Recent Posts

ದುಡಿಮೆಯ ಗರಿಮೆ   - ೪ನೇ ತರಗತಿ ಸವಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


ದುಡಿಮೆಯ ಗರಿಮೆ 
 
 ಪದ್ಯದ ಸಾರಾಂಶ :
 
ಕವಿ ಕುಳಮರ್ವ ಅವರು ತಮ್ಮ ಈ ಕವನದಲ್ಲಿ ವಿವಿಧ
 ಕುಲಕಸಬುದಾರರ ಕುರಿತು ಮತ್ತು ಅವರು ಮಾಡುವ
ವೃತ್ತಿಯಿಂದ ಹೇಗೆ ಉಪಯೋಗವಿದೆ ಎಂದು
ವಿವರಿಸಿದ್ದಾರೆ .
 
ಕಬ್ಬಿಣವನ್ನು ಕಾಸಿ ಕುಟ್ಟು ಹಾರೆಯನ್ನು ಮಾಡುತ್ತ
ಪ್ರೀತಿಯಿಂದ ಈ ದೇಶದಅನ್ನದಾತನದ  ರೈತನಿಗೆ
 ನೀಡುವನು . ಈ ಜಗದ ಜನರನ್ನು ಸಲಹುವ
ಅನ್ನದಾತನಿಗೆ ಬೆಳೆಯನ್ನು ಬೆಳೆಯಲು ತನ್ನ ನೆರವನ್ನು
ನೀಡುವೆನೆಂದು ಕಮಾರನು ಹೇಳುವನು .
 
‘ ಕಾಡಿನಲ್ಲಿ ಸುತ್ತಾಡಿ ಒಣಮರಗಳನ್ನು ಹುಡುಕಿ
ತಂದು ವ್ಯವಸಾಯಕ್ಕೆ ಅವಶ್ಯವಿರುವ ನೇಗಿಲಕ್ಕೆ ಬೇಕಾದ
ರೀತಿಯಲ್ಲಿ ಮತ್ತು ಬಂಡಿಯ ಗಾಲಿಗೆ ಬೇಕಾದ
ಆಕಾರದಲ್ಲಿ ಮರವನ್ನು ತುಂಡರಿಸುವನು ಬಡಿಗ ,
ಉತ್ತಮವಾದ ನೇಗಿಲನ್ನು ಮಾಡಿ ಅದರೊಂದಿಗೆ
ನೊಗವನ್ನು ಕೂಡಾ ಸುಂದರವಾದ ಕೆತ್ತನೆಯೊಂದಿಗೆ
ರೂಪಿಸಿ   ಅನ್ನದಾತ ರೈತನಿಗೆ ನೀಡುವೆನೆಂದು ಬಡಿಗ
ವೃತ್ತಿಯ ವ್ಯಕ್ತಿ ಹೇಳುವನು .
 
ಎಲ್ಲರೂ ನೀಡಿದ ಬಟ್ಟೆಯ ಗಂಟನ್ನು ಒಟ್ಟಿಗೆ ಸೇರಿಸಿ ,
ಕತ್ತೆಯ ಬೆನ್ನಮೇಲೆ ಇರಿಸಿ ಬಟ್ಟೆ ಒಗೆದು ಸ್ವಚ್ಛ ಸ್ವಚ್ಛ ಮಾಡಲು
 ಹಳ್ಳಕ್ಕೆ ಸಾಗುವನು ದೋಭಿ , ಹಳದಿಯ ಹರಿಯುವ
ನೀರನ್ನು ಮಲಿನಗೊಳಿಸದೇ ಎಲ್ಲರ ಬಟ್ಟೆಗಳನ್ನು ಒಗೆದು
 ಸ್ವಚ್ಛಗೊಳಿಸಿ ಶುಭ್ರವಾಗಿಡ ಎಂದು ಅಗಸವೃತ್ತಿಯ
 ದೋಬಿ ಹೇಳುವನು .
 
ಸಮುದ್ರದಲ್ಲಿ ಮೀನುಗಳನ್ನು ಹಿಡಿಯಲು ಬಲೆಯನ್ನು
ಬೀಸಿ ಮೀನುಗಳನ್ನು ಆನಂದದಿಂದ ಹಿಡಿಯುವೆನು .
 ಹಿಡಿದ ಮೀನುಗಳನ್ನು ಸಂತೆಗೆ ತೆಗೆದುಕೊಂಡು ಹೋಗಿ
ಅವುಗಳನ್ನು ಮಾರಾಟ ಮಾಡಿ ಸಂಜೆಯ ಹೊತ್ತಿಗೆ
 
ದುಡ್ಡು ಎಣಿಸುವೆನು ಎಂದು ಮೀನುಗಾರನು
ಹೇಳುವನು . ಹೊಸ ಹೊಸ ರೀತಿಯಲ್ಲಿ ಬಟ್ಟೆಗಳನ್ನು ಹೊಲಿಯುತ್ತ
 ಹೊಲಿದ ಬಟ್ಟೆ ಧರಿಸಿದವರ ಮನಸ್ಸಿಗೆ ಹೊಸ ಹುರುಪು
ಬರುವ ಹಾಗೆ ಮಾಡುವನು . ಅಪ್ಪ , ಅಮ್ಮ ಮಕ್ಕಳ
ಹಾಗೂ ಬಳಗದವರ ಮೆಚ್ಚುಗೆಯನ್ನು ಗಳಿಸಲು
ತವಕಿಸುವನು ಈ ಬಟ್ಟೆ ಹೊಲಿಯುವ ದರ್ಜಿ ( ಟೇಲರ್ ) .
ಹೀಗೆ ಕವಿ ವಿವಿಧ ಕುಲಕಸಬುದಾರರ ವೃತ್ತಿ ಹಾಗೂ
ಅದರ ಪ್ರಯೋಜನ ಕುರಿತು ಈ ಪದ್ಯ ಬಹಳ ಸುಂದರವಾಗಿ ವರ್ಣಿಸಿದ್ದಾರೆ .


ಅಭ್ಯಾಸ ಚಟುವಟಿಕೆ
 
ಅ ) ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ .
 
1.    ಕಬ್ಬಿಣದಿಂದ ತಯಾರಿಸುವ ಸಲಕರಣೆಗಳು ಯಾವುವು ?
ಉತ್ತರ :
ಹಾರೆ , ಕೊಡಲಿ , ಸಲಿಕೆ , ಗುದ್ದಲಿ ಇವು ಕಬ್ಬಿಣದಿಂದ
ತಯಾರಿಸುವ ಸಲಕರಣೆಗಳು ,
 
2.    ಜನರನ್ನು ಸಲಹುವ ದಾತ ಯಾರು ?
 ಉತ್ತರ :
ಜನರನ್ನು ಸಲಹುವ ದಾತ ರೈತ .
 
3.    ನೊಗವನ್ನು ಯಾವು  ಮಾಡುವರು ?
 ಉತ್ತರ :
ನೊಗವನ್ನು ಒಣಮರದ ಕಟ್ಟಿಗೆಯಿಂದ ಮಾಡುವರು .
 
4.    ಮೀನನ್ನು ಹೇಗೆ ಹಿಡಿಯುವರು ?
 ಉತ್ತರ :
ಮೀನ್ನು ಬಲೆಯನ್ನು ಬೀಸಿ ಹಿಡಿಯುವರು .
 
 ಆ ) ಎರಡು / ಮೂರು ವಾಕ್ಯದಲ್ಲಿ ಉತ್ತರ ಬರೆಯಿರಿ .
 
1.    ಬಳಗದ ಮೆಚ್ಚುಗೆಯನ್ನು ಬಟ್ಟೆ ಹೊಲಿಯುವವರು ಹೇಗೆ ಗಳಿಸಬಹುದು ?
ಉತ್ತರ :
  ಹೊಸ ಹೊಸ ಬಗೆಯ ಉಡುಪುಗಳನ್ನು
ಹೊಲಿಯುವುದರ ಮೂಲಕ ಬಟ್ಟೆ ಹೊಲಿಯುವವರು
ಬಳಗದ ಮೆಚ್ಚುಗೆಯನ್ನು ಗಳಿಸಬಹುದು .
 
2.    ‘ ನೇಗಿಲ’ನ್ನು ಹೇಗೆ ಮಾಡುವರು ?
ಉತ್ತರ :
ಒಣಮರದ ಹಲಗೆಯನ್ನು ಉಪಯೋಗಿಸಿ ಚೂಪಾಗಿ ಕೆತ್ತಿ
 ನೇಗಿಲನ್ನು ಮಾಡುವರು .
 
ಇ ) ಕೊಟ್ಟಿರುವ ಪದಗಳಲ್ಲಿ ಸರಿಯಾದ ಪದ ಆರಿಸಿ ಬಿಟ್ಟ ಸ್ಥಳದಲ್ಲಿ ಬರೆಯಿರಿ .
 
 ( ಕಾರ್ಮಿಕ , ಕತ್ತೆ , ಮರ )
 
1.    ಜನರನ್ನು ಸಲಹುವವನು  ………….
ಉತ್ತರ : ರೈತ
 
2.    ನೊಗವನ್ನು…… ದಿಂದ ಮಾಡುತ್ತಾರೆ .
ಉತ್ತರ : ಮರ
 
3.    ಬಟ್ಟೆಯ ಗಂಟನ್ನು …….. ಹೊರುತ್ತದೆ .
ಉತ್ತರ : ಕತ್ತೆ
 
4.    ಮೀನನ್ನು ಹಿಡಿಯಲು …….. ಬಳಸುತ್ತಾರೆ .
ಉತ್ತರ : ಬಲೆ
 
 ಈ ) ಖಾಲಿ ಜಾಗದಲ್ಲಿ ಪದ್ಯದ ಮುಂದಿನ  ಸಾಲುಗಳನ್ನು ಬರೆದು ಪೂರ್ಣಗೊಳಿಸು .
 
ಹೊಸ ಹೊಸ ಬಗೆಯಲಿ……….
……..ಬೆಳಗಿಸುವೆ
ಅಪ್ಪನ ಅಮ್ಮನ ……….
………..ತವಕಿಸುವೆ
ಉತ್ತರ : ಹೊಸ ಹೊಸ ಬಗೆಯಲಿ ಉಡುಗೆಯ ಹೊಲೆಯುತ
ಮೈಯನು ಮನವನು ಬೆಳಗಿಸುವೆ
ಅಪ್ಪನ ಅಮ್ಮನ ಮಕ್ಕಳ ಬಳಗದ
ಮೆಚ್ಚುಗೆ ಗಳಿಸಲು ತವಕಿಸುವೆ .
 
ಭಾಷಾ ಚಟುವಟಿಕೆ
 
ಅ) ಕೊಟ್ಟಿರುವ ವಿರುದ್ಯಾರ್ಥಕ ಪದಗಳನ್ನು  ಮಾದರಿಯಂತೆ ವಾಕ್ಯಗಳಲ್ಲಿ ಬಳಕೆ ಮಾಡಿ .
 

 ಮಾದರಿ : ದೂರ > ಹತ್ತಿರ = ನಾನು ಎಸೆದ ಕಲ್ಲು ದೂರ ಬಿದ್ದಿತು . ನಮ್ಮ ಮನೆ ಶಾಲೆಯ ಹತ್ತಿರವಿದೆ .
ಉತ್ತರ :
1.    ರಾತ್ರಿ • ಹಗಲು = ನಾನು ರಾತ್ರಿ ಎರಡು ಗಂಟೆ ಅಭ್ಯಸಿಸುವೆನು .
ನಾನು ಹಗಲು ಒಂದು ಗಂಟೆ ಆಟವಾಡುತೇನೆ .
 
2.    ಹಿಗ್ಗು • ಕುಗ್ಗು = ನಮ್ಮ ಹೊಲದಲ್ಲಿ ಬಿತ್ತಿದ ಪೈರು
  ಚೆನ್ನಾಗಿ ಬೆಳೆದಾಗ ಎಲ್ಲರೂ ಹಿಗ್ಗುವರು .
 ನಾವು ಬೆಳೆದ ಪೈರಿಗೆ ತಕ್ಕ ಬೆಲೆ ಸಿಗದೇ ಇದ್ಯಾಗ   ಕುಗ್ಗುವವು .
 
3.    ಸುಳ್ಳು • ನಿಜ = ನಾವು ಸುಳ್ಳು ಎಂದೂ ಹೇಳಿ ಶಾರದು .
 ನಾವು ಯಾವಾಗಲೂ ನಿಜವನೇ ಹೇಳಬೇಕು .
 
4.    ಚಿಕ್ಕ • ದೊಡ್ಡ = ನಮ್ಮ ಮನೆಯ ಲಲ್ಲಿ ಬೆಳೆದ ಮಾವಿನ ಗಿಡ ಚಿಕ್ಕದಾಗಿದೆ .
ನಮ್ಮ ಹೊಲದಲ್ಲಿ ಬೆಳೆದ ತೆಂಗಿನ ಮರ ದೊಡ್ಡದಾಗಿದೆ .
 
ಆ ) ಪ್ರಾಸ ಪದಗಳನ್ನುಪಾಡ್ಯದಿಂದ ಆರಿಸಿ  ಮಾದರಿಯಂತೆ ಬರೆಯಿರಿ ?  
ಮಾದರಿ : ರೈತನಿಗೆ ದಾತನಿಗೆ
ಉತ್ತರ :
1.    ಕೊಯ್ಯುವನು- ನೀಡುವೆನು
2.ಹಿಡಿಯ – ಎಣಿಸುವೆನು
 3 .ಬೆಳಗಿಸುವ ತವಕಿಸುವೆ .
 
ಇ ) ಕೊಟ್ಟಿರುವ ವಾಕ್ಯದಲ್ಲಿ ಕೆಲಸವನ್ನು ಸೂಚಿಸುವ ಪದವನ್ನು ಗುರುತಿಸಿ ಬರೆಯಿರಿ .
 

1.    ನೇಗಿಲ ಅಳತೆಗೆ ಕೊಯ್ಯುವೆನು
ಉತ್ತರ :
ಕೊಯ್ಯುವೆನು
 
2.    ಕತ್ತೆಯ ಬೆನ್ನಲಿ
ಉತ್ತರ :
ಇರಿಸುವೆನುಇರಿಸುವೆನು
 
3.    ಸಂಜೆಗೆ ಹಣವನ್ನು ಎಣಿಸುವೆನು
ಉತ್ತರ :
ಎಣಿಸುವೆನು
 
ಬಳಕೆ ಚಟುವಟಿಕೆ
 
1.ನಿಮ್ಮ ಊರಿನಲ್ಲಿ ಕಸುಬುದಾರರನ್ನು
ಪಟ್ಟಿ ಮಾಡಿ ಅವರು ಯಾವ ಯಾವ ಕೆಲಸವನ್ನು
ಮಾಡುತ್ತಾರೆ ಎಂಬುದನ್ನು ಕೊಟ್ಟಿರುವ ಜಾಗದಲ್ಲಿ
 ಬರೆಯಿರಿ .
 
ಉತ್ತರ :
ಕಸಬುದಾರರು    –        ಮಾಡುವ ಕೆಲಸ
 ಕಸಬುದಾರರು            ಮಾಡುವ ಕೆಲಸ
1.    ದರ್ಜೆ                      ಬಟ್ಟೆ ಹೊಲಿಯುವುದು .
2.    ನೇಕಾ                      ಬಟ್ಟೆ ನೇಯುವುದು
3.    ಬಡಿಗ .                  ಬಾಗಿಲು , ಕಿಟಕಿ , ಮುಂತಾದವುಗಳನ್ನು ತಯಾರಿಸುವುದು .
 
2.    ಊರಿನಲ್ಲಿ ವಿವಿಧ ಕಸುಬುಗಳನ್ನು ಮಾಡುವವರು  ಇರಬೇಕು , ಏಕೆ ?
 ಉತ್ತರ :.
ಊರಿನಲ್ಲಿ ವಿವಿಧ ಕಸುಬುಗಳನ್ನು ಮಾಡುವವರು
ಇರಬೇಕು . ಏಕೆಂದರೆ ಯಾವುದೇ ಒಂದು ಕೆಲಸ
ಒಬ್ಬನಿಂದಲೇ ಮಾಡಲಾಗುವುದಿಲ್ಲ . ಉದಾಹರಣೆಗೆ
ಮನೆ ನಿರ್ಮಿಸುವುದು .
 
3.    ಕೊಟ್ಟಿರುವ ಚೌಕದಲ್ಲಿ ರೈತನಿಗೆ ಸಂಬಂಧಿಸಿದ
ಉತ್ತರ :
ಅನೇಕ ಪದಗಳು ಅಡಗಿ ಕುಳಿತಿವೆ . ಅಂತಹ
 ಪದಗಳನ್ನು ಪತ್ತೆ ಹಚ್ಚಿ ವೃತ್ತ ಹಾಕು .

 
ಈ ಕವಿತೆಯಲ್ಲಿ ಬರುವ ಕಸುಬುದಾರರಲ್ಲಿ ನಿನಗೆ ಇಪ್ಪವಾದವರು ರಾರು ? ಏಕೆ ?
 ಉತ್ತರ :
ಈ ಕವಿತೆಯಲ್ಲಿ ಬರುವ ಕಸುಬುದಾರರಲ್ಲಿ
ನನಗೆ ಇಷ್ಮವಾದವರು – ಬಟ್ಟೆಯನ್ನು ಹೊಲಿಯುವ
 ದರ್ಜಿ ( ಟೇಲರ್ ) , ಏಕೆಂದರೆ ಅವನು ಹೊಸ ಹೊಸ ಬಗೆಯಲ್ಲಿ
 ಬಟ್ಟೆ ಹೊಲಿಯುವುದು ನನಗೆ ಇಷ್ಮವಾಗಿದೆ .
 

You Might Like

Post a Comment

0 Comments