Recent Posts

ಜನಪದ ಗೀತೆ - ೧೦ ನೇ ತರಗತಿ ನುಡಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

ಜನಪದ ಗೀತೆ.

* ಜನಪದ ಸಾಹಿತ್ಯ *
ಕನ್ನಡ ನಾಡಿನ ಅಜ್ಞಾತ ಕವಿಗಳಿಂದ ರಚಿತವಾದ ಸಾಹಿತ್ಯವೇ ಜನಪದ ಸಾಹಿತ್ಯ. 
ಈ ಸಾಹಿತ್ಯವು ಜನರ ಬಾಯಿಂದ ಬಾಯಿಗೆ ಹರಿದು ಬಂದಿದೆ. ಹಳ್ಳಿಗರು ತಮ್ಮ ದಿನನಿತ್ಯದ ಬದುಕಿನಲ್ಲಿ ತಮ್ಮ ದುಃಖ ದುಮ್ಮಾನಗಳನ್ನು, ಆಸೆ ಆಕಾಂಕ್ಷೆಗಳನ್ನು ದೈನಂದಿನ ಬದುಕಿನ ಅನುಭವಗಳನ್ನು ಈ ಹಾಡಿನ ಮೂಲಕ ಅಭಿವ್ಯಕ್ತಿಗೊಳಿಸಿದ್ದಾರೆ. ಜನಪದ ಗೀತೆಗಳು ಇಡೀ ಜನಾಂಗದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ.

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

1) ರೈತನು ಮಳೆಯನ್ನು ಏನೆಂದು ಕರೆದಿದ್ದಾನೆ?
- ರೈತನು ಮಳೆಯನ್ನು ಅಪ್ಪ, ರಕ್ಷಕನೆಂದು ಕರೆದಿದ್ದಾನೆ.

2) ರೈತನಿಗೆ ಮೋಡಗಳು ಹೇಗೆ ಕಾಣುತ್ತಿದ್ದವು?
- ರೈತನಿಗೆ ಮೋಡಗಳು ಗೋಡೆಗೆ ಕಪ್ಪು ಬಣ್ಣ ಬಳಿದಂತೆ ಕಾಣುತ್ತಿದ್ದವು.

3) ಎಲ್ಲಿ ಹೆಚ್ಚು ಮಳೆ ಸುರಿಯಬೇಕೆಂದು ರೈತನು ಕೇಳುತ್ತಾನೆ?
- ಬೆಟ್ಟದ ಮೇಲೆ ಮಳೆ ಜಾಸ್ತಿ ಸುರಿಯಬೇಕೆಂದು ರೈತನು ಮಳೆರಾಯನಲ್ಲಿ ಕೇಳುತ್ತಾನೆ.

ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳ ಉತ್ತರ ಬರೆಯಿರಿ.
 
1) ರೈತನು ದನಕರಗಳು ಹೇಗಾಗಿವೆ ಎಂದು ಮಳೆರಾಯನಲ್ಲಿ ನಿವೇದಿಸುತ್ತಾನೆ?
- ಮಳೆಯಿಲ್ಲದ ಕಾರಣ ಭೂಮಿ ಒಣಗಿ ಬರಡಾಗಿದೆ. ದನಕರುಗಳಿಗೆ ತಿನ್ನಲು ಮೇವಿಲ್ಲ, ಕುಡಿಯಲು ನೀರಿಲ್ಲದ ಕಾರಣ ಅವೆಲ್ಲ ಸೊರಗಿ ದಂಟಿನಂತಾಗಿವೆ ಎಂದು ರೈತ ದನಕರುಗಳ ಬಗೆಗೆ ಮಳೆರಾಯನಲ್ಲಿ ನವೇದಿಸುತ್ತಾನೆ.

2) ಮೋಡಗಳು ಕಾಣಿಸಿಕೊಂಡಾಗ ರೈತನಿಗಾದ ಸಂತೋಷವೇನು?
- ಮೂಡಣ ದಿಕ್ಕಿನಲ್ಲಿ ಮೋಡಗಳು ಕಾಣಿಸಿಕೊಂಡಾಗ ರೈತ ಸಂತಸಪಡುತ್ತ, ತನ್ನ ರೈತ ಬಾಂಧವರನ್ನೆಲ್ಲಾ ಕರೆದು, ಅಲ್ಲಿ ನೋಡಿ ಆಕಾಶದಲ್ಲಿ ಮೋಡಗಳ ಚೆಂದವ, ಗೋಡೆಗೆ ಕಪ್ಪ ಬಣ್ಣ ಬಳಿದಂತೆ ಕಾಣುತ್ತವೆ. ಎಂದು ಹೇಳುತ್ತ ರೈತ ಸಂತಸಪಡುತ್ತಾನೆ.

3) ಸ್ವಾತಿ ಮಳೆ ಸುರಿದಾಗ ರೈತನಿಗಾಗುವ ಲಾಭಗಳೇನು?
- ಸ್ವಾತಿ ಮಳೆ ಸುರಿದರೆ ಸಾವಿರಾರು ಕೆರೆಗಳು ತುಂಬುತ್ತವೆ. ಇದರಿಂದ ರೈತನ ಹೊಲಗದ್ದೆಗಳಿಗೆ ಕೃಷಿ ಕೆಲಸಕ್ಕೆ ಬೇಕಾದಷ್ಟು ನೀರು ಸಿಗುತ್ತದೆ. ಕುಣಿಗಲು ಕೆರೆಯಲ್ಲಿ ಕುಚ್ಚಲ ಮೀನುಗಳ ಸಂತತಿ ವೃದ್ಧಿಯಾಗುತ್ತದೆ. ಆ ಮೀನುಗಳ ಪಸಲವು ರೈತನಿಗೆ ತುಂಬಾ ಲಾಭ ನೀಡುತ್ತದೆ. ಹೀಗೆ ಸ್ವಾತಿ ಮಳೆ ಸುರಿದಾಗ ರೈತನಿಗೆ ಅನೇಕ ಬಗೆಯ ಲಾಭಗಳಾಗುತ್ತವೆ.

ಇ) ಕೊಟ್ಟಿರುವ ಪ್ರಶ್ನೆಗಳಿಗೆ ಆರು-ಏಳು ವಾಕ್ಯಗಳ ಉತ್ತರಗಳನ್ನು ಬರೆಯಿರಿ.

1) ಮಳೆದೇವರಲ್ಲಿ ರೈತನ ಪ್ರಾರ್ಥನೆಯೇನು?
- ಮಳೆಯಿಲ್ಲದ ಭೂಮಿ ಬಾಡಿ ಬರಡಾಗಿದೆ. ದನಕರಗಳಿಗೆ ಮೇವು, ನೀರು ಸಿಗದಂತಾಗಿದೆ. ಅವೆಲ್ಲ ಸೊರಗಿ ದಂಟಿನಂತಾಗಿವೆ. ಆದ್ದರಿಂದ ಮಳೆರಾಯ ನೀ ಬಂದು ಕರುಣಿಸೋ ಎಂದು ರೈತ ಮಳೆರಾಯನಲ್ಲಿ ವಿನಂತಿಸಿಕೊಳ್ಳುತ್ತಾನೆ. ಪೂರ್ವ ದಿಕ್ಕಿನಲ್ಲಿ ಸೋನೆ ಮಳೆ ಸುರಿಯಲಿ, ಬೆಟ್ಟದ ಮೇಲೆ ಮಳೆ ಜಾಸ್ತಿ ಸುರಿಯಲಿ, ಕೆರೆ ನದಿ ಹಳ್ಳ ಕೊಳ್ಳಗಳೆಲ್ಲಾ ತುಂಬಿ ಕಲಕಲಗೊಳ್ಳಲಿ. ಇದರಿಂದಾಗಿ ದನಕರಗಳಿಗೆ ಹೊಲದಲ್ಲಿರುವ ಬೆಳೆಗೆ ಹೆಚ್ಚು ಅನುಕೂಲವಾಗುವಂತಾಗಲಿ ಎಂದು ರೈತ ಮಳೆದೇವರಲ್ಲಿ ಪ್ರಾರ್ಥಿಸುತ್ತಾನೆ.

2) ಜನಪದ ಗೀತೆ ಪದ್ಯದ ಸಾರಾಂಶವನ್ನು ನಿಮ್ಮ ಮಾತಿನಲ್ಲಿ ಬರೆಯಿರಿ.
- ಮಳೆಯಿಲ್ಲದೆ ಭೂಮಿ ಬಾಡಿ ಬರಡಾಗಿದೆ. ದನಕರಗಳಿಗೆ ಮೇವು, ನೀರಿಲ್ಲದೆ ಅವು ಸೊರಗಿ ದಂಟಿನಂತಾಗಿವೆ. ಅಪ್ಪಾ ಮಳೆರಾಯ ನೀ ಬಂದು ನಮ್ಮೆಲ್ಲರನ್ನು ರಕ್ಷಿಸೋ ಎಂದು ರೈತ ಮಳೆರಾಯನಲ್ಲಿ ವಿನಂತಿಸುತ್ತಾನೆ. ಆಕಾಶದಲ್ಲಿ ಮೋಡಗಳು ಕಾಣಿಸಿಕೊಂಡಾಗ ರೈತ ತುಂಬಾ ಸಂತಸಪಡುತ್ತಾನೆ. ತನ್ನ ರೈತ ಬಾಂದವರನ್ನು ಕರೆದು ಬನ್ನಿ! ನೋಡಿ ಪೂರ್ವದಲ್ಲಿ ಕಾಣುವ ಮೋಡದ ಚೆಂದವನ್ನು ಗೋಡೆಗೆ ಕಪ್ಪು ಬಣ್ಣ ಬಳಿದಂತೆ ಕಾಣುತ್ತವೆ ಎಂದು ಹೇಳಿ ಹರ್ಷ ಪಡುತ್ತಾನೆ. ಪೂರ್ವ ದಿಕ್ಕಿನಲ್ಲಿ ಸೋನೆ ಮಳೆ ಸುರಿಯಬೇಕು. ಬೆಟ್ಟದ ಮೇಲೆ ಜಾಸ್ತಿ ಮಳೆಯಾಗಬೇಕು. ಸಾತೆಯ ಮಳೆ ಸುರಿದು ಸಾವಿರಾರು ಕೆರೆ ನದಿಗಳು ತುಂಬಿ ಕುಣಿಗಲು ಕೆರೆಯಲ್ಲಿ ಮೀನುಗಳ ಸಂತತಿ ವೃದ್ಧಿಯಾಗಿ ಅವು ರೈತನಿಗೆ ಲಾಬ ನೀಡುವಂತಾಗಬೇಕು. ಎಂದು ರೈತ ಪರಿಪರಿಯಾಗಿ ಈ ಜನಪದ ಗೀತೆಯಲ್ಲಿ ಮಳೆರಾಯನನ್ನು ಕೇಳಿಕೊಳ್ಳುತ್ತಾನೆ.

ಈ) ಕೆಳಗಿನ ಸಾಲುಗಳನ್ನು ಸ್ವಾರಸ್ಯ ಸಹಿತ ವಿವರಿಸಿರಿ.
 
1) ಗೋಡೆಗೆ ಕಪ್ಪ ಬಳಿದ್ಹಂಗೆ
- ಪದ್ಯದ ಹೆಸರು: ಜನಪದ ಗೀತೆ.
ಜನಪದ ಗೀತೆಯಾಗಿರುವುದರಿಂದ ಕವಿಗಳ ಹೆಸರು ಇರುವುದಿಲ್ಲ.                                                       
ಸಂದರ್ಭ: ಒಬ್ಬ ರೈತ ಈ ಮಾತನ್ನು ತನ್ನ ರೈತ ಬಾಂದವರಿಗೆ ನುಡಿದಿದ್ದಾನೆ.                                                
ವಿವರಣೆ: ರೈತನ ಪ್ರಾರ್ಥನೆ ಕೇಳಿ ಆಕಾಶದಲ್ಲಿ ಕರಿ ಮೋಡಗಳು ಆವರಿಸುತ್ತವೆ. ಮಳೆರಾಯನ ಆಗಮನ ಕೆಲವು ಕ್ಷಣಗಳಲ್ಲಿ ಆಗುವುದೆಂದು ತಿಳಿದು ರೈತ ಹರ್ಷಗೊಂಡು ಈ ಮೇಲಿನ ಮಾತನ್ನು ತನ್ನ ರೈತ ಬಾಂಧವರಿಗೆ ನುಡಿಯುತ್ತಾನೆ.

2) ಜಗ್ಗಿಸಿ ಹುಯ್ಯೋ ಮಳೆರಾಯ
- ಪದ್ಯದ ಹೆಸರು: ಜನಪದ ಗೀತೆ.                                                                                                                 ಜನಪದ ಗೀತೆಯಾಗಿರುವುದರಿಂದ ಕವಿಗಳ ಹೆಸರು ಇರುವುದಿಲ್ಲ.                                                               ಸಂದರ್ಭ: ರೈತ ಈ ಮಾತನ್ನು ಮಳೆರಾಯನಲ್ಲಿ ಪ್ರಾರ್ಥಿಸುವಾಗ ನುಡಿದಿದ್ದಾನೆ.                                             
ವಿವರಣೆ: ರೈತ ಮಳೆರಾಯನಲ್ಲಿ ನೀ ಬಂದು ಬೇಗ ಕರುಣಿಸೋ ಎಂದು ಬೇಡಿಕೊಳ್ಳುತ್ತಾನೆ. ಪೂರ್ವ ದಿಕ್ಕಿನಲ್ಲಿ ಮುತ್ತಿನಂತಿರುವ ಸೋನೆ ಮಳೆಯಾಗಬೇಕು. ಬೆಟ್ಟದ ಮೇಲೆ ಜಾಸ್ತಿ ಮಳೆ ಸುರಿಯಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

3) ಸಾವಿರಾರು ಕೆರೆ  ತುಂಬಿ                                                                                            
- ಪದ್ಯದ ಹೆಸರು : ಜನಪದ ಗೀತೆ.                                                                                       
ಜನಪದ ಗೀತೆಯಾಗಿರುವುದರಿಂದ ಕವಿಗಳ ಹೆಸರು ಇರುವುದಿಲ್ಲ.                                                       
ಸಂದರ್ಭ: ರೈತ ಸ್ವಾತಿ ನಕ್ಷತ್ರದ ಮಳೆಯ ಕುರಿತು ಹೇಳುವಾಗ ಈ ಮಾತನ್ನು ಹೇಳಿದ್ದಾನೆ.
ವಿವರಣೆ : ಸ್ವಾತಿ ನಕ್ಷತ್ರದ ಮಳೆ ಸುರಿದರೆ ಸಾವಿರಾರು ಕೆರೆಗಳು ತುಂಬುತ್ತವೆ. ಕುಣಿಗಲು ಕೆರೆಯಲ್ಲಿ ಕುಚ್ಚಲ ಮೀನುಗಳ ಸಂತತಿ ವೃದ್ಧಿಯಾಗುತ್ತದೆ. ಆ ಮೀನುಗಳನ್ನು ರೈತ ಹಿಡಿದು ಮಾರಿ ಹಣ ಸಂಪಾದಿಸುತ್ತಾನೆ. ಇದಕ್ಕೆಲ್ಲಾ ಕಾರಣ ಸ್ವಾತಿ ನಕ್ಷತ್ರದ ಮಳೆ ಎಂದು ಹೇಳುತ್ತ ರೈತ ಈ ಮೇಲಿನ ಮಾತನ್ನು ಹೇಳಿದ್ದಾನೆ.

* ಭಾಷಾಭ್ಯಾಸ *

ಅ) ಕೆಳಗೆ ಕೊಟ್ಟಿರುವ ಪದಗಳನ್ನು ಬಿಡಿಸಿ, ಬರೆದು ಸಂಧಿಗಳನ್ನು ಹೆಸರಿಸಿರಿ.
ಮೂಡಲು + ಆಗಿ = ಮೂಡಲಾಗಿ (ಲೋಪಸಂಧಿ)           
ಜೋತು + ಆಡು = ಜೋತಾಡು ( ಲೋಪಸಂಧಿ)

ಆ) ಸಜಾತೀಯ, ವಿಜಾತೀಯ, ಸಂಯುಕ್ತಾಕ್ಷರಗಳನ್ನು ವಿಂಗಡಿಸಿ ಬರೆಯಿರಿ.
ಸಜಾತೀಯ ಸಂಯುಕ್ತಾಕ್ಷರ ಪದ            ವಿಜಾತೀಯ ಸಂಯುಕ್ತಾಕ್ಷರ ಪದ
ಅಪ್ಪನಿಲ್ಲದ                                                         ಹುಯ್ದು
ಕುಚ್ಚಲ                                                                ಜಾಸ್ತಿ  

ಈ) ಈ ಕೆಳಗಿನ ಪದ್ಯ ಭಾಗಗಳನ್ನು ಕಂಠಪಾಠ ಮಾಡಿರಿ. 
 
ಅಪ್ಪರಿಲ್ಲದೆ ಸೊಪ್ಪಾದೊ ಈ ಭೂಮಿ                                           
ಸಪ್ಪೆ ದಂಟಾದೊ ದನಕರ - ಮಳೆರಾಯ                                   
ಅಪ್ಪ ನೀ ಬಂದು ಕರುಣೀಸೊ||                                                        

ಮೂಡಮೋಡ ನೋಡೋ ಮೋಡದ ಚಂದನೋಡೋ               
ಗೋಡೆಗೆ ಕಪ್ಪ ಬಳಿದ್ಹಂಗೆ - ಮಳೆರಾಯ                  
ಬೋರಾಡು ತಾವೆ ಮುಗಿಲಲ್ಲಿ||










 
You Might Like

Post a Comment

0 Comments