Recent Posts

ಲೋಹಗಳು ಮತ್ತು ಅಲೋಹಗಳು - ೧೦ ನೇ ತರಗತಿ ವಿಜ್ಞಾನ ಪುಸ್ತಕದ ಪ್ರಶ್ನೋತ್ತರಗಳು


 ಅಧ್ಯಾಯ-3
 ಲೋಹಗಳು ಮತ್ತು ಅಲೋಹಗಳು ನೋಟ್ಸ್

ಅಭ್ಯಾಸ ಪ್ರಶ್ನೆಗಳು

1).ಈ ಕೆಳಗಿನವುಗಳಲ್ಲಿ ಯಾವ ಜೋಡಿಯು ಸ್ಥಾನ ಪಲ್ಲಟ ಕ್ರಿಯೆಯನ್ನು ಉಂಟುಮಾಡುತ್ತದೆ?

d ) AgNO3 ದ್ರಾವಣ ಮತ್ತು ತಾಮ್ರದ ಲೋಹ

2). ಕಬ್ಬಿಣದ ಕಾವಲಿ ತುಕ್ಕು ಹಿಡಿಯದಂತೆ ತಡೆಗಟ್ಟಲು ಈ ಕೆಳಗಿನವುಗಳಲ್ಲಿ ಯಾವ ವಿಧಾನ ಸೂಕ್ತವಾಗಿದೆ?
c. ಸತುವಿನ ಲೇಪನ ಮಾಡುವುದು.

3). ಒಂದು ಧಾತುವು ಆಕ್ಸಿಜನ್ ಜೊತೆ ಪರಿವರ್ತಿಸಿ ಹೆಚ್ಚಿನ ದ್ರವನ ಬಿಂದುವನ್ನು ಹೊಂದಿರುವ ಸಂಯುಕ್ತವನ್ನು ಉಂಟುಮಾಡುತ್ತದೆ. ಈ ಸಂಯುಕ್ತವು ನೀರಿನಲ್ಲಿ ಸುಲಭವಾಗಿ ಕರಗುತ್ತದೆ. ಸಾಮಾನ್ಯವಾಗಿ ಈ ಧಾತು ಯಾವುದಾಗಿರಬಹುದೆಂದರೆ.
a ) ಕ್ಯಾಲ್ಸಿಯಂ

4). ಆಹಾರ ಪದಾರ್ಥಗಳ ಡಬ್ಬಿಗಳನ್ನು ತವರದಿಂದ ಲೇಪನಮಾಡಲಾಗಿರುತ್ತದೆಯೇ ಹೊರತು ಸತುವಿನಿಂದಲ್ಲ ಕಾರಣ.
c ) ಸತುವು ತವರಕ್ಕಿಂತ ಹೆಚ್ಚು ಕ್ರಿಯಾಶೀಲವಾಗಿದೆ.

5). ನಿಮಗೆ ಒಂದು ಸುತ್ತಿಗೆ, ಬ್ಯಾಟರಿ, ಬಲ್ಪ್, ತಂತಿ ಮತ್ತು ಸ್ವಿಚ್ ಗಳನ್ಮು ನೀಡಲಾಗಿದೆ
a ) ಇವುಗಳನ್ನು ಉಪಯೋಗಿಸುವುದರ ಮೂಲಕ ನೀಡಲಾಗಿರುವ ವಸ್ತುಗಳನ್ನು ಹೇಗೆ ಲೋಹ ಮತ್ತು ಅಲೋಹಗಲಾಗಿ ವಿಂಗಡಿಸುವಿರಿ?
a ) ಸುತ್ತಿಗೆಯಿಂದ ಬಡಿದಾಗ ವಸ್ತುಗಳು ತೆಳ್ಳನೆಯ ಹಾಳೆಗಳಾದರೆ ಅವು ಲೋಹಗಳು , ಇಲ್ಲವಾದರೆ ಅವು ಅಲೋಹಗಳು . ಅದೇ ರಿತಿ ಬ್ಯಾಟರಿ , ಬಲ್ಟ್ ತಂತಿ ಮತ್ತು ಸ್ವಿಚ್ ಗಳನ್ನು ಜೋಡಿಸಿ ವಸ್ತುಗಳ ಮೂಲಕ ವಿದ್ಯುತ್ ಹರಿದರೆ ಅವು ಲೋಹಗಳು , ಇಲ್ಲವಾದರೆ ಅವು ಅಲೋಹಗಳು ,
b ) ಈ ಪರೀಕ್ಷೆಗಳ ಉಪಯುಕ್ತತೆಯನ್ನು ಲೋಹ ಮತ್ತು ಅಲೋಹಗಳ ನಡುವಿನ ವ್ಯತ್ಯಾಸಗಳನ್ನು ಪಟ್ಟಿ ಮಾಡಲು ಬಳಸಿ
b ) ಮೇಲಿನ ಪರೀಕ್ಷೆಗಳನ್ನು ಲೋಹ ಮತ್ತು ಅಲೋಹಗಳ ಮದ್ಯೆ ಇರುವ ಭೌತಿಕ ವ್ಯತ್ಯಾಸಗಳನ್ನು ತಿಳಿಯಲು ಉಪಯೋಗಿಸಬಹುದು .

6) ಉಭಯವರ್ತಿ ಆಕ್ಸೆಡ್ ಗಳು ಎಂದರೇನು? ಉಭಯವರ್ತಿ ಆಕ್ಸೆಡ್ ಗಳಿಗೆ ಎರಡು ಉದಾಹರಣೆ ಕೊಡಿ.
ಯಾವ ಆಕ್ಸೆಡ್ ಗಳು ಆತ್ಮೀಯ ಮತ್ತು ಪ್ರತ್ಯಾಮೀಯ ಆಕ್ಸೆಡ್ ಗಳಂತೆ ವರ್ತಿಸುತ್ತವೆಯೋ ಅಂತಹ ಆಕ್ಸೆಡ್ ಗಳನ್ನು ಉಭಯವರ್ತಿ ಆಕ್ಸೆಡ್ ಎನ್ನುವರು .

ಉದಾ : ಅಲ್ಯುಮಿನಿಯಂ ಆಕ್ಸೆಡ್ , ಸತುವಿನ ಆಕ್ಸೆಡ್ .

7) ಸಾರರಿಕ್ತ ಆಮ್ಲಗಳಿಂದ ಹೈಡ್ರೋಜನ್ ಅನ್ನು ಪಲ್ಲಟಗೊಳಿಸುವ ಎರಡು ಲೋಹಗಳನ್ನು ಹೆಸರಿಸಿ. ಮತ್ತು ಹೈಡ್ರೋಜನ್ ನ್ನು ಪಲ್ಲಟಗೊಳಿಸದ ಎರಡು ಲೋಹಗಳನ್ನು ಹೆಸರಿಸಿ.
ಸಾರರಿಕ್ತ ಆಮ್ಲಗಳಿಂದ ಹೈಡೋಜನನ್ನು ಪಲ್ಲಟಗೊಳಿಸುವ ಎರಡು ಲೋಹಗಳೆಂದರೆ ಸೋಡಿಯಂ ಮತ್ತು ಪೊಟ್ಯಾಷಿಯಂ  ಪಲ್ಲಟಗೊಳಿಸದಿರುವ ಲೋಹಗಳೆಂದರೆ ತಾಮ್ರ ಮತ್ತು ಬೆಳ್ಳಿ

8) M ಎಂಬ ಲೋಹದ ವಿದ್ಯುದ್ವಿಭಜನೀಯ ಶುದ್ಧೀಕರಣದಲ್ಲಿ ನೀವು ಆನೋಡ್, ಕ್ಯಾಥೋಡ್, ಹಾಗೂ ವಿದ್ಯುದ್ವಿಭಜನೀಯ ದ್ರಾಔಣವಾಗಿ ಯಾವುದನ್ನು ತೆಗೆದುಕೊಳ್ಳುವಿರಿ
ಆನೋಡ್ – ಅಶುದ್ಧ ಲೋಹ M
ಕ್ಯಾಥೋಡ್ – ಶುದ್ಧ ಲೋಹ
ವಿದ್ಯುದ್ವಿಭಜನೀಯ ದ್ರಾವಣ – M ಲೋಹದ ಲವಣದ ದ್ರಾವಣ .

9) ಪ್ರತ್ಯೂಷನು ಪ್ರಯೋಗಾಲಯದಲ್ಲಿ ಬಳಸುವ ಚಮಚೆಯಲ್ಲಿ ಗಂಧಕದ ಪುಡಿಯನ್ನು ತೆಗೆದುಕೊಂಡು ಕಾಸಿದ್ದಾನೆ. ಚತ್ರದಲ್ಲಿ ತೋರಿಸಿರುವಂತೆ ಪ್ರನಾಳವನ್ನು ತಲೆಕೆಳಗೆ ಮಾಡಿ ಬಿಡಿಗಡೆಯಾದ ಅನಿಲವನ್ನು ಸಂಗ್ರಹಿಸಿದ್ದಾನೆ.
a ) ಸಂಗ್ರಹಿಸಿದ ಅನಿಲದ ವರ್ತನೆ ಇವುಗಳ ಮೇಲೆ ಹೇಗಿರುತ್ತದೆ.
i. ಶುಷ್ಕ ಲಿಟ್ಮಸ್ ಕಾಗದ
ii. ತೇವವಿರುವ ಲಿಟ್ಮಸ್ ಕಾಗದ
b ) ಇಲ್ಲಿ ನಡೆಯುವ ಕ್ರಿಯೆಯ ಸರಿದೂಗಿಸಿದ ರಾಸಾಯನಿಕ ಸಮೀಕರಣ ಬರೆಯಿರಿ.
a ) i ) ಲಿಟ್ರಸ್ ಕಾಗದದ ಬಣ್ಣದಲ್ಲಿ ಬದಲಾವಣೆ ಆಗುವುದಿಲ್ಲ .
ii ) ನೀಲಿ ಲಿಟ್ರಸ್ ಕಾಗದ ಕೆಂಪು ಬಣ್ಣಕ್ಕೆ ತಿರುತ್ತದೆ .
b ) S + O₂ → SO₂

10) ಕಬ್ಬಿಣ ತುಕ್ಕು ಹಿಡಿಯುವುದನ್ನು ತಡೆಗಟ್ಟುವ ಎರಡು ವಿಧಾನಗಳನ್ನು ತಿಳಿಸಿ.
i ) ಬಣ್ಣ ಹಚ್ಚುವುದು , ಎಣ್ಣೆ ಸವರುವುದು ಗ್ರೀಸ್ ಹಚ್ಚುವುದರ ಮೂಲಕ
ii ) ಉಕ್ಕು ಮತ್ತು ಕಬ್ಬಿಣವನ್ನು ಸತುವಿನ ತೆಳುವಾದ ಲೇಪನದಿಂದ ರಕ್ಷಿಸಬಹುದು.ಇದನ್ನು ಗ್ಯಾಲ್ವನೀಕರಣ ಎನ್ನುವರು .

11) ಅಲೋಹಗಳು ಆಕ್ಸಿಜನ್ ಜೊತೆ ಪರಿವರ್ತಿಸಿದಾಗ ಉತ್ಪತ್ತಿಯಾಗುವ ಆಕ್ಸೈಡ್ ಗಳ ವಿಧ ಯಾವುದು ?
ಆಮ್ಲೀಯ ಆಕ್ಸೆಡ್ ಗಳು ,



12) ಕಾರಣ ಕೊಡಿ.
a ) ಪ್ಲಾಟಿನಂ, ಚಿನ್ನ ಮತ್ತು ಬೆಳ್ಳಿಯನ್ನು ಆಭರಣಗಳ ತಯಾರಿಕೆಯಲ್ಲಿ ಬಳಸುವರು
b) ಸೋಡಿಯಂ, ಪೊಟ್ಯಾಸಿಯಂ ಮತ್ತು ಲೀಥಿಯಂಗಳನ್ನು ಎಣ್ಣೆಯಲ್ಲಿ ಸಂಗ್ರಹಿಸಿಡುವರು.
c) ಅಲ್ಯೂಮಿನಿಯಂ ಅತ್ಯಂತ ಕ್ರಿಯಾಶೀಲ ಲೋಹವಾಗಿದ್ದರೂ ಇದನ್ನು ಅಡುಗೆಮನೆ ಪಾತ್ರೆಗಳ ತಯಾರಿಕೆಯಲ್ಲಿ ಬಳಸುವರು.
d) ಲೋಹೋದ್ಧರಣದ ಸಂದರ್ಭದಲ್ಲಿ ಕಾರ್ಬೋನೇಟ್ ಮತ್ತು ಸಲ್ಫೈಡ್ ಅದುರುಗಳನ್ನು ಸಾಮಾನ್ಯವಾಗಿ ಆಕ್ಸೈಡ್ ಗಳನ್ನಾಗು ಪರಿವರ್ತಿಸುವರು
 a ) ಅವುಗಳು ಕಡಿಮೆ ಕ್ರಿಯಾಶೀಲ ಮತ್ತು ಬೇಗನೆ ನಶಿಸುವುದಿಲ್ಲ. ಹಾಗು ಕಾಂತಿಯುತವಾಗಿವೆ .
b ) ಅವುಗಳು ಅತ್ಯಂತ ಕ್ರಿಯಾಶೀಲ ಧಾತುಗಳಾಗಿವೆ ಮತ್ತು ವಾತಾವರಣದಲ್ಲಿನ ಆಮ್ಲಜನಕ ಮತ್ತು ನೀರಾವಿಯೊಂದಿಗೆ ಥಟ್ಟನೆ ವರ್ತಿಸುತ್ತವೆ.ಆದರೆ ಎಣ್ಣೆಯ ಜೊತೆ ವರ್ತಿಸುವುದಿಲ್ಲ .
c ) ಅಲ್ಯುಮಿನಿಯಂ ಸುಲಭವಾಗಿ ನಶಿಸುವಕೆಗೆ ಒಳಗಾಗುವುದಿಲ್ಲ . ಯಾಕೆಂದರೆ ಅದು ಗಾಳಿಯಲ್ಲಿನ ಆಮ್ಲಜನಕದೊಂದಿಗೆ ವರ್ತಿಸಿ ಅಲ್ಯುಮಿನಿಯಂ ಆಕ್ಸೆಡ್ ನ ತೆಳ್ಳನೆಯ ಪದರವನ್ನು ನಿರ್ಮಿಸುತ್ತದೆ . ಈ ಪದರವು ಸ್ಥಿರವಾಗಿರುತ್ತದೆ ಮತ್ತು ಇನ್ನಷ್ಟು ಅಲ್ಯುಮಿನಿಯಂ ಆಕ್ಸಿಜನ್ ಜೊತೆ ವರ್ತಿಸದಂತೆ ತಡೆಯುತ್ತದೆ.ಅಲ್ಲದೆ ಅಲ್ಯುಮಿನಿಯಂ ಹಗುರವಾಗಿರುವ ಲೋಹ ಮತ್ತು ಉಷ್ಣದ ಉತ್ತಮ ವಾಹಕವಾಗಿದೆ .
d ) ಯಾಕೆಂದರೆ ಲೋಹಗಳನ್ನು ಸುಲಭವಾಗಿ ಅವುಗಳ ಆಕೈಡ್ ಗಳಿಂದ ಉದ್ದರಿಸಬಹುದು .

13) ಹೊಳಪು ಕಳೆದುಕೊಂಡ ತಾಮ್ರದ ಪಾತ್ರೆಗಳನ್ನು , ಲಿಂಬೆ ಅಥವಾ ಹುಣಸೆ ಹಣ್ಣಿನ ರಸದಿಂದ ಸ್ವಚ್ಛಗೊಳಿಸುವುದನ್ನು ನೀವು ನೋಡಿರುತ್ತೀರಿ . ಈ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಈ ಹುಳಿ ವಸ್ತುಗಳು ಏಕೆ ಪರಿಣಾಮಕಾರಿಯಾಗಿವೆ ವಿವರಿಸಿ .
ತಾಮ್ರವು ಗಾಳಿಯಲ್ಲಿರುವ ತೇವಾಂಶ ಪೂರಿತ ಇಂಗಾಲದ ಡೈ ಆಕ್ಸೆಡ್ ಜೊತೆ ವರ್ತಿಸಿ ತಾಮ್ರದ ಕಾರ್ಬೋನೇಟಿನ ಹಸಿರು ಪದರವನ್ನು ಉಂಟುಮಾಡುತ್ತದೆ . ಅದನ್ನು ಲಿಂಬೆ ಅಥವಾ ಹುಣಸೆಹುಳಿಗಳಲ್ಲಿರುವ ಆಮ್ಲಗಳಿಂದ ಸ್ವಚ್ಛಗೊಳಿಸಿದಾಗ ಕಾರ್ಬೋನೇಟ್ ತಟಸ್ಥೀಕರಣಗೊಂಡು ಆಮ್ಲದೊಂದಿಗೆ ವಿಲೀನವಾಗುತ್ತದೆ ಮತ್ತು ಪಾತ್ರೆಗೆ ಹೊಳಪು ಬರುತ್ತದೆ .

14) ರಾಸಾಯನಿಕ ಗುಣಗಳ ಆಧಾರದ ಮೇಲೆ ಲೋಹ ಮತ್ತು ಅಲೋಹಗಳಿಗಿರುವ ವ್ಯತ್ಯಾಸ ತಿಳಿಸಿ .
ಲೋಹಗಳು ಅಲೋಹಗಳು ವಿದ್ಯುಧನೀಯ ವಿದ್ಯುತ್ ಋಣೀಯ ಆಮ್ಲಜನಕದೊಂದಿಗೆ ವರ್ತಿಸಿ ಪ್ರತ್ಯಾಮ್ಲೀಯ ಆಕ್ಸೆಡ್ ಉಂಟುಮಾಡುತ್ತವೆ .

4Na + O₂ →2Na₂O   ಆಮ್ಲಜನಕದೊಂದಿಗೆ ವರ್ತಿಸಿ   ಆಮ್ಲೀಯ ಅಥವಾ ತಟಸ್ಥ ಆಕ್ಸೆಡ್                        ಉಂಟುಮಾಡುತ್ತವೆ . C + O₂ → CO₂ ಅಯಾನಿಕ ಬಂಧವನ್ನು ಹೊಂದಿವೆ  ಸಹವೇಲೆನ್ಸಿಯ ಬಂಧವನ್ನುಹೊಂದಿವೆ .
ನೀರಿನೊಂದಿಗೆ ವರ್ತಿಸಿ ಆಕ್ಸೆಡ್ ಮತ್ತು ಹೈಡ್ರಾಕ್ಸೆಡ್ ಗಳನ್ನು ಉಂಟುಮಾಡುತ್ತವೆ . ನೀರಿನೊಂದಿಗೆ ವರ್ತಿಸುವುದಿಲ್ಲ ಸಾರರಿಕ್ತ ಆಮ್ಲಗಳೊಂದಿಗೆ ವರ್ತಿಸಿ ಲವಣ ಉತ್ಪತ್ತಿ ಮಾಡಿ ಹೈಡೋಜನ್ ಅನಿಲ ಬಿಡುಗಡೆ  ಮಾಡುತ್ತವೆ .( Cu , Ag , Au , Pt , Hg ಹೊರತುಪಡಿಸಿ ) ಸಾರರಿಕ್ತ ಆಮ್ಲಗಳೊಂದಿಗೆ                ವರ್ತಿಸುವುದಿಲ್ಲ .
ಲೋಹೀಯ ಲವಣದ ದ್ರಾವಣದೊಂದಿಗೆ ವರ್ತಿಸುತ್ತವೆ. ಅಲೋಹೀಯ ಲವಣದ                                  ದ್ರಾವಣದೊಂದಿಗೆ ವರ್ತಿಸುತ್ತವೆ ಇವು ಅಪಕರ್ಷಣಕಾರಿಗಳಂತೆ ವರ್ತಿಸುತ್ತವೆ .    ಉತ್ಕರ್ಷಣಕಾರಿಗಳಂತೆ ವರ್ತಿಸುತ್ತವೆ .

15). ಒಬ್ಬ ಮನುಷ್ಯನು ತಾನು ಅಕ್ಕಸಾಲಿಗನೆಂದು ಹೇಳಿಕೊಳ್ಳುತ್ತಾ ಮನೆಯಿಂದ ಮನೆಗೆ ತಿರುಗುತ್ತಿದ್ದನು . ಹಳೆಯ ಮತ್ತು ಮಸುಕಾದ ಬಂಗಾರದ ಆಭರಣಗಳು ಮೊದಲಿನ ಹಾಗೆ ಹೊಳೆಯುವಂತೆ ಮಾಡಿಕೊಡುತ್ತೇನೆಂದು ಪ್ರಮಾಣಿಸಿ ಹೇಳುತ್ತಿದ್ದನು . ಮಹಿಳೆಯೊಬ್ಬಳು ಸಂಶಯವಿಲ್ಲದೆ ಆತನಿಗೆ ತನ್ನ ಚಿನ್ನದ ಬಳೆಗಳನ್ನು ಕೊಟ್ಟಾಗ , ಅವನು ಒಂದು ನಿರ್ದಿಷ್ಟ ದ್ರಾವಣದಲ್ಲಿ ಅವುಗಳನ್ನು ಅದ್ದಿದನು . ಬಳೆಗಳು ಹೊಸದೇನೋ ಎಂಬಂತೆ ಹೊಳೆದವು. ಆದರೆ ಗಣನೀಯವಾಗಿ ತನ್ನ ತೂಕವನ್ನು ಕಳೆದುಕೊಂಡವು . ಆ ಹೆಂಗಸು ಭ್ರಮನಿರಸನಗೊಂಡಳು . ಆದರೆ , ವ್ಯರ್ಥ ವಾಗ್ವಾದದ ನಂತರ ಮನುಷ್ಯನು ಅಪಾಯವನ್ನು ಮನಗಂಡು ಅಲ್ಲಿಂದ ಓಡಿಹೋದನು . ಅವನು ಬಳಸಿದ ಆ ದ್ರಾವಣದ ಸ್ವಭಾವವನ್ನು ನೀವು ಪತ್ತೆ ಮಾಡಬಲ್ಲಿರಾ ?
ಅವನು ಬಳಸಿದ ದ್ರಾವಣವು ಸಾರಯುತ ಹೈಡೋಕ್ಲೋರಿಕ್ ಆಮ್ಲ ಮತ್ತು ಸಾರಯುತ ನೈಟ್ರಿಕ್ ಆಮ್ಲಗಳ 3 : 1 ರ ಮಿಶ್ರಣ. ಇದನ್ನು ಅಕ್ವಾ ರೆಜಿಯಾ ಅಥವಾ ರಾಜಾಮ್ಲ ಎಂದು ಕರೆಯುತ್ತಾರೆ . ಈ ದ್ರಾವಣವು ಚಿನ್ನವನ್ನು ಕರಗಿಸುತ್ತದೆ . ಚಿನ್ನದ ಆಭರಣವನ್ನು ಈ ದ್ರಾವಣದಲ್ಲಿ ಅದ್ದಿದಾಗ ಆಭರಣದ ಮೇಲ್ಪದರವು ದ್ರಾವಣದಲ್ಲಿ ಕರಗಿ ಹೊಳೆಯುವ ಒಳಪದರವು ಕಾಣುತ್ತದೆ . ಚಿನ್ನವು ದ್ರಾವಣದಲ್ಲಿ ಕರಗುವ ಕಾರಣ ತೂಕದಲ್ಲಿ ವ್ಯತ್ಯಾಸವಾಗುತ್ತದೆ .

16). ಬಿಸಿ ನೀರಿನ ಹಂಡೆಗಳ ತಯಾರಿಕೆಯಲ್ಲಿ ತಾಮ್ರವನ್ನು ಬಳಸುತ್ತಾರೆಯೇ ವಿನಃ ಉಕ್ಕನ್ನು ( ಕಬ್ಬಿಣದ ಮಿಶ್ರಲೋಹ ) ಕಾರಣ ಕೊಡಿ

ತಾಮ್ರವು ತಂಪಾದ ನೀರಿನೊಂದಿಗೆ , ಬಿಸಿಯಾದ ನೀರಿನೊಂದಿಗೆ ಅಥವಾ ಹಬೆಯೊಂದಿಗೆ ವರ್ತಿಸುವುದಿಲ್ಲ.ಆದರೆ ಕಬ್ಬಿಣವು ಹಬೆಯೊಂದಿಗೆ ವರ್ತಿಸುತ್ತದೆ . ಮಿಶ್ರಲೋಹಗಳಲ್ಲಿರುವ ಕಬ್ಬಿಣವು ಹಬೆಯೊಂದಿಗೆ ವರ್ತಿಸುವ ಕಾರಣ ಬಿಸಿ ನೀರಿನ ಹಂಡೆಗಳ ತಯಾರಿಕೆಯಲ್ಲಿ ಉಕ್ಕನ್ನು ಬಳಸುವುದಿಲ್ಲ .

You Might Like

Post a Comment

0 Comments