಂತ ಭಿನ್ನವಾಗಿರುತ್ತದೆ.

13) ಮಿಂಚು ಮತ್ತು ಗುಡುಗು ಏಕಕಾಲದಲ್ಲಿ ಮತ್ತು ನಮ್ಮಿಂದ ಸಮಾನದೂರದಲ್ಲಿ ಉಂಟಾಗುತ್ತದೆ. ಮೊದಲು ಮಿಂಚು ಕಾಣಿಸಿಕೊಳ್ಳುತ್ತದೆ ಮತ್ತು ಸ್ವಲ್ಪ ತಡವಾಗಿ ಗುಡುಗು ಕೇಳಿಸುತ್ತದೆ. ಏಕೆಂದು ನೀವು ವಿವರಿಸುವಿರಾ?
ಉತ್ತರ: ಶಬ್ದದ ವೇಗವು ಬೆಳಕಿನ ವೇಗಕ್ಕಿಂತ ಕಡಿಮೆಯಾಗಿದೆ ಆದ್ದರಿಂದ, ಮಿಂಚು ಮತ್ತು ಗುಡುಗು ಏಕಕಾಲದಲ್ಲಿ ಮತ್ತು ನಮ್ಮಿಂದ ಸಮಾನದೂರದಲ್ಲಿ ಉಂಟಾದರೂ, ನಮಗೆ ಮೊದಲು ಮಿಂಚು ಕಾಣಿಸಿಕೊಳ್ಳುತ್ತದೆ ಮತ್ತು ಸ್ವಲ್ಪ ತಡವಾಗಿ ಗುಡುಗು ಕೇಳಿಸುತ್ತದೆ.

14. ಆಲಿಸುವಿಕೆ ಎಂದರೇನು?
ಉತ್ತರ: ಕಿವಿತಮಟೆಯು ಶಬ್ದಕಂಪನಗಳನ್ನು ಗ್ರಹಿಸುತ್ತದೆ. ಅದು ಸಂಕೇತಗಳನ್ನು ಮೆದುಳಿಗೆ ರವಾನಿಸುತ್ತದೆ ಈ ಪ್ರಕ್ರಿಯೆಯನ್ನು ಆಲಿಸುವಿಕೆ ಎಂದು ಕರೆಯುತ್ತಾರೆ.

15. ಕಂಪನದ ಆವೃತ್ತಿ ಮತ್ತು ಸ್ಥಾಯಿಯ ನಡುವಿನ ಸಂಬಂಧವೇನು?
ಉತ್ತರ: ಕಂಪನದ ಆವೃತ್ತಿಯು ಅಧಿಕವಾದಷ್ಟು ಸ್ಥಾಯಿಯು ಹೆಚ್ಚಾಗಿರುತ್ತದೆ ಮತ್ತು ಶಬ್ದವು ತೀವ್ರವಾಗಿರುತ್ತದೆ.

16. ಕಂಪನ ಎಂದರೇನು?
ಉತ್ತರ: ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಥವಾ ಹಿಂದೆ ಮತ್ತು ಮುಂದೆ ಆಗುವ ವಸ್ತುವಿನ ಚಲನೆಯನ್ನು ಕಂಪನ ಎನ್ನುವರು.

17. ಪುರುಷರ, ಮಹಿಳೆಯರ ಮತ್ತು ಮಕ್ಕಳ ಧ್ವನಿಗಳು ಏಕೆ ಭಿನ್ನವಾಗಿರುತ್ತದೆ?
ಉತ್ತರ: ಪುರುಷರಲ್ಲಿ ಧ್ವನಿತಂತುಗಳು ಸುಮಾರು 20mm ಉದ್ದವಿರುತ್ತದೆ. ಮಹಿಳೆಯರಲ್ಲಿ ಇವುಗಳು ಸುಮಾರು 15mm ನಷ್ಟು ಉದ್ದ ಇರುತ್ತವೆ. ಮಕ್ಕಳು ಅತಿ ಚಿಕ್ಕದಾದ ಧ್ವನಿತಂತುಗಳನ್ನು ಹೊಂದಿರುತ್ತಾರೆ. ಆದ್ದರಿಂದ, ಪುರುಷರ, ಮಹಿಳೆಯರ ಮತ್ತು ಮಕ್ಕಳ ಧ್ವನಿಗಳು ಭಿನ್ನವಾಗಿರುತ್ತದೆ.

18. ನಮ್ಮ ಕಿವಿಗಳ ಮೂಲಕ ನಾವು ಶಬ್ಧವನ್ನು ಹೇಗೆ ಕೇಳುತ್ತೇವೆ? ವಿವರಿಸಿ.
ಉತ್ತರ: ಹೊರಕಿವಿಯ ರಚನೆಯು ಒಂದು ಆಲಿಕೆಯಂತಿದೆ. ಶಬ್ದವು ಅದರೊಳಗೆ ಪ್ರವೇಶಿಸಿದಾಗ, ಅದು ಒಂದು ತೆಳುವಾದ ಹಿಗ್ಗಿದ ಪೊರೆಯನ್ನು ತನ್ನ ತುದಿಯಲ್ಲಿ ಹೊಂದಿರುವ ನಾಳದ ಮೂಲಕ ಚಲಿಸುತ್ತದೆ. ಈ ಪೊರೆಯನ್ನು ಕಿವಿತಮಟೆ ಎಂದು ಕರೆಯುವರು. ಇದು ಅತ್ಯಂತ ಪ್ರಮುಖವಾದ ಕಾರ್ಯವನ್ನು ನಿರ್ವಹಿಸುತ್ತದೆ. ಕಿವಿತಮಟೆಯು ಬಿಗಿಯಾಗಿ ಎಳೆದ ರಬ್ಬರ್ ಹಾಳೆಯಂತಿದೆ. ಶಬ್ದಕಂಪನಗಳು ತಿವಿತಮಟೆಯನ್ನು ಕಂಪಿಸುವಂತೆ ಮಾಡುತ್ತದೆ. ಕಿವಿತಮಟೆಯ ಈ ಕಂಪನಗಳನ್ನು ಒಳಕಿವಿಗೆ ವರ್ಗಾಯಿಸುತ್ತದೆ, ಅಲ್ಲಿಂದ ಸಂಕೇತಗಳು ಮೆದುಳಿಗೆ ರವಾನೆ ಆಗುತ್ತದೆ. ಈ ರೀತಿಯಾಗಿ ನಾವು ಶಬ್ಧವನ್ನು ಕೇಳಿಸಿಕೊಳ್ಳುತ್ತೇವೆ.

19. ಶಬ್ದದ ಘೋಷ ಮುತ್ತು ಶಬ್ದವನ್ನು ಉಂಟುಮಾಡುವ ಕಂಪನಕ್ಕೂ ಇರುವ ಸಂಬಂಧದೇನು?
ಉತ್ತರ: ಶಬ್ದದ ಘೋಷವು ಶಬ್ದವನ್ನು ಉಂಟುಮಾಡುವ ಕಂಪನದ ಪಾರದ ವರ್ಗಕ್ಕೆ ನೇರ ಅನುಪಾತದಲ್ಲಿರುತ್ತದೆ.

20) ಶ್ರವ್ಯವಲ್ಲದ ಶಬ್ದ ಎಂದರೇನು?
ಉತ್ತರ: ಪ್ರತಿ ಸೆಕೆಂಡಿಗೆ 20ಕ್ಕಿಂತ ಕಡಿಮೆ ಕಂಪನಗಳಿರುವ (20Hz) ಆವೃತ್ತಿಯ ಮತ್ತು ಸುಮಾರು 20000 ಕಂಪನಗಳಿರುವ (20 kHz) ಆವೃತ್ತಿಯ ಶಬ್ದದನ್ನು ಮಾನವನ ಕಿವಿಯು ಗ್ರಹಿಸಲಾರದು, ಅಂತಹ ಶಬ್ಬವನ್ನು ಶ್ರವ್ಯವಲ್ಲದ ಶಬ್ದ ಎನ್ನುತ್ತಾರೆ.

21) ಮನೆಗಳಲ್ಲಿ ಗದ್ದಲಕ್ಕೆ ಕಾರಣವಾದ ಮೂಲಗಳು ಯಾವುದು?
ಉತ್ತರ: ಟೆಲಿವಿಷನ್ಗಳು ಮತ್ತು ಟ್ರಾನ್ಸಿಸ್ಟರ್ ರೇಡಿಯೋಗಳ ಹೆಚ್ಚಿನ ಶಬ್ಬ, ಕೆಲವು ಅಡುಗೆ ಮನೆಯ ಸಾಧನಗಳು, ಕೂಲರ್ಗಳು, ಏರ್ ಕಂಡೀಷನರ್ಗಳು ಮುಂತಾದವುಗಳೆಲ್ಲವೂ ಮನೆಗಳಲ್ಲಿ ಗದ್ದಲಕ್ಕೆ ಕಾರಣವಾದ ಮೂಲಗಳಾಗಿವೆ.

22) ಶಬ್ಧ ಮಾಲಿನ್ಯವನ್ನು ನಿಯಂತ್ರಿಸುವ ಕೆಲವು ಕ್ರಮಗಳನ್ನು ಪಟ್ಟಿಮಾಡಿ,
ಉತ್ತರ: 01) ವಿಮಾನಗಳ ಎಂಜಿನ್ನುಗಳಲ್ಲಿ, ಸಾರಿಗೆ ವಾಹನಗಳಲ್ಲಿ, ಕಾರ್ಖಾನೆಗಳ ಯಂತ್ರಗಳಲ್ಲಿ ಮತ್ತು ಗೃಹೋಪಯೋಗಿ ಸಾಧನಗಳಲ್ಲಿ ಶಬ್ಧ ನಿವಾರಕಗಳನ್ನು ಅಳವಡಿಸಬೇಕು.
02) ಗದ್ದವನ್ನು ಉಂಟುಮಾಡುವ ಎಲ್ಲಾ ಕಾರ್ಯಾಚರಣೆಗಳನ್ನು ವಾಸಸ್ಥಳಗಳಿಂದ ದೂರದಲ್ಲಿ ನಡೆಸಬೇಕು.
03] ಗದ್ದಲವನ್ನುಂಟುಮಾಡುವ ಕೈಗಾರಿಕೆಗಳನ್ನು ವಾಸಸ್ಥಳಗಳಿಂದ ದೂರದಲ್ಲಿ ಸ್ಥಾಪಿಸಬೇಕು.
04] ವಾಹನಗಳಲ್ಲಿ ಹಾರ್ನ್ ಗಳ ಬಳಕೆಯನ್ನು ಕಡಿತಗೊಳಿಸಬೇಕು.
05] ಟಿವಿ ಮತ್ತು ಮ್ಯೂಸಿಕ್ ಸಿಸ್ಟಂಗಳ ಶಬ್ದವನ್ನು ಕಡಿಮೆಗೊಳಿಸಬೇಕು.
06] ಗದ್ದಲವು ವಾಸಸ್ಥಳಕ್ಕೆ ತಲುಪುವುದನ್ನು ನಿಯಂತ್ರಿಸಲು ಮತ್ತು ಮಾಲಿನ್ಯದಿಂದಾಗುವ ಹಾನಿಕಾರಕ ಪರಿಣಾಮಗಳನ್ನು ಕಡಿಮೆಗೊಳಿಸಲು ರಸ್ತೆ ಬದಿಗಳ ಉದ್ದಕ್ಕೂ ಮತ್ತು ಕಟ್ಟಡಗಳ ಸುತ್ತಲೂ ಮರಗಳನ್ನು ಬೆಳಸಬೇಕು.




You Might Like

Post a Comment

0 Comments