Recent Posts

ನಮ್ಮ ಮಾತು ಕೇಳಿ - ೫ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


 ನಮ್ಮ ಮಾತು ಕೇಳಿ
 
ಪದಗಳ ಅರ್ಥ
ಅಂಚು – ಪಕ್ಕ , ಮೇಲೆ 
ಅಧಿಪತಿ = ಒಡೆಯ , ನಾಯಕ
ಅವಕಾಶ = ಸಂದರ್ಭ 
ಆಕ್ರೋಶ = ಗರ್ಜನೆ , ಕೋಪಿಸುವಿಕೆ
ಉಪೇಕ್ಷೆ = ಅಲಕ್ಷ ಕಡೆಗಣಿಸುವಿಕೆ
 ಕಾಡು = ಅರಣ್ಯ ಅಡವಿ
ಕೇಮಸಮಾಚಾರ = ಕುಶಲ , ಆರೋಗ್ಯ ವಿಪಯ 
ಖಾರ = ತೀಕ್ಷ್ಯ ,ಕಟು , 
ಗಳಿಸು = ಸಂಪಾದಿಸು , ಪಡೆ 
ಚರ್ಚೆ = ವಾಗ್ವಾದ , ತರ್ಕ
ತಾಣ = ಸ್ನಾನ , ಸ್ಥಳ 
ದೂರು = ನಿಂದಿಸು , ಆಪಾದನೆ ನಾಯಕತ್ವ 
ಗುಣ = ಆಲೋಚಿಸಿ ಜವಾಬ್ದಾರಿ ಯನ್ನು
ನಿರ್ವಹಿಸುವ ಮನೋಭಾವ 
ಪಟಾಕಿ = ಉತ್ಸವಾದಿಗಳಲ್ಲಿ
ಹಾರಿಸುವ ಸಣ್ಣ ಸಿಡಿಮದ್ದು 
ಪರಿಶೀಲಿಸಲು = ಸೂಕ್ಷ್ಮವಾಗಿ ವಿಚಾರಿಸಿ
ನೋಡುವುದು . 
ಪ್ರದರ್ಶಿಸು = ಕಾಣುವಂತೆ ಮಾಡು ,ಗಮನಿಸುವಂತೆ
ತೋರಿಸು . 
ಫಲಕ . = ವಿವರ ಬರೆದು ಹಾಕುವ ಹಲಗೆ .
ಫಲವತ್ತತೆ = ಫಲವುಳ್ಳ ಸಾರವತ್ತಾದ
ಮದ್ದು = ಬಂದೂಕು , ಕೋವಿಗಳಲ್ಲಿ ತುಂಬುವ ಸ್ಫೋಟಕ ಪುಡಿ . 
ಮುದ್ದಿಸು = ಪ್ರೀತಿಸು , ಮುದ್ದಾಡು 
ಮುನ್ನಡೆ = ಏಳಿಗೆ ,
ಪ್ರಗತಿ ಮೆಚ್ಚುಗೆ = ತೃಪ್ತಿ , ಪ್ರಶಂಸೆ = ರಾಕ್ಷಸ = ದಾನವ , ದುಷ್ಕೃಶಕ್ತಿ ,
ವಿಪದ ಗೊಬ್ಬರ ರಾಸಾಯನಿಕ ಗೊಬ್ಬರ
ಸಿಡಿದುಹೋಗು = ಚಿಮ್ಮು , ಕ ವಸ್ತುಗಳನ್ನೊಳ
 
 ಅಭ್ಯಾಸ
 
ಅ ) ಕೆಳಗಿನ ಪ್ರಶ್ನೆಗಳಿಗೆ ಬರೆಯಿರಿ
 
1.    ಕಾಡಿನ ಅಧಿಪತಿ ಯಾರು ?
ಆನೆ ಕಾಡಿನ ಅಧಿಪತಿ  .
 
2.    ಆನೆಯು ಯಾವುದರಲ್ಲಿ ವಿವರ ಬರೆದು ತರಲು ಸೂಚನೆ ನೀಡಿತು ?
ಫಲಕದಲ್ಲಿ ವಿವರ ಬರೆದು ತರಲು ಆನೆಯು ಸೂಚನೆ ನೀಡಿತು.  
 
3 .ಕಡಿಮೆ ಆಹಾರ ನೀಡುತ್ತಾರೆ ‘ಎಂದು ದೂರು ಬರೆದವರು ಯಾರು ?
 ಕಡಿಮೆ ಆಹಾರ ನೀಡುತ್ತಾರೆ ‘ ಎಂದು ‘ ಮನುಷ್ಯರು ದೂರು ಬರೆದವರು ಎತ್ತು .
 
4.    ಕಾಡು ನಿಮಗೂ ಬೇಕು ‘ ಎಂದು ಎಚ್ಚರಿಸಿದವರು ಯಾರು ?
‘ ಕಾಡು ನಿಮಗೂ ಬೇಕು ‘ ಎಂದು ಎಚ್ಚರಿಸಿದವರು ಜಿಂಕೆ .
 
5.    ‘ ಮದ್ದುಗುಂಡುಗಳನ್ನು ಸಿಡಿಸಬೇಡಿ ‘ ಹೇಳಿದವರು ಯಾರು ?
 ‘ ಮದ್ದುಗುಂಡುಗಳನ್ನು ಸಿಡಿಸಬೇಡಿ ‘ ಎಂದು ಹೇಳಿದರದವರು ಮಂಗ .
 
ಈ ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯದಲ್ಲಿ ಉತ್ತರಿಸಿ .
 
1.    ಎತ್ತು ಹಿಡಿದ ಫಲಕದಲ್ಲಿ ದು ಬರೆದಿತ್ತು ?
ಎತ್ತು ಹಿಡಿದ ಫಲಕದಲ್ಲಿ ” ನಮ್ಮನ್ನು ಹೆಚ್ಚು ಹೆಚ್ಚು ಚ ದುಡಿಸಿಕೊಳ್ಳುತ್ತೀರಿ . ಕಡಿಮೆ ಆಹಾರ ನೀಡುತ್ತೀರಿ . ನಮ್ಮ ಸೇವೆ ಬೇಕು ; ನಾವು ಮಾತ್ರ ಬೇಡ ಅಲ್ಲವೇ ? ನಮ್ಮ ಸೇವೆಯನ್ನು ಮರೆಯದಿರಿ ” , ದಯೆಯಿರಲಿ ಸಕಲ ಪ್ರಾಣಿಗಳಲ್ಲಿ ‘ ಎಂದು ಬರೆದಿತ್ತು .
 
2.    ಜಿಂಕೆ ಹಿಡಿದ ಫಲಕದಲ್ಲಿ ಏನೆಂದು ಬರೆದಿತ್ತು ?
ಜಿಂಕೆ ಹಿಡಿದ ಫಲಕದಲ್ಲಿ “ ನಮ್ಮ ಬದುಕಿನ ಆಧಾರತಾಣ ಕಾಡು , ಅದನ್ನು ನಾಶ ಮಾಡುತ್ತಿದ್ದೀರಿ . ನಮಗೆ ತಿನ್ನಲು ಹುಲ್ಲಿಲ್ಲ . ಮಲಗಲು ಮರದ ನೆರಳಿಲ್ಲ . ಕಾಡು ನಿಮಗೂ ಬೇಕು , ನಮಗೂ ಬೇಕು ” . ” ನಮ್ಮನ್ನು ಉಳಿಸಿರಿ , ನೀವೂ ಉಳಿಯಿರಿ ” ಎಂದು ಬರೆದಿತ್ತು .
 
3.    ಆಮೆ ಹಿಡಿದ ಫಲಕದಲ್ಲಿ ಏನೆಂದು ಬರೆದಿತ್ತು ?
ಆಮೆ ಹಿಡಿದ ಫಲಕದಲ್ಲಿ ” ನೀರು ಅಮೂಲ್ಯ ಸಂಪತ್ತು . ಅದನ್ನು ಹಾಳು ಮಾಡುತ್ತಿದ್ದೀರಿ , ಕಸಕಡ್ಡಿ ಹಾಕಿ ಕಲಿಷಿತಗೊಳಿಸುತ್ತಿದ್ದೀರಿ . ನಮಗೆ ನೀರಿನಲ್ಲಿರಲು ಕಷ್ಟವಾಗುತ್ತಿದೆ . ನೀರು ನಮ್ಮೆಲ್ಲರ ಜೀವ ” , ” ನೀರನ್ನು ದುರ್ಬಳಕೆ ಮಾಡಬೇಡಿ , ಕಲುಷಿತಗೊ ಎಂದು ಬರೆದಿತ್ತು .
 
4.    ಕರಡಿ ಹಿಡಿದ ಫಲಕದಲ್ಲಿ ಏನೆಂದು ಬರೆದಿತ್ತು ?
 ಕರಡಿ ಹಿಡಿದ ಫಲಕದಲ್ಲಿ ಎಲ್ಲವನ್ನೂ ಎರದಿತ್ತು ? ತಿನ್ನುತ್ತೀರಿ . ತಿಂದು ಹೆಚ್ಚಾಗಿ ಹಾಳು ಹೊಟ್ಟೆ ಹಸಿವಿನ ಬಗ್ಗೆ ನೀವು ಗಮನಿಸಲು ನಿಮ್ಮ ನಮಗೇನೂ ಉಳಿಸುವುದಿಲ್ಲ . ನೀವೂ ತಿನ್ನಿ , ನಮಗೂ ತಿನ್ನಲು ಬಿಡಿ ಎಂದು ಬರೆದಿತ್ತು .
 
5.    ನಾಯಿ ಹಿಡಿದ ಫಲಕದಲ್ಲಿ ಏನೆಂದು ಬರೆದಿತ್ತು?
 ನಾಯಿ ಹಿಡಿದ ಫಲಕದಲ್ಲಿ “ ನಾವೂ ನಡೆದಾಡಬೇಕು . ಓಡಾಡಬೇಕು . ನಮಗೂ ದಾರಿ ಬಿಡಿ . ಹಾದಿ ಬೀದಿಗಳಲ್ಲಿ ನೀವು ಮತ್ತು ನಿಮ್ಮ ವಾಹನಗಳೇ ತುಂಬಿವೆ . ಮೈಮೇಲೆ ಎಚ್ಚರವಿಲ್ಲದಂತೆ ಸಾಗುತ್ತೀರಿ . ಇತರರಿಗೂ ತೊಂದರೆ ಕೊಡುತ್ತೀರಿ ” , ” ಸರಿಯಾಗಿ ಚಲಿಸಿರಿ , ಚಲಿಸಲು ಬಿಡಿ ” ಎಂದು ಬರೆದಿತ್ತು .
 
 ಇ ) ಬಿಟ್ಟಸ್ಥಳಗಳನ್ನು ಸರಿಯಾದ ಪದಗಳಿಂದ ಭರ್ತಿ ಮಾಡಿರಿ .
1.    ಆನೆಯು ಎಲ್ಲ ಪ್ರಾಣಿಗಳಿಂದಲೂ ಮೆಚ್ಚುಗೆ ಯನ್ನು ಗಳಿಸಿತ್ತು .
2.    ಪ್ರಾಣಿಗಳು ಈ ದಿನದ ಸಭೆಗೆ ಸಿದ್ಧವಾಗಿ ಬಂದಿದ್ದವು .
3.    ಎಲ್ಲರ ಕುರಿತಾಗಿಯೂ ಈ ರೀತಿಯ ಆಕ್ರೋಶ ಸಲ್ಲದು .
4.    ಇವುಗಳನ್ನು ಇನ್ನೊಮ್ಮೆ ಪರಿಶೀಲಿಸಿ ಚರ್ಚಿಸೋಣ.
5.    ನಮ್ಮನ್ನು ಹೆಚ್ಚು ಹೆಚ್ಚುದುಡಿಸಿಕೊಳ್ಳುತ್ತಿರಿ ಎಂದು  ಎತ್ತು ಹೇಳಿತು .
 
ವ್ಯಾಕರಣ ಮಾಹಿತಿ
ಅ ) ವಚನಗಳು
 ಆನೆಯು ಎಲ್ಲರ ರೀತಿಯ ಮೆಚ್ಚುಗೆಯನ್ನು ಗಳಿಸಿತ್ತು . ಕಾಡಿನಲ್ಲಿ ವಿವಿಧ
ರೀತಿಯ ಪ್ರಾಣಿಗಳು ವಾಸವಾಗಿದ್ದವು.   ಮೇಲಿನ ವಾಕ್ಯಗಳನ್ನು ಓದಿ ಆಲಾಗಿದ್ದವು . ಅಡಿಗೆರೆ ಎಳೆದಿರುವ ಪದಗಳನ್ನು ಗಮನಿಸಿರಿ .  ‘ ಆನೆ ‘ ಎಂಬುದು ಒಂದು ಆನೆ  ಎಂಬುದನ್ನು ಸೂಚಿಸುತ್ತದೆ  ಪ್ರಾಣಿಗಳು ಎಂಬುದನ್ನು ಒಂದಕ್ಕಿಂತ ಹೆಚ್ಚು ಎಂಬುದನ್ನು ಸೂಚಿಸುತ್ತದೆ ಜಿಂಕೆಯು ಈ ದಿನದ ಸಭೆಗೆ ಸಿದ್ಧವಾಗಿ ಬಂದಿತ್ತು ಬೆಕ್ಕುಗಳು ಸಭೆಯಲ್ಲಿ ಭಾಗವಹಿಸಿದ್ದವು .  ಮೇಲಿನ ವಾಕ್ಯಗಳನ್ನು  ಓದಿ ‘ ಓದಿ ಅಡಿಗೆರೆ ಎಳೆದಿರುವ ಪದಗಳನ್ನು ಗಮನಿಸಿರಿ . ‘ ಜಿಂಕೆ ‘ ಎಂಬುದು ‘ ಒಂದು ‘ ಎಂಬುದನ್ನು ಸೂಚಿಸುತ್ತದೆ  . ಇದು ಏಕವಚನ . ” ಬೆಕ್ಕುಗಳು ‘ ಎಂಬುದು ಒಂದಕ್ಕಿಂತ ಹೆಚ್ಚು ‘ ಎಂಬುದನ್ನು ಸೂಚಿಸುತ್ತದೆ . ಇದು ಬಹುವಚನ . ಏಕವಚನ ಮತ್ತು ಬಹುವಚನಗಳಿಗೆ ಇನ್ನೂ ಕೆಲವು
ಉದಾಹರಣೆಗಳು : ಏಕವಚನ ಪತ್ರ ನಾಯಕ ತಮ್ಮ ರೈತ
 ಬಹುವಚನ ಪತ್ರಗಳು ನಾಯಕರು ತಮಂದಿರು ರೈತರು
 
ಭಾಷಾಭ್ಯಾಸ
 
 ಅ ) ವಚನ ಬದಲಿಸಿ ಬರೆಯಿರಿ . –
1.    ಎತ್ತು( ಎತ್ತುಗಳು )
2.    ನಾಯಕ ( ನಾಯಕರು )
3.    ಅಣಂದಿರು( ಅಣ್ಣ )
        ಪತ್ರಿಕೆಗಳು    ( ಪತ್ರಿಕೆ )
5.    ಪತ್ರಗಳು( ಪತ್ರ )
6.    ಮಿತ್ರರು( ಮಿತ್ರ )
7.    ಅದು ( ಅವು)
8.    ನೀವು ( ನೀನು )
 ಈ ) ಶುಭನುಡಿ
ಇತರರ ಮಾತುಗಳಿಗೂ ಮುನ್ನಣೆ ಕೊಡಿರಿ .
ಸಂಪನ್ಮೂಲಗಳನ್ನು ಅಗತ್ಯವಿದ್ದಷ್ಟು ಮಾತ್ರ ಬಳಸಿರಿ
ವಚನಗಳನ್ನು ಬೆಳೆಸಿರಿ ವನ್ಯ ಜೀವಿಗಳನ್ನು ಉಳಿಸಿರಿ .

ಪ್ರವೇಶ ಎಲ್ಲ ಜೀವಿಗಳಿಗೂ ಬದುಕಲು ಸಮಾನ ಹಕ್ಕಿದೆ . ಮನುಷ್ಯ ತನ್ನ ಸ್ವಾರ್ಥ ನಿಮಿತ್ತನಾಗಿ ಅದಕ್ಕೆ ಅವಕಾಶ ನೀಡುತ್ತಿಲ್ಲ . ಕೆಲವೊಮ್ಮೆ ಆತ ತನ್ನ ಶಾಂತಿ ನೆಮ್ಮದಿಗಳಿಗೆ ತಾನೇ ಅಡ್ಡಿಯಾಗುತ್ತಾನೆ . ಮನುಪಲ್ಲಿರುವ ಪ್ರಾಣಿಗಳ : ಸಾಧುವಲ್ಲದ ಕಾರ್ಯಗಳನ್ನು ಹೇಳಿಸಿ , ಆ ಮೂಲಕ ಆತನನ್ನು ಯೋಚನೆಗೆ ಹಚ್ಚುವುದು ಇಲ್ಲಿ ಆಶಯವಾಗಿದೆ . ಒಂದಾನೊಂದು ಕಾಡು .. ಅಲ್ಲಿ ಬಗೆಬಗೆಯ ಪ್ರಾಣಿಗಳು ವಾಸವಾಗಿದ್ದವು . ಆನೆಯು ಆ ಕಾಡಿನ ಅಧಿಪತಿಯಾಗಿತ್ತು . ಅದು ಆಗಾಗ ಸಭೆ ಕರೆದು ಅವುಗಳ ಕೇಮ ಸಮಾಚಾರವನ್ನು ವಿಚಾರಿಸುತ್ತಿತ್ತು . ಊರಿನಲ್ಲಿರುವ ಪ್ರಾಣಿಗಳೊಂದಿಗೂ ಸ್ನೇಹವನ್ನು ಬೆಳೆಸಿತ್ತು . ಅವುಗಳಿಗೂ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುತ್ತಿತ್ತು . ಉತ್ತಮ ನಾಯಕತ್ವ ಗುಣಹೊಂದಿರುವ ಆನೆಯು ಎಲ್ಲಿ ಪ್ರಾಣಿಗಳಿಂದಲೂ ಮೆಚ್ಚುಗೆಯನ್ನು ಗಳಿಸಿತ್ತು . ಹೀಗೆಯೇ ಒಂದು ದಿನ ಸಭೆ ಕರೆದಿತ್ತು . ಎಲ್ಲ ಪ್ರಾಣಿಗಳು ಅಂದು ಮನುಷ್ಯರ ಮೇಲೆ ಬಹಳವಾಗಿ ದೂರುಹೇಳುತ್ತಿದ್ದವು . ಮಾನವನಿಂದ ಆಗುತ್ತಿರುವ ತೊಂದರೆ ಹಾಗೂ ಪರಿಹಾರ ಕುರಿತು ಚರ್ಚಿಸಿದ್ದವು . ಮನುಷ್ಯನಿಗೆತಿಳಿಹೇಳಲು ಫಲಕದಲ್ಲಿ ವಿವರ ಬರೆದು ತರಲು ಆನೆಯು ಪ್ರಾಣಿಗಳಿಗೆ ಸೂಚನೆ ನೀಡಿತ್ತು . ಅದರಂತೆ ಪ್ರಾಣಿಗಳು ಈ ದಿನದ ಸಭೆಗೆ ಸಿದ್ಧವಾಗಿ ಬಂದಿದ್ದವು . ನಾಯಕನ ಸೂಚನೆಯಂತೆ ಅವುಗಳು ತಮ್ಮ ಫಲಕಗಳನ್ನು ಹಿಡಿದುಕೊಂಡು ಸಾಲಾಗಿ ನಿಂತಿದ್ದವು . ಆನೆಯು ಅವುಗಳನ್ನು ಒಂದೊಂದಾಗಿ ಓದುತ್ತಾ ಮುನ್ನಡೆಯಿತು .
 
ಮುಖ್ಯಾಂಶಗಳು
ಊರಿನ ಅಂಚಿನಲ್ಲಿದ್ದ ( ಪಕ್ಕದಲ್ಲಿದ್ದ ) ಕಾಡಿನಲ್ಲಿ ಹಲವಾರು ಬಗೆಯ ಪ್ರಾಣಿಗಳು ವಾಸವಾಗಿದ್ದವ ಪ್ರಾಣಿಗಳ ನಾಯಕ ಆನೆ . ಅದು ಆಗಾಗ ಕಾಡಿನ ಪ್ರಾಣಿಗಳನ್ನು ಹಾಗೂ ಊರಿನಲ್ಲಿನ ಒಟ್ಟಾಗಿ . ಸೇರಿಸಿ ಅವರ ಯೋಗಕೇ ಕೊರತೆಗಳನ್ನು ವಿಚಾರಿಸುತ್ತಿತ್ತು . ಒಮ್ಮೆ ಒಂದು ಸಭೆಯಲ್ಲಿ ಮನುಷ್ಯರು ಪ್ರಾಣಿಗಳ ಮೇಲೆ ದೌರ್ಜನ್ಯದ ಬಗ್ಗೆ ದೂರು ಹೇಳಿದವು .ನಡೆಸುತ್ತಿರುವ ಆಗ ಆನೆಯು ಮನುಷ್ಯನಿಗೆ ಮೊದಲು ತಿಳಿ ಹೇಳುವ ಪ್ರಯತ್ನ ಮಾಡೋಣ . ಆದ್ದರಿಂದಎಲ್ಲರೂ ಮನುಷ್ಯನಿಗೆ ತಿಳಿಯುವಂತೆ ಒಂದು ಸೂಚನಾ ಫಲಕವನ್ನು ಸಿದ್ಧಪಡಿಸಲು ಸೂಚಿಸಿತು . ಅದರಂತೆ ಮುಂದಿನ ಸಭೆಯಲ್ಲಿ ಪ್ರಾಣಿಗಳು ತಾವು ಬರೆದ ಫಲಕವನ್ನು ಹಿಡಿದು ನಿಂತವು . ಆನೆ ಎಲ್ಲರ ಫಲಕಗಳನ್ನು ಓದುತ್ತಾ ಬಂದಿತು .
ಮೊದಲಿಗೆ ಎತ್ತು : ನಮ್ಮನ್ನು ಹೆಚ್ಚು ದುಡಿಸಿಕೊಂಡು ಆಹಾರ ಮಾತ್ರ ಸ್ವಲ್ಪ ಕೊಡುವಿರಿ ನಮ್ಮ ಸೇವೆ ಬೇಕು  ನಾವು ಮಾತ್ರ ಬೇಡವೇ ? ಮರೆಯದಿರಿ .” ದಯವಿರಲಿ ಸಕಲ ಪ್ರಾಣಿಗಳೆಲ್ಲರಲಿ ‘ ಎಂಬ ನೀತಿಯ ಫಲಕವನ್ನು ಹಿಡಿದಿತ್ತು .
ಜಿಂಕೆ : ನಮಗೆ ಆಶ್ರಯ ಕಾಡು . ಆದರೆ ನೀವು ಅದನೇ ನಾಶ ಮಾಡಿ , ನಮಗೆ ತಿನ್ನಲು ಹುಲ್ಲಿಲ್ಲ . ಮಲಗಲು ಮರದ ನೆರಳಿಲ್ಲ . ಕಾಡು ನಮಗೂ ಬೇಕು , ನಿಮಗೂ ಬೇಕು . ‘ ನಮ್ಮನ್ನು ಉಳಿಸಿರಿ , ನೀವೂ ಉಳಿಯಿರಿ . ಮೊದಲಿಗೆ ಎತ್ತು : ನಮ್ಮನ್ನು ಹೆಚ್ಚು ದುಡಿಸಿಕೊಂಡು ನಮ್ಮ ಸೇವೆ ಬೇಕು ,
ಆಮೆ : ನೀರು ಎಲ್ಲರಿಗೂ ಬೇಕಾದ ಅಮೂಲ್ಯ ಸಂಪತ್ತು , ಅದನ್ನು ಕಲುಷಿತಗೊಳಿಸುತ್ತಿದ್ದೀರಿ . ನೀರು ನಮ್ಮೆಲ್ಲರ ಜೀವ , ನೀರನ್ನು ದುರ್ಬಳಕೆ ಮಾಡಬೇಡಿ , ಕಲುಷಿತಗೊಳಿಸಬೇಡಿ ‘ .
ಕರಡಿ : ಎಲ್ಲವನ್ನೂ ನೀವೇ ತಿನ್ನುತ್ತೀರಿ . ಹೆಚ್ಚಾಗಿ ಹಾಳು ಮಾಡುತ್ತೀರಿ . ನಮ್ಮ ಹೊಟ್ಟೆ ಹಸಿವಿನ ಬಗ್ಗೆ ನೀವು ಗಮನಿಸುವುದಿಲ್ಲ . ನಮಗೇನೂ ಉಳಿಸುವುದಿಲ್ಲ . “ ನೀವೂ ತಿನ್ನಿ , ನಮಗೂ ತಿನ್ನಲು ಬಿಡಿ ‘ .
ನಾಯಿ : ಹಾದಿ – ಬೀದಿಯಲ್ಲೆಲ್ಲಾ ನೀವು , ವಾಹನಗಳ ತುಂಬಿವೆ . ಮೈಮೇಲೆ ಎಚ್ಚರವಿಲ್ಲದಂತೆ ಸಾಗುತ್ತೀರಿ . ಇತರರಿಗೂ ತೊಂದರೆ ಕೊಡುತ್ತೀರಿ . ” ಸರಿಯಾಗಿ ಚಲಿಸಿ , ನಮಗೂ ಚಲಿಸಲು ಬಿಡಿ .
 ಮಂಗ : ನಮಗೂ ಶಾಂತಿ ಬೇಕು , ನೆಮ್ಮದಿ ಬೇಕು . ನೋವಿನಲ್ಲೂ , ನಲಿವಿನಲ್ಲೂ ಹಿಂಸಿಸುತ್ತೀರಿ . ‘ ಮದ್ದು ಗುಂಡುಪಟಾಕಿ ಸಿಡಿಸಿ ನಮ್ಮನ್ನು ಸಿಡಿಸಬೇಡಿ ,  ಶಾಂತಿಯನ್ನು ಕೆಡಿಸಬೇಡಿ .
ಬೆಕ್ಕು : ನಿಮ್ಮ ಪಕ್ಕದಲ್ಲೇ  ,ಇರುವ ನಮ್ಮನು ಕಣ್ಣೆತ್ತಿ ನೋಡುವುದಿಲ್ಲ ಸದಾ ಟಿವಿ ಮೊಬೈಲ್ ಜೊತೆ ಕಾಲ ಕಳೆಯುತ್ತೀರಿ ನಾವು ನಿಮ್ಮೊಂದಿಗಿದ್ದೇವೆ ನಮ್ಮನ್ನೂ ಮಾತನಾಡಿಸಿ .
ಎರೆಹುಳ : ನಾವು ರೈತನ ಮಿತ್ರರು . ಆದರೂ ಭೂಮಿಯನ್ನು ಫಲವತ್ತು ಮಾಡುವ ನಮಗೆ ಥರಥರದ ಔಷಧ ಚಿಮುಕಿಸಿ ಮಣ್ಣಿನ ಫಲವತ್ತತೆಯ ಜೊತೆಗೆ ನಮ್ಮನ್ನೂ ಸಾಯಿಸುತ್ತೀರಿ . ‘ ರಕ್ಷಕರಾಗಿ , ರಾಕ್ಷಸರಾಗದಿರಿ ‘ಎಂಬ ಫಲಕಗಳನ್ನು ಓದಿದ ಆನೆ ” ಶಹಬ್ಬಾಸ್ ” ಎಂದು ಪ್ರಾಣಿಗಳನ್ನು ಹುರಿದುಂಬಿಸುತ್ತಾ ” ಚೆನ್ನಾಗಿ ಬರೆದಿದ್ದೀರಿ .ಆದರೆ ಎಲ್ಲಾ ಮನುಷ್ಯರು ಕೆಟ್ಟವರಲ್ಲ . ಎಲ್ಲಾ ಮನುಷ್ಯರ ಬಗ್ಗೆ ನಾವು ಕೋಪಗೊಳ್ಳಲಾಗದು . ಇದನ್ನು ಅಂಚಿನ ಬದಿಯಲ್ಲಿ ನೆಟ್ಟು ಪ್ರದರ್ಶಿಸೋಣ . ಮುಂದೆ ಏನಾಗುವುದೋ ಕಾದು ನೋಡೋಣ . ಈಗ ಎಲ್ಲರೂ ಒಟ್ಟಾಗಿ ಊಟ ಮಾಡೋಣ ಬನ್ನಿ ಎಂದು ಆನೆ ಎಲ್ಲರನ್ನೂ ಭೋಜನ ಶಾಲೆಗೆ ಕರೆದೊಯ್ದಿತು .


You Might Like

Post a Comment

0 Comments