Recent Posts

 ಉದರ ವೈರಾಗ್ಯ - ೧೦ ನೇ ತರಗತಿ ನುಡಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 ಉದರ ವೈರಾಗ್ಯ.

* ಕವಿ ಪರಿಚಯ *  

ಪರಂದರದಾಸರು.                                                                                                     
ಕಾಲ: 16 ನೇ ಶತಮಾನ                                                                                                                             
ಜನ್ಮಸ್ಥಳ: ಪರಂದರಗಡ                       
ಕೃತಿಗಳು: 1) ಕೀರ್ತನೆಗಳು, 2) ಸುಳಾದಿ, 3) ಉಗಾಬೊಗಗಳು.                                                    
ಅಂಕಿತನಾಮ: ಪುರಂದರವಿಠಲ.   

ಅ) ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದ ಉತ್ತರಗಳನ್ನು ಬರೆಯಿರಿ.    

1) ಉದರ ವೈರಾಗ್ಯ ಎಂದರೇನು?
- ಹೊಟ್ಟೆಪಾಡಿಗಾಗಿ ವೈರಾಗ್ಯದ ಸೋಗು ಹಾಕುವುದನ್ನೇ ಉದರ ವೈರಾಗ್ಯ ಎನ್ನುವರು.

2) ಪುರಂದರದಾಸರು ಯಾವುದನ್ನು ಉದರ ವೈರಾಗ್ಯ ಎಂದಿದ್ದಾರೆ? (2018)

- ಪದ್ಮನಾಭನಲ್ಲಿ ಸ್ವಲ್ಪವೂ ಭಯ, ಭಕ್ತಿಯಿಲ್ಲದೆ ಮಹಾಬಕ್ತನಂತೆ ನಟಿಸುವ ಡಾಂಭಿಕ ಭಕ್ತಿಯನ್ನು ಪುರಂದರದಾಸರು ಉದರ ವೈರಾಗ್ಯ ಎಂದು ಕರೆದಿದ್ದಾರೆ.

3) ಡಾಂಭಿಕ ಭಕ್ತನ ಮನಸ್ಸು ಯಾವ ಗುಣಗಳಿಂದ ತುಂಬಿದೆ ಎಂದು ಪುರಂದರದಾಸರು ಹೇಳಿದ್ದಾರೆ?
- ಡಾಂಭಿಕ ಭಕ್ತನ ಮನಸ್ಸು ಮದ, ಮತ್ಸರ, ಕ್ರೋಧ ಮುಂತಾದ ಕೆಟ್ಟಗುಣಗಳಿಂದ ತುಂಬಿದೆ ಎಂದು ಪುರಂದರದಾಸರು ಹೇಳಿದ್ದಾರೆ.  

4) ಪುರಂದರದಾಸರು ಡಾಂಭಿಕ ಭಕ್ತನ ದೇವರ ಕೋಣೆಯನ್ನು ಯಾವುದಕ್ಕೆ ಹೋಲಿಸಿದ್ದಾರೆ?
- ಪುರಂದರದಾಸರು ಡಾಂಭಿಕ ಭಕ್ತನ ದೇವರ ಕೋಣೆಯನ್ನು ಕಂಚುಗಾರನ ಬಿಡಾರಕ್ಕೆ ಹೋಲಿಸಿದ್ದಾರೆ.

5) ಪುರಂದರದಾಸರ ಪದಗಳ ಅಂಕಿತಯಾವುದು?                                                                   
- ಪುರಂದರದಾಸರ ಪದಗಳ ಅಂಕಿತನಾಮ ಪುರಂದರವಿಠಲ.
           
ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿ.                                                

1) ಡಾಂಭಿಕನ ಭಕ್ತಿ ಬದಿಯಲ್ಲಿದ್ದವರಿಗೆ ಆಶ್ಚರ್ಯವಾಗುವುದು ಯಾವುದು?
- ಡಾಂಭಿಕ ಭಕ್ತನು ಉದಯ ಕಾಲದಲ್ಲಿ ಎದ್ದು ನದಿಯಲ್ಲಿ ಮಿಂದು ಗಡಗಡ ನಡುಗುತ್ತ ಹಿಗ್ಗುತ್ತ ಮಹಾಭಕ್ತನಂತೆ ನಟಿಸುತ್ತಾನೆ. ಆದರೆ ಅವನ ಮನದಲ್ಲಿ ಮದ, ಮತ್ಸರ, ಕ್ರೋಧ ಮುಂತಾದ ಕೆಟ್ಟಗುಣಗಳೇ ತುಂಬಿಕೊಂಡಿರುತ್ತವೆ. ಅವನ ಈ ರೀತಿಯ ಭಕ್ತಿ ಬದಿಯಲ್ಲಿದ್ದವರಿಗೆ ಆಶ್ಚರ್ಯವನ್ನುಂಟು ಮಾಡುತ್ತದೆ.

2) ಪುರಂದರದಾಸರು ಡಾಂಭಿಕ ಭಕ್ತನ ವೈರಾಗ್ಯಶಾಲಿ ಎಂದೆನಿಸುವ ಪೂಜೆಯನ್ನು ಹೇಗೆ ವರ್ಣಿಸಿದ್ದಾರೆ?
    
- ಡಾಂಭಿಕ ಭಕ್ತನು ತನ್ನ ಮನೆಯ ದೇವರ ಜಗುಲಿಯ ಮೇಲೆ ಕಂಚು, ಹಿತ್ತಾಳೆ, ತಾಮ್ರಗಳಿಂದ ತಯಾರಿಸಲ್ಪಟ್ಟ ದೇವರ ಪ್ರತಿಮೆಗಳನ್ನು ಜೋಡಿಸಿಟ್ಟಿರುತ್ತಾನೆ. ಆ ಪ್ರತಿಮೆಗಳೆಲ್ಲಾ ಮಿಂಚಬೇಕೆಂದು ಹೆಚ್ಚಿನ ಸಂಖ್ಯೆಯಲ್ಲಿ ದೀಪಗಳನ್ನು ಹಚ್ಚಿರುತ್ತಾನೆ. ಆದರೆ ಆ ದೇವರ ಮೂರ್ತಿಗಳ ಬಗೆಗೆ ಡಾಂಭಿಕ ಭಕ್ತನ ಮನದಲ್ಲಿ ಸ್ವಲ್ಪವೂ ಭಯ, ಭಕ್ತಿಗಳಿರುವುದಿಲ್ಲ. ಹೀಗೆ ಪುರಂದರದಾಸರು ಡಾಂಭಿಕ ಭಕ್ತನ ವೈರಾಗ್ಯಶಾಲಿ ಎಂದೆನಿಸುವ ಪೂಜೆಯನ್ನು ವರ್ಣಿಸಿದ್ದಾರೆ.

3) ಪುರಂದರದಾಸರು ಡಾಂಭಿಕನ ಭಕ್ತಿಯನ್ನು ನಾಟಕ ಸ್ತ್ರೀಗೆ ಏಕೆ ಹೋಲಿಸಿದ್ದಾರೆ?
- ಡಾಂಭಿಕ ಭಕ್ತ ತಾನೇ ಪರಮ ವೈರಾಗ್ಯಶಾಲಿ ಭಕ್ತನಂತೆ ನಟಿಸುತ್ತಾನೆ. ಆತನ ಭಕ್ತಿ ಕೇವಲ ನಟನೆಯ ಭಕ್ತಿಯಾಗಿರುತ್ತದೆ. ಆದರೆ ಅವನ ತೋರಿಕೆಯ ಭಕ್ತಿಯನ್ನು ಕಂಡವರು ಈತನೇ ನಿಜವಾದ ಬಕ್ತ. ಈತನ ಸರಿಸಮಾನ ಬಕ್ತ ಮತ್ತೊಬ್ಬನಾರಿಲ್ಲ ಅಂದುಕೊಳ್ಳುತ್ತಾರೆ. ಇದು ಕೇವಲ ನಾಟಕ ಸ್ತ್ರೀಯ ಅಭಿನಯದಂತೆ ಬಯಲು ಡಂಬವಾಗಿರುತ್ತದೆ. ಕೇವಲ ಊಟದ ಮಾರ್ಗದ ಜ್ಞಾನವಾಗಿರುತ್ತದೆ. ಡಾಂಭಿಕನ ಭಕ್ತಿ ಕೇವಲ ಉದರ ವೈರಾಗ್ಯವಾಗಿರುವುದರಿಂದ ಪುರಂದರದಾಸರು ಡಾಂಭಿಕನ ಭಕ್ತಿಯನ್ನು ನಾಟಕ ಸ್ತ್ರೀಗೆ ಹೋಲಿಸಿದ್ದಾರೆ.

4) ನಿಜವಾಗಿ ಪುರಂದರ ವಿಠಲನನ್ನು ಯಾವಾಗ ಕಾಣಬಹುದು ಎಂದು ಪುರಂದರದಾಸರು ಹೇಳುತ್ತಾರೆ?
- ನಾನು ಎಂಬುವುದನ್ನು ಬಿಟ್ಟು ಜ್ಞಾನಿಗಳ ಜೊತೆಗೂಡಿ ನಾವು ಬಾಳಬೇಕು. ಜೀವನದಲ್ಲಿ ಯಾವ ತೊಂದರೆಗಳು ಬಂದರೂ ಎಲ್ಲವೂ ಹರಿ ಪ್ರೇರಣೆ ಎಂದು ಭಾವಿಸಬೇಕು. ಸದಾಕಾಲ ಪುರಂದರವಿಠಲನನ್ನು ಮೌನವಾಗಿ ಧ್ಯಾನಿಸಿ ಕಾರ್ಯಪ್ರವೃತ್ತರಾದವರು, ತಮ್ಮ ಕಾರ್ಯದಲ್ಲಿ ನಿಜವಾದ ಪುರಂದರವಿಠಲನನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಪುರಂದರದಾಸರು ಹೇಳಿದ್ದಾರೆ.

ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಗಳನ್ನು ಬರೆಯಿರಿ.

1) ಪುರಂದರದಾಸರ ಕೀರ್ತನೆಯಲ್ಲಿ ಡಂಭಾಚಾರದ ಭಕ್ತಿಯ ಸ್ಪಷ್ಟ ಚಿತ್ರಣವು ಹೇಗೆ ಚಿತ್ರಿತವಾಗಿದೆ?
- ಡಾಂಭಿಕ ಭಕ್ತನು ಕೇವಲ ತನ್ನ ಹೊಟ್ಟೆಪಾಡಿಗಾಗಿ ನಟನೆಯ ಬಕ್ತಿಯನ್ನು ಪ್ರದರ್ಶಿಸುತ್ತಾನೆ. ಆತ ಉದಯ ಕಾಲದಲ್ಲಿ ಎದ್ದು ನದಿಯಲಿ ಮಿಂದೆನೆಂದು ಹಿಗ್ಗುತ್ತಾನೆ. ಆತನ ಮನೆಯ ದೇವರ ಕೋಣೆ ಕಂಚುಗಾರನ ಬಿಡಾರಕ್ಕೆ ಸಮಾನವಾಗಿರುತ್ತದೆ. ದೇವರ ಮೂರ್ತಿಗಳನ್ನು ಆತ ಸರಿಯಾಗಿ ಜೋಡಿಸಿಟ್ಟು ಅವೆಲ್ಲ ಹೊಳೆಯಬೇಕೆಂದು ಹೆಚ್ಚಿನ ಸಂಖ್ಯೆಯಲ್ಲಿ ದೀಪಗಳನ್ನು ಹಚ್ಚಿರುತ್ತಾನೆ. ಆತ ಕೇವಲ ವಂಚನೆಯಿಂದಲೇ ದೇವರನ್ನು ಪೂಜಿಸುತ್ತಾನೆ. ಆತನ ಕೈಯಲ್ಲಿ ಜಪಮಣಿ ಇರುತ್ತದೆ. ಬಾಯಲ್ಲಿ ಮಂತ್ರಪಠಣವಿರುತ್ತದೆ. ಮುಖದ ಮೇಲೆ ಅರಿವೆಯ ಮುಸುಕು ಹಾಕಿಕೊಂಡು ಮನದಲ್ಲಿ ಪರಸತಿಯರ ಗುಣಗಾನವಿರುತ್ತದೆ. ಹೀಗೆ ಪುರಂದರದಾಸರು ಡಂಭಾಚಾರದ ಭಕ್ತಿಯ ಸ್ಪಷ್ಟ ಚಿತ್ರಣವನ್ನು ಈ ಕೀರ್ತನೆಯಲ್ಲಿ ಚಿತ್ರಿಸಿದ್ದಾರೆ.

2) ಪುರಂದರದಾಸರು ಕಪಟ ಭಕ್ತಿಯ ಆರಾಧಕರನ್ನು ಹೇಗೆ ಅಣಕಿಸಿ ಅವಹೇಳನ ಮಾಡಿದ್ದಾರೆ?
- ಡಾಂಭಿಕ ಭಕ್ತರ ತೋರಿಕೆಯ ಭಕ್ತಿ ಪ್ರದರ್ಶನವನ್ನು ಪುರಂದರದಾಸರು ಉದರ ವೈರಾಗ್ಯ ಹೊಟ್ಟೆಪಾಡಿಗಾಗಿ ಮಾಡುವ ಸೋಗಿನ ನಾಟಕ ಎಂದು ಕರೆದಿದ್ದಾರೆ. ದಾಸರು ಈ ಡಾಂಭಿಕ ಭಕ್ತನ ಮನೆಯ ದೇವರಕೋಣೆಯನ್ನು ಕಂಚುಗಾರನ ಬಿಡಾರಕ್ಕೆ ಹೋಲಿಸಿದ್ದಾರೆ. ಕಂಚುಗಾರನಿಗೆ ಆ ಮೂರ್ತಿಗಳ ಮೇಲೆ ಯಾವುದೇ ರೀತಿಯ ಭಯ, ಭಕ್ತಿ ಇರುವುದಿಲ್ಲ. ಅವು ಕೇವಲ ಆತನಿಗೆ ಮಾರಾಟದ ವಸ್ತುಗಳಾಗಿರುತ್ತವೆ. ಅದೇ ರೀತಿ ಡಾಂಭಿಕ ಬಕ್ತ ತನ್ನ ಮನೆಯ ಕೋಣೆಯಲ್ಲಿ ದೇವರ ಮೂರ್ತಿಗಳನ್ನು ವ್ಯವಸ್ಥಿತವಾಗಿ ಜೋಡಿಸಿಟ್ಟು ಅವೆಲ್ಲ ಮಿಂಚಬೇಕೆಂದು ಬಲು ದೀಪಗಳನ್ನು ಹಚ್ಚಿರುತ್ತಾನೆ. ಮೋಸದಿಂದಲೇ ಪೂಜೆ ಮಾಡಿ ಪರಮ ವೈರಾಗ್ಯಶಾಲಿ ಭಕ್ತನೆನಿಸಿಕೊಳ್ಳುತ್ತಾನೆ. ಹೀಗೆ ಪುರಂದರದಾಸರು ಕಪಟ ಬಕ್ತಿಯ ಆರಾಧಕರನ್ನು ಅಣಕಿಸಿ ಅವಹೇಳನ ಮಾಡಿದ್ದಾರೆ.

ಈ) ಕೆಳಗಿನ ಸಾಲುಗಳ ಸ್ವಾರಸ್ಯವನ್ನು ವಿವರಸಿ.                                                                             

1)  ಕರದೊಳು ಜಪಮಣಿ ಬಾಯೊಳು ಮಂತ್ರವು
                                                                           
- ಪದ್ಯದ ಹೆಸರು: ಉದರ ವೈರಾಗ್ಯ.                                                                           
ಕವಿಗಳ ಹೆಸರು: ಪುರಂದರದಾಸರು.
ಸಂದರ್ಭ: ಡಾಂಭಿಕ ಭಕ್ತನ ಸೋಗಿನ ಭಕ್ತಿಯ ಬಗೆಗೆ ಹೇಳುವಾಗು ದಾಸರು ಈ ಮಾತನ್ನು ನುಡಿದಿದ್ದಾರೆ.     
ವಿವರಣೆ: ಡಾಂಭಿಕ ಭಕ್ತರು ತಮ್ಮ ಹೊಟ್ಟೆಪಾಡಿಗಾಗಿ ಸೋಗಿನ ಬಕ್ತಿ ಪ್ರದರ್ಶನ ಮಾಡುತ್ತಾರೆ. ಅವರು   ಕೈಯಲ್ಲಿ ಜಪಮಣಿ ಹಿಡಿದಿರುತ್ತಾರೆ. ಬಾಯಿಂದ ಮಂತ್ರವನ್ನು ಪಠಿಸುತ್ತಾರೆ. ಇದು ಕೇವಲ ಡಂಭಾಚಾರದ ಭಕ್ತಿಯಾಗಿರುತ್ತದೆ ಎಂದು ದಾಸರು ಹೇಳಿದ್ದಾರೆ.

2) ಪರಸತಿ ಪರಧನಕಾಗಿ ಚಿಂತಿಸುತ                                                                                        
- ಪದ್ಯದ ಹೆಸರು: ಉದರ ವೈರಾಗ್ಯ.                                                                                 
ಕವಿಗಳ ಹೆಸರು: ಪುರಂದರದಾಸರು.                                                                          
ಸಂದರ್ಭ: ಡಾಂಭಿಕ ಭಕ್ತನ ಸೋಗಿನ ಭಕ್ತಿಯ ಬಗೆಗೆ ಹೇಳುವಾಗು ದಾಸರು ಈ ಮಾತನ್ನು ನುಡಿದಿದ್ದಾರೆ.     
ವಿವರಣೆ: ಡಾಂಭಿಕ ಭಕ್ತರು ಸೋಗಿನ ಭಕ್ತಿ ಪ್ರದರ್ಶಿಸುತ್ತಾರೆ. ಅವರು ಕೈಯಲ್ಲಿ ಜಪಮಣಿ ಹಿಡಿದು ಬಾಯಿಂದ ಮಂತ್ರ ಪಠಿಸುತ್ತಾರೆ. ಮುಖದ ಮೇಲೆ ಅರಿವೆಯ ಮುಸುಕು ಹಾಕಿರುತ್ತಾರೆ. ಮನದಲಿ ಮಾತ್ರ ಪರಸತಿ, ಪರಧನಕ್ಕಾಗಿ ಚಿಂತಿಸುತ್ತ ಮೋಸದ ಭಕ್ತಿ ಪ್ರದರ್ಶನ ಮಾಡುತ್ತರೆಂದು ದಾಸರು ಹೇಳಿದ್ದಾರೆ.

3) ನಾನು ಎಂಬುದು ಬಿಡದೆ, ಅಜ್ಞಾನಿಗಳೊಡಗೂಡಿ                                                                           
- ಪದ್ಯದ ಹೆಸರು: ಉದರ ವೈರಾಗ್ಯ.                                                                              
ಕವಿಗಳ ಹೆಸರು: ಪುರಂದರದಾಸರು.                                                                          
ಸಂದರ್ಭ: ಪುರಂದರದಾಸರು ನಮ್ಮನ್ನು ಉದ್ದೇಶಿಸಿ ಈ ಮಾತನ್ನು ನುಡಿದಿದ್ದಾರೆ.                                        
ವಿವರಣೆ: ನಾನು, ನಾನು ಎಂಬ ಅಹಂಕಾರವನ್ನು ಬಿಟ್ಟು, ನಾವು ಜ್ಞಾನಿಗಳ ಜೊತೆಗೂಡಬೇಕು. ನಮ್ಮ ಜೀವನವೇ ಹರಿ ಪ್ರೇರಣೆಯ ಒಂದು ಅಂಗವೆಂದು ಭಾವಿಸಬೇಕೆಂದು ದಾಸರು ಹೇಳಿದ್ದಾರೆ.

4) ನಾಟಕ ಸ್ತ್ರೀಯಂತೆ ಬಯಲಡಂಭವತೋರಿ                                                                                  
_ ಪದ್ಯದ ಹೆಸರು: ಉದರ ವೈರಾಗ್ಯ.                                                                          
ಕವಿಗಳ ಹೆಸರು: ಪುರಂದರದಾಸರು.                                                                              
ಸಂದರ್ಭ: ಡಾಂಭಿಕ ಭಕ್ತನ ಭಕ್ತಿ ಪ್ರದರ್ಶನವನ್ನು ವಿಡಂಭಿಸುತ್ತ ದಾಸರು ಈ ಮಾತನ್ನು ನುಡಿದಿದ್ದಾರೆ.     
ವಿವರಣೆ: ಡಾಂಭಿಕ ಭಕ್ತರು ಮಹಾಭಕ್ತರಂತೆ ನಟಿಸುತ್ತಾರೆ. ಅವರ ಭಕ್ತಿ ಕೇವಲ ತೋರಿಕೆಯ ಭಕ್ತಿಯಾಗಿರುತ್ತದೆ. ಇಂತಹವರನ್ನು ಜನರು ಈತನೇ ನಿಜವಾದ ಭಕ್ತ ಎನ್ನುತ್ತಾರೆ. ಆದರೆ ಈತನ ಭಕ್ತಿ ನಾಟಕ ಸ್ತ್ರೀಯಂತೆ ಮೋಸದ ಭಕ್ತಿಯಾಗಿರುತ್ತದೆ ಎಂದು ದಾಸರು ಹೇಳಿದ್ದಾರೆ.

5) ವಂಚನೆಯಿಂದಲಿ ಪೂಜೆ ಮಾಡುವುದು.                                                                                   
- ಪದ್ಯದ ಹೆಸರು: ಉದರ ವೈರಾಗ್ಯ.                                                                     
ಕವಿಗಳ ಹೆಸರು: ಪುರಂದರದಾಸರು.                                                                          
ಸಂದರ್ಭ: ಡಾಂಭಿಕ ಭಕ್ತನ ಭಕ್ತಿಯನ್ನು ವಿಡಂಭಿಸುತ್ತ ದಾಸರು ಈ ಮಾತನ್ನು ನುಡಿದಿದ್ದಾರೆ.
ವಿವರಣೆ: ಪುರಂದರದಾಸರು ಡಾಂಭಿಕ ಭಕ್ತನ ಮನೆಯನ್ನು ಕಂಚುಗಾರನ ಬಿಡಾರಕ್ಕೆ ಹೋಲಿಸಿದ್ದಾರೆ. ಕಂಚುಗಾರ ತನ್ನ ಬಿಡಾರದಲ್ಲಿ ಕಂಚು, ತಾಮ್ರ, ಹಿತ್ತಾಳೆಗಳ ವಿಗ್ರಹಗಳನ್ನು ಜೋಡಿಸಿರುವಂತೆ ಡಾಂಭಿಕ ಭಕ್ತರು ತಮ್ಮ ಮನೆಯ ದೇವರ ಕೋಣೆಯಲ್ಲಿ ದೇವರ ಪ್ರತಿಮೆಗಳನ್ನು ಸಾಲಾಗಿ ಜೋಡಿಸಿ ಅವೆಲ್ಲ ಮಿಂಚಬೇಕೆಂದು ಹಲವಾರು ದೀಪಗಳನ್ನು ಹಚ್ಚಿರುತ್ತಾರೆ. ಹೀಗೆ ವಂಚನೆಯಿಂದಲೇ ಅವರು ಪೂಜೆ ಮಾಡುತ್ತಾರೆಂದು ದಾಸರು ಹೇಳಿದ್ದಾರೆ.

*ಭಾಷಾಭ್ಯಾಸ*

ಅ) ಕೆಳಗಿನ ಪದಗಳನ್ನು ಬಿಡಿಸಿ ಬರೆದು, ಸಂಧಿಯನ್ನು ಹೆಸರಿಸಿ.
* ವೈರಾಗ್ಯ + ಇದು = ವೈರಾಗ್ಯವಿದು (ವಕಾರಾಗಮ ಸಂಧಿ)   
* ನದಿ + ಒಳು = ನದಿಯೊಳು (ಯಕಾರಾಗಮ ಸಂಧಿ)     
* ಪ್ರೇರಣೆ + ಎಂದು = ಪ್ರೇರಣೆಯೆಂದು (ಯಕಾರಾಗಮ ಸಂಧಿ)
* ಏನು + ಎಲ್ಲಕೆ = ಏನೆಲ್ಲಕೆ (ಲೋಪ ಸಂಧಿ)                            
* ಅಂಗಡಿ + ಅಂದದಿ = ಅಂಗಡಿಯಂದದಿ (ಯಕಾರಾಗಮ ಸಂಧಿ)

ಆ) ಕೆಳಗಿನ ತದ್ಭವಗಳಿಗೆ ತತ್ಸಮಗಳನ್ನು ಬರೆಯಿರಿ. 
ಪದುಮ - ಪದ್ಮ   
ಬಕುತಿ - ಭಕ್ತಿ    
ಅಚ್ಚರಿ - ಆಶ್ಚರ್ಯ   
ಮೂರುತಿ - ಮೂರ್ತಿ  
ಕಜ್ಜ - ಕಾರ್ಯ

ಇ) ಈ ಕೆಳಗಿನ ಪದ್ಯ ಭಾಗಗಳನ್ನು ಕಂಠಪಾಠ ಮಾಡಿರಿ.  

ಕಂಚುಗಾರನ ಬಿಡಾರದಂದದಿ                          
ಕಂಚು ಹಿತ್ತಾಳೆಯ ಪ್ರತಿಮೆಗಳ ನೆರಹಿ                     
ಮಿಂಚಬೇಕೆಂದು ಬಲು ಜ್ಯೋತಿಗಳನು ಹಚ್ಚಿ                  
ವಂಚನೆಯಿಂದಲಿ ಪೂಜೆ ಮಾಡುವುದು.                             

ನಾನು ಎಂಬುದ ಬಿಟ್ಟು ಜ್ಞಾನಿಗಳೊಡನಾಡಿ                          
ಏನಾದರು ಹರಿ ಪ್ರೇರಣೆಯೆಂದು                             
ಧ್ಯಾನಿಸಿ ಮೌನದಿ ಪುರಂದರವಿಠಲನ                           
ಕಾಣದೆ ಮಾಡಿದ ಕಾರ್ಯಗಳೆಲ್ಲವು.






















                                                                                                       
You Might Like

Post a Comment

0 Comments