Recent Posts

ಉರಿದ ಬದುಕು - ೦೯ ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


ಉರಿದ ಬದುಕು

ಅ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.  

1. ಅರ್ಧ ಬಾಗಿಲು ತೆಗೆದು ಅನ್ನವ್ವ ತಿಪ್ಪಣ್ಣನಿಗೆ ಏನೆಂದು ಹೇಳಿದಳು?  
ಉತ್ತರ:  ಅರ್ಧ  ಬಾಗಿಲು  ತೆಗೆದು  ಅನ್ನವ್ವ  ತಿಪ್ಪಣ್ಣನಿಗೆ  ಬ್ಯಾಡ  ಅಣ್ಣಾ  ಕಾಲು  ಬುಳ್ತೀನಿ, ಒಳಗೆ ಬರಬ್ಯಾಡ. ನಮ್ಮನ್ನ್ಲೆ ಸಾವಿನ ಬಾಯಾಗ ತುರಕಬ್ಯಾಡ.' ಎಂದು ಹೇಳಿದಳು.  

2. ತಿಪ್ಪಣ್ಣನನ್ನು ಗಪ್ಪನೆ ಬಲವಾಗಿ ಹಿಡಿದುಕೊಂಡವರು ಯಾರು?  
ಉತ್ತರ: ತಿಪ್ಪಣ್ಣನನ್ನು ಗಪ್ಪನೆ ಬಲವಾಗಿ ಹಿಡಿದುಕೊಂಡವರು ಶಂಕ್ರಣ್ಣ.  

3. ದುರ್ಗಪ್ಪ ಯಾರು?  
ಉತ್ತರ: ದುರ್ಗಪ್ಪ  ಭಜನೆ,  ತತ್ವಪದ  ಆಡುವವನು.  ಹಾಗೂ  ತಿಪ್ಪಣ್ಣನೇ  ಮೊದಲಾದ ಹೋರಾಟಗಾರರಿಗೆ ಆಶ್ರಯ ನೀಡಿದವನು.  

4. ದುರ್ಗಪ್ಪನು ಶಂಕ್ರಣ್ಣನಿಗೆ ಕುಲದ ಬಗೆಗೆ ಹೇಳಿದ ನೀತಿ ಮಾತುಗಳಾವುವು?  
ಉತ್ತರ:  ಕುಡಿ  ತಮ್ಮಾ,  ಜೀವ  ಬದುಕ್ಲಿ  ಮೊದ್ಲು,  ಜೀವಕ್ಕ  ಯಾವ್  ಕುಲಾನೂ  ಇಲ್ಲ. ಗಾಳಿಗೆ  ಕುಲಾ  ಆದೇನು  ತಮ್ಮಾ,  ನೀರಿಗೆ  ಕುಲಾ  ಆದೇನು  ತಮ್ಮಾ,  ನೆಲಕ್ಕ  ಕುಲಾ ಆದೇನು? ಅದು ನಾವು ಮಾಡಿಕೆಂಡದ್ದು ಕುಡಿ'  

5.  ದುರ್ಗಪ್ಪನ  ಯಾವ  ಮಾತುಗಳು  ಹೋರಾಟಗಾರರ  ಕೈಕಾಲು  ಉಕ್ಕಿನಂಗೆ  ಆಗುವಂತೆ ಮಾಡುತ್ತಿದ್ದವು?  
ಉತ್ತರ: ಗೆಲುವು  ನಮ್ಗೇ.  ಬದುಕಿದ್ರೆ  ಸ್ವತಂತ್ರ  ನೋಡೋಣ,  ಹ್ಯಂಗಿರ್ತದ;  ಸತ್ರ, ದೇಶಕ್ಕಾಗಿ  ಸತ್ತ  ಅಂತಾರ.  ಅಂತಾ  ಸಾವು  ಯಾರಿಗುಂಟು  ಯಾರಿಗಿಲ್ಲ,  ಅದು  ಪುಣ್ಯದ ಕೆಲಸ.  ನಮ್ಮ  ಮುಂದಿನವ್‌ ರಾದ್ರೂ  ಸ್ವತಂತ್ರ  ನೋಡ್ತರಲ್ಲ'  ಈ  ಮಾತುಗಳು ಹೋರಾಟಗಾರರ ಕೈಕಾಲು ಉಕ್ಕಿನಂತೆ ಆಗುವಂತೆ ಮಾಡುತ್ತಿದ್ದವು.

 
You Might Like

Post a Comment

0 Comments