Recent Posts

ಟುಸ್ಸೋಡ್ ವ್ಯಾಕ್ಸ್ ಮೂಸಿಯಂ - ೧೦ ನೇ ತರಗತಿ ತಿಳಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

                                                                                             
 
 
 

 
 
                                                         ಟುಸ್ಸೋಡ್ ವ್ಯಾಕ್ಸ್ ಮೂಸಿಯಂ     
                                                                                         
                                                      -ಬಸವಪ್ರಭು ಪಾಟೀಲ ಬೆಟ್ಟದೂರು ಮತ್ತು ಕೆ.ಸಿದ್ಧಯ್ಯಸ್ವಾಮಿ.

 
ಕವಿ/ಲೇಖಕರ ಪರಿಚಯ
1.  ಡಾ.ಬಸವಪ್ರಭು ಪಾಟೀಲ
?  ಡಾ.ಬಸವಪ್ರಭು  ಪಾಟೀಲ    ಇವರು  1947  ರಲ್ಲಿ  ರಾಯಚೂರು  ಜಿಲ್ಲೆಯ  ಮಾನ್ವಿ  ತಾಲ್ಲೂಕಿನ  ಬೆಟ್ಟದೂರು  ಗ್ರಾಮದಲ್ಲಿ ಜನಿಸಿದರು.  
?  ಇವರು ಮಾತನಾಡಿ ಹೆಣಗಳೇ, ಇದೇನು ಕತೆ, ಬೆಳಗು, ಬಸವನಾಡಿನಿಂದ ಮಂಡೇಲ ನಾಡಿಗೆ  ಮುಂತಾದ ಕೃತಿಗಳನ್ನು ಬರೆದಿದ್ದಾರೆ.
2.ಕೆ.ಸಿದಯ್ಯಸ್ವಾಮಿ
?  ಕೆ.ಸಿದಯ್ಯಸ್ವಾಮಿ  ಇವರು 1945 ರಲ್ಲಿ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಜನಿಸಿದರು.
?  ಇವರಿಬ್ಬರೂ ಸೇರಿ ಯೂರೋಪಿನಲ್ಲಿ ಎಂಬ ಪ್ರವಾಸ ಸಾಹಿತ್ಯವನ್ನು ಬರೆದಿದ್ದಾರೆ.
 ?  ಪ್ರಸ್ತುತ ಲೇಖನವನ್ನು ಯೂರೋಪಿನಲ್ಲಿ ಎಂಬ ಪ್ರವಾಸ ಸಾಹಿತ್ಯದಿಂದ ಆರಿಸಲಾಗಿದೆ.

                                          ಅಭ್ಯಾಸ
1.ಪದಗಳ ಅರ್ಥ :
 
ಕೋಚ್ - ರಾಜರಥ; ನಾಲ್ಕುಚಕ್ರದ ಬಂಡಿ.                         ಗೈಡ್ - ಮಾರ್ಗದಶರ್ಿ
ಡ್ಯಾಗರ್ - ಕಠಾರಿ; ಚೂರಿ; ತಿವಿ.                                          ತದ್ರೂಪ - ಅದೇ ತರಹದ
ತರಾತುರಿ - ಅವಸರ                                                             ತಾಸು - ಗಂಟೆ
ದುಬಾರಿ - ಹೆಚ್ಚುಬೆಲೆ; ತುಟ್ಟಿ.                                             ನಿಗೂಢ - ರಹಸ್ಯ
ಪಾರ್ಲಿಮೆಂಟ್ - ಸಂಸತ್ತು                                                   ಬ್ರಿಜ್ - ಸೇತುವೆ
ಮ್ಯೂಸಿಯಂ - ವಸ್ತುಸಂಗ್ರಹಾಲಯ.                                  ವ್ಯಾಕ್ಸ್  ಮೇಣ ಸಮುಚ್ಛಯ  ಗುಂಪು                                                                                ಸರ್ಬ್ - ಉಪನಗರ ಕಟಚಿಟಿಜಣಠಡಿಣಟ  ತಾರಾಲಯ; ಸೌರವ್ಯೂಹದ ಮಾದರಿ ಕೇಂದ್ರ.          ಹಾರರ್ - ಭಯ; ನಡುಕ.   

2.ಪ್ರಶ್ನೆಗಳು :
 
ಅ) ಅ ಪಟ್ಟಿಯನ್ನು ಬ ಪಟ್ಟಿಯೊಂದಿಗೆ ಹೊಂದಿಸಿ ಬರೆಯಿರಿ.     
ಅ ಪಟ್ಟಿ                  ಬ ಪಟ್ಟಿ  
1)  ಶಾರ್ದ       -----  ವಾಣಿಜ್ಯ ಮುಚ್ಛಯ
2)  ಥೇಮ್ಸ್      -----   ನದಿ
3)  ಸಿಂಪೋಸಿಯಾ ----   ಚಚರ್್
4)  ಯೂರೋ    ----   ಲಂಡನ್ ರೂಪಾಯಿ

 ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.  
1. ಲಂಡನ್ನಲ್ಲಿರುವ ವ್ಯಾಕ್ಸ್ ಮ್ಯೂಸಿಯಂಗೆ ಟುಸ್ಸೋಡ್ ಎಂಬ ಹೆಸರು ಹೇಗೆ ಬಂತು?
ಮೇಡಂ ಟುಸ್ಸೋಡ್ ವ್ಯಾಕ್ಸ್ ಗೊಂಬೆಗಳನ್ನು ಮೊದಲು ಮಾಡಿದ್ದರಿಂದ.

2. ಲಂಡನ್ನಲ್ಲಿರುವ ಪ್ರಸಿದ್ಧ ವಿಶ್ವವಿದ್ಯಾನಿಲಯಗಳ  ಹೆಸರೇನು?
ಕೇಂಬ್ರಿಡ್ಜ್ ಹಾಗೂ ಆಕ್ಸ್ಫರ್ಡ್.

3. ಲಂಡನ್ ವಿಶ್ವವಿದ್ಯಾನಿಲಯದ ಮುಂದೆ ಗಾಂಧೀಜಿಯವರ ಪ್ರತಿಮೆಯನ್ನು ಏಕೆ ಸ್ಥಾಪಿಸಲಾಯಿತು?
ಅಲ್ಲಿ ಸ್ವತಃ ಗಾಂಧೀಜಿ ಓದಿದ್ದರಿಂದ.

4. ಥೇಮ್ಸ್ ನದಿ ದಡದಲ್ಲಿರುವ ಜನವಸತಿಯನ್ನು ಲೇಖಕರು ಯಾವುದಕ್ಕೆ ಹೋಲಿಸುತ್ತಾರೆ?

ಮುಂಬಯಿಯ ಸಮುದ್ರ ದಂಡೆಗುಂಟೆ ಇರುವ ಮೆರೀನ್ ಡ್ರೈವ್ನಂತೆ ಹೋಲಿಸಿದ್ದಾರೆ.

5. ಲಂಡನ್ನ ಭೂ ವಿಸ್ತೀರ್ಣ ಎಷ್ಟು ?

610 ಚದುರ ಮೈಲು.

6. ಲಂಡನ್ ನಗರದ ನಡುವೆ ಹರಿಯುತ್ತಿರುವ ಪ್ರಸಿದ್ಧ ನದಿ ಯಾವುದು?

ಥೇಮ್ಸ್ ನದಿ.

7. ಚೀರುವ  ಭಯಾನಕವಾಗಿ ಕಿರುಚುವ ಶಬ್ದ ಎಲ್ಲಿ ಕೇಳಿ ಬರಯತ್ತದೆ?

ಮ್ಯೂಸಿಯಂನಲ್ಲಿರುವ ಛೇಂಬರ್ ಆಫ್  ಹಾರರ್ಸ್ನಲ್ಲಿ ಕೇಳಿ ಬರುತ್ತದೆ.

8. ಲಂಡನ್ನಿನಲ್ಲಿ ಅಗ್ನಿ ದುರಂತ ಎಷ್ಟರಲ್ಲಿ ನಡೆಯಿತು?

1666 ರಲ್ಲಿ ನಡೆಯಿತು.

9. ಪ್ಲಾಸಿ ಕದನ ನಡೆದದ್ದು ಯಾವಾಗ?
ಪ್ಲಾಸಿ ಕದನ 1757 ರಲ್ಲಿ ನಡೆಯಿತು.

10. ಬ್ರಿಟಷ್ ಪ್ರಧಾನಿ ನಿವಾಸ ಯಾವ ಸ್ಥಳದಲ್ಲಿದೆ?

ಲಂಡನ್ನಿನ  10 ಡೌನಿಂಗ್ ಸ್ಟ್ರೀಟ್ನಲ್ಲಿದೆ.

11. ಲಂಡನ್ ನ ನಿಗೂಢ ಸ್ಥಳ ಯಾವುದು?

ಲಂಡನ್ನ ನಿಗೂಢ ಸ್ಥಳ ಟವರ್ ಆಫ್ ಲಂಡನ್.

ಇ) ಈ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ
 
1. ಲಂಡನ್ನಲ್ಲಿ ಸಂಭವಿಸಿದ ದುರಂತಗಳ ಬಗ್ಗೆ ಗೈಡ್ ತಿಳಿಸಿದ ವಿಚಾರಗಳೇನು?
1666ರಲ್ಲಿ  ಲಂಡನ್  ನಲ್ಲಿ  ದೊಡ್ಡ  ಅಗ್ನಿ  ದುರಂತ  ಸಂಭವಿಸಿ ದಿನ  ಲಂಡನ್  ಹೊತ್ತಿ  ಉರಿಯಿತಂತೆ  1300  ಮನೆಗಳು,  80 ಚಚರ್್ಗಳು  ಸುಟ್ಟು  ಹೊಗಿದ್ದವು.  ಈ  ದುರಂತದ  ನೆನಪಿಗಾಗಿ  200  ಅಡಿ  ಎತ್ತರದ  ಸ್ತಂಭ  ನಿಲ್ಲಿಸಿದ್ದಾರಂತೆ.  ಅದಕ್ಕಿಂತ  ಒಂದೆರೆಡು ವರ್ಷದ ಹಿಂದೆ  ಪ್ಲೇಗ್ಗೆ ಲಂಡನ್ನಲ್ಲಿ ಹನ್ನೆರಡು ಹದಿಮೂರು ಸಾವಿರ ಜನರು ಸತ್ತು ಹೋದರಂತೆ ಎಂದು ತಿಳಿಸಿದರು.


2. ಥೇಮ್ಸ ನದಿಯ ಉತ್ತರ ಹಾಗೂ ದಕ್ಷಿಣಕ್ಕೆ ಯಾವ ವರ್ಗದ ಜನ ವಾಸಿಸುತ್ತಾರೆ?

ಥೇಮ್ಸ  ನದಿಯ  ದಕ್ಷಿಣಕ್ಕೆ  ಉದ್ಯಮಗಳು,  ಫ್ಯಾಕ್ಟರಿಗಳು  ಹೆಚ್ಚಾಗಿ  ರಾಜಕಾರಣಿಗಳು  ಇರುತ್ತಾರಂತೆ.  ಉತ್ತರಕ್ಕೆ  ವ್ಯಾಪಾರಿಗಳು,  ಕಡಿಮೆ ಆದಾಯ ಹೊಂದಿರುವವರು ವಾಸಿಸುತ್ತಾರೆ. ಥೇಮ್ಸ್  ನದಿ ದಂಡೆ ಬದಿಯಲ್ಲಿ ವಾಸಿಸುವರು ಶ್ರೀಮಂತರೇ ಆಗಿರುತ್ತಾರೆ.
 
4 ಲಂಡನ್ ಟವರ್ ಬ್ರಿಜ್ನ ವೈಶೀಷ್ಟವೇನು?
ಥೇಮ್ಸ್  ನದಿಯ  ಮೇಲೆ  13  ಬ್ರಿಜ್ಗಳಿವೆ.  ಅದರಲ್ಲಿ  ಟವರ್  ಬ್ರಿಜ್  ಪ್ರಮುಖವಾದದ್ದು.  ಇದರ  ವಿಶೇಷತೆ  ಬಹಳ  ಅದ್ಭುತವಾಗಿದೆ. ಇದು ಸಾವಿರ ಟನ್ ತೂಗುತ್ತದೆ. ಹಡಗುಗಳು  ಬಂದಾಗ ಒಂದೂವರೆ ಎರಡು ನಿಮಿಷದಲ್ಲಿ ಮೇಲಕ್ಕೆದ್ದು ಹಡುಗುಗಳು ಹೋಗಲು ದಾರಿಮಾಡಿಕೊಡುತ್ತದೆ. 4. ಥೇಮ್ಸ್ ನದಿಯ ಮೇಲಿರುವ ಪ್ರಸಿದ್ಧ ಸೇತುವೇಗಳಾವವು? ಥೇಮ್ಸ್ ನದಿಯ ಮೇಲಿರುವ  ವೆಸ್ಟ್ ಮಿನಿಸ್ಟರ್ ಸೇತುವೆ, ವಾಟರ್ಲೂ ಸೇತುವೆ  ಮತ್ತು ಲಂಡನ್ ಸೇತುವೆ ಪ್ರಸಿದ್ಧವಾಗಿವೆ. 5. ಟವರ್ ಆಫ್ ಲಂಡನ್ ಅನ್ನು ನಿಗೂಢ ಸ್ಥಳ ಎಂದು ಏಕೆ ಕರಿಯುತ್ತಾರೆ? ಟವರ್ ಆಫ್ ಲಂಡನ್ 3-4 ಅಂತಸ್ತಿನ ಚೌಕಾಕಾರದ ಬೃಹತ್ ಕಟ್ಟಡ. ಈ ಕಟ್ಟಡದ ಮೇಲೆ ಟವರ್ಗಳಿವೆ. ಇದು ರಾಜರು ತಮಗೆ ಆಗದವರನ್ನು  ಕೊಲ್ಲಿಸುವ  ಜಾಗ.  ರಾಜಮನೆತನಗಳಲ್ಲಿನ  ವೈಷಮ್ಯ,  ಅಸೂಯೆ,  ಕೊಲೆ,  ಸುಲಿಗೆಗಳ  ತಾಣವಿದು.  ರಾಬಟರ್ಕ್ಲೈವ್ 1757ರ ಪ್ಲಾಸಿ ಕದನದಲ್ಲಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ಇಲ್ಲಿ ಇಡಲಾಗಿದೆ ಯಂತೆ. ಆದ್ದರಿಂದ ಇದು ನಿಗೂಢ ಸ್ಥಳವಾಗಿದೆ.  

ಈ) ಈ ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ

1. ಟುಸ್ಸೋಡ್ ವ್ಯಾಕ್ಸ್ ಮ್ಯೂಸಿಯಂನ ವಿಶೇಷತೆ ಏನು?

ಮೇಡಂ ಟುಸ್ಸೋಡ್ ಈ ವ್ಯಾಕ್ಸ್ ಗೊಂಬೆಗಳನ್ನು ಮೊದಲು ಮಾಡಿದವರು. ಈ ಮೇಣದ ಗೊಂಬೆಗಳು ತದ್ರೂಪ ಒಬ್ಬ ವ್ಯಕ್ತಿಯನ್ನೇ ಹೋಲುತ್ತವೆ. ಯಾವ ವ್ಯಕ್ತಿಯನ್ನು ಮೇಣದಲ್ಲಿ ಮಾಡಿರುತ್ತಾರೋ ಅವರನ್ನು ಹೋಲುತ್ತದೆ. ಶಾರುಖ್ ಖಾನ್, ಅಮಿರ್ ಖಾನ್, ಅಮಿತಾಬ್ ಬಚ್ಚನ್, ಮರ್ಲನ್ ಮನ್ರೋ, ಟೆನಿಸ್ ತಾರೆ ಬೆಕರ್, ಬೋಗರ್್ ಹೀಗೆ ಪ್ರಸಿದ್ಧರ ವ್ಯಾಕ್ಸ್ ಗೊಂಬೆ ಮಾಡಿದ್ದಾರೆ. ಆ ಮೂರ್ತಿಗಳ ಪಕ್ಕದಲ್ಲಿ ನಿಂತು ನಾವು ಫೋಟೋ ತೆಗೆಸಿಕೊಂಡರೆ ನಿಜವಾದ ವ್ಯಕ್ತಿಯೊಂದಿಗೆ ಇದ್ದೇವೇನೋ ಅನಿಸುತ್ತದೆ. ಈ ಸಹಜತೆಯೇ ಆ ಮೇಣದ ಬೊಂಬೆಗಳ ವೈಶಿಷ್ಟ್ಯ.

2.ಛೇಂಬರ್ ಆಫ್ ಹಾರರ್ಸ್ ಒಳಗೆ ಹೋದಾಗ ಲೇಖಕರಿಗಾದ ಅನುಭವವಗಳೇನು?
ಟುಸ್ಸೋಡ್ ವ್ಯಾಕ್ಸ್ ಮ್ಯೂಸಿಯಂನಲ್ಲಿ ಛೇಂಬರ್ ಆಫ್ ಹಾರರ್ಸ್ ಇದೆ. ಅಲ್ಲಿ ಚೀರುವ, ಭಯಾನಕವಾಗಿ ಕಿರುಚುವ (ವಿಪರೀತ ನೋವಾದಾಗ) ಶಬ್ದ ಕೇಳಿಬರುತ್ತದೆ. ಅದು ರಾಜರು ತಮ್ಮ ವಿರೋಧಿಗಳನ್ನು ಕೊಲ್ಲಿಸುತ್ತಿದ್ದ ಸಮಯದಲ್ಲಿ ಅವರು ಹೊರಡಿಸುತ್ತಿದ್ದ ಚೀತ್ಕಾರ. ಲೇಖಕರು ಮತ್ತು ಸತೀಶ ಒಂದು ಹಾಲಿನೊಳಗಿಂದ ಹೋದಾಗ ಅಲ್ಲಿ ಅವರ ಮೇಲೆ ಆಕ್ರಮಣ ಮಾಡಲು ಕತ್ತಿಹಿಡಿದು ಒಬ್ಬ ಬಂದನಂತೆ. ಒಬ್ಬ ಕತ್ತು ಹಿಚುಕಲು ಬಂದವನಂತೆ, ವಿಕಾರವಾಗಿ ಕಿರುಚುತ್ತಾ ಹೊಟ್ಟೆಗೆ ಡ್ಯಾಗರ್ ತಿವಿಯಲು ಬಂದಂತೆ ಮಾಡಿದಾಗ ಲೇಖಕರು ಅಂಜಿಹೋದರು. ಆದರೆ ಅದು ಕ್ಷಣ ಮಾತ್ರ - ಲೇಖಕರಿಗೆ ಅವರು ಅಪಾಯ ಮಾಡಲಿಲ್ಲ. ಅದು ಒಂದು ರೀತಿಯ ಹಿಂದಿನ ಕಾಲದ ಕ್ರೂರಿಗಳ ನಡವಳಿಕೆ ತೋರಿಸುವ ರೀತಿಯಾಗಿತ್ತು ಎಂದು ಎಸ್.ಜೆ.ಎಂ. ಕಾಲೇಜಿನ ಉಪನ್ಯಾಸಕರಾದ ಇಂಜಿನಿಯರ್ ರಮೇಶ್ ಲೇಖಕರಿಗೆ ಹೇಳಿದರು. ಇದು ಲೇಖಕರಿಗೆ ಒಂದು ರೀತಿಯ ಹೊಸ ಅನುಭವವಾಗಿತ್ತು.

3.ಥೇಮ್ಸ್ ನದಿಯ ಸುತ್ತಮುತ್ತ ಲೇಖಕರು ಕಂಡ ದೃಶ್ಯಗಳಾವುವು?
ಲಂಡನ್ನಲ್ಲಿ  ಹರಿಯುವ ಪ್ರಸಿದ್ಧವಾದ  ನದಿ  ಥೇಮ್ಸ್.  ಥೇಮ್ಸ್  ನದಿಯ  ದಕ್ಷಿಣಕ್ಕೆ  ಉದ್ಯಮಗಳು,  ಫ್ಯಾಕ್ಟರಿಗಳು  ಹೆಚ್ಚಾಗಿ ರಾಜಕಾರಣಿಗಳು  ಇರುತ್ತಾರಂತೆ.  ಉತ್ತರಕ್ಕೆ  ವ್ಯಾಪಾರಿಗಳು,  ಕಡಿಮೆ  ಆದಾಯ  ಹೊಂದಿರುವವರು  ವಾಸಿಸುತ್ತಾರೆ.  ಥೇಮ್ಸ್    ನದಿ ದಂಡೆ  ಬದಿಯಲ್ಲಿ  ವಾಸಿಸುವರು  ಶ್ರೀಮಂತರೇ  ಆಗಿರುತ್ತಾರೆ.  ಥೇಮ್ಸ್  ನದಿಯ  ಮೇಲೆ  13  ಬ್ರಿಜ್ಗಳಿವೆ.  ಅದರಲ್ಲಿ  ಟವರ್  ಬ್ರಿಜ್ ಪ್ರಮುಖವಾದುದು. ಥೇಮ್ಸ್ ನದಿಯ ಮೇಲೆ ವೆಸ್ಟ್ ಮಿನಿಸ್ಟರ್ ಸೇತುವೆ, ವಾಟಲರ್ೂ ಸೇತುವೆ, ಲಂಡನ್ ಸೇತುವೆ ಪ್ರಸಿದ್ಧವಾಗಿವೆ. ಲಂಡನ್  ಬ್ರಿಜ್ಗೆ  ಹತ್ತಿರದಲ್ಲೇ  ಟವರ್  ಆಫ್  ಲಂಡನ್ನನ್ನು  ಕಂಡರು.  3-4  ಅಂತಸ್ತಿನ  ಚೌಕಾಕಾರದ  ಬೃಹತ್  ಕಟ್ಟಡದ  ಮೇಲೆ ಟವರ್ಗಳಿವೆ.  ಇದು  ರಾಜರು  ತಮಗೆ  ಆಗದವರನ್ನು  ಕೊಲ್ಲಿಸುವ  ಜಾಗ.  ಇವೆಲ್ಲಾ  ಥೇಮ್ಸ್  ನದಿಯ ಸುತ್ತಮುತ್ತ  ಲೇಖಕರು ಕಂಡಿರುವ ದೃಶ್ಯಗಳು.  

ಉ) ಸಂದರ್ಭದೊಡನೆ ವಿವರಿಸಿ
 
1. ಅಲ್ಲಿನ ಒಳ ಥೇಟರ್ ನಲ್ಲಿ 3ಡಿ ಕನ್ನಡಕ ಹಾಕಿಕೊಂಡು ತಾರಾಲಯ ನೋಡಿದೆವು,
ಈ  ವಾಕ್ಯವನ್ನು  ಡಾ.  ಬಸವ  ಪ್ರಭು  ಪಾಟೀಲ  ಮತ್ತು  ಕೆ.ಸಿದ್ಧಯ್ಯಸ್ವಾಮಿಯವರು  ಬರೆದಿರುವ  ಯೂರೋಪಿನಲ್ಲಿ  ಎಂಬ ಲೇಖನದಿಂದ ಆಯ್ದ ಟುಸ್ಸೋಡ್ ವ್ಯಾಕ್ಸ್ ಮ್ಯೂಜಿಯಂ ಎಂಬ  ಗದ್ಯದಿಂದ ಆರಿಸಲಾಗಿದೆ.
ಈ  ವಾಕ್ಯವನ್ನು  ಲೇಖಕರು  ತಾರಾಲಯವನ್ನು  ಕುರಿತು  ಹೇಳಿದ್ದಾರೆ.  ತಮ್ಮ  ಸ್ನೇಹಿತನಾದ  ಸತೀಶನ  ಜೊತೆ  ತಾರಾಲಯಕ್ಕೆ ಹೋಗಿದ್ದರು. ತಾರಾಲಯದಲ್ಲಿ 3ಡಿ ಕಡ್ನಕವನ್ನು ಹಾಕಿದಾಗ ನಕ್ಷತ್ರಗಳು ಕಾಣುತ್ತವೆ ಎಂದು ಹೇಳುವಾಗ ಹೇಳಿದ್ದಾರೆ.

2. ಇವರೆಲ್ಲ ಬಸ್ಸೋ ರೈಲೋ ಹಿಡಿಯಲು ತರಾತುರಿಯಿಂದ ಹೊರಟಿದ್ದರು
ಈ ವಾಕ್ಯವನ್ನು ಡಾ. ಬಸವ ಪ್ರಭು ಪಾಟೀಲ ಮತ್ತು ಕೆ.ಸಿದ್ಧಯ್ಯಸ್ವಾಮಿಯವರು ಬರೆದಿರುವ ಯೂರೋಪಿನಲ್ಲಿ ಎಂಬ ಲೇಖನದಿಂದ ಆಯ್ದ ಟುಸ್ಸೋಡ್ ವ್ಯಾಕ್ಸ್ ಮ್ಯೂಜಿಯಂ ಎಂಬ  ಗದ್ಯದಿಂದ ಆರಿಸಲಾಗಿದೆ.
ಈ ವಾಕ್ಯವನ್ನು ಲೇಖಕರು ಲಂಡನ್ನ್ನಿನ ಜನರ ಬದುಕಿನ ಬಗ್ಗೆ ಹೇಳುವಾಗ ಹೇಳಿದ್ದಾರೆ. ಲಂಡನ್ ಬದುಕಲು ತುಂಬಾ ದುಬಾರಿ ಊರು ಎಂದು ಹೇಳುತ್ತಾರೆ. ಇಲ್ಲಿ ಬದುಕುವ ಜನರ ಕಷ್ಟ ಕಂಡು ಬರುತ್ತದೆ. ಆವರು ತಮ್ಮ ಮನೆಗೆ ಮರಳಲು ನಿಂತಿದ್ದನ್ನು ನೋಡಿ ಆ ಸಂದರ್ಭದಲ್ಲಿ ಲೇಖಕರು ಮೇಲಿನ ಮಾತು ಹೇಳುತ್ತಾರೆ.

3. ಲಂಡನ್ ಮಲಗಿ ನಿದ್ರಿಸುತ್ತದೆಯೇ ಅನಿಸುತ್ತದೆ.
ಈ  ವಾಕ್ಯವನ್ನು  ಡಾ.  ಬಸವ  ಪ್ರಭು  ಪಾಟೀಲ  ಮತ್ತು  ಕೆ.ಸಿದ್ಧಯ್ಯಸ್ವಾಮಿಯವರು  ಬರೆದಿರುವ  ಯೂರೋಪಿನಲ್ಲಿ  ಎಂಬ ಲೇಖನದಿಂದ ಆಯ್ದ ಟುಸ್ಸೋಡ್ ವ್ಯಾಕ್ಸ್ ಮ್ಯೂಜಿಯಂ ಎಂಬ  ಗದ್ಯದಿಂದ ಆರಿಸಲಾಗಿದೆ.
ಈ  ವಾಕ್ಯವನ್ನು  ಲೇಖಕರು  ಲಂಡನ್  ನಗರವನ್ನು  ಕುರಿತು  ಹೇಳಿದ್ದಾರೆ.  ಈ  ವಾಕ್ಯವನ್ನು  ಕೋಶದ  ಮೇಲೇರಿದಾಗ  ಲಂಡನ್ ನಗರವನ್ನು  ನಾಲ್ಕುದಿಕ್ಕಿನಿಂದ  ನೋಡಬಹುದು,  ಆಗ  ಲಂಡನ್  ಸುಂದರವಾಗಿ  ಕಾಣುತ್ತದೆ,  ನಡುವೆ  ಥೇಮ್ಸ್  ನದಿ  ಹರಿಯುತ್ತದೆ. ಇದು ಔದ್ಯಮಿಕ ಮತ್ತು ಬ್ಯಾಂಕಿಂಗ್ ನಗರ ಎಂದು ಹೇಳುವಾಗ ಈ ಮೇಲಿನ ಮಾತು ಬಂದಿದೆ.  
 


 
You Might Like

Post a Comment

0 Comments