Recent Posts

ಗೌರವಿಸು ಜೀವನವ - ೦೮ ನೇ ತರಗತಿ ತಿಳಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


ಗೌರವಿಸು ಜೀವನವ

ಕೃತಿಕಾರರ ಪರಿಚಯ :
 
 
- ಡಿ.ವಿ.ಜಿ.  
?  ಡಿವಿಜಿ ಎಂದು ಪ್ರಸಿದ್ಧರಾಗಿರುವ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ ಅವರು 1887 ರಲ್ಲಿ ಕೋಲಾರ ಜಿಲ್ಲೆಯ ಮುಳಬಾಗಿಲಲ್ಲಿ ಜನಿಸಿದರು.  
?  ಇವರು ಮಂಕುತಿಮ್ಮನ ಕಗ್ಗ, ಮರುಳುಮುನಿಯನ ಕಗ್ಗ, ಉಮರನ ಒಸಗೆ, ಜ್ಞಾಪಕ ಚಿತ್ರಶಾಲೆ, ಅಂತಃಪುರದ ಗೀತೆಗಳು,  ಶ್ರೀ ಮದ್ಭಗವದ್ಗೀತಾ ತಾತ್ಪರ್ಯ - ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
?  ಶ್ರೀಯುತರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಗೌರವ ಡಿ.ಲಿಟ್. ಪದವಿ ಲಭಿಸಿದೆ.  
?  ಗೌರವಿಸು ಜೀವನವ ಪದ್ಯ ಭಾಗವನ್ನು ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಕೃತಿಯಿಂದ ಆಯ್ಕೆಮಾಡಿಕೊಳ್ಳಲಾಗಿದೆ.                                        

ಅಭ್ಯಾಸ

1. ಪದಗಳ ಅರ್ಥ ತಿಳಿಯಿರಿ :
ಅನುಗ್ರಹ - ಕೃಪೆ; ಆಶೀರ್ವಾದ; ದಯೆ.                         
ಅಲ್ಪ - ಕಡಿಮೆ
ಆತ್ಮೋನ್ನತಿ - ಅಧ್ಯಾತ್ಮ ಸಾಧನೆಯಿಂದ ಉನ್ನತಿಗೇರುವುದು.            
ಕೆಳೆ - ಸ್ನೇಹ; ಗೆಳೆತನ.
ಕೂಟ - ಸಂಗ; ಗುಂಪು.                                   
ಚೇತನ - ಮನಸ್ಸು; ಶಕ್ತಿ;
ಆತ್ಮ. ಜೀವನ - ಬದುಕು                                        
ತಣಿ - ತಂಪಾಗು; ತೃಪ್ತಿಹೊಂದು.
ತೃಣ - ಹುಲ್ಲು; ಗರಿಕೆ.                                     
ದಿನಪ - ಸೂರ್ಯ; ರವಿ; ಆದಿತ್ಯ.
ನೂತ್ನ - ನೂತನ; ಹೊಸ.                                  
ಪುಣ್ಯ - ಭಾಗ್ಯ; ಅದೃಷ್ಟ.
ಬ್ರಹ್ಮಾನುಭವಿ - ಅನುಭಾವದಿಂದ ಸಿದ್ಧಿ ಪಡೆದವರು.                 
ಭೇದ - ಒಡಕು; ಬಿರುಕು; ಭಿನ್ನತೆ.
ಮೊಡಕು - ಮೂಲೆ                                       
ಮೃತ್ಯು - ಸಾವು; ಮರಣ.
ವಿಸ್ತಾರ - ಹರವು; ವಿಶಾಲತೆ.                                 
ಸಮೃದ್ಧಿ - ಐಶ್ವರ್ಯ; ಪ್ರಗತಿ.
ಸತ್ತ್ವ - ಸಾರ; ಬಲ; ಇರುವಿಕೆ.

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

1. ಕಣ್ಣಿನ ಪುಣ್ಯ ಯಾವುದು?
ತೃಣದ ಹಸಿರು ಬಣ್ಣ ನೋಡುವುದೇ ಕಣ್ಣಿನ ಪುಣ್ಯವಾಗಿದೆ.

2. ಡಿವಿಜಿ ಅವರು ಮಾನವ ಹೇಗೆ ಬಾಳಬೇಕು ಎಂದಿದ್ದಾರೆ?
ಡಿವಿಜಿ ಅವರು ಮಾನವ ಹೃದಯ ವೈಶಾಲ್ಯತೆಯಿಂದ ಬಾಳಬೇಕು ಎಂದಿದ್ದಾರೆ.

3. ಡಿವಿಜಿ ಅವರು ಯಾವುದನ್ನು ಗೌರವಿಸಬೇಕು ಎಂದಿದ್ದಾರೆ?
ಡಿವಿಜಿ ಅವರು ಜೀವನವನ್ನು ಗೌರವಿಸಬೇಕು ಎಂದಿದ್ದಾರೆ.

4. ಆತ್ಮೋನ್ನತಿಗೆ ದಾರಿ ಯಾವುದೆಂದು ಡಿವಿಜಿ ಹೇಳಿದ್ದಾರೆ?
ಆತ್ಮೋನ್ನತಿಗೆ ದಾರಿ ಬದುಕಿನಲ್ಲಿ ಸಮೃದ್ಧಿಯನ್ನು ಕಾಣುವುದಾಗಿದೆ.

5. ಡಿವಿಜಿ ಅವರ ಪೂರ್ಣ ಹೆಸರೇನು?
ಡಿವಿಜಿ ಅವರ ಪೂರ್ಣ ಹೆಸರು ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ.

6. ಗೌರವಿಸು ಜೀವನವ ಕಾವ್ಯ ಭಾಗದ ಮೂಲ ಕೃತಿ ಯಾವುದು?
ಗೌರವಿಸು ಜೀವನವ ಕಾವ್ಯ ಭಾಗದ ಮೂಲ ಕೃತಿ ಮಂಕುತಿಮ್ಮನ ಕಗ್ಗ  

ಆ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1. ತೃಣದ ಹಸಿರಿಗೆ ಕಾರಣವಾದ ಅಂಶಗಳಾವುವು?
ತೃಣದ ಹಸಿರಿಗೆ ಕಾರಣವಾದ ಅಂಶಗಳಾವುವೆಂದರೆ ಬೇರು, ಮಣ್ಣು, ಸೂರ್ಯ, ಚಂದ್ರ, ನೀರು ಮತ್ತು ನೋಡುವ ಕಣ್ಣುಗಳಾಗಿವೆ.

2. ಡಿವಿಜಿ ಅವರು ಜೀವನ ಯಾವಾಗ ಸಮೃದ್ಧವಾಗುತ್ತದೆ ಎಂದಿದ್ದಾರೆ?
ಡಿವಿಜಿ ಅವರು ಜೀವನವನ್ನು ನಾವು ಗೌರವಿಸುವುದರ ಮೂಲಕ, ಚೇತನವನ್ನು ಗೌರವಿಸುವುದರ ಮೂಲಕ, ಈ ಜಗತ್ತು ನನ್ನದೇ ಎಂಬ ಭಾವ ಹೊಂದುವುದರ ಮೂಲಕ ಜೀವನ ಸಮೃದ್ಧವಾಗುತ್ತದೆ ಎಂದಿದ್ದಾರೆ.

3. ಬ್ರಹ್ಮಾನುಭವ ಪಡೆಯುವುದು ಹೇಗೆ?
ಹೂದೋಟ, ಸ್ನೇಹಿತರ ಗುಂಪು, ಸಂಗೀತ, ಶಾಸ್ತ್ರ, ಸಂಸಾರ, ಮೌನ ಮುಂತಾದ ಸಂದರ್ಭಗಳಲ್ಲಿ ತನ್ಮಯತೆಯನ್ನು ಹೃದಯ ವೈಶಾಲ್ಯತೆಯನ್ನು ರೂಢಿಸಿಕೊಂಡು ಬ್ರಹ್ಮಾನುಭವ ಪಡೆಯಬಹುದಾಗಿದೆ.

4. ಜೀವನ ಮತ್ತು ಚೇತನವನ್ನು ಏಕೆ ಗೌರವಿಸಬೇಕು?
ನಮ್ಮ ಈ ಜೀವನವನ್ನು ಗೌರವಿಸಬೇಕು. ಈ ಜೀವಕ್ಕೆ ಮೂಲವಾದ ಚೇತನವನ್ನು ಗೌರವಿಸಬೇಕು. ಇವೆರಡರ ಸಂಗಮದಿಂದ ಮಾತ್ರ ನಮ್ಮ ಬದುಕಿನಲ್ಲಿ ಸಮೃದ್ಧಿ ಕಾಣಲು ಸಾಧ್ಯ. ನಮ್ಮ ಜೀವನ ಮತ್ತು ಚೇತನ ಶುದ್ಧವಾಗಿದ್ದರೆ ಆಗ ನಾವು ಮಾಡುವ ಪ್ರತಿ ಕೆಲಸಗಳು ಶುದ್ಧವಾಗಿರುತ್ತವೆ. ಹೀಗಾಗಿ ಜೀವನ ಮತ್ತು ಚೇತನವನ್ನು ಗೌರವಿಸಬೇಕು.

5. ಮೃತ್ಯು ಯಾವಾಗ ಅಲ್ಪವಾಗಿ ತೋರುತ್ತದೆ?
ಬದುಕಿನ ಎಲ್ಲ ಸಮಯದಲ್ಲಿ ಹೃದಯ ವೈಶಾಲ್ಯತೆಯನ್ನು ರೂಢಿಸಿಕೊಂಡಾಗ ನಮ್ಮ ಬದುಕು ಕತ್ತಲೆಯ ಮೂಲೆಯಿಂದ ಬೆಳಕಿನಡೆಗೆ ಸಾಗುತ್ತದೆ. ಆ ಭಾಸ್ಕರ ಎಲ್ಲ ಜೀವಿಗಳನ್ನು ತನ್ನ ಬೆಳಕಿನ ಅನುಗ್ರಹದಿಂದ ಹೊಸತು ಜೀವನದ ಕಡೆ ಕೊಂಡೊಯ್ಯುವಾಗ ಎಲ್ಲರನ್ನು ಬಾಧಿಸುವ ಮೃತ್ಯು ಕೂಡ ಆಗ ಅಲ್ಪವಾಗಿ ತೋರುತ್ತದೆ.  

ಇ) ಕೆಳಗಿನ ಪ್ರಶ್ನೆಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

1. ಗೌರವಿಸು ಜೀವನವ ಪದ್ಯಗಳಲ್ಲಿ ಅಂತರ್ಗತವಾಗಿರುವ ಕವಿಯ ಭಾವನೆಗಳನ್ನು ವಿವರಿಸಿ.
ನಮ್ಮ ಈ ಜೀವನವನ್ನು ಗೌರವಿಸಬೇಕು. ಈ ಜೀವಕ್ಕೆ ಮೂಲವಾದ ಚೇತನವನ್ನು ಗೌರವಿಸಬೇಕು. ಇದು ಯಾರದೋ ಜಗತ್ತು, ನಾನೇನು ಇಲ್ಲಿ ಶಾಶ್ವತವಾಗಿರುವುದಿಲ್ಲ ಎನ್ನುವ ಭಾವವನ್ನು ತೊರೆದು ಬದುಕಿನಲ್ಲಿ ಸಮೃದ್ಧಿಯನ್ನು ಕಾಣಲು ಪ್ರಯತ್ನಿಸಬೇಕು. ನಮ್ಮ ದೇಹ, ಮನಸ್ಸು ಮತ್ತು ಚೇತನ ಶುದ್ಧವಾಗಿರಬೇಕು. ಆಗ ನಾವು ಮಾಡುವ ಪ್ರತಿ ಕೆಲಸಗಳೂ ಶುದ್ಧವಾಗಿರುತ್ತವೆ. ಅದು ಆತ್ಮೋನ್ನತಿಗೆ ದಾರಿಯಾಗುತ್ತದೆ.       
ಪ್ರಪಂಚದಲ್ಲಿ ನಾವು ನೋಡುವ ಪ್ರತಿ ವಸ್ತುವಿನಲ್ಲೂ ಹಲವು ಸೋಜಿಗಗಳಿವೆ. ತೃಣದ ಹಸಿರಿಗೆ ಕಾರಣವಾದ ಬೇರು, ಮಣ್ಣು, ಸೂರ್ಯ, ಚಂದ್ರ, ನೀರು ಮತ್ತು ನೋಡುವ ಕಣ್ಣುಗಳಾಗಿವೆ. ಆ ಸೋಜಿಗಗಳಿಗೆ ಕಾರಣಗಳನ್ನು ಹುಡುಕಲು ನಮ್ಮಿಂದ ಸಾಧ್ಯವಿಲ್ಲ. ಆ ಪರಮಾತ್ಮ ತನ್ನಿಚ್ಛೆಯಂತೆ ತನ್ನ ಸಂತೋಷಕ್ಕೆ ಎಲ್ಲವನ್ನೂ ಸೃಷ್ಟಿಸಿ ಆನಂದಪಡುತ್ತಾನೆ. ಹೀಗಾಗಿ ನಮ್ಮಲ್ಲಿರುವ ಅಹಂಕಾರವನ್ನು ಬಿಟ್ಟು ಆನಂದಪಡುವುದನ್ನು  ಕಲಿಯಬೇಕು. ಹೂದೋಟ, ಸ್ನೇಹಿತರ ಗುಂಪು, ಸಂಗೀತ, ಶಾಸ್ತ್ರ, ಸಂಸಾರ, ಮೌನ ಮುಂತಾದ ಸಂದರ್ಭಗಳಲ್ಲಿ ತನ್ಮಯತೆಯನ್ನು ಹೃದಯ ವೈಶಾಲ್ಯತೆಯನ್ನು ರೂಢಿಸಿಕೊಂಡು ಬ್ರಹ್ಮಾನುಭವ ಪಡೆಯಬಹುದಾಗಿದೆ. ಬದುಕಿನ ಎಲ್ಲ ಸಮಯದಲ್ಲಿ ಹೃದಯ ವೈಶಾಲ್ಯತೆಯನ್ನು ರೂಢಿಸಿಕೊಂಡಾಗ ನಮ್ಮ ಬದುಕು ಕತ್ತಲೆಯ ಮೂಲೆಯಿಂದ ಬೆಳಕಿನಡೆಗೆ ಸಾಗುತ್ತದೆ. ಆ ಭಾಸ್ಕರ ಎಲ್ಲ ಜೀವಿಗಳನ್ನು ತನ್ನ ಬೆಳಕಿನ ಅನುಗ್ರಹದಿಂದ ಹೊಸತು ಜೀವನದ ಕಡೆ ಕೊಂಡೊಯ್ಯುವಾಗ ಎಲ್ಲರನ್ನು ಬಾಧಿಸುವ ಮೃತ್ಯು ಕೂಡ ಆಗ ಅಲ್ಪವಾಗಿ ತೋರುತ್ತದೆ. ಎನ್ನುವ ವಿಚಾರಗಳನ್ನು ಡಿವಿಜಿ ಅವರು ಇಲ್ಲಿ ವ್ಯಕ್ತಪಡಿಸಿದ್ದಾರೆ.  

ಈ) ಸಂದರ್ಭದೊಡನೆ ವಿವರಿಸಿರಿ.

1. ಗುಣಕೆ ಕಾರಣವೊಂದೆ
ಈ ವಾಕ್ಯವನ್ನು ಡಿ.ವಿ.ಜಿ ಅವರು ಬರೆದಿರುವ  ಮಂಕುತಿಮ್ಮನ ಕಗ್ಗ ಎಂಬ ಕೃತಿಯಿಂದ ಆಯ್ದ ಗೌರವಿಸು ಜೀವನವ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  ಈ ಮಾತನ್ನು ಕವಿ ಹೇಳಿದ್ದಾರೆ. ಹಸಿರು ಹುಲ್ಲಿಗೆ ಬಣ್ಣವನ್ನು ತುಂಬಿದವನು, ಮಣ್ಣು, ಸೂರ್ಯ, ಚಂದ್ರ, ನೀರು, ನೋಡುವ ಕಣ್ಣು ಯಾವುದೆಂದು ಹೇಳಲು ಸಾಧ್ಯವಿಲ್ಲ. ಹುಲ್ಲಿನ ಹಸಿರು ಬಣ್ಣ ತುಂಬಿರುವುದು ಅದರ ಗುಣವೆ ಆಗಿದೆ ಎಂದು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.                                  

2. ಆರದೋ ಜಗವೆಂದು ಭೇದವೆಣಿಸದಿರು
ಈ ವಾಕ್ಯವನ್ನು ಡಿ.ವಿ.ಜಿ ಅವರು ಬರೆದಿರುವ  ಮಂಕುತಿಮ್ಮನ ಕಗ್ಗ ಎಂಬ ಕೃತಿಯಿಂದ ಆಯ್ದ ಗೌರವಿಸು ಜೀವನವ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  ಈ ಮಾತನ್ನು ಕವಿ ಹೇಳಿದ್ದಾರೆ. ನಮ್ಮ ಈ ಜೀವನವನ್ನು ಗೌರವಿಸಬೇಕು. ಈ ಜೀವಕ್ಕೆ ಮೂಲವಾದ ಚೇತನವನ್ನು ಗೌರವಿಸಬೇಕು. ಇದು ಯಾರದೋ ಜಗತ್ತು ಎಂಬ ಭೇದ ಎಣಿಸಬಾರದು ಎಂದು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.     

3.ಬ್ರಹ್ಮಾನುಭವಿಯಾಗು
ಈ ವಾಕ್ಯವನ್ನು ಡಿ.ವಿ.ಜಿ ಅವರು ಬರೆದಿರುವ  ಮಂಕುತಿಮ್ಮನ ಕಗ್ಗ ಎಂಬ ಕೃತಿಯಿಂದ ಆಯ್ದ ಗೌರವಿಸು ಜೀವನವ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  ಈ ಮಾತನ್ನು ಕವಿ ಹೇಳಿದ್ದಾರೆ. ಮನುಷ್ಯನು ಜ್ಞಾನವೆಂಬ ಅನುಭವವನ್ನು ಹೂದೋಟ, ಸ್ನೇಹಿತರ ಗುಂಪು, ಸಂಗೀತ, ಶಾಸ್ತ್ರ, ಸಂಸಾರ, ಮೌನ ಮುಂತಾದ ಸಂದರ್ಭಗಳಲ್ಲಿ ತನ್ಮಯತೆಯನ್ನು ಹೃದಯ ವೈಶಾಲ್ಯತೆಯನ್ನು ರೂಢಿಸಿಕೊಂಡು ಬ್ರಹ್ಮಾನುಭವಿಯಾಗಬಹುದು ಎಂದು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.                                 

4. ವಿಸ್ತಾರದಲಿ ಬಾಳು ವೈಶಾಲ್ಯದಿಂ ಬಾಳು
ಈ ವಾಕ್ಯವನ್ನು ಡಿ.ವಿ.ಜಿ ಅವರು ಬರೆದಿರುವ  ಮಂಕುತಿಮ್ಮನ ಕಗ್ಗ ಎಂಬ ಕೃತಿಯಿಂದ ಆಯ್ದ ಗೌರವಿಸು ಜೀವನವ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  ಈ ಮಾತನ್ನು ಕವಿ ಹೇಳಿದ್ದಾರೆ. ಬದುಕಿನ ಎಲ್ಲ ಸಮಯದಲ್ಲಿ ತನ್ಮಯತೆಯನ್ನು ಹೃದಯ ವೈಶಾಲ್ಯತೆಯನ್ನು ರೂಢಿಸಿಕೊಂಡು ಬ್ರಹ್ಮಾನಂದವನ್ನು ಅನುಭವಿಸಬೇಕು ಎಂದು ಕವಿ ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.                                   

ಭಾಷಾಭ್ಯಾಸ :

ಅ) ಕೆಳಗಿನ ಪದಗಳಲ್ಲಿ ಗುಂಪಿಗೆ ಸೇರದಿರುವ ಪದವನ್ನು ಆಯ್ದು ಬರೆಯಿರಿ.
1. ಸೂರ್ಯ, ಚಂದ್ರ, ಭಾಸ್ಕರ, ದಿನಪ = ಚಂದ್ರ
2. ಕಣ್ಣು, ನೇತ್ರ, ನಯನ, ತೃಣ   = ತೃಣ  
3. ಸಾವು, ಮೃತ್ಯು, ಹುಟ್ಟು, ನಿಧನ = ಹುಟ್ಟು
4. ಗೆಳೆತನ, ಶತೃ, ಸ್ನೇಹ, ಕೆಳೆ    = ಶತೃ  

ಆ) ಕೆಳಗೆ ನೀಡಿರುವ ಅ ಪಟ್ಟಿಯೊಂದಿಗೆ ಬ ಪಟ್ಟಿಯನ್ನು ಹೊಂದಿಸಿ ಬರೆಯಿರಿ.
 
ಅ ಪಟ್ಟಿ                ಬ ಪಟ್ಟಿ
1) ಗೌರವಿಸು         ಡ) ಜೀವನವ
2) ವಿಸ್ತಾರದಲಿ      ಕ) ಬಾಳು
3) ಮೂಲೆಗಳ       ಇ) ಸೇರದಿರು
4) ಭಾಸ್ಕರನ         ಬ) ಅನುಗ್ರಹ  

ಇ) ಕೆಳಗೆ ನೀಡಿರುವ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ.
1.ಚೇತನ   : ಚೇತನ ಹೂವಿನಂತಿರಬೇಕು.
2.ಅನುಗ್ರಹ : ನಮಗೆ ದೇವರ ಅನುಗ್ರಹ ಇದೆ.
3.ಗೌರವಿಸು : ಗುರುಹಿರಿಯರನ್ನು ಗೌರವಿಸಬೇಕು.
4.ಮೌನ   : ಮಾತಿಗಿಂತ ಮೌನ ಒಳ್ಳೆಯದು.
5.ಸಮೃದ್ಧಿ  : ಮಳೆಗಾಲದಲ್ಲಿ ಭೂಮಿ ಹಸಿರಿನಿಂದ ಸಮೃದ್ಧಿಯಾಗಿರುತ್ತದೆ.
6.ಗುಣ    : ಗುಣ ನೋಡಿ ಗೆಳೆತನ ಮಾಡಬೇಕು.  

ಈ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಬರೆಯಿರಿ.
ಪುಣ್ಯ - ಪಾಪ,       
ಗೌರವ - ಅಗೌರವ,   
ವಿವೇಕ - ಅವಿವೇಕ,    
ಸಮ - ಅಸಮ,   
ಮೃತ್ಯು - ಅಪಮೃತ್ಯು,   
ಭದ - ಅಭೇದ,     
ಚೇತನ - ನಿಶ್ಚೇತನ.  

ಉ) ಕೆಳಗಿನ ಪದಗಳನ್ನು ಬಿಡಿಸಿ ಸಂಧಿ ಹೆಸರಿಸಿರಿ.
1. ಹಸಿರೆಲ್ಲಿ  =  ಹಸಿರು + ಎಲ್ಲಿ - ಲೋಪಸಂಧಿ
2. ಕಾರಣವೊಂದೇ =  ಕಾರಣ + ಒಂದೇ  ಆಗಮಸಂಧಿ  
3. ಭೇದವೆಣಿಸು   =  ಭೇದ + ಎಣಿಸು - ಆಗಮಸಂದಿ
4. ಆತ್ಮೋನ್ನತಿ    =  ಆತ್ಮ   + ಉನ್ನತಿ  ಗುಣಸಂಧಿ
5. ಹೂದೋಟ    =  ಹೂ   + ತೋಟ  ಆದೇಶಸಂಧಿ
6. ಬ್ರಹ್ಮಾನುಭವಿ   =  ಬ್ರಹ್ಮ   + ಅನುಭವಿ - ಸವರ್ಣದೀರ್ಘಸಂಧಿ
7. ಭಾಸ್ಕರನನುಗ್ರಹ  =  ಭಾಸ್ಕರನ + ಅನುಗ್ರಹ - ಲೋಪಸಂಧಿ                                       

You Might Like

Post a Comment

0 Comments