ಸಿರಿಯನಿನ್ನೇನ ಬಣ್ಣಿಪೆನು
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .
1. ಭರತೇಶವೈಭವ ಕಾವ್ಯದ ಕರ್ತೃ ಯಾರು ?
ಉತ್ತರ : ಭರತೇಶವೈಭವ ಕಾವ್ಯದ ಕರ್ತೃ ರತ್ನಾಕರವರ್ಣಿ ,
2. ಭರತನನ್ನು ಹೊಗಳುತ್ತಿದ್ದ ಮೂರು ಲೋಕಗಳು ಯಾವುವು ?
ಉತ್ತರ : ಭರತನನ್ನು ಹೊಗಳುತ್ತಿದ್ದ ಮೂರು ಲೋಕಗಳು ಸ್ವರ್ಗಲೋಕ ಮರ್ತ್ಯಲೋಕ ಮತ್ತು ಪಾತಾಳ ಲೋಕಗಳು .
3. ಭರತ ಚಕ್ರವರ್ತಿ ಓಲಗಕ್ಕೆ ಹೇಗೆ ಬರುತ್ತಾನೆ ?
ಉತ್ತರ : ಭರತ ಚಕ್ರವರ್ತಿಯು ಸೂರ್ಯೋದಯ ಸಮಯದಲ್ಲಿ ಎದ್ದು ದೇವತಾರ್ಚನೆಯನ್ನು ಮಾಡಿ ಓಲಗಕ್ಕೆ ಬರುತ್ತಾನೆ .
4. ಆಸ್ಥಾನ ಭವನದೊಳಗೆ ರಾಜನು ಹೇಗೆ ಶೋಭಿಸುವನು ?
ಉತ್ತರ : ಆಸ್ಥಾನ ಭವನದೊಳಗೆ ರಾಜನು ದೇವೇಂದ್ರನಂತೆ ಶೋಭಿಸುತ್ತಿದ್ದನು .
5. ತುಂಬಿದ ಸಭೆಯು ಮೈಮರೆತು ಕಾತುರರಾಗಿದ್ದುದಕ್ಕೆ ಕಾರಣವೇನು ?
ಉತ್ತರ : ಭರತ ಚಕ್ರವರ್ತಿಯನ್ನು ನೋಡಲು ತುಂಬಿದ ಸಭೆಯು ಮೈಮರೆತು ಕಾತುರವಾಗಿತ್ತು .
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .
1. ಧ್ಯಾನ ಬೇಸರಾದಾಗ ಏನು ಮಾಡುತ್ತೇನೆಂದು ಕವಿ ಹೇಳುತ್ತಾನೆ ?
ಉತ್ತರ : ಕವಿ ರತ್ನಾಕರವರ್ಣಿಯ “ ಗುರುವೇ ಧ್ಯಾನಮಾಡುವುದಕ್ಕೆ ಬೇಸರವಾದಾಗ ಕನ್ನಡದಲ್ಲಿ ಒಂದು ಕಥೆಯನ್ನು ಹೇಳುತ್ತೇನೆ . ಆ ಕತೆಯ ನಾಯಕ ನೀವೇ , ಅದಕ್ಕೆ ಅಪ್ಪಣೆ ನೀಡಬೇಕು , ಆಶೀರ್ವಾದಿಸಬೇಕು . ಎಂದು ಹೇಳಿದ್ದಾರೆ .
2. ಬೇರೆಬೇರೆ ಭಾಷಿಕರು ತನ್ನ ಕೃತಿಯನ್ನು ಹೇಗೆ ಹೊಗಳಬೇಕೆಂದು ಕವಿ ಬಯಸುವನು ?
ಉತ್ತರ : ಕವಿ ರತ್ನಾಕರವರ್ಣಿಯವರು ಭರತನ ಅಪ್ಪಣೆಯನ್ನು ಬೇಡಿ ಕನ್ನಡದಲ್ಲಿ ಕಥೆಯನ್ನು ಹೇಳಲು ತೊಡಗುತ್ತಾರೆ . ನಾನು ಹೇಳುವ ಕಥೆಯನ್ನು ಎಲ್ಲರೂ ಮೈಯುಬ್ಬಿ ಕೇಳಬೇಕು . ಕನ್ನಡಿಗರು ತುಂಬಾ ಚನ್ನಾಗಿದೆ ‘ ಎಂದು ಹೊಗಳಬೇಕು .
ತೆಲುಗರು ‘ ಮಂಚಿದೆ ‘ ಎಂದು ಹೊಗಳಬೇಕು . ತುಳು ಮಾತನಾಡುವವರು ‘ ಎಂಚಪೊರ್ಲಾಂಡೆ ‘ ಹೊಗಳಬೇಕು ಎಂದು ಕವಿ ನನ್ನ ಕಥೆಯನ್ನು ಬೇರೆ ಬೇರೆ ಭಾಷಿಕರು ಈ ರೀತಿ ಹೊಗಳಬೇಕೆಂದು ಬಯಸುತ್ತಾರೆ .
3. ಭರತ ಚಕ್ರವರ್ತಿ ಓಲಗಮಂಟಪವನ್ನೇರಿದ ಸಂದರ್ಭವನ್ನು ಬಣ್ಣಿಸಿ .
ಉತ್ತರ : ಭರತನು ಇಡೀ ಭೂಮಂಡಲವನ್ನೇ ಗೆದ್ದು ಪ್ರಥಮಚಕ್ರವರ್ತಿ ಎಂದು ಪ್ರಸಿದ್ಧಿಯಾಗುತ್ತಾನೆ . ಇವನು ವೈಭವದಿಂದ ರಾಜ್ಯಭಾರ ಮಾಡುತ್ತಿದ್ದನು .
ಇಂತಹ ಭರತ ಚಕ್ರವರ್ತಿ ಪ್ರತಿದಿನ ಸೂರ್ಯೋದಯದೊಂದಿಗೆ ಎದ್ದು ಸ್ನಾನ ಮಾಡಿ , ದೇವರ ಪೂಜೆಮಾಡಿ , ರಾಜಸಭೆಗೆ ನಡೆದ ಬರುವ ದೃಶ್ಯ ವೈಭವದಿಂದ ಕೂಡಿದೆ .
ನವರತ್ನಗಳಿಂದ ಹಾಗೂ ಬಂಗಾರದಿಂದ ನಿರ್ಮಾಣವಾಗಿದ್ದ ಅಸ್ಥಾನಭವನದಲ್ಲಿ ಭರತ ಚಕ್ರವರ್ತಿ ಸ್ವರ್ಗ ಲೋಕದ ದೇವೇಂದ್ರನಂತೆ ಕಂಗೊಳಿಸುತ್ತಿದ್ದನು .
ಇ ) ಕೊಟ್ಟಿರುವ ಪ್ರಶ್ನೆಗೆ ಏಳು – ಎಂಟು ವಾಕ್ಯಗಳಲ್ಲಿ ಉತ್ತರಿಸಿ .
1. ಭರತ ಚಕ್ರವರ್ತಿಯ ರಾಜದರ್ಬಾರಿನ ವೈಭವವನ್ನು ವಿವರಿಸಿ .
ಉತ್ತರ : ಆದಿತೀರ್ಥಕರ ವೃಷಭದೇವನ ಮಕ್ಕಳಾದ ಭರತ ಬಾಹುಬಲಿಯರು ಅವರವರ ರಾಜ್ಯದಲ್ಲಿ ರಾಜ್ಯಭಾರ ಮಾಡುತ್ತಿದ್ದರು . ಭರತ ಅಯೋಧ್ಯೆಯಲ್ಲೂ , ಬಾಹುಬಲಿ ಪೌದನಪುರದಲ್ಲೂ ರಾಜ್ಯಭಾರ ಮಾಡುತ್ತಿದ್ದರು .
ಭರತನ ಆಯುಧಗಾರದಲ್ಲಿ ಚಕ್ರರತ್ನ ‘ ಹುಟ್ಟುತ್ತದೆ . ಇದನ್ನು ಮುಂದಿಟ್ಟುಕೊಂಡು ಭರತ ದಿಗ್ವಿಜಯ ನಡೆಸಿ , ಪ್ರಥಮ ಚಕಿ ಎನಿಸಿದನು . “ ಭರತಭೂತಳಕೆ ಸಿಂಗಾರವಾದಯೋಧ್ಯಾ ಪುರದೊಳು ಮೂಲೋಕ ಸೊಗಳೆ ಭರತಚಕ್ರೇಶ್ವರ ಸುಖಬಾಳುತಿರ್ದನಾ ಸಿರಿಯನಿನ್ನೇನ ಬಣ್ಣಿಪೆನು ” ಎಂದು ಕವಿಯೇ ಹೇಳಿದ್ದಾರೆ .
ಭರತನು ಮುಂಜಾನೆ ಎದ್ದು ದೇವರ ಪೂಜೆ ಅರ್ಚನೆಗಳನ್ನು ಪೂರೈಸಿ ರಾಜಸಭೆಗೆ ಆಗಮಿಸುವ ರೀತಿಯೇ ಅದ್ಭುತವಾದುದು . ನವರತ್ನಗಳು ಹಾಗೂ ಬಂಗಾರದಿಂದ ರಚಿತವಾಗಿದ್ದ ಸಭಾ ಭವನವು ಕಂಗೊಳಿಸುತ್ತಿತ್ತು .
ರಾಜರತ್ನನೆಂಬ ಭರತ ಚಕ್ರವರ್ತಿಯು ಸ್ವರ್ಗದ ದೇವೇಂದ್ರನಂತೆ ಕಾಂತಿಯಿಂದ ಶೋಭಿಸುತ್ತಿದ್ದನು . ಬೆಳ್ಳಿ ಮೋಡಗಳ ಆಗಾಗ ಪ್ರತ್ಯಕ್ಷವಾಗುವ ಸೂರ್ಯನೋ ಚಂದ್ರನೋ ಎಂಬಂತೆ ಶೋಭಿಸುತ್ತಿದ್ದನು
ಸೂರ್ಯನನ್ನೂ ನೋಡುವ ತಾವರೆಗಳಂತೆ , ಚಂದ್ರನನ್ನು ಕಾಣುವ ನೈದಿಲೆಗಳಂತೆ ಸಭಾಸದರು ಭರತ ಚಕ್ರವರ್ತಿಯನ್ನು ನೋಡುತ್ತಿದ್ದರು .
ಈ ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,
1. ” ಕನ್ನಡದೊಳಗೊಂದು ಕಥೆಯ ಪೇಳುವನು “
ಆಯ್ಕೆ : ಈ ವಾಕ್ಯವನ್ನು ತ.ಸು. ಶಾಮರಾಯರು ಸಂಪಾದಿಸಿದ ‘ ರತ್ನಾಕರವರ್ಣಿ ‘ ವಿರಚಿತ ‘ ಭರತೇಶವೈಭವ ಕಾವ್ಯಭಾಗದಿಂದ ಆಯ್ದ ‘ ಸಿರಿಯನಿನ್ನೇನ ಬಣ್ಣಿಪೆನು ‘ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ಕವಿ ರತ್ನಾಕರವರ್ಣಿ ಅವರು “ ಗುರುವೇ ಧ್ಯಾನಕೆ ಬೇಸರವಾದಾಗ ಕನ್ನಡದಲ್ಲಿ ಒಂದು ಕಥೆ ಹೇಳುತ್ತೇನೆ . ಅದಕ್ಕೆ ನೀವು ಅನುಮತಿಯನ್ನು ಕೊಡಬೇಕು ” ಎಂದು ಅಪ್ಪಣೆ ಕೇಳಿದ ಸಂದರ್ಭದಲ್ಲಿ ಕವಿ ಈ ರೀತಿ ಹೇಳಿದ್ದಾರೆ .
ಸ್ವಾರಸ್ಯ : ಕವಿ ರತ್ನಾಕರವರ್ಣಿ ಅವರಿಗೆ ಇರುವ ಕನ್ನಡಾಭಿಮಾನ , ಕನ್ನಡ ಪ್ರೇಮ , ಆಶ್ರಯಕೊಟ್ಟ ರಾಜನ ಮೇಲಿರುವ ಗೌರವ ಭಾವನೆಯು ಸಕರವಾಗಿದೆ .
2. “ ಶ್ರೀ ವಿಲಾಸವನೇನನೆಂಬೆ ? ”
ಆಯ್ಕೆ : ಈ ವಾಕ್ಯವನ್ನು ತ.ಸು. ಶಾಮರಾಯರು ಸಂಪಾದಿಸಿದ ‘ ರತ್ನಾಕರವರ್ಣಿ ‘ ವಿರಚಿತ ‘ ಭರತೇಶವೈಭವ ಕಾವ್ಯಭಾಗದಿಂದ ಆಯ್ದ ‘ ಸಿರಿಯನಿನ್ನೇನ ಬಣ್ಣಿಪೆನು ‘ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ಭರತ ಚಕ್ರವರ್ತಿಯು ಸೂರ್ಯೋದಯದಲ್ಲಿ ಎದ್ದು ದೇವರ ಅರ್ಚನೆಯನ್ನು ಮಾಡಿ ರಾಜಸಭೆಗೆ ಆಗಮಿಸುವ ರೀತಿಯನ್ನು ವರ್ಣಿಸಿದ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ .
ಸ್ವಾರಸ್ಯ : ಭರತ ಚಕ್ರವರ್ತಿಯು ವೈಭವದಿಂದ ರಾಜ್ಯಭಾರ ಮಾಡುತ್ತಿರುವುದು ಸ್ವಾರಸ್ಯ ಪೂರ್ಣವಾಗಿ ಕವಿ ವರ್ಣಿಸಿದ್ದಾರೆ .
3 , “ ಚಂದಿರನೋ ಭಾಸ್ಕರನೊಯೆಂಬಂತೆ ”
ಆಯ್ಕೆ : ಈ ವಾಕ್ಯವನ್ನು ತ.ಸು. ಶಾಮರಾಯರು ಸಂಪಾದಿಸಿದ ‘ ರತ್ನಾಕರವರ್ಣಿ ‘ ವಿರಚಿತ ‘ ಭರತೇಶವೈಭವ ‘ ಕಾವ್ಯಭಾಗದಿಂದ ಆಯ್ದ ‘ ಸಿರಿಯನಿನ್ನೇನ ಬಣ್ಣಿಪೆನು ‘ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ : ಭರತನು ರತ್ನ ಖಚಿತವಾದ ಸಿಂಹಾಸನದ ಮೇಲೆ ಕುಳಿತಿರುವ ದೃಶ್ಯವನ್ನು ವರ್ಣಿಸಿದ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾನೆ . ಆಕಾಶದಲ್ಲಿ ಮೋಡದ ಮರೆಯಲ್ಲಿ ಆಗಾಗ ಕಾಣಿಸಿ ಮರೆಯಾಗುವ ಸೂರ್ಯನೋ ಚಂದ್ರನೋ ಎಂದು ಹೇಳಿದ್ದಾರೆ .
ಸ್ವಾರಸ್ಯ : ಬಾನಿನಲ್ಲಿ ಸೂರ್ಯ ಚಂದ್ರರು ಯಾವ ರೀತಿ ಶೋಭಿಸುತ್ತಾರೋ ಅದೇ ರೀತಿ ಆಸ್ಥಾನದಲ್ಲಿ ಭರತ ಚಕ್ರವರ್ತಿ ಕಂಗೊಳಿಸುತ್ತಿರುವುದು ಸ್ವಾರಸ್ಯವಾಗಿ ಕವಿ ವರ್ಣಿಸಿದ್ದಾರೆ .
ಈ ) ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ.
1. ಬಿನ್ನಹ : ಅರಿಕೆ :: ವಿಭು :………..
2 . ಹೊಗಳು : ತೆಗಳು :: ಕಾರ್ಮುಗಿಲ್ :……………….
3. ಭರತ : ಅಯೋಧ್ಯೆ :: ಬಾಹುಬಲಿ :…………..
4. ನೀಲಾಂಬುಜ : ನೀಲ + ಅಂಬುಜ :: ಚಕ್ರೇಶ್ವರ :……………….
ಸರಿ ಉತ್ತರಗಳು
1. ರಾಜ
2. ಬೆಳ್ಳಗಿಲ್
3. ಪೌದನಪುರ
4. ಚಕ್ರ + ಈಶ್ವರ
ಊ ) ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿರಿ .
ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗರು
ರಮ್ಯಾ ಮಂಚದಿಯೆನೆ ತೆಲುಗ
ಅಯ್ಯಯ್ಯ ಎಂಚಪೊರ್ಲಾಂಡೆಂದು ತುಳುವರು
ಮೈಯುಬ್ಬಿ ಕೇಳಬೇಕಣ್ಣ .
ಅಂಬುಜವೆಲ್ಲವು ರವಿಯ ನೋಳಂತೆ ನೀ
ಲಾಂಬುಜ ನೋಳಂತೆ ಶಶಿಯಾ
ತುಂಬಿದ ಸಭೆಯೆಲ್ಲ ನೃಪನ ನೋಡುವ ಮಿಕ್ಕ
ಕಡ ಹಂಬಲ ಮರೆದುದಲ್ಲಲ್ಲಿ
0 Comments