Recent Posts

ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು - ೦೯ ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹು
 
ಕವಿ ಪರಿಚಯ:  ರಾಘವಾಂಕ   
ರಾಘವಾಂಕನು ಕ್ರಿ. ಶ. ಸುಮಾರು 1225 ರಲ್ಲಿ ಹಂಪಿಯಲ್ಲಿ ಜೀವಿಸಿದನು.  ಇವರು ರಗಸೆಯ ಕವಿ ಎಂದು ಪ್ರಸಿದ್ಧನಾದ ಹರಿಹರ ಸೋದರಳಿಯ ಮತ್ತು ಶಿಶ್ಯನಾಗಿದ್ದನು. ವಿರೂಪಾಕ್ಷನ  ಪರಮಭಕ್ತನಾದ  ಇವನು  ರಚಿಸಿರುವ  ಕೃತಿಗಳೆಂದರೆ:  ಹರಿಶ್ಚಂದ್ರ  ಕಾವ್ಯ, ಸಿದ್ಧರಾಮ  ಚಾರಿತ್ರ್ಯ,  ವೀರೇಶ್ವರ  ಚರಿತೆ,  ಸೋಮನಾಥ  ಚರಿತೆ,  ಶರಭ  ಚಾರಿತ್ರ್ಯ,  ಹರಿಹರ ಮಹತ್ವ ಎಂಬ ಕಾವ್ಯಗಸನ್ನು ಷಟ್ಪದಿ ಛಂದಸ್ಸಿನಲ್ಲಿ ರಚಿಸಿದ್ದಾನೆ. ರಾಗವಾಂಕನಿಗೆ ಉಭಯ ಕವಿ ಕಮ ರವಿ, ಕವಿ ಲಿರಭ ಭೇರುಂಡ, ಷಟ್ಪದಿಯ ಬ್ರಹ್ಮ ಎಂಬ ಬಿರುದುಗಳಿದ್ದವು. 

ಅಭ್ಯಾಸ  

ಅ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.  

1.  ಗಾನರಾಣಿಯರು  ಅವನೀಶನನ್ನು  ನೋಡಲು  ಬಂದದ್ದನ್ನು  ಕವಿಯು  ಯಾವುದಕ್ಕೆ ಹೋಲಿಸಿದ್ದಾನೆ?  
ಉತ್ತರ:  ಗಾನರಾಣಿಯರು  ಅವನೀಶನನ್ನು  ನೋಡಲು  ಬಂದದ್ದನ್ನು  ಕವಿಯು ಕಾಳರಾತ್ರಿಯ  ಕನ್ಯೆಯರು  ಹಗಲನ್ನು  ನೋಡುವುದಕ್ಕೆಂದು  ಬಂದಂತೆ  ಎಂದು ಹೋಲಿಸಿದ್ದಾನೆ.  

2. ಗಾನರಾಣಿಯರಿಗೆ ಹರಿಶ್ಚಂದ್ರನು ಯಾವ ಬಹುಮಾನವನ್ನು ಕೊಟ್ಟನು?  
ಉತ್ತರ: ಗಾನರಾಣಿಯರಿಗೆ ಹರಿಶ್ಚಂದ್ರನು ಸರ್ವಾಭರಣವನ್ನು ಬಹುಮಾನವಾಗಿ ಕೊಟ್ಟನು.  

3. ಗಾನರಾಣಿಯರು ಹರಿಶ್ಚಂದ್ರನನನ್ನು ಏನನ್ನು ಕೊಡು ಎಂದು ಕೇಳಿದರು?  
ಉತ್ತರ:  ಗಾನರಾಣಿಯರು  ಹರಿಶ್ಚಂದ್ರನನನ್ನು  ಮುತ್ತಿನ  ಸತ್ತಿಗೆಯನ್ನು  ಕೊಡು  ಎಂದು ಕೇಳಿದರು.  

4. ಸತ್ತಿಗೆಯು ಯಾವಾಗ ದೈವ ಸ್ವರೂಪ ಎಂದು ಹರಿಶ್ಚಂದ್ರನು ಹೇಳುತ್ತಾನೆ?  
ಉತ್ತರ:  ಸತ್ತಿಗೆಯು  ರಾಜಪಟ್ಟ  ಕಟ್ಟುವಾಗ  ದೈವ  ಸ್ವರೂಪ  ಎಂದು  ಹರಿಶ್ಚಂದ್ರನು ಹೇಳುತ್ತಾನೆ.  

ಆ] ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.  

1. ವಿಶ್ವಾಮಿತ್ರನ ತಪೋಬಲದಿಂದ ಜನಿಸಿದ ಕನ್ಯೆಯರ ರೂಪಲಾವಣ್ಯ ಹೇಗಿತ್ತು? ವಿವರಿಸಿ.  
ಉತ್ತರ:  ಕಾಳರಾತ್ರಿಯ  ಕನ್ಯೆಯರು  ಹಗಲನ್ನು  ನೋಡುವುದಕ್ಕೆಂದು  ಬಂದರೋ! ದೇವತೆಗಳು  ಮತ್ತು  ರಾಕ್ಷಸರು  ಸಮುದ್ರವನ್ನು  ಮಂಥನ  ಮಾಡುವ  ಸಮಯದಲ್ಲಿ ಹೊರಹೊಮ್ಮಿದ  ಹೊಸ ವಿಷಯದ  ಹೊಗೆ ಉರಿದು,  ಕಪ್ಪಾಗಿ ಗಟ್ಟಿಯಾದಂತೆ ಮನುಷ್ಯರಾದರೋ!  ಬ್ರಹ್ಮನು  ನೀಲ  ಬಣ್ಣದಿಂದ  ಮಾಡಿದ  ಗೊಂಬೆಗಳು ಜೀವವನ್ನು ಪಡೆದವೋ! ಎನ್ನುವಂತೆ ಇದ್ದರು.  

2. ಗಾನರಾಣಿಯರು ಏನೆಂದು ಹರಿಶ್ಚಂದ್ರನನ್ನು ಕೀರ್ತಿಸಿ ಹಾಡಿದರು? ವಿವರಿಸಿ.  
ಉತ್ತರ:  ಗಾನರಾಣಿಯರು  ಮಹಾರಾಜ  ಹರಿಶ್ಚಂದ್ರನನ್ನು ಕುರಿತು;  ಮಝ,  ಭಾಪು, ಅದಟರಾಯ,  ಮಝರೇ  ರಾಯ,  ರಾಯದಳವುಳಕಾರ,  ರಾಯಕಂಟಕ,  ರಾಯಜಗಜೆಟ್ಟಿ, ರಾಯದಲ್ಲಣ,  ರಾಯಕೋಸಾಷಿಸ,  ರಾಯಭುಜಬಭೀಮ,  ರಾಯಮರ್ದನ'  ಎಂದು ಗುಣಗಾನ ಮಾಡುತ್ತಾ ಒಡೆಯನೇ ಚಿರಂಜೀವಿಯಾಗು' ಎಂದು ಕೀರ್ತಿಸಿ ಹಾಡಿದರು.  

3. ಹರಿಶ್ಚಂದ್ರನು ಮುತ್ತಿನ ಸತ್ತಿಗೆಯನ್ನು ಏಕೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದನು?  
ಉತ್ತರ:  ಹರಿಶ್ಚಂದ್ರನ   ಗಾನರಾಣಿಯರನ್ನು  ಕುರಿತು  ಸೂರ್ಯವಂಶದ  ಪರಂಪರೆಯಲ್ಲಿ ಹುಟ್ಟಿದ ರಾಜರಿಗೆ ಪಟ್ಟವನ್ನು ಕಟ್ಟುವ ಸಮಯದಲ್ಲಿ ಈ ರಾಜಲಾಂಛನವಾದ ಸತ್ತಿಗೆಯು ಇಲ್ಲದಿದ್ದರೆ  ರಾಜತನವು  ದೊರೆಯುವುದಿಲ್ಲ್ಲ.  ಈ  ಭೂಮಿಯ  ಮೇಲೆ,  ಯುದ್ಧರಂಗದಲ್ಲಿ ಸತ್ತಿಗೆಯನ್ನು  ನೋಡಿದ  ಶತ್ರುಗಳು  ನಿಲ್ಲುವುದಿಲ್ಲ.  ಈ  ಸತ್ತಿಗೆಯ  ನೆರಳಿನಲ್ಲಿ  ಯಾವನು ಇರುವನೋ  ಅತನಿಗೆ  ವಿಪತ್ತು,  ಅಡಚಣೆಗಳು,  ಬಡತನ,  ರೋಗ,  ಅಪಕೀರ್ತಿ,  ಸೋಲು, ಭಯ ಕಸೆದುಹೋಗುವುದು. ಆದ್ದರಿಂದ ಇದನ್ನು ಕೊಡುವುದ್ಲಿ' ಎಂದನು.  

4. ಮುತ್ತಿನ ಸತ್ತಿಗೆಯ ವಿಶೇಷತೆ ಕುರಿತು ಹರಿಶ್ಚಂದ್ರನು ಏನು ಹೇಳುತ್ತಾನೆ?  
ಉತ್ತರ:  ಹರಿಶ್ಚಂದ್ರನು  ಗಾನರಾಣಿಯರಿಗೆ:  ಈ  ಸತ್ತಿಗೆಯು  ಜನರಿಗೆ  ಕೊಡಬಾರದು. ವಂಶಪರಂಪರೆಯಿಂದ  ಬಂದಿದ್ದರಿಂದ  ತಂದೆಯು,  ಪಟ್ಟವನ್ನು  ಕಟ್ಟುವ  ಸಮಯದಲ್ಲಿ ಇದನ್ನು  ಪೂಜಿಸಿ  ಕೊಳ್ಳುವುದರಿಂದ  ಇದು  ದೇವರು,  ನೆರಳಿನ  ತಂಪನ್ನು  ಸೊಗಸಾಗಿ ಕೊಡುವುದರಿಂದ  ಇದು  ಪೋಷಿಸುವ  ತಾಯಿ,  ಯುದ್ಧದಲ್ಲಿ  ಶತ್ರುಗಳನ್ನು ನಡುಗಿಸುವುದರಿಂದ  ಇದು  ಚತುರಂಗ  ಬಲ  ಎನಿಸಿಕೊಂಡಿದೆ.'  ಎಂದು  ಸತ್ತಿಗೆಯ ವಿಶೇಷತೆಯನ್ನು ತಿಳಿಸಿದನು.  

ಇ] ಕೊಟ್ಟಿರುವ ಪ್ರಶ್ನೆಗಳಿಗೆ ಸುಮಾರು ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.  

1  .  ಹರಿಶ್ಚಂದ್ರನು  ನೀಡಿದ  ಬಹುಮಾನವನ್ನು  ತಿರಸ್ಕರಿಸಿ  ಗಾನರಾಣಿಯರು  ಹೇಳಿದ ಮಾತುಗಳನ್ನು ತಿಳಿಸಿ.  
ಉತ್ತರ:  ಹರಿಶ್ಚಂದ್ರನು  ನೀಡಿದ  ಬಹುಮಾನವನ್ನು  ತಿರಸ್ಕರಿಸಿ  ಗಾನರಾಣಿಯರು  ಹೀಗೆ ಹೇಳುತ್ತಾರೆ: ಬಡತನದ ಸಮಯದಲ್ಲಿ ಆನೆಯು ದೊರೆತು ಫಲವೇನು? ಬಾಯಾರಿಕೆಯ ಸಮಯದಲ್ಲಿ  ತುಪ್ಪವು  ದೊರಕಿ  ಫಲವೇನು?  ರೋಗಬಂದು  ಬಿದ್ದಿರುವಾಗ  ರಂಭೆಯು ದೊರಕಿ ಫಲವೇನು? ಸಾಯುವ ಸಮಯದಲ್ಲಿ ರಾಜ್ಯದ ದೊರೆತನ ದೊರಕಿ ಫಲವೇನು? ಕಡುಬಿಸಿಲಿನಿಂದ  ಬಳಲಿ  ಬೆಂಡಾಗಿರುವ  ಸಮಯದಲ್ಲಿ  ನಮಗೆ  ನೀನು  ಪ್ರೀತಿಯಿಂದ ಆಭರಣಗಳನ್ನು ಕೊಟ್ಟು ಫಲವೇನು? ಅದರ  ಬದಲು,  ಸಮುದ್ರದಲ್ಲಿ  ಮುಳುಗುವವನಿಗೆ  ತೆಪ್ಪವನ್ನು,  ಬಡವನಿಗೆ  ಚಿನ್ನವನ್ನು, ಅತಿರೋಗಿಗೆ ಅಮೃತವನ್ನು ಕೊಟ್ಟರೆ ಅವರು ಸಂತೋಷವನ್ನು ಹೊಂದುವರು. ಅವರನ್ನು ಹೋಲುವ  ನಮಗೆ  ಸುಡುಸುಡನೆ  ಸುಡುವ  ಈ  ಬಿರುಬಿಸಿಲ  ಸೆಕೆಯಲ್ಲಿ  ಉಸಿರಿನ  ಬಿಸಿ ಹೆಚ್ಚಾಗಿ  ಉರಿಯಹತ್ತಿದೆ,  ನಮ್ಮ  ಬಾಯಿ  ಬತ್ತಿಹೋಗಿದೆ,  ಬಿಸಿಲ  ಝಳದಿಂದ  ಸಾವು ಆವರಿಸುತ್ತಿದೆ,  ಆದ್ದರಿಂದ  ನಮಗ  ನಿನ್ನ  ಮುತ್ತಿನ  ಸತ್ತಿಗೆಯನ್ನು  ಕೊಟ್ಟು  ನಮ್ಮನ್ನು ಕಾಪಾಡು ಎಂದರು.   

2 . ಹರಿಶ್ಚಂದ್ರ ಮತ್ತು ಗಾನರಾಣಿಯರ ನಡುವೆ ನಡೆದ ಸಂವಾದವನ್ನು ಸಂಗ್ರಹಿಸಿ ಬರೆಯಿರಿ.  
ಉತ್ತರ:  (ಹರಿಶ್ಚಂದ್ರನು  ಗಾನರಾಣಿಯರ  ನೃತ್ಯವನ್ನು  ಮೆಚ್ಚಿ  ಆಭರಣಗಳನ್ನು ಬಹುಮಾನವಾಗಿ ನೀಡುತ್ತಾನೆ. ಆಗ ಅವರು)  ಗಾನರಾಣಿಯರು: ಕಡುಬಿಸಿಲಿನಿಂದ ಬಳಲಿ ಬೆಂಡಾಗಿರುವ ನಮಗೆ ನೀನು ಆಭರಣಗಳನ್ನು ಕೊಟ್ಟರೆ  ಪ್ರಯೋಜನವೇನು?  ಅದಕ್ಕೆ  ಬದಲಾಗಿ  ನಿನ್ನ  ಮುತ್ತಿನ  ಸತ್ತಿಗೆಯನ್ನು  ಕೊಟ್ಟು ನಮ್ಮನ್ನು ಕಾಪಾಡು.  
ಹರಿಶ್ಚಂದ್ರ:  ಸೂರ್ಯವಂಶದ  ಪರಂಪರೆಯ  ರಾಜರಿಗೆ  ಪಟ್ಟವನ್ನು  ಕಟ್ಟುವ  ಸಮಯದಲ್ಲಿ ಈ  ರಾಜಲಾಂಛನವಾದ  ಸತ್ತಿಗೆಯು  ಇಲ್ಲದಿದ್ದರೆ  ರಾಜತನವು  ದೊರೆಯುವುದಿಲ್ಲ್ಲ. ಆದ್ದರಿಂದ  ಇದನ್ನು  ಕೊಡಲು  ಸಾಧ್ಯವಿಲ್ಲ.  ಪ್ರೀತಿಯಿಂದ  ಎಲ್ಲವನ್ನು  ಕೊಡಬಹುದು.  ಹಾಗೆಂದು  ತಾಯಿ,  ತಂದೆ,  ಹೆಂಡತಿ,  ದೇವರು  ಮತ್ತು  ಮನಸಾರೆ  ನಂಬಿ  ವಿಶ್ವಾಸವಿಟ್ಟ ಪರಿವಾರವನ್ನು ಕೊಡುವ ಶೂರು ಜಗತ್ತಿನಲ್ಲಿ ಇಲ್ಲ.  ಗಾ.ರಾ:  ಮಹಾರಾಜ  ನೀನು  ಈಗ  ಹೇಳಿದ  ಇವರಲ್ಲಿ  ಯಾರನ್ನಾದರು  ಬೇಡಿದರೆ ಕೊಡಬೇಡ.  ಆದರೆ  ನಿನ್ನ  ಬಳಿ  ಇರುವ  ಮುತ್ತಿನ  ಸತ್ತಿಗೆಯನ್ನು  ಕೊಡು  ಎಂದರೆ ಲೋಭವೇಕೆ?  
ಹರಿಶ್ಚಂದ್ರ:  ಏಕೆಂದರೆ,  ನನಗೆ  ಇದಲ್ಲದೆ  ಬೇರೆ  ತಾಯಿತಂದೆಯರು  ಇಲ್ಲ. ವಂಶಪರಂಪರೆಯಿಂದ  ಬಂದಿದ್ದರಿಂದ  ಇದು  ತಂದೆ,  ಪಟ್ಟವನ್ನು  ಕಟ್ಟುವ  ಸಮಯದಲ್ಲಿ ಇದನ್ನು  ಪೂಜಿಸಿ  ಕೊಳ್ಳುವುದರಿಂದ  ಇದು  ದೇವರು,  ನೆರಳಿನ  ತಂಪನ್ನು  ಸೊಗಸಾಗಿ ಕೊಡುವುದರಿಂದ  ಇದು  ನನ್ನನ್ನು  ಪೋಷಿಸುವ  ತಾಯಿ,  ಯುದ್ಧದಲ್ಲಿ  ಶತ್ರುಗಳನ್ನು ನಡುಗಿಸುವುದರಿಂದ ಇದೇ ಚತುರಂಗ ಬಲ ಎನಿಸಿಕೊಂಡಿದೆ.  

ಈ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.  

1. ಸಂದ ಕಾರಿರುಳು ಕನ್ನೆಯರು ಹಗಂ ನೋಡಲೆಂದು ಬಂದರೊ'  
ಆಯ್ಕೆ:  ಈ  ವಾಕ್ಯವನ್ನು  ರಾಘವಾಂಕನು  ರಚಿಷರುವ  ಹರಿಶ್ಚಂದ್ರನ  ಕಾವ್ಯ  ದಿಂದ ಆರಿಷಕೊಸ್ಳಲಾದ  ನಿನ್ನ  ಮುತ್ತಿನ  ತ್ತಿಗೆಯನಿತ್ತು   ಎಂಬ  ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ.  
ಸಂದರ್ಭ:  ಹರಿಶ್ಚಂದ್ರನ  ಬಳಿಗೆ  ಬಂದ  ಗಾನರಾಣಿಯರ  ರೂಪವನ್ನು  ವರ್ಣಿಸುವ ಸಂದರ್ಭದಲ್ಲಿ  ಕವಿ  ಈ  ಮಾತನ್ನು  ಹೇಳಿದ್ದಾನೆ.  ಕಾರಿರುಳಂತಿರುವ  ಕನ್ಯೆಯರು ಹಗಲಿನಂತೆ  ಕಾಂತಿಯುತನಾಗಿದ್ದ  ಮಹಾರಾಜನನ್ನು  ನೋಡಲೆಂದು  ಬಂದರೋ  ಎಂದು ವರ್ಣಿಸಲಾಗಿದೆ.  
ಸ್ವಾರಸ್ಯ:  ಗಾನರಾಣಿಯರನ್ನು  ಕಾರಿರುಳಿಗೂ  ಹರಿಶ್ಚಂದ್ರನನ್ನು  ಹಗಲಿಗೂ ಸಮೀಕರಿಸಿರುವುದು ಸ್ವಾರಸ್ಯಕರವಾಗಿದೆ.  

2. ಬಡತನದ ಹೊತ್ತಾನೆ ದೊರಕಿ ಫವೇನು'  
ಆಯ್ಕೆ:  ಈ  ವಾಕ್ಯವನ್ನು  ರಾಘವಾಂಕನು  ರಚಿಸಿರುವ  ಹರಿಶ್ಚಂದ್ರ  ಕಾವ್ಯ  ದಿಂದ ಆರಿಸಿಕೊಸ್ಳಲಾದ  ನಿನ್ನ  ಮುತ್ತಿನ  ಸತ್ತಿಗೆಯನಿತ್ತು  ಎಂಬ  ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ.  
ಸಂದರ್ಭ: ಹರಿಶ್ಚಂದ್ರನು ತನ್ನ ಬಳಿಗೆ ಬಂದು ಅಮೋಘವಾಗಿ ನರ್ತಿಸಿ ಮನಸ್ಸಿಗೆ ಸಂತಸ ನೀಡಿದ  ಗಾನರಾಣಿಯರಿಗೆ  ಆಭರಣಗಳನ್ನು  ಬಹುಮಾನವಾಗಿ  ನೀಡಿದಾಗ  ಅವರು ಅದನ್ನು  ತಿರಸ್ಕರಿಸಿ  ಹರಿಶ್ಚಂದ್ರನಿಗೆ  ಈ  ಮಾತನ್ನು  ಹೇಳುತ್ತಾರೆ.  ತಮಗೆ  ಈ  ಬಹುಮಾನ ನೀಡಿದ್ದು ಸೂಕ್ತವಲ್ಲ ಎಂದು ಅವರು ಹೇಳುತ್ತಾರೆ.  
ಸ್ವಾರಸ್ಯ:  ಬಡತನದಿಂದ  ಕೂಡಿರುವವನಿಗೆ  ಆನೆ  ಕೊಡುವುದರಿಂದ  ಅವನಿಗೆ ಪ್ರಯೋಜನವಾಗುತ್ತದೆಯೇ? ಎಂದು ಹೇಳಿರುವುದು ಸ್ವಾರಸ್ಯಕರವಾಗಿದೆ.  

3. ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಹು ಭೂಭುಜಯೆಂದರು'      
ಆಯ್ಕೆ:  ಈ  ವಾಕ್ಯವನ್ನು  ರಾಘವಾಂಕನು  ರಚಿಷರುವ  ಹರಿಶ್ಚಂದ್ರನ  ಕಾವ್ಯ  ದಿಂದ ಆರಿಸಿಕೊಸ್ಳಲಾದ  ನಿನ್ನ  ಮುತ್ತಿನ  ತ್ತಿಗೆಯನಿತ್ತು   ಎಂಬ  ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ.  
ಸಂದರ್ಭ: ಹರಿಶ್ಚಂದ್ರನು ತನ್ನ ಬಳಿಗೆ ಬಂದು ಅಮೋಘವಾಗಿ ನರ್ತಿಸಿ ಮನಸ್ಸಿಗೆ ಸಂತಸ ನೀಡಿದ  ಗಾನರಾಣಿಯರಿಗೆ  ಆಭರಣಗಳನ್ನು  ಬಹುಮಾನವಾಗಿ  ನೀಡಿದಾಗ  ಅವರು ಅದನ್ನು  ತಿರಸ್ಕರಿಸಿ  ಹರಿಶ್ಚಂದ್ರನಿಗೆ  ಈ  ಮಾತನ್ನು  ಹೇಳುತ್ತಾರೆ.  ತಮಗೆ  ಈ  ಬಹುಮಾನ ನೀಡಿದ್ದು ಸೂಕ್ತವಲ್ಲ ಅದಕ್ಕೆ ಬದಲಾಗಿ ಸತ್ತಿಗೆಯನ್ನು ನೀಡು ಎಂದು ಕೇಳುತ್ತಾರೆ.  
ಸ್ವಾರಸ್ಯ:  ವಂಶಪಾರ್ಯವಾಗಿ  ಬಂದಿರುವ  ಪವಿತ್ರವಾದ  ರಾಜಲಾಂಛನಗಳಲ್ಲಿ  ಒಂದಾದ ಸತ್ತಿಗೆಯನ್ನು(ಬೆಳ್ಗೊಡೆಯನ್ನು)  ತಮ್ಮ  ಬಿಸಿಲಬೇಗೆ  ಪರಿಹರಿಸಿಕೊಳ್ಳಲು  ಕೇಳುವುದು ಸ್ವಾರಸ್ಯಕರವಾಗಿದೆ.  

4. ಅನುನಯದೊಳ್ಲೆವಂ ಕೊಡಬಹುದು ಬಿಡಬಹುದು'  
ಆಯ್ಕೆ:  ಈ  ವಾಕ್ಯವನ್ನು  ರಾಘವಾಂಕನು  ರಚಿಷರುವ  ಹರಿಶ್ಚಂದ್ರನ  ಕಾವ್ಯ  ದಿಂದ ಆರಿಸಿಕೊಸ್ಳಲಾದ  ನಿನ್ನ  ಮುತ್ತಿನ  ತ್ತಿಗೆಯನಿತ್ತು   ಎಂಬ  ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ.  
ಸಂದರ್ಭ:  ಹರಿಶ್ಚಂದ್ರನು  ಬಹುಮಾನವಾಗಿ  ನೀಡಿದ  ಆಭರಣಗಳಿಗೆ  ಬದಲಾಗಿ ಗಾನರಾಣಿಯರು  ನಿನ್ನ  ಮುತ್ತಿನ  ಸತ್ತಿಗೆಯನ್ನು  ನೀಡು  ಎಂದು  ಕೇಳಿದಾಗ  ಹರಿಶ್ಚಂದ್ರನು ಈ  ಮಾತನ್ನು  ಹೇಳುತ್ತಾನೆ.  ಪ್ರೀತಿಯಿಂದ  ಎಲ್ಲವನ್ನೂ  ಕೊಡಬಹುದು-ಬಿಡಬಹುದು. ಹಾಗೆಂದು  ತಾಯಿ-ತಂದೆ,  ಹೆಂಡತಿ-ಮಕ್ಕಳು,  ಬಂಧು-ಬಾಂಧವರು,  ದೇವರು, ವಿಶ್ವಾಸವಿಟ್ಟುಕೊಂಡಿರುವ ಪರಿವಾರವನ್ನು ನೀಡಲು ಸಾಧ್ಯವೇ ಎಂದು ಹರಿಶ್ಚಂದ್ರ ಅವರಿಗೆ ಮನವರಿಕೆ ಮಾಡುತ್ತಾನೆ.  
ಸ್ವಾರಸ್ಯ:  ಕುಟುಂಬ,  ಬಂಧು-ಬಾಂಧವರು,  ದೇವರು  ಮುಂತಾದವರನ್ನು  ಯಾರಿಗೂ ಬಿಟ್ಟುಕೊಡದೆ  ಕಾಪಾಡುವುದು  ಪ್ರತಿಯೊಬ್ಬ  ವ್ಯಕ್ತಿಯ ಕರ್ತವ್ಯ  ಎಂಬುದು  ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ.

ಭಾಷಾ ಚಟುವಟಿಕೆ

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

1. ಷಟ್ಪದಿ ಎಂದರೇನು? ವಿಧಗಸಾವುವು?  
ಉ: ಆರು ಸಾಲಿನ ಪದ್ಯಕ್ಕೆ ಷಟ್ಪದಿ ಎನ್ನುವರು. ಷಟ್ಪದಿ ಮಾತ್ರಾಗಣಕ್ಕೆ ಸೇರಿದ ಪದ್ಯ ಪ್ರಕಾರವಾಗಿದೆ. ಷಟ್ಪದಿಯಲ್ಲಿ ಶರ, ಕುಸುಮ, ಭೋಗ, ಭಾಮಿನಿ, ಪರಿವರ್ಧಿನಿ, ವಾರ್ಧಕ ಎಂಬ ಆರು ವಿಧಗಳಿವೆ.  

2. ಭಾಮಿನಿ ಷಟ್ಪದಿಯ ಕ್ಷಣವೇನು? ?  
ಉ: ಆರು ಸಾಲುಗಳನ್ನು ಒಳಗೊಂಡಿರುತ್ತದೆ.?  
1,2,4 ಮತ್ತು 5 ನೆಯ ಸಾಲುಗಳು ಸಮನಾಗಿದ್ದು ಮೂರು, ನಾಲ್ಕು ಮಾತ್ರೆಗಳನ್ನು ಹೊಂದಿದ್ದು 4 ಗಣಗಳನ್ನು ಹೊಂದಿರುತ್ತವೆ.  ?  3  ಮತ್ತು  6  ನೇ  ಸಾಲುಗಳು  ಸಮನಾಗಿದ್ದು  ಮೂರು,  ನಾಲ್ಕು ಮಾತ್ರೆಗಳನ್ನು  ಹೊಂದಿದ್ದು  6  ಗಣಗಳನ್ನು  ಹೊಂದಿರುತ್ತವೆ.  ಕೊನೆಯಲ್ಲಿ ಒಂದು ಗುರು ಉಳಿದಿರುತ್ತದೆ.   

3. ವಾರ್ಧಕ ಷಟ್ಪದಿಯ ಕ್ಷಣವನ್ನು ವಿವರಿಷ.  ?  
ಉ:  ಆರು ಸಾಲುಗಳನ್ನು ಒಳಗೊಂಡಿರುತ್ತದೆ. ?  1,2,4 ಮತ್ತು 5 ನೆಯ ಸಾಲುಗಳು ಸಮನಾಗಿದ್ದು ಐದು  ಮಾತ್ರೆಯ  4 ಗಣಗಳನ್ನು ಹೊಂದಿರುತ್ತವೆ.  ?  3  ಮತ್ತು  6  ನೇ  ಸಾಲುಗಳು  ಸಮನಾಗಿದ್ದು  ಐದು  ಮಾತ್ರೆಯ    6 ಗಣಗಳನ್ನು ಹೊಂದಿರುತ್ತವೆ. ಕೊನೆಯಲ್ಲಿ ಒಂದು ಗುರು ಉಳಿದಿರುತ್ತದೆ.    

ಆ) ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿ, ಕಂಠಪಾಠ ಮಾಡಿರಿ.     

1. ಸಂದ ಕಾರಿರುಳು ಕನ್ನೆಯರು ಹಗಲಂ ನೋಡ       
ಲೆಂದು ಬಂದರೊ ಸುರಾಸುರರಬುಧಿಯಂ ಮಥಿಸು       
ವಂದು  ಹೊಸ   ವಿಷಯದ  ಹೊಗೆ  ಹೊಯ್ದು  ಕಗ್ಗನೆ  ಕಂದಿ  ಜಲದೇವಿಯರು ಮನದಲಿ       
ನೊಂದು ಮಾನಿಸರಾದರೋ ಕಮಲಜಂ ನೀಲ       
ದಿಂದ ಮಾಡಿದ ಸಾಲಭಂಜಿಕೆಗಳೊದವಿ ಜೀ       
ವಂದಳೆದವೋ ಎನಿಪ್ಪಂದದಿಂ ಬಂದರಂಗನೆಯರವನೀಶನೆಡೆಗೆ

 2.  ಬಡತನದ ಹೊತ್ತಾನೆ ದೊರಕಿ ಫಲವೇನು ನೀ       
ರಡಸಿರ್ದ ಹೊತ್ತಾಜ್ಯ ದೊರಕಿ ಫಲವೇನು ರುಜೆ       
ಯಡಸಿ ಕೆಡೆದಿಹ ಹೊತ್ತು ರಂಭೆ ದೊರೆಕೊಂಡಲ್ಲಿ ಫಲವೇನು ಸಾವ ಹೊತ್ತು       
ಪೊಡವಿಯೊಡೆತನ ದೊರಕಿ ಫಲವೇನು ಕಡುವಿಸಿಲು       
ಹೊಡೆದು ಬೆಂಡಾಗಿ ಬೀಳ್ವೆಮಗೆ ನೀನೊಲಿದು ಮಣಿ    
ದೊಡಿಗೆಗಳನಿತ್ತು ಫಲವೇನು ಭೂಪಾಲ ಹೇಳೆನುತ ಮತ್ತಿಂತೆಂದರು

ಇ) ಈ ಕೆಳಗಿನ ಪದ್ಯಭಾಗಕ್ಕೆ ಪ್ರಸ್ತಾರ ಹಾಕಿ, ಗಣ ವಿಭಾಗ ಮಾಡಿ, ಛಂದಸ್ಸಿನ ಹೆಸರನ್ನು ಬರೆಯಿರಿ.












 
 
 
 
 
 
 
 
 
 
You Might Like

Post a Comment

0 Comments