Recent Posts

ಸದ್ದುಮಾಡದಿರು  - ೧೦ ನೇ ತರಗತಿ ತಿಳಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

                                                               
                                                               ಸದ್ದುಮಾಡದಿರು                         
                                                                                                                 - ಸಿ.ಪಿ.ಕೃಷ್ಣಕುಮಾರ್
 
ಕವಿ/ಲೇಖಕರ ಪರಿಚಯ
?  ಸಿ.ಪಿ.ಕೃಷ್ಣಕುಮಾರ್ (ಸಿ.ಪಿ.ಕೆ) ಅವರು 1939 ರಲ್ಲಿ ಕೃಷರಾಜನಗರ ತಾಲ್ಲೂಕಿನ ಚಿಕ್ಕನಾಯಕನಹಳ್ಳಿಯಲ್ಲಿ ಜನಿಸಿದರು.
 ?  ಇವರು ಬೊಗಸೆ, ಕನ್ನಡ ಚತುಮರ್ುಖ, ಕನ್ನಡ ನಾಗಾನಂದ ಮತ್ತು ಪರಿಭಾವನೆ ಮುಂತಾದ ಕೃತಿಗಳನ್ನು ಬರೆದಿದ್ದಾರೆ.
?  ಇವರಿಗೆ ಕನರ್ಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮತ್ತು ಚುಟುಕ ರತ್ನ ಪ್ರಶಸ್ತಿ ದೊರೆತಿದೆ.
?  ಪ್ರಸ್ತುತ ಕವನವನ್ನು ಅವರ ಬೊಗಸೆ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.                                                                                    

                                                ಅಭ್ಯಾಸ
1. ಪದಗಳ ಅರ್ಥ :

ಇಬ್ಬನಿ - ಮಂಜಿನ ಹನಿ                                            
 ಅಲ್ತೆ (ಅವ್ಯಯ) - ಅಲ್ಲವೆ
ಒಲು (ಅವ್ಯಯ)  ಅಂತೆ                                           
ತಿಮಿರ - ಕತ್ತಲೆ; ಅಜ್ಞಾನ.
ತೊರೆ (ಕ್ರಿ) -ಬಿಡು; ತ್ಯಜಿಸು(ನಾ); ಹೊಳೆ; ನದಿ.                          
  ಧ್ವನಿ(ತ್ಸ) - ದನಿ(ದ್ಭ).
ಬಿರುದು - ಪ್ರಶಸ್ತಿ                                                
 ಮದ್ದು - ಸಿಡಿಯುವ ವಸ್ತು; ಸಿಡಿಮದ್ದು.
ಮಿಡುಕು - ನಡುಗು                                               
ರವಿಕರ - ಸೂರ್ಯಕಿರಣ
ರೇವು - ಬಂದರು; ಹಡಗು ನಿಲ್ಲುವ ಸ್ಥಳ.                               
 ಸೋಂಕು - ಸೋಕು; ತಾಗು.  

2. ಪ್ರಶ್ನೆಗಳು :  

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.  

1. ತಿಮಿರಕ್ಕೆ ವೈರಿ ಯಾವುದು?

ತಿಮಿರಕ್ಕೆ ವೈರಿ ದೀಪ  

2.ಕವಿ ಮಾನವನ ಬದುಕನ್ನು ಇಬ್ಬನಿಗೆ ಏಕೆ ಹೋಲಿಸಿದ್ದಾರೆ?  
ಇಬ್ಬನಿಯು ಸದ್ದು ಗದ್ದಲವಿಲ್ಲದೆ ಮೌನವಾಗಿ ಕರಗುವುದರಿಂದ ಕವಿ ಮಾನವನ ಬದುಕನ್ನು ಇಬ್ಬನಿಗೆ ಹೋಲಿಸಿದ್ದಾರೆ.

3. ನಮ್ಮ ಕರ್ತವ್ಯಗಳನ್ನು ಹೇಗೆ ಮುಗಿಸಬೇಕೆಂದು ಕವಿ ಹೇಳಿದ್ದಾರೆ?

ಶಾಂತ ರೀತಿಯಿಂದ ಮುಗಿಸಬೇಕೆಂದು ಹೇಳಿದ್ದಾರೆ.

4. ಬದುಕಿನಲ್ಲಿ ಸಿಡುಕು ಮಿಡುಕನ್ನು ತೊರೆದು ಹೇಗಿರಬೇಕೆಂದು ಕವಿ ಹೇಳಿದ್ದಾರೆ?

ಸಿಡುಕು ಮಿಡುಕನ್ನು ತೊರೆದು ಮೌನಿಯಾಗಿರಬೇಕೆಂದು ಕವಿ ಹೇಳಿದ್ದಾರೆ.

 ಆ) ಈ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿಉತ್ತರಿಸಿರಿ

1. ಸದತಟ್ಟೆಯಲ್ಲಿ  ಕರ್ಪೂರ  ಮೌನವಾಗಿ  ಕರಗುತ್ತದೆ. 
 ದೀಪದೆದುರಿಗೆ  ಕತ್ತಲು  ನಿಶ್ಶಬ್ಧವಾಗಿ  ಸರಿಯುತ್ತದೆ.  ರವಿಕಿರಣಗಳಿಗೆ  ಇಬ್ಬನಿ  ಕರಗಿ ನೀರಾಗುತ್ತದೆ.  ಯಾವುದೇ  ಶಬ್ಧ  ಮಾಡದೇ  ಹಡಗು  ರೇವನ್ನು  ಸೇರುತ್ತದೆ.  ಹಾಗೆಯೇ  ಮಾನವ  ಸದ್ದು  ಗದ್ದಲವಿಲ್ಲದೆ  ಬಾಳಬೇಕು ಎಂದು ಕವಿಗಳು ತಿಳಿಸುತ್ತಾರೆ.

2. ಕೂಗಾಟದ ಬದುಕು ನಿಷ್ಪ್ರಯೋಜಕ ಎಂಬುದಕ್ಕೆ ಕವಿ ನೀಡುವ ನಿದರ್ಶನಗಳಾವುವು?

ಕೂಗಾಡಿ  ಹಾರಾಡಿ  ಮಾಡುವುದರಿಂದ  ಫಲವಿಲ್ಲ.  ಇದರಿಂದ  ರಂಪ  ರಾದ್ಧಾಂತ  ಆಗುವುದೇ  ಹೊರತು  ಪ್ರಯೋಜನವಿಲ್ಲ.  ಉದಾ: ಹಸಿ  ಸೌದೆ  ಬುಸುಗುಟ್ಟು  ಹೊಗೆ  ಎಬ್ಬಿಸಿದಂತೆ  ಸಿಡಿಮದ್ದಿಗೆ  ಒಂದೇ  ಒಂದು  ಕಿಡಿ  ಸೋಕಿದ  ತಕ್ಷಣ  ಅದು  ಶಬ್ದ  ಮಾಡಿ ಸಿಡಿದೆಳೆಸುವಂತೆ ಇದರಿಂದ ನಷ್ಟವೇ ಹೊರತು ಲಾಭವಿಲ್ಲ. ಆದ್ದರಿಂದ ಸಿಡುಕು ಮಿಡುಕನ್ನು ತೊರೆದು ಮೌನವಾಗಿರಬೇಕೆಂದು ಕವಿ ಹೇಳಿದ್ದಾರೆ.

3.ಕರ್ಪೂರದ ಕೆಲಸವೇನು?
ಅದು ತನ್ನ ಕೆಲಸವನ್ನು ಹೇಗೆ ಪೂರೈಸುತ್ತದೆ?

ತಟ್ಟೆಯಲ್ಲಿರುವ  ಕರ್ಪೂರ  ಮೌನವಾಗಿ  ಕರಗುತ್ತದೆ.  ದೇವರಿಗೆ  ಆರತಿ,  ಪೂಜೆಗೆ  ಸಹಾಯವನ್ನು  ಮಾಡುತ್ತದೆ.  ಬೆಂಕಿಯಲ್ಲಿ  ಉರಿದು ತಾನು ಕರಗಿದರೂ ಶಬ್ಧವನ್ನು ಮಾಡದೇ ಬೆಳಕನ್ನು ನೀಡಿ ತನ್ನ ಕೆಲಸವನ್ನು ಮೌನವಾಗಿ ಪೂರೈಸುತ್ತದೆ.

4. ಮಾನವನ ಬದುಕು ಕರ್ಪೂರದಂತೆ ಇರಬೇಕು ಏಕೆ ?

ತಟ್ಟೆಯಲ್ಲಿರುವ ಕರ್ಪೂರ ತಾನು ಉರಿದರೂ ಬೆಳಕನ್ನು ನೀಡುತ್ತದೆ. ದೇವರ ಪೂಜೆ, ಆರತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇತರರಿಗೆ ಸಹಾಯ ಮಾಡುತ್ತದೆ. ಆಗ ಯಾವುದೇ ಗದ್ದಲವನ್ನು ಮಾಡದೇ ಮೌನವಾಗಿ ಕರಗುತ್ತದೆ. ಹಾಗೆಯೇ ಮಾನವರೂ ಸಹ ತನಗೆ ಕಷ್ಟವಾದರೂ ಇತರರಿಗೆ ಸಹಾಯ ಮಾಡಬೇಕು. ಯಾವುದೇ ಸದ್ದು ಗದ್ದಲವಿಲ್ಲದೆ ಶಾಂತ ರೀತಿಯಿಂದ ಬಾಳಬೇಕು.  

ಇ) ಈ ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿಉತ್ತರಿಸಿರಿ

1. ಸದ್ದು ಮಾಡದಿರು ಕವಿತೆ ನೀಡುವ ಸಂದೇಶವೇನು?

ಆಡಂಬರ, ಪ್ರದರ್ಶನ ಇವುಗಳಿಗೆ ಜನ ಮನಸೋಲುವುದು ಸಾಮಾನ್ಯ. ಸಂಪತ್ತು, ಹೆಸರು, ಕೀತರ್ಿ ಇವುಗಳನ್ನು ಪಡೆಯುವುದೇ ಜೀವನ ಎಂದು ಅನೇಕ ಜನ ತಿಳಿದಿದ್ದಾರೆ. ಆದರೆ ಇದ್ಯಾವುದು ಇಲ್ಲದೇ ಸದ್ದು ಮಾಡದೆ ಜೀವನವನ್ನು ನಡೆಸಬೇಕು. ಗದ್ದಲವ ಮಾಡದೆ ಗುರಿಯನ್ನು ಮುಟ್ಟಬೇಕು. ತಟ್ಟೆಯಲ್ಲಿ ಕರ್ಪೂರ ಮೌನದಲ್ಲಿ ಕರಗುವಂತೆ, ದೀಪದೆದುರಿಗೆ ತಿಮಿರ ಸರಿಯುವಂತೆ, ಶಾಂತಿಯಿಂದ ಬದುಕಿನ ಕರ್ತವ್ಯವನ್ನು ಮುಗಿಸಬೇಕು. ಕೂಗಾಡಿ, ಹಾರಾಡಿ ಫಲವಿಲ್ಲ. ಹಸಿ ಸೌದೆ ಬುಸುಗುಟ್ಟಿ ಜೋರಾಗಿ ದನಿಯೆತ್ತುತ್ತದೆ. ಕಿಡಿ ಸೋಕಿದರೂ ಮದ್ದು ಸಿಡಿದು ಅಬ್ಬರಿಸುತ್ತ. ಮಾಡದೆ ಬಾಳಬೇಕು ಎಂಬುದಕ್ಕೆ ಕವಿ ನೀಡುವ ಹೋಲಿಕೆಗಳಾವುವು? ದೆ. ಅಂತಹ ಅಬ್ಬರದ ಜೀವನ ನಮಗೆ ಬೇಡ. ರವಿ ಕಿರಣಕ್ಕೆ ಇಬ್ಬನಿ ಕರಗುವಂತೆ ಸಿಡುಕು ಮಿಡುಕನು ತೊರೆದು ಮೌನದಿಂದ ನಮ್ಮ ಕರ್ತವ್ಯವನ್ನು ಮಾಡುತ್ತಾ ಜೀವನ ನಡೆಸಬೇಕೆಂದು ಕವಿ ಹೇಳಿದ್ದಾರೆ.

2. ಸದ್ದು ಮಾಡದೆ ಬಾಳಬೇಕು. ಎಂಬುದನ್ನು ಕವಿ ಯಾವ ಯಾವ ನಿದರ್ಶನಗಳ ಮೂಲಕ ತಿಳಿಸಿ ಹೇಳಿದ್ಧಾರೆ?
ಕರ್ಪೂರಕ್ಕೆ ಹೋಲಿಸಸಿದ್ದಾರೆ. ಏಕೆಂದರೆ ಕರ್ಪೂರವು ಹೇಗೆ ತಟ್ಟೆಯೊಳಗೆ ಮೌನದಲ್ಲಿ ಕರಗುತ್ತದೆಯೋ, ದೀಪದೆದುರು ಕತ್ತಲೆ ನಿಲ್ಲದೆ ಸರಿದು ಹೊಗುವಂತೆ ಬದುಕನ್ನು ಶಾಂತ ರೀತಿಯಿಂದ ಕರ್ತವ್ಯವನ್ನು ಮುಗಿಸುತ್ತದೆ. ಇದರಿಂದಾಗಿ ಕವಿಯು ಈ ನಿದರ್ಶನಗಳಿಂದ ಈ ಕೆಲಸವನ್ನು ಮಾನವನು ಕರ್ಪೂರದಂತೆ ಯಾರಿಗೂ ಅರಿವಾಗದಂತೆ ಮಾಡಬೇಕು. ಕವಿಯು ಮೊತ್ತೊಮ್ಮೆ ಇನ್ನೊಂದು ಉದಾಹರಣೆ ನೀಡಿದ್ದಾರೆ ಹಸಿ ಸೌದೆ ಬುಸುಗುಟ್ಟು ಹೊಗೆ ಎಬ್ಬಿಸಿದಂತೆ, ಸಿಡಿ ಮದ್ದಿಗೆ ಒಂದೇ ಒಂದು ಕಿಡಿ ಸೋಕಿ ತಕ್ಷಣ ಅದು ಶಬ್ದ ಮಾಡಿ ಸಿಡಿದೆಳೆಸುವಂತೆ, ಇದರಿಂದ ನಷ್ಡವೇ ಹೊರತು ಲಾಭವಿಲ್ಲ. ಆದ್ದರಿಂದ ನಾವು ಮಾಡಬೇಕಾದ ಕೆಲಸವನ್ನು ಸದ್ದಿಲ್ಲದೆ ಯಾರಿಗೂ ಅರಿವಾಗದಂತೆ ಶಾಂತ ರೀತಿಯಿಂದ ಉದ್ವೇಗಕ್ಕೆ ಒಳಗಾಗದೆ ಮಾಡಬೇಕು.  

ಈ) ಸಂದರ್ಭದೊಡನೆ ವಿವರಿಸಿ
 
1. ಶಾಂತಿಯಲ್ಲಿ ಬದುಕಿ ನೀ ಕರ್ತವ್ಯವನ್ನು ಮುಗಿಸು
ಈ  ವಾಕ್ಯವನ್ನು  ನ್ನು  ಸಿ.ಪಿ.ಕೃಷಕುಮಾರ್ಅವರು  ಬರೆದಿರುವ  ಬೊಗಸೆ  ಎಂಬ  ಕವನ  ಸಂಕಲನದಿಂದ  ಆಯ್ದ  ಸದ್ದು  ಮಾಡದಿರು ಎಂಬ ಪದ್ಯದಿಂದ ಆರಿಸಲಾಗಿದೆ.
ಈ  ವಾಕ್ಯವನ್ನು  ಕವಿಯು  ಮಾನವನು  ಕೆಲಸವನ್ನು  ಶಾಂತಿಯಿಂದ  ಮುಗಿಸಬೇಕು  ಎಂದು  ಹೇಳುವ  ಸಂದರ್ಭದಲ್ಲಿ  ಹೇಳಿದ್ದಾರೆ. ಕರ್ಪೂರವು  ತಟ್ಟೆಯೊಳಗೆ  ಮೌನದಲ್ಲಿ  ಕರಗುವಂತೆ,  ದೀಪದೆದುರು  ಕತ್ತಲೆ  ನಿಲ್ಲದೆ  ಸರಿದು  ಹೊಗುವಂತೆ,  ಬದುಕನ್ನು  ಶಾಂತ ರೀತಿಯಲ್ಲಿ ಕರ್ತವ್ಯವನ್ನು ಮುಗಿಸಬೇಕು, ಯಾರಿಗೂ ಅರಿವಾಗದಂತೆ ಮಾಡಬೇಕು.

2. ಸಿಡುಕು ಮಿಡುಕನ್ನು ತೊರೆದು ಮೌನಿಯಾಗು
ಈ  ವಾಕ್ಯವನ್ನು  ಸಿ.ಪಿ.ಕೃಷ್ಣಕುಮಾರ್  ಅವರು  ಬರೆದಿರುವ  ಬೊಗಸೆ  ಎಂಬ  ಕವನ  ಸಂಕಲನದಿಂದ  ಆಯ್ದ  ಸದ್ದು  ಮಾಡದಿರು ಎಂಬ ಪದ್ಯದಿಂದ ಆರಿಸಲಾಗಿದೆ.
ಈ  ವಾಕ್ಯವನ್ನು  ಕವಿಯು  ಹೇಳಿದ್ದಾರೆ.  ಮನುಷ್ಯ  ಜೀವನದಲ್ಲಿ  ಹಸಿ  ಸೌದೆಯಂತೆ  ಬುಸುಗುಟ್ಟುವಂತೆ,  ಸಿಡಿಮದ್ದು  ಬರೇ  ಸದ್ದು ಮಾಡುವಂತೆ  ಬದುಕದೆ,  ರವಿಕಿರಣಕ್ಕೆ  ಮೌನವಾಗಿ  ಇಬ್ಬನಿಯು  ಕರಗುವಂತೆ  ಸಿಡುಕು  ಮಿಡುಕನ್ನು  ತೊರೆದು,  ಮೌನವಾಗಿ ಬಾಳುವುದನ್ನು ಕಲಿಯಬೇಕೆಂದು ಕವಿ ಹೇಳಿದ್ದಾರೆ. 
You Might Like

Post a Comment

0 Comments