Recent Posts

ನಿಯಂತ್ರಣ ಮತ್ತು ಸಹಭಾಗಿತ್ವ - ೧೦ ನೇ ತರಗತಿ ವಿಜ್ಞಾನ ಪುಸ್ತಕದ ಪ್ರಶ್ನೋತ್ತರಗಳು

 ಅಧ್ಯಾಯ-7
 ನಿಯಂತ್ರಣ ಮತ್ತು ಸಹಭಾಗಿತ್ವ ನೋಟ್ಸ್‌

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
1.ನಡಿಗೆ ಮತ್ತು ಪರಾವರ್ತಿತ ಪ್ರತಿಕ್ರಿಯೆ ಇವುಗಳ ನಡುವಿನ ವ್ಯತ್ಯಾಸವೇನು ?

ನಡಿಗೆಯು ಒಂದು ಐಚ್ಛಿಕ ಕ್ರಿಯೆಯಾಗಿದ್ದು ಅದಕ್ಕೆ ನಮ್ಮ ಆಲೋಚನೆಯ ಅಗತ್ಯವಿರುತ್ತದೆ ಮತ್ತು ಅದು ನಮ್ಮ ನಿಯಂತ್ರಣದಲ್ಲಿರುತ್ತದೆ.
ಆದರೆ ಪರಾವರ್ತಿತ ಪ್ರತಿಕ್ರಿಯೆಯು ಒಂದು ಪ್ರಚೋದನೆಗೆ ತನ್ನಿಂದ ತಾನೇ ಅತೀ ವೇಗವಾಗಿ ಉಂಟಾಗುವ ಪ್ರತಿಕ್ರಿಯೆ ಅದು ನಮ್ಮ ನಿಯಂತ್ರಣದಲ್ಲಿ ಇಲ್ಲ .

2. ಸಂಸರ್ಗದಲ್ಲಿ ಎರಡು ನರಕೋಶಗಳ ಮದ್ಯೆ ಏನಾಗುತ್ತದೆ . ?

ಸಂಸರ್ಗವೆಂದರೆ ಎರಡು ನರಕೋಶಗಳ ಮದ್ಯೆ ಇರುವ ಸ್ಥಳಾವಕಾಶ.ಸಂಸರ್ಗದಲ್ಲಿ ವಿದ್ಯುತ್ ಆವೇಗಗಳು ರಾಸಾಯನಿಕಗಳಾಗಿ ಪರಿವರ್ತನೆಗೊಂಡು ಸ್ಥಳಾವಕಾಶದ ಮೂಲಕ ಹಾದು ಹೋಗಿ ಮುಂದಿನ ನರಕೋಶಕ್ಕೆ ಸಾಗಿ ಅಲ್ಲಿ ಅದು ಮತ್ತೆ ವಿದ್ಯುತ್ ಆವೇಗಗಳಾಗಿ ಪರಿವರ್ತಿಸಲ್ಪಡುತ್ತದೆ .
3.ಮಿದುಳಿನ ಯಾವ ಭಾಗವು ದೇಹದ ಭಂಗಿ ಮತ್ತು ಸಮತೋಲನವನ್ನು ನಿರ್ವಹಿಸುತ್ತದೆ . ?
ಅನುಮಸ್ತಿಷ್ಕ ( ಸೆರಬೆಲ್ಲಮ್ )

4.ನಾವು ಒಂದು ಅಗರಬತ್ತಿ ( ಗಂಧದಕಡ್ಡಿ ) ಯ ವಾಸನೆಯನ್ನು ಹೇಗೆ ಕಂಡುಹಿಡಿಯುತ್ತೇವೆ ?
ಅಗರಬತ್ತಿಯ ವಾಸನೆಯು ನಮ್ಮ ಮೂಗಿಗೆ ತಲುಪಿದಾಗ ನಮ್ಮ ಮೂಗಿನಲ್ಲಿರುವ ಪ್ರಾಣ ನರವು ಅದನ್ನು ಗ್ರಹಿಸುತ್ತದೆ.ಪ್ರಾಣ ನರವು ವಿದ್ಯುತ್ ಸಂಕೇತಗಳ ಮೂಲಕ ಮಿದುಳಿನ ಮಹಾಮಸ್ಥಿಷ್ಟಕ್ಕೆ ಸಂದೇಶ ರವಾನಿಸುತ್ತದೆ.ಮಿದುಳು ಈ ಸಂದೇಶವನ್ನು ಗ್ರಹಿಸಿದಾಗ ವಾಸನೆಯ ಅರಿವು ಉಂಟಾಗುತ್ತದೆ .

5. ಪರಾವರ್ತಿತ ಪ್ರತಿಕ್ರಿಯೆಯಲ್ಲಿ ಮಿದುಳಿನ ಪಾತ್ರವೇನು ?
ಪರಾವರ್ತಿತ ಪ್ರತಿಕ್ರಿಯೆಯಲ್ಲಿ ಮಿದುಳಿನ ನೇರ ಪಾತ್ರ ಇರುವುದಿಲ್ಲ.ಇದು ಮಿದುಳು ಬಳ್ಳಿಯ ಸಹಾಯದಿಂದ ನಡೆಯುತ್ತದೆ .

6. ಸಸ್ಯ ಹಾರ್ಮೋನ್ ಗಳು ಎಂದರೇನು ?
ಸಸ್ಯಗಳು ತಮ್ಮ ಬೆಳವಣಿಗೆಗೆ , ಅಭಿವರ್ಧನೆಗೆ ಇತ್ಯಾದಿ ಕೆಲಸಗಳನ್ನು ನಿರ್ವಹಿಸಲು ಸ್ರವಿಸುವ ರಾಸಾಯನಿಕಯುಕ್ತ ರಸವೇ ಸಸ್ಯ ಹಾರ್ಮೋನ್.ಅವುಗಳನ್ನು ಫೈಟೋಹಾರ್ಮೋನ್ ಎಂದೂ ಕರೆಯುತ್ತಾರೆ .

7. ಮುಟ್ಟಿದರೆ ಮುನಿ ಎಂಬ ಸಸ್ಯದ ಎಲೆಗಳ ಚಲನೆಯು , ಬೆಳಕಿನ ಕಡೆಗೆ ಚಲಿಸುವ ಕಾಂಡದ ಚಲನೆಗಿಂತ ಹೇಗೆ ಭಿನ್ನವಾಗಿದೆ ?
ಮುಟ್ಟಿದರೆ ಮುನಿ ಸಸ್ಯದ ಎಲೆಗಳು ಸ್ಪರ್ಶಕ್ಕೆ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿ ತನ್ನ ಎಲೆಗಳನ್ನು ಚಲಿಸುತ್ತವೆ.ಇಲ್ಲಿ ಯಾವುದೇ ರೀತಿಯ ಬೆಳವಣಿಗೆ ಇರುವುದಿಲ್ಲ.ಆದರೆ ಕಾಂಡದ ಚಲನೆಯು ಬೆಳಕಿನೆಡೆಗೆ ಇರುವುದರಿಂದ ಬೆಳವಣಿಗೆ ಆಗುತ್ತದೆ .

8. ಬೆಳವಣಿಗೆಯನ್ನು ಉತ್ತೇಜಿಸುವ ಸಸ್ಯ ಹಾರ್ಮೋನ್ ಗಳಿಗೆ ಒಂದು ಉದಾಹರಣೆ ಕೊಡಿ .
ಆಕ್ಸಿನ್ .

9. ಒಂದು ಆಧಾರದ ಸುತ್ತ ಬಳ್ಳಿ ಕುಡಿಗಳ ಬೆಳವಣಿಗೆಯನ್ನು ಆಕ್ಸಿನ್ ಗಳು ಹೇಗೆ ಉತ್ತೇಜಿಸುತ್ತವೆ . ?
ಒಂದು ಬಳ್ಳಿ ಕುಡಿಯು ಆಧಾರ ಸಸ್ಯದ ಸಂಪರ್ಕಕ್ಕೆ ಬಂದಾಗ ಆಧಾರಕ್ಕೆ ಸಂಪರ್ಕಿಸಿರುವ ಭಾಗವು ಸಂಪರ್ಕಿಸದೇ ಇರುವ ಭಾಗಕ್ಕಿಂತ ನಿಧಾನವಾಗಿ ಬೆಳಯುತ್ತದೆ.ಇದಕ್ಕೆ ಕಾರಣ ಆಕ್ಸಿನ್ ಹಾರ್ಮೋನ್.ಆಧಾರಕ್ಕೆ ಸಂಪರ್ಕವಿರುವ ಭಾಗದಲ್ಲಿ ಆಕ್ಸಿನ್ ಕಡಿಮೆ ಉತ್ಪತ್ತಿಯಾಗುತ್ತದೆ ಮತ್ತು ಆಧಾರಕ್ಕೆ ಸಂಪರ್ಕ ಇರದೇ ಇರುವ ಭಾಗದಲ್ಲಿ ಆಕ್ಸಿನ್ ಹೆಚ್ಚು ಉತ್ಪತ್ತಿಯಾಗಿ ಆ ಭಾಗದ ಸಸ್ಯ ಹೆಚ್ಚು ಬೆಳೆದು ಆಧಾರ ಸಸ್ಯಕ್ಕೆ ಸುರುಳಿ ಸುತ್ತುತ್ತದೆ .

10.ಜಲಾನುವರ್ತನೆಯನ್ನು ತೋರಿಸುವ ಒಂದು ಪ್ರಯೋಗವನ್ನು ವಿನ್ಯಾಸಗೊಳಿಸಿ ?
ಎರಡು ಸಣ್ಣ ಬೀಕರ್ ಗಳನ್ನು ತೆಗೆದುಕೊಂಡು ಅದನ್ನು A ಮತ್ತು B ಎಂದು ಹೆಸರಿಸಬೇಕು.ಮೊದಲನೆಯ ಬೀಕರನ್ನು ನೀರಿನಿಂದ ತುಂಬಬೇಕು.ಸೋಸು ಕಾಗದವನ್ನು ಎರಡು ಬೀಕರ್ ಗಳ ನಡುವೆ ಸಂಪರ್ಕ ಸೇತುವೆಯಂತೆ ( ಚಿತ್ರದಲ್ಲಿರುವಂತೆ ) ಮಡಚಿ.ಕೆಲವು ಮೊಳಕೆಯೊಡೆದ ಬೀಜಗಳನ್ನು ಈ ಸೇತುವೆಯ ಮದ್ಯದಲ್ಲಿರಿಸಬೇಕು.ಸಂಪೂರ್ಣ ಉಪಕರಣವನ್ನು ಒಂದು ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಬೇಕು .
ವೀಕ್ಷಣೆ : ಮೊಳಕೆಯೊಡೆದ ಬೀಜದ ಬೇರುಗಳು A ಬೀಕರಿನೆಡೆಗೆ ಚಲಿಸುತ್ತವೆ .

11.ಪ್ರಾಣಿಗಳಲ್ಲಿ ರಾಸಾಯನಿಕ ಹೊಂದಾಣಿಕೆಯು ಹೇಗೆ ಉಂಟಾಗುತ್ತದೆ . ?
ಪ್ರಾಣಿಗಳಲ್ಲಿ ರಾಸಾಯನಿಕ ಹೊಂದಾಣಿಕೆಯು ಹಾರ್ಮೋನ್ ಗಳ ಮೂಲಕ ನಡೆಯುತ್ತದೆ.ಗ್ರಂಥಿಗಳು ಸ್ರವಿಸುವ ರಾಸಾಯನಿಕಗಳೇ ಹಾರ್ಮೋನ್ ಗಳು.ಇವುಗಳು ಪ್ರಾಣಿಗಳ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ನಿಯಂತ್ರಿಸುತ್ತವೆ.

12. ಅಯೋಡಿನ್ ಯುಕ್ತ ಉಪ್ಪಿನ ಬಳಕೆಯನ್ನು ಏಕೆ ಶಿಫಾರಸ್ಸು ಮಾಡಲಾಗುವುದು ?
ಅಯೋಡಿನ್ ನಮ್ಮ ದೇಹದಲ್ಲಿ ಥೈರಾಯಿಡ್ ಗ್ರಂಥಿಯು ಥೈರಾಕ್ಸಿನ್ ಹಾರ್ಮೋನ್ ಉತ್ಪಾದಿಸಲು ಪ್ರಚೋದಿಸುತ್ತವೆ.ಈ ಹಾರ್ಮೋನ್ ದೇಹದಲ್ಲಿನ ಕಾರ್ಬೋಹೈಡ್ರೆಟ್ , ಲಿಪಿಡ್ ಮತ್ತು ಪ್ರೋಟಿನ್ ಗಳ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುತ್ತದೆ.ಇದರ ಕೊರತೆಯಿಂದ ಥೈರಾಯಿಡ್ ಗ್ರಂಥಿಯು ಊದಿಕೊಳ್ಳುತ್ತದೆ.ಈ ತೊಂದರೆಗೆ ಸರಳ ಗಳಗಂಡ ಅಥವಾ ಗಾಯಿಟರ್ ಎನ್ನುತ್ತಾರೆ .

13. ಅಡ್ರಿನಲಿನ್ ರಕ್ತದಲ್ಲಿ ಸ್ರವಿಕೆಯಾದಾಗ ನಮ್ಮ ದೇಹವು ಹೇಗೆ ಪ್ರತಿಕ್ರಿಯಿಸುತ್ತದೆ ?
ನಾವು ಅಪಾಯದಲ್ಲಿದ್ದಾಗ ಅಥವಾ ಯಾವುದೇ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಅಡ್ರಿನಲ್ ಗ್ರಂಥಿಯು ಅಡ್ರಿನಾಲಿನ್ ಹಾರ್ಮೋನ್ ಅನ್ನು ಉತ್ಪಾದಿಸುತ್ತದೆ.ಇದು ನೇರವಾಗಿ ರಕ್ತಕ್ಕೆ ಸ್ರವಿಸಲ್ಪಟ್ಟು ಅದರ ಮೂಲಕ ದೇಹದ ಎಲ್ಲಾ ಭಾಗಗಳಿಗೆ ಸಾಗಿಸಲ್ಪಡುತ್ತದೆ.ಇದು ಹೃದಯ ಬಡಿತವನ್ನು ಹೆಚ್ಚಿಸುವುದರ ಮೂಲಕ ದೇಹದ ಸ್ನಾಯುಗಳಿಗೆ ಅಧಿಕ ಆಮ್ಲಜನಕ ಒದಗಿಸುತ್ತದೆ , ಮತ್ತು ತನ್ಮೂಲಕ ಉಸಿರಾಟದ ವೇಗವನ್ನು ಮತ್ತು ರಕ್ತದ ಒತ್ತಡವನ್ನು ಹೆಚ್ಚಿಸಿ ದೇಹವು ಆ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗುವಂತೆ ಮಾಡುತ್ತದೆ .

14. ಕೆಲವು ಮಧುಮೇಹ ರೋಗಿಗಳಿಗೆ ಇನ್ಸುಲಿನ್ ಚುಚ್ಚುಮದ್ದನ್ನು ನೀಡುವ ಮೂಲಕ ಚಿಕಿತ್ಸೆ ನೀಡಲು ಕಾರಣವೇನು ?
ಮಧುಮೇಹ ಕಾಯಿಲೆಯು ಮೇದೋಜೀರಕ ಗ್ರಂಥಿಯು ಸ್ರವಿಸುವ ಇನ್ಸುಲಿನ್ ಹಾರ್ಮೋನಿನ ಅತಿಯಾದ ಸ್ರವಿಕೆಯಿಂದ ಅಥವಾ ಕಡಿಮೆ ಸ್ರವಿಕೆಯಿಂದ ಉಂಟಾಗುತ್ತದೆ.ಇನ್ಸುಲಿನ್ ರಕ್ತದಲ್ಲಿ ಹೆಚ್ಚಾದ ಭೂಕೋಸನ್ನು ಗೈಕೋಜನ್ ಆಗಿ ಪರಿವರ್ತಿಸುತ್ತದೆ.ಯಾರ ದೇಹದಲ್ಲಿ ಇನ್ಸುಲಿನ್ ಕೊರತೆ ಇರುತ್ತದೆಯೋ ಅಂಥಹ ವ್ಯಕ್ತಿಗೆ ಇನ್ಸುಲಿನ್ ಚುಚ್ಚುಮದ್ದನ್ನು ನೀಡಲಾಗುತ್ತದೆ .

ಅಭ್ಯಾಸದ ಪ್ರಶ್ನೆಗಳು

1.ಈ ಕೆಳಗಿನವುಗಳಲ್ಲಿ ಯಾವುದು ಸಸ್ಯ ಹಾರ್ಮೋನ್ ?

d ) ಸೈಟೋಕೈನಿನ್ .

2.ಎರಡು ನರಕೋಶಗಳ ನಡುವಿನ ಅಂತರವನ್ನು ಹೀಗೆಂದು ಕರೆಯುತ್ತಾರೆ
ಸಂಸರ್ಗ .

3. ಮಿದುಳಿನ ಪ್ರಮುಖ ಕಾರ್ಯವೆಂದರೆ
d ) ಮೇಲಿನ ಎಲ್ಲವೂ .

4. ನಮ್ಮ ದೇಹದಲ್ಲಿ ಗ್ರಾಹಕಗಳ ಕಾರ್ಯವೇನು ? ಗ್ರಾಹಕಗಳು ಸರಿಯಾಗಿ ಕಾರ್ಯನಿರ್ವಹಿಸದ ಸಂದರ್ಭಗಳನ್ನು ಯೋಚಿಸಿ . ಯಾವ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿವೆ ?
ಗ್ರಾಹಕಗಳು , ಬಾಹ್ಯ ಪ್ರಚೋದನೆಗಳಾದಂತಹ ತಾಪ , ಒತ್ತಡ ಇತ್ಯಾದಿಗಳನ್ನು ಗ್ರಹಿಸುತ್ತವೆ .
ಮಿದುಳು ಬಳ್ಳಿಗೆ ಸಂದೇಶ ರವಾನಿಸಲು ಜ್ಞಾನವಾಹಿ ನರಕೋಶವನ್ನು ಚೋದಿಸುತ್ತದೆ .
ಗ್ರಾಹಕ ಕೋಶಗಳು ಹಾನಿಗೊಳಗಾದಾಗ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ.ಉದಾ : ಹಾನಿಗೊಳಗಾದ ಗ್ರಾಹಕ ಕೋಶಗಳಿದ್ದರೆ , ನಾವು ಆಕಸ್ಮಿಕವಾಗಿ ಬಿಸಿಯಾದ ವಸ್ತ್ರವನ್ನು ಮುಟ್ಟಿದಾಗ , ನಮ್ಮ ಕೈ ಸುಟ್ಟು ಹೋಗುವ ಸಾಧ್ಯತೆ ಇದೆ ಯಾಕೆಂದರೆ ತಕ್ಷಣ ಮಿದುಳು ಬಳ್ಳಿಗೆ ಸಂದೇಶ ರವಾನಿಸಲ್ಪಡದೇ ಇರುವುದು

5. ಒಂದು ನರಕೋಶದ ರಚನೆಯನ್ನು ತೋರಿಸುವ ಚಿತ್ರ ಬರೆಯಿರಿ ಮತ್ತು ಅದರ ಕಾರ್ಯವನ್ನು ವಿವರಿಸಿ.
 

ನರಕೋಶದ ಕಾರ್ಯ ,
ಆಕ್ಸಾನ್ : ಕೋಶಕಾಯದಿಂದ ಸಂದೇಶವನ್ನು ಸಾಗಿಸುತ್ತದೆ .
ಡೆಂಡ್ರೈಟ್ : ಇನ್ನೊಂದು ನರಕೋಶದ ಆಕ್ಸಾನ್ ನಿಂದ ಸಂದೇಶವನ್ನು ಸ್ವೀಕರಿಸಿ ಅದನ್ನು ಕೋಶಕಾಯಕ್ಕೆ ಸಾಗಿಸುತ್ತದೆ .
ಕೋಶಕಾಯ : ಇದು ನ್ಯೂಕ್ಲಿಯಸ್ ಹೊಂದಿದ್ದು , ಮೈಟೋಕಾಂಡ್ರಿಯಾ ಮತ್ತು ಇತರೆ ಕಣದಂಗಗಳನ್ನು ಹೋದಿದೆ.ಇದು ಪ್ರಮುಖವಾಗಿ ನರಕೋಶದ ನಿರ್ವಹಣೆ ಮತ್ತು ಬೆಳವಣಿಗೆಗೆ ಸಂಬಂಧಿಸಿದ್ದಾಗಿದೆ .

6. ಸಸ್ಯಗಳಲ್ಲಿ ದ್ಯುತಿ ಅನುವರ್ತನೆ ಹೇಗೆ ಉಂಟಾಗುತ್ತದೆ ?
ಸಸ್ಯಗಳು ಬೆಳಕಿಗೆ ತೋರುವ ಪ್ರತಿವರ್ತನೆಯೇ ದ್ಯುತಿ ಅನುವರ್ತನೆ.ಕಾಂಡವು ದುತಿ ಧನಾನುವರ್ತನೆಯನ್ನು ಮತ್ತು ಬೇರು ದ್ಯುತಿ ಋಣಾನುವರ್ತನೆಯನ್ನು ತೋರಿಸುತ್ತವೆ.ಅಂದರೆ ಕಾಂಡವು ಬೆಳಕಿನ ಕಡೆಗೆ ಬಾಗುತ್ತದೆ ಮತ್ತು ಬೇರು ಬೆಳಕಿನ ವಿರುದ್ಧ ದಿಕ್ಕಿಗೆ ಬಾಗುತ್ತದೆ .
ಉದಾ : ಸೂರ್ಯಕಾಂತಿ ಹೂವು ದ್ಯುತಿ ಧನಾನುವರ್ತನೆಯನ್ನು ತೋರಿಸುತ್ತದೆ.ಅದು ಸೂರ್ಯ ಪೂರ್ವದಿಂದ ಪಶ್ಚಿಮಕ್ಕೆ ಚಲಿಸುವಾಗ ಅದೇ ದಿಕ್ಕಿನಲ್ಲಿ ಬಾಗುತ್ತದೆ .

7.ಮಿದುಳು ಬಳ್ಳಿಯು ಗಾಯಗೊಂಡ ಸಂದರ್ಭದಲ್ಲಿ ಯಾವ ಸಂಕೇತಗಳ ರವಾನೆಗೆ ಅಡ್ಡಿಯುಂಟಾಗುತ್ತದೆ?
ಮಿದುಳು ಬಳ್ಳಿಯು ಗಾಯಗೊಂಡ ಸಂದರ್ಭದಲ್ಲಿ ನರಕೋಶಗಳಿಂದ ಬರುವ ಸಂದೇಶಗಳು ಮತ್ತು ಗ್ರಾಹಕಗಳಿಂದ ಬರುವ ಸಂದೇಶಗಳಿಗೆ ಅಡ್ಡಿಯುಂಟಾಗುತ್ತದೆ .

8. ಸಸ್ಯಗಳಲ್ಲಿ ರಾಸಾಯನಿಕ ಸಹಭಾಗಿತ್ವ ಹೇಗೆ ಉಂಟಾಗುತ್ತದೆ ?
ಸಸ್ಯಗಳಲ್ಲಿ ರಾಸಾಯನಿಕ ಸಹಭಾಗಿತ್ವವು ಸಸ್ಯ ಹಾರ್ಮೋನ್ ಗಳ ಮೂಲಕ ನಡೆಯುತ್ತದೆ.ಸಸ್ಯಗಳ ಬೆಳವಣಿಗೆಗೆ , ವಿಕಾಸ ಮತ್ತು ಪರಿಸರದ ಬದಲಾವಣೆಗಳಿಗೆ ಪ್ರತಿಕ್ರಿಯಿಸಲು ಅನೇಕ ವಿಧದ ಹಾರ್ಮೋನ್ ಗಳನ್ನು ಸಸ್ಯಗಳು ಉತ್ಪಾದಿಸುತ್ತವೆ.ಉದಾ : ಆಕ್ಸಿನ್ ಸಸ್ಯದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.ಗಿಬ್ಬರ್ ಲಿನ್ಸ ಕಾಂಡದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ , ಸೈಟೋಕೈನಿನ್ ಕೋಶವಿಭಜನೆಯನ್ನು ಉತ್ತೇಜಿಸುತ್ತದೆ , ಅಬ್ಬಿಸಿಕ್ ಆಮ್ಲವು ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ .

9.ಒಂದು ಜೀವಿಯಲ್ಲಿ ಸಹಭಾಗಿತ್ವ ಮತ್ತು ನಿಯಂತ್ರಣ ವ್ಯವಸ್ಥೆಯ ಅಗತ್ಯವೇನು ?
ಒಂದು ಜೀವಿಯು ಬದುಕುಳಿಯಬೇಕಾದರೆ ಅದರ ದೇಹದಲ್ಲಿರುವ ವಿವಿಧ ಅಂಗಗಳನ್ನು ಸರಿಯಾಗಿ ಸಹಬಾಗಿತ್ವ ಮತ್ತು ನಿಯಂತ್ರಣದಲ್ಲಿಡಬೇಕು.ದೇಹದಲ್ಲಿ ಉತ್ಪತ್ತಿಯಾಗುವ ಹಾರ್ಮೋನ್ ಗಳು ಹೇಹದ ಒಟ್ಟಾರೆ ಬೆಳವಣಿಗೆ ಮತ್ತು ವಿಕಾಸಕ್ಕೆ ಕಾರಣವಾಗಿವೆ.ಅದೇ ರೀತಿ ನಮ್ಮ ದೈನಂದಿನ ಐಚ್ಛಿಕ ಮತ್ತು ಅನೈಚ್ಛಿಕ ಚಟುವಟಿಕೆಗಳನ್ನು ಕೇಂದ್ರ ನರವ್ಯೂಹವು ನಿಯಂತ್ರಿಸುತ್ತದೆ .

10.ಅನೈಚ್ಛಿಕ ಕ್ರಿಯೆಗಳು ಮತ್ತು ಪರಾವರ್ತಿತ ಕ್ರಿಯೆಗಳು ಪರಸ್ಪರ ಹೇಗೆ ಭಿನ್ನವಾಗಿವೆ ?
ಅನೈಚ್ಛಿಕ ಕ್ರಿಯೆಗಳು ಸ್ನಾಯುಗಳ ಚಲನೆಯಾಗಿದ್ದು ಯಾವುದೇ ರೀತಿಯ ಯೋಚನೆಯ ಅಗತ್ಯವಿರುವುದಿಲ್ಲ.ಆದರೆ ಇದು ಮಿದುಳಿನ ನಿಯಂತ್ರಣದಲ್ಲಿ ಇರುತ್ತದೆ.ಉದಾ : ಹೃದಯ ಬಡಿತ.ಪರಾವರ್ತಿತ ಕ್ರಿಯೆಗಳು ಒಂದು ಚೋದನೆಗೆ ತಕ್ಷಣ ಮತ್ತು ಕ್ಷಿಪ್ರವಾಗಿ ವ್ಯಕ್ತಪಡಿಸುವ ಪ್ರತಿಕ್ರಿಯೆ.ಉದಾ : ಬಿಸಿಯಾದ ವಸ್ತುವನ್ನು ಮುಟ್ಟಿದಾಕ್ಷಣ ಕೈಯನ್ನು ಹಿಂದಕ್ಕೆ ಎಳೆಯುವುದು .

11.ಪ್ರಾಣಿಗಳಲ್ಲಿ ಸಹಭಾಗಿತ್ವ ಮತ್ತು ನಿಯಂತ್ರಣಕ್ಕಾಗಿ ಇರುವ ನರ ಹಾರ್ಮೋನ್ ಗಳ ಕಾರ್ಯವಿಧಾನವನ್ನು ಹೋಲಿಸಿ ಮತ್ತು ಅವುಗಳ ನಡುವಿನ ವ್ಯತ್ಯಾಸಗಳನ್ನು ಪಟ್ಟಿ ಮಾಡಿ .12.ಮುಟ್ಟಿದರೆ ಮುನಿ ಸಸ್ಯದಲ್ಲಿ ಉಂಟಾಗುವ ಚಲನೆ ಮತ್ತು ನಮ್ಮ ಕಾಲುಗಳಲ್ಲಿನ ಚಲನೆಯ ನಡುವಿನ ವ್ಯತ್ಯಾಸವೇನು ?


You Might Like

Post a Comment

0 Comments