Recent Posts

 ಸ್ವಾತಂತ್ರ್ಯದ ಹಣತೆ  - ೫ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 
 
 
 ಸ್ವಾತಂತ್ರ್ಯದ ಹಣತೆ
 
ಕೃತಿಕಾರರ ಪರಿಚಯ ; ಕೆ,ಎಸ್, ನಿಸಾರ್ ಅಹಮದ್: ಕವಿ ಕೊಕ್ಕರೆ ಹೊಸಹಳ್ಳಿ ಷೇಕ್ ಹೈದರ್ ನಿಸಾರ್ ಅಹಮದ್ ಅವರು ೫-೨-೧೯೩೬ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಜನಿಸಿದರು. ತಂದೆ ಷೇಕ್ ಹೈದರ್, ತಾಯಿ ಹಮೀದಾ ಬೇಗಂ, ಭೂಗರ್ಭಶಾಸ್ತ್ರದಲ್ಲಿ ಪದವಿಯನ್ನು ಪಡೆದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇವೆಯನ್ನು ಪ್ರಾರಂಭಿಸಿದರು. ಇವರು ಮನಸು ಗಾಂಧಿ ಬಜಾರು, ನೆನೆದವರ ಮನದಲ್ಲಿ, ನಿತ್ಯೋತ್ಸವ ,ಮುಹೂರ್ತ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
 
ಪದಗಳ ಅರ್ಥ
ಬಟ್ಟೆ= ಅರಿವೆ    ಬೆಸೆ = ಒಂದಾಗುವುದು
ಗಳಿಕೆ= ಸಂಪಾದನೆ    ಮೊಳಕೆ = ಕುಡಿ
ಗೃಹ= ಮನೆ    ಪಗಡೆ= ಒಂದು ಬಗೆಯ ಆಟ
ಘನತೆ= ಶ್ರೇಷ್ಟತೆ    ಪಾಯ = ಬುನಾದಿ
ತೈಲ= ಎಣ್ಣೆ    ಹಣತೆ = ದೀಪ
 
ಅಭ್ಯಾಸ
 
ಅ) ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
 
೧) ಸದಾ ಉರಿಯತ್ತಿರಬೇಕಾದುದು ಯಾವುದು?
ಸದಾ ಉರಿಯುತ್ತಿರಬೇಕಾದುದು ಸ್ವಾತಂತ್ರ್ಯ ಎಂಬ ಹಣತೆ.
 
೨) ಧೀರಶಕ್ತಿ ಉಳ್ಳವರು ಏನು ಮಾಡಬಲ್ಲರು?
ಧೀರಶಕ್ತಿ ಉಳ್ಳವರು ಹುಲಿಯ ಬಾಯಲ್ಲಿನ ಆಹಾರವನ್ನು ಬೇಕಾದರೆ ಕೈ ಹಾಕಿ ತೆಗೆಯಬಲ್ಲರು.
 
೩) ಮೊಳಕೆ ಉಂಟಾದುದು ಹೇಗೆ?
ಪ್ರತಿಯೊಬ್ಬ ವ್ಯಕ್ತಿಯ ಪರಿಶ್ರಮದ ಬೆವರು ಹನಿಗಳ ಸಿಂಚನದಿಂದ ಮೊಳಕೆ ಅಂಕುರಿಸಿ ಅದು ನಂತರ ಅದು ಮರವಾಗಿ ಬಳೆದಿದೆ.
 
೪) ನಮ್ಮ ಗಮನ ಯಾವುದರ ಕಡೆಗೆ ಸಲ್ಲಬೇಕು?
ನಮ್ಮ ಗಮನ ಜೀವನದ ಗುರಿ, ಸಾಧನೆಯ ಕಡೆಗೆ ಸಲ್ಲಬೇಕು.
 
ಆ) ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ, ಕಂಠಪಾಠ ಮಾಡಿರಿ.
೧. ಸದಾ ಉರಿಯುತ್ತಿರುವ ಹಾಗೆ ಸ್ವಾತಂತ್ರ್ಯದ ಹಣತೆ
ದುಡಿಮೆ ತೈಲವೆರೆಯುತಿರಲು ಬಿಡುವಿಲ್ಲದೆ ಘನತೆ
ಎಂತು ಕುಂದಬಹುದು ಎಮ್ಮ ತಾಯ್ನಾಡಿನ ಘನತೆ ||ಸದಾ||
೨. ಸಾಗಿದಂತೆ ಸಲ್ಲುತ್ತಿರಲಿ ಸಾಧನೆಯೆಡೆ ಗಮನ
ಪ್ರಾಣವನ್ನೇ ಪಗಡೆಯಾಡಿದವರಿಗೆಮ್ಮ ನಮನ,
ತಾಯ ಮುಡಿಗೆ ದಿನವು ಏರುತಿರಲಿ ಹೂವು ದವನ ||ಸದಾ||
 
ವ್ಯಾಕರಣ
 
ಅ)ಲಿಂಗಗಳು
೧. ಶಿವಪುರದಲ್ಲಿ ಒಬ್ಬ ಶಿವಭಕ್ತ ನಿದ್ದನು.
೨. ಭಜನೆಯ ಮಂದಿರಕ್ಕೆ ಒಬ್ಬ ಶರಣೆ ಬಂದಿದ್ದಳು.
೩. ನದಿಯ ಹತ್ತಿರ ಒಂದು ಮೊಸಳೆ ಇತ್ತು.
ಮೇಲಿನ ವಾಕ್ಯಗಳನ್ನು ಓದಿ, ಗೆರೆ ಎಳೆದಿರುವ ಪದಗಳನ್ನು ಗಮನಿಸಿರಿ.ಶಿವಭಕ್ತ ಎಂಬ ಪದವು ʼಗಂಡಸುʼ ಎಂಬುದನ್ನು ಸೂಚಿಸುತ್ತದೆ. ʼಶರಣೆʼ ಎಂಬ ಪದವು ʼಹಂಗಸುʼ ಎಂಬುದನ್ನು ಸೂಚಿಸುತ್ತದೆ. ʼಮೊಸಳೆ ʼ ಎಂಬ ಪದವು ʼಗಂಡಸುʼ ಎಂಬುದನ್ನಾಗಲೀ, ʼಹೆಂಗಸುʼ ಎಂಬುದನ್ನಾಗಲೀ ಸೂಚಿಸುತ್ತಿಲ್ಲ.
೧. ಆ ಊರಿನಲ್ಲಿ ಪ್ರಸಿದ್ಧ ರಾಜ ಇರುವನು.
೨. ಪುನೀತ್ ಬಹಳ ಒಳ್ಳೆಯವನು.
ಮೇಲಿನ ವಾಕ್ಯಗಳನ್ನು ಓದಿ ಅಡಿಗೆರೆ ಎಳೆದಿರುವ ಪದಗಳನ್ನು ಗಮನಿಸಿರಿ, ʼರಾಜʼ,ʼಪುನೀತ್ʼ ಎಂಬ ಪದಗಳು ʼಗಂಡಸುʼ ಎಂಬ ಅರ್ಥದಿಂದ ಬಳಕೆಯಾಗಿವೆ.
ಇವು ಪುಲ್ಲಿಂಗಗಳು.
೧. ಸಿಂಧು ಬಲು ಅಪರೂಪದವಳು.
೨. ಆಸೆಯು ರಾಣಿಗಲ್ಲದೆ ಮತ್ತಾರಿಗೆ?
ಮೇಲಿನ ವಾಕ್ಯಗಳನ್ನು ಓದಿ ಅಡಿಗೆರೆ ಎಳೆದಿರುವ ಪದಗಳನ್ನು ಗಮನಿಸಿರಿ. ʼಸಿಂಧುʼ, ʼರಾಣಿʼ ಎಂಬ ಪದಗಳು ʼಹೆಂಗಸುʼ ಎಂಬ ಅರ್ಥದಿಂದ ಬಳಸುವ ಪದಗಳು ʼಸ್ತ್ರೀಲಿಂಗಗಳುʼ.
ಗಂಡಸು ಅಥವಾ ಹೆಂಗಸು ಎಂಬ ಅರ್ಥದಿಂದ ಬಳಕೆಯಾಗದ ಪದಗಳು ʼನಪುಂಸಕ ಲಿಂಗಗಳುʼ
 
ಭಾಷಾಭ್ಯಾಸ
 
ಅ) ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
೧. ಪುಲ್ಲಿಂಗ ಎಂದರೇನು?
ʼಗಂಡಸುʼ ಎಂಬ ಅರ್ಥವನ್ನು ಕೊಡುವ ಪದಗಳು, “ಪುಲ್ಲಿಂಗಗಳು”
೨. ಸ್ತ್ರೀಲಿಂಗ ಎಂದರೇನು?
ʼಹೆಂಗಸುʼ ಎಂಬ ಅರ್ಥವನ್ನು ಕೊಡುವ ಪದಗಳು, “ಸ್ತ್ರೀಲಿಂಗಗಳು”
೩. ನಪುಂಸಕಲಿಂಗ ಎಂದರೇನು?
ಗಂಡಸು ಅಥವಾ ಹೆಂಗಸು ಎಂಬ ಅರ್ಥದಿಂದ ಬಳಕೆಯಾಗದ ಪದಗಳು ʼನಪುಂಸಕಲಿಂಗಗಳುʼ.
 
ಆ) ಲಿಂಗರೂಪ ಪರಿವರ್ತಿಸಿ ಬರೆಯಿರಿ.
೧. ಶರಣ : ಶರಣ
೨. ಇವಳು : ಇವನು
೩. ಗೌಡತಿ : ಗೌಡ
೪. ಅತ್ತೆ : ಮಾವ
೫. ಅವನು : ಅವಳು
 
ಇ) ಕೊಟ್ಟಿರುವ ಪದಗಳಲ್ಲಿ ಪುಲ್ಲಿಂಗ ಸ್ತ್ರೀಲಿಂಗ ನಪುಂಸಕಲಿಂಗಗಳನ್ನು ಆರಿಸಿ ಬರೆಯಿರಿ.
ಕೋಗಿಲೆ, ಆತ, ಅಣ್ಣ, ಜಂಕೆ, ಗಿಳಿ, ತಾತ, ಅರಸಿ, ಗಂಗೆ, ಗೆಳೆಯ, ತಾಯಿ, ಹಣ್ಣು, ರಾಧೆ
ಪುಲ್ಲಿಂಗ : ಆತ, ಅಣ್ಣ, ತಾತ, ಗೆಳೆಯ,
ಸ್ತ್ರೀಲಿಂಗ : ಗಂಗೆ, ತಾಯಿ, ಅರಸಿ, ರಾಧೆ.
ನಪುಂಸಕಲಿಂಗ : ಜಿಂಕೆ, ಕೋಗಿಲೆ, ಗಿಳಿ, ಹಣ್ಣು.
ಉ) ಶುಭನುಡಿ:
೧. ಒಗ್ಗಟ್ಟಿನಲ್ಲಿ ಬಲವಿದೆ.
೨. ದೇಶಕ್ಕಾಗಿ ದುಡಿ ; ದೇಶಕ್ಕಾಗಿ ಮಡಿ
 
ಸ್ವಾತಂತ್ರ್ಯದ ಹಣತೆ ಸಾರಾಂಶ
 
ಪ್ರವೇಶ.
ನಮಗೆ ಬಂದಿರುವ ಸ್ವಾತಂತ್ರ್ಯವನ್ನು ಸದಾ ರಕ್ಷಣೆ ಮಾಡಿಕೊಳ್ಳಬೇಕು . ನಮ್ಮ ದೇಶದ ಅಭಿವೃದ್ಧಿಗಾಗಿ ಸದಾ ದುಡಿಯುತ್ತಿರಬೇಕು . ಧೀರತನದಿಂದ ದೇಶದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕು . ನಮ್ಮ ಸಾಧನೆಯ ಕಡೆಗೆ ಗಮನವಿರಬೇಕು . ದೇಶಕ್ಕಾಗಿ ಹೋರಾಡಿದ ಹುತಾತ್ಮರಿಗೆ ಗೌರವವನ್ನು ಸದ ಸಲ್ಲಿಸಬೇಕು ಎಂಬುದು ಈ ಪದ್ಯದ ಆಶಯವಾಗಿದೆ .

ಮುಖ್ಯಾಂಶಗಳು.

ಕೆ.ಎಸ್ . ನಿಸಾರ್ ಅಹಮ್ಮದ್ರವರು ಕನ್ನಡದ ಶೇಮ್ಮ ಕವಿಗಳಲ್ಲಿ ಒಬ್ಬರು . ಇವರ ಕವಿತೆಗಳು ಸರಳ ಹಾಗೂ ಸುಂದರ , ಪುಸ್ತುತ ಕವಿತೆ ಹೆಸರೇ ಹೇಳುವಂತೆ ಸ್ವಾತಂತ್ರ್ಯವನ್ನು ಹಣತೆಗೆ ಹೋಲಿಸಿದ್ದಾರೆ .
ಹಣತೆಯಲ್ಲಿ ಸ್ವಾತಂತ್ರ್ಯವೂ ಸಹ ಉರಿಯುತ್ತಿರಲೇ ಬೇಕು . ಈ ಜಾಗೃತಾವಸ್ಥೆಯಲ್ಲಿರಲು ಅದಕ್ಕೆ ದುಡಿಮೆ ಎಂಬ ತೈಲವನ್ನು ( ಎಣ್ಣೆಯನ್ನು) ಸದಾ ಎರೆಯುತ್ತಿರಬೇಕು . ಈ ರೀತಿ ಜನರೆಲ್ಲ ಸದಾ ದುಡಿಯುತ್ತಿದ್ದು ತಾಯ್ಯಾಡಿನ ಘನತೆಯನ್ನು ಕಾಪಾಡಿಕೊಳ್ಳಬೇಕು . ನಮಗೆ ಈ ಸ್ವಾತಂತ್ರ ಸಿಕ್ಕಿರುವುದೂ ಸಹ ಸುಲಭವಾಗೇನಲ್ಲ . ಇದಕ್ಕಾಗಿ ಲಕ್ಷಾಂತರ ಜನ , ವರ್ಷಾನುಗಟ್ಟಲೆ ದುಡಿದಿದ್ದಾರೆ .
ಹುಲಿಯ ಬಾಯಲ್ಲಿಯ ಮೇವನ್ನು ಕಸಿಯಬೇಕಾದರೆ ಎಷ್ಟು ಶ್ರಮ ಹಾಗೂ ಶಕ್ತಿಯ ಅವಶ್ಯಕತೆಯಿದೆಯೋ ಅದಕ್ಕಿಂತ ಹೆಚ್ಚು ಕಷ್ಟಪಟ್ಟು ನಮ್ಮ ಹಿರಿಯ ಜನತೆ ಸ್ವಾತಂತ್ರ್ಯವನ್ನು ಗಳಿಸಿದ್ದಾರೆ . ನಮ್ಮನ್ನೆಲ್ಲ ಬೆಸೆಯುವುದೇ ಈ ನಾಡ ಭಕ್ತಿ ಸ್ವಾತಂತ್ರ್ಯ ಬಂತು ಎಂದು ನಮ್ಮ ಜೀವನದ ಸಂಪಾದನೆಯೂ ಸಹ ಸುಲಭವಾಗೇನೂ ಬರುವುದಿಲ್ಲ . ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಬೆವರನ್ನು ಸುರಿಸಿ ದುಡಿದು ಗಳಿಸಬೇಕು . ಈ ಗಳಿಕೆಗೆ ಹೇಗೆ ಬೆವರು ಸುರಿಸ ಬೇಕೋ ಹಾಗೆಯೇ ಸ್ವಾತಂತ್ರ್ಯವನ್ನು ಪಡೆಯುವುದಕ್ಕೂ ಕಷ್ಟಪಟ್ಟಿದ್ದಾರೆ . ಇದಕ್ಕೆ ಭದ್ರವಾದ ಬುನಾದಿ ( ಅಡಿಪಾಯ ) ಯಿದೆ . ಈಗ ನಾವು ನಮ್ಮ ಸಾಧನೆಯ ಕಡೆಗೆ ಗಮನ ಕೊಡಬೇಕು . ನಮ್ಮ ಗುರಿ’ ಉನ್ನತವಾಗಿದ್ದು , ಸಾಧಿಸುವುದರ ಜೊತೆ ಜೊತೆಗೆ ಸ್ವಾತಂತ್ರ್ಯವನ್ನು ತಂದುಕೊಟ್ಟವರಿಗೆ , ತಮ್ಮ ಪ್ರಾಣವನ್ನೇ ಪಗಡೆಯಾಟದ ದಾಳದಂತೆ ಬಲಿಕೊಟ್ಟ , ಹುತಾತ್ಮರಿಗೆ ನಮ್ಮ ನಮನವನ್ನು ಸಲ್ಲಿಸಬೇಕು . ಹಾಗೆಯೇ ನಮ್ಮ ತಾಯಾಡಿನ ಕೀರ್ತಿ ಬೆಳಗುವಂತಹ ಕೆಲಸ ಮಾಡಿ , ತಾಯ ಮುಡಿಗೆ ಹೂವು ಮತ್ತು ಸುವಾಸನಾಯುಕ್ತ ದವನವನ್ನು ಮುಡಿಸಬೇಕು . ಎಂಬುದು ಕವಿ ( ಕವಿತೆ ) ಯ ಆಶಯ .You Might Like

Post a Comment

0 Comments